Tag: writer manager

  • ಲಾರಿ ಸ್ಟಾಂಡ್ ಬಳಿ ರೈಟರ್ ಮ್ಯಾನೇಜರ್‌ನ ಬರ್ಬರ ಕೊಲೆ

    ಲಾರಿ ಸ್ಟಾಂಡ್ ಬಳಿ ರೈಟರ್ ಮ್ಯಾನೇಜರ್‌ನ ಬರ್ಬರ ಕೊಲೆ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಆರ್‌ಎಂಸಿ ಯಾರ್ಡ್‌ನಲ್ಲಿ ನಡೆದಿದೆ.

    29 ವರ್ಷದ ಪ್ರಶಾಂತ್ ಕೊಲೆಯಾದ ಯುವಕ. ಆರ್‌ಎಂಸಿ ಯಾರ್ಡ್‌ನ ಲಾರಿ ಸ್ಟಾಂಡ್ ಬಳಿ ಮಂಗಳವಾರ ರಾತ್ರಿ ಕೊಲೆ ಮಾಡಲಾಗಿದೆ. ಮೃತ ಪ್ರಶಾಂತ್ ಖಾಸಗಿ ಕಂಪನಿಯಲ್ಲಿ ರೈಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

    ಮೃತ ಪ್ರಶಾಂತ್ ಲಾರಿ ಚಾಲಕನೊಂದಿಗೆ ವೈಷಮ್ಯ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಅದೇ ದ್ವೇಷದ ಹಿನ್ನೆಲೆಯಲ್ಲಿ ಲಾರಿ ಚಾಲಕ ಕೊಂದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಆರ್‌ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.