Tag: wriddhiman saha

  • IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    ಅಹಮದಾಬಾದ್‌: 16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಐಪಿಎಲ್‌ (IPL) ಆವೃತ್ತಿಯಲ್ಲಿ ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಆಟಗಾರರ ಅತ್ಯದ್ಭುತ ಪ್ರದರ್ಶನದಿಂದ ಅತಿಹೆಚ್ಚು ಬಾರಿ 200ಕ್ಕೂ ಹೆಚ್ಚು ರನ್‌ ದಾಖಲಾಗಿದೆ. ಅದಕ್ಕಾಗಿ ಲಕ್ಷ ಲಕ್ಷ ಹಣವನ್ನ ಬಾಚಿಕೊಂಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

    ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡ 257 ರನ್‌ ಗಳಿಸಿದ್ದು ಈ ಬಾರಿ ಅತಿಹೆಚ್ಚಿನ ರನ್‌ ಹಾಗೂ ಐಪಿಎಲ್‌ ಇತಿಹಾಸದಲ್ಲೇ 2ನೇ ದೊಡ್ಡಮೊತ್ತ ಎನಿಸಿಕೊಂಡರೆ ಈ ಸೀಸನ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ (RR) 59 ರನ್‌ಗಳಿಗೆ ಆಲೌಟ್‌ ಆಗಿದ್ದು, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಂದ್ಯವಾಗಿತ್ತು.

    2023ರ ಐಪಿಎಲ್‌ ಪ್ರಶಸ್ತಿ ವಿಜೇತರ ಪಟ್ಟಿ:

    ಚಾಂಪಿಯನ್ಸ್‌: ಸಿಎಸ್‌ಕೆ-20 ಕೋಟಿ ರೂ.
    ರನ್ನರ್‌ ಅಪ್: ಗುಜರಾತ್ ಟೈಟಾನ್ಸ್-12.5 ಕೋಟಿ ರೂ.

    ಆರೆಂಜ್ ಕ್ಯಾಪ್: ಶುಭಮನ್ ಗಿಲ್- 890 ರನ್ -10 ಲಕ್ಷ ರೂ.
    ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.

    ಸೀಸನ್‌ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್- ಆರ್‌ಆರ್-10 ಲಕ್ಷ ರೂ.
    ಸೂಪರ್ ಸ್ಟ್ರೆಕರ್- ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ-183.48 ಸ್ಟ್ರೈಕ್‌ರೇಟ್‌ -10 ಲಕ್ಷ ರೂ.

    ಮೋಸ್ಟ್‌ ವ್ಯಾಲ್ಯುಯೆಬಲ್ ಪ್ಲೇಯರ್‌: ಶುಭಮನ್ ಗಿಲ್ – 10 ಲಕ್ಷ ರೂ.
    ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.

    ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್- 85- 10 ಲಕ್ಷ ರೂ.
    ಅತಿ ಉದ್ದದ ಸಿಕ್ಸರ್- ಫಾಫ್ ಡು ಪ್ಲೆಸಿಸ್: ಆರ್‌ಸಿಬಿ- 115 ಮೀಟರ್-10 ಲಕ್ಷ ರೂ.
    ಸೀಸನ್‌ನ ಅದ್ಭುತ ಕ್ಯಾಚ್: ರಶೀದ್ ಖಾನ್- ಗುಜರಾತ್ ಟೈಟಾನ್ಸ್- 10 ಲಕ್ಷ ರೂ.
    ಮನರಂಜಿಸಿದ ತಂಡ- ಡೆಲ್ಲಿ ಕ್ಯಾಪಿಟಲ್ಸ್

    ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ:

    ಸೂಪರ್‌ ಸ್ಟ್ರೆಕರ್: ಅಜಿಂಕ್ಯ ರಹಾನೆ- 1 ಲಕ್ಷ ರೂ.
    ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ವ್ಯಾಲ್ಯುಯೆಬಲ್ ಪ್ಲೇಯರ್‌: ಸಾಯಿ ಸುದರ್ಶನ್- 1 ಲಕ್ಷ ರೂ.

    ಅತಿ ಉದ್ದದ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ಅದ್ಭುತ ಕ್ಯಾಚ್: ಎಂ.ಎಸ್ ಧೋನಿ- 1 ಲಕ್ಷ ರೂ.
    ಪಂದ್ಯ ಶ್ರೇಷ್ಠ: ಡೆವೋನ್ ಕಾನ್ವೇ – 1 ಲಕ್ಷ ರೂ

  • Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    ಮುಂಬೈ: ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಟಾಟಾ ಐಪಿಎಲ್ 2023ರ ಫೈನಲ್‌ ಪಂದ್ಯ ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನ ಪುಡಿಪುಡಿ ಮಾಡಿದೆ.

    ಸೋಮವಾರ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯವು ರೋಚಕತೆಯಿಂದ ಕೂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಗುಜರಾತ್‌ ಟೈಟಾನ್ಸ್‌ ಭರ್ಜರಿ ಪ್ರದರ್ಶನ ನೀಡಿತು. ಸಾಯಿ ಸುದರ್ಶನ್‌ 18.3ನೇ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಪಂದ್ಯದ ವೀಕ್ಷಕರ ಸಂಖ್ಯೆ 3 ಕೋಟಿಗೆ ತಲುಪಿತ್ತು. 19.1ನೇ ಓವರ್‌ನಲ್ಲಿದ್ದಾಗ 3.1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಕೊನೆಯ 3 ಎಸೆತಗಳು ಬಾಕಿಯಿರುವಂತೆ 3.2 ಕೋಟಿಗೆ ತಲುಪಿತ್ತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್‌ ಮಾಡಿದೆ.

    ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆಯನ್ನ ಮುರಿದಿದೆ. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿದೆ. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು. ಇದನ್ನೂ ಓದಿ: IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾ, ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿತ್ತು. ಉದಾಹರಣೆಗೆ ಎಲ್ಲಾ ನೆಟ್ವರ್ಕ್ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್ ನೀಡಲಾಗಿತ್ತು. 4K ಸ್ಟ್ರೀಮಿಂಗ್ ಜೊತೆಗೆ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತೀ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜೊತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿತ್ತು.

    ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್‌ಪೇ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಅಜಿಯೋ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ.

  • IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

    ಅಹಮದಾಬಾದ್‌: ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ (Ravindra Jadeja) ಸಿಡಿಸಿದ ಭರ್ಜರಿ ಸಿಕ್ಸರ್‌, ಬೌಂಡರಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ರೋಚಕ ಜಯ ಸಾಧಿಸಿ 2023ರ ಟಾಟಾ ಐಪಿಎಲ್‌ (TaTa IPL) ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ.

    ಐಪಿಎಲ್‌ ಆವೃತ್ತಿಯಲ್ಲಿ 4 ಬಾರಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಎಂ.ಎಸ್‌. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠ ಗುಜರಾತ್‌ ಟೈಟಾನ್ಸ್‌ಗೆ (GT) ಮಣ್ಣುಮುಕ್ಕಿಸಿ 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ 5 ಬಾರಿ ಐಪಿಎಲ್‌ ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನ ಸರಿಗಟ್ಟಿದೆ. ಗುಜರಾತ್‌ ಟೈಟಾನ್ಸ್‌ ತಾನು ಆಡಿದ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶೇಷವೆಂದರೆ ಚೆನ್ನೈ ತಂಡದಲ್ಲಿ ಸ್ಟಾರ್‌ ಆಟಗಾರನಾಗಿ ಮಿಂಚಿದ್ದ ಅಂಬಾಟಿ ರಾಯುಡು (Ambati Rayudu) ಗೆಲುವಿನೊಂದಿಗೆ ಐಪಿಎಲ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 250 ಪಂದ್ಯವನ್ನಾಡಿದ ಸಾಧನೆ ಮಾಡಿದ ಎಂ.ಎಸ್‌ ಧೋನಿ ಸಹ ಇದೇ ಗೆಲುವಿನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳಿವೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 214 ರನ್‌ ಗಳಿಸಿತ್ತು. ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಮೂರು ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಒಕ್ಕರಿಸಿತು. ಇದರಿಂದ ಸಿಎಸ್‌ಕೆ ಇನ್ನಿಂಗ್ಸ್‌ ಆರಂಭಗೊಳ್ಳುವುದು 1:30 ಗಂಟೆಗೂ ಅಧಿಕ ಕಾಲ ತಡವಾಯಿತು. 10:30ರ ವೇಳೆಗೆಲ್ಲಾ ಮಳೆ ಬಿಡುವುಕೊಟ್ಟರೂ ಮೈದಾನ ಹದಗೊಳಿಸುವುದಕ್ಕೆ 1 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳಲಾಯಿತು. ಹಾಗಾಗಿ ತಡವಾಗಿದ್ದರಿಂದ ಡಕ್ವರ್ತ್‌ ಲೂಯಿಸ್ ನಿಯಮ ಅನ್ವಯಿಸಿ, ಓವರ್‌ಗಳನ್ನ ಕಡಿತಗೊಳಿಸಲಾಯಿತು. ಡಕ್ವರ್ತ್‌ ಲೂಯಿಸ್‌ (DSL) ನಿಯಮದ ಪ್ರಕಾರ 15 ಓವರ್‌ಗಳಲ್ಲಿ 171 ರನ್‌ ಟಾರ್ಗೆಟ್‌ ಪಡೆದು ಇನ್ನಿಂಗ್ಸ್‌ ಆರಂಭಿಸಿದ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಚಚ್ಚುವ ಮೂಲಕ ಗೆಲುವು ಸಾಧಿಸಿತು.

    ಕೊನೆಯ 20 ಎಸೆತಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ವೇಳೆ ರಶೀದ್‌ ಖಾನ್‌ ಬೌಲಿಂಗ್‌ನ ಕೊನೆಯ ಎರಡು ಎಸೆತಗಳನ್ನು ಶಿವಂ ದುಬೆ (Shivam Dube) ಭರ್ಜರಿ ಸಿಕ್ಸರ್‌ ಬಾರಿಸಿದರು. ಇನ್ನೂ ಕೊನೆಯ 18 ಎಸೆತಗಳಲ್ಲಿ 38 ರನ್‌ಗಳು ಬೇಕಾಗಿದ್ದಾಗ ಕೊನೆಯ ಐಪಿಎಲ್‌ ಪಂದ್ಯವಾಡಿದ ಅಂಬಾಟಿ ರಾಯುಡು, ಮೋಹಿತ್‌ ಶರ್ಮಾ ಬೌಲಿಂಗ್‌ನ ಮೊದಲ ಮೂರು ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿ ಬಾರಿಸಿದರು. ಇದರಿಂದ ಕಠಿಣ ಪರಿಸ್ಥಿತಿಯಲ್ಲಿದ್ದ ಚೆನ್ನೈಗೆ ಸಂಜೀವಿನಿ ಸಿಕ್ಕಂತಾಯಿತು. ಕೊನೆಯ 6 ಎಸೆತಗಳಲ್ಲಿ 13 ರನ್‌ ಅಗತ್ಯವಿದ್ದಾಗ ಮತ್ತೆ ಮೋಹಿತ್‌ ಶರ್ಮಾ ಬೌಲಿಂಗ್‌ನಲ್ಲಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್‌ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಸಿಕ್ಸ್‌ ಬಾರಿಸಿದ ಜಡೇಜಾ 6ನೇ ಎಸೆತದಲ್ಲಿ ಬೌಂಡರಿ ಚಚ್ಚುವ ಮೂಲ ಗೆಲುವು ತಂದುಕೊಟ್ಟರು.

    ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ ಹಾಗೂ ಡಿವೋನ್‌ ಕಾನ್ವೆ ಆರಂಭದಿಂದಲೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. ಮೊದಲ ವಿಕೆಟ್‌ಕೆ ಈ ಜೋಡಿ 6.3 ಓವರ್‌ಗಳಲ್ಲಿ ಭರ್ಜರಿ 74 ರನ್‌ ಸಿಡಿಸಿತ್ತು. ಈ ವೇಳೆ ಋತುರಾಜ್‌ ಗಾಯಕ್ವಾಡ್‌ ದೊಡ್ಡ ಹೊಡೆತ ಹೊಡೆಯಲು ಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಋತುರಾಜ್‌ 16 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 26 ರನ್‌ ಗಳಿಸಿ ಪೆವಿಲಿಯನ್‌ ಸೇರುತ್ತಿದ್ದಂತೆ ಡಿವೋನ್‌ ಕಾನ್ವೆ ಸಹ 47 ರನ್‌ (25 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸಿ ಔಟಾದರು. ನಂತರದಲ್ಲಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ ಸ್ಫೋಟಕ 27 ರನ್‌ (2 ಸಿಕ್ಸರ್‌, 2 ಬೌಂಡರಿ) ಚಚ್ಚಿ ಔಟಾದರು. ಅಂಬಾಟಿ ರಾಯುಡು 19 ರನ್‌ (8 ಎಸೆತ, 2 ಸಿಕ್ಸರ್‌, 1 ಬೌಂಡರಿ) ಚಚ್ಚಿದರು.‌ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಅಜೇಯ 32 ರನ್‌ (21 ಎಸೆತ, 2 ಸಿಕ್ಸ್‌), ರವೀಂದ್ರ ಜಡೇಜಾ 15 ರನ್‌ (6‌ ಎಸೆತ, 1 ಸಿಕ್ಸ್‌, 1 ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ವೃದ್ಧಿಮಾನ್‌ ಸಾಹಾ ಜೋಡಿ ಉತ್ತಮ ಆರಂಭ ನೀಡಿತ್ತು. ಮೊದಲ ವಿಕೆಟ್‌ ಜೊತೆಯಾಟಕ್ಕೆ 42 ಎಸೆತಗಳಲ್ಲಿ 67 ರನ್‌ ಗಳಿಸಿತ್ತು. 2ನೇ ಓವರ್‌ನಲ್ಲೇ ಕ್ಯಾಚ್‌ ನಿಂದ ತಪ್ಪಿಸಿಕೊಂಡಿದ್ದ ಗಿಲ್‌ ಧೋನಿ ಮ್ಯಾಜಿಕ್‌ ಸ್ಟಂಪ್‌ಗೆ ವಿಕೆಟ್‌ ಒಪ್ಪಿಸಲೇಬೇಕಾಯಿತು. ನಂತರ ಕಣಕ್ಕಿಳಿದ ಆಟಗಾರರು ಚೆನ್ನೈ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು.

    ಬಳಿಕ ಸಾಹಿ ಸುದರ್ಶನ್‌ ಹಾಗೂ ವೃದ್ಧಿಮಾನ್‌ ಸಾಹಾ ಜೋಡಿ 42 ಎಸೆತಗಳಲ್ಲಿ 64 ರನ್‌ ಜೊತೆಯಾಟ ನೀಡಿದರೆ, ಸುದರ್ಶನ್‌ ಹಾಗೂ ಹಾರ್ದಿಕ್‌ ಪಾಂಡ್ಯ ಜೋಡಿ 33 ಎಸೆತಗಳಲ್ಲೇ ಸ್ಫೋಟಕ 81 ರನ್‌ ಚಚ್ಚಿತ್ತು. ಇದರ ಪರಿಣಾಮ ಮೊದಲ 10 ಓವರ್‌ನಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಕೇವಲ 86 ರನ್‌ ಕಲೆಹಾಕಿದ್ದ ಟೈಟಾನ್ಸ್‌ ಮುಂದಿನ 10 ಓವರ್‌ಗಳಲ್ಲಿ 128 ರನ್‌ ಗಳಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಸಾಯಿ ಸುದರ್ಶನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಕೊನೆಯ ೫ ಓವರ್‌ಗಳಲ್ಲಿ 71 ರನ್‌ ಸೇರ್ಪಡೆಯಾಯಿತು.

    ಗುಜರಾತ್‌ ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ 54 ರನ್‌ (39 ಎಸೆತ, 5 ಬೌಂಡರಿ, 1 ಸಿಕ್ಸರ್‌), ಶುಭಮನ್‌ ಗಿಲ್‌ 39 ರನ್‌ (20 ಎಸೆತ, 7 ಬೌಂಡರಿ), ಹಾರ್ದಿಕ್‌ ಪಾಂಡ್ಯ 21 ರನ್‌ ಗಳಿಸಿದರು. ಇನ್ನೂ 204.25 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸಾಯಿ ಸುದರ್ಶನ್‌ 47 ಎಸೆತಗಳಲ್ಲಿ 96 ರನ್‌ (6 ಸಿಕ್ಸರ್‌, 8 ಬೌಂಡರಿ) ಸಿಡಿಸಿ ಶತಕ ವಂಚಿತರಾದರು.

    ಸಿಎಸ್‌ಕೆ ಪರ ಮಹೇಶ್‌ ಪತಿರಣ 2 ವಿಕೆಟ್‌ ಪಡೆದರೆ, ರವೀಂದ್ರ ಜಡೇಜಾ ಹಾಗೂ ದೀಪಕ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ದಿಲ್‌ ಗೆದ್ದ ಗಿಲ್‌ – ಗುಜರಾತ್‌ ಟೈಟಾನ್ಸ್‌ಗೆ 56 ರನ್‌ಗಳ ಭರ್ಜರಿ ಜಯ

    ಅಹಮದಾಬಾದ್‌: ಶುಭಮನ್‌ ಗಿಲ್‌ (Shubman Gill), ವೃದ್ಧಿಮಾನ್‌ ಸಾಹಾ (Wriddhiman Saha) ಶತಕದ ಜೊತೆಯಾಟ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ (Gujarat Titans) 227 ರನ್‌ ಪೇರಿಸಿತು. 228 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

    ಗೆಲುವಿಗೆ 228 ರನ್‌ಗಳ ಗುರಿ ಪಡೆದ ಲಕ್ನೋ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಕೈಲ್‌ ಮೇಯರ್ಸ್‌ ಹಾಗೂ ಕ್ವಿಂಟನ್‌ ಡಿಕಾಕ್‌ 8.2 ಓವರ್‌ಗಳಲ್ಲಿ 88 ರನ್‌ಗಳ ಜೊತೆಯಾಟವಾಡಿದ್ದರು. ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಅಂತಿಮವಾಗಿ ಲಕ್ನೋ 171 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಲಕ್ನೋ ಪರ ಕ್ವಿಂಟನ್‌ ಡಿಕಾಕ್‌ 70 ರನ್‌ (41 ಎಸೆತ, 7 ಬೌಂಡರಿ, 3 ಸಿಕ್ಸರ್‌), ಕೈಲ್‌ ಮೇಯರ್ಸ್‌ 48 ರನ್‌ (32 ಎಸೆತ, 7 ಬೌಂಡರಿ, 2 ಸಿಕ್ಸರ್‌), ದೀಪಕ್‌ ಹೂಡಾ 11 ರನ್‌, ಆಯುಷ್‌ ಬದೋನಿ 21 ರನ್‌ ಗಳಿಸಿದರು. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿ ಗುಜರಾತ್‌ ಟೈಟಾನ್ಸ್‌ ತಂಡ ಸ್ಫೋಟಕ ಪ್ರದರ್ಶನ ನೀಡಿತು. ಆರಂಭಿಕ ಆಟಗಾರರಾದ ಶುಭಮನ್‌ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ, ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 12.1 ಓವರ್‌ಗಳಲ್ಲಿ ಬರೋಬ್ಬರಿ 142 ರನ್‌ಗಳಿಸಿತು. ಸಾಹಾ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 81 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಶುಭಮನ್‌ ಗಿಲ್‌ ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೆ ತಂಡದ ಮೊತ್ತವನ್ನು ಹೆಚ್ಚಿಸಿದರು.

    ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 25 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ನಂತರ ಡೇವಿಡ್ ಮಿಲ್ಲರ್ ಕೂಡ ಸ್ಫೋಟಕ ಪ್ರದರ್ಶನ ನೀಡಿದರು. ಮಿಲ್ಲರ್ 12 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಿ ಅಜೇಯರಾಗುಳಿದರು. ಇನ್ನೂ ಆರಂಭದಿಂದ ಕೊನೆಯವರೆಗೂ ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳನ್ನು ಚೆಂಡಾಡಿದ ಗಿಲ್ ಅಜೇಯ 94 ರನ್‌ (2 ಬೌಂಡರಿ, 7 ಸಿಕ್ಸರ್‌) ಗಳಿಸಿದರು.

    ಗುಜರಾತ್‌ ಟೈಟಾನ್ಸ್‌ ಪರ ಮೋಹಿತ್‌ ಶರ್ಮಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಶಮಿ, ರಶೀದ್‌ ಖಾನ್‌, ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಗುಜರಾತ್‌ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್‌ ಯಾರದ್ದು?

    ಗುಜರಾತ್‌ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್‌ ಯಾರದ್ದು?

    ಜೈಪುರ: ಹಾರ್ದಿಕ್‌ ಪಾಂಡ್ಯ (Hardik Pandya) ಆಲ್‌ರೌಂಡರ್‌ ಆಟ ಹಾಗೂ ರಶೀದ್‌ ಖಾನ್‌ ಸ್ಪಿನ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Rajasthan Royals) ತಂಡವು ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಗುಜರಾತ್‌ ಟೈಟಾನ್ಸ್‌ 10 ಪಂದ್ಯಗಳಲ್ಲಿ 7ರಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಬಹುತೇಕ ಪ್ಲೇ ಆಫ್‌ ಪ್ರವೇಶಿಸಿದೆ.

    10 ರಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿರುವ ಗುಜರಾತ್‌ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಲಾ 11 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇದನ್ನೂ ಓದಿ: ಯುದ್ಧ ಮುಂದುವರಿಸಲಿ – ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದಾದಾ

    ಶುಕ್ರವಾರ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡವು 17.5 ಓವರ್‌ಗಳಲ್ಲೇ 118 ರನ್‌ಗಳಿಗೆ ಸರ್ವಪತನ ಕಂಡಿತು. 119 ರನ್‌ಗಳ ಗುರಿ ಬೆನ್ನತ್ತಿದ್ದ ಪಾಂಡ್ಯ ಪಡೆ 13.5 ಓವರ್‌ಗಳಲ್ಲೇ ಒಂದೇ ವಿಕೆಟ್‌ ನಷ್ಟಕ್ಕೆ 119 ರನ್‌ ಸಿಡಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ ನಿರಾಯಾಸವಾಗಿ ಗೆದ್ದು ಬೀಗಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್‌ ಸಾಹಾ ಶುಭಮನ್‌ ಗಿಲ್‌ (Shubman Gill) ಉತ್ತಮ ಶುಭಾರಂಭ ನೀಡಿದರು. ಆರಂಭಿಕ ಜೋಡಿ 9.4 ಓವರ್‌ಗಳಲ್ಲಿ 71 ರನ್‌ ಗಳಿಸಿತ್ತು. ಶುಭಮನ್‌ ಗಿಲ್‌ ಔಟಾಗುತ್ತಿದ್ದಂತೆ ಕಣಕ್ಕಿಳಿದ ಹಾರ್ದಿಕ್‌ ಪಾಂಡ್ಯ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

    ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ (Wriddhiman Saha) 40 ರನ್‌ (34 ಎಸೆತ, 5 ಬೌಂಡರಿ), ಶುಭಮನ್‌ ಗಿಲ್‌ 36 ರನ್‌ (35 ಎಸೆತ, 6 ಬೌಂಡರಿ) ಗಳಿದರೆ, ಸ್ಫೋಟಕ ಬ್ಯಾಟಿಂಗ್‌ ಮಾಡಿದ ನಾಯಕ ಹಾರ್ದಿಕ್‌ ಪಾಂಡ್ಯ ಕೇವಲ 15 ಎಸೆತಗಳಲ್ಲಿ 39 ರನ್‌ (3 ಸಿಕ್ಸರ್‌, 3 ಬೌಂಡರಿ) ಸಿಡಿಸಿ ಗೆಲುವು ತಂದುಕೊಟ್ಟರು. ರಾಜಸ್ಥಾನ್‌ ಪರ ಯಜುವೇಂದ್ರ ಚಾಹಲ್‌ ಒಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ತಂಡ 118 ರನ್ ಗಳಿಸಿ ಆಲ್ಔಟ್ ಆಯಿತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಜೋಸ್ ಬಟ್ಲರ್ 8 ರನ್ ಗಳಿಸಿ ನಿರ್ಗಮಿಸಿದರೆ, ಯಶಸ್ವಿ ಜೈಸ್ವಾಲ್ 11 ಎಸೆತಗಳಲ್ಲಿ 14 ರನ್ ಗಳಿಸಿದ್ದಾಗ ರನ್ ಔಟ್‌ಗೆ ತುತ್ತಾದರು. ಆರಂಭದಲ್ಲೇ ಆಘಾತ ಎದುರಿಸಿದ ರಾಜಸ್ಥಾನ್ ರಾಯಲ್ಸ್ ಪರ ಉಳಿದಂತೆ ಸಂಜು ಸ್ಯಾಮ್ಸನ್ (Sanju Samson) 20 ಎಸೆತಗಳಲ್ಲಿ 30 ರನ್, ದೇವದತ್ ಪಡಿಕ್ಕಲ್ 12 ರನ್, ರವಿಚಂದ್ರನ್ ಅಶ್ವಿನ್ 2 ರನ್, ರಿಯಾನ್ ಪರಾಗ್ 4 ರನ್, ಶಿಮ್ರಾನ್ ಹೆಟ್ಮೇಯರ್ 7 ರನ್, ಧ್ರುವ್ ಜುರೆಲ್ 9 ರನ್, ಟ್ರೆಂಟ್ ಬೌಲ್ಟ್ 15 ರನ್, ಆಡಂ ಜಂಪಾ 7 ರನ್ ಹಾಗೂ ಸಂದೀಪ್ ಶರ್ಮಾ ಅಜೇಯ 2 ರನ್ ಗಳಿಸಿದರು.

    ಹೀಗೆ ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಯಾವೊಬ್ಬ ಆಟಗಾರನೂ ಸಹ 20 ರನ್‌ಗಳ ಗಡಿ ದಾಟದೇ ಇದ್ದು ತಂಡದ ಕಳಪೆ ಮೊತ್ತಕ್ಕೆ ಕಾರಣವಾಯಿತು. ಇದನ್ನೂ ಓದಿ: ರಿಂಕು, ರಾಣಾ ಬ್ಯಾಟಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – KKRಗೆ 5 ರನ್‌ಗಳ ರೋಚಕ ಜಯ

    ರಶೀದ್‌ ಸ್ಪಿನ್‌ ಜಾದು: ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ (Rashid Khan) ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರೆ, ಉಳಿದಂತೆ ನೂರ್ ಅಹ್ಮದ್ 2 ವಿಕೆಟ್, ಜೋಶ್ವಾ ಲಿಟಲ್, ಮೊಹಮ್ಮದ್ ಶಮಿ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

  • ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿದೆ.

    ಈ ಬಗ್ಗೆ ನೋಟಿಸ್ ಹೊರಡಿಸಿರುವ ಬಿಸಿಸಿಐ, ವೃದ್ಧಿಮಾನ್ ಸಹಾ ಆರೋಪದ ಬೆನ್ನಲ್ಲೇ ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಿ ಪತ್ರಕರ್ತ ಬೋರಿಯಾ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದ್ದು, 2 ವರ್ಷ ಯಾವುದೇ ಕ್ರಿಕೆಟ್ ಪಂದ್ಯದ ಸುದ್ದಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಮಜುಂದಾರ್‌ಗೆ ಪ್ರವೇಶವಿಲ್ಲ. 2 ವರ್ಷಗಳ ಕಾಲ ಟೀಂ ಇಂಡಿಯಾದ ಯಾವೊಬ್ಬ ಆಟಗಾರನೊಂದಿಗೂ ಸಂದರ್ಶನಕ್ಕೆ ಅವಕಾಶವಿಲ್ಲ. ಜೊತೆಗೆ 2 ವರ್ಷ ಬಿಸಿಸಿಐ ಮತ್ತು ಅದರ ಇತರ ಕ್ರಿಕೆಟ್ ಮಂಡಳಿ ಪ್ರವೇಶಕ್ಕೆ ನಿಷೇಧ ಹೇರುತ್ತಿದೆ ಎಂದು ನೋಟಿಸ್ ನೀಡಿದೆ. ಇದನ್ನೂ ಓದಿ: ಕೂಲ್ ಕ್ಯಾಪ್ಟನ್ ಮಾಹಿ ಮತ್ತೊಂದು ಮೈಲಿಗಲ್ಲಿಗೆ ಸಜ್ಜು

    ಏನಿದು ಪ್ರಕರಣ:
    ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಾಗ ವೃದ್ಧಿಮಾನ್ ಸಾಹ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಾಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದಾದ ಬಳಿಕ ಸಂದರ್ಶನ ಕೊಡಲು ನಿರಾಕರಿಸಿದಕ್ಕಾಗಿ ನನಗೆ ಬೋರಿಯಾ ಮಜುಂದಾರ್ ಬೆದರಿಕೆಯೊಡ್ಡಿದರು ಎಂದು ಸಹಾ ಆರೋಪಿಸಿದರು. ಮಜುಂದಾರ್ ಕಳುಹಿಸಿದ ಸಂದೇಶಗಳ ಸ್ಕ್ರೀನ್ ಶಾಟ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಹಾ ಹಂಚಿಕೊಂಡಿದ್ದರು. ಆ ಬಳಿಕ ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಆದೇಶಿಸಿತು. ಬಿಸಿಸಿಐ ರಚಿಸಿದ್ದ ಮೂರು ಮಂದಿ ತನಿಖಾ ಸಮಿತಿಯ ಮುಂದೆ ವೃದ್ಧಿಮಾನ್ ಸಾಹ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿದ್ದರು. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಇದೀಗ ಬಿಸಿಸಿಐ ತನಿಖಾ ಸಮಿತಿ ನೀಡಿದ ರಿಪೋರ್ಟ್‌ ಪ್ರಕಾರ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದೆ. ಬಿಸಿಸಿಐ ತೆಗೆದುಕೊಂಡಿರುವ ಕ್ರಮ ಇದೀಗ ತೀವ್ರ ಚರ್ಚೆಗೆ ನಾಂದಿಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.

  • ವೃದ್ಧಿಮಾನ್‌ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್‌

    ವೃದ್ಧಿಮಾನ್‌ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್‌

    ನವದೆಹಲಿ: ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಅವರ ಹೇಳಿಕೆಯಿಂದ ಯಾವುದೇ ಬೇಸರವಾಗಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.

    ನಿವೃತ್ತಿ ಬಗ್ಗೆ ಯೋಚಿಸಿ ಅಂತ ರಾಹುಲ್‌ ದ್ರಾವಿಡ್‌ ಅವರು ಸಲಹೆ ನೀಡಿದ್ದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೃದ್ಧಿಮಾನ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್‌ ದ್ರಾವಿಡ್‌, ಅನುಭವಿ ಕೀಪರ್‌ ವೃದ್ಧಿಮಾನ್‌ ಸಹಾ ಅವರು ತಮ್ಮ ಭವಿಷ್ಯದ ಕುರಿತು ನಡೆಸಿದ ಅತ್ಯಂತ ರಹಸ್ಯ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯಿಂದ ನನಗೆ ನೋವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

    ನನಗೆ ಯಾವುದೇ ನೋವಾಗಿಲ್ಲ. ವೃದ್ಧಿ ಮತ್ತು ಅವರ ಸಾಧನೆಗಳು, ಬಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಪ್ರಾಮಾಣಿಕ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್‌ ಮಾತನಾಡಿದ್ದಾರೆ.

    ಆಟಗಾರರೊಂದಿಗೆ ನಾನು ನಿರಂತರವಾಗಿ ಸಂಭಾಷಣೆ ನಡೆಸುತ್ತಿರುತ್ತೇನೆ. ಆಟಗಾರರ ಬಗ್ಗೆ ನಾನು ಹೇಳುವ ಎಲ್ಲವನ್ನೂ ಯಾವಾಗಲೂ ಅವರು ಒಪ್ಪುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಆಟಗಾರರೊಂದಿಗಿನ ಸಂಭಾಷಣೆಯು ಕೆಲವೊಮ್ಮೆ ಸರಿಯಲ್ಲ ಎನಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮಾ ನೇಮಕ

    ಆಟಗಾರರ ಜೊತೆ ಸಂಭಾಷಣೆಗಳನ್ನು ನಡೆಸದೇ, ಅವರ ಭವಿಷ್ಯದ ಬಗ್ಗೆ ತಿಳಿಸದೇ ಇರುವುದು ಸುಲಭ. ಆದರೆ ನಾನು ಹಾಗೆ ಮಾಡಲ್ಲ. ಸಂಭಾಷಣೆಯಿಂದ ಹಿಂದೆ ಸರಿಯುವುದಕ್ಕಿಂತ ಕಟುವಾದ ಸತ್ಯವನ್ನು ಹೇಳುವುದು ಉತ್ತಮ ಎಂದು ದ್ರಾವಿಡ್‌ ತಿಳಿಸಿದ್ದಾರೆ.

    ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡದೇ ಇರುವ ಕುರಿತು ವೃದ್ಧಿಮಾನ್‌ ಸಹಾ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು, ರಾಜೀನಾಮೆ ನೀಡುವ ಬಗ್ಗೆ ಯೋಚಿಸಿ ಎಂದಿದ್ದಾರೆಂದು ಸಹಾ ದೂರಿದ್ದರು.

  • ಪಂತ್ ಬಳಿಕ ದಯಾನಂದ್ ಗರಾನಿಗೆ ಕೊರೊನಾ ದೃಢ

    ಪಂತ್ ಬಳಿಕ ದಯಾನಂದ್ ಗರಾನಿಗೆ ಕೊರೊನಾ ದೃಢ

    – ಮೂವರು ಆಟಗಾರರು ಐಸೋಲೇಷನ್

    ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಕೀಪರ್ ರಿಷಭ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ, ತಂಡದ ಥ್ರೋಡೌನ್ ತಜ್ಞ ದಯಾನಂದ್ ಗರಾನಿ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.

    ಇಂದು ಪಂತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಬಿಸಿಸಿಐ ದೃಢಪಡಿಸಿತ್ತು. ಆ ಬಳಿಕ ಇದೀಗ ಗರಾನಿ ಅವರಿಗೆ ಸೋಂಕು ತಗುಲಿರುವುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವೃದ್ಧಿಮಾನ್ ಸಹಾ ಸಹಿತ ಇನ್ನಿಬ್ಬರೂ ಆಟಗಾರು ಐಸೋಲೇಷನ್‍ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ರಿಷಭ್ ಪಂತ್‍ಗೆ ಕೊರೊನಾ ಪಾಸಿಟಿವ್

    ಪಂತ್ ಕೊರೊನಾ ಸೋಂಕು ದೃಢಪಟ್ಟ ಬಳಿಕ ಗರಾನಿ ಅವರಿಗೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಯಿತು ಈ ವೇಳೆ ಇವರಿಗೆ ಪಾಸಿಟಿವ್ ಬಂದಿದೆ. ಆ ಬಳಿಕ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ನೆಟ್ ಬೌಲರ್ ಅಭಿಮನ್ಯು ಈಶ್ವರನ್ ಮತ್ತು ವೃದ್ಧಿಮಾನ್ ಸಹಾ ಅವರನ್ನು 10 ದಿನಗಳ ಕಾಲ ಐಸೋಲೇಷನ್‍ಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್ಟರ್‍ ನಲ್ಲಿ ಟ್ವೀಟ್ ಮಾಡಿದೆ.

    ಭಾರತ ತಂಡದ ಇತರ ಸದಸ್ಯರು ಗುರುವಾರ ಡರ್ಹಾಮ್‍ಗೆ ತೆರಳಿ ಬಳಿಕ ಅಭ್ಯಾಸ ಪಂದ್ಯವಾಡಲಿದ್ದಾರೆ. ಪಂತ್ ಮತ್ತು ಸಹಾ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ.

  • ವಾರ್ನರ್, ಸಹಾ ಭರ್ಜರಿ ಆಟ – ಕೋಲ್ಕತ್ತಾ ಮನೆಗೆ ಹೈದರಾಬಾದ್ ಪ್ಲೇ ಆಫ್‍ಗೆ

    ವಾರ್ನರ್, ಸಹಾ ಭರ್ಜರಿ ಆಟ – ಕೋಲ್ಕತ್ತಾ ಮನೆಗೆ ಹೈದರಾಬಾದ್ ಪ್ಲೇ ಆಫ್‍ಗೆ

    – ಶುಕ್ರವಾರ ಕೊಹ್ಲಿ, ವಾರ್ನರ್ ಮುಖಾಮುಖಿ

    ಶಾರ್ಜಾ: ಇಂದು ನಡೆದ ಐಪಿಎಲ್-2020ಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    ಶಾರ್ಜಾ ಮೈದಾನದಲ್ಲಿ ನಡೆದ 56ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ. ನಿಗದಿತ 20 ಓವರಿನಲ್ಲಿ ಕೇವಲ 149 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಅವರ ಮುರಿಯದ 151 ಜೊತೆಯಾಟದಿಂದ ಇನ್ನೂ 18 ಬಾಲ್ ಉಳಿಸಿಕೊಂಡು ಗುರಿಯನ್ನು ಬೆನ್ನಟ್ಟಿತು.

    ಕೊನೆಗೆ ಪ್ಲೇ ಆಫ್ ಆಯ್ಕೆ
    ಈ ಬಾರಿಯ ಐಪಿಎಲ್‍ನಲ್ಲಿ ಲೀಗ್ ಹಂತದ 52 ಪಂದ್ಯಗಳು ಮುಗಿದಿದ್ದರೂ ಪ್ಲೇ ಆಫ್‍ಗೆ ಆಯ್ಕೆಯಾಗುವ ತಂಡಗಳು ಫೈನಲ್ ಆಗಿರಲಿಲ್ಲ. ಇಂದು ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಾಲ್ಕು ತಂಡಗಳು ಪ್ಲೇ ಆಫ್‍ಗೆ ಅಂತಿಮವಾಗಿ ಆಯ್ಕೆ ಆಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಪ್ರವೇಶಿಸಿವೆ.

    ಈ ಮೂಲಕ ಗುರುವಾರ ದುಬೈಯಲ್ಲಿ ನಡೆಯಲಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಮೊದೆಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ನಂತರ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ನಂತರ ಎರಡನೇ ಎಲಿಮಿನೇಟರ್ ಭಾನುವಾರ ನಡೆಯಲಿದೆ.

    ಮುಂಬೈ ನೀಡಿದ 150 ರನ್‍ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಆರಂಭದಿಂದಲೇ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ಮೂಲಕ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಪರಿಣಾಮ ಸನ್‍ರೈಸರ್ಸ್ ಹೈದರಾಬಾದ್ ತಂಡ ಪವರ್ ಪ್ಲೇ ಅಂತ್ಯದ ವೇಳಗೆ ಒಂದು ವಿಕೆಟ್ ಕಳೆದುಕೊಳ್ಳದೆ 56 ರನ್ ಪೇರಿಸಿತು.

    ಈ ನಡುವೆ 35 ಬಾಲ್‍ಗೆ ನಾಯಕ ಡೇವಿಡ್ ವಾರ್ನರ್ ಅರ್ಧಶತಕ ಭಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 48ನೇ ಅರ್ಧಶತಕ ಸಿಡಿಸಿದರು. ಇದರ ಜೊತೆಗೆ ಆರಂಭದಿಂದಲೂ ವಾರ್ನರ್ ಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಶತಕದ ಜೊತೆಯಾಟವಾಡಿ ಹೈದರಾಬಾದ್ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದುಕೊಂಡು ಹೋದರು. ಸಹಾ ಮತ್ತು ವಾರ್ನರ್ ಮುರಿಯದ ಮೊದಲ ವಿಕೆಟಿಗೆ 151 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸುವುದರ ಜೊತೆಗೆ ಪ್ಲೇ ಆಫ್‍ಗೆ ಕೆರೆದುಕೊಂಡು ಹೋದರು. ಡೇವಿಡ್ ವಾರ್ನರ್ 85 ರನ್(58 ಎಸೆತ, 10 ಬೌಂಡರಿ , 1 ಸಿಕ್ಸ್) ಸಹಾ 58 ರನ್(45 ಎಸೆತ, 7 ಬೌಂಡರಿ, 1 ಸಿಕ್ಸ್) ಹೊಡೆದರು.

  • ಸನ್‍ರೈಸರ್ಸ್ ಹೈದರಾಬಾದ್‍ಗೆ ಶುಭ ಸುದ್ದಿ-20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಹಾ

    ಸನ್‍ರೈಸರ್ಸ್ ಹೈದರಾಬಾದ್‍ಗೆ ಶುಭ ಸುದ್ದಿ-20 ಎಸೆತಗಳಲ್ಲೇ ಶತಕ ಸಿಡಿಸಿದ ವೃದ್ಧಿಮಾನ್ ಸಹಾ

    ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

    ಕೋಲ್ಕತಾದಲ್ಲಿ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಟೂರ್ನಿ ಜೆಸಿ ಮುಖರ್ಜಿ ಟಿ20 ಟ್ರೋಫಿಯಲ್ಲಿ ಮೋಹನ್ ಬಗಾನ್ ತಂಡದ ಪರ ಪ್ರತಿನಿಧಿಸುವ ಸಹಾ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ. ಪಂದ್ಯದ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಸಹಾ ಕೇವಲ 22 ಎಸೆತಗಳಲ್ಲಿ 14 ಸಿಕ್ಸರ್, 4 ಬೌಂಡರಿಗಳ ಸಹಾಯದಿಂದ ಶತಕ ಸಿಡಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಎದುರಾಳಿ ಬಿಎನ್‍ಆರ್ ರಿಕ್ರಿಯೇಷನ್ ತಂಡ 151 ರನ್ ಗುರಿ ನೀಡಿತ್ತು. ಸುಲಭ ಗುರಿಯನ್ನು ಬೆನ್ನತ್ತಿದ ಮೋಹನ್ ಬಗಾನ್ ತಂಡ ಸಹಾ ರ ಶತಕ (102 ರನ್)ದ ನೆರವಿನಿಂದ ಕೇವಲ ಏಳು ಓವರ್ ಗಳಲ್ಲಿ 154 ರನ್ ಗಳಿಸಿ ಜಯ ಪಡೆಯಿತು.

    ಪಂದ್ಯದ ಬಳಿಕ ಮಾತನಾಡಿದ ಸಹಾ, ಇನ್ನಿಂಗ್ಸ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಸಿಡಿಸಲು ಪ್ರಯತ್ನಿಸಿದೆ. ಆದರೆ ಈ ಪಂದ್ಯದಲ್ಲಿ ದಾಖಲೆ ಬರೆಯುವ ಯೋಚನೆ ಇರಲಿಲ್ಲ. ಮುಂದಿನ ಐಪಿಎಲ್ ಟೂರ್ನಿಯನ್ನು ಮಾತ್ರ ಗಮನದಲ್ಲಿಟ್ಟು ವಿಭಿನ್ನ ಹೊಡೆತಗಳಿಗೆ ಕೈ ಹಾಕಿದೆ ಎಂದು ಸಹಾ ಹೇಳಿದ್ದಾರೆ.

    2018 ಐಪಿಎಲ್‍ಗಾಗಿ ನಡೆದ ಹರಾಜಿನಲ್ಲಿ ಸಹಾ ಅವರನ್ನು ಸನ್‍ರೈಸರ್ಸ್ ಹೈದರಾಬಾದ್ ಬರೋಬ್ಬರಿ ಐದು ಕೋಟಿ ರೂ.ಗಳನ್ನು ನೀಡಿ ಖರೀದಿಸಿದೆ. ಈ ಮುನ್ನ ಐಪಿಎಲ್ ಟೂರ್ನಿಗಳಲ್ಲಿ ಸಹಾ ಚೆನ್ನೈ, ಕೋಲ್ಕತ್ತಾ ಹಾಗೂ ಪಂಜಾಬ್ ತಂಡಗಳನ್ನು ಪ್ರತಿನಿಧಿಸಿದ್ದರು.

    2014 ರ ಐಪಿಎಲ್ ಫೈನಲ್‍ನಲ್ಲಿ ಶತಕ ಬಾರಿಸುವ ಮೂಳಕ ದಾಖಲೆ ನಿರ್ಮಿಸಿದ್ದರು. ಆದರೆ ದುರದೃಷ್ಟವಶಾತ್ ಈ ಪಂದ್ಯದಲ್ಲಿ ಕೋಲ್ಕತ್ತ ತಂಡ ಜಯಗಳಿಸಿ ಪ್ರಶಸ್ತಿ ಪಡೆದಿತ್ತು.