Tag: y category security

  • ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ಲಕ್ನೋ: ಫೆ.27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆ ನೀಡಲಾಗಿದೆ.

    ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

    ಈ ನಾಲ್ವರು ಶಾಸಕರು ಹಾಗೂ ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಕೇಸರಿ ಪಕ್ಷದ ಅಭ್ಯರ್ಥಿ ಸಂಜಯ್ ಸೇಠ್ ಅವರಿಂದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಸೋಲಿಗೆ ಈ ಬೆಳವಣಿಗೆ ಕಾರಣವಾಯಿತು.

    ಮತ್ತೊಬ್ಬ ಶಾಸಕ ಮಹಾರಾಜಿ ಪ್ರಜಾಪತಿ ಗೈರಾಗಿದ್ದರು. ರಾಕೇಶ್ ಪಾಂಡೆ ಅವರು ಸಂಸದ ರಿತೇಶ್ ಪಾಂಡೆ ಅವರ ತಂದೆ. ಅವರು ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

    ವೈ-ಕೆಟಗರಿ ಭದ್ರತೆಯ ಭಾಗವಾಗಿ ಎಂಟು ಸಿಆರ್‌ಪಿಎಫ್ ಸಿಬ್ಬಂದಿ ಈ ಶಾಸಕರ ಕಾವಲು ಕಾಯಲಿದ್ದಾರೆ. ಐವರು ಸಿಬ್ಬಂದಿಯು ಶಾಸಕರ ನಿವಾಸದಲ್ಲಿ ಕಾವಲಾಗಿರುತ್ತಾರೆ. ಉಳಿದವರು ಶಾಸಕರೊಂದಿಗೆ ಪ್ರಯಾಣಿಸುತ್ತಾರೆ.

  • ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ

    ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ

    ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ ಕಲ್ಪಿಸಲಾಗಿದೆ.

    ತಮಿಳುನಾಡು ಸರ್ಕಾರ ಪ್ರಸ್ತುತ ಅಣ್ಣಾಮಲೈಗೆ ಒದಗಿಸುತ್ತಿರುವ ಭದ್ರತೆಗಿಂತ ಹೆಚ್ಚಿನದ್ದಾಗಿದೆ. ಕೇಂದ್ರ ಗೃಹ ಸಚಿವಾಲಯವು ಅಣ್ಣಾಮಲೈಗೆ ಭದ್ರತೆಯ ಆತಂಕವಿದೆ ಎಂದು ಈ ಏರ್ಪಾಡು ಮಾಡಿದೆ.

    ಭೀತಿ ಏನು?: ಕೆ ಅಣ್ಣಾಮಲೈಗೆ ಎದುರಾಗಿದ್ದ ಭದ್ರತಾ ಭೀತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಗುಪ್ತಚರ ಇಲಾಖೆ ಪೊಲೀಸ್ ಹುದ್ದೆ ತೊರೆದು, ರಾಷ್ಟ್ರೀಯ ಪಕ್ಷದ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡ ಅಣ್ಣಾಮಲೈ ಜೀವಕ್ಕೆ ಅಪಾಯವಿದೆ ಎಂಬುದು ಮನವರಿಕೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

    ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಶಸ್ತ್ರ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸ್ ಇಲಾಖೆಯ ಅಧಿಕಾರಿಗಳು, ದಿನದ 24 ಗಂಟೆಯೂ ಅಣ್ಣಾಮಲೈಗೆ ರಕ್ಷಣೆ ಒದಗಿಸಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

  • ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಬೆಂಗಳೂರು: ಹಿಜಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ʼವೈʼ ಶ್ರೇಣಿಯ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಹಿಜಾಬ್ ತೀರ್ಪು ನೀಡಿದ ಮೂವರೂ ನ್ಯಾಯಮೂರ್ತಿಗಳಿಗೆ ʻವೈʼ ಶ್ರೇಣಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

    ಮೂವರು ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಕೂಡ ಸೇರಿದ್ದಾರೆ. ಹಿಜಬ್‌ ಬಗ್ಗೆ ತೀರ್ಪು ನೀಡಿದ ತ್ರಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಖಾಝಿ ಎಂ ಜೈಬುನ್ನಿಸಾ ಅವರೂ ಇದ್ದರು.

    ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

    ಸಮುದಾಯದ ಪರವಾಗಿರುವುದು ಜಾತ್ಯತೀತತೆ ಅಲ್ಲ, ಅದು ಕೋಮುವಾದ. ನಾನು ಇದನ್ನು ಖಂಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು. ಇದನ್ನು ಸರ್ಕಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು

    ಹಿಜಬ್‌ ತೀರ್ಪು ಪ್ರಕಟಿಸಿದ ಹೈಕೋರ್ಟ್‌ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ. ತೌಹೀದ್‌ ಜಮಾತ್‌ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಬೆನ್ನಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.

    ತರಗತಿಗಳಲ್ಲಿ ಹಿಜಬ್‌ ಧರಿಸಿ ಹೋಗುವಂತಿಲ್ಲ. ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಈಚೆಗೆ ತೀರ್ಪು ನೀಡಿದ್ದ ಹೈಕೋರ್ಟ್‌, ಹಿಜಬ್‌ ಪರವಾಗಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    ವೈ ಶ್ರೇಣಿ ಭದ್ರತೆ ಹೇಗಿರುತ್ತೆ?
    ವೈ ಶ್ರೇಣಿಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು.