Tag: Writemen Premier league 2022

  • ರೈಟ್‍ಮೆನ್ ಪ್ರೀಮಿಯರ್ ಲೀಗ್ 2022 – ಪಬ್ಲಿಕ್ ಕ್ಯಾಪ್ಟನ್ ತಂಡ ಚಾಂಪಿಯನ್

    ರೈಟ್‍ಮೆನ್ ಪ್ರೀಮಿಯರ್ ಲೀಗ್ 2022 – ಪಬ್ಲಿಕ್ ಕ್ಯಾಪ್ಟನ್ ತಂಡ ಚಾಂಪಿಯನ್

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿದ್ದ ರೈಟ್‍ಮೆನ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯ ಇಂಟರ್‌ನಲ್‌ ಪಂದ್ಯಾವಳಿಯಲ್ಲಿ ಪಬ್ಲಿಕ್ ಕ್ಯಾಪ್ಟನ್ ತಂಡ ಚಾಂಪಿಯನ್ ಆಗಿದೆ.

    ಪಬ್ಲಿಕ್ ಟಿವಿ ಸಿಬ್ಬಂದಿಗಾಗಿ ಈ ವರ್ಷದಿಂದ ಹೊಸ ಇಂಟರ್‌ನಲ್‌ ಕ್ರಿಕೆಟ್ ಪ್ರೀಮಿಯರ್ ಲೀಗ್‌ ಆಯೋಜಿಸಿದೆ. ನಿನ್ನೆ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮೊದಲ ಆವೃತ್ತಿಯಲ್ಲಿ ಕ್ರೈಂ ಬ್ಯುರೋದ ನರಸಿಂಹಮೂರ್ತಿ ನೇತೃತ್ವದ ಪಬ್ಲಿಕ್ ಕ್ಯಾಪ್ಟನ್ ತಂಡ ಮೊದಲ ಸೀಸನ್ ಚಾಂಪಿಯನ್ ಆಗಿದೆ. ಇದನ್ನೂ ಓದಿ: ಕೌಂಟಿ ಕ್ರಿಕೆಟ್‍ನಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಪಂದ್ಯಾಟದಲ್ಲಿ 4 ತಂಡಗಳ ಲೀಗ್ ಮಾದರಿಯ ಪಂದ್ಯಗಳು ನಡೆಯಿತು. ಪಬ್ಲಿಕ್ ಟಿವಿ ಸಿಇಓ ಅರುಣ್ ಹಾಗೂ ಸಿಓಓ ಹರೀಶ್ ಕುಮಾರ್ ಅಭಿನಂದನೆ ಸಲ್ಲಿಸಿ ಚಾಂಪಿಯನ್‌ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ಟೂರ್ನಿಯ ಬೆಸ್ಟ್ ಬೌಲರ್ ಆಗಿ ಪಬ್ಲಿಕ್ ಟಿವಿ ಎಲೆಕ್ಟ್ರಿಕ್ ವಿಭಾಗದ ಪ್ರಕಾಶ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ ಹಾಗೂ ಸರಣಿ ಶ್ರೇಷ್ಠ ಕೀರ್ತಿಗೆ ಪಬ್ಲಿಕ್ ಟಿವಿ ಕ್ರೈಂ ವರದಿಗಾರ ನರಸಿಂಹಮೂರ್ತಿ ಭಾಜನರಾದರು.

    Live Tv
    [brid partner=56869869 player=32851 video=960834 autoplay=true]