Tag: WWE

  • ಕನ್ನಡ ಸಿನಿಮಾಗೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ

    ಕನ್ನಡ ಸಿನಿಮಾಗೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ

    ಶಿವರಾಜ್‌ಕುಮಾರ್‌ (ShivarajKumar) ಮತ್ತು ಧನಂಜಯ (Dhananjay) ಅಭಿನಯಿಸುತ್ತಿರುವ ಬಹು ನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre) ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ನಿರ್ದೇಶಕ ಎಂ ಹೇಮಂತ್ ರಾವ್ ಚಿತ್ರೀಕರಣ ನಡೆಸುತ್ತಿದ್ದಾರೆ. ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಅಂಗಳಕ್ಕೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ (Sukhwinder Singh Grewal) ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಹಾಗೂ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ ನಲ್ಲಿ ನಟಿಸಿರುವ ಸುಖಿ ಗ್ರೆವಾಲ್ ಈಗ ಸ್ಯಾಂಡಲ್‌ವುಡ್ ಗೆ ಪದಾರ್ಪಣೆ ಮಾಡಿದ್ದಾರೆ.

    ಸದ್ಯ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಸುಖಿ ಎಂಟ್ರಿ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್ ಎಂ ರಾವ್, ‘ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ. ಸುಖಿ ಪಾತ್ರವು ಒಂದು ರೀತಿಯ ಪಾತ್ರಕ್ಕೆ ಸರಿಹೊಂದುತ್ತದೆ. ನಾನು ಸೆಟ್‌ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು. ಇದು ಅವರ ದೈತ್ಯ ವ್ಯಕ್ತಿತ್ವಕ್ಕೆ ಸಾಕಷ್ಟು ಭಿನ್ನವಾಗಿದೆ. ಅವರ ವ್ಯಕ್ತಿತ್ವವನ್ನು ಸರಿಹೊಂದಿಸಲು ನಾವು ಸೆಟ್‌ ಎತ್ತರವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾನು ಹೇಳಿದಾಗ ಅದು ಉತ್ಪ್ರೇಕ್ಷೆಯಾಗುವುದಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಭಾನುವಾರವೂ ಹೌಸ್‌ಫುಲ್‌ – ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ

    7 ಅಡಿ 2 ಇಂಚು ಎತ್ತರವಿರುವ ಸುಖ್ವಿದರ್ ಸಿಂಗ್ ಗ್ರೆವಾಲ್ ಮಾತನಾಡಿ, ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ, ಕನ್ನಡ ಚಲನಚಿತ್ರೋದ್ಯಮದ ಭಾಗವಾಗುವುದು ಅದ್ಭುತವಾಗಿದೆ. ಧನಂಜಯ ಮತ್ತು ಡಾ. ಶಿವರಾಜ್ ಕುಮಾರ್ ಇರುವ ಯೋಜನೆಯಲ್ಲಿ ಕೆಲಸ ಮಾಡುವುದು ಒಂದು ಗೌರವ. ನಾನು ಸೆಟ್‌ನಲ್ಲಿ ಇರಲು ಇಷ್ಟಪಡುತ್ತೇನೆ, ಇಲ್ಲಿನ ಜನರು ತುಂಬಾ ಪ್ರೀತಿಯಿಂದ ಇದ್ದಾರೆ. ನನ್ನ ಅಭಿನಯಕ್ಕೆ ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಹೆಚ್ಚಿನ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಸೆಟ್ನಲ್ಲಿ ವಾತಾವರಣ ಮತ್ತು ಮುಖ್ಯವಾಗಿ ಬೆಂಗಳೂರಿನ ವಾತಾವರಣ ನಾನು ಹೆಚ್ಚು ಆನಂದಿಸಿದೆ. ನಾನು ನಗರವನ್ನು ಹೆಚ್ಚು ಅನ್ವೇಷಿಸಿಲ್ಲ, ಆದರೆ ಇಲ್ಲಿನ ಆಹಾರವನ್ನು ನಾನು ಆನಂದಿಸಿದೆ. ಅದಕ್ಕಾಗಿಯೇ ನಾನು ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತು ಎಂದರು. ಇದನ್ನೂ ಓದಿ:  ಕೇರಳದಲ್ಲಿ ‌ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ

    ಈಗಾಗಲೇ ತಮ್ಮ ಭಾಗದ ಆಕ್ಷನ್ ಸೀಕ್ವೆನ್ಸ್ ನ್ನು ಸುಖಿ ಮುಕ್ತಾಯಗೊಳಿದ್ದಾರೆ.  ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ. ರಾವ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಗಿದೆ.

    ರೆಟ್ರೋ ಲುಕ್‌ನಲ್ಲಿ ಶಿವರಾಜ್‌ಕುಮಾರ್‌ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು, ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಲುಕ್ ಡಾ. ರಾಜ್‌ಕುಮಾರ್‌ ಅವರ ಬಾಂಡ್ ಸಿನಿಮಾಗಳಾದ ಜೇಡರ ಬಲೆ, ಆಪರೇಷನ್ ಡೈಮಂಡ್ ರಾಕೆಟ್, ಗೋವಾದಲ್ಲಿ CID 999 ನೆನಪಿಸುತ್ತದೆ.

  • WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

    WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

    ವಾಷಿಂಗ್ಟನ್‌: ಪ್ರಸಿದ್ಧ WWE ಕುಸ್ತಿಪಟು ಹಲ್ಕ್ ಹೊಗನ್(71) ಅಮೆರಿಕದ ಫ್ಲೋರಿಡಾದಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.‌

    WWE ದಂತಕಥೆಯಾಗಿದ್ದ ಹಲ್ಕ್ ಹೊಗನ್ (Hulk Hogan) ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಮೇ ತಿಂಗಳಲ್ಲಿ ಅವರು ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳಿಂದ ಕೋಮಾದಲ್ಲಿದ್ದ (Coma) ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

    ಆಗಸ್ಟ್ 11, 1953 ರಂದು ಜಾರ್ಜಿಯಾದಲ್ಲಿ ಜನಿಸಿದ್ದ ಹಲ್ಕ್ ಹೊಗನ್ 1980 ಮತ್ತು 1990 ರ ದಶಕದ ಆರಂಭದಲ್ಲಿ ವೃತ್ತಿಪರ ಕುಸ್ತಿಯಲ್ಲಿ ಗುರುತಿಸಬಹುದಾದ ಅತ್ಯಂತ ಪ್ರಸಿದ್ಧ ಕುಸ್ತಿಪಟು ಆಗಿದ್ದರು. ಹ್ಯಾಂಡಲ್‌ಬಾರ್ ಮೀಸೆ, ಹಳದಿ ಬಣ್ಣದ ಕನ್ನಡಕ, ತಲೆಗೆ ಸುತ್ತುತ್ತಿದ್ದ ಬಂದಾನಗಳಿಂದ ಮನೆಮಾತಾಗಿದ್ದರು. ಹಲ್ಕಮೇನಿಯಾ (Hulkamania) ಎಂಬ ಅವರ ಘೋಷಣೆ ಅಭಿಮಾನಿಗಳಿಗೆ ಇಷ್ಟವಾಗಿತ್ತು

    ಆರು ಬಾರಿ WWE ಚಾಂಪಿಯನ್ ಆಗಿದ್ದ ಇವರು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದರು. ಕುಸ್ತಿ ಅಷ್ಟೊಂದು ಜನಪ್ರಿಯವಾಗದ ಸಮಯದಲ್ಲಿವಿಚಿತ್ರ ವರ್ತನೆ, ನಾಟಕೀಯ ರೀತಿಯ ಅಭಿನಯ ಲಕ್ಷಾಂತರ ಹೊಸ ಅಭಿಮಾನಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳನ್ನು ಸೆಳೆಯುವಲ್ಲಿ ಹಲ್ಕ್ ಹೊಗನ್ ಯಶಸ್ವಿಯಾಗಿದ್ದರು.  ಇದನ್ನೂ ಓದಿ:  ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

    ಹಲ್ಕ್ ಹೊಗನ್ ಅವರನ್ನು ಮೊದಲು 2005 ರಲ್ಲಿ WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು. ಆದರೆ 2015 ರಲ್ಲಿ Gawker ಮಾಧ್ಯಮ ಸಂಸ್ಥೆ ಹೊಗನ್ ವಿರುದ್ಧ ಸೆಕ್ಸ್‌ ಟೇಪ್‌ ಪ್ರಕಟಿಸಿ ಜನಾಂಗೀಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವರದಿ ಮಾಡಿತ್ತು.

    ಈ ಪ್ರಕರಣದ ಬಳಿಕ ಹಾಲ್ ಆಫ್ ಫೇಮ್‌ನಿಂದ ಹೊಗನ್ ಹೆಸರನ್ನು ತೆಗೆಯಲಾಗಿತ್ತು. ವಿಶ್ವಾದ್ಯಂತ ಈ ವಿಚಾರ ಸದ್ದು ಮಾಡಿದ ನಂತರ ಹೊಗನ್ Gawker ಸಂಸ್ಥೆಯ ವಿರುದ್ಧ ಕೇಸ್‌ ದಾಖಲಿಸಿ ಕೊನೆಗೆ ಗೆದ್ದು ಭಾರೀ ಪ್ರಮಾಣದ ಮೊತ್ತವನ್ನು ಪರಿಹಾರವಾಗಿ ಪಡೆದರು. ಹೊಗನ್ ಪ್ರಕರಣದಿಂದ ಆರ್ಥಿಕ ನಷ್ಟವಾಗಿ ಕೊನೆಗೆ ದಿವಾಳಿಯಾಗಿ Gawker ಬಾಗಿಲು ಹಾಕಿತ್ತು.

  • WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಟೊರೊಂಟೊ: 16 ಬಾರಿ WWE ಚಾಂಪಿಯನ್ ಆಗಿರುವ 47 ವರ್ಷದ ಜಾನ್ ಸೀನಾ (John Cena) 2025 ರಿಂದ ನಾನು ಸ್ಪರ್ಧೆಗೆ ನಿವೃತ್ತಿ ಹೇಳುತ್ತೇನೆ ಎಂದು ಘೋಷಿಸಿದ್ದಾರೆ.

    ಟೊರೊಂಟೊದಲ್ಲಿ ನಡೆದ ‘ಮನಿ ಇನ್ ದಿ ಬ್ಯಾಂಕ್’ ಕಾರ್ಯಕ್ರಮದಲ್ಲಿ ಜಾನ್ ಸೀನಾ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದರು.  ಇದನ್ನೂ ಓದಿ: ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಇಂದು ರಾತ್ರಿ ನಾನು WWE ಗೆ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಜಾನ್ ಸೀನಾ ಹೇಳಿದರು. ಮುಂದುವರಿಸಿ ನಾನು ತಕ್ಷಣವೇ ನಿವೃತ್ತಿ ಹೇಳುವುದಿಲ್ಲ. 2025 ರ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್, ಲಾಸ್ ವೇಗಾಸ್‌ನಲ್ಲಿ ರೆಸಲ್ಮೇನಿಯಾ 41 ರಲ್ಲಿ ಅಲೆಜಿಯಂಟ್ ಸ್ಟೇಡಿಯಂನಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಇದನ್ನೂ ಓದಿ: ಬಬಲೇಶ್ವರ | ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    2002 ರಲ್ಲಿ WWE ಗೆ ಜಾನ್ ಸೀನಾ ಪಾದಾರ್ಪಣೆ ಮಾಡಿದ್ದರು. ಕುಸ್ತಿಯ ಜೊತೆಗೆ ಜಾನ್ ಸೀನಾ ಫಾಸ್ಟ್ ಎಕ್ಸ್, ದಿ ಇಂಡಿಪೆಂಡೆಂಟ್, ದಿ ಸೂಸೈಡ್ ಸ್ಕ್ವಾಡ್‌ನಂತಹ ಚಲನ ಚಿತ್ರಗಳಲ್ಲಿ ಜಾನ್ ಸೀನಾ ಅಭಿನಯಿಸಿದ್ದಾರೆ.

     

  • WWE ಮಾಜಿ ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ

    WWE ಮಾಜಿ ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ

    ವಾಷಿಂಗ್ಟನ್: ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟ್ರೈನ್‌ಮೆಂಟ್ (WWE) ಮಾಜಿ ಸ್ಟಾರ್ ಬ್ರೇ ವ್ಯಾಟ್ (36) (Bray Wyatt) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಟ್ರಿಪಲ್ ಎಚ್‍ನ ಮುಖ್ಯ ಅಧಿಕಾರಿ ಲೆವೆಸ್ಕ್ ಅವರು ಟ್ವಿಟ್ಟರ್‌ನಲ್ಲಿ ಅಧಿಕೃತವಾಗಿ ಬರೆದುಕೊಂಡಿದ್ದಾರೆ.

    ವ್ಯಾಟ್ ಅವರು 2009 ರಿಂದ ಡಬ್ಲ್ಯೂಡಬ್ಲ್ಯೂಇನಲ್ಲಿ ಪಾಲ್ಗೊಳ್ಳುತ್ತಿದ್ದರು. ವ್ಯಾಟ್ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಡಬ್ಲ್ಯೂಡಬ್ಲ್ಯೂಇನಿಂದ ಕಳೆದ ಹಲವಾರು ತಿಂಗಳುಗಳಿಂದ ಅಂತರ ಕಾಯ್ದುಕೊಂಡಿದ್ದರು. 2021 ಮತ್ತು 2022 ರಲ್ಲಿ ಅವರ ಪ್ರದರ್ಶನದಿಂದಾಗಿ ಟಿವಿಯಲ್ಲಿ ಪಂದ್ಯದ ವೀಕ್ಷಣೆಯ ರೇಟಿಂಗ್ ಹೆಚ್ಚಾಗಿತ್ತು. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ

    ವ್ಯಾಟ್ ಕುಸ್ತಿಪಟುಗಳ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಅವರ ತಂದೆ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ. ಅವರ ಅಜ್ಜ ಬ್ಲ್ಯಾಕ್‍ಜಾಕ್ ಮುಲ್ಲಿಗನ್ ಅವರು ವೃತ್ತಿಪರ ಕುಸ್ತಿಪಟುವಾಗಿ ತಮ್ಮ ಛಾಪನ್ನು ಮೂಡಿಸಿದ್ದರು. ಅವರ ಚಿಕ್ಕಪ್ಪ ಬ್ಯಾರಿ ಮತ್ತು ಕೆಂಡಾಲ್ ವಿಂಡ್‍ಹ್ಯಾಮ್ ಕೂಡ ಕುಸ್ತಿ ಜಗತ್ತಿನಲ್ಲಿ ಪಳಗಿದವರಾಗಿದ್ದಾರೆ.‌ ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ವಾಷಿಂಗ್ಟನ್: 2015ರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ (WWE) ಸೂಪರ್ ಸ್ಟಾರ್ ವಿನ್ನರ್ ಸಾರಾ ಲೀ (Sara Lee)  ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    2015 ಮತ್ತು 2016ರ ಸಾಲಿನಲ್ಲಿ WWE ವ್ರೆಸ್ಲಿಂಗ್‍ನಲ್ಲಿ ಮಿಂಚುಹರಿಸಿದ್ದ ಸಾರಾ ಲೀ, 2017 ರಿಂದ ಡಬ್ಲ್ಯೂಡಬ್ಲ್ಯೂಇ ಗುತ್ತಿಗೆಯಿಂದ ಹೊರಬಂದಿದ್ದರು. ಇದೀಗ ಆಕೆ 30ರ ಹರೆಯದಲ್ಲಿ ನಿಧನ ಹೊಂದಿರುವುದಾಗಿ ಆಕೆಯ ತಾಯಿ ಟೆರ್ರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಸಾರಾ ಲೀ ನಿಗೂಢವಾಗಿ ಸಾವನ್ನಪ್ಪಿದು, ಆಕೆಯ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಡಬ್ಲ್ಯೂಡಬ್ಲ್ಯೂಇಗೆ ನಿವೃತ್ತಿ ಬಳಿಕ ಸಾರಾ ಲೀ ಮೂಗಿಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: 22 ಸಿಕ್ಸ್‌, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್‌ ಬ್ಲ್ಯಾಸ್ಟ್‌

    ಸಾರಾ ಲೀ, ವ್ರೆಸ್ಲಿಂಗ್ ತಾರೆ ವೆಸ್ಟಿನ್ ಬ್ಲೇಕ್ (Westin Blake) (ಕೋರಿ ವೆಸ್ಟನ್) ಅವರನ್ನು ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ. ಸಾರಾ ಲೀ ಮರಣದ ಕುರಿತಾಗಿ ಡಬ್ಲ್ಯೂಡಬ್ಲ್ಯೂಇ ಸಂಯೋಜಕರು ಸಹಿತ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮುಂಬೈ: ದೇಶಾದ್ಯಂತ ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ನಡೆದಿದೆ. ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ (WWE) ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸಿನಾ ಮಡಕೆ ಒಡೆಯುತ್ತಿರುವ ಫೋಟೋ ಹಂಚಿಕೊಂಡು ಶುಭ ಕೋರಿದೆ.

    ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹ್ಯಾಪಿ ಜನ್ಮಾಷ್ಟಮಿ ಇಂಡಿಯಾ ಎಂದು ಹ್ಯಾಷ್‌ಟ್ಯಾಗ್ ಬಳಕೆ ಮಾಡಿ ಫೋಟೋ ಹಂಚಿಕೊಂಡು WWE ಟ್ವೀಟ್ ಮಾಡಿದೆ. ಫೋಟೋದಲ್ಲಿ ಜಾನ್ ಸಿನಾ ಏಣಿಯ ಮೇಲೆ ಕೂತು ಎರಡು ಕೈ ಮೇಲೆತ್ತಿ ಮಡಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಕಾಮೆಂಟ್‌ ಮಾಡಿರುವ ನೆಟ್ಟಿಗರು, ಮನಿ ಇನ್‌ ದಿ ಬ್ಯಾಂಕ್‌ಗಿಂತ ಮೊಸರು ಇನ್‌ ದಿ ಬ್ಯಾಂಕ್‌ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಈ ಫೋಟೋ ಕಂಡ WWE ಅಭಿಮಾನಿಗಳು ಸಂಭ್ರಮಿಸಿದ್ದು, ತಮ್ಮ ನೆಚ್ಚಿನ WWE ಸೂಪರ್ ಸ್ಟಾರ್ ಈ ರೀತಿ ಕಾಣಿಸಿಕೊಂಡಿರುವುದಕ್ಕೆ ಸಂತಸ ಪಟ್ಟಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ WWEಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    Live Tv
    [brid partner=56869869 player=32851 video=960834 autoplay=true]

  • ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಕೊಲಂಬೊ: ಶ್ರೀಲಂಕಾದಲ್ಲಿ ಅರಾಜಕತೆ ತೀವ್ರಗೊಂಡಿದ್ದು, ಸತತ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದಿರುವ ಜನರು ಪ್ರಧಾನಿ ಮನೆಗೇ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರಧಾನಿ ಮನೆಗೆ ಸಂಪೂರ್ಣ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ `ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿ, ಅವರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ. ದಿನನಿತ್ಯ ಒಂದಷ್ಟು ಮಂದಿ ಪೂಲ್‌ನಲ್ಲಿ ಈಜಾಡುತ್ತಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ಈ ನಡುವೆ ಪ್ರತಿಭಟನಾ ನಿರತ ಯುವಕರು ಪ್ರಧಾನಿಯ ಶಯನಗೃಹದಲ್ಲಿ (ಬೆಡ್‌ರೂಂ) WWE ಆಡುತ್ತಾ ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ

    https://twitter.com/SJIMYAKUS/status/1546005772920066049?ref_src=twsrc%5Etfw%7Ctwcamp%5Etweetembed%7Ctwterm%5E1546005772920066049%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fsri-lankan-protesters-find-millions-of-rupees-from-gotabaya-rajapaksas-house-amid-economic-turmoil%2F

    ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚಿಸಲು ಅಲ್ಲಿನ ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬಗ್ಗೆ ಜನರಲ್ಲಿ ಭಾರಿ ಆಕ್ರೋಶ ಸೃಷ್ಟಿಯಾಗಿದೆ. ಹಾಗಾಗಿ, ಗೊಟಬಯ ಅವರು ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ರಾಜೀನಾಮೆಯಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಮುಖಂಡರು ಸಭೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

    WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

    ವಾಷಿಂಗ್ಟನ್: ವಿನ್ಸ್ ಮೆಕ್ ಮಹೊನ್ ಅವರು ವಲ್ರ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‍ಮೆಂಟ್ (WWE) ಸಿಇಒ ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕರ ವಿರುದ್ಧ ಅನುಚಿತ ವರ್ತನೆ ಆರೋಪವನ್ನು ಮಾಡಿದ್ದು, ಈ ಕುರಿತಂತೆ ತನಿಖೆ ನಡೆಸುವಂತೆ ಕಂಪನಿ ಸೂಚಿಸಿದೆ.

    ಮೆಕ್ ಮಹೋನ್ ಅವರು ಸಂಬಂಧ ಹೊಂದಿದ್ದ ಮಾಜಿ ಮಹಿಳಾ ಉದ್ಯೋಗಿಯೊಬ್ಬರಿಗೆ 3 ಮಿಲಿಯನ್ ಡಾಲರ್ ನೀಡಿದ್ದಾರೆ ಎಂದು ಬುಧವಾರ ತನಿಖಾ ವರದಿಯಲ್ಲಿ ವಾಲ್ ಸ್ಟ್ರೀಟ್ ಜನರಲ್ ತಿಳಿಸಿದೆ. ಇದನ್ನೂ ಓದಿ: 2nd PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

    ಸದ್ಯ ವಿನ್ಸ್ ಅವರ ಪುತ್ರಿ ಸ್ಟೆಫನಿ ಮೆಕ್ ಮಹೊನ್ ಅವರು ಮಧ್ಯಂತರ ಸಿಇಒ ಮತ್ತು ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು WWE ತಿಳಿಸಿದೆ. ಕಳೆದ ತಿಂಗಳು WWE ಬ್ರಾಂಡ್ ಆಫೀಸರ್ ಆಗಿ ತನ್ನ ಗೈರುಹಾಜರಿಯ ರಜೆಯನ್ನು ಘೋಷಿಸಿದ ನಂತರ ಅವರು ಕಂಪನಿಗೆ ಹಿಂದಿರುಗುತ್ತಿದ್ದಾರೆ ಎಂದು ಕುಟುಂಬದ ಮೂಲಗಳ ಪ್ರಕಾರ ತಿಳಿದುಬಂದಿದೆ.

    ತನಿಖೆ ವೇಳೆ ವಿನ್ಸ್ ಮೆಕ್ ಮಹೊನ್, ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ತನಿಖೆಗೆ ಸಾಧ್ಯವಾದಷ್ಟು ಬೆಂಬಲ ನೀಡುತ್ತೇನೆ. ತನಿಖೆ ನಂತರ ಬರುವ ಫಲಿತಾಂಶವನ್ನು ನಾನು ಒಪ್ಪಿಕೊಳ್ಳುತ್ತೇನೆ. WWE ಸೃಜನಾತ್ಮಕ ವಿಷಯಕ್ಕೆ ಸಂಬಂಧಿಸಿದ ನನ್ನ ಕೆಲಸ ಮತ್ತು ಜವಾಬ್ದಾರಿಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಸದ್ಯ WWE ಟ್ಯಾಕೆಂಟ್ ರಿಲೇಶನ್ಸ್ ಮುಖ್ಯಸ್ಥ ಜಾನ್ ಲೌರಿನೈಟಿಸ್ ಅವರ ದುಷ್ಕೃತ್ಯದ ಬಗ್ಗೆ ಮಂಡಳಿಯು ತನಿಖೆ ನಡೆಸುತ್ತಿದೆ.

    Live Tv

  • ಮಾಜಿ WWE ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

    ಮಾಜಿ WWE ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಮಾಜಿ WWE ಸ್ಟಾರ್ ದಲೀಪ್ ಸಿಂಗ್ ರಾಣಾ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    WWF, WWE ಪಂದ್ಯಗಳಲ್ಲಿ ಮಿಂಚುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಖಲಿ ಅವರು ಇಂದು ಬಿಜೆಪಿ ಕಚೇರಿಗೆ ಬೆಳಗ್ಗೆ ತಲುಪಿ, ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!

    ಇನ್ನೂ ಖಲಿ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಅವರು, ದಿ ಗ್ರೇಟ್ ಖಲಿ ಅವರು ನಮ್ಮ ಪಕ್ಷಕ್ಕೆ ಸೇರುವ ಮೂಲಕ ಅನೇಕ ಯುವಕರಿಗೆ ಮತ್ತು ದೇಶದ ಜನರಿಗೆ ಸ್ಫೂರ್ತಿಯಾಗಿದ್ದಾರೆ.  ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    49 ವರ್ಷದ ಖಲಿ ಅವರು ಮೂಲತಃ ಹಿಮಾಚಲ ಪ್ರದೇಶದವರಾಗಿದ್ದು, 22 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕುಸ್ತಿಗೆ ಪದಾರ್ಪಣೆ ಮಾಡಿದರು. ಖಲಿ WWEಯಲ್ಲಿ ವೃತ್ತಿಯನ್ನು ಆರಂಭಿಸುವ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ಬಾಡಿಗಾರ್ಡ್ ಆಗಿದ್ದರು. ಆದರೆ WWEಯಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಖಲಿ ಅವರು ಚಾಂಪಿಯನ್ ಪಟ್ಟಗಳಿಸಿದರು. ಅಲ್ಲದೇ ಹಾಲಿವುಡ್‍ನ ನಾಲ್ಕು ಸಿನಿಮಾ ಹಾಗೂ ಬಾಲಿವುಡ್‍ನ ಎರಡು ಸಿನಿಮಾಗಳಲ್ಲಿ ಖಲಿ ಅಭಿನಯಿಸಿದ್ದಾರೆ.

  • ದಿ ಗ್ರೇಟ್ ಖಲಿಗೆ ಮಾತೃ ವಿಯೋಗ

    ದಿ ಗ್ರೇಟ್ ಖಲಿಗೆ ಮಾತೃ ವಿಯೋಗ

    ಶಿಮ್ಲಾ: WWE ಚಾಂಪಿಯನ್‍ಶಿಪ್‍ನ ಖ್ಯಾತ ಕುಸ್ತಿ ಪಟು ದಿ ಗ್ರೇಟ್ ಖಲಿ ಅವರ ತಾಯಿ ತಾಂಡಿ ದೇವಿ ಬಹು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.

    ಖಲಿ ಅವರ ತಾಯಿ ತಾಂಡಿ ದೇವಿ ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಉಸಿರಾಟ ತೊಂದರೆ ಮತ್ತು ಹಲವು ಖಾಯಿಲೆಗಳಿಂದ ಬಳಲುತ್ತಿದ್ದರು. ಬಳಿಕ ಕಳೆದ ವಾರ ತೀವ್ರ ಅನಾರೋಗ್ಯಕ್ಕೀಡಾಗಿ ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗದಿಂದಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಖಲಿ ನೋಡಲು ಸಾವಿರಾರು ಮಂದಿ- ಕೊರೊನಾ ರೂಲ್ಸ್ ಬ್ರೇಕ್

    ಮೂಲತಃ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ, ಧಿರೈನಾ ಗ್ರಾಮದವರಾದ ಖಲಿ ಅವರ ತಾಯಿ ತಾಂಡಿ ದೇವಿಯ ಅಂತ್ಯ ಸಂಸ್ಕಾರ ಧಿರೈನಾ ಗ್ರಾಮದಲ್ಲೇ ಇಂದು ನಡೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ‘ದಿ ಗ್ರೇಟ್’ ಖಲಿ

    ದಾಲಿಪ್ ಸಿಂಗ್ ರಾಣಾ ಅಲಿಯಾಸ್ ಖಲಿ, 2000 ಇಸವಿಯಲ್ಲಿ ವೃತ್ತಿಪರ ಕುಸ್ತಿಗೆ ಪ್ರವೇಶ ಮಾಡಿದ್ದರು. ಈ ಮೊದಲು ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದಾದ ಬಳಿಕ WWEನಲ್ಲಿ 2007ರಲ್ಲಿ ಜಾನ್ ಸಿನ ಅವರೊಂದಿಗೆ ಸೆಣಸಾಡಿ ಚಾಂಪಿಯನ್ ಎನಿಸಿಕೊಂಡಿದ್ದರು. ಇದರೊಂದಿಗೆ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಖಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‍ನ 4 ಸಿನಿಮಾ ಮತ್ತು ಬಾಲಿವುಡ್‍ನ 2 ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಖಲಿ, 2021ರ WWE ವಾಲ್ ಆಫ್ ಫೇಮ್‍ಗೆ ಆಯ್ಕೆಯಾಗಿದ್ದಾರೆ.