Tag: Writing

  • ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ‘ಕಾಂತಾರ’ ಸಿನಿಮಾದ ಪೋಸ್ಟರ್ ಮೇಲೆ ದೇವರಿಗೆ ಅವಹೇಳನ

    ರಿಷಬ್ ಶೆಟ್ಟಿ (Rishabh Shetty)  ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿವೆ. ಮೊದಲನೇ ದಿನದಿಂದಲೂ ಈವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ 25 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಪ್ರೇಕ್ಷಕನೂ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರೆ, ಶಿವಮೊಗ್ಗದಲ್ಲಿ ವಿಕೃತ ಮನಸ್ಸಿನವರು ಅವಹೇಳನ (Insulting) ಮಾಡಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಕಾಂತಾರ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಶಿವಮೊಗ್ಗದ ಗೋಡೆ ಗೋಡೆಗಳ ಮೇಲೆ ಕಾಂತಾರ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ. ಆ ಪೋಸ್ಟರ್ ನೋಡಿ ಕಣ್ತುಂಬಿಕೊಳ್ಳಬೇಕಾಗಿದ್ದ ಕೆಲ ವಿಕೃತ ಮನಸ್ಸಿನವರು ಪೋಸ್ಟರ್ ಮೇಲೆ ವಿಕೃತ ಬರಹವನ್ನೇ (Writing) ಬರೆದಿದ್ದಾರೆ. ದೇವರಿಗೆ ಅವಹೇಳನ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಈ ಬರಹವುಳ್ಳ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ  ವ್ಯಕ್ತ ಪಡಿಸಿದ್ದಾರೆ.

    ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ‘F * * K YOU G * D’  ಅಂತಾ ಕಿಡಿಗೇಡಿಗಳು ಬರೆದಿದ್ದು, ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು (Police) ಭೇಟಿ ಪರಿಶೀಲನೆ ಮಾಡಿದ್ದು, ತಕ್ಷಣವೇ ಅವಹೇಳನಕಾರಿ ಬರಹ ತೆಗೆಸಿದ್ದಾರೆ ಪೊಲೀಸರು.

    ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ಮಾಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ರೀತಿಯಲ್ಲಿ ದೇವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ವೇದಿಕೆಯ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ದೇಶಾದ್ಯಂತ ಇದೀಗ ಕೆಜಿಎಫ್ 2 ಹವಾ ಕ್ರಿಯೇಟ್ ಆಗಿದೆ. ನೆನ್ನೆಯಷ್ಟೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರು ಟ್ರೈಲರ್ ಮೆಚ್ಚಿಕೊಂಡು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಂತೂ ಹಬ್ಬದ ರೀತಿಯಲ್ಲೇ ಸಂಭ್ರಮಿಸುತ್ತಿದ್ದಾರೆ. ಈಗ ಕನ್ನಡದ ಚಿತ್ರವೊಂದು ಬಾಲಿವುಡ್ ದಾಟಿಕೊಂಡು ಹಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಹಲವು ದಾಖಲೆಗಳನ್ನು ಬರೆದಿರುವ ಮತ್ತು ತಾನೇ ಬರೆದ ದಾಖಲೆಯನ್ನು ಮುರಿದಿರುವ ‘ಕೆಜಿಎಫ್’ ಸಿನಿಮಾ ಶುರುವಾಗಿದ್ದು 2015ರಂದು. ನಟ ಯಶ್ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸಿನಿಮಾದ ಗೆಲುವಿನಲ್ಲಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ‘ಉ್ರಗಂ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿದ್ದರು. ಪುನೀತ್ ರಾಜ್ ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ ಬ್ಯಾನರ್ ಸಿನಿಮಾ ರಂಗ ಪ್ರವೇಶ ಮಾಡಿತ್ತು. ಈ ಮೂವರು ಸೇರಿ ಮೊದಲು ‘ಕೆಜಿಎಫ್’ ಕನಸು ಕಂಡವರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    21 ಡಿಸೆಂಬರ್ 2018ರಲ್ಲಿ ತೆರೆಕಂಡ ‘ಕೆಜಿಎಫ್’ ಸಿನಿಮಾ ಐತಿಹಾಸಿಕ ದಾಖಲೆ ಮಾಡಿತು. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಪಕ್ಕಾ ಸಿನಿಮಾ ಎನಿಸಿತು. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಿತು. ಯಶ್ ಎಂಬ ಕನ್ನಡದ ಹುಡುಗ ಪ್ಯಾನ್ ಇಂಡಿಯಾ ನಾಯಕನಾಗಿ ಹೊರಹೊಮ್ಮಿದರು. ಭಾರತೀಯ ಸಿನಿಮಾ ರಂಗವೇ ಈ ಸಿನಿಮಾವನ್ನು ಬೆರಗಿನಿಂದ ನೋಡಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಸಿನಿಮಾದಿಂದ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಲಿಲ್ಲ. ತೆಲುಗಿಗೂ ಹಾರಿದರು. ಇಷ್ಟೆಲ್ಲ ಗೆಲುವಿಗೆ ಇಂಬು ಕೊಟ್ಟಿದ್ದು ‘ಕೆಜಿಎಫ್ 2’ ಚಿತ್ರ.  ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    2018ರಲ್ಲೇ ‘ಕೆಜಿಎಫ್ 2’ ಸಿನಿಮಾದ ಕೆಲಸ ಶುರುವಾದವು. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಿನಿಮಾ ಕೂಡ ಭಾರತದ ಸಹಿತ 70 ದೇಶಗಳಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಬರೋಬ್ಬರಿ ಎಂಟು ವರ್ಷಗಳ ಕಾಲ ಯಶ್, ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಎಂಟು ವರ್ಷಗಳ ಕಾಲ ಯಶ್ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ‘ಕೆಜಿಎಫ್’ನಲ್ಲೇ ಮುಳುಗಿದ್ದಾರೆ. ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದರೂ, ಕೆಜಿಎಫ್ 2 ಸಿನಿಮಾದ ಕೆಲಸ ಮುಗಿದ ನಂತರವೇ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಹೊಂಬಾಳೆ ಫಿಲ್ಮ್ ಬೇರೆ ಬೇರೆ ಚಿತ್ರಗಳನ್ನೂ ಮಾಡಿದರೂ, ಕೆಜಿಎಫ್ ಟೆನ್ಷನ್ ಮಾತ್ರ ಹಾಗೆಯೇ ಇತ್ತು. ಇವರೆಲ್ಲ ಇಷ್ಟೊಂದು ನಿರಾಳತೆಯಿಂದ ಕೆಲಸ ಮಾಡಲು ಕಾರಣ ಅವರ ಪತ್ನಿಯರು ಎನ್ನುವುದು ವಿಶೇಷ. ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ ಅವರೇ ಈ ಮಾತನ್ನು ಹೇಳಿದ್ದಾರೆ.

    “ಪ್ರಶಾಂತ್ ನೀಲ್ ಪತ್ನಿ ಲಿಖಿತ, ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತು ನನ್ನ (ವಿಜಯ ಕಿರಗಂದೂರ) ಪತ್ನಿ ಸಹಕಾರದಿಂದಾಗಿ ಎಂಟು ವರ್ಷಗಳ ಕಾಲ ಒಂದೇ ಸಿನಿಮಾದ ಬಗ್ಗೆ ಅಷ್ಟೂ ಶಕ್ತಿಯನ್ನು ವ್ಯಹಿಸಿದ್ದೇವೆ. ನಾವು ಕೂಲ್ ಆಗಿ ಕೆಲಸ ಮಾಡಿದ್ದೇವೆ ಎಂದರೆ, ಅದರ ಅಷ್ಟೂ ಕ್ರೆಡಿಟ್ಸ್ ಅವರಿಗೆ ಸಲ್ಲಬೇಕು’ ಎಂದಿದ್ದಾರೆ ವಿಜಯ್ ಕಿರಗಂದೂರ.

  • ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಸೀರಿಯಲ್ ನೋಡಿ ರಾಮಾಯಣ ಬರೆದ ಬಾಲಕ

    ಭುವನೇಶ್ವರ: ಲಾಕ್‍ಡೌನ್ ವೇಳೆ ಸೀರಿಯಲ್ ನೋಡಿ ಒಡಿಶಾದ 10 ವರ್ಷದ ಬಾಲಕ ರಾಮಾಯಣ ಪುಸ್ತಕ ಬರೆದಿದ್ದಾರೆ.

    ಆಯುಷ್ ಕುಮಾರ್(10) ರಾಮಾಯಣ ಪುಸ್ತಕವನ್ನು ಬರೆದಿದ್ದಾನೆ. ಈತ ರಾಮಾಯಣದ ಸೀರಿಯಲ್‍ಗಳನ್ನು ನೋಡಿ ಒಡಿಯಾ ಭಾಷೆಯಲ್ಲಿ 104 ಪುಟ ಇರುವ ರಾಮಾಯಣವನ್ನು ಬರೆದಿದ್ದಾನೆ.

    ಲಾಕ್‍ಡೌನ್ ಸಮಯದಲ್ಲಿ ಮರುಪ್ರಸಾರವಾಗುವ ರಾಮಾಯಣವನ್ನು ನೋಡಲು ನನ್ನ ಅಂಕಲ್ ಹೇಳಿದ್ದರು. ನೋಡುವುದು ಮಾತ್ರವಲ್ಲ ಅದನ್ನು ಬರೆಯಲು ಪ್ರಯತ್ನಿಸು ಎಂದು ಹೇಳಿದ್ದರು. ಪ್ರತಿದಿನ ನೋಡುತ್ತಿದ್ದೆ. ಪ್ರತಿನಿತ್ಯ ನಾನು ನೋಡಿದ ಎಪಿಸೋಡ್‍ಗಳನ್ನು ಬರೆಯತೊಡಗಿದ್ದೆ. ರಾಮಾಯಣವನ್ನು ಬರೆದು ಮುಗಿಸಲು ಸರಿ ಸುಮಾರು 2 ತಿಂಗಳ ಸಮಯವನ್ನು ತೆಗೆದುಕೊಂಡಿತ್ತು ಎಂದು ಆಯುಷ್ ಹೇಳಿದ್ದಾನೆ.

     

    ರಾಮನ 14 ವರ್ಷಗಳ ಕಾಲ ವನವಾಸ, ಸೀತೆಯ ಅಪಹರಣ ಹೀಗೆ ಅನೇಕ ಪ್ರಮುಖ ಘಟನೆಯನ್ನು ರಾಮಾಯಣದ ಪುಸ್ತಕದಲ್ಲಿ ಬರೆದಿದ್ದೇನೆ. ರಾಮ ಅಯೋಧ್ಯೆಗೆ ಹಿಂದಿರುಗುವಾಗ ಆತನಿಗೆ ಸಿಕ್ಕಿರುವ ಸ್ವಾಗತವನ್ನು ತುಂಬಾ ಸರಳವಾಗಿ ಚೆನ್ನಾಗಿ ವಿವರಿಸಿ ಬರೆದಿದ್ದೇನೆ ಎಂದು ಹೇಳಿದ್ದಾನೆ.

  • ಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ- ದಾಖಲೆ ಬರೆದ ಮಂಗ್ಳೂರು ಬಾಲಕಿ

    ಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ- ದಾಖಲೆ ಬರೆದ ಮಂಗ್ಳೂರು ಬಾಲಕಿ

    ಮಂಗಳೂರು: ಮಾಮೂಲಿಯಾಗಿ ಎಲ್ಲರೂ ಒಂದು ಕೈಯಲ್ಲಿ ಬರೆಯೋದು ನಾವೆಲ್ಲ ನೋಡಿದ್ದೇವೆ, ನಾವೂ ಬರೆಯುತ್ತೇವೆ. ಆದರೆ ಮಂಗಳೂರಿನ ಬಾಲಕಿಯೋರ್ವಳು ಎರಡು ಕೈಗಳಲ್ಲಿಯೂ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾಳೆ. ಅದು ಉಲ್ಟಾ ಬರವಣಿಗೆಯೂ ಇರಲಿ, ಮಿರರ್ ಏಫೆಕ್ಟ್ ರೈಟಿಂಗೂ ಇರಲಿ ಎಲ್ಲವನ್ನೂ ಆಕೆ ಸಲೀಸಾಗಿ ಬರೆಯುತ್ತಾಳೆ.

    ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುವ ಅದ್ಭುತ ಕಲೆ ಹೊಂದಿರುವ ಬಾಲಕಿ ಹೆಸರು ಆದಿ ಸ್ವರೂಪ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ದಂಪತಿಯ ಪುತ್ರಿಯಾಗಿರುವ ಈಕೆ ಬರವಣೆಗೆಯಲ್ಲಿಯೇ ಇದೀಗ ವಿಶ್ವ ದಾಖಲೆ ಮಾಡಿದ್ದಾಳೆ. ಎರಡು ಕೈಯಲ್ಲಿ ಹತ್ತು ರೀತಿಯಲ್ಲಿ ಬರೆಯುವುದನ್ನು ಈ ಬಾಲಕಿ ಕರಗತ ಮಾಡಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸುವಂತೆ ಮಾಡಿದ್ದಾಳೆ.

    ಸದ್ಯ ಇಂಗ್ಲೀಷ್ ಪದಗಳನ್ನು ಸುಂದರವಾಗಿ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಬರೆದು ವಿಶ್ವ ದಾಖಲೆ ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಘೋಷಿಸಿದೆ.

    ಈಕೆಯ ತಂದೆ ಗೋಪಾಡ್ಕರ್ ಅವರ ಶಿಕ್ಷಣ ಸಂಸ್ಥೆ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಎಡ ಕೈಯಲ್ಲಿ ಬರೆಯುವ ಅಭ್ಯಾಸ ಮಾಡಿಸಲಾಗುತ್ತೆ. ಈ ಸಂದರ್ಭ ಆರಂಭಿಸಿದ ಆದಿ ಸ್ವರೂಪ ಇದೀಗ ಎರಡು ವರ್ಷದಲ್ಲಿ ಎರಡೂ ಕೈಯಲ್ಲಿ ತನ್ನದೇ ಆದ ಯುನಿಡೈರೆಕ್ಷನಲ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ವಿಧಾನಗಳನ್ನು ಪ್ರಯೋಗ ಮಾಡಿದ್ದಾಳೆ.

    ಈ ಬಾಲಕಿ ಕೇವಲ ಈ ಸಾಧನೆ ಮಾತ್ರವಲ್ಲದೇ ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್ ಮುಂತಾದವುಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಇದರ ಜೊತೆ ನೂರಾರು ಫೋನ್ ನಂಬರ್‍ಗಳನ್ನು ನಿಮಿಷಾರ್ಧದಲ್ಲೇ ನೆನಪಿಗೆ ದಾಖಲಿಸಿಕೊಳ್ಳುತ್ತಾಳೆ. ಇದೀಗ ಹತ್ತನೇ ತರಗತಿಯಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ತಂದೆ ತಾಯಿಯ ಜೊತೆ ಸ್ವಕಲಿಕೆಯಲ್ಲೇ ಎರಡು ಕೈಗಳಲ್ಲಿ ಎಕ್ಸಾಂ ಬರೆಯುವ ನಿರ್ಧಾರ ಮಾಡಿದ್ದಾಳೆ.

    https://twitter.com/ANI/status/1305756846481985536

  • ಸರ್ಕಾರಿ ಕಚೇರಿ ಗೋಡೆಯ ಮೇಲೆ ಎನ್ಆರ್​ಸಿ ವಿರೋಧಿ ಬರಹ

    ಸರ್ಕಾರಿ ಕಚೇರಿ ಗೋಡೆಯ ಮೇಲೆ ಎನ್ಆರ್​ಸಿ ವಿರೋಧಿ ಬರಹ

    ಬಳ್ಳಾರಿ: ಎನ್ಆರ್​ಸಿ ಜಾರಿ ಆದ ಬಳಿಕವೂ ಅಲ್ಲಲ್ಲಿ ಕೆಲ ವಿರೋಧಿಗಳು ಗೋಡೆಗಳ ಮೇಲೆ ಎನ್ಆರ್​ಸಿ ವಿರೋಧಿ ಬರಹಗಳನ್ನು ಬರೆಯುವ ಮೂಲಕ ವಿರೋಧ ತೋರಿದ್ದಾರೆ.

    ಅದೇ ರೀತಿಯಲ್ಲಿ ಬಳ್ಳಾರಿಯ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಬಾಯ್‍ಕಟ್ ಎನ್ಆರ್​ಸಿ, ಎನ್‍ಪಿಆರ್ ಎಂದು ಅನಾಮಧೇಯ ವ್ಯಕ್ತಿಗಳು ಬರೆದಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಐಟಿಐ ಕಾಲೇಜು ಕಾಂಪೌಂಡ್ ಗೋಡೆಯ ಮೇಲೆ ಈ ಬರಹ ಬರೆದಿದ್ದಾರೆ.

    ಮಂಗಳವಾರ ರಾತ್ರಿ ಈ ಬರಹವನ್ನು ಯಾರೋ ಕಿಡಗೇಡಿಗಳು ಬರೆದಿದ್ದಾರೆ. ಬಳಿಕ ವಿಷಯ ತಿಳಿದ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಗೋಡೆ ಬರಹವನ್ನು ಅಳಿಸಿ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

    ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲೂ ಇದೇ ರೀತಿ ಬರೆಯಲಾಗಿತ್ತು, ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯಾರೋ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿದ್ದರು. ಕೈ ಬರಹದಿಂದಲೇ ಬರೆದಿರುವ ಬರಹಗಳಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಿತ್ತು.