Tag: Writer

  • ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಸರಸ್ವತಿ ಕಾರ್ನಾಡ್

    ಯಾವುದೇ ವಿಧಿವಿಧಾನ ಇರಲ್ಲ, ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು, ಗಣ್ಯರು ಬರಬೇಡಿ – ಸರಸ್ವತಿ ಕಾರ್ನಾಡ್

    ಬೆಂಗಳೂರು: ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ಮಧ್ಯಾಹ್ನದ ಮೇಲೆ ಬೈಯಪ್ಪನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಸಚಿವರು, ಗಣ್ಯರು ಯಾರು ಬರುವುದು ಬೇಡ. ಸಾರ್ವಜನಿಕ ದರ್ಶನ ಇರುವುದಿಲ್ಲ. ಯಾವುದೇ ವಿಧಿ ವಿಧಾನ ಇರುವುದಿಲ್ಲ ಎಂದು ನಿರ್ದೇಶಕ ಕೆ.ಎಂ ಚೈತನ್ಯ ತಿಳಿಸಿದ್ದಾರೆ.

    ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

    https://www.youtube.com/watch?v=rjR2qIhqevM

  • ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಚಿತ್ರದುರ್ಗ: ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಚಿತ್ರದುರ್ಗದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ ಬಾಯಿಬಡುಕರು ಈಗ ಸಂಸದರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವೇಷದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ನನಗೆ ಕಮಲದ ಮೇಲೆ ಗೌರವ ಇತ್ತು. ಕಮಲದಲ್ಲಿ ಎರಡು ಪದ ಇದೆ. ಒಂದು ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಹೇಳಿ ವ್ಯಂಗ್ಯವಾಡಿದರು.

    ಈಗ ಮಲಬದ್ಧತೆ ಆದರೆ ದೇಹದ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಕಮಲ ಒಂದು ದೇಶಕ್ಕೆ ಅಪಾಯವಾಗಲಿದೆ. ಅಲ್ಲದೆ ಮಲಬದ್ಧತೆಯಿಂದ ದೇಹದ ಆರೋಗ್ಯ ನಾಶವಾಗುತ್ತೋ, ದೇಹದ ಸಮತೋಲನ ಏರುಪೇರಾಗುತ್ತಾದೋ ಹಾಗೆಯೇ ಕಮಲದಿಂದ ಒಂದು ದೇಶದ ಆಡಳಿತ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ಪ್ರಾದೇಶಿಕ ಭಾಷೆಗಳು ಬಹಳ ಅಭದ್ರ ಸ್ಥಿತಿಯಲ್ಲಿ ಇದೆ. ಇಲ್ಲಿ ಕನ್ನಡ ಇದೆ, ಕರ್ನಾಟಕದಲ್ಲಿ ಅಸ್ಮಿತೆಯನ್ನು ನಾವು ಕಾಪಾಡಬೇಕು. ಆದರೆ ಈ ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಧಕ್ಕೆ ತರುವಂತಹ ಒಂದು ವಾತಾವರಣವನ್ನು ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ದೂರಿದರು.

  • ಮೋದಿ ಹತ್ಯೆಗೆ ಸಂಚು: ವರವರ ರಾವ್ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ

    ಮೋದಿ ಹತ್ಯೆಗೆ ಸಂಚು: ವರವರ ರಾವ್ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಸಂ ಸಂಸ್ಥಾಪಕ ಮತ್ತು ಕ್ರಾಂತಿಕಾರಿ ಬರಹಗಾರ ವರವರ ರಾವ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದು, ಈಗ ದೆಹಲಿ ಹೈಕೋರ್ಟ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

    ಇಂದು ಹೈದರಾಬಾದ್‍ಗೆ ಬಂದಿದ್ದ ಪುಣೆ ಪೊಲೀಸ್ ತಂಡವು, ಸ್ಥಳೀಯ ಪೊಲೀಸರ ಸಹಾಯ ಪಡೆದು, ನಗರದ ವಿವಿಧೆಡೆ ವರವರ ರಾವ್ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಚಿಕ್ಕಡ್‍ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ನಗರದಲ್ಲಿರುವ ವರವರ ರಾವ್ ಮನೆಗೆ 20ಕ್ಕೂ ಹೆಚ್ಚು ಪುಣೆ ಮಫ್ತಿ ವೇಷದ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಕೆಲ ಹೊತ್ತು ರಾವ್ ಅವವನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಿದ್ದರು.

    ವರವರ ರಾವ್ ಹಾಗೂ ಕುಟುಂಬಸ್ಥರ ಮನೆ ಮೇಲೆ ಅಷ್ಟೇ ಅಲ್ಲದೆ ಪತ್ರಕರ್ತರಾದ ಕೆ.ವಿ.ಕುಮಾರನಾಥ್, ಕ್ರಾಂತಿ ತೆಕುಲ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಸತ್ಯನಾರಾಯಣ ಅವರ ಮನೆ ಮೇಲೂ ಪೊಲೀಸರು ದಾಳಿ ಮಾಡಿ, ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಏನಿದು ಪ್ರಕರಣ?
    ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿದ್ದರು. ಇತ್ತೀಚೆಗೆ ಮಾನವಹಕ್ಕು ಕಾರ್ಯಕರ್ತ ರೋನಾ ಜಾಕೋಬ್ ವಿಲ್ಸನ್ ಅವರ ದೆಹಲಿಯ ಮನೆಯಲ್ಲಿ ಕೆಲವು ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಆ ಪತ್ರಗಳಲ್ಲಿ ವರವರ ರಾವ್ ಹೆಸರು ಉಲ್ಲೇಖವಾಗಿದೆ. ಅವರನ್ನು ಬಂಧಿಸಲು ಅನುಮತಿ ನೀಡುವಂತೆ ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದರು. ಇನ್ನು ರಾವ್ ನಕ್ಸಲ್ ಸಂಘಟನೆಗಳಿಗೆ ಹಾಗೂ ಅವರು ನಡೆಸುತ್ತಿರುವ ದಾಳಿಗೆ ಆರ್ಥಿಕ ನೆರವು ನೀಡುತ್ತಿದ್ದರು ಎನ್ನುವ ಆರೋಪವೂ ಕೇಳಿ ಬಂದಿದೆ.

    ವರವರ ರಾವ್ ಬಂಧನಕ್ಕೆ ಖಂಡಿಸಿ ಎಡಪಕ್ಷಗಳ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿರಿಯ ವಿಮರ್ಶಕ, ಸಾಹಿತಿ ಗಿರಡ್ಡಿ ಗೋವಿಂದರಾಜ್ ವಿಧಿವಶ

    ಹಿರಿಯ ವಿಮರ್ಶಕ, ಸಾಹಿತಿ ಗಿರಡ್ಡಿ ಗೋವಿಂದರಾಜ್ ವಿಧಿವಶ

    ಧಾರವಾಡ: ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಹಿರಿಯ ವಿಮರ್ಶಕ, ಸಾಹಿತಿ ಗಿರಡ್ಡಿ ಗೋವಿಂದರಾಜ್(79) ಧಾರವಾಡದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಹಿರಿಯ ಕವಿ ನಾಡೋಜ ಚನ್ನವೀರ ಕಣವಿ, ಸಚಿವ ವಿನಯ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಗಿರಡ್ಡಿ ಗೋವಿಂದರಾಜ್‍ರ ಅಂತಿಮ ದರ್ಶನ ಪಡೆದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗಿರಡ್ಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆಗೆ ಗಿರಡ್ಡಿ ಅವರ ಹುಟ್ಟುರಾದ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಗೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.