Tag: WTC Final

  • ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

    ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

    ಲಂಡನ್‌: ಐಪಿಎಲ್‌ನಲ್ಲಿ (IPL) 18 ವರ್ಷದ ಬಳಿಕ ಆರ್‌ಸಿಬಿ (RCB) ಚಾಂಪಿಯನ್‌ ಆಗಿತ್ತು. ಈಗ ದಕ್ಷಿಣ ಆಫ್ರಿಕಾ (South Africa) ತಂಡ ತನಗೆ ಅಂಟಿದ್ದ ಚೋಕರ್ಸ್‌ (Chokers) ಪಟ್ಟವನ್ನು ಕಳಚಿ ಚಾಂಪಿಯನ್‌ ಪಟ್ಟ ಅಲಂಕರಿಸುವ ಎಲ್ಲಾ ಸಾಧ್ಯತೆಯಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (WTC Final) ಕಳೆದ ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು (Australia ಸೋಲಿಸಿ ಐತಿಹಾಸಿಕ ಸಾಧನೆ ನಿರ್ಮಿಸಲು ಕೇವಲ 69 ರನ್‌ಗಳ ಅಗತ್ಯವಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ 282 ರನ್‌ಗಳ ಗುರಿಯನ್ನು ಪಡೆದ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಐಡೆನ್ ಮಾರ್ಕ್ರಾಮ್ (Aiden Markram) ಔಟಾಗದೇ 102 ರನ್‌ (159 ಎಸೆತ, 11ಬೌಂಡರಿ) ಹೊಡೆದರೆ ನಾಯಕ ಟೆಂಬ ಬವುಮಾ (Temba Bavuma) ಔಟಾಗದೇ 65 ರನ್(121‌ ಎಸೆತ, 5 ಬೌಂಡರಿ) ಹೊಡೆದು ಕ್ರೀಸ್‌ನಲ್ಲಿದ್ದಾರೆ. ಇನ್ನು 8 ವಿಕೆಟ್‌ಗಳಿದ್ದು ನಾಳೆ ಯಾವುದೇ ಪವಾಡ ನಡೆಯದೇ ಇದ್ದರೆ, ಮಳೆಯಿಂದ ಪಂದ್ಯ ರದ್ದಾಗದೇ ಇದ್ದರೆ ಮೊದಲ ಬಾರಿಗೆ ಆಫ್ರಿಕಾ ಐಸಿಸಿ ಟ್ರೋಫಿಗೆ ಮುತ್ತಿಕ್ಕಲಿದೆ.

    ಆಫ್ರಿಕಾ ಆರಂಭದಲ್ಲೇ ರಿಕೆಲ್ಟನ್ 9 ರನ್‌ ಗಳಿಸಿ ಔಟಾದಾಗ ಆಘಾತ ಎದುರಿಸಿತ್ತು. ಆದರೆ ಎರಡನೇ ವಿಕೆಟಿಗೆ ಮಾರ್ಕ್ರಾಮ್ ಮತ್ತು ಮುಲ್ಡರ್ 93 ಎಸೆತಗಳಲ್ಲಿ 61 ರನ್‌ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಈ ನಡುವೆ ಮುಲ್ಡರ್‌ 27 ರನ್‌ ಗಳಿಸಿ ಔಟಾದರು. ನಂತರ ಮುರಿಯದ ಮೂರನೇ ವಿಕೆಟಿಗೆ ಮಾರ್ಕ್ರಾಮ್ ಮತ್ತು ಬವುಮಾ 232 ಎಸೆತಗಳಲ್ಲಿ 143 ರನ್‌ ಜೊತೆಯಾಟವಾಡಿ ಗೆಲುವಿನ ಹತ್ತಿರಕ್ಕೆ ತಂಡವನ್ನು ತಂದಿದ್ದಾರೆ.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 207 ರನ್‌ಗಳಿಗೆ ಆಲೌಟ್‌ ಆಗಿತ್ತು. ಮಿಚೆಲ್‌ ಸ್ಟ್ರಾರ್ಕ್‌ 58 ರನ್‌ ಹೊಡೆದರೆ ಹೇಜಲ್‌ವುಡ್‌ 17 ರನ್‌ ಹೊಡೆದು ಔಟಾದರು.

    ಕಗಿಸೊ ರಬಾಡ 4 ವಿಕೆಟ್‌, ಲುಂಗಿ ಎನ್‌ಗಿಡಿ 3 ವಿಕೆಟ್‌ ಪಡೆದರು. ಜಾನ್‌ಸೆನ್‌, ಮುಲ್ಡರ್‌, ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

    ಚೋಕರ್ಸ್ ಪಟ್ಟ
    ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ 20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪ್ರತಿ ಬಾರಿಯೂ ಸೋಲು ಕಾಣುತ್ತಿತ್ತು.

    ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು.

  • ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

    ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

    – WTC ಫೈನಲ್‌ನ 3ನೇ ದಿನದ ಆರಂಭಕ್ಕೂ ಮುನ್ನ ಮೌನಾಚರಿಸಿದ ಆಟಗಾರರು

    ಲಂಡನ್: ಬೆಕೆನ್‌ಹ್ಯಾಮ್‌ನಲ್ಲಿ (Beckenham) ನಡೆಯುತ್ತಿರುವ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಭಾಗಿಯಾಗಿರುವ ಟೀಂ ಇಂಡಿಯಾ (Team India) ಆಟಗಾರರು ಪಂದ್ಯದ ಆರಂಭಕ್ಕೂ ಮುನ್ನ ಕಪ್ಪು ಪಟ್ಟಿ ಧರಿಸಿ ಮೌನಾಚರಣೆ ಮಾಡಿ, ಅಹಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು.

    ಆಗ್ನೇಯ ಲಂಡನ್‌ನ ಬೆಕೆನ್‌ಹ್ಯಾಮ್‌ನಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಭಾಗಿಯಾಗಿದ್ದಾರೆ. ಅಹಮದಾಬಾದ್ ವಿಮಾನ ದುರಂತದ ಹಿನ್ನೆಲೆ ಪಂದ್ಯದ ಆರಂಭಕ್ಕೂ ಮುನ್ನ ತೋಳಿಗೆ ಕಪ್ಪು ಪಟ್ಟಿ ಧರಿಸಿ ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ಮೂಲಕ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು.ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

    ಲಾರ್ಡ್ಸ್‌ನಲ್ಲಿ ಮೌನಾಚರಣೆ:
    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇಂದು ಮೂರನೇ ದಿನದ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು ಮೌನಾಚರಣೆ ಮಾಡಿದರು.

    ಏನಿದು ಘಟನೆ?
    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲೆಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

  • WTC Final  – ಬೌಲರ್‌ಗಳ ಅಬ್ಬರಕ್ಕೆ ಮೊದಲ ದಿನವೇ 14 ವಿಕೆಟ್‌ ಪತನ

    WTC Final – ಬೌಲರ್‌ಗಳ ಅಬ್ಬರಕ್ಕೆ ಮೊದಲ ದಿನವೇ 14 ವಿಕೆಟ್‌ ಪತನ

    ಲಂಡನ್‌: ಆಸ್ಟ್ರೇಲಿಯಾ (Australia) ಮತ್ತು ದಕ್ಷಿಣ ಆಫ್ರಿಕಾ(South Africa) ಮಧ್ಯೆ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ (WTC Final) ಮೊದಲ ದಿನವೇ ಬೌಲರ್‌ಗಳ ಅಬ್ಬರಕ್ಕೆ 14 ವಿಕೆಟ್‌ ಪತನಗೊಂಡಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 56.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್‌ ಅಗಿದೆ. ನಂತರ ಬ್ಯಾಟ್‌ ಬೀಸಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದೆ.

    ಆಸ್ಟ್ರೇಲಿಯಾ ಪರ ಬ್ಯೂ ವೆಬ್‌ಸ್ಟರ್ 72 ರನ್‌ (92 ಎಸೆತ, 11 ಬೌಂಡರಿ) ಹೊಡೆದರೆ ಸ್ವೀವ್‌ ಸ್ಮಿತ್‌ 66 ರನ್‌ (112 ಎಸೆತ,10 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇವರಿಬ್ಬರು 114 ಎಸೆತಗಳಲ್ಲಿ 79 ರನ್‌ ಜೊತೆಯಾಟವಾಡಿದ್ದರಿಂದ ತಂಡ ಮೊತ್ತ 200 ರನ್‌ಗಳ ಗಡಿಯನ್ನು ದಾಟಿತು. ಇದನ್ನೂ ಓದಿ: ಆರ್‌ಸಿಬಿ ತಂಡವನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    ಕಗಿಸೊ ರಬಾಡ 5 ವಿಕೆಟ್‌, ಮಾರ್ಕೊ ಜಾನ್ಸೆನ್ 3 ವಿಕೆಟ್‌ ಕಿತ್ತರು. ಕೇಶವ್‌ ಮಹಾರಾಜ್‌ ಮತ್ತು ಏಡೆನ್ ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

    ನಂತರ ಬ್ಯಾಟ್‌ ಬೀಸಿದ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಏಡೆನ್ ಮಾರ್ಕ್ರಾಮ್ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರು. ರಯಾನ್ ರಿಕೆಲ್ಟನ್ 16 ರನ್‌, ವಿಯಾನ್ ಮುಲ್ಡರ್ 6 ರನ್‌, ಟ್ರಿಸ್ಟಾನ್ ಸ್ಟಬ್ಸ್ 2 ರನ್‌ ಗಳಿಸಿ ಪೆವಿಲಿಯನ್‌ಗೆ ನಡೆದರು. ಇದನ್ನೂ ಓದಿ: ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ದಿನದ ಅಂತ್ಯಕ್ಕೆ ನಾಯಕ ಟೆಂಬಾ ಬವುಮಾ 3 ರನ್‌, ಡೇವಿಡ್‌ ಬೆಡಿಂಗ್ಹ್ಯಾಮ್ 8 ರನ್‌ ಗಳಿಸಿದ್ದು ಗುರುವಾರ ಬ್ಯಾಟ್‌ ಮುಂದುವರಿಸಲಿದ್ದಾರೆ. ಮಿಚೆಲ್ ಸ್ಟಾರ್ಕ್ 2 ವಿಕೆಟ್‌ ಕಿತ್ತರೆ ಜೋಶ್ ಹ್ಯಾಜಲ್‌ವುಡ್ ಮತ್ತು ನಾಯಕ ಪ್ಯಾಟ್‌ ಕಮ್ಮಿನ್ಸ್‌ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.

  • ಆಟದ ಮಧ್ಯೆಯೇ ಮೈದಾನ ತೊರೆದ ಬುಮ್ರಾ – ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ!

    ಆಟದ ಮಧ್ಯೆಯೇ ಮೈದಾನ ತೊರೆದ ಬುಮ್ರಾ – ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ!

    – ಬುಮ್ರಾ ಫಿಟ್‌ ಇಲ್ಲದಿದ್ರೆ 200 ರನ್‌ ಲೀಡ್‌ ಇದ್ರೂ ಸಾಲಲ್ಲ: ಗವಾಸ್ಕರ್‌
    – ಬುಮ್ರಾ ಬೌಲಿಂಗ್‌ ಮಾಡುವ ಬಗ್ಗೆ ಭಾನುವಾರ ನಿರ್ಧಾರ

    ಸಿಡ್ನಿ: ಬಾರ್ಡರ್ – ಗವಾಸ್ಕರ್ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ ಪಂದ್ಯದ ನಾಯಕ ಜಸ್ಪ್ರೀತ್‌ ಬುಮ್ರಾ (Jasprit Bumra) ಮೈದಾನ ತೊರೆದು ಶಾಕ್‌ ಕೊಟ್ಟಿದ್ದಾರೆ.

    ಸಿಡ್ನಿಯಲ್ಲಿ (Sydney) ನಡೆಯುತ್ತಿರುವ ಕೊನೇ ಪಂದ್ಯದಲ್ಲಿ ಭೋಜನ ವಿರಾಮದ ಬಳಿಕ ಬುಮ್ರಾ ಕೇವಲ ಒಂದೇ ಓವರ್‌ ಬೌಲಿಂಗ್‌ ಮಾಡಿದರು. ಬಳಿಕ ಸ್ಥಳೀಯ ಕಾಲಮಾನ 2 ಗಂಟೆ ಸುಮಾರಿಗೆ ಮೈದಾನ ತೊರೆದರು. ಬುಮ್ರಾ ಬದಲಿಗೆ ಪ್ರಸಿದ್ಧ್‌ ಕೃಷ್ಣ ಅವರನ್ನು ಕಣಕ್ಕಿಳಿಸಲಾಯಿತು. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಮೈದಾನ ತೊರೆದ ಬುಮ್ರಾ ತಂಡದ ವೈದ್ಯ, ಬಿಸಿಸಿಐ ಅಧಿಕಾರಿ ಅಂಶುಮಾನ್ ಉಪಾಧ್ಯಾಯ ಮತ್ತು ಭದ್ರತಾ ಸಿಬ್ಬಂದಿ ಜೊತೆ, ಡ್ರೆಸ್ಸಿಂಗ್ ರೂಂನಿಂದ ಆಸ್ಪತ್ರೆಯ ಕಡೆಗೆ ಹೊರಟರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಿದ ಬಳಿಕ ಪುನಃ ಡ್ರೆಸ್ಸಿಂಗ್‌ ರೂಮ್‌ಗೆ ಮರಳಿದ್ದಾರೆ. ಒಂದು ವೇಳೆ, ಗಂಭೀರ ಸಮಸ್ಯೆ ಇದ್ದರೆ, ಆಸ್ಪತ್ರೆಗೆ ದಾಖಲಿಸದೇ ಬೇರೆ ವಿಧಿಯಿಲ್ಲ ಎಂದು ವರದಿಯಾಗಿದೆ.

    ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಿದ್ಧ್ ಕೃಷ್ಣ, ಬುಮ್ರಾ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಸದ್ಯ ಅವರು 3ನೇ ದಿನದಾಟಕ್ಕೆ ಕಣಕ್ಕಿಳಿಯುತ್ತಾರಾ ಅನ್ನೋ ಅನುಮಾನವೂ ಶುರುವಾಗಿದೆ. ಈ ನಡುವೆ ಬುಮ್ರಾ ಅವರು ಬ್ಯಾಟ್‌ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಆದ್ರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡುವ ನಿರ್ಧಾರವನ್ನು ಭಾನುವಾರ (ಜ.5) ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

    ಸದ್ಯ ಆಸೀಸ್‌ ವಿರುದ್ಧ ನಡೆಯುತ್ತಿರುವ ಈ ಸರಣಿಯ ಕೊನೇ ಪಂದ್ಯದಲ್ಲಿ ಅತಿದೊಡ್ಡ ಜವಾಬ್ದಾರಿ ಬುಮ್ರಾ ಅವರಮೇಲಿದೆ. ಇದುವರೆಗೆ 5 ಟೆಸ್ಟ್‌ ಪಂದ್ಯದ 9 ಇನ್ನಿಂಗ್ಸ್‌ನಲ್ಲಿ 32 ವಿಕೆಟ್‌ ಪಡೆದುಕೊಂಡಿದ್ದಾರೆ. ಕೊನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಆಸೀಸ್‌ ಬ್ಯಾಟರ್‌ಗಳನ್ನ ತೀವ್ರವಾಗಿ ಕಾಡಿದರು. ಇದೀಗ ಪಂದ್ಯ ಗೆದ್ದು ಸರಣಿಯನ್ನು ಡ್ರಾಗೊಳಿಸುವ ನಿಟ್ಟಿನಲ್ಲಿ ಬುಮ್ರಾ ಅವರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಭಾನುವಾರ ಬುಮ್ರಾ ಅವರ ಬೌಲಿಂಗ್‌ ಬಗ್ಗೆ ನಿರ್ಧಾರವಾಗಲಿದೆ. ಇದನ್ನೂ ಓದಿ: 32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!

    ಸದ್ಯ ಬುಮ್ರಾ ಅವರ ಆರೋಗ್ಯದ ಬಗ್ಗೆ ಮುಖ್ಯ ಕೋಚ್ ಗೌತಂ ಗಂಭೀರ್ ಅಥವಾ ಬಿಸಿಸಿಐನಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ, 2ನೇ ಇನ್ನಿಂಗ್ಸ್ ನಲ್ಲಿ ಅವರು ಆಡಲು ಸಾಧ್ಯವಾಗದೇ ಇದ್ದರೆ, ಟೀಂ ಇಂಡಿಯಾಗೆ ಬಹುದೊಡ್ಡ ಹೊಡೆತ ಬೀಳಲಿದೆ. ಬುಮ್ರಾಗೆ ಅತಿಯಾದ ವರ್ಕ್ ಲೋಡ್ ಇದೆ ಎಂದು ನಾಯಕ ರೋಹಿತ್ ಶರ್ಮಾ ಕೂಡಾ ಹೇಳಿದ್ದರು.

    ಬುಮ್ರಾ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ 10 ಓವರ್ ಎಸೆದು, 2 ವಿಕೆಟ್ ಪಡೆದುಕೊಂಡಿದ್ದಾರೆ. ವೇಗಿಗಳಾದ ಸಿರಾಜ್ 16, ಪ್ರಸಿದ್ದ್ ಕೃಷ್ಣ 15 ಓವರ್ ಗಳನ್ನು ಎಸೆದಿದ್ದಾರೆ. ಇವರಿಬ್ಬರೂ, ತಲಾ ಮೂರು ವಿಕೆಟ್ ಅನ್ನು ಪಡೆದುಕೊಂಡರೆ, ನಿತೀಶ್ ಕುಮಾರ್ ರೆಡ್ಡಿ ಎರಡು ವಿಕೆಟ್ ಪಡೆದರು. ಇದನ್ನೂ ಓದಿ: BMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಬುಮ್ರಾ ಫಿಟ್‌ ಇಲ್ಲ ಅಂದ್ರೆ 200 ರನ್‌ ಕೂಡ ಸಾಲಲ್ಲ:
    ಬುಮ್ರಾ ಅವರು ಮೈದಾನ ತೊರೆದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌, ಬುಮ್ರಾ ಬೌಲಿಂಗ್‌ ಮಾಡಲು ಫಿಟ್‌ ಇದ್ದರೆ, 150 ರನ್‌ ಟಾರ್ಗೆಟ್‌ ಇದ್ದರೂ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಒಂದು ವೇಳೆ ಫಿಟ್‌ ಇಲ್ಲವಾದ್ರೆ ಭಾರತ 200 ರನ್‌ ಲೀಡ್‌ ಕಾಯ್ಡುಕೊಂಡರೂ ಸಾಕಾಗುವುದಿಲ್ಲ. ಸದ್ಯ ಭಾರತ 145 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೂ 40 ರನ್‌ ಗಳಿಸಿ 185 ರನ್‌ ಟಾರ್ಗೆಟ್‌ ಕೊಟ್ಟರೂ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಆದ್ರೆ ಅದು ಬುಮ್ರಾ ಫಿಟ್‌ನೆಸ್‌ ಮೇಲೆ ನಿರ್ಧಾರವಾಗಲಿದೆ.

  • ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

    ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

    ಸೆಂಚುರಿಯನ್: ಇಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಪಾಕಿಸ್ತಾನ ಕ್ರಿಕೆಟ್‌ ತಂಡದ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ (South Africa) 3ನೇ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ಗೆ (WTC Final) ಅಧಿಕೃತವಾಗಿ ಪ್ರವೇಶಿಸಿದೆ.

    ಇನ್ನೂ 2ನೇ ತಂಡವಾಗಿ ಫೈನಲ್‌ ಪ್ರವೇಶಿಸಲು ಭಾರತ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ಕಳೆದುಕೊಂಡು ರೋಚಕ ಜಯ ದಾಖಲಿಸಿದೆ. ಈ ಮೂಲಕ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆಯಿತು.

    ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಅಂತ್ಯವಾಗಿದೆ. ಇದನ್ನೂ ಓದಿ: ದಿನದ ಕೊನೇ ಓವರ್‌ನಲ್ಲಿ ನೋಬಾಲ್‌ ಎಡವಟ್ಟು – ರೋಚಕ ಘಟಕ್ಕೆ ಬಾಕ್ಸಿಂಗ್‌ ಡೇ ಟೆಸ್ಟ್‌; ಆಸೀಸ್‌ಗೆ 333 ರನ್‌ ಮುನ್ನಡೆ

    ಇದೀಗ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸರಾಸರಿ 66.67 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ 58.89 ಹಾಗೂ ಭಾರತ 55.88 ಸರಾಸರಿ ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ ಪಂದ್ಯವನ್ನು ಪ್ರವೇಶಿಸಲು ಆಸೀಸ್‌ ವಿರುದ್ಧ ಗೆಲುವು ನಿರ್ಣಾಯಕವಾಗಿದೆ.

    ಮುಂದಿನ ವರ್ಷ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಕಬಳಿಸಿ ಹೊಸ ದಾಖಲೆ ಬರೆದ ಬೂಮ್ರಾ

    ದಕ್ಷಿಣ ಆಫ್ರಿಕಾ ಸಾಧನೆ
    2023ರಲ್ಲಿ ಮಹಿಳಾ ಟಿ20 ವಿಶ್ವಕಪ್- ಫೈನಲ್.
    2023ರಲ್ಲಿ ಪುರುಷರ ವಿಶ್ವಕಪ್ – ಸೆಮಿಫೈನಲ್.
    2024ರಲ್ಲಿ ಪುರುಷರ T20 ವಿಶ್ವಕಪ್ – ಫೈನಲ್.
    2024ರಲ್ಲಿ ಮಹಿಳಾ T20 ವಿಶ್ವಕಪ್ – ಫೈನಲ್.
    2025ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ – ಫೈನಲ್

  • WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    ಲಂಡನ್‌: ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (WTC Final) ಪಂದ್ಯದ 4ನೇ ದಿನದಾಟ ಆರಂಭಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ ಗಳಿಸಿದ್ದ ಆಸ್ಟ್ರೇಲಿಯಾ (Australia) 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ದಾಳಿಗೆ ತುತ್ತಾದರೂ, 370ಕ್ಕೂ ಅಧಿಕ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಪಡೆದ ಟೀಂ ಇಂಡಿಯಾ (Team India) ಸ್ಪಿನ್ನರ್‌ ರವೀಂದ್ರ ಜಡೇಜಾ (Ravindra Jadeja) ಹೊಸ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡಿದ್ದಾರೆ.

    65 ಟೆಸ್ಟ್‌ ಪಂದ್ಯವನ್ನಾಡಿರುವ ಜಡೇಜಾ 24.25 ಸರಾಸರಿ ಹಾಗೂ 2.44ರ ಎಕಾನಮಿ ರೇಟ್‌ನಲ್ಲಿ 268 ವಿಕೆಟ್‌ ಪಡೆಯುವ ಮೂಲಕ ಬಿಶನ್ ಸಿಂಗ್ ಬೇಡಿ (Bishan Singh Bedi) ಅವರ ದಾಖಲೆಯನ್ನ ಮುರಿದಿದ್ದಾರೆ. ಬಿಶನ್‌ ಸಿಂಗ್‌ 67 ಪಂದ್ಯಗಳಲ್ಲಿ 266 ವಿಕೆಟ್‌ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಆದ್ರೆ ಜಡೇಜಾ 65 ಪಂದ್ಯಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ. ಜೊತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ಯಶಸ್ವಿ ಎಡಗೈ ಸ್ಪಿನ್ನರ್‌ ಎನಿಸಿಕೊಂಡಿದ್ದಾರೆ.

    ಶ್ರೀಲಂಕಾದ ರಂಗನಾ ಹೆರಾತ್ 93 ಪಂದ್ಯಗಳಲ್ಲಿ 433 ವಿಕೆಟ್‌, ಡೇನಿಯಲ್ ವೆಟ್ಟೋರಿ 113 ಪಂದ್ಯಗಳಲ್ಲಿ 362 ವಿಕೆಟ್‌ ಮತ್ತು ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ 86 ಪಂದ್ಯಗಳಲ್ಲಿ 297 ವಿಕೆಟ್ ಪಡೆದಿದ್ದರೆ ಜಡೇಜಾ 65 ಪಂದ್ಯಗಳಲ್ಲಿ 268 ವಿಕೆಟ್‌ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಆಸ್ಟ್ರೇಲಿಯಾ ವಿರುದ್ಧದ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಕದಿನ ಕ್ರಿಕೆಟ್‌ ಶೈಲಿಯಲ್ಲಿ ಬ್ಯಾಟಿಂಗ್‌ ಮಾಡಿ 48 ರನ್‌ (51 ಎಸೆತ, 7 ಬೌಂಡರಿ, 1 ಸಿಕ್ಸ್‌) ಗಳಿಸಿದ್ದಾರೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್‌ ಪಡೆದಿದ್ದ ಜಡೇಜಾ 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಟಾಪ್‌ ಬ್ಯಾಟರ್ಸ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಸ್ಟೀವ್‌ ಸ್ಮಿತ್‌ (34 ರನ್‌), ಟ್ರಾವಿಸ್‌ ಹೆಡ್‌ (18 ರನ್‌) ಹಾಗೂ ಕ್ಯಾಮರೂನ್‌ ಗ್ರೀನ್‌ (25 ರನ್‌) ವಿಕೆಟ್‌ ಕಬಳಿಸುವ ಮೂಲಕ ಜಡೇಜಾ ಹೊಸ ದಾಖಲೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ 

  • WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ (WTC Final) ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜಾ (Ravindra Jadeja), ಉಮೇಶ್‌ ಯಾದವ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ಕಮಾಲ್‌ನಿಂದಾಗಿ ಆಸ್ಟ್ರೇಲಿಯಾದ (Australia) ಟಾಪ್‌ ಬ್ಯಾಟ್ಸ್‌ಮ್ಯಾನ್‌ಗಳು ನೆಲ ಕಚ್ಚಿದ್ದಾರೆ. ಇದರ ಹೊರತಾಗಿಯೂ ಭಾರತ 296 ರನ್‌ಗಳ ಹಿನ್ನಡೆಯಲ್ಲಿದೆ.

    2ನೇ ದಿನದ ಅಂತ್ಯಕ್ಕೆ 38 ಓವರ್‌ಗಳಲ್ಲಿ 151 ರನ್‌ ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ 3ನೇ ದಿನ ಅಜಿಂಕ್ಯಾ ರಹಾನೆ ಹಾಗೂ ಆಲ್‌ರೌಂಡರ್‌ ಶಾರ್ದೂಲ್‌ ಬ್ಯಾಟಿಂಗ್‌ ನೆರವಿನಿಂದ 296 ರನ್‌ ಗಳಿಸುಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    3ನೇ ದಿನದ ಇನ್ನಿಂಗ್ಸ್‌ ಆರಂಭಿಸಿದ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಶ್ರೀಕಾರ್‌ ಭರತ್‌ ಜೋಡಿ ಉತ್ತಮ ರನ್‌ ಕಲೆಹಾಕುವಲ್ಲಿ ವಿಫಲವಾಯಿತು. ಭರತ್‌ 5 ರನ್‌ ಗಳಿಸಿ ಔಟಾದರು. ನಂತರ ಜೊತೆಗೂಡಿದ ಶಾರ್ದೂಲ್‌ ಠಾಕೂರ್‌ (Shardul Thakur) ಹಾಗೂ ರಹಾನೆ ಜೋಡಿ 7ನೇ ವಿಕೆಟ್‌ಗೆ 145 ಎಸೆತಗಳಲ್ಲಿ 109 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಹಾನೆ 89 ರನ್‌ (129 ಎಸೆತ, 11 ಬೌಂಡರಿ, 1 ಸಿಕ್ಸರ್‌), ಶಾರ್ದೂಲ್‌ ಠಾಕೂರ್‌ 51 ರನ್‌ (109 ಎಸೆತ, 6 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನವಿಲ್ಲದೇ ಭಾರತ 69.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್‌ ಆಯಿತು.

    ಇನ್ನೂ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾದ ಟಾಪ್‌ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ಸ್ಟೀವ್‌ ಸ್ಮಿತ್‌ ಹಾಗೂ ಟ್ರಾವಿಸ್‌ ಹೆಡ್‌ ಜಡೇಜಾ ಸ್ಪಿನ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ 3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡು 123 ರನ್‌ ಗಳಿಸಿದೆ.

    ಉಸ್ಮಾನ್‌ ಖವಾಜ 13 ರನ್‌, ಸ್ಟೀವ್‌ ಸ್ಮಿತ್‌ (Steve Smith) 34 ರನ್‌, ಟ್ರಾವಿಸ್‌ ಹೆಡ್‌ (Travis Head) 18 ರನ್‌ ಹಾಗೂ ಡೇವಿಡ್‌ ವಾರ್ನರ್‌ ಕೇವಲ 1 ರನ್‌ ಗಳಿಸಿ ಔಟಾದರು. ಮಾರ್ಕಸ್‌ ಲಾಬುಶೇನ್‌ 41 ರನ್‌ (118 ಎಸೆತ, 3 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಶನಿವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ರವೀಂದ್ರ ಜಡೇಜಾ 2 ಪ್ರಮುಖ ವಿಕೆಟ್‌ ಕಿತ್ತರೆ, ಸಿರಾಜ್‌ ಹಾಗೂ ಉಮೇಶ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌ ಆಸ್ಟ್ರೇಲಿಯಾ – 469/10
    ಮೊದಲ ಇನ್ನಿಂಗ್ಸ್‌ ಭಾರತ – 296/10

  • WTC ಫೈನಲ್‌ಗಾಗಿ ಭಾರತದ ಹೋರಾಟ

    WTC ಫೈನಲ್‌ಗಾಗಿ ಭಾರತದ ಹೋರಾಟ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್  ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

    ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

    ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್  ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ.

    ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ  2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. 2000 ಇಸ್ವಿಯಲ್ಲಿ ನಡೆದ ನಾಕೌಟ್ ಟ್ರೋಫಿ ಬಳಿಕ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಕೊನೆಗೂ ನನಸು ಮಾಡಿದೆ.

    ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮುರಿಯದ ಮೂರನೇ ವಿಕೆಟಿಗೆ 173 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು. ಕೇನ್ ವಿಲಿಯಮ್ಸನ್ 52 ರನ್(89 ಎಸೆತ, 8 ಬೌಂಡರಿ), ರಾಸ್ ಟೇಲರ್ 47 ರನ್(100 ಎಸೆತ, 6 ಬೌಂಡರಿ) ಹೊಡೆದರು. ಭಾರತದ ಪರ ಸ್ಪಿನ್ನರ್ ಅಶ್ವಿನ್ 2 ವಿಕೆಟ್ ಪಡೆದರು.

    5ನೇ ದಿನ 2 ವಿಕೆಟ್ ನಷ್ಟಕ್ಕೆ 62 ರನ್‍ಗಳಿಸಿದ್ದ ಭಾರತ ಇಂದು 8 ವಿಕೆಟ್ ಗಳ ಸಹಾಯದಿಂದ 92 ರನ್‍ಗಳಿಸಿ ಅಂತಿಮವಾಗಿ 73 ಓವರ್‍ಗಳಲ್ಲಿ 170 ರನ್‍ಗಳಿಗೆ ಆಲೌಟ್ ಆಯ್ತು. ಭಾರತದ ಪರ ರಿಷಭ್ ಪಂತ್ 41 ರನ್(88 ಎಸೆತ, 4 ಬೌಂಡರಿ), ರವೀಂದ್ರ ಜಡೇಜಾ 16 ರನ್, ಅಜಿಂಕ್ಯಾ ರಹಾನೆ 15 ರನ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ 13 ರನ್ ಹೊಡೆದು ಔಟಾದರು.

    ಟಿಮ್ ಸೌಥಿ 4 ವಿಕೆಟ್ ಪಡೆದರೆ, ಟ್ರೆಂಡ್ ಬೌಲ್ಟ್ 3, ಕೈಲ್ ಜೇಮಿಸನ್ 2, ನೆಲಿ ವ್ಯಾಗ್ನರ್ 1 ವಿಕೆಟ್ ಪಡೆದರು.

    ಸಂಕ್ಷಿಪ್ತ ಸ್ಕೋರ್
    ಭಾರತ ಮೊದಲ ಇನ್ನಿಂಗ್ಸ್ 217/10
    ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 249/10
    ಭಾರತ ಎರಡನೇ ಇನ್ನಿಂಗ್ಸ್ 170/10
    ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 140/2

  • ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಸ್ಪಿನ್ ಪಾಠವನ್ನು ಹೇಳಿಕೊಟ್ಟಿದ್ದಾನೆ.

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಸ್ಪಿನ್ನರ್ ಆಡಿಸದ ವಿಚಾರವನ್ನು ಶೇನ್ ವಾನ್ ಟ್ವಿಟ್ಟರ್ ನಲ್ಲಿ ಪ್ರಸ್ತಾಪ ಮಾಡಿ ಅಸಮಾಧಾನ ಹೊರ ಹಾಕಿದ್ದರು.

    “ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡ ಒಬ್ಬ ಪರಿಣತ ಸ್ಪಿನ್ನರನ್ನು ಆಡಿಸದೇ ಇರುವುದು ನಿರಾಸೆ ತಂದಿದೆ. ಈ ಪಿಚ್‍ನಲ್ಲಿ ಸ್ಪಿನ್ನರ್ ಗಳು  ದೊಡ್ಡ ತಿರುವು ಪಡೆಯಬಲ್ಲರು. ಈಗಾಗಲೇ ಪಿಚ್‍ನಲ್ಲಿ ಬೌಲರ್ ಗಳ ಪಾತ್ರ ದೊಡ್ಡದಾಗಿ ಕಾಣಿಸುತ್ತದೆ. ಒಂದು ವೇಳೆ ಈ ಪಿಚ್‍ನಲ್ಲಿ ಸ್ಪಿನ್ ಲಭ್ಯವಾದರೆ, ಭಾರತ ತಂಡ 270-300 ರನ್ ಗಳಿಸಿದರೆ ಈ ಪಂದ್ಯ ಕಿವೀಸ್ ಪಾಲಿಗೆ ಮುಗಿದಂತೆ. ಕೇವಲ ಹವಾಮಾನವಷ್ಟೇ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲದು ಎಂದು ವಾರ್ನ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಅಭಿಮಾನಿಯೊಬ್ಬ, “ಶೇನ್ ನಿಮಗೆ ನಿಜಕ್ಕೂ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆಯೇ? ಪಿಚ್ ಒಣಗಿದರೆ ಮಾತ್ರ ಸ್ಪಿನ್ ಆಗಲು ಸಾಧ್ಯ. ಎಲ್ಲಾ ದಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸ್ಪಿನ್ ಆಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾನೆ.

    ಅಭಿಮಾನಿಯ ಟ್ವೀಟ್‍ಗೆ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿ,ಶೇನ್ ವಾರ್ನ್ ಅವರ ಕಾಲೆಳೆದಿದ್ದಾರೆ. “ಶೇನ್ ವಾರ್ನ್ ನಿಮ್ಮ ಈ ಟ್ವೀಟ್ ಅನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕು ಮತ್ತು  ಸ್ಪಿನ್ ಹೇಗೆ ಆಗುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ” ಎಂದು ಹೇಳಿ ಗೂಗ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರೆ, ನ್ಯೂಜಿಲೆಂಡ್ ತಂಡ ಯಾವುದೇ ಸ್ಪಿನ್ನರ್‍ಗಳನ್ನು ತೆಗೆದುಕೊಳ್ಳದೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದೆ.