Tag: WPL

  • ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಮುಂಬೈ: ಹೇಲಿ ಮ್ಯಾಥ್ಯೂಸ್ (Hayley Matthews) ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ (Eliminator) ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ (Mumbai Indians) ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

    ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

    ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

    ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

    ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

     

  • WPL | ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ರೋಷಾವೇಷ – ಗೆದ್ದು ಆಟ ಮುಗಿಸಿದ ಆರ್‌ಸಿಬಿ!

    WPL | ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂದ್ಯದಲ್ಲಿ ರೋಷಾವೇಷ – ಗೆದ್ದು ಆಟ ಮುಗಿಸಿದ ಆರ್‌ಸಿಬಿ!

    – ಫೈನಲ್‌ಗೆ ಡೆಲ್ಲಿ, ಸೆಮಿಸ್‌ಗೆ ಮುಂಬೈ

    ಮುಂಬೈ: 2025ರ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಅಭಿಯಾನಕ್ಕೆ ವಿದಾಯ ಹೇಳಿದೆ.‌‌ ಸತತ 5 ಸೋಲುಗಳಿಂದ ಲೀಗ್‌ ಸುತ್ತಿನಲ್ಲೇ ಹೊರಬಿದ್ದ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಇಲ್ಲಿನ ಬ್ರಬೋರ್ನ್‌ ಸ್ಟೇಡಿಯಂನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 199 ರನ್‌ ಸಿಡಿಸಿತ್ತು. 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 188 ರನ್‌ ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ ಸೋಲೊಪ್ಪಿಕೊಂಡಿದೆ. ಆದ್ರೆ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ ತಂಡ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈಗಾಗಲೇ 10 ಅಂಕಗಳೊಂದಿಗೆ ಉತ್ತಮ ರನ್‌ರೇಟ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡ ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ.

    ಮುಂಬೈ ಪರ ನ್ಯಾಟ್‌ ಸಿವರ್‌ ಬ್ರಂಟ್‌ 35 ಎಸೆತಗಳಲ್ಲಿ 2 ಸಿಕ್ಸರ್‌, 9 ಬೌಂಡರಿ ನೆರವಿನಿಂದ 69 ರನ್‌ ಕಲೆಹಾಕಿದರು. ಹರ್ಮನ್‌ ಪ್ರೀತ್‌ ಕೌರ್‌ 18 ಎಸೆತಗಳಲ್ಲಿ 20 ರನ್‌, ಹೇಲಿ ಮ್ಯಾಥ್ಯೂಸ್‌ 16 ಎಸೆತಗಳಲ್ಲಿ 19 ರನ್‌ ಕಲೆಹಾಕಿದರು.

    ಆರ್‌ಸಿಬಿ ಪರ ಎಲಿಸ್‌ ಪೆರ್ರಿ 2 ವಿಕೆಟ್‌ , ಕಿಮ್ ಗಾರ್ತ್ 2 ವಿಕೆಟ್‌, ಸ್ನೇಹ್ ರಾಣಾ‌ 3 ವಿಕೆಟ್‌, ಜಾರ್ಜಿಯಾ 1 ವಿಕೆಟ್‌, ಹೀದರ್ ಗ್ರಹಾಂ 1 ವಿಕೆಟ್‌ ಕಬಳಿಸಿದರು.

    ಆರ್‌ಸಿಬಿ ಪರ ಸ್ಮೃತಿ ಮಂಧಾನ 37 ಎಸೆತಗಳಲ್ಲಿ 3 ಸಿಕ್ಸರ್‌, 6 ಬೌಂಡರಿ ನೆರವಿಂದ 53 ರನ್‌, ಎಲಿಸ್‌ ಪೆರ್ರಿ ಔಟಾಗದೆ 38 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ಸಿಡಿಸಿ 49 ರನ್‌, ರಿಚಾ ಘೋಷ್‌ 22 ಎಸೆತಗಳಲ್ಲಿ 1 ಸಿಕ್ಸರ್‌, 5 ಬೌಂಡರಿ ನೆರವಿಂದ 36 ರನ್‌, ಜಾರ್ಜಿಯಾ 10 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್‌ ನೆರವಿಂದ 31 ಕಲೆ ಹಾಕಿದರು.

    ಮುಂಬೈ ಪರ ಹೇಲಿ ಮ್ಯಾಥ್ಯೂಸ್‌ 2 ವಿಕೆಟ್‌, ಅಮೆಲಿಯಾ ಕೇರ್ 1 ವಿಕೆಟ್‌ ಕಬಳಿಸಿದರು.

  • ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಸೋಲು – ಆರ್‌ಸಿಬಿ ವಿರುದ್ಧ ಗುಜರಾತ್‌ಗೆ ಸುಲಭ ಜಯ

    ಬೆಂಗಳೂರು: ತವರು ನೆಲದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ನಾಯಕಿ ಆಶ್ಲೇ ಗಾರ್ಡ್ನರ್ (Ashleigh Gardner) ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ವಿರುದ್ಧ ಗುಜರಾತ್‌ ಜೈಂಟ್ಸ್‌ (Gujarat Giants) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 125 ರನ್ ‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ರನ್‌ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಹ್ಯಾಟ್ರಿಕ್‌ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲೇ ಮುಂದುವರಿದಿದೆ.

    32 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗಾರ್ಡ್ನರ್ 58 ರನ್‌ (31 ಎಸೆತ, 6 ಬೌಂಡರಿ, 3 ಸಿಕ್ಸ್‌) ಸಿಡಿಸಿದರೆ ಫೋಬೆ ಲಿಚ್‌ಫೀಲ್ಡ್ ಔಟಾಗದೇ 30 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: ಕಾರವಾರ| ಪ್ರೀತಿಸಿ ಮದುವೆಯಾಗಿದ್ದ ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ


    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು. ಸ್ಮೃತಿ ಮಂಧನಾ 10 ರನ್‌, ಡ್ಯಾನಿ ವ್ಯಾಟ್‌ 4 ರನ್‌ ಗಳಿಸಿ ಔಟಾದರು. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಪೆರ್ರಿ ಶೂನ್ಯಕ್ಕೆ ಔಟಾದರು. ರಾಘ್ವಿ ಬಿಸ್ಟ್‌ 22 ರನ್‌, ಕನಿಕಾ ಅಹುಜಾ 33 ರನ್‌, ಜಾರ್ಜಿಯಾ 20 ರನ್‌ ಕಲೆ ಹಾಕಿದರು.

    ಗುಜರಾತ್‌ ಪರ ಉತ್ತಮ ಬೌಲಿಂಗ್‌ ಮಾಡಿದ ತನುಜಾ 16 ಹಾಗೂ ಡಿಯಾಂಡ್ರಾ 31 ರನ್‌ ನೀಡಿ ತಲಾ 2 ವಿಕೆಟ್‌ ಕಿತ್ತರು. ಇನ್ನುಳಿದ ಆಶ್ಲೀ, ಕಾಶ್ವೀ ತಲಾ ವಿಕೆಟ್‌ ಪಡೆದುಕೊಂಡರು.

  • ಹೇಯ್ಲಿ ಮ್ಯಾಥ್ಯೂಸ್‌, ಬ್ರಂಟ್‌ ಫಿಫ್ಟಿ ಆಟ – ಯುಪಿ ವಿರುದ್ಧ ಮುಂಬೈಗೆ 8 ವಿಕೆಟ್‌ಗಳ ಜಯ

    ಹೇಯ್ಲಿ ಮ್ಯಾಥ್ಯೂಸ್‌, ಬ್ರಂಟ್‌ ಫಿಫ್ಟಿ ಆಟ – ಯುಪಿ ವಿರುದ್ಧ ಮುಂಬೈಗೆ 8 ವಿಕೆಟ್‌ಗಳ ಜಯ

    ಬೆಂಗಳೂರು: ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್ ಆಕರ್ಷಕ ಫಿಫ್ಟಿ ಆಟದ ನೆರವಿನಿಂದ ಯುಪಿ ವಿರುದ್ಧ ಮುಂಬೈ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. 143 ರನ್‌ ಟಾರ್ಗೆಟ್‌ ಬೆನ್ನತ್ತಿದ ಮುಂಬೈ 17 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ ಗುರಿ ತಲುಪುವಲ್ಲಿ ಯಶಕಂಡಿತು.

    ಹೇಯ್ಲಿ ಮ್ಯಾಥ್ಯೂಸ್‌ ಮತ್ತು ನ್ಯಾಟ್ ಸಿವರ್-ಬ್ರಂಟ್ ಇಬ್ಬರ ಡಬಲ್‌ ಫಿಫ್ಟಿ ಆಟ ಮುಂಬೈ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಗ್ರೇಸ್ ಹ್ಯಾರಿಸ್ (45), ದಿನೇಶ್ ವೃಂದಾ (33) ಬಿಟ್ಟರೆ ಯಾವೊಬ್ಬ ಆಟಗಾರ್ತಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕ್ಯಾಪ್ಟನ್‌ ದೀಪ್ತಿ ಶರ್ಮಾ (4) ಕೂಡ ನಿರಾಸೆ ಮೂಡಿಸಿದರು.

    ಶ್ವೇತಾ ಸೆಹ್ರಾವತ್ 19, ಉಮಾ ಚೆಟ್ರಿ 13 ರನ್‌ ಕಲೆಹಾಕಿದರು. ಕೊನೆಗೆ 9 ವಿಕೆಟ್‌ ನಷ್ಟಕ್ಕೆ ಯುಪಿ 142 ರನ್‌ ಗಳಿಸಿತು. ಮುಂಬೈ ಪರ ಬ್ರಂಟ್‌ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರು. 4 ಓವರ್‌ಗಳಿಗೆ ಕೇವಲ 18 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರು. ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ ತಲಾ 2 ಹಾಗೂ ಹೇಯ್ಲಿ ಮ್ಯಾಥ್ಯೂಸ್‌, ಅಮೆಲಿಯಾ ಕೆರ್ ತಲಾ 1 ವಿಕೆಟ್‌ ಪಡೆದರು.

  • ಡೆಲ್ಲಿ ಕ್ಯಾಪಿಟಲ್ಸ್‌ ಆಲ್‌ರೌಂಡರ್‌ ಆಟ – ಗುಜರಾತ್‌ ವಿರುದ್ಧ 6 ವಿಕೆಟ್‌ಗಳ ಜಯ

    ಡೆಲ್ಲಿ ಕ್ಯಾಪಿಟಲ್ಸ್‌ ಆಲ್‌ರೌಂಡರ್‌ ಆಟ – ಗುಜರಾತ್‌ ವಿರುದ್ಧ 6 ವಿಕೆಟ್‌ಗಳ ಜಯ

    ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ಗುಜರಾತ್‌ ಜೈಂಟ್ಸ್‌ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಬಲ ಬೌಲಿಂಗ್‌ ದಾಳಿ ತುತ್ತಾಯಿತು. 20 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ತಂಡ ಆರಂಭಿಕ ಆಘಾತ ಎದುರಿಸಿತು. ಬಳಿಕ 60 ರನ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ತೀವ್ರ ಕುಸಿತ ಕಂಡಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 127 ರನ್‌ ದಾಖಲಿಸಿತು. ಗುಜರಾತ್‌ ನೀಡಿದ 128 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ 15.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ರನ್‌ 131 ರನ್‌ ಹೊಡೆದು ಗೆಲುವು ಸಾಧಿಸಿತು.

    ಡೆಲ್ಲಿ ಪರ ಜೆಸ್ ಜೊನಾಸೆನ್ 32 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ ಸಿಡಿಸಿ 61 ರನ್‌ ಹೊಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು. ಶಫಾಲಿ ವರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ನೆರವಿನಿಂದ 44 ರನ್‌ಗಳನ್ನು ಕಲೆ ಹಾಕಿದರು.

    ಗುಜರಾತ್ ಪರ ಕಾಶ್ವೀ ಗೌತಮ್ 2 ವಿಕೆಟ್‌, ತನುಜಾ ಕನ್ವರ್ ಹಾಗೂ ಆಶ್ಲೀ ಗಾರ್ಡ್ನರ್ ತಲಾ 1 ವಿಕೆಟ್‌ ಕಬಳಿಸಿದರು.

    ಗುಜರಾತ್ ಪರ ಭಾರತಿ ಫುಲ್ಮಾಲಿ 29 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 4 ಬೌಂಡರಿಗಳ ನೆರವಿನಿಂದ 40 ರನ್‌ ಗಳಿಸಿ ಔಟಾಗದೇ ಉಳಿದರು. ಡಿಯಾಂಡ್ರಾ ಡಾಟಿನ್ 24 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 26 ರನ್‌, ತನುಜಾ ಕನ್ವರ್ 24 ಎಸೆತಗಳಲ್ಲಿ 16 ರನ್‌, ತಂಡದ ನಾಯಕಿ ಬೆತ್ ಮೂನಿ 11 ಎಸೆತಗಳಲ್ಲಿ 10 ರನ್‌ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖಾ ಪಾಂಡೆ, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್ ತಲಾ 2 ವಿಕೆಟ್‌, ಟೈಟಾಸ್ ಸಾಧು ಹಾಗೂ ಜೆಸ್ ಜೊನಾಸೆನ್ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕೊನೆಗೂ  ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೆ (ESCN) ಎನ್ನುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಈಡೇರಿದ್ದು, ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB  ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.

    ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿರಲಿಲ್ಲ.  ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

    https://twitter.com/ustadkalyan/status/1769415797804527779?t=AjwwXqpJ788e1ZePmaqcaw&s=08

    ಕಳೆದ 16 ಐಪಿಎಲ್‌ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್‌ ಪ್ರವೇಶಿಸಿದ್ದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.

    ಫೈನಲ್‌ ಪಂದ್ಯದ ವೇಳೆ ಮಾತನಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಪ್ರತಿಬಾರಿಯೂ ನಮ್ಮ ತಂಡವನ್ನು ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಹೇಳಿ ಹುರಿದುಂಬಿಸುತ್ತಿದ್ದರು. ಈ ಬಾರಿ ನಾವು ಕಪ್‌ ಗೆದ್ದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಧೋನಿ ಟ್ರೆಂಡ್‌ ಮುಂದುವರಿಸಿದ ಸ್ಮೃತಿ – ಮಂಧಾನ ನಾಯಕತ್ವಕ್ಕೆ ಭೇಷ್‌ ಅಂದ್ರು ಫ್ಯಾನ್ಸ್‌!

    ನಾಯಕಿ ಸ್ಮೃತಿ ಮಂಧನಾ(Smriti Mandhana), ಪ್ರತಿಬಾರಿ ಅಭಿಮಾನಿಗಳು “ಈ ಸಲ ಕಪ್‌ ನಮ್ದೇ” ಎಂದು ಹೇಳುತ್ತಿದ್ದರು. ಆದರೆ ಈ ಬಾರಿ “ಈ ಸಲ ಕಪ್‌ ನಮ್ದು” ಎಂದು ಹೇಳಬಹುದು ಎಂದು ಸಂತಸ ವ್ಯಕ್ತಪಡಿಸಿದರು.

  • ಪೆರ್ರಿ ಆಲ್‌ರೌಂಡರ್‌ ಆಟ – ಮುಂಬೈ ವಿರುದ್ಧ ಜಯ, ಪ್ಲೇ ಆಫ್‌ಗೆ ಆರ್‌ಸಿಬಿ

    ಪೆರ್ರಿ ಆಲ್‌ರೌಂಡರ್‌ ಆಟ – ಮುಂಬೈ ವಿರುದ್ಧ ಜಯ, ಪ್ಲೇ ಆಫ್‌ಗೆ ಆರ್‌ಸಿಬಿ

    – 6 ವಿಕೆಟ್‌ ಕಿತ್ತು ದಾಖಲೆ ಬರೆದ ಪೆರ್ರಿ
    – 8 ಬೌಲರ್‌ಗಳನ್ನು ಕಣಕ್ಕೆ ಇಳಿಸಿದ ಆರ್‌ಸಿಬಿ

    ನವದೆಹಲಿ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಎಲ್ಲಿಸ್ ಪೆರ್ರಿ (Ellyse Perry) ಅವರ ಭರ್ಜರಿ ಆಟದ ನೆರವಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ (WPL) ಆರ್‌ಸಿಬಿ(RCB) ತಂಡ ಮುಂಬೈ ಇಂಡಿಯನ್ಸ್‌(MI) ವಿರುದ್ಧ 7 ವಿಕೆಟ್‌ ಜಯ ಸಾಧಿಸಿ ಪ್ಲೇಆಫ್‌ಗೆ (Playoff ) ಅರ್ಹತೆ ಪಡೆದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 19 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನೆಟ್ಟಿದ ಆರ್‌ಸಿಬಿ 15 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 115 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಡಬ್ಲ್ಯೂಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಲ್ಲಿಯವರೆಗೆ  ಮುಂಬೈ ವಿರುದ್ಧ ಸತತವಾಗಿ ಸೋತಿದ್ದ ಆರ್‌ಸಿಬಿ ಈ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಸಂಭ್ರಮಿಸಿತು.

    39 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಎಲ್ಲಿಸ್‌ ಪೆರ್ರಿ ಮತ್ತು ರಿಚಾ ಘೋಷ್‌ (Richa Ghosh) ಮುರಿಯದ ನಾಲ್ಕನೇ ವಿಕೆಟಿಗೆ 53 ಎಸೆತಗಳಲ್ಲಿ 76 ರನ್‌ ಜೊತೆಯಾಟವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಎಲ್ಲಿಸ್‌ ಪೆರ್ರಿ ಔಟಾಗದೇ 40 ರನ್‌ (38 ಎಸೆತ, 5 ಬೌಂಡರಿ, 1 ಸಿಕ್ಸರ್‌), ರಿಚಾ ಘೋಷ್‌ ಔಟಾಗದೇ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಮೊದಲು ಬ್ಯಾಟ್‌ ಮುಂಬೈ 1 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ ಸಜಿವನ್‌ ಸಂಜನಾ ಔಟಾದ ಬೆನ್ನಲ್ಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur)  ಶೂನ್ಯಕ್ಕೆ ಬೌಲ್ಡ್‌ ಆದರು. ಮಧ್ಯಮ ಕ್ರಮಾಂಕದಲ್ಲಿ ಯಾರಿಂದಲೂ ಉತ್ತಮ ಹೋರಾಟ ಬರಲಿಲ್ಲ. ಕೊನೆಯಲ್ಲಿ ಪ್ರಿಯಾಂಕಾ ಬಲ 19 ರನ್‌ ಹೊಡೆಯುವ ಮೂಲಕ ತಂಡದ ಮೊತ್ತ 100 ರನ್‌ಗಳ ಗಡಿದಾಟಿತು.

    ಬೌಲಿಂಗ್‌ನಲ್ಲಿ ದಾಖಲೆ:
    ಈ ಪಂದ್ಯದಲ್ಲಿ 6 ವಿಕೆಟ್‌ ಪಡೆಯುವ ಮೂಲಕ ಡಬ್ಲ್ಯೂಪಿಎಲ್‌ ಟೂರ್ನಿಯಲ್ಲಿ 6 ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪೆರ್ರಿ ಪಾತ್ರವಾಗಿದ್ದಾರೆ. ಐದನೆಯವರಾಗಿ ಬೌಲಿಂಗ್‌ಗೆ ಇಳಿದ ಪೆರ್ರಿ ಕೇವಲ 15 ರನ್‌ ನೀಡಿ ಮುಂಬೈ ತಂಡವನ್ನು ಕಟ್ಟಿಹಾಕಿದರು.

    8 ಬೌಲರ್‌ ಪ್ರಯೋಗ:
    ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಯ 8 ಮಂದಿ ಬೌಲಿಂಗ್‌ ಮಾಡಿದ್ದು ವಿಶೇಷವಾಗಿತ್ತು. ಅನುಭವಿ ಸ್ಪಿನ್ನರ್‌ ಶ್ರೇಯಾಂಕ ಪಾಟೀಲ್‌ 8ನೇಯವರಾಗಿ ಬೌಲ್‌ ಮಾಡಿದ್ದರು.

    ಆರ್‌ಸಿಬಿ ಎದುರಾಳಿ ಯಾರು?
    ಅಂಕಪಟ್ಟಿಯಲ್ಲಿ ಡೆಲ್ಲಿ ಮತ್ತು ಮುಂಬೈ ತಲಾ 10 ಅಂಕ ಪಡೆದಿದೆ. ಬುಧವಾರ ಡೆಲ್ಲಿ ಮತ್ತು ಗುಜರಾತ್‌ ಮಧ್ಯೆ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಡೆಲ್ಲಿ ಜಯಗಳಿಸಿದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

    ಒಂದು ವೇಳೆ ಗುಜರಾತ್‌ ಭಾರೀ ಅಂತರದಿಂದ ಗೆದ್ದರೆ ಮುಂಬೈ ಇಂಡಿಯನ್ಸ್‌ ರನ್‌ ರೇಟ್‌ ಉತ್ತಮವಾಗಿದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಮುಂಬೈ ಫೈನಲ್‌ ಪ್ರವೇಶಿಸಲಿದೆ.

    ಆರ್‌ಸಿಬಿ ಈಗ 8 ಪಂದ್ಯಗಳಿಂದ 8 ಅಂಕ ಗಳಿಸಿದ್ದು ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಎಲಿಮಿನೇಟರ್‌ ಪಂದ್ಯವಾಡಲಿದೆ. ಒಂದು ವೇಳೆ ಡೆಲ್ಲಿ ವಿರುದ್ಧ ಪಂದ್ಯವನ್ನು ಗೆದ್ದು ಉತ್ತಮ ರನ್‌ ರೇಟ್‌ ಹೊಂದಿದ್ದರೆ ಆರ್‌ಸಿಬಿಗೆ ನೇರವಾಗಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಶುಕ್ರವಾರ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿದರೆ ಮಾತ್ರ ಫೈನಲ್‌ ಪ್ರವೇಶಿಸಲಿದೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ

  • ಮುಂಬೈಗೆ 55 ರನ್ ಭರ್ಜರಿ ಜಯ, ಪ್ಲೇ ಆಫ್‌ ಪ್ರವೇಶ

    ಮುಂಬೈಗೆ 55 ರನ್ ಭರ್ಜರಿ ಜಯ, ಪ್ಲೇ ಆಫ್‌ ಪ್ರವೇಶ

    ಮುಂಬೈ: ನಾಯಕಿ ಹರ್ಮನ್ ಪ್ರೀತ್‍ಕೌರ್ (Harmanpreet Kaur) ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್ ಆಲ್‍ರೌಂಡರ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indian) ತಂಡವು ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 55 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಗ್ರಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದೆ.

    ಮಂಗಳವಾರ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತ್ತು. 163 ರನ್ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಸೋಲೊಪ್ಪಿಕೊಂಡಿತು.

    ತನ್ನ ಸರದಿ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸೋಫಿಯಾ ಡಂಕ್ಲೆ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ತಂಡಕ್ಕೆ ಆಘಾತ ನೀಡಿದರು. ನಂತರ ಕಣಕ್ಕಿಳಿದವರಲ್ಲಿ ಸಬ್ಬಿನೇನಿ ಮೇಘನಾ 16 ರನ್, ಹರ್ಲೀನ್ ಡಿಯೋಲ್ 22 ರನ್, ಸ್ನೇಹ ರಾಣಾ 20 ರನ್ ಹಾಗೂ ಸುಷ್ಮಾ ವರ್ಮಾ 18 ರನ್ ಗಳಿಸಿದರು. ಅಗ್ರಕ್ರಮಾಂಕದ ಬ್ಯಾಟರ್‍ಗಳ ಕಳಪೆ ಪ್ರದರ್ಶನದಿಂದಾಗಿ ತಂಡ ಸೋಲೊಪ್ಪಿಕೊಂಡಿತು.

    ಅಂತಿಮವಾಗಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್‍ಗಳಷ್ಟೇ ಗಳಿಸಿತು.

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತೊಮ್ಮೆ ಭರ್ಜರಿ ಅರ್ಧಶತಕ ಬಾರಿಸಿದರು. 30 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‍ಗಳೊಂದಿಗೆ 51 ರನ್ ಬಾರಿಸಿದರು. ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ 37 ಎಸೆತಗಳಲ್ಲಿ 44 ರನ್ ಹಾಗೂ ಅಮೇಲಿಯಾ ಕೆರ್ 19 ರನ್ ಗಳಿಸಿ ತಂಡದ ಮೊತ್ತ 160 ರನ್‍ಗಳ ಗಡಿ ದಾಟಲು ನೆರವಾದರು.

    ಬ್ರಂಟ್ ಆಲ್‍ರೌಂಡರ್ ಆಟ:
    ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಟ್ ಸ್ಕಿವರ್ ಬ್ರಂಟ್ (Nat Sciver Brunt) ಬೌಲಿಂಗ್‍ನಲ್ಲೂ ಕೈಚಳಕ ತೋರಿದರು. 31 ಎಸೆತಗಳಲ್ಲಿ 36 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚಿದ್ದ ಬ್ರಂಟ್, ಬೌಲಿಂಗ್‍ನಲ್ಲಿ 4 ಓವರ್‍ಗಳಿಗೆ 21 ರನ್ ನೀಡಿ 3 ವಿಕೆಟ್ ಕಿತ್ತರು. ಹೇಲಿ ಮ್ಯಾಥಿವ್ಸ್ ಸಹ 3 ವಿಕೆಟ್ ಪಡೆದು ಮಿಂಚಿದರೆ, ಅಮೆಲಿಯಾ ಕೆರ್ 2 ವಿಕೆಟ್ ಹಾಗೂ ಇಸ್ಸಿ ವಾಂಗ್ ಒಂದು ವಿಕೆಟ್‍ಗೆ ತೃಪ್ತಿಪಟ್ಟುಕೊಂಡರು.

    ಬೌಲಿಂಗ್‍ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಶ್ಲೀಗ್ ಗಾಡ್ರ್ನರ್ (Ashleigh Gardner) 4 ಓವರ್‌ಗಳಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಉಳಿದಂತೆ ಕಿಮ್ ಗಾರ್ಥ್, ಸ್ನೇಹ್ ರಾಣಾ ಮತ್ತು ತನುಜಾ ಕನ್ವರ್ ತಲಾ ಒಂದೊಂದು ವಿಕೆಟ್ ಪಡೆದರು.

  • ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

    ಶಫಾಲಿ, ಲ್ಯಾನಿಂಗ್‌ ಬೆಂಕಿ ಬ್ಯಾಟಿಂಗ್‌ – ಡೆಲ್ಲಿಗೆ 60 ರನ್‌ಗಳ ಭರ್ಜರಿ ಜಯ; RCBಗೆ ಹೀನಾಯ ಸೋಲು

    ಮುಂಬೈ: ಶಫಾಲಿ ವರ್ಮ, ಮೆಗ್‌ ಲ್ಯಾನಿಂಗ್‌ ಸಿಕ್ಸರ್‌, ಬೌಂಡರಿಗಳ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮಹಿಳಾ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮಹಿಳಾ ತಂಡದ ವಿರುದ್ಧ 60 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೊಚ್ಚಲ ಡಬ್ಲ್ಯೂಪಿಎಲ್‌ (WPL) ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ಆರ್‌ಸಿಬಿ ತಂಡ ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ.

    ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಬರೋಬ್ಬರಿ 51 ಬೌಂಡರಿ, 10 ಸಿಕ್ಸರ್‌ ಗಳು ದಾಖಲಾದವು. ಡೆಲ್ಲಿ ಕ್ಯಾಪಿಟಲ್ಸ್‌ ಪರ 30 ಬೌಂಡರಿ 7 ಸಿಕ್ಸರ್‌ಗಳು ಸಿಡಿದರೆ, ಆರ್‌ಸಿಬಿ ಪರ 21 ಬೌಂಡರಿ 3 ಸಿಕ್ಸರ್‌ ದಾಖಲಾಯಿತು. ಮಹಿಳಾ ಮಣಿಗಳು ಪುರುಷರಿಗೇನೂ ಕಮ್ಮಿಯಿಲ್ಲ ಎನ್ನುವಂತೆ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸುತ್ತಾ ಆರ್ಭಟ ಮೆರೆದರು.

    ಸೂಪರ್‌ ಸಂಡೆ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 223 ರನ್‌ ಬಾರಿಸಿತು. ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಗಿ, 60 ರನ್‌ಗಳಿಂದ ಸೋಲು ಕಂಡಿತು.

    ನಾಯಕಿ ಮಂದಾನ 35 ರನ್‌, ಎಲ್ಲಿಸ್‌ ಪೆರ್ರಿ 31 ರನ್‌ ಹಾಗೂ ಹೀದರ್ ನೈಟ್ 34 ರನ್‌ ಗಳಿಸಿದರು. ನಂತರ ಡೆಲ್ಲಿ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ ತಂಡ ಒಂದೊಂದೇ ವಿಕೆಟ್‌ ಕಳೆದುಕೊಂಡಿತು. ಪರಿಣಾಮ 163 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲನುಭವಿಸಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ತಾರಾ ನಾರಿಸ್ 5 ವಿಕೆಟ್ ಪಡೆದು ಮಿಂಚಿದರೆ, ಆಲಿಸ್ ಕ್ಯಾಪ್ಸಿ 2 ವಿಕೆಟ್‌, ಶಿಖಾ ಪಾಂಡೆ ಒಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಮಹಿಳಾ ಮಣಿಗಳು ಆರ್‌ಸಿಬಿ ಬೌಲರ್ ಗಳನ್ನು ಬೆಂಡೆತ್ತಿದರು. ಮೊದಲ ವಿಕೆಟ್‌ ಜೊತೆಯಾಟಕ್ಕೆ 14.3 ಓವರ್ ಗಳಲ್ಲಿ 162 ರನ್‌ಗಳ ಬೃಹತ್ ಮೊತ್ತ ಪೇರಿಸಿದರು. ನಂತರ ಬಂದ ಮರಿಜಾನ್ನೆ ಕಾಪ್, ಜೆಮಿಮಾ ರೋಡ್ರಿಗಸ್‌ ಸಹ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದರು.

    186.67 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಶಫಾಲಿ ವರ್ಮಾ 45 ಎಸೆತಗಳಲ್ಲಿ ಭರ್ಜರಿ 84 ರನ್‌ (10 ಬೌಂಡರಿ, 4 ಸಿಕ್ಸರ್) ಚಚ್ಚಿದರೆ, ನಾಯಕಿ ಮೆಗ್ ಲ್ಯಾನಿಂಗ್ 43 ಎಸೆತಗಳಲ್ಲಿ 14 ಬೌಂಡರಿ ಸಹಿತ 72 ರನ್ ಬಾರಿಸಿದರು.

    ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಔಟಾದ ನಂತರ ಬಂದ ಮರಿಜಾನ್ನೆ ಕಾಪ್ ಮತ್ತು ಜೆಮಿಮಾ ರೊಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮರಿಜಾನ್ನೆ ಕಾಪ್ 17 ಎಸೆತಗಳಲ್ಲಿ ಸ್ಪೋಟಕ 39 ರನ್‌ (3 ಬೌಂಡರಿ 3 ಸಿಕ್ಸರ್) ಗಳಿಸಿದರೇ, ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 22 ರನ್ ಗಳಿಸಿ ಮಿಂಚಿದರು. ಆರ್​​ಸಿಬಿ ಪರವಾಗಿ ಹೀಥರ್ ನೈಟ್ ಮಾತ್ರ 2 ವಿಕೆಟ್ ಪಡೆದರು.

  • ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ಕೌರ್​ ನಾಯಕಿ

    ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್‌ ಕೌರ್​ ನಾಯಕಿ

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ​ಲೀಗ್​ಗೆ ಪೂರ್ವಭಾವಿಯಾಗಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್​ ಕೌರ್​ ಅವರನ್ನು ನಾಯಕಿಯನ್ನಾಗಿ ನೇಮಿಸಲಾಗಿದೆ.

    ಇತ್ತೀಚೆಗಷ್ಟೇ 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್​ ಎನಿಸಿದ್ದ ಹರ್ಮನ್‌ ​ಪ್ರೀತ್​, 20ನೇ ವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಬಳಿಕ ಕಳೆದೊಂದು ದಶಕದಿಂದ ಎಲ್ಲ ಕ್ರಿಕೆಟ್​ ಪ್ರಕಾರದಲ್ಲೂ ಭಾರತ ತಂಡಕ್ಕೆ ಆಧಾರ ಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ. ಮಹಿಳೆಯರ ವಿಶ್ವಕಪ್​ನಲ್ಲಿ ನಾಕೌಟ್ ​ಹಂತದ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್​ (171*) ಸಿಡಿಸಿದ ದಾಖಲೆ ಜತೆಗೆ ನಾಯಕಿಯಾಗಿ ಉತ್ತಮ ಗೆಲುವಿನ ದಾಖಲೆಯನ್ನೂ ಹೊಂದಿದ್ದಾರೆ.

    ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮನ್‌ಪ್ರೀತ್‌ ​ಕೌರ್​‌ ಅವರ ಹೆಸರನ್ನು ಘೋಷಿಸಲು ಅಪಾರ ಖುಷಿಯಾಗುತ್ತಿದೆ. ರಾಷ್ಟ್ರೀಯ ತಂಡದ ನಾಯಕಿಯಾಗಿ ಅವರು ಭಾರತೀಯ ಮಹಿಳಾ ತಂಡಕ್ಕೆ ಕೆಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ತರಬೇತುದಾರರಾದ ಚಾರ್ಲೋಟ್ ​ಮತ್ತು ಜೂಲನ್​ಬೆಂಬಲದೊಂದಿಗೆ ಅವರು ಮಹಿಳಾ ತಂಡಕ್ಕೆ ಶ್ರೇಷ್ಠ ಕ್ರಿಕೆಟ್ ​ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ಎಂಐ ತಂಡದ ಹೊಸ ಅಧ್ಯಾಯದ ಆರಂಭವನ್ನು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಅಭಿಮಾನಿಗಳ ನೆಚ್ಚಿನ ಎಂಐ ಬ್ರ್ಯಾಂಡ್​ನ ನಿರ್ಭೀತಿ ಮತ್ತು ಮನರಂಜನೆಯ ಆಟವನ್ನು ನಮ್ಮ ಹುಡುಗಿಯರೂ ಆಡುವುದನ್ನು ನೋಡಲು ನಾನು ಕಾತರಗೊಂಡಿದ್ದೇನೆ. ಮುಂಬರುವ ಉತ್ಸಾಹಿ ಪ್ರಯಣಕ್ಕೆ ಹರ್ಮನ್‌​ಪ್ರೀತ್​ ಕೌರ್​ ಮತ್ತು ಎಂಐ ತಂಡಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ ಎಂದು ನೀತಾ ಎಂ. ಅಂಬಾನಿ ಹೇಳಿದ್ದಾರೆ.

    HARMAN

    ಮುಖ್ಯ ಕೋಚ್ ​ಚಾರ್ಲೋಟ್​ ಎಡ್ವರ್ಡ್ಸ್​ಎದುರಾಳಿಯಾಗಿ ಮತ್ತು ಮೆಂಟರ್​ ಜೂಲನ್​ ಗೋಸ್ವಾಮಿ ಸಹ-ಆಟಗಾರ್ತಿ ಹಾಗೂ ನಾಯಕಿಯಾಗಿ ಆಡಿದ ಅನುಭವವನ್ನು ಹರ್ಮನ್‌​ಪ್ರೀತ್ ​ಕೌರ್ ​ಹೊಂದಿದ್ದಾರೆ. ವಿದೇಶಿ ಟಿ20 ಲೀಗ್​ಗಳಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟರ್​ ಎನಿಸಿರುವ ಹರ್ಮನ್‌​ಪ್ರೀತ್​, ಭಾರತೀಯ ಕ್ರಿಕೆಟ್​ನ ಶ್ರೇಷ್ಠತೆಯನ್ನು ವಿಶ್ವಕ್ಕೆ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಾಗತಿಕ ಮಹಿಳಾ ಕ್ರಿಕೆಟ್​ನ ಕೆಲ ಅತ್ಯುತ್ತಮ ತಾರೆಯರು ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಈಗ ಹರ್ಮನ್‌ಪ್ರೀತ್‌ ​ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಮುಂಬೈ ಇಂಡಿಯನ್ಸ್ ತರಬೇತಿ ಬಳಗದಲ್ಲಿ ಚಾರ್ಲೋಟ್​ ಎಡ್ವರ್ಡ್ಸ್​(ಮುಖ್ಯ ಕೋಚ್), ಜೂಲನ್​ಗೋಸ್ವಾಮಿ (ಮೆಂಟರ್, ಬೌಲಿಂಗ್​ಕೋಚ್), ದೇವಿಕಾ ಪಾಲ್ಶಿಕರ್​ (ಬ್ಯಾಟಿಂಗ್ ​ಕೋಚ್), ಲೈಡಿಯಾ ಗ್ರೀನ್​ವೇ (ಫೀಲ್ಡಿಂಗ್​ಕೋಚ್) ಇದ್ದಾರೆ. ಕೌರ್​ ಸಾರಥ್ಯದ ತಂಡದಲ್ಲಿ ನಾಟ್​ಸಿವರ್​-ಬ್ರಂಟ್​, ಅಮೆಲಿಯಾ ಕೆರ್​, ಪೂಜಾ ವಸ್ತ್ರಾಕರ್​, ಯಸ್ತಿಕಾ ಭಾಟಿಯಾ, ಹೀದರ್​ಗ್ರಹಾಂ, ಇಸಬೆಲ್​ವೊಂಗ್​, ಅಮನ್​ಜೋತ್​ಕೌರ್​, ಧಾರಾ ಗುಜ್ಜರ್​, ಶೇಕಾ ಇಶಾಕ್​, ಹ್ಯಾಲಿ ಮ್ಯಾಥ್ಯೂಸ್​, ಕ್ಲೋಯಿ ಟ್ರೈಯಾನ್​, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್​, ನೀಲಮ್​ಬಿಸ್ಟ್​, ಜಿಂಟಿಮನಿ ಕಲಿಟಾ ಆಟಗಾರ್ತಿಯರಾಗಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯದಲ್ಲಿ ಮಾರ್ಚ್​ 4ರಂದು ಮುಂಬೈನ ಡಿವೈ ಪಾಟೀಲ್​ಕ್ರೀಡಾಂಗಣದಲ್ಲಿ ಗುಜರಾತ್​ ಜೈಂಟ್ಸ್ ತಂಡವನ್ನು ಎದುರಿಸಲಿದೆ.