Tag: writers

  • ಐಡೆಂಟಿಟಿ ಕಾರ್ಡ್‌ಗಳನ್ನ ಇಟ್ಟುಕೊಂಡವರೆಲ್ಲ ಸಾಹಿತಿಗಳಲ್ಲ – ಸಚಿವ ಶಿವರಾಜ್ ತಂಗಡಗಿ

    ಐಡೆಂಟಿಟಿ ಕಾರ್ಡ್‌ಗಳನ್ನ ಇಟ್ಟುಕೊಂಡವರೆಲ್ಲ ಸಾಹಿತಿಗಳಲ್ಲ – ಸಚಿವ ಶಿವರಾಜ್ ತಂಗಡಗಿ

    ಕೊಪ್ಪಳ: ಆಳವಾದ ಅಧ್ಯಯನ, ನಿರಂತರ ಓದು, ಶ್ರಮದಿಂದ ಕಷ್ಟಪಟ್ಟು ಓದಿ, ಇಷ್ಟಪಟ್ಟು ಅನುಭವಿಸಿ ಬರೆದರೆ ಮಾತ್ರ ಸಾಹಿತಿಗಳು ಆಗಲು ಸಾಧ್ಯ. ಕೇವಲ ಐಡೆಂಟಿಟಿ ಕಾರ್ಡ್‌ಗಳನ್ನ ಇಟ್ಟುಕೊಂಡವರೆಲ್ಲ ಸಾಹಿತಿಗಳಾಗಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅಭಿಪ್ರಾಯಪಟ್ಟರು.

    ಕೊಪ್ಪಳದ‌ (Koppala) ಕಾರಟಗಿ ಪಟ್ಟಣದಲ್ಲಿ ಭಾನುವಾರ ತಾಲೂಕು ಕಸಾಪ ಆಯೋಜಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಭಾಜನರಾಗಿರುವ ತಾಲೂಕಿನ ಕಥೆಗಾರ ಮಂಜು ನಾಯಕ ಚಳ್ಳೂರು ಅವರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಲು ವಿಪಕ್ಷಗಳ ಪ್ರಯತ್ನ: ಎನ್.ರವಿಕುಮಾರ್

    ಯಾರು ಕಷ್ಟ, ಬಡತನ ಸವಿದಿರುತ್ತಾರೋ ಅವರು ಮೇಲೆ ಬಂದು ಸಾಧನೆ ಮಾಡಲು ಸಾಧ್ಯ. ತಂದೆ-ತಾಯಿ ಮತ್ತು ಕಲಿಸಿದ ಗುರುಗಳಿಗೆ ಹೆಸರು ತರುವಂಥ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ತಂದೆ-ತಾಯಿ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಅಂಥ ಮಕ್ಕಳು ಮುಂದೆ ಹೆತ್ತವರಿಗೆ ಹೆಸರು ತರುತ್ತಾರೆ. ಸಾಧನೆ ಮಾಡಿದಾಗ ಹೆಚ್ಚು ಖುಷಿ ಪಡುವುದು ತಂದೆ-ತಾಯಿ ಮತ್ತು ಕಲಿಸಿದ ಗುರುಗಳು. ಯಾವುದೇ ಕ್ಷೇತ್ರವಿರಲಿ ಸತತ ಶ್ರಮದ ಮೂಲಕ ಏನಾದರೂ ಸಾಧಿಸಬೇಕು. ಅಲ್ಪ ಜ್ಞಾನ ಪಡೆದು ದೊಡ್ಡದಾಗಿ ಸಾಹಿತಿಗಳೆಂದು ಬಿಂಬಿಸುವವರೇ ಹೆಚ್ಚು ಇರುವಂಥ ಈ ಕಾಲದಲ್ಲಿ ಕಷ್ಟದ ಜೀವನ ಸವಿದು, ಸಣ್ಣ ವಯಸ್ಸಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪಾತ್ರರಾದ ನಮ್ಮ ಕ್ಷೇತ್ರದ ಚೆಳ್ಳೂರು ಗ್ರಾಮದ ಯುವಕ ಕಥೆಗಾರ ಮಂಜುನಾಥ ನಾಯಕ ಭಿನ್ನವಾಗುತ್ತಾರೆ ಎಂದು ಬಣ್ಣಿಸಿದರು.

    ನಮ್ಮ ಕೊಪ್ಪಳ ಜಿಲ್ಲೆಯ ನನ್ನ ಕ್ಷೇತ್ರದ ಯುವಕ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೀರ್ತಿ ತಂದಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಮಂಜುನಾಥ ಅವರ ಶತತ ಅಭ್ಯಾಸ, ಕಲಿಕೆಯಿಂದಲೇ ಈ ಮಟ್ಟಕ್ಕೆ ಸಾಧನೆ ಮಾಡಲು ಸಾಧ್ಯ. ಈ ರಾಜ್ಯದಲ್ಲಿ ಏನಾದರೂ ಒಂದು ಉತ್ತಮ ಕೆಲಸ, ಸಾಧನೆ ಮಾಡಲು ಸಾಧ್ಯವಾದರೆ ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ. ಅದಕ್ಕಾಗಿ ಈ ಖಾತೆಯನ್ನು ಸಿದ್ದರಾಮಯ್ಯನವರು ನನಗೆ ನಿರ್ವಹಣೆ ಮಾಡಲು ಕೊಟ್ಟಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಖಾದರ್‌ಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ

    ಕನ್ನಡ ಸಾಹಿತಿಗಳು, ನಾಟಕಕಾರರು, ಕಥೆಗಾರರು, ಕಲಾವಿದರು, ಜನಪದ ಕಲಾವಿದರು ಸೇರಿದಂತೆ ವಿವಿಧ ಪ್ರಾಕಾರಗಳ ಕಲಾವಿದರಿಗೆ ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ನಂಟಿದೆ. ಇಷ್ಟೆಲ್ಲ ಬುದ್ಧಿವಂತರ ಜೊತೆಗೆ ನಾನು ನಿತ್ಯ ಕೆಲಸ ಮಾಡಬೇಕಾಗಿದೆ. ಇದಲ್ಲದೇ 6 ರಂಗಾಯಣ,14 ನಿಗಮ ಮಂಡಳಿ, 6 ಪ್ರಾಧಿಕಾರ, 7 ಗಡಿನಾಡ ಕನ್ನಡ ಪ್ರಾಧಿಕಾರಗಳ ಅಧ್ಯಕ್ಷನೂ ನಾನೆ ಎಂದು ತಿಳಿಸಿದರು.

    ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಅವುಗಳನ್ನು ಆದ್ಯತೆ ಮೇರೆಗೆ ಜಾರಿ ಮಾಡುತ್ತೇವೆ. ಇವುಗಳ ಜಾರಿಗಾಗಿ ಉಳಿದ ಅಭಿವೃದ್ಧಿ ಕೆಲಸಗಳಿಗೆ ಸ್ವಲ್ಪ ಅನುದಾನದ ಕೊರತೆಯಾಗುತ್ತಿರುವುದ ನಿಜ. ಸ್ವಲ್ಪ ತಡವಾದರೂ ಪರವಾಗಿಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನೂ ಬದ್ಧ. ಕಾರಟಗಿಯಲ್ಲಿ ಕನ್ನಡ ಭವನ, ಉತ್ತಮ ಗ್ರಂಥಾಲಯ, 100 ಹಾಸಿಗೆ ಆಸ್ಪತ್ರೆ ಜೊತೆಗೆ ಪದವಿ ಕಾಲೇಜು, ವಿವಿಧ ವಸತಿ ನಿಲಯಗಳನ್ನು ಮಂಜೂರು ಮಾಡಲಾಗುವುದು ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಜಬ್‌ ವಿವಾದದಿಂದ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ; ಸಮವಸ್ತ್ರ ಆದೇಶ ಪರಿಷ್ಕರಿಸಿ – ಸಿಎಂಗೆ ಸಾಹಿತಿಗಳು, ಬರಹಗಾರರ ಪತ್ರ

    ಹಿಜಬ್‌ ವಿವಾದದಿಂದ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ; ಸಮವಸ್ತ್ರ ಆದೇಶ ಪರಿಷ್ಕರಿಸಿ – ಸಿಎಂಗೆ ಸಾಹಿತಿಗಳು, ಬರಹಗಾರರ ಪತ್ರ

    – ಎನ್‌ಇಪಿ ರದ್ದುಗೊಳಿಸಿ; ಮಕ್ಕಳಿಗೆ ಸೈಕಲ್‌ ಭಾಗ್ಯ ಮರು ಜಾರಿ ಮಾಡಿ
    – ಸಿಂಡಿಕೇಟ್‌ಗಳಲ್ಲಿ ಬಿಜೆಪಿ ನೇಮಿಸಿರೋ ಕೋಮುವಾದಿ ಮನಸ್ಥಿತಿ ಸದಸ್ಯರನ್ನ ಬದಲಾಯಿಸಿ
    – ಶಾಲೆಗಳಲ್ಲಿ ಬಿಸಿಯೂಟ ಮಾದರಿಯಲ್ಲಿ ಬೆಳಗಿನ ಉಪಾಹಾರ ಒದಗಿಸಿ

    ಬೆಂಗಳೂರು: ಹಿಜಬ್‌ (Hijab) ವಿವಾದದಿಂದ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತು ಸರ್ಕಾರ ಆದೇಶವನ್ನು ಪರಿಷ್ಕರಿಸಬೇಕು ಎಂದು ಸಾಹಿತಿಗಳು, ಬರಹಗಾರರು ಹಾಗೂ ಜನಪರ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಮಾಡಿದರು.

    ಕನ್ನಡ ನಾಡಿನ ಹೆಸರಾಂತ ಸಾಹಿತಿ, ಬರಹಗಾರರು ಮತ್ತು ನಾನಾ ಜನಪರ ಸಂಘಟನೆಗಳ ಮುಖಂಡರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಮುಖ್ಯಮಂತ್ರಿಗಳ ಮುಂದೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ: ಗ್ಯಾರಂಟಿಗಳ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡ್ತೀವಿ: ಹೆಚ್‌ಕೆ ಪಾಟೀಲ್

    ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ NEET ವ್ಯವಸ್ಥೆಯಿಂದ ಹೊರ ಬರುವ ಅಗತ್ಯವಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಅನುಷ್ಠಾನ ಸಮರ್ಪಕವಾಗಿ ಆಗಬೇಕು. ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು. ಹಲವರು ಸಾಹಿತಿ, ಚಿಂತಕರಿಗೆ ನಿರಂತರವಾಗಿ ಬೆದರಿಕೆ ಪತ್ರಗಳು ಬರುತ್ತಿದ್ದು, ಭಯದ ವಾತಾವರಣ ನಿರ್ಮಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಪಠ್ಯ ಪರಿಷ್ಕರಣೆ ಮಾಡಬೇಕು. ಬರಗೂರು ರಾಮಚಂದ್ರಪ್ಪ‌ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿದ್ದ ಪಠ್ಯ ತೆಗೆಯಬೇಕು. ಬಿಜೆಪಿ ಬದಲಾಯಿಸಿದ್ದ ಪಠ್ಯಗಳನ್ನು ತೆಗೆದು ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬೇಕು. ಇಂದಿನ ಸಂದರ್ಭಕ್ಕೆ ತಕ್ಕಂತೆ ಪಠ್ಯಗಳ ಬದಲಾವಣೆಗೆ ಕೂಡಲೇ ತಜ್ಞರ ಸಮಿತಿ‌ ರಚಿಸಬೇಕು. ರಂಗಾಯಣಗಳಂಥ ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಥೆಗಳಿಗೆ ಜಾತ್ಯತೀತ ವ್ಯಕ್ತಿಗಳ ನೇಮಕ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್

    ರಾಷ್ಟ್ರೀಯ ಶಿಕ್ಷಣ ನೀತಿ‌ ರದ್ದುಗೊಳಿಸಬೇಕು. ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ, ಸಾಕ್ಸ್ ಒದಗಿಸಬೇಕು. ಸೈಕಲ್ ಭಾಗ್ಯ ಮರು ಜಾರಿಗೊಳಿಸಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಬೇಕು. ಸಾಂಸ್ಕೃತಿಕ ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಕೂಡಲೇ ಬದಲಾಯಿಬೇಕು. ಬಿಜೆಪಿ ಸರ್ಕಾರ ಘೋಷಿಸಿರುವ ಪ್ರಶಸ್ತಿ, ಪುರಸ್ಕಾರಗಳನ್ನು ಕೂಡಲೇ ತಡೆಹಿಡಿಯಬೇಕು. ಸಾಂಸ್ಕೃತಿಕ ಕ್ಷೇತ್ರದ ಸಂಘ ಸಂಸ್ಥೆಗಳಿಗೆ ಹಿಂದಿನ ಸರ್ಕಾರ ನೀಡಿರುವ ಅನುದಾನಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

    ವಿಶ್ವವಿದ್ಯಾಲಯಗಳಲ್ಲಿನ ಸಿಂಡಿಕೇಟ್‌ಗಳಿಗೆ ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ. ಅವರನ್ನು ಕೂಡಲೇ ಬದಲಾಯಿಸಿ, ಜಾತ್ಯತೀತ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಉದ್ದೇಶದಿಂದ ಸಾಂಸ್ಕೃತಿಕ ಕ್ಷೇತ್ರದ ಆಯ್ದ ಗಣ್ಯ ಸದಸ್ಯರನ್ನು ಒಳಗೊಂಡಂತೆ, ಮುಖ್ಯಮಂತ್ರಿಗಳ ಸಾಂಸ್ಕೃತಿಕ ಸಲಹೆಗಾರರನ್ನು ಸರ್ಕಾರ ನೇಮಿಸಬೇಕು. ಹಿಂದಿನ ಸರ್ಕಾರ ಕನ್ನಡಿಗರ ಮೇಲೆ ಹೇರಿರುವ ಎನ್‌ಇಪಿ ವ್ಯವಸ್ಥೆಯನ್ನು ಕೂಡಲೇ ತಡೆಹಿಡಿದು, ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ಕೊಡಬೇಕು. ಶಾಲೆಗಳಲ್ಲಿ ಬಿಸಿಯೂಟದ ಮಾದರಿಯಲ್ಲಿ ಬೆಳಗಿನ ಉಪಾಹಾರ ಒದಗಿಸಬೇಕು ಎಂದು ತಿಳಿಸಲಾಗಿದೆ. ಪ್ರಮುಖ ಬದಲಾವಣೆಗೆ ಒತ್ತಾಯಿಸಿ ಸಮಾನ ಮನಸ್ಕರ ಒಕ್ಕೂಟ ಹೆಸರಲ್ಲಿ‌ ಸಿಎಂಗೆ ಮನವಿ ಪತ್ರ ಸಲ್ಲಿಸಲಾಗಿದೆ.

  • ಪಠ್ಯಪುಸ್ತಕ ಪರಿಷ್ಕರಣೆ ವಿವಾದ – ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ

    ಪಠ್ಯಪುಸ್ತಕ ಪರಿಷ್ಕರಣೆ ವಿವಾದ – ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ

    ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯನ್ನು ಕೈಬಿಡುವಂತೆ ಒತ್ತಾಯಿಸಿ ಸಾಹಿತಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

    ಈ ಸಂಬಂಧ ದೇವನೂರು ಮಹಾದೇವ, ಹಂಪ ನಾಗರಾಜಯ್ಯ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ನನ್ನ ಪಠ್ಯ ಬಳಸಬೇಡಿ ಎಂದು ಸಾಹಿತಿ ದೇವನೂರು ಮಹಾದೇವ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಳೆ ಪಠ್ಯವನ್ನೇ ಮುಂದುವರಿಸುವಂತೆ ಹಂಪ ನಾಗರಾಜಯ್ಯರಿಂದಲೂ ಸಿಎಂಗೆ ಪತ್ರ ಸಲ್ಲಿಕೆಯಾಗಿದೆ.

    ಹೆಡಗೆವಾರ್ ಪಠ್ಯ ಸೇರ್ಪಡೆ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಕೆಲ ಸಾಹಿತಿಗಳು ಸಮರ ಸಾರಿದ್ದಾರೆ. ಇದು ಆರ್‌ಎಸ್‌ಎಸ್‌ ಪಠ್ಯಪುಸ್ತಕ ಎಂದು ಸಾಹಿತಿಗಳು ಗಂಭೀರ ಆರೋಪ ಮಾಡಿದ್ದಾರೆ. ಹೆಡಗೆವಾರ್ ಪಠ್ಯ ಕೈ ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

    ಪಠ್ಯದಲ್ಲಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ರೋಹಿತ್ ಚಕ್ರತೀರ್ಥ ಸಮಿತಿ ಕುವೆಂಪು ಅವರಿಗೆ ಅಪಮಾನ ಮಾಡಿದೆ ಎಂದು ಸಾಹಿತಿಗಳು ಸಹ ದೂರಿದ್ದರು.