Tag: x-ray

  • ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

    ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

    ರಾಂಚಿ: ಕಳ್ಳನೊಬ್ಬ (Thief) ಮಹಿಳೆಯ ಕತ್ತಿನಿಂದ ಚಿನ್ನದ ಸರ (Gold Chain) ಕದ್ದು ಪರಾರಿಯಾಗುವಾಗ ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ ನುಂಗಿ ಅದು ಗಂಟಲಲ್ಲಿ ಸಿಲುಕಿ ನರಳಾಡಿದ ಘಟನೆ ಜಾರ್ಖಂಡ್‌ನ (Jharkhand) ರಾಂಚಿಯಲ್ಲಿ (Ranchi) ನಡೆದಿದೆ.

    KILLING CRIME

    ಡೊರಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾದಿ ಸೇತುವೆ ಬಳಿ ಸಲ್ಮಾನ್ ಮತ್ತು ಜಾಫರ್ ಎಂಬ ಇಬ್ಬರು ಕಳ್ಳರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಸರ ಕಸಿದುಕೊಂಡ ನಂತರ ಇಬ್ಬರು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಪೊಲೀಸರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಸಲ್ಮಾನ್ ಸರವನ್ನು ನುಂಗಿದ್ದಾನೆ. ಇದನ್ನು ಪೊಲೀಸರು ನೋಡಿದ್ದು ನುಂಗದಂತೆ ಕೂಗಿ ಹೇಳಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯನ್ನು ಬೈಕ್‌ನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಲ್ಲೆ

    ಬಳಿಕ ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸಲ್ಮಾನ್ ಮತ್ತು ಜಾಫರ್‌ನನ್ನು ಬಂಧಿಸಿದ್ದಾರೆ. ಈ ವೇಳೆ ಗಂಟಲಿನ ಕೆಳಭಾಗದಲ್ಲಿ ಚೈನ್ ಸಿಲುಕಿಕೊಂಡು ಎದೆ ನೋವಿನಿಂದ ಸಲ್ಮಾನ್ ನರಳಾಡಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಎಕ್ಸ್ ರೇ ಮೂಲಕ ಆರೋಪಿಯ ಎದೆಯಲ್ಲಿ ಸುರುಳಿಯಾಗಿ ಸಿಲುಕಿದ್ದ ಚಿನ್ನದ ಸರವನ್ನು ಪತ್ತೆ ಹಚ್ಚಿದ ವೈದ್ಯರು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವು

  • X-ray ಫಿಲ್ಮ್ ಖಾಲಿ – ಮೊಬೈಲಿನಲ್ಲಿಯೇ ಫೋಟೋ ಕ್ಲಿಕ್ಕಿಸಿ ಕೊಟ್ಟ ಆಸ್ಪತ್ರೆ ಸಿಬ್ಬಂದಿ

    X-ray ಫಿಲ್ಮ್ ಖಾಲಿ – ಮೊಬೈಲಿನಲ್ಲಿಯೇ ಫೋಟೋ ಕ್ಲಿಕ್ಕಿಸಿ ಕೊಟ್ಟ ಆಸ್ಪತ್ರೆ ಸಿಬ್ಬಂದಿ

    ಚಂಡೀಗಢ: ನಿಮ್ಮ ಬಳಿ ಸ್ಮಾರ್ಟ್ ಫೋನ್ (Smart Phone) ಇಲ್ವಾ ಹಾಗಾದ್ರೆ ನಿಮಗೆ ಎಕ್ಸ್-ರೇ ಪ್ರಿಂಟ್ ಕೂಡಾ ಸಿಗಲ್ಲ. ಹೀಗಂತ ಹೇಳಿ ರೋಗಿಗಳ ಸ್ಮಾರ್ಟ್ ಫೋನ್‌ಗಳಲ್ಲಿಯೇ ಎಕ್ಸ್-ರೇ (X-Ray) ಫೋಟೋವನ್ನು ಆಸ್ಪತ್ರೆ ಸಿಬ್ಬಂದಿ ಕ್ಲಿಕ್ಕಿಸಿ ಕೊಟ್ಟ ವಿಚಿತ್ರ ಘಟನೆ ಪಂಜಾಬ್‌ನ (Punjab) ಸರ್ಕಾರಿ ಆಸ್ಪತ್ರೆಯಲ್ಲಿ (Govt Hospital) ನಡೆದಿದೆ.

    ಪಂಜಾಬ್‌ನ ಪಟಿಯಾಲದಲ್ಲಿ (Patiala) ಸರ್ಕಾರಿ ಮಾತಾ ಕೌಶಲ್ಯ ಆಸ್ಪತ್ರೆಯಲ್ಲಿ ಸಿಬ್ಬಂದಿ ರೋಗಿಳ ಎಕ್ಸ್-ರೇ ಫೋಟೋಗಳನ್ನು ಅವರ ಫೋನ್‌ಗಳಲ್ಲಿಯೇ ಕ್ಲಿಕ್ಕಿಸಿ ಕೊಟ್ಟಿದ್ದಾರೆ. ಎಕ್ಸ್-ರೇಯ ಪ್ರಿಂಟ್ ಕೊಡಿ ಎಂದರೆ, ಅವರು ರೋಗಿಗಳ ಬಳಿ ಎಕ್ಸ್-ರೇ ಫಿಲ್ಮ್ ಖಾಲಿಯಾಗಿದೆ ಎಂದು ಕಾರಣ ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?

    ವಿಪರ್ಯಾಸವೆಂದರೆ ಪಂಜಾಬ್‌ನ ಆರೋಗ್ಯ ಸಚಿವ ಚೇತನ್ ಸಿಂಗ್ ಅವರ ತವರೂರು ಆಗಿರುವ ಪಟಿಯಾಲದಲ್ಲಿಯೇ ಇಂತಹ ವಿಚಿತ್ರ ಘಟನೆ ನಡೆದಿದೆ. ಮಾತ್ರವಲ್ಲದೇ ಈ ಘಟನೆ ನಡೆಯುವುದಕ್ಕೂ 2 ದಿನ ಮೊದಲು ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ತಲೆಯೇ ಕೆಡಿಸಿಕೊಳ್ಳದ ಆಸ್ಪತ್ರೆಯ ಅಧಿಕಾರಿಗಳು, ನಾವು ರೋಗಿಗಳೊಂದಿಗೆ ಸಹಾನುಭೂತಿಯಿಂದಲೇ ವರ್ತಿಸುತ್ತೇವೆ. ಅವರ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಹೋದರೂ ನಮ್ಮ ಎಕ್ಸ್-ರೇ ವಿಭಾಗದಿಂದ ಸಿಬ್ಬಂದಿ ನೇರವಾಗಿ ಸಂಬಂಧಪಟ್ಟ ವೈದ್ಯರಿಗೆ ಎಕ್ಸ್-ರೇ ಫೋಟೋಗಳನ್ನು ಕಳುಹಿಸುತ್ತಾರೆ. ಇದು ರೋಗಿಗಳ ಹಣವನ್ನೂ ಉಳಿಸುತ್ತದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಸಂದೀಪ್ ಕೌರ್ ಹೇಳಿದ್ದಾರೆ. ಆದರೆ ಆಸ್ಪತ್ರೆಯ ದುಸ್ಥಿತಿಗೆ ಜನರು ಹೈರಾಣಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈತನ ಹೊಟ್ಟೆಯಲ್ಲಿತ್ತು 1 ರೂಪಾಯಿಯ 63 ನಾಣ್ಯಗಳು – ಎಕ್ಸ್‌ರೇ ನೋಡಿ ವೈದ್ಯರೂ ಶಾಕ್

    ಈತನ ಹೊಟ್ಟೆಯಲ್ಲಿತ್ತು 1 ರೂಪಾಯಿಯ 63 ನಾಣ್ಯಗಳು – ಎಕ್ಸ್‌ರೇ ನೋಡಿ ವೈದ್ಯರೂ ಶಾಕ್

    ಜೈಪುರ: ಮನುಷ್ಯರು ಹೊಟ್ಟೆಗೆ ಹಣ್ಣು, ತರಕಾರಿ, ಅನ್ನ ಮತ್ತು ಹೆಚ್ಚು ಆಧುನಿಕತೆಗೆ ಹೊಂದಿಕೊಡವರು ಪಿಜ್ಜಾ ಇನ್ನು ಮುಂತಾದ ಬಾಯಿಗೆ ರುಚಿ ಇರುವ ಪದಾರ್ಥಗಳನ್ನು ತಿನ್ನುತ್ತಾರೆ. ಆದರೆ ರಾಜಸ್ಥಾನದ ಜೋಧ್‍ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಗ್ಗಿರುವ ವಿಲಕ್ಷಣ ಘಟನೆ ನಡೆದಿದೆ.

    ಜುಲೈ 27 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಲೋಹದ ಗಡ್ಡೆಯನ್ನು ಕಂಡುಹಿಡಿದಿದ್ದಾರೆ. ಆದರೆ, ವೈದ್ಯರು ಎಕ್ಸ್‌ರೇ ನೋಡಿದಾಗ ಸತ್ಯ ಬಯಲಿಗೆ ಬಂದಿದೆ. ಇದನ್ನೂ ಓದಿ: ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಈ ಹಿನ್ನೆಲೆ ಎಂಡಿಎಂ ಆಸ್ಪತ್ರೆಯ ವೈದ್ಯರ ತಂಡವು ‘ಎಂಡೋಸ್ಕೋಪಿಕ್ ಕಾರ್ಯವಿಧಾನ’ದ ಸಹಾಯದಿಂದ ಎರಡು ದಿನಗಳ ಸುದೀರ್ಘ ಚಿಕಿತ್ಸೆಯಲ್ಲಿ ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು ಹೊರತೆಗೆದಿದೆ.

    Desperately seeking surgeons | AAMC

    ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯ ನರೇಂದ್ರ ಭಾರ್ಗವ್ ಅವರು, ಹೊಟ್ಟೆ ನೋವಿನಿಂದ ವ್ಯಕ್ತಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದ. ಅದಕ್ಕೆ ಅವನ ಎಕ್ಸ್-ರೇ ಮಾಡಿಸಿದಾಗ ಅವನು ನಾಣ್ಯಗಳನ್ನು ನುಗ್ಗಿರುವುದು ಪತ್ತೆಯಾಗಿದೆ. ಈ ಕುರಿತು ವಿಚಾರಿಸಿದಾಗ ಆತ 10-15 ನಾಣ್ಯಗಳನ್ನು ನುಗ್ಗಿರುವುದನ್ನು ತಿಳಿಸಿದ್ದಾನೆ. ನಾವು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಆತ ಸುಧಾರಿಸಿಕೊಂಡಿದ್ದಾನೆ ಎಂದು ವಿವರಿಸಿದರು. ಇದನ್ನೂ ಓದಿ:  ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

    ಆತನ ಖಿನ್ನತೆಯಿಂದ ನಾಣ್ಯಗಳನ್ನು ನುಗ್ಗುವ ಅಭ್ಯಾಸ ಮಾಡಿಕೊಂಡಿದ್ದ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಶಿಮ್ಲಾ: ಮನುಷ್ಯನೊಬ್ಬನ ಹೊಟ್ಟೆಯೊಳಗೆ 8 ಸ್ಪೂನ್ಸ್ ಮತ್ತು 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್ ಮತ್ತು ಚಾಕುವನ್ನು ನೋಡಿದ ಡಾಕ್ಟರ್‍ಗಳು ಶಾಕ್ ಆಗಿದ್ದಾರೆ.

    ಈ ಘಟನೆ ಮಂಡಿ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಕರ್ನ್ ಸೇನ್ ಎಂಬ 35 ವರ್ಷದ ವ್ಯಕ್ತಿಯು ಅಡುಗೆ ಮನೆಯಲ್ಲಿ ಇರಬೇಕಾದ ಸ್ಪೂನ್ಸ್, ಸ್ಕ್ರೂ ಡ್ರೈವರ್, ಟೂತ್‍ಬ್ರೆಶ್ ಮತ್ತು ಚಾಕು ಎಲ್ಲಾ ವಸ್ತುಗಳನ್ನು ಹೊಟ್ಟೆಯಲ್ಲೇ ಇಟ್ಟಕೊಂಡಿದ್ದಾನೆ.

    ಕೆಲ ದಿನಗಳ ಹಿಂದೆ ಕರ್ನ್ ಸೇನ್ ಹೊಟ್ಟೆಯಲ್ಲಿ ಹುಣ್ಣಿದೆ ಎಂದು ಹೇಳಿದ್ದನು. ಇದರಿಂದ ಮನೆಯವರು ಅವನನ್ನು ಸುಂದರ್ ನಗರದ ಅಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಲಾಗಿದೆ.

    ಇಲ್ಲಿ ಅವರಿಗೆ ಎಕ್ಸ್-ರೇ ಮಾಡಲಾಗಿದೆ. ಈ ವೇಳೆ ಅವರ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಮೂರು ಜನ ವೈದ್ಯರ ತಂಡ 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಕ್ಕೆ ತೆಗೆದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾಕ್ಟರ್, ಇದು ತಂಬ ಅಪರೂಪದ ಪ್ರಕರಣ ಎಕ್ಸ್-ರೇ ಯಲ್ಲಿ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡುಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದೇವೆ. ಈ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.