Tag: wter

  • ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

    ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

    ಚಿಕ್ಕಬಳ್ಳಾಪುರ: ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿಗಳಾದ ಮಾನಸಾ(12), ಲಕ್ಷ್ಮೀ(13) ಮತ್ತು ಶಶಾಂಕ್ ನೀರು ತರಲು ಕೆರೆಗೆ ಹೋಗಿದ್ದರು. ಜೋಳದ ಬೆಳೆಗೆ ನೀರು ಹಾಕಲು ಕೆರೆಯಿಂದ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಮೂವರು ನೀರಿಗೆ ಬಿದ್ದಿದ್ದಾರೆ.

    ಬಾಲಕ ಶಶಾಂಕ್ ಕೂಡ ನೀರಿನಲ್ಲಿ ಮುಳುಗಿದ್ದು, ಸ್ಥಳದಲ್ಲೇ ಇದ್ದ ವಾಟರ್ ಮ್ಯಾನ್ ರಾಜಣ್ಣ ಎಂಬವರು ಬಾಲಕ ಶಶಾಂಕ್ ನನ್ನ ರಕ್ಷಣೆ ಮಾಡಿದ್ದಾರೆ. ಆದರೆ ಮನಸಾ ಮತ್ತು ಲಕ್ಷೀ ನೀರಿನಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.