Tag: Y.S Sharmila

  • ಜಗನ್ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ಕೊಟ್ಟಿಲ್ಲ – ಶರ್ಮಿಳಾ ಆರೋಪ

    ಜಗನ್ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ಕೊಟ್ಟಿಲ್ಲ – ಶರ್ಮಿಳಾ ಆರೋಪ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಮಾಜಿ ಸಿಎಂ ಹಾಗೂ ನನ್ನ ಸಹೋದರ ಜಗನ್‌ ಮೋಹನ್ ರೆಡ್ಡಿ (Y.S. Jagan Mohan Reddy) ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ನನಗೆ ನೀಡಿಲ್ಲ ಎಂದು ಅವರ ಸಹೋದರಿ ಹಾಗೂ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷೆ ಶರ್ಮಿಳಾ (Y. S. Sharmila) ಆರೋಪಿಸಿದ್ದಾರೆ.

    ಜಗನ್‌ ಆಸ್ತಿಗಳ ಏಕೈಕ ಉತ್ತರಾಧಿಕಾರಿಯಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಜೀವಿತಾವಧಿಯಲ್ಲಾಗಲಿ ಅಥವಾ ಅವರ ನಿಧನದ ನಂತರ ಯಾವುದೇ ಆಸ್ತಿ ವರ್ಗಾವಣೆ ನಡೆದಿಲ್ಲ. ನನ್ನ ಮತ್ತು ನನ್ನ ಮಕ್ಕಳ ಪಾಲಿನ ಒಂದೇ ಒಂದು ಆಸ್ತಿಯನ್ನು ನಾನು ಇನ್ನೂ ಹೊಂದಿಲ್ಲ ಎಂದು ನಾನು ಘೋಷಿಸುತ್ತೇನೆ. ಈ ವಿಚಾರವನ್ನು ವೈಎಸ್‌ಆರ್ ಅಭಿಮಾನಿಗಳಿಗೆ ಅವರು ಬರೆದ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

    ವೈಎಸ್‌ಆರ್ ಅವರ ಆಸ್ತಿ ಅವರ ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆ ರೀತಿ ಹಂಚಿಕೆ ಮಾಡುವುದು ಜಗನ್‌ ಕರ್ತವ್ಯವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸ್ವಂತ ಆಸ್ತಿ ಎಂದು ಹೇಳಿಕೊಳ್ಳುವ ಆಸ್ತಿಗಳು ವಾಸ್ತವವಾಗಿ ಕುಟುಂಬದ ಆಸ್ತಿಗಳಾಗಿವೆ. ತಮ್ಮ ತಾಯಿ ವೈ.ಎಸ್.ವಿಜಯಮ್ಮ ಅವರು ಆಸ್ತಿ ಹಂಚಿಕೆಗಾಗಿ ನೂರಾರು ಪತ್ರಗಳನ್ನು ಬರೆದಿದ್ದಾರೆ. ಆದರೂ ಜಗನ್‌ ಅವರ ಕಲ್ಲು ಹೃದಯವನ್ನು ಕರಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಜಗನ್ ಮೋಹನ್ ರೆಡ್ಡಿ ಒಡೆತನದ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ವಿಚಾರವಾಗಿ ಅವರು ಪತ್ರ ಬಿಡುಗಡೆ ಮಾಡಿದ್ದಾರೆ. ಸತ್ಯವನ್ನು ಪ್ರಸ್ತುತಪಡಿಸುವುದು ತನ್ನ ಕರ್ತವ್ಯ ಎಂದು ಭಾವಿಸಿ ಪತ್ರ ಬರೆದಿದ್ದೇನೆ. ವೈಎಸ್‌ಆರ್‌ ಜೀವಿತಾಧಿಯಲ್ಲಿ ಆಸ್ತಿ ಹಂಚಿಕೆಯಾಗಿದೆ ಎಂಬುದು ಸುಳ್ಳು ಎಂದು ತಿಳಿಸಿದ್ದಾರೆ.

    ನಾನು ಮತ್ತು ತನ್ನ ತಾಯಿ ಆಸ್ತಿಗಾಗಿ ದುರಾಸೆ ಹೊಂದಿದ್ದಾರೆ ಎಂದು ವೈಎಸ್ಆರ್ ಬೆಂಬಲಿಗರನ್ನು ದಾರಿತಪ್ಪಿಸಬೇಡಿ. ನನಗೆ ಆಸ್ತಿಯನ್ನು ನೀಡದಿದ್ದರೂ, ನಾನು ಅದನ್ನು ಎಂದಿಗೂ ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಕಾನೂನಿನ ಬಾಗಿಲನ್ನೂ ತಟ್ಟಿಲ್ಲ. ಪ್ರತಿಕೂಲ ಮತ್ತು ಆರ್ಥಿಕ ತೊಂದರೆಗಳ ನಡುವೆಯೂ ನಾನು ಶ್ರಮಪಟ್ಟಿದ್ದೇನೆ. ಕುಟುಂಬದ ಗೌರವ ಮತ್ತು ವೈಎಸ್‌ಆರ್ ಅವರ ಘನತೆಯನ್ನು ಎತ್ತಿಹಿಡಿಯಿರಿ ಎಂದು ಜಗನ್‌ಗೆ ಎಚ್ಚರಿಸಿದ್ದಾರೆ.

  • ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಹೈದರಾಬಾದ್: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವೈಎಸ್‍ಆರ್ ತೆಲಂಗಾಣ ಪಕ್ಷದ (YSR Telangana Party) ನಾಯಕಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ (Jagan Mohan Reddy) ಸಹೋದರಿ ವೈ.ಎಸ್ ಶರ್ಮಿಳಾ (Y.S Sharmila) ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

    ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿ (SIT) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸದಂತೆ ಮನವರಿಕೆ ಮಾಡಲು ತೆರಳಿದ ಪೊಲೀಸರ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

    ತೆಲಂಗಾಣದಲ್ಲಿ ಸ್ವತಂತ್ರವಾಗಿ ರಾಜಕೀಯ ಗುರುತನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಎತ್ತುತ್ತಿದ್ದಾರೆ. ಕಳೆದ ತಿಂಗಳು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

    ಶರ್ಮಿಳಾ ಇತ್ತೀಚೆಗೆ ತೆಲಂಗಾಣದಾದ್ಯಂತ ಮೆರವಣಿಗೆ ನಡೆಸಿದ್ದರು. ಈ ವೇಳೆ ಆಂಧ್ರದಲ್ಲಿ ಅಧಿಕಾರದಲ್ಲಿರುವ ತನ್ನ ಸಹೋದರನ ವೈಎಸ್‍ಆರ್ ಕಾಂಗ್ರೆಸ್ (YSR Congress Party) ಪಕ್ಷಕ್ಕೂ ತನ್ನ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದ್ದರು.

    ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ (Telangana, State Public Service Commission) ನಡೆಸಿದ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ ತೆಲಂಗಾಣದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಪ್ರಕರಣ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಹುದ್ದೆಗಳ ಭರ್ತಿಗೆ ಬಾಕಿಯಿದ್ದ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋರಿಕೆ ಆರೋಪದ ಬಗ್ಗೆ ವಿರೋಧ ಪಕ್ಷಗಳು ಕೆ. ಚಂದ್ರಶೇಖರ ರಾವ್ (K.Chandrashekar Rao) ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಬಡಿದು ಅಧಿಕಾರಿ ಸಾವು