Tag: worms

  • ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ತುಮಕೂರು: ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ದಾಸ್ತಾನಿನಲ್ಲಿ ಹುಳಗಳನ್ನ ಕಂಡು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಕಂಗಾಲಾಗಿದ್ದಾರೆ.

    ತುರುವೇಕೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹಾವಾಳ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಆಹಾರ ಸರಬರಾಜು ದಾಸ್ತಾನು ಮಳಿಗೆಗೆ ಶಾಸಕ ಮಸಾಲೆ ಜಯರಾಮ್ ಧಿಡೀರ್ ಭೇಟಿ ಕೊಟ್ಟಾಗ ಈ ಅವ್ಯವಸ್ಥೆ ಬೆಳಕಿಗೆ ಬಂದಿದೆ.

    ಅಕ್ಕಿ ಮತ್ತು ರಾಗಿ ದಾಸ್ತಾನಿನಲ್ಲಿ ಬರೀ ಹುಳಗಳೇ ತುಂಬಿಕೊಂಡಿತ್ತು. ಹೀಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ಶಾಸಕರು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಹಾರ ಪೂರೈಕೆ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಅಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಸ್ಥಳದಲ್ಲಿಯೇ ಸಚಿವ ಮಾಧುಸ್ವಾಮಿ ಅವರಿಗೆ ಕರೆಮಾಡಿ ಒತ್ತಾಯಸಿದರು.

  • ಟೊಮೆಟೋ ಸಾಸ್ ಅಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಟೊಮೆಟೋ ಸಾಸ್ ಅಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ತುಮಕೂರು: ಹೋಟೆಲ್, ರೆಸ್ಟೋರೆಂಟ್‍ಗೆ ಹೋದಾಗ ಅಲ್ಲಿ ಕೊಡೋ ಸಾಸ್ ಬಳಸೋ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಯಾಕಂದ್ರೆ ನಾಲಗೆಗೆ ಟೇಸ್ಟಿ ಆಗಿರೋ ಸಾಸ್‍ನಲ್ಲಿ ಹುಳಗಳದ್ದೇ ರಾಶಿ ಕಂಡುಬಂದಿದೆ.

    ಸಾಸ್ ತುಂಬಿಸಿಟ್ಟಿದ್ದ ಕಂಟೈನರ್ ಗಳಲ್ಲಿ ಹುಳ-ಹುಪ್ಪಟ್ಟೆಗಳ ರಾಶಿ ಕಂಡಿದೆ. ಹುಳಗಳಿರುವ ಈ ಸಾಸನ್ನೇ ಬಾಟಲ್‍ಗಳಲ್ಲಿ ತುಂಬಿ ಸಪ್ಲೈ ಮಾಡ್ತಾರೆ. ಈ ಸಾಸನ್ನೇ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಬಾಯಿ ಚಪ್ಪರಿಸೋಕೆ ಕೊಡ್ತಾರೆ. ಇನ್ನು ಸಾಸ್ ರೆಡಿ ಮಾಡೋ ಜಾಗ ನೋಡಿದ್ರೆ ಊಟ ಮಾಡೋಕೂ ಮನಸ್ಸಾಗಲ್ಲ.

    ಇಂಥದ್ದೊಂದು ಸಾಸ್ ತಯಾರಾಗ್ತಿರೋದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ. ಇಲ್ಲಿ ರಂಜಿತಾ ಎಂಟರ್ ಪ್ರೈಸಸ್ ಕಂಪನಿ ಗುಡ್ ಅಂಡ್ ಫ್ರೆಶ್ ಅನ್ನೋ ಹೆಸರಲ್ಲಿ ಸಾಸ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಟೊಮೆಟೋ ಬಳಸುವುದರ ಬದಲು ಮೈದಾ ಹಿಟ್ಟು, ಕೆಂಪು ಬಣ್ಣ ಸೇರಿಸಿ ಸಾಸ್ ರೆಡಿ ಮಾಡ್ತಾರೆ.

    ಹಗಲು ಹೊತ್ತಲ್ಲಿ ಫ್ಯಾಕ್ಟರಿ ಓಪನ್ ಮಾಡಿದ್ರೆ ಬಣ್ಣ ಬಯಲಾಗುತ್ತೆ ಅಂತಾ ರಾತ್ರಿ ಹೊತ್ತು ಸಾಸ್ ರೆಡಿ ಮಾಡಿ ಬಾಟಲ್‍ಗೆ ತುಂಬಿಸ್ತಾರೆ. ಫ್ಯಾಕ್ಟರಿಯ ಒಳಗೆ ಹೋಗಿ ನೋಡಿದ್ರೆ ಸಾಸ್ ತುಂಬಿದ್ದ ಕಂಟೈನರ್‍ಗಳಲ್ಲಿ ಹುಳುಗಳದ್ದೇ ರಾಶಿ ಕಂಡುಬಂದಿದೆ.

     

  • ಹುಟ್ಟುಹಬ್ಬಕ್ಕೆಂದು ತೆಗೆದುಕೊಂಡು ಹೋಗಿದ್ದ ಕೇಕ್‍ನಲ್ಲಿ ಹುಳು

    ಹುಟ್ಟುಹಬ್ಬಕ್ಕೆಂದು ತೆಗೆದುಕೊಂಡು ಹೋಗಿದ್ದ ಕೇಕ್‍ನಲ್ಲಿ ಹುಳು

    ಮೈಸೂರು: ಪೇಸ್ಟ್ರಿ ಪ್ರಿಯರೇ ಎಚ್ಚರ. ಕೇಕ್ ತಿನ್ನೋ ಮುನ್ನ ಎಚ್ಚರ ವಹಿಸಬೇಕು. ಕೆಲವೊಮ್ಮೆ ನೀವು ತಿನ್ನೋ ಕೇಕ್ ನಲ್ಲಿ ಸಿಹಿ ಜೊತೆ ಹುಳು ಕೂಡ ಇರುತ್ತೆ. ಮೈಸೂರಿನ ಸಿದ್ದಪ್ಪ ವೃತ್ತದಲ್ಲಿನ ಪೇಸ್ಟ್ರಿ ವರ್ಲ್ಡ್ ಬೇಕರಿಯಲ್ಲಿ ಇಂತಹ ಹುಳುವಿನ ಕೇಕ್ ಸಿಕ್ಕಿದೆ.

    ಹುಳಗಳು ಅಲ್ಲದೇ ಬೇಕರಿಯಲ್ಲಿರುವ ಕೇಕ್‍ನಲ್ಲೇ ನೊಣಗಳು ಮುತ್ತಿಕೊಂಡಿವೆ. ಮೈಸೂರಿನ ಯುವಕನೊಬ್ಬ ತಮ್ಮನ ಹುಟ್ಟುಹಬ್ಬಕ್ಕಾಗಿ ಇಲ್ಲಿಂದ ಕೇಕ್ ತೆಗೆದುಕೊಂಡು ಹೋಗಿದ್ದರು. ಕೇಕ್ ಕತ್ತರಿಸಿದ್ದಾಗ ಕೇಕ್ ಒಳಗಡೆ ಹುಳ ಇರುವುದು ಪತ್ತೆಯಾಗಿದೆ.

    ನನ್ನ ತಮ್ಮನ ಹುಟ್ಟುಹಬ್ಬಕ್ಕೆಂದು ರಾತ್ರಿ 12 ಗಂಟೆಗೆ ಕೇಕ್ ಕಟ್ ಮಾಡಿಸಬೇಕು ಅಂತ ಕೇಕ್ ತೆಗೆದುಕೊಂಡು ಹೋಗಿದ್ದೆವು. ಕೇಕ್ ತಿಂದ ನಂತರ ಹೊಟ್ಟೆನೋವು ಕಾಣಿಸಿಕೊಳ್ತು. ನಂತರ ಕೇಕ್ ನೋಡಿದಾಗ ಅದರಲ್ಲಿ ಬೂಸ್ಟ್ ಬಂದಿತ್ತು ಎಂದು ಯುವಕ ಹೇಳಿದ್ದಾರೆ.

    ತಕ್ಷಣ ಯುವಕ ಆ ಕೇಕನ್ನು ಬೇಕರಿಗೆ ತಂದು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಇದು ನಮ್ಮ ಬೇಕರಿ ಕೇಕ್ ಅಲ್ಲ ಎಂದಿದ್ದ ಅಂಗಡಿಯವರು ನಂತರ ತಪ್ಪು ಒಪ್ಪಿಕೊಂಡಿದ್ದಾರೆ.

  • ಬೇಕರಿ ಕೇಕ್ ನಲ್ಲಿ ಹುಳ-ಹುಪ್ಪಟೆ, ಗ್ರಾಹಕ ಕಂಗಾಲು

    ಬೇಕರಿ ಕೇಕ್ ನಲ್ಲಿ ಹುಳ-ಹುಪ್ಪಟೆ, ಗ್ರಾಹಕ ಕಂಗಾಲು

    ಮಂಗಳೂರು: ಬೇಕರಿಗಳಲ್ಲಿ ಖರೀದಿಸಿ ತಂದ ಪ್ಯಾಕೇಜ್ಡ್ ಉತ್ಪನ್ನಗಳನ್ನ ಒಂದೆರಡು ದಿನವಾದ್ರೂ ಮನೆಯಲ್ಲಿಟ್ಟುಕೊಂಡು ಸೇವಿಸಬಹುದು ಅಂದ್ಕೊಂಡಿರ್ತೀವಿ. ಆದ್ರೆ ಗ್ರಾಹಕರೊಬ್ಬರು ಖರೀದಿಸಿದ ಕಪ್ ಕೇಕ್ ಪ್ಯಾಕೆಟ್‍ನಲ್ಲಿ ಹುಳ ಕಂಡುಬಂದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಉರ್ವ ಸ್ಟೋರ್ ಬಳಿಯಿರುವ ಬೇಕರಿಯಲ್ಲಿ ಗ್ರಾಹಕ ದೀಪಕ್ ಸುವರ್ಣ ಎಂಬವರು ಕಪ್ ಕೇಕ್ ಖರೀದಿಸಿದ್ದರು. ತಯಾರಿಸಿದ ದಿನಾಂಕ ಸೆಪ್ಟೆಂಬರ್ 12 ಅಂತಾ ನಮೂದಿಸಿದ್ದಲ್ಲದೆ 15 ದಿನಗಳ ಕಾಲ ಬಳಕೆಗೆ ಯೋಗ್ಯ ಅನ್ನುವುದನ್ನೂ ಪ್ಯಾಕೆಟ್ ಮೇಲೆ ಹಾಕಲಾಗಿದೆ. ಹೀಗಿದ್ದರೂ ತಯಾರಿಸಿದ ದಿನಾಂಕದ ನಾಲ್ಕೇ ದಿನದಲ್ಲಿ ಹುಳ ಕಾಣಿಸಿದೆ.

    ಮಂಗಳೂರಿನಲ್ಲಿ ಹೆಸರು ಗಳಿಸಿರುವ ನರನ್ಸ್ ಕಂಪೆನಿಯ ಕಪ್ ಕೇಕ್ ನಲ್ಲಿ ಇಂತಹ ಹುಳ ಕಂಡುಬಂದಿದೆ.