Tag: WorldCup2023

  • ಟೀಂ ಇಂಡಿಯಾ ಕೋಚ್ ಆಗ್ತಾರಾ ವಿವಿಎಸ್ ಲಕ್ಷ್ಮಣ್?

    ಟೀಂ ಇಂಡಿಯಾ ಕೋಚ್ ಆಗ್ತಾರಾ ವಿವಿಎಸ್ ಲಕ್ಷ್ಮಣ್?

    ಮುಂಬೈ: ವಿಶ್ವಕಪ್ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅಧಿಕಾರಾವಧಿಯೂ ಮುಗಿದಿದೆ. ಬಿಸಿಸಿಐ ಇನ್ನೊಂದು ವರ್ಷ ರಾಹುಲ್ ದ್ರಾವಿಡ್‍ರನ್ನು ಮುಂದುವರಿಸಲು ಬಯಸಿದೆ. ಆದರೆ ರಾಹುಲ್ ದ್ರಾವಿಡ್ ಕೋಚ್ (Coach) ಆಗಿ ಮುಂದುವರಿಯಲು ಒಪ್ಪುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ವಿವಿಎಸ್ ಲಕ್ಷ್ಮಣ್‍ರನ್ನು (VVS Laxman) ಕೋಚ್ ಹುದ್ದೆಗೆ ಪರಿಗಣಿಸಲು ಬಿಸಿಸಿಐ ಮುಂದಾಗಿದೆ.

    ಈಗಾಗಲೇ ಟಿ-20 (T20 Cricket) ಟೂರ್ನಿಗೆ ಲಕ್ಷ್ಮಣ್ ತಂಡದ ಉಸ್ತುವಾರಿ ವಹಿಸಿದ್ದಾರೆ. ಇನ್ನು ವಿಶ್ವಕಪ್ ಸೋತ ನಂತರ ಡ್ರೆಸ್ಸಿಂಗ್ ರೂಂಗೆ ಭೇಟಿ ಕೊಟ್ಟು ಧೈರ್ಯ ತುಂಬಿದ ಪ್ರಧಾನಿ ಮೋದಿಗೆ ವೇಗದ ಬೌಲರ್ ಶಮಿ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಭೇಟಿಯಿಂದ ನಮ್ಮ ಸ್ಥೈರ್ಯ ದ್ವಿಗುಣವಾಗಿದೆ ಅಂದಿದ್ದಾರೆ. ಆದರೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಅಖಿಲೇಶ್ ಮಾದರಿಯ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಫೈನಲ್ ಪಂದ್ಯ ಕೋಲ್ಕತ್ತಾ ಮುಂಬೈನಲ್ಲಿ ನಡೆದಿದ್ರೆ ಭಾರತವೇ ಗೆಲ್ತಿತ್ತು ಎಂದಿದ್ದಾರೆ. ಈ ಮಧ್ಯೆ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಗೆಲುವು ಕಂಡಿದೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

  • ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia And Pakistan) ನಡುವಿನ ಪಂದ್ಯದಲ್ಲಿ ಪಾಕ್‌ ಅಭಿಮಾನಿಯೊಬ್ಬ (Pakistani Fan) ಪೊಲೀಸ್‌ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಇದೀಗ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗಿದೆ.

    ಆಸ್ಟ್ರೇಲಿಯಾ – ಪಾಕಿಸ್ತಾನ (PAK vs AUS) ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಯೊಬ್ಬ ʻಪಾಕಿಸ್ತಾನ್‌ ಜಿಂದಾಬಾದ್‌ʼ ಘೋಷಣೆ ಕೂಗಿದ್ದಾನೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರು (Bengaluru Police) ʻಪಾಕಿಸ್ತಾನ್‌ ಜಿಂದಾಬಾದ್‌ʼ ಕೂಗುವಂತಿಲ್ಲ ಎಂದು ತಡೆಯೊಡ್ಡಿದ ನಂತರ ಕೆಲಕಾಲ ವಾಗ್ದಾದ ನಡೆದಿದೆ. ಇದನ್ನೂ ಓದಿ: ಸಿಎಂಗೆ ಕ್ರಿಕೆಟ್‌ ಕ್ರೇಜ್‌ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ vs ಪಾಕಿಸ್ತಾನ ಮ್ಯಾಚ್‌ ವೀಕ್ಷಿಸಿದ ಸಿದ್ದರಾಮಯ್ಯ

    ಎಕ್ಸ್‌ ಖಾತೆಯಲ್ಲಿ ಹರಿದಾಡುತ್ತಿರುವ 45 ಸೆಕೆಂಡುಗಳ ವೀಡಿಯೋದಲ್ಲಿ, ಪಾಕ್‌ ಅಭಿಮಾನಿ ಜಿಂದಾಬಾದ್‌ ಘೋಷಣೆ ಕೂಗಲು ಪೊಲೀಸ್‌ ಅಧಿಕಾರಿ ತಡೆಯೊಡ್ಡಿದ್ದಾರೆ. ಆಗ ಪಾಕ್‌ ಅಭಿಮಾನಿ, ನಾನು ಪಾಕಿಸ್ತಾನದವನು, ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಅನ್ನದೇ ಇನ್ನೇನು ಹೇಳಬೇಕು? ಭಾರತ್‌ ಮಾತಾಕಿ ಜೈ ಅನ್ನುವಾಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಯಾಕೆ ಹೇಳಬಾರದು? ಎಂದು ಅಧಿಕಾರಿಯನ್ನ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: World Cup 2023: ಒಂದೇ ಓವರ್‌ನಲ್ಲಿ 24 ರನ್‌ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್‌ ರೌಫ್‌

    ಬಳಿಕ ಅಧಿಕಾರಿಯ ನಡೆಯನ್ನ ವೀಡಿಯೋ ಮಾಡಿಕೊಂಡಿದ್ದಾನೆ. ಪೊಲೀಸ್‌ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗುತ್ತಿದ್ದಂತೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲು ಶುರು ಮಾಡಿದ್ದಾನೆ. ಇದನ್ನೂ ಓದಿ: World Cup 2023: ಸ್ಪಿನ್‌ ದಾಳಿಗೆ ಮಕಾಡೆ ಮಲಗಿದ ಪಾಕ್‌ – ಆಸೀಸ್‌ಗೆ 62 ರನ್‌ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು

    ವೀಡಿಯೋ ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಪಾಕಿಸ್ತಾನಿ ತನ್ನ ದೇಶಕ್ಕಾಗಿ ಹುರಿದುಂಬಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದ ಒಬ್ಬ ಅಭಿಮಾನಿ ತನ್ನ ದೇಶದ ಪರ ಘೋಷಣೆ ಕೂಗಲು ಬಿಡುತ್ತಿಲ್ಲವೆನ್ನೋದು ಖಂಡನೀಯ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ಸಿಡಿದೇಳುವಂತೆ ಪ್ರಚೋದಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]