Tag: Wrestling

  • ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS

    ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS

    – 100 ಗ್ರಾಂ ಹೆಚ್ಚಳವಾಗಿದ್ದಕ್ಕೆ ಅನರ್ಹ
    – 24 ಪುಟಗಳ ವಿಸ್ತೃತ ಆದೇಶದಲ್ಲಿ ಹಲವು ವಿಷಯಗಳ ಉಲ್ಲೇಖ

    ಪ್ಯಾರಿಸ್‌: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು. ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳವಾಗಿದ್ದಕ್ಕೆ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರನ್ನು ಫೈನಲ್‌ ಪಂದ್ಯದಿಂದ ಅನರ್ಹ ಮಾಡಲಾಗಿದೆ. ಅನರ್ಹ ಮಾಡಿದ ನಿರ್ಧಾರ ಸರಿಯಾಗಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ಹೇಳಿದೆ.

    ವಿನೇಶ್‌ ಫೋಗಟ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ಆಗಸ್ಟ್‌ 14 ರಂದು ವಜಾ ಮಾಡಿತ್ತು. ಈಗ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲು ಕಾರಣ ಏನು ಎನ್ನುವುದನ್ನು 24 ಪುಟಗಳ ವಿಸ್ತೃತ ಆದೇಶದಲ್ಲಿ ತಿಳಿಸಿದೆ.

    ಆದೇಶದಲ್ಲಿ ಏನಿದೆ?
    ಫೋಗಟ್‌ ಅವರು ತಾನು ಯಾವ ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕು ಎಂಬುದನ್ನುದಲ್ಲಿ ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ನಿಯಮಗಳ ಬಗ್ಗೆ ಪರಿಚಿತರಾಗಿರುವ ಅನುಭವಿ ಕುಸ್ತಿಪಟುವಾಗಿದ್ದು ತೂಕದ ಮಿತಿಗಳನ್ನು ಅರ್ಥಮಾಡಿಕೊಂಡಿದ್ದಾರೆ.

    ಫೋಗಟ್‌ ಅವರ ಅಸಮರ್ಥತೆ ಅವರ ತೂಕ ನಿರ್ವಹಣೆಯ ತಂತ್ರದಿಂದ ಉದ್ಭವಿಸಿದೆಯೇ ಹೊರತು ಯಾವುದೇ ಬಾಹ್ಯ ಅಂಶಗಳು ಅಥವಾ ಹಸ್ತಕ್ಷೇಪದಿಂದಲ್ಲ. ಆದ್ದರಿಂದ ಫೋಗಟ್ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ.  ಇದನ್ನೂ ಓದಿ: ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್‌ ಫೋಗಟ್‌ಗೆ ಕೊಟ್ಟ ಅಣ್ಣ

    ತೂಕದ ನಿಯಮ ಎಲ್ಲಾ ಕ್ರೀಡಾಪಟುಗಳಿಗೆ ಒಂದೇ ಆಗಿದ್ದು ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ತೂಕ ಪರೀಕ್ಷೆಯನ್ನು ನಡೆಸುವುದು ನಿಯಮ. ಇದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ನಿಗದಿತ ತೂಕ 50 ಕೆಜಿ 150 ಗ್ರಾಂ. ಹೆಚ್ಚಾಗಿತ್ತು.

    ನಿಯಮದ ಪ್ರಕಾರ ವಿನೇಶ್ ಫೋಗತ್ ತೂಕ 50 ಕೆಜಿ ಒಳಗಿರಬೇಕಿತ್ತು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳ ಇತ್ತು. ತೂಕ ಹೆಚ್ಚಳವಾಗಿರುವ ಕುರಿತು ಯಾವುದೇ ತಕರಾರು ಇಲ್ಲ. ಆದರೆ ಇಲ್ಲೇ ನಿಯಮ ಉಲ್ಲಂಘನೆಯಾಗಿದೆ.

    ತೂಕದ ಮಿತಿಯನ್ನು ಕಾಪಾಡುವುದು ಕ್ರೀಡಾಪಟು ಜವಾಬ್ದಾರಿಯಾಗಿದೆ. ಕ್ರೀಡಾಪಟು ಫೈನಲ್ ಸುತ್ತು ಆಡಿದ ಬಳಿಕ ಸಲ್ಲಿಸಿರುವ ಮನವಿ ಇದಲ್ಲ. ಈ ಕಾರಣದಿಂದ ಕ್ರೀಡಾಪಟು ಫೈನಲ್ ಸುತ್ತಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ಪದಕ ಹಂಚುವಿಕೆ ಮನವಿ ಅಪ್ರಸ್ತುತ. ಈ ಕುರಿತು ಅಂತಾರಾಷ್ಟ್ರೀಯ ಸಮಿತಿ ಪ್ರಕಟಿಸಿದ ನಿರ್ಧಾರ ಸರಿಯಾಗಿದೆ. ತೂಕದ ಅವಶ್ಯಕತೆಗಳನ್ನು ಪೂರೈಸುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ. ಇದನ್ನೂ ಓದಿ: ನನ್ನ ಅಳಿಯನನ್ನು ಗಲ್ಲಿಗೆ ಹಾಕಿ, ಬೇಕಾದದ್ದು ಮಾಡಿ – ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಆರೋಪಿಯ ಅತ್ತೆಯ ಆಕ್ರೋಶ

    ಭಾರತದ ಒಲಿಂಪಿಕ್ಸ್‌ ಸಂಸ್ಥೆ (IOA) ವಿನೇಶ್‌ ಫೋಗಟ್‌ ಮುಟ್ಟಾಗಿದ್ದರು. ಇದು ಸಾಮಾನ್ಯ ಜೈವಿಕ ಪ್ರಕ್ರಿಯೆಯಾಗಿರುವ ಕಾರಣ ದ್ರವವನ್ನು ಹಿಡಿದಿಟ್ಟುಕೊಳ್ಳುವುದರಿಂದ ತೂಕ ಹೆಚ್ಚಾಗಿದೆ ಎಂದು ವಾದಿಸಿತ್ತು. ವಿನೇಶ್ ಫೋಗಟ್ ಸ್ವತಃ ಈ ವಿಷಯವನ್ನು ಪ್ರಸ್ತಾಪಿಸದಿದ್ದರೂ ಐಒಎ ಪ್ರಸ್ತಾಪಿಸಿತ್ತು. ಹೀಗಿದ್ದರೂ ನ್ಯಾಯಾಲಯ ಋತುಚಕ್ರದ ಪರಿಣಾಮಗಳಿಗೆ ಸಂಬಂಧಿಸಿದ ಪುರಾವೆಗಳು ಫೋಗಟ್‌ ಅವರು ಮೊದಲ ಆಡುವಾಗ ಇದ್ದ ತೂಕದಲ್ಲಿ ಯಾವುದೇ ವ್ಯತ್ಯಾಸ ತೋರಿಸಿರಲಿಲ್ಲ. ಋತುಚಕ್ರ ಸಾಮಾನ್ಯ ಜೈವಿಕ ಪ್ರಕ್ರಿಯೆಗಳಾಗಿದ್ದು, ಇದರಲ್ಲಿ ಆಹಾರ, ಪಾನೀಯ ಸೇವಿಸುವುದು ಒಳಗೊಂಡಿರುತ್ತದೆ. ಅನುಭವಿ ಕ್ರೀಡಾಪಟುಗಳು ಸಹಜವಾಗಿ ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಬೇಕು. ತೂಕದ ಮಾಪಕಗಳು ದೋಷಯುಕ್ತವಾಗಿವೆ ಎಂದು IOA ಹೇಳಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಆರೋಪಗಳನ್ನು ತಳ್ಳಿಹಾಕಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

    ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್‌ ಅವರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್‌ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.

    ಫೈನಲ್‌ ಪಂದ್ಯದ ಮುನ್ನಾದಿನ ನಾನು ‌ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್‌ ಫೋಗಟ್‌ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

     

  • ಭಾರತಕ್ಕೆ ಮರಳಿದ ವಿನೇಶ್‌ ಫೋಗಟ್‌ಗೆ ಅದ್ಧೂರಿ ಸ್ವಾಗತ

    ಭಾರತಕ್ಕೆ ಮರಳಿದ ವಿನೇಶ್‌ ಫೋಗಟ್‌ಗೆ ಅದ್ಧೂರಿ ಸ್ವಾಗತ

    ನವದೆಹಲಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್ (Vinesh Phogat) ಭಾರತಕ್ಕೆ ವಾಪಸ್ ಆಗಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ಫೋಗಟ್‌ಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.

    ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು.

    ವಿನೇಶ್ ಫೋಗಟ್ ಬೆಂಬಲಕ್ಕೆ ಭಾರತದ ಕುಸ್ತಿ ಫೆಡರೇಷನ್ ನಿಲ್ಲಲಿಲ್ಲ ಎಂದು ಫೋಗಟ್ ಪತಿ ಸೋಮ್‌ವೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದ್ರಾವಿಡ್ ಪುತ್ರನ ಸಿಕ್ಸ್ – ವಿಡಿಯೋ ವೈರಲ್‌, ಅಭಿಮಾನಿಗಳ ಮೆಚ್ಚುಗೆ

    ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿಸಿತ್ತು.

    ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್‌ ಅವರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್‌ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.


    ಫೈನಲ್‌ ಪಂದ್ಯದ ಮುನ್ನಾದಿನ ನಾನು ‌ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು. ವಿನೇಶ್‌ ಫೋಗಟ್‌ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

     

  • ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

    ಪ್ಯಾರಿಸ್‌: ಒಲಿಂಪಿಕ್ಸ್‌ (Paris Olympics 2024) ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ (Vinesh Phogat) ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ ಸ್ಪರ್ಧೆಯಿಂದಲೇ ಅನರ್ಹಗೊಂಡರು. ಇದರಿಂದ ಒಂದೆಡೆ ಅನರ್ಹತೆಯ ನಿಯಮ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ವಿನೇಶ್‌ ತೂಕ ಇಳಿಸಲು ಆ ದಿನ ಇಡೀ ರಾತ್ರಿ ನಡೆಸಿದ್ದ ಕಸರತ್ತಿನ ಬಗ್ಗೆ ಚರ್ಚೆಯಾಗುತ್ತಿವೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದೆ.

    ಶುಕ್ರವಾರ ನಡೆದ 57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್‌ ಕುಸ್ತಿಯಲ್ಲಿ (Wrestling)  ಕಂಚಿನ ಪದಕ ಗೆದ್ದ ಭಾರತದ ಅಮನ್‌ ಸೆಹ್ರಾವತ್‌ (Aman Sehrawat) ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿದೆ.

    ಹೌದು. ಸೆಮಿಫೈನಲ್‌ ಸೋಲಿನ ಬಳಿಕ 61 ಕೆಜಿ ತೂಕ ಹೊಂದಿದ್ದ ಅಮನ್‌ ಕಂಚಿನ ಪದಕಕ್ಕೆ ಹೋರಾಡಬೇಕಿತ್ತು. ನಿಗದಿತ ಮಿತಿಗಿಂತ ಅಮನ್‌ 4.5 ಕೆಜಿ ಹೆಚ್ಚುವರಿ ತೂಕವಿದ್ದ ಕಾರಣ ಭಾರೀ ಕಸರತ್ತು ನಡೆಸಿ ತೂಕ ಇಳಿಸಿದ್ದಾರೆ. ಭಾರತೀಯ ತರಬೇತುದಾರರೊಂದಿಗೆ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    21 ವರ್ಷ ವಯಸ್ಸಿನ ಅಮನ್ ಅವರು ಜಪಾನ್‌ನ ರೇ ಹಿಗುಚಿ ವಿರುದ್ಧ ಗುರುವಾರ ಸಂಜೆ 6:30ರ ವೇಳೆಗೆ ಸೆಮಿಸ್‌ನಲ್ಲಿ ಸೋಲು ಕಂಡಿದ್ದರು. ಬಳಿಕ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್‌ ವಿರುದ್ಧ ಕಂಚಿನ ಪದಕಕ್ಕೆ ಅವರು ಸೆಣಸಬೇಕಿತ್ತು. ಕೊಂಚವೂ ಸಮಯ ವ್ಯರ್ಥ ಮಾಡದ ಅಮನ್‌ ನಿರಂತರವಾಗಿ ದೇಹ ದಂಡಿಸುವ ಮೂಲಕ ಹಿಡಿದ ಕಾರ್ಯವನ್ನು ಸಾಧಿಸಿದ್ದಾರೆ.

    ರೋಚಕ ಕಸರತ್ತು:
    ಸೆಮಿಫೈನಲ್‌ ಪಂದ್ಯ ಮುಗಿದ ಬಳಿಕ ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಅಮನ್‌ ಜಿಮ್‌ಗೆ ಬಂದು ಟ್ರೆಡ್‌ಮಿಲ್‌ನಲ್ಲಿ 1 ಗಂಟೆ ನಾನ್‌ಸ್ಟಾಪ್‌ ಓಟ ಅಭ್ಯಾಸ ಮಾಡಿದ್ರು. ಇದಕ್ಕೂ ಮುನ್ನ ಅವರು ಹಿರಿಯ ಕೋಚ್‌ಗಳೊಂದಿಗೆ ಸತತ ಒಂದೂವರೆ ಗಂಟೆ ಮ್ಯಾಚ್‌ ಸೆಷನ್‌ ಅಭ್ಯಾಸ ಮಾಡಿದ್ದರು. ನಂತರ 30 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, 5 ನಿಮಿಷಗಳ ಕಾಲ ಸೌನಾ ಸ್ನಾನ ಮಾಡಿದರು. ಆದ್ರೆ ಸೆಷನ್‌ ಮುಕ್ತಾಯದ ಹೊತ್ತಿಗೆ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದ ಅವರಿಗೆ ಇನ್ನಷ್ಟು ಮಸಾಜ್‌ ಮಾಡಿಸಿ, ಲಘು ಜಾಗಿಂಗ್ ಮಾಡಿಸಲಾಯಿತು. ಹೀಗೆ ಬಿಡುವಿಲ್ಲದೇ ಮಾಡಿದ ಕಸರತ್ತಿನ ಪರಿಣಾಮ ಶುಕ್ರವಾರ ಮುಂಜಾನೆ 4:30ರ ವೇಳೆಗೆ ಅಮನ್‌ ದೇಹದ ತೂಕವನ್ನು 56.9 ಕೆಜಿಗೆ ಇಳಿಸಿದರು. ಆ ಬಳಿಕವೇ ಕೋಚ್‌ ನಿಟ್ಟುಸಿರು ಬಿಟ್ಟರು.

    ಊಟವಿಲ್ಲ ಬರೀ ನೀರು ಸೇವನೆ:
    ವಿನೇಶ್‌ ಫೋಗಟ್‌ ಅನರ್ಹತೆಯ ಬಳಿಕ ಎಚ್ಚೆತ್ತುಕೊಂಡಿದ್ದ ಕೋಚ್‌ಗಳು ಅಮನ್‌ ಅವರ ತೂಕ ಇಳಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಮನ್‌ಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿಯಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್‌ ನಿದ್ರೆಗೆ ಜಾರಲೇ ಇಲ್ಲ ಎಂದು ಕೋಚ್‌ಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

    ಪದಕ ತಂದೆ-ತಾಯಿಗೆ ಅರ್ಪಣೆ:
    ಚೊಚ್ಚಲ ಪ್ರಯತ್ನದಲ್ಲೇ ಪದಕ ಗೆದ್ದ ಅಮನ್​ ಸೆಹ್ರಾವತ್​ ಈ ಪದಕವನ್ನು ಅಗಲಿದ ತಂದೆ-ತಾಯಿಗೆ ಅರ್ಪಿಸಿದ್ದಾರೆ. ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸವನ್ನೂ ಅಮನ್​ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಪಿ.ವಿ ಸಿಂಧು ಅವರ ಹೆಸರಿನಲ್ಲಿತ್ತು. ಸಿಂಧು ರಿಯೋ ಒಲಿಂಪಿಕ್ಸ್​ನಲ್ಲಿ 21 ವರ್ಷ 1 ತಿಂಗಳು, 14 ದಿನ ವಯಸ್ಸಿನಲ್ಲಿದ್ದಾಗ ಕಂಚಿನ ಪದಕ ಗೆದ್ದಿದ್ದರು.

    ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಕುಸ್ತಿಪಟು:
    ಅಮನ್​ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಎನಿಸಿಕೊಂಡಿದ್ದರು. 57 ಕೆಜಿ ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದಾಗಲೇ ಅಮನ್​ ಪದಕ ಗೆಲ್ಲುವುದು ನಿಶ್ಚಿತ ಎನ್ನಲಾಗಿತ್ತು. ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡ ಕಾರಣ ಕಂಚಿನ ಪದಕ್ಕೆ ಹೋರಾಟ ನಡೆಸಿ ಇಲ್ಲಿ ಮೇಲುಗೈ ಸಾಧಿಸಿದರು.

  • ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ ನನ್ನನ್ನು ಕ್ಷಮಿಸು: ನಿವೃತ್ತಿ ಘೋಷಿಸಿದ ವಿನೇಶ್‌ ಫೋಗಟ್‌

    ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ ನನ್ನನ್ನು ಕ್ಷಮಿಸು: ನಿವೃತ್ತಿ ಘೋಷಿಸಿದ ವಿನೇಶ್‌ ಫೋಗಟ್‌

    ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ (Paris Olympics) ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ.

    ಎಕ್ಸ್‌ನಲ್ಲಿ ಭಾವುಕ ಸಾಲು ಬರೆದು ನಿವೃತ್ತಿ ಘೋಷಿಸಿದರು. ಅಮ್ಮಾ, ನನ್ನ ವಿರುದ್ಧ ಕುಸ್ತಿ (Wrestling) ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ.

     

    ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದು ವಿನೇಶ್ ಫೋಗಟ್ ದೇಶದ ಜನತೆಯಲ್ಲಿ ಕೇಳಿಕೊಂಡಿದ್ದಾರೆ.

    50 ಕೆಜಿ ಫ್ರಿಸ್ಟೈಲ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್ ಫೋಗಟ್ ಈ ಬಾರಿ ಬಂಗಾರ ಗೆಲ್ಲಬಹುದು ಎಂದು ನಿರೀಕ್ಷೆ ಭಾರತೀಯರಿಗಿತ್ತು. ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ ತೂಕದಲ್ಲಿ ಕೇವಲ 100 ಗ್ರಾಂ ಅಧಿಕವಿದ್ದ ಕಾರಣದಿಂದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಇದಾದ ಒಂದು ದಿನದಲ್ಲೇ ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

  • ಮತ್ತೆ ಕುಸ್ತಿಪಟು ಭಜರಂಗ್‌ ಪೂನಿಯಾ ಅಮಾನತು

    ಮತ್ತೆ ಕುಸ್ತಿಪಟು ಭಜರಂಗ್‌ ಪೂನಿಯಾ ಅಮಾನತು

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾ (Wrestler Bajrang Punia) ಅವರನ್ನು ಮತ್ತೆ ಅಮಾನತು ಮಾಡಿದೆ.

    ಮಾರ್ಚ್ 10 ರಂದು ಸೋನಿಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

    ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.

     

    ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಸೇರಿದಂತೆ ಇತರ ಅಗ್ರ ಕುಸ್ತಿಪಟುಗಳು ಬಿಜೆಪಿ ಮಾಜಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಭಜರಂಗ್‌ ಪೂನಿಯಾ ಮುಂಚೂಣಿಯಲ್ಲಿದ್ದರು. ಇದನ್ನೂ ಓದಿ: ಏಕದಿನ ವಿಶ್ವಕಪ್‌ ಸೋಲಿನ ಸೇಡು – ಬಲಿಷ್ಠ ಆಸೀಸ್‌ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಗೆಲುವು!

    ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ.

    ಉದ್ದೀಪನಾ ಪರೀಕ್ಷೆ ಉದ್ದೇಶಕ್ಕಾಗಿ ಅಗತ್ಯವಾದ ಮೂತ್ರ ಮಾದರಿಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿದ್ದರು. ಆದರೆ ಅಧಿಕಾರಿಗಳಿ ಮನವಿಯ ನಂತರವೂ ನೀವು ಮೂತ್ರದ ಮಾದರಿಗಳನ್ನು ನೀಡಲು ನೀರಕಾರಿಸಿದ್ದೀರಿ. ಮೂತ್ರ ಮಾದರಿ ಸಂಗ್ರಹಿಸಲು ಅವಧಿ ಮೀರಿದ ಕಿಟ್‌ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಕ್ಕೆ ಈಗಾಗಲೇ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಈ ಕಾರಣಕ್ಕೆ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಡಾ ತನ್ನ ನೋಟಿಸ್‌ನಲ್ಲಿ ಹೇಳಿದೆ.

     

    ಅಧಿಕಾರಿಗಳು ಹಲವು ಮನವಿಗಳ ನಂತರವೂ ನೀವು ಮೂತ್ರ ಮಾದರಿಗಳನ್ನು ನೀಡಲು ನಿರಾಕರಿಸಿದ್ದೀರಿ. ಮೂತ್ರ ಮಾದರಿಗಾಗಿ ಅವಧಿ ಮೀರಿದ ಕಿಟ್‌ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಗಳಿಗೂ ಸಂಬಂಧಿಸಿದ ಅಧಿಕಾರಿಗಳು ವಿವರವಾಗಿ ಉತ್ತರ ನೀಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ನಾಡಾ ಕ್ರಮ ಕೈಗೊಂಡಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

    ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು ಎಂದು ನಾಡಾ ಸೂಚಿಸಿತ್ತು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

    ಈ ನೋಟಿಸ್‌ಗೆ ಎಕ್ಸ್‌ನಲ್ಲಿ ಉತ್ತರಿಸಿದ ಭಜರಂಗ್ ಪುನಿಯಾ, ನಾನು ಮೂತ್ರ ನೀಡಲು ಯಾವುದೇ ಹಂತದಲ್ಲಿ ನಿರಾಕರಿಸಲಿಲ್ಲ. ಮಾರ್ಚ್‌ 10, 2024 ರಂದು ಡೋಪಿಂಗ್ ನಿಯಂತ್ರಣ ಅಧಿಕಾರಿಗಳು ನನ್ನನ್ನು ಮೂತ್ರದ ಮಾದರಿಯನ್ನು ಎರಡು ಬಾರಿ ಪಡೆಯಲು ಬಂದಾಗ ಅವರು ಅವಧಿ ಮೀರಿದ ಕಿಟ್‌ಗಳನ್ನು ನೀಡಿದ್ದರು ಎಂದು ತಿಳಿಸಿದ್ದರು.

     

  • ನಾಡಾದಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು

    ನಾಡಾದಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು

    ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾ (Wrestler Bajrang Punia) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ.

    ಮೂಲಗಳ ಪ್ರಕಾರ ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.

    ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ಇದನ್ನೂ ಓದಿ: ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

    ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಸೇರಿದಂತೆ ಇತರ ಅಗ್ರ ಕುಸ್ತಿಪಟುಗಳು ಬಿಜೆಪಿ ಮಾಜಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಭಜರಂಗ್‌ ಪೂನಿಯಾ ಮುಂಚೂಣಿಯಲ್ಲಿದ್ದರು.

    ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ. ಇದನ್ನೂ ಓದಿ: 40ಕ್ಕೂ ಹೆಚ್ಚು ಪೊಲೀಸರು ಬಂದು ಹೊಡೆದಿದ್ದಾರೆ – ಏಟಿನ ಭಯಕ್ಕೆ ಸುಳ್ಳು ಹೇಳಿದ್ದೇವೆ

    ಈ ನಾಡಾ ಮೂತ್ರದ ಮಾದರಿಯನ್ನು ನೀಡದ್ದು ಯಾಕೆ ಎನ್ನುವುದರ ಬಗ್ಗೆ ಲಿಖಿತವಾಗಿ ಕಾರಣವನ್ನು ಮೇ 7ರ ಒಳಗಡೆ ತಿಳಿಸಬೇಕು. ಒಂದು ವೇಳೆ ಈ ಅವಧಿಯ ಒಳಗಡೆ ಸರಿಯಾದ ಕಾರಣ ನೀಡದೇ ಇದ್ದರೆ ಮುಂದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

     

  • ನೂತನ ಕುಸ್ತಿ ಫೆಡರೇಶನ್‌ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

    ನೂತನ ಕುಸ್ತಿ ಫೆಡರೇಶನ್‌ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಜಯ್‌ ಸಿಂಗ್ (Sanjay Singh) ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್‌ (Wrestling Federation of India) ಸಮಿತಿಯನ್ನು ಕ್ರೀಡಾ ಸಚಿವಾಲಯ (Sports Ministry) ಅಮಾನತುಗೊಳಿಸಿದೆ.

    ಡಬ್ಲ್ಯೂಎಫ್‌ಐ (WFI) ಸಂವಿಧಾನ ಮತ್ತು ನಿಯಮವನ್ನು ಉಲ್ಲಂಘಿಸಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಭಾನುವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಪ್ರಕಟಿಸಿದೆ.

    ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟ ಉತ್ತರ ಪ್ರದೇಶದದ ಗೊಂಡಾದ ನಂದಿನಿ ನಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೇ ಮತ್ತು WFI ನ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೇ ಈ ಘೋಷಣೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ, ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪಲ್ಲ: ಜೆಡಿಎಸ್‌ ಕಿಡಿ 

    ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ. ಯಾವುದೇ ಟೂರ್ನಿ ನಡೆಸುವ ಮೊದಲು ಕಾರ್ಯಕಾರಿ ಸಮಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಹೊಸದಾಗಿ ಚುನಾಯಿತ ಸಮಿತಿಯು ಕ್ರೀಡಾ ಸಂಹಿತೆಯನ್ನು ಕಡೆಗಣಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.

    ಗೊಂಡಾದಲ್ಲಿ ಸ್ಪರ್ಧೆ ಆಯೋಜನೆಗೊಂಡಿದ್ದಕ್ಕೆ ಸಾಕ್ಷಿ ಮಲ್ಲಿಕ್‌ ಕಿಡಿಕಾರಿದ್ದರು. ಕಿರಿಯರ ಕುಸ್ತಿಯನ್ನು ಗೊಂಡಾದಲ್ಲಿ ನಡೆಸಲು WFI ಮುಂದಾಗಿದೆ. ಗೊಂಡಾ ಬ್ರಿಜ್‌ಭೂಷಣ್‌ ಸರಣ್‌ ಸಿಂಗ್‌ (Brijbhushan) ಅವರ ಕ್ಷೇತ್ರ ಎಂದು ಹೇಳಿದ್ದರು.  ಇದನ್ನೂ ಓದಿ: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಉಗ್ರರಿಂದ ಗುಂಡೇಟು – ಜಮ್ಮು ಕಾಶ್ಮೀರದ ನಿವೃತ್ತ ಪೊಲೀಸ್‌ ಅಧಿಕಾರಿ ಬಲಿ

     

  • ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್‌ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು

    ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್‌ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು

    ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‍ನಲ್ಲಿ (WFI) ಲೈಂಗಿಕ ಶೋಷಣೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬ್ರಿಜ್‍ಭೂಷಣ್ ತಲೆದಂಡಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ರೆಸ್ಲರ್ ವಿನೆಶಾ ಫೋಗಟ್, ಭಜರಂಗ್‌ ಪೂನಿಯಾ ಸೇರಿ ಇತರೇ ಕುಸ್ತಿಪಟುಗಳ ವಿರುದ್ಧವೇ ದೆಹಲಿ ಹೈಕೋರ್ಟ್‍ನಲ್ಲಿ (Delhi High Court) ದೂರು ದಾಖಲಾಗಿದೆ.

    ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಡಬ್ಲುಎಫ್‍ಐ ಅಧ್ಯಕ್ಷ ಬ್ರಿಜ್ ಭೂಷಣ್ (Brij Bhushan) ಮನೆಯಲ್ಲಿ ಅಡುಗೆ ಕೆಲಸ ಮಾಡುವ ವಿಕ್ಕಿ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್

     

    ದೂರಿನಲ್ಲಿ ಏನಿದೆ?
    ಲೈಂಗಿಕ ದೌರ್ಜನ್ಯ ನಿಗ್ರಹ ಕಾಯ್ದೆಯನ್ನು ಮಹಿಳಾ ಕುಸ್ತಿಪಟುಗಳು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಒಂದು ವೇಳೆ ಯಾರಾದರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಂಥವರು ಕಾನೂನು ಪ್ರಕಾರ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಬೇಕು. ಈ ಪ್ರಕರಣದಲ್ಲಿ ಯಾವೊಬ್ಬ ಮಹಿಳಾ ಕುಸ್ತಿಪಟು ದೂರು ನೀಡಿಲ್ಲ. ಆದರೆ ಇಲ್ಲಿ ಡಬ್ಲುಎಫ್‍ಐ ಅಧ್ಯಕ್ಷರ ರಾಜೀನಾಮೆ ಪಟ್ಟು ಹಿಡಿದು ನ್ಯಾಯಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

    ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡುವ ಮೂಲಕ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್‌ ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಕುಸ್ತಿಪಟುಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಪುರುಷರ 65ಕೆಜಿ ವಿಭಾಗದ ಕುಸ್ತಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಕುಸ್ತಿ ಪಟು ಭಜರಂಗ್ ಪೂನಿಯಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಫೈನಲ್‍ನಲ್ಲಿ ಕೆನಡಾದ ಮೆಕ್‍ನೀಲ್ ಲಾಚ್ಲಾನ್ ವಿರುದ್ಧ ಮುನ್ನಡೆ ಸಾಧಿಸುತ್ತ ಸಾಗಿದ ಪೂನಿಯಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಈ ಪದಕದೊಂದಿಗೆ ಭಾರತಕ್ಕೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 7ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

    ಈ ಮೊದಲು ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್‍ನಲ್ಲಿ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದು ಕುಸ್ತಿಯಲ್ಲಿ ಪದಕದ ಬೇಟೆಗೆ ಆರಂಭ ನೀಡಿದ್ದರು. ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 22 ಪದಕ ಗೆದ್ದಂತಾಗಿದೆ.

    ಇದಲ್ಲದೇ ಇಬ್ಬರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (ಮಹಿಳೆಯರ 62 ಕೆಜಿ) ಮತ್ತು ದೀಪಕ್ ಪೂನಿಯಾ (ಪುರುಷರ 86 ಕೆಜಿ) ಫೈನಲ್‍ಗೆ ತಲುಪಿದ್ದು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG 2022: ಕುಸ್ತಿಯಲ್ಲಿ ಬೆಳ್ಳಿ ಪದಕ ಬೇಟೆಯಾಡಿದ ಅಂಶು ಮಲಿಕ್

    CWG 2022: ಕುಸ್ತಿಯಲ್ಲಿ ಬೆಳ್ಳಿ ಪದಕ ಬೇಟೆಯಾಡಿದ ಅಂಶು ಮಲಿಕ್

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ 57ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದಿದ್ದಾರೆ.

    ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ ಫೈನಲ್‍ನಲ್ಲಿ ಅಂಶು ಮಲಿಕ್ ವಿರುದ್ಧ ನೈಜೀರಿಯಾದ ಒಡುನಾಯೊ ಫೋಲಸಾಡೆ 4-6 ಅಂತರದಲ್ಲಿ ಗೆದ್ದು ಚಿನ್ನದ ಪದಕ ಪಡೆದರು. ಇತ್ತ ಬೆಳ್ಳಿ ಪದಕ ವಿಜೇತೆ ಅಂಶು ಮಲಿಕ್ ಕುಸ್ತಿಯಲ್ಲಿ ಪದಕದ ಬೇಟೆಗೆ ಆರಂಭ ನೀಡಿದ್ದಾರೆ. ಈ ಮೂಲಕ ಭಾರತ ತಂಡ ಈವರೆಗೆ 2022ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 6 ಚಿನ್ನ, 8 ಬೆಳ್ಳಿ, 7 ಕಂಚು ಸೇರಿ ಒಟ್ಟು 21 ಪದಕ ಗೆದ್ದಂತಾಗಿದೆ. ಇದನ್ನೂ ಓದಿ: CWG 2022: ಚಿನ್ನದ ಪದಕ ಗೆಲ್ಲೋವರೆಗೆ ನನಗೆ ವಿಶ್ರಾಂತಿ ಇಲ್ಲ – ರಜತ ವಿಜೇತೆ ತುಲಿಕಾ ಮಾನ್

    ಇದಲ್ಲದೇ ಮೂವರು ಕುಸ್ತಿಪಟುಗಳಾದ ಬಜರಂಗ್ ಪುನಿಯಾ (ಪುರುಷರ 65 ಕೆಜಿ), ಸಾಕ್ಷಿ ಮಲಿಕ್ (ಮಹಿಳೆಯರ 62 ಕೆಜಿ) ಮತ್ತು ದೀಪಕ್ ಪುನಿಯಾ (ಪುರುಷರ 86 ಕೆಜಿ) ಫೈನಲ್‍ಗೆ ತಲುಪಿದ್ದು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    Live Tv
    [brid partner=56869869 player=32851 video=960834 autoplay=true]