Tag: World’s Richest man

  • ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್‌ – ನಂ.1 ಯಾರು ಗೊತ್ತಾ?

    ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್‌ – ನಂ.1 ಯಾರು ಗೊತ್ತಾ?

    ನ್ಯೂಯಾರ್ಕ್‌: ವಿಶ್ವದ ನಂಬರ್‌ ಒನ್‌ ಶ್ರೀಮಂತರಾಗಿ ಖ್ಯಾತಿ ಗಳಿಸಿದ್ದ ಟೆಸ್ಲಾ ಕಂಪನಿ ಮಾಲೀಕ ಎಲೋನ್‌ ಮಸ್ಕ್‌ (Elon Musk) ಈಗ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ (World’s Richest Man) ಮಸ್ಕ್‌ ಎರಡನೇ ಸ್ಥಾನಕ್ಕೆ ಕುಸಿದಿದ್ದು, 1ನೇ ಸ್ಥಾನವನ್ನು ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅಲಂಕರಿಸಿದ್ದಾರೆ.

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, 51 ವರ್ಷದ ಎಲೋನ್ ಮಸ್ಕ್‌ ಒಟ್ಟು 178.6 ಬಿಲಿಯನ್‌ ಡಾಲರ್‌ ನಿವ್ವಳ ಮೌಲ್ಯ ಹೊಂದಿದ್ದಾರೆ. 188.6 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದುವ ಮೂಲಕ ಅರ್ನಾಲ್ಟ್‌ ಶ್ರೀಮಂತರ ಪಟ್ಟಿಯಲ್ಲಿ ನಂಬರ್‌ 1 ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಹಣ ಕೊಡ್ತೇವೆ, ಮಕ್ಕಳನ್ನು ಹಡೆಯಿರಿ – ಪೋಷಕರಿಗೆ ಜಪಾನ್ ಆಫರ್

    ಟ್ವಿಟ್ಟರ್‌ ಖರೀದಿ ಹೊಡೆತ
    44 ಬಿಲಿಯನ್‌ ಡಾಲರ್‌ಗೆ (ಸುಮಾರು 3.38 ಲಕ್ಷ ಕೋಟಿ ರೂ.) ಟ್ವಿಟ್ಟರ್‌ನ್ನು ಮಸ್ಕ್‌ ಖರೀದಿಸಿದರು. ಅವರು ಬಿಡ್ ಮಾಡಿದ ನಂತರ ಇದೇ ರೀತಿಯ ವ್ಯವಹಾರಗಳ ಷೇರುಗಳು ಕುಸಿದಿವೆ. ಮಸ್ಕ್‌ ಅವರ ನಿವ್ವಳ ಮೌಲ್ಯವು ನ.8ರಂದು 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಯಿತು. ಏಕೆಂದರೆ ಟೆಸ್ಲಾ ಅವರ ಷೇರುಗಳನ್ನು ತೊಡೆದುಹಾಕಿತು.

    ಅದ್ಯಾಗೂ ವಿಶ್ವದ ಟಾಪ್‌ 10 ಶ್ರೀಮಂತರನ್ನು ನಾವು ನೋಡುವುದಾರೆ ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಬರ್ನಾಡ್‌ ಅರ್ನಾಲ್ಟ್‌ (188.6 ಶತಕೋಟಿ ಡಾಲರ್‌), ದ್ವಿತೀಯ ಸ್ಥಾನ ಎಲಾನ್‌ ಮಸ್ಕ್‌ (176.6 ಶತಕೋಟಿ ಡಾಲರ್‌), ಮೂರನೇ ಸ್ಥಾನದಲ್ಲಿ ಭಾರತದ ಗೌತಮ್‌ ಅದಾನಿ (134 ಶತಕೋಟಿ ಡಾಲರ್‌) ಇದ್ದಾರೆ. ಇದನ್ನೂ ಓದಿ: ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    Live Tv
    [brid partner=56869869 player=32851 video=960834 autoplay=true]

  • ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಸೀಟೆಲ್: ವಿಶ್ವದ ಆಗರ್ಭ ಶ್ರೀಮಂತ ಪಟ್ಟದಿಂದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕೆಳಗಿಳಿದಿದ್ದಾರೆ. ಹೀಗಾಗಿ ಮತ್ತೆ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ಪಟ್ಟವನ್ನು ಅಲಂಕರಿಸಿದ್ದಾರೆ.

    ಪ್ರಸಕ್ತ ಹಣಕಾಸು ವರ್ಷದ ಕಳೆದ ತ್ರೈಮಾಸಿಕದಲ್ಲಿ ಬೆಜೋಸ್ ಅವರು ಸುಮಾರು 7 ಶತಕೋಟಿ ಡಾಲರ್(ಅಂದಾಜು 49 ಸಾವಿರ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಗುರುವಾರ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಜಾನ್ ಷೇರುಗಳ ಬೆಲೆ ಶೇಕಡಾ 7ರಷ್ಟು ಕುಸಿದಿದ್ದು, ಬೆಜೋಸ್ ಅವರ ಕಂಪೆನಿಗೆ 103.9 ಶತಕೋಟಿ ಡಾಲರ್(ಅಂದಾಜು 729 ಲಕ್ಷ ಕೋಟಿ ರೂ.) ನಷ್ಟು ಕಡಿಮೆಯಾಗಿದೆ.

    ಇತ್ತ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂಪತ್ತಿನ ಮೌಲ್ಯ ಈಗ 105.7 ಶತಕೋಟಿ ಡಾಲರ್ ಆಗಿದೆ. ಹೀಗಾಗಿ ಈ ಬಾರಿ ಮತ್ತೆ ಬಿಲ್ ಗೇಟ್ಸ್ ಅವರೇ ನಂ. 1 ಸ್ಥಾನಕ್ಕೇರಿದ್ದಾರೆ. ಸತತ 24 ವರ್ಷಗಳಿಂದ 2018ರವರೆಗೂ ಬಿಲ್ ಗೇಟ್ಸ್ ಅವರೇ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ 2018ರಲ್ಲಿ ಬಿಜೋಸ್ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದರು. ಆಗ ಬಿಜೋಸ್ ಅವರ ಸಂಪೂರ್ಣ ಸಂಪತ್ತಿನ ಮೌಲ್ಯ 160 ಶತಕೋಟಿ ಡಾಲರ್ ಇತ್ತು.

    2017ರ ನಂತರ ತ್ರೈಮಾಸಿಕ ಅವಧಿಯಲ್ಲಿ ಅಮೆಜಾನ್ ಆದಾಯ ಶೇಕಡಾ 26ರಷ್ಟು ಇಳಿಮುಖ ಕಂಡಿದೆ. 1987ರಲ್ಲಿ ವಿಶ್ವದ ಅತಿ ಶ್ರೀಮಂತರ ಫೋಬ್ರ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ 1.25 ಶತಕೋಟಿ ಡಾಲರ್ ಸಂಪತ್ತಿನ ಮೌಲ್ಯದೊಂದಿಗೆ ಬಿಲ್ ಗೇಟ್ಸ್ ಸ್ಥಾನ ಪಡೆದುಕೊಂಡಿದ್ದರು. 1998ರಲ್ಲಿ ಫೋಬ್ರ್ಸ್ ನ 400 ಅಮೆರಿಕದ ಶ್ರೀಮಂತರ ಪಟ್ಟಿಗೆ ಬೆಜೋಸ್ ಸೇರ್ಪಡೆಯಾಗಿದ್ದರು. ಆ ನಂತರ ಅಮೆಜಾನ್ ಕಂಪನಿ ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿತು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು.

    ಏಪ್ರೀಲ್‍ನಲ್ಲಿ ಬೆಜೊಸ್ ದಂಪತಿ ವಿಚ್ಛೇದನ ಪಡೆದಿಕೊಂಡಿದ್ದರು. ಇದು ಇತಿಹಾಸದಲ್ಲೇ ದುಬಾರಿ ವಿಚ್ಛೇದನ ಪ್ರಕರಣವಾಗಿದ್ದು, ಸುಮಾರು 36 ಶತಕೋಟಿ ಡಾಲರ್ ಮೌಲ್ಯದ ಜೆಫ್ ಬೆಜೋಸ್ ಅವರ ಷೇರುಗಳಿಗೆ ಮ್ಯಾಕೆಂಜಿ ಬೆಜೋಸ್ ಅವರಿಗೆ ನೀಡಲಾಗಿದೆ.