Tag: WPL 2025

  • WPL 2025 | ಮುಂಬೈಗೆ 2ನೇ ಬಾರಿ ಚಾಂಪಿಯನ್‌ ಕಿರೀಟ – ಫೈನಲ್‌ನಲ್ಲಿ ಡೆಲ್ಲಿಗೆ ಹ್ಯಾಟ್ರಿಕ್‌ ಸೋಲು

    WPL 2025 | ಮುಂಬೈಗೆ 2ನೇ ಬಾರಿ ಚಾಂಪಿಯನ್‌ ಕಿರೀಟ – ಫೈನಲ್‌ನಲ್ಲಿ ಡೆಲ್ಲಿಗೆ ಹ್ಯಾಟ್ರಿಕ್‌ ಸೋಲು

    ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನ 3ನೇ ಆವೃತ್ತಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಫೈನಲ್‌ ಪಂದ್ಯದಲ್ಲಿ 8 ರನ್‌ಗಳ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ.

    ವಿಶೇಷವೆಂದ್ರೆ 2023ರ ಮೊದಲ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧವೇ ಜಯಿಸಿ ಮುಂಬೈ ಚಾಂಪಿಯನ್‌ ಆಗಿತ್ತು. ಇನ್ನೂ ಸತತ 3ನೇ ಬಾರಿ ಫೈನಲ್‌ನಲ್ಲಿ ಸೋತ ಡೆಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಜೆಮಿಮಾ ಆಸರೆಯಾಗಿದ್ದರು. ಆದ್ರೆ 11ನೇ ಓವರ್‌ನಲ್ಲಿ ಅಮೆಲಿಯಾ ಕೇರ್‌ ಬೌಲಿಂಗ್‌ಗೆ ಬ್ಯಾಕ್‌ ಟು ಬ್ಯಾಕ್‌ ಬೌಂಡರಿ ಸಿಡಿಸುತ್ತಿದ್ದ ಜೆಮಿಮಾ 4ನೇ ಎಸೆತದಲ್ಲಿ ಸುಲಭ ಕ್ಯಾಚ್‌ಗೆ ತುತ್ತಾದರು. ಅಲ್ಲದೇ 18ನೇ ಓವರ್‌ನಲ್ಲಿ ನಾಟ್‌ ಸ್ಕಿವರ್‌ ಬ್ರಂಟ್‌ ಬೌಲಿಂಗ್‌ಗೆ ಬಂದಾಗ 4ನೇ ಎಸೆತದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಮಾರಿಜಾನ್ನೆ ಕಪ್‌, 5ನೇ ಎಸೆತದಲ್ಲಿ ಶಿಖಾ ಪಾಂಡೆ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಇದು ಮುಂಬೈ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 149 ರನ್‌ ಬಾರಿಸಿತು. 150 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿ ವಿರೋಚಿತ ಸೋಲು ಕಂಡಿತು. ಮುಂಬೈ ಗೆಲುವಿನ ನಗೆ ಬೀರುತ್ತಿದ್ದಂತೆ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ನಾಯಕಿ ಹರ್ಮನ್‌ ಪ್ರೀತ್‌ ಅವರನ್ನ ಅಪ್ಪಿಕೊಂಡು ಸಂಭ್ರಮಿಸಿದರು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಮಹಿಳಾ ತಂಡ ಸ್ಫೋಟಕ ಆರಂಭ ಪಡೆಯುವ ಉತ್ಸಾಹದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗ್ಸ್‌ ಹಾಗೂ ಮಾರಿಜಾನ್ನೆ ಕಪ್‌ ಇನ್ನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಆದ್ರೆ ಜೆಮಿಮಾ 30 ರನ್‌, ಮಾರಿಜಾನ್ನೆ ಕಪ್‌ 40 ರನ್‌ (26 ಎಸೆತ, 2 ಸಿಕ್ಸರ್‌, 5 ಬೌಂಡರಿ) ಗಳಿಸಿ ಔಟಾಗುತ್ತಿದ್ದಂತೆ ಡೆಲ್ಲಿ ತಂಡದ ಗೆಲುವಿನ ಕಸನಸು ಭಗ್ನವಾಯಿತು. ಕೊನೆಯಲ್ಲಿ ನಿಕಿ ಪ್ರಯಾಸ್‌ 25 ರನ್‌ ರನ್‌ ಕೊಡುಗೆ ನೀಡಿದರು.

    ಮುಂಬೈ ಪರ ನಾಟ್‌ ಸ್ಕೀವರ್‌ ಬ್ರಂಟ್‌ 3 ವಿಕೆಟ್‌ ಕಿತ್ತರೆ, ಅಮೇಲಿಯಾ ಕೇರ್‌ 2 ವಿಕೆಟ್‌ ಹಾಗೂ ಶಭಮನ್‌ ಇಸ್ಮಾಯಿಲ್‌, ಹೇಳಿ ಮ್ಯಾಥ್ಯೂಸ್‌, ಸೈಕಾ ಇಶಾಕ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಮುಂಬೈ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ನಟಾಲಿ ಸ್ಕಿವರ್‌ ಬ್ರಂಟ್‌ ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 3ನೇ ವಿಕೆಟ್‌ಗೆ ಈ ಜೋರಿ 62 ಎಸೆತಗಳಲ್ಲಿ 89 ರನ್‌ಗಳ ಜೊತೆಯಾಟ ನೀಡಿತು. ಇದು ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾಯ್ತು. ಹರ್ಮನ್‌ ಪ್ರೀತ್‌ 44 ಎಸೆತಗಳಲ್ಲಿ ಸ್ಫೋಟಕ 66 ರನ್‌ (2 ಸಿಕ್ಸರ್‌, 9 ಬೌಂಡರಿ) ಚಚ್ಚಿದ್ರೆ, ಬ್ರಂಟ್‌ 28 ಎಸೆತಗಳಲ್ಲಿ 30 ರನ್‌ ಕೊಡುಗೆ ನೀಡಿದರು. ಇನ್ನುಳಿದ ಆಟಗಾರ್ತಿಯರು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.

    ಡೆಲ್ಲಿ ಪರ ಮಾರಿಜಾನ್ನೆ ಕಪ್‌, ಜೆಸ್‌ ಜೊನಾಸೆನ್‌, ಶ್ರೀ ಚಾರಿಣಿ ತಲಾ 2 ವಿಕೆಟ್‌ ಕಿತ್ತರೆ, ಅನಬೆಲ್‌ 1 ವಿಕೆಟ್‌ ಪಡೆದರು.

  • ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    – ಯುಪಿ ವಾರಿಯರ್ಸ್‌ಗೆ 12 ರನ್‌ಗಳ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ಸ್ನೇಹ್‌‌ ರಾಣಾ ಭರ್ಜರಿ ಸಿಕ್ಸರ್‌, ಬೌಂಡರಿ ಆಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಡಬ್ಲ್ಯೂಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಮಾರ್ಚ್‌ 11 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಬಾಕಿ ಇರುವ ಒಂದು ಪಂದ್ಯವನ್ನಾಡಿ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಅಭಿಯಾನಕ್ಕೆ ವಿದಾಯ ಹೇಳಲಿದೆ.

    ಇನ್ನೂ 2025ರ ಆವೃತ್ತಿಯ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಯುಪಿ ವಾರಿಯರ್ಸ್‌ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 42 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹ್‌ರಾಣಾ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಪ್ರದರ್ಶಿಸಿದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 28 ರನ್‌ (1, 4, 6, 6, 5nb, 6) ರನ್‌ ಸಿಡಿಸಿದರು. ಆದ್ರೆ 19ನೇ ಓವರ್‌ನ ಕೊನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ಅಲ್ಲಿಯವರೆಗೂ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದಂತಾಯ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಯುಪಿ ತಂಡ 5 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.3 ಓವರ್‌ಗಳಲ್ಲಿ 123ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಲು ಆರಂಭಿಸಿದ ಆರ್‌ಸಿಬಿ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ತಂಡ ಬೆಲೆ ತೆರಬೇಕಾಯಿತು.

    ರಿಚಾ, ರಾಣಾ ಹೋರಾಟ ವ್ಯರ್ಥ:
    ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ರಿಚಾ ಘೋಷ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರು. ಕೇವಲ 33 ಎಸೆತಗಳಲ್ಲಿ 69 ರನ್‌ (6 ಬೌಂಡರಿ, 5 ಸಿಕ್ಸ್‌) ಗಳಿಸಿ ಔಟಾದರು. ಇದರೊಂದಿಗೆ ಪೆರ್ರಿ 28 ರನ್‌, ಜಾರ್ಜಿಯಾ 17 ರನ್‌, ಶಬ್ನೇನಿ ಮೇಘನಾ 27 ರನ್‌, ಕೊನೆಯಲ್ಲಿ ಸ್ನೇಹ್‌ ರಾಣಾ 6 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು.

    WPL ಇತಿಹಾಸದಲ್ಲೇ ದಾಖಲೆಯ ರನ್‌:
    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಲು ಶುರು ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ರನ್‌ ಸಹ ಆಗಿದೆ. ಮತ್ತೊಂದೆಡೆ ಅಜೇಯ 99 ರನ್ ಗಳಿಸಿದ ಜಾರ್ಜಿಯಾ, ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.

    ಆರಂಭಿಕರಾಗಿ ಕಣಕ್ಕಿಳಿದ ಯುಪಿಗೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೊಲ್ ಸ್ಫೋಟಕ ಆರಂಭ ತಂದುಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.1 ಓವರ್‌ಗಳಲ್ಲೇ 77 ರನ್‌ಗಳ ಜೊತೆಯಾಟ ಕಟ್ಟಿದರು. ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ ಸ್ಫೋಟಕ 46 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿ ಅಬ್ಬರಿಸಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಜಾರ್ಜಿಯಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಸ್ಫೋಟಕ ಪ್ರದರ್ಶನ ನೀಡಿದ ಜಾರ್ಜಿಯಾ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು.

    56 ಎಸೆತಗಳನ್ನು ಎದುರಿಸಿದ ಜಾರ್ಜಿಯಾ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸ‌ರ್‌ನೊಂದಿಗೆ 99 ರನ್‌ಗಳಿಸಿ ಅಜೇಯರಾಗುಳಿದರು.

  • ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಲಕ್ನೋ: ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್ ಜೈಂಟ್ಸ್ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್‌ ಹೊಡೆಯಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಗೆಲುವು ಸಾಧಿಸಿತು.

    ಗುಜರಾತ್ ಪರ ಅಜೇಯ ಹರ್ಲೀನ್ ಡಿಯೋಲ್‍ 49 ಎಸೆತಗಳಲ್ಲಿ 1 ಸಿಕ್ಸರ್‌, 9 ಬೌಂಡರಿ ನೆರವಿನಿಂದ 70 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಬೆತ್ ಮೂನಿ 35 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 44 ರನ್‌ ಹೊಡೆದು ಔಟಾದರು.

    ಗುಜರಾತ್‌ 4 ರನ್‌ಗಳಿದ್ದಾಗ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಬೆತ್‌ ಮೂನಿ ಮತ್ತು ಹರ್ಲಿನ್‌ ಎರಡನೇ ವಿಕೆಟಿಗೆ 57 ಎಸೆತಗಳಲ್ಲಿ 85 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಡಿಯಾಂಡ್ರಾ ಡಾಟಿನ್ 24, ಆಶ್ಲೀ ಗಾರ್ಡ್ನರ್ 22 ರನ್‌ ಹೊಡೆದು ಔಟಾದರು.

    ಡೆಲ್ಲಿ ಪರ ಶಿಖಾ ಪಾಂಡೆ, ಜೆಸ್ ಜೊನಾಸೆನ್ ತಲಾ 2 ವಿಕೆಟ್‌, ಮಿನ್ನು ಮಣಿ 1 ವಿಕೆಟ್ ಕಬಳಿಸಿದರು.

    ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪರ ಮೆಗ್ ಲ್ಯಾನಿಂಗ್ 57 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಸ್ಫೋಟಕ 92 ರನ್ ಹೊಡೆದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಔಟಾದ ಮೆಗ್‌ ಲ್ಯಾನಿಂಗ್‌ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು.‌ ಶಫಾಲಿ ವರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿ ನೆರವಿನಿಂದ 40 ರನ್‌ ಕಲೆಹಾಕಿದರು.

    ಗುಜರಾತ್ ಪರ ಮೇಘಾ ಸಿಂಗ್ 3 ವಿಕೆಟ್‌ ಮತ್ತು ಡಿಯಾಂಡ್ರಾ ಡಾಟಿನ್ 2 ವಿಕೆಟ್ ಕಿತ್ತರು.

  • ಯುಪಿ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

    ಯುಪಿ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌

    ಲಕ್ನೋ: ಯುಪಿ ವಾರಿಯರ್ಸ್‌ (UP Warriorz) ತಂಡದ ವಿರುದ್ಧ ಅಟಲ್‌ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ ಗೆದ್ದು ಬೀಗಿದೆ.

    ಮೊದಲು ಬ್ಯಾಟ್‌ ಬೀಸಿದ ಯುಪಿ ವಾರಿಯರ್ಸ್‌ 20 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 150 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 18.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 153 ರನ್‌ ಕಲೆ ಹಾಕಿ ಜಯ ಮುಡಿಗೇರಿಸಿಕೊಂಡಿತು.

    4 ಜಯ ಸಾಧಿಸುವುದರೊಂದಿಗೆ ಮುಂಬೈ ಇಂಡಿಯನ್ಸ್‌ 8 ಅಂಕ ಪಡೆಯುವುದರ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಲ್ಲಿದ್ದರೆ ಯುಪಿ ವಾರಿಯರ್ಸ್‌ 5 ಪಂದ್ಯ ಸೋಲುವ ಮೂಲಕ 4 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ.

    ಮುಂಬೈ ಇಂಡಿಯನ್ಸ್‌ ಪರ ಹೇಲಿ ಮ್ಯಾಥ್ಯೂಸ್‌ 46 ಎಸೆತಗಳಲ್ಲಿ 2 ಸಿಕ್ಸರ್‌, 8 ಬೌಂಡರಿ ನೆರವಿನಿಂದ 68 ರನ್‌, ನ್ಯಾಟ್‌ ಸಿವರ್‌ ಬ್ರಂಟ್‌ 23 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 37 ರನ್‌ ಕಲೆ ಹಾಕಿದರು.

    ಯುಪಿ ಪರ ಗ್ರೇಸ್‌ ಹ್ಯಾರಿಸ್‌ 2 ವಿಕೆಟ್‌, ಕ್ರಾಂತಿ ಗೌಡ್ 1 ವಿಕೆಟ್‌, ಚಿನೆಲ್ಲೆ ಹೆನ್ರಿ 1 ವಿಕೆಟ್‌ ಪಡೆದರು.

    ಯುಪಿ ಪರ ಜಾರ್ಜಿಯಾ ವೋಲ್ 33 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 55 ರನ್‌, ಗ್ರೇಸ್‌ ಹ್ಯಾರಿಸ್‌ 25 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ನೆರವಿನಿಂದ 28 ರನ್‌, ತಂಡದ ನಾಯಕಿ ದೀಪ್ತಿ ಶರ್ಮಾ 25 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 27 ರನ್‌ ಕಲೆ ಹಾಕಿದರು.

    ಮುಂಬೈ ಇಂಡಿಯನ್ಸ್‌ ಪರ ಅಮೆಲಿಯಾ ಕೆರ್‌ 5 ವಿಕೆಟ್‌, ಹೇಲಿ ಮ್ಯಾಥ್ಯೂಸ್‌ 2 ವಿಕೆಟ್‌ , ನ್ಯಾಟ್‌ ಸಿವರ್‌ ಬ್ರಂಟ್‌ 1 ವಿಕೆಟ್‌, ಪರುಣಿಕಾ ಸಿಸೋಡಿಯಾ 1 ವಿಕೆಟ್‌ ಕಬಳಿಸಿದರು.

  • ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲು – ಡೆಲ್ಲಿ ಪ್ಲೇ ಆಫ್‌ಗೆ

    ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲು – ಡೆಲ್ಲಿ ಪ್ಲೇ ಆಫ್‌ಗೆ

    – ಡೆಲ್ಲಿಗೆ 9 ವಿಕೆಟ್‌ಗಳ ಗೆಲುವು
    – ಶೆಫಾಲಿ ವರ್ಮಾ, ಜೆಸ್‌ 132 ರನ್‌ಗಳ ಜೊತೆಯಾಟಕ್ಕೆ ಒಲಿದ ಜಯ 

    ಬೆಂಗಳೂರು: ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲಿನ ಅನುಭವವಾಗಿದೆ. ಶೆಫಾಲಿ ವರ್ಮಾ, ಜೆಸ್‌ 132 ರನ್‌ಗಳ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳ ಜಯದೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.

    ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತ್ತು. ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 15.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.ಇದನ್ನೂ ಓದಿ: ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಆರಂಭಿಕ ಆಟಗಾರ್ತಿಯಾಗಿ ಬಂದ ಮೆಗ್‌ ಲ್ಯಾನಿಂಗ್‌ 12 ಎಸೆತಗಳಲ್ಲಿ 2 ರನ್‌ಗೆ ಔಟಾದರು. ಎರಡನೇ ಕ್ರಮಾಂಕದಲ್ಲಿ ಬಂದ ಜೆಸ್‌ ಜೊನಾಸ್ಸೆನ್‌ ಹಾಗೂ ಶೆಫಾಲಿ ವರ್ಮಾ ಜೊತೆಗೂಡಿ 132 ರನ್‌ ನೀಡುವ ಮೂಲಕ ಗೆಲುವಿಗೆ ನೆರವಾದರು. ಜೆಸ್‌ ಜೊನಾಸ್ಸೆನ್‌ 38 ಎಸೆಗಳಲ್ಲಿ 9 ಬೌಂಡರಿ, 1 ಸಿಕ್ಸ್‌ ಬಾರಿಸಿ 61 ರನ್‌ ಹಾಗೂ ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸ್‌ ಬಾರಿಸುವ ಮೂಲಕ 80 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್‌ ಗಳಿಗೆ ಔಟ್‌ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಪೆರ್ರಿ, ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂದು ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿದರು. ಇನ್ನುಳಿದಂತೆ ರಿಚಾ ಘೋಷ್‌ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್‌ ಗಳಿಸಿದರು.

    ಆರ್‌ಸಿಬಿ ಪರ ಬೌಲಿಂಗ್‌ ಮಾಡಿದ ರೇಣುಕಾ ಸಿಂಗ್‌ 1 ವಿಕೆಟ್‌ ಪಡೆದರು. ಇನ್ನೂ ಡೆಲ್ಲಿ ಪರ ಬೌಲಿಂಗ್‌ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್‌ ಪಡೆದುಕೊಂಡರೆ. ಕಪ್ಪ್‌ 1 ವಿಕೆಟ್‌ ಪಡೆದುಕೊಂಡರು.ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

  • ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್‌

    ಬೆಂಗಳೂರು: ಎಲಿಸ್‌ ಪೆರ್ರಿಯ ಭರ್ಜರಿ ಫಿಫ್ಟಿ ಆಟಕ್ಕೆ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 148 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.

    ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತು.ಇದನ್ನೂ ಓದಿ: Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಆರ್‌ಸಿಬಿ ತಂಡದ ಸ್ಮೃತಿ ಮಂಧಾನ 8 ರನ್‌ ಗಳಿಗೆ ಔಟ್‌ ಆಗಿ ಆರಂಭದಲ್ಲಿ ನಿರಾಸೆ ಮೂಡಿಸಿದರು. ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾನಿ ವ್ಯಾಟ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಮೊದಲ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಪೆರ್ರಿ, ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂದು ಮತ್ತೆ ಫಾರ್ಮ್‌ಗೆ ಬಂದ ಪೆರ್ರಿ ಭರ್ಜರಿ 3 ಸಿಕ್ಸ್, 3 ಬೌಂಡರಿ ಬಾರಿಸಿ 47 ಎಸೆತಗಳಲ್ಲಿ 60 ರನ್‌ಗಳಿಸಿದರು. ಪೆರ್ರಿಗೆ ಜೊತೆಯಾದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿದರು.

    ಇನ್ನುಳಿದಂತೆ ರಿಚಾ ಘೋಷ್‌ 5, ಕನಿಕಾ ಅಹುಜಾ 2 ಹಾಗೂ ಜಾರ್ಜಿಯಾ 12 ರನ್‌ ಗಳಿಸಿದರು. ಡೆಲ್ಲಿ ಪರ ಬೌಲಿಂಗ್‌ ಮಾಡಿದ ಶಿಖಾ ಹಾಗೂ ಚರಣಿ ತಲಾ 2 ವಿಕೆಟ್‌ ಪಡೆದುಕೊಂಡರೆ. ಕಪ್ಪ್‌ 1 ವಿಕೆಟ್‌ ಪಡೆದುಕೊಂಡರು.ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ 6 ರೂ. ಏರಿಕೆ

  • ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌; ಡೆಲ್ಲಿ ಆಲೌಟ್‌ – ಯುಪಿಗೆ 33 ರನ್‌ಗಳ ಜಯ

    ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌; ಡೆಲ್ಲಿ ಆಲೌಟ್‌ – ಯುಪಿಗೆ 33 ರನ್‌ಗಳ ಜಯ

    * 18 ಬಾಲ್‌ಗೆ ಅರ್ಧಶತಕ ಸಿಡಿಸಿ ಮಿಂಚಿದ ಚಿನೆಲ್ಲೆ ಹೆನ್ರಿ

    ಬೆಂಗಳೂರು: ಚಿನೆಲ್ಲಿ ಹೆನ್ರಿ ಸ್ಫೋಟಕ ಅರ್ಧಶತಕ ಹಾಗೂ ಕೊನೆ ಓವರ್‌ನಲ್ಲಿ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್‌ ವಿಕೆಟ್‌ ಆಟ ಡೆಲ್ಲಿ ವಿರುದ್ಧ ಯುಪಿಗೆ 33 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿದೆ.

    20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಯುಪಿ ವಾರಿಯರ್ಸ್‌ 177 ರನ್‌ ಗಳಿಸಿತು. 178 ರನ್‌ ಗುರಿ ಬೆನ್ನತ್ತಿದ ಡೆಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. 19.3 ಓವರ್‌ಗೆ 144 ರನ್‌ ಅಷ್ಟೇ ಗಳಿಸಿ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    ಡೆಲ್ಲಿ ಪರ ಜೆಮಿಮಾ ರೋಡ್ರಿಗಸ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. 25 ರನ್‌ ಒಳಗಿನ ಎರಡಂಕಿ ಮತ್ತು ಒಂದಕಿ ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು.

    ಯುಪಿ ಪರ ಕ್ರಾಂತಿ ಗೌಡ್, ಗ್ರೇಸ್ ಹ್ಯಾರಿಸ್ ತಲಾ 4 ವಿಕೆಟ್‌ ಕಬಳಿಸಿ ಬೌಲಿಂಗ್‌ನಲ್ಲಿ ಅಬ್ಬರಿಸಿದರು. ಕೊನೆ ಓವರ್‌ನ ಮೊದಲ ಮೂರು ಬಾಲ್‌ಗಳಿಗೆ ಒಂದರ ಹಿಂದೆ ಒಂದರಂತೆ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಹ್ಯಾರಿಸ್‌ ಮಿಂಚಿದರು. ಚಿನೆಲ್ಲೆ ಹೆನ್ರಿ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಚಿನೆಲ್ಲೆ ಹೆನ್ರಿ 18 ಬಾಲ್‌ಗಳಿಗೆ ಅರ್ಧಶತಕ ಸಿಡಿಸಿ (62 ರನ್‌, 23 ಬಾಲ್‌, 8 ಸಿಕ್ಸರ್‌, 2 ಫೋರ್) ಮಿಂಚಿದರು.

    ಕಿರಣ್ ನವಗಿರೆ 17, ತಹ್ಲಿಯಾ ಮೆಕ್‌ಗ್ರಾತ್ 24 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಕ್ಯಾಪ್ಟನ್ ದೀಪ್ತಿ ಶರ್ಮಾ 13, ಸೋಫಿ ಎಕ್ಲೆಸ್ಟೋನ್ 12,‌ ಶ್ವೇತಾ ಸೆಹ್ರಾವತ್ 11 ರನ್‌ ಗಳಿಸಿದರು. ಡೆಲ್ಲಿ ಪರ ಜೆಸ್ ಜೊನಾಸ್ಸೆನ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಮರಿಜಾನ್ನೆ ಕಪ್ಪ್, ಅರುಂಧತಿ ರೆಡ್ಡಿ ತಲಾ 2 ಹಾಗೂ ಶಿಖಾ ಪಾಂಡೆ ವಿಕೆಟ್‌ ಪಡೆದರು.

  • 43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

    43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

    ಬೆಂಗಳೂರು: ಎಲ್ಲಿಸ್‌ ಪೆರ್ರಿ (Ellyse Perry) ಸ್ಫೋಟಕ ಅರ್ಧಶತಕ ನೆರವಿನಿಂದ ಮುಂಬೈಗೆ ಆರ್‌ಸಿಬಿ (RCB vs MI) 168 ರನ್‌ಗಳ ಗುರಿ ನೀಡಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿದೆ. ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ದುಕೊಂಡಿತ್ತು.

    ಆರ್‌ಸಿಬಿ ಪ್ರಮುಖ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿರುವುದು ಕಂಡುಬಂತು. ಡ್ಯಾನಿ ವ್ಯಾಟ್-ಹಾಡ್ಜ್ 9, ರಾಘ್ವಿ ಬಿಸ್ಟ್ 1, ಕನಿಕಾ ಅಹುಜಾ 3 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಸ್ಮೃತಿ ಮಂಧಾನ 26, ರಿಚಾ ಘೋಷ್ 28 ರನ್‌ ಗಳಿಸಿದರು.

    ಎಲ್ಲಿಸ್‌ ಪೆರ್ರಿ ಸ್ಫೋಟಕ ಫಿಫ್ಟಿ ಆಟವು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಅಬ್ಬರಿಸಿದ ಪೆರ್ರಿ 43 ಬಾಲ್‌ಗಳಿಗೆ 81 ರನ್‌ (11 ಫೋರ್‌, 2 ಸಿಕ್ಸರ್‌) ಚಚ್ಚಿದರು.

    ಮುಂಬೈ ಪರ ಅಮನ್‌ಜೋತ್ ಕೌರ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್‌ ಪಡೆದರು.

  • ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ

    ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ

    ಬೆಂಗಳೂರು: ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ (WPL 2025) ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮೆಟ್ರೋ ರೈಲು (Namma Metro) ಸೇವೆ ವಿಸ್ತರಿಸಲಾಗಿದೆ.

    ಫೆ.21, 22, 24, 25, 26, 27, 28 ಹಾಗೂ ಮಾ.01 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

    ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ. ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿAದ ಕೊನೆಯ ರೈಲು ಸೇವೆ ರಾತ್ರಿ 11:20 ರ ವರೆಗೆ ಹಾಗೂ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡಲಿದೆ.

    ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ಗಳು (ಎನ್‌ಸಿಎಂಸಿ) ಹಾಗೂ ಟೋಕನ್‌ಗಳನ್ನು ಬಳಸಿ ಪ್ರಯಾಣಿಸಬಹುದು. ಇದನ್ನೂ ಓದಿ: ಮೆಗ್ ಲ್ಯಾನಿಂಗ್ ಫಿಫ್ಟಿ – ಯುಪಿ ವಿರುದ್ಧ ಡೆಲ್ಲಿಗೆ 7 ವಿಕೆಟ್‌ಗಳ ರೋಚಕ ಜಯ

  • ಮೆಗ್ ಲ್ಯಾನಿಂಗ್ ಫಿಫ್ಟಿ – ಯುಪಿ ವಿರುದ್ಧ ಡೆಲ್ಲಿಗೆ 7 ವಿಕೆಟ್‌ಗಳ ರೋಚಕ ಜಯ

    ಮೆಗ್ ಲ್ಯಾನಿಂಗ್ ಫಿಫ್ಟಿ – ಯುಪಿ ವಿರುದ್ಧ ಡೆಲ್ಲಿಗೆ 7 ವಿಕೆಟ್‌ಗಳ ರೋಚಕ ಜಯ

    ವಡೋದರಾ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ (UP Warriors) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್ ಗೆದ್ದ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಡೆಲ್ಲಿಗೆ 167 ರನ್‌ಗಳ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಕೊಪ್ಪಳ| ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ನ ವೈದ್ಯೆ ಸಾವು

    ಯುಪಿ ವಾರಿಯರ್ಸ್‌ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ಟೀಂ ಕೇವಲ ಒಂದು ಬಾಲ್ ಬಾಕಿ ಇರುವಾಗಲೇ ಗುರಿ ತಲುಪಿತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ 12 ಫೋರ್ ಬಾರಿಸುವ ಮೂಲಕ 49 ಬಾಲ್‌ಗೆ 69 ರನ್ ಗಳಿಸಿದರು. ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ 42 ಬಾಲ್‌ಗೆ 65 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಸದರ್ಲ್ಯಾಂಡ್ 35 ಎಸೆತಕ್ಕೆ 42 ರನ್ ಬಾರಿಸಿದರೆ, ಕಾಪ್ 17 ಬಾಲ್‌ಗೆ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ

    ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡದ ಕಿರಣ್ ನವ್ಗಿರೆ 6 ಫೋರ್ ಹಾಗೂ 3 ಸಿಕ್ಸ್ ಬಾರಿಸಿ 27 ಎಸೆತಕ್ಕೆ 51 ರನ್ ಗಳಿಸಿ ಗಮನ ಸೆಳೆದಿದ್ದರು. ದಿನೇಶ್ ವೃಂದ 16 ರನ್ ಕಲೆ ಹಾಕಿದರೆ, ನಾಯಕಿ ದೀಪ್ತಿ ಶರ್ಮಾ ಕೇವಲ 7 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿ ನಿರಾಸೆ ಮೂಡಿಸಿದರು. ಶ್ವೇತಾ ಸೆಹ್ರಾವತ್ 37 ಹಾಗೂ ಚಿನೆಲ್ಲೆ ಹೆನ್ರಿ 33 ರನ್ ಗಳಿಸಿ ತಂಡದ ಮೊತ್ತವನ್ನು 166 ಕ್ಕೇರಿಸಿದರು. ಇದನ್ನೂ ಓದಿ: ಹೆತ್ತ ತಾಯಿಯ ಮೇಲೆ ಹಲ್ಲೆ ಆರೋಪ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲು