Tag: world

  • 1 ಲಕ್ಷ ಮಂದಿಗೆ ಸೋಂಕು – ಲಕ್ಷ ದಾಟಿದ 11ನೇ ದೇಶ ಭಾರತ

    1 ಲಕ್ಷ ಮಂದಿಗೆ ಸೋಂಕು – ಲಕ್ಷ ದಾಟಿದ 11ನೇ ದೇಶ ಭಾರತ

    ನವದೆಹಲಿ: ದೇಶದಲ್ಲಿ ಕೋವಿಡ್ 19 ಅಟ್ಟಹಾಸ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಐದೈದು ಸಾವಿರ ಕೊರೋನಾ ಕೇಸ್‍ಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿಂತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ.

    ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಬರೋಬ್ಬರಿ 5,242 ಮಂದಿಗೆ ಬಾಧಿತರಾಗಿದ್ದು, ಮಹಾರಾಷ್ಟ್ರದಲ್ಲಿ 2,347 ಮಂದಿಗೆ ಸೋಂಕು ಬಂದಿದೆ.

    24 ಗಂಟೆಯಲ್ಲಿ 157 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆ 3 ಸಾವಿರ ದಾಟಿದೆ. ಒಟ್ಟು ಪ್ರಕರಣಗಳ ಪೈಕಿ ಈ ಪೈಕಿ 65 ಸಾವಿರ ಕೇಸ್‍ಗಳು ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡಿನಿಂದಲೇ ವರದಿ ಆಗಿವೆ. 39 ಸಾವಿರಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

    ಉತ್ತರ ಪ್ರದೇಶಕ್ಕೆ ವಾಪಸ್ಸಾದ 414 ವಲಸೆ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮಧ್ಯೆ, ಕಳೆದ 14 ದಿನಗಳಲ್ಲಿ ವಿದೇಶಗಳಿಂದ ಬಂದ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಬೇಕೆಂದು ಐಸಿಎಂಆರ್ ಸೂಚನೆ ನೀಡಿದೆ.

    1 ಲಕ್ಷ ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದೆ. ಅಮೆರಿಕ, ರಷ್ಯಾ, ಸ್ಪೇನ್, ಇಂಗ್ಲೆಂಡ್,ಬ್ರೆಜಿಲ್, ಇಟಲಿ, ಜರ್ಮನಿ, ಟರ್ಕಿ, ಫ್ರಾನ್ಸ್, ಇರಾನ್ ಬಳಿಕ ಭಾರತ ಸ್ಥಾನವನ್ನು ಪಡೆದುಕೊಂಡಿದೆ.

  • ವಿಶ್ವದ ಮುಂದೆ ಮತ್ತೆ ಪಾಕ್ ಬೆತ್ತಲು – ಕಪ್ಪು ಪಟ್ಟಿಗೆ ಸೇರುವ ಕಾಲ ಸನ್ನಿಹಿತ

    ವಿಶ್ವದ ಮುಂದೆ ಮತ್ತೆ ಪಾಕ್ ಬೆತ್ತಲು – ಕಪ್ಪು ಪಟ್ಟಿಗೆ ಸೇರುವ ಕಾಲ ಸನ್ನಿಹಿತ

    ನವದೆಹಲಿ: ಉಗ್ರರಿಗೆ ಬಹಿರಂಗವಾಗಿ ಸಹಕಾರ ನೀಡುತ್ತಿರುವ ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್)  ಕಪ್ಪು ಪಟ್ಟಿಗೆ ಸೇರುವ ಕಾಲ ಹತ್ತಿರವಾಗಿದೆ.

    ಈ ವರ್ಷದ ಜೂನ್ ನಲ್ಲಿ ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಎಫ್‍ಎಟಿಎಫ್ ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅಕ್ಟೋಬರ್ ಒಳಗಡೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈಗ ಆಸ್ಟ್ರೇಲಿಯಾದಲ್ಲಿ ನಡೆದ ಎಫ್‍ಎಟಿಎಫ್ ನ ಏಷ್ಯಾ ಪೆಸಿಫಿಕ್ ವಲಯದ ವಾರ್ಷಿಕ ಸಭೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    40 ಮಾನದಂಡಗಳನ್ನು ಎಫ್‍ಟಿಎಫ್ ನೀಡಿತ್ತು. 40ರ ಪೈಕಿ 32 ಮಾನದಂಡಗಳಲ್ಲಿ ಪಾಕಿಸ್ತಾನ ವಿಫಲವಾಗಿದೆ. ಆದರಲ್ಲೂ ಪ್ರಮುಖವಾದ 11 ಮಾನದಂಡ ಪೈಕಿ 10 ರಲ್ಲಿ ಫೇಲ್ ಆಗಿದೆ. ಹೀಗಾಗಿ ಏಷ್ಯಾ ಪೆಸಿಫಿಕ್ ವಲಯ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಬಹುದು ಎನ್ನುವ ತೀರ್ಮಾನಕ್ಕೆ ಬಂದಿದೆ.

    ಪಾಕಿಸ್ತಾನ ಸ್ಟೇಟ್ ಬ್ಯಾಂಕಿನ ಗವರ್ನರ್ ರೆಜಾ ಬಕೀರ್ ನೇತೃತ್ವದ 10 ಮಂದಿ ಸದಸ್ಯರ ತಂಡ 2018ರ ನಂತರ ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರಸ್ತುತವಾಗಿ ಎಫ್‍ಎಟಿಎಫ್ ನಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಲು ಪಾಕಿಸ್ಥಾನ ವಿಫಲವಾದರೆ ಎಫ್‍ಎಟಿಎಫ್ ಕಪ್ಪು ಪಟ್ಟಿಗೆ ಪಾಕ್ ಸೇರಲಿದೆ.

    ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲ, ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಡುವು ನೀಡಿತ್ತು. ಆದರೆ ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿತ್ತು.

    ಅಕ್ಟೋಬರ್ 2019ರ ಒಳಗಾಗಿ ಉಗ್ರರ ವಿರುದ್ಧ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ತೆಗೆದುಕೊಳ್ಳುವಂತೆ ಎಫ್‍ಎಟಿಎಫ್ ಪಾಕಿಸ್ತಾನವನ್ನು ಆಗ್ರಹಿಸಿದೆ. ಇದೇ ಕೊನೆಯ ಅವಕಾಶವಾಗಿದ್ದು, ಮತ್ತೆ ಪಾಕ್ ವಿಫಲವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದೆ.

    ಅಕ್ಟೋಬರ್ ನಲ್ಲಿ ನಡೆಯುವ ಮಹಾ ಸಭೆಯಲ್ಲಿ ಈ ಸಂಬಂಧ ವೋಟಿಂಗ್ ನಡೆಯಲಿದ್ದು ಅದರ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳಲಾಗುವುದು. ಈ ವೋಟಿಂಗ್ ಮೇಲೆ ಪಾಕಿಸ್ತಾನದ ಭವಿಷ್ಯ ನಿಂತಿದೆ.

    ಈ ಹಿಂದೆ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಾರನನ್ನು ವಿಶ್ವಸಂಸ್ಥೆ ಜಾಗತೀಕ ಉಗ್ರರ ಪಟ್ಟಿಗೆ ಸೇರಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತವು ಎಫ್‍ಎಟಿಎಫ್‍ಗೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿತ್ತು. ಅಲ್ಲದೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದನ್ನು ತಡೆಯಲು ಕನಿಷ್ಠ ಮೂರು ರಾಷ್ಟ್ರಗಳ ಬೆಂಬಲ ಪಾಕ್‍ಗೆ ಇರಬೇಕು. ಚೀನಾದ ಜೊತೆ ಟರ್ಕಿ, ಸೌದಿ ಅರೇಬಿಯಾ ದೇಶಗಳು ಪಾಕ್ ಪರ ನಿಂತಿದೆ ಎನ್ನಲಾಗುತ್ತಿದೆ.

    ಕಳೆದ ವರ್ಷದ ಪಾಕಿಸ್ತಾನವನ್ನು ಬೂದು ಬಣ್ಣದ ಪಟ್ಟಿಗೆ ಸೇರಿಸಿದ ಮೇಲೆ ಎಫ್‍ಎಟಿಎಫ್ ಪಾಕ್‍ಗೆ 27 ಅಂಶಗಳುಳ್ಳ ಕ್ರಿಯಾ ಯೋಜನೆ ಪಟ್ಟಿಯನ್ನು ನೀಡಿತ್ತು. ಹಾಗೆಯೇ ಇದನ್ನು ಪೂರ್ಣಗೊಳಿಸಿದರೆ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಸೂಚಿಸಿತ್ತು. ಮೇ ತಿಂಗಳಿನಲ್ಲಿ ಚೀನಾದಲ್ಲಿ ನಡೆದ ಸಭೆಯಲ್ಲಿ 27 ಮಾನದಂಡಗಳ ಪೈಕಿ  18  ಮಾನದ

    ಇನ್ನೂ ಪಾಕಿಸ್ಥಾನ ಬಾಕಿ ಉಳಿಸಿಕೊಂಡಿತ್ತು. ಅಲ್ಲದೆ ಅಕ್ಟೋಬರಿನಲ್ಲಿ ಎಫ್‍ಎಟಿಎಫ್ ಸಭೆಯಲ್ಲಿ ನಡೆಯುವ ವೋಟಿಂಗ್‍ನಲ್ಲಿ 36 ಮತದಲ್ಲಿ ಕನಿಷ್ಠ 15 ಮತ ಪಾಕಿಸ್ತಾನ ಪಡೆದರೆ ಬೂದು ಪಟ್ಟಿಯಿಂದ ಅದನ್ನು ಮುಕ್ತಗೊಳಿಸಲಾಗುತ್ತದೆ ಎಂದು ಎಫ್‍ಎಟಿಎಫ್ ತಿಳಿಸಿದೆ.

     

    ಆಗಿದ್ದು ಏನು?
    ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.

    ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

    1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ. ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್  ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಏನಿದು ಗ್ರೇ ಲಿಸ್ಟ್?
    ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.

    ಏನಿದು ಕಪ್ಪು ಪಟ್ಟಿ?
    ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

    ಪಾಕಿಸ್ತಾನಕ್ಕೆ ಹೊಸದೆನಲ್ಲ:
    ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.

  • ಭಾರತದಿಂದ ಕ್ಷಿಪಣಿ ದಾಳಿ – ನಮಗೆ ಆತಂಕವಾಗ್ತಿದೆ ಎಂದು ಪಾಕ್ ನಾಟಕ

    ಭಾರತದಿಂದ ಕ್ಷಿಪಣಿ ದಾಳಿ – ನಮಗೆ ಆತಂಕವಾಗ್ತಿದೆ ಎಂದು ಪಾಕ್ ನಾಟಕ

    ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ಯುದ್ಧ ಮಾಡಲು ಸನ್ನದ್ಧವಾಗಿದ್ದು, ನಮ್ಮ ನೆಲ, ವಾಯು, ಜಲಮಾರ್ಗವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ವಿಶ್ವದ ಇತರೇ ರಾಷ್ಟ್ರಗಳಿಗೆ ಪಾಕ್ ತೊರಿಸಲು ದೂರು ನೀಡಲು ಮುಂದಾಗಿದೆ.

    ಭಾರತದ ಯುದ್ಧ ನೌಕೆಗಳು ಕರಾಚಿ ಭಾಗದತ್ತ ಬರುತ್ತಿದೆ. ಇದರಿಂದ ನಮಗೇ ಆತಂಕ ಸೃಷ್ಟಿಯಾಗಿದೆ ಎಂದು ಪಾಕ್ ಹೇಳಿಕೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಗಡಿ ಪ್ರದೇಶಗಳಿಗೆ ಯುದ್ಧ ಟ್ಯಾಂಕರ್ ಗಳನ್ನು ರವಾನೆ ಮಾಡಿರುವ ಪಾಕಿಸ್ತಾನ, ಗಡಿ ಭಾಗದ ಗ್ರಾಮಗಳ ಜನರನ್ನು ಖಾಲಿ ಮಾಡುವ ಕಾರ್ಯವನ್ನು ಬುಧವಾರವೇ ಮಾಡಿದೆ. ಆದರೆ ಇತರೇ ದೇಶಗಳ ಎದುರು ತಾನು ಏನು ಮಾಡುತ್ತಿಲ್ಲ. ಭಾರತವೇ ನಮ್ಮನ್ನು ಸುತ್ತುವರಿದು ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ ಎಂದು ಎಂದು ತಿಳಿಸಲು ಮುಂದಾಗಿದೆ.

    ಕಳೆದ ಮೂರು ದಿನಗಳಿಂದಲೂ ಕೂಡ ಭಾರತ ಗಡಿ ಪ್ರದೇಶಗಳಲ್ಲಿ ಪದೇ ಪದೇ ದಾಳಿ ನಡೆಸುತ್ತಿದ್ದರು ಕೂಡ ಏನು ಗೊತ್ತಿಲ್ಲ ಎಂಬಂತೆ ನಾಟಕ ಮಾಡಲು ಶುರು ಮಾಡಿದೆ. ತನ್ನ ಸುಳ್ಳಿನ ನಾಟಕವನ್ನು ಜಗತ್ತಿಗೆ ಸತ್ಯ ಎಂದು ತಿಳಿಸಲು ಬೇಕಾದ ಸಿದ್ಧತೆಯನ್ನು ಪಾಕಿಸ್ತಾನ ಮಾಡಿಕೊಂಡಿದೆ.

    ಪಾಕಿಸ್ತಾನ ಈಗಾಗಲೇ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರವನ್ನು ಕಡಿತ ಮಾಡಿದೆ. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಿದೆ. ಹೀಗಾಗಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವದ ಮುಂದೆ ದೂರು ನೀಡಲು ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಂದು ಗೆಲುವು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮಾನ ಮತ್ತೊಮ್ಮೆ ಹರಾಜು!

    ಮತ್ತೊಂದು ಗೆಲುವು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮಾನ ಮತ್ತೊಮ್ಮೆ ಹರಾಜು!

    – ಬೂದು ಪಟ್ಟಿಯಲ್ಲೇ ಮುಂದುವರಿಯಲಿದೆ ಪಾಕ್
    – ಎಫ್‍ಎಟಿಎಫ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ
    – ಪಾಕ್ ಮನವಿಯನ್ನು ಪುರಸ್ಕರಿಸದ ಇತರ ದೇಶಗಳು

    ಪ್ಯಾರಿಸ್: ಪುಲ್ವಾಮಾ ದಾಳಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮಾನ ಹರಾಜಾಗಿದ್ದು, ಈಗ ಮತ್ತೊಮ್ಮೆ ಹರಾಜಾಗಿದೆ. ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆ(ಎಫ್‍ಎಟಿಎಫ್) ಪಾಕಿಸ್ತಾನವನ್ನು ಅಕ್ಟೋಬರ್ ವರೆಗೂ ಬೂದು ಪಟ್ಟಿಯಲ್ಲೇ(ಗ್ರೇ ಲಿಸ್ಟ್) ಮುಂದುವರಿಸಲು ನಿರ್ಧರಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಭಾರತದ ಪ್ರಯತ್ನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ.

    ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.

    ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.

    1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ.

    ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ 27 ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಏನಿದು ಗ್ರೇ ಲಿಸ್ಟ್?
    ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.

    ಏನಿದು ಕಪ್ಪು ಪಟ್ಟಿ?
    ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

    ಪಾಕಿಸ್ತಾನಕ್ಕೆ ಹೊಸದೆನಲ್ಲ:
    ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರ ರೌಂಡಪ್ – ವಿಶ್ವದಲ್ಲಿ ಹೆಚ್ಚು ಸುದ್ದಿ ಮಾಡಿದ ಟಾಪ್ 12 ಘಟನೆಗಳ ಕಿರು ಮಾಹಿತಿ

    2018ರ ರೌಂಡಪ್ – ವಿಶ್ವದಲ್ಲಿ ಹೆಚ್ಚು ಸುದ್ದಿ ಮಾಡಿದ ಟಾಪ್ 12 ಘಟನೆಗಳ ಕಿರು ಮಾಹಿತಿ

    ಹೊಸ ವರ್ಷಕ್ಕೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಹೊಸ ವರ್ಷ ಬರುವ ಮುನ್ನ 2018ರಲ್ಲಿ ವಿಶ್ವದಲ್ಲಿ ಏನೇನು ನಡೆದಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.

    1) ಡೊನಾಲ್ಡ್ ಟ್ರಂಪ್:  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷಪೂರ್ತಿ ಸುದ್ದಿಯಲ್ಲೇ ಇದ್ದರು. ಕೆಲವೊಮ್ಮೆ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಿದ್ದರೆ, ಮತ್ತೆ ತಮ್ಮ ನಿರ್ಧಾರಗಳಿಂದ ಸುದ್ದಿಯಾಗುತ್ತಿದ್ದರು. ವಲಸೆ ನೀತಿ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದು ಪೋಷಕರು ಮತ್ತು ಮಕ್ಕಳನ್ನು ಪ್ರತ್ಯೇಕ ಮಾಡಿದ ವಿಚಾರಕ್ಕೆ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ನಂತರ ಚೀನಾ ವಸ್ತುಗಳ ಮೇಲೆ ಆಮದು ಸುಂಕ ಹೇರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತ್ತು. ಉತ್ತರ ಕೊರಿಯಾದ ವಿರುದ್ಧ ಯುದ್ಧಕ್ಕೂ ಹೆದರುವುದಿಲ್ಲ ಎಂದು ಗುಡುಗಿದ್ದ ಟ್ರಂಪ್ ಅಚ್ಚರಿಯ ಬೆಳವಣಿಗೆಯಲ್ಲಿ ಸಿಂಗಾಪುರದಲ್ಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಮಾತನಾಡಿದ್ದರು.

    2) ಫೇಸ್‍ಬುಕ್ ಕ್ಷಮೆ: ಬಳಕೆದಾರರಿಗೆ ತಿಳಿಯದಂತೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್‍ಬುಕ್ ನಿಂದ ಅವರ ವೈಯಕ್ತಿಕ ಮಾಹಿತಿಯನ್ನು ಕದ್ದು, ಅವರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿತ್ತು. ಆರಂಭದಲ್ಲಿ ಈ ಸುದ್ದಿಯನ್ನು ಫೇಸ್‍ಬುಕ್ ತಿರಸ್ಕರಿಸಿದ್ದರೆ, ಬಳಿಕ ಸಾಕ್ಷ್ಯಗಳ ಸಮೇತ ಸುದ್ದಿಗಳು ಪ್ರಕಟವಾದ ಬಳಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದನ್ನು ಒಪ್ಪಿಕೊಂಡಿತು. ನಂತರ ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜೂಕರ್ ಬರ್ಗ್ ಕ್ಷಮೆ ಕೇಳಿ, ಮುಂದಿನ ದಿನಗಳಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೋರಿಕೆಯಾಗದೇ ಇರಲು ಮತ್ತಷ್ಟು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇವೆ. ವಿಶೇಷವಾಗಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದರು.

    3) ಇಂಡೋನೇಷ್ಯಾದಲ್ಲಿ ಸುನಾಮಿ: ಸೆಪ್ಟಂಬರ್ 28 ರಂದು ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಯಿಂದಾಗಿ 2,256 ಮಂದಿ ಮೃತಪಟ್ಟಿದ್ದರು. ಸುಲವೆಸಿ ದ್ವೀಪದಲ್ಲಿ ಸೆಪ್ಟೆಂಬರ್ 28 ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಉಂಟಾಗಿತ್ತು. ಸುನಾಮಿಯಿಂದಾಗಿ 10,679 ಮಂದಿ ಗಾಯಗೊಂಡಿದ್ದರೆ, 1,075 ಜನ ನಾಪತ್ತೆಯಾಗಿದ್ದರು.

    4) ಇಂಡೋನೇಷ್ಯಾ ವಿಮಾನ ದುರಂತ: ಅಕ್ಟೋಬರ್ 29 ರಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ್ದ ವಿಮಾನ ಪಾಂಗ್‍ಕಲ್ ದ್ವೀಪದ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ ಎಲ್ಲಾ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು.

    5) ಖಶೋಗಿ ಹತ್ಯೆ: ಸೌದಿ ಅರೇಬಿಯಾ ಮೂಲದ ಪತ್ರಕರ್ತ, ಲೇಖಕ ಜಮಾಲ್ ಖಶೋಗಿ ಹತ್ಯೆ ಪ್ರಕರಣ ಅಂತಾರಾಷ್ಟ್ರೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಕ್ಟೋಬರ್ 2 ರಂದು ಟರ್ಕಿಯ ಇಸ್ತಾಂಬುಲ್‍ನ ಸೌದಿ ರಾಯಭಾರಿ ಕಚೇರಿಗೆ ತಮ್ಮ ಮದುವೆಯ ದಾಖಲಾತಿ ಪಡೆಯಲು ತೆರಳಿದ್ದ `ವಾಷಿಂಗ್ಟನ್ ಪೋಸ್ಟ್’ನ ಹಿರಿಯ ವರದಿಗಾರ ಜಮಾಲ್ ಖಶೋಗಿ (60) ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಪತ್ರಕರ್ತನ ಹತ್ಯೆ ಹಿಂದೆ ಸೌದಿ ರಾಜಮನೆತನದ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.

    6) ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ಮಾತುಕತೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ವರ್ಷ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ನಾಯಕರು ಮುಖಾಮುಖಿಯಾಗಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಉಭಯ ದೇಶಗಳ ಗಡಿ ಪ್ರದೇಶದಲ್ಲಿನ ತಟಸ್ಥ ನಗರವೆಂದೇ ಖ್ಯಾತವಾಗಿರುವ ಪಾನ್‍ಮೂಂಜಾಮ್‍ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. 1950-53ರ ನಡುವೆ ನಡೆದ ಕೊರಿಯಾ ಯುದ್ಧದ ನಂತರ ಪ್ರಪ್ರಥಮ ಬಾರಿಗೆ ಉತ್ತರ ಕೊರಿಯಾದ ಅಧ್ಯಕ್ಷರು ದಕ್ಷಿಣ ಕೊರಿಯಾ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

    7) ವ್ಲಾದಿಮಿರ್ ಪುಟಿನ್: ಡೊನಾಲ್ಡ್ ಟ್ರಂಪ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸುದ್ದಿಯಾದ ವ್ಯಕ್ತಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಸತತ ನಾಲ್ಕನೇಯ ಬಾರಿ ಪುಟಿನ್ ಆಯ್ಕೆ ಆಗಿದ್ದು ವಿಶೇಷ. ಅಮೆರಿಕ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಹಿಲರ್ ಕ್ಲಿಂಟನ್ ವಿರುದ್ಧ ಟ್ರಂಪ್ ಪರ ಆನ್‍ಲೈನ್ ನಲ್ಲಿ ಪ್ರಚಾರ ನಡೆಸಲಾಗಿದ್ದು, ಪುಟಿನ್ ನಿರ್ದೇಶನದಂತೆ ಈ ಪ್ರಚಾರ ವ್ಯವಸ್ಥಿತವಾಗಿ ರೂಪಿಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಪುಟಿನ್ ಮತ್ತು ಟ್ರಂಪ್ ನಿರಾಕರಿಸಿದ್ದರು.

    8) ನೇಪಾಳ ವಿಮಾನ ದುರಂತ: ಯುಎಸ್-ಬಾಂಗ್ಲಾ ಏರ್‍ಲೈನ್ಸ್ ಗೆ ಸೇರಿದ್ದ ವಿಮಾನವೊಂದು ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿ ಸ್ಫೋಟಗೊಂಡು 52 ಪ್ರಯಾಣಿಕರು ಮೃತಪಟ್ಟಿದ್ದರು.

    9) ಆಪಲ್ ಸಾಧನೆ: ಅಮೆರಿಕದ ಐಟಿ ದಿಗ್ಗಜ ಆಪಲ್ ಕಂಪನಿಯ ಮಾರುಕಟ್ಟೆ ಮೌಲ್ಯ ಲಕ್ಷ ಕೋಟಿ ಡಾಲರ್ ದಾಟಿದೆ. ಈ ಸಾಧನೆ ನಿರ್ಮಿಸಿದ ವಿಶ್ವದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಆಪಲ್ ಪಾತ್ರವಾಗಿದೆ.

    10) ಮೊದಲ ಸಮುದ್ರ ಸೇತುವೆ: ಅಕ್ಟೋಬರ್ 23 ರಂದು ವಿಶ್ವದ ಅತಿ ಉದ್ದದ ಸಮುದ್ರ ಸೇತುವೆ ಚೀನಾದ ಝಹೈನಲ್ಲಿ ಉದ್ಘಾಟನೆಯಾಗಿದೆ. ಈ ಸೇತುವೆಯು ಹಾಂಗ್‍ಕಾಂಗ್ ಮತ್ತು ಮಕಾವ್ ರಾಷ್ಟ್ರಗಳಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಒಟ್ಟು 55 ಕಿ.ಮೀ ಉದ್ದವನ್ನು ಹೊಂದಿರುವ ಈ ರಸ್ತೆಯೂ ಸೇತುವೆ ಹಾಗೂ ನೀರೊಳಗಿನ ಸುರಂಗ ಮಾರ್ಗವನ್ನು ಹೊಂದಿದೆ.

    11) ಪಾಕ್ ಪ್ರಧಾನಿಯಾಗಿ ಮಾಜಿ ಕ್ರಿಕೆಟರ್: ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸಿದ್ದರು. ಪಾಕಿಸ್ತಾನದ ಸಂಸತ್‍ಗೆ ನಡೆದ 25ನೇ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ(ಪಾಕಿಸ್ತಾನ್ ತೆಹರಿಕ್ ಇನ್ಸಾಫ್) 116 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ದೇಶದ ಮೀಸಲು ಕ್ಷೇತ್ರಗಳ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಪ್ರಕಟಿಸಿದ ನಂತರ ಅವರ ಪಿಟಿಐನ ಗಳಿಕೆ 158 ಸ್ಥಾನಕ್ಕೆ ಏರಿತ್ತು. ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್ ಹಾಗೂ ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಕೂಡ ಭಾಗವಹಿಸಿದ್ದರು. ಅವರನ್ನು ಸೇನಾ ಪಡೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇಮ್ರಾನ್ ಖಾನ್ ಪದಗ್ರಹಣಕ್ಕೆ ಭೇಟಿ ನೀಡಿದ್ದ ಸಿಧು ವಿರುದ್ಧ ದೇಶದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

    12) ಎಐ ನ್ಯೂಸ್ ಆ್ಯಂಕರ್ ಅನಾವರಣ: ನವೆಂಬರ್ 7 ರಂದು ಚೀನಾ ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ ಅಥವಾ ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಅನ್ನು ಬೀಜಿಂಗ್ ನಲ್ಲಿ ಅನಾವಣರಣಗೊಳಿಸಿತ್ತು. ಅಲ್ಲದೇ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾ `ಝಿನುವಾ’ ಸುದ್ದಿ ಸಂಸ್ಥೆಯು ಮೊದಲ ಬಾರಿಗೆ ಎಐ ನ್ಯೂಸ್ ಆ್ಯಂಕರ್ ಅನ್ನು ಜಗತ್ತಿಗೆ ಪರಿಚಯಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ನವದೆಹಲಿ: ಜಗತ್ತಿನಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆಯನ್ನು ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಿದ್ಧವಾಗಿದೆ. ದೇಶದಲ್ಲಿ ಯಾವುದೇ ಟೆಲಿಕಾಂ 5ಜಿ ಸೇವೆಯನ್ನು ಆರಂಭಿಸುವ ಮುನ್ನವೇ  ಬಿಎಸ್‍ಎನ್‍ಎಲ್ ಭಾರತದಲ್ಲಿ 5ಜಿ ಸೇವೆ ನೀಡಲಿದೆ.

    ವಿಶ್ವದ ಯಾವುದೇ ದೇಶದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗ ಭಾರತದಲ್ಲೂ ಈ ಸೇವೆ ಆರಂಭವಾಗಲಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಬಿಎಸ್‍ಎನ್‍ಎಲ್‍ಗಿಂತ ಮೊದಲು ಯಾರು 5ಜಿ ಸೇವೆ ನೀಡಲು ಸಾಧ್ಯವಿಲ್ಲ ಎಂದು ಬಿಎಸ್‍ಎನ್‍ಎಲ್‍ನ ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್ ಹೇಳಿದ್ದಾರೆ.

    ಯಾವಾಗ ಈ ಸೇವೆ ಆರಂಭಗೊಳ್ಳಬಹುದು ಎನ್ನುವ ಪ್ರಶ್ನೆಗೆ, ಈ ಸೇವೆ ಆರಂಭಗೊಳ್ಳುವ ಬಗ್ಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಜೂನ್ 2020ರ ವೇಳೆ 5ಜಿ ಆರಂಭಗೊಳ್ಳಬಹುದು ಎನ್ನುವ ಮಾತು ವಿಶ್ವದೆಲ್ಲೆಡೆ ಕೇಳಿ ಬರುತ್ತಿದೆ. ಈ ಮಧ್ಯೆ ಜೂನ್ 2019ರ ವೇಳೆಗೆ 5ಜಿ ಸೇವೆ ಆರಂಭಗೊಂಡರು ಅಚ್ಚರಿಯಿಲ್ಲ ಎಂದು ಉತ್ತರಿಸಿದರು.

    ಹಿಂದೆ ವಿಶ್ವದಲ್ಲಿ 4ಜಿ ಸೇವೆ ಆರಂಭಗೊಂಡಿದ್ದಾಗ ಭಾರತಕ್ಕೆ ಈ ಅವಕಾಶ ತಪ್ಪಿತ್ತು. ಆದರೆ 5ಜಿಯಲ್ಲಿ ಹೀಗೆ ಆಗುವುದಿಲ್ಲ. ಈಗಾಗಲೇ 5ಜಿ ಸೇವೆ ನೀಡಲು ಪರೀಕ್ಷೆಗಳು ಆರಂಭಗೊಂಡಿದ್ದು ಅಂತರಾಷ್ಟ್ರೀಯ ಕಂಪೆನಿಗಳಾದ ನೋಕಿಯಾ, ಎನ್‍ಟಿಟಿ ಜೊತೆ ಉನ್ನತ ತಂತ್ರಜ್ಞಾನ ಸಂಬಂಧ ಒಪ್ಪಂದಗಳು ನಡೆದಿದೆ. ಸದ್ಯ ಜರ್ಮನಿ, ಅಮೆರಿಕ, ಚೀನಾ ಮತ್ತು ಭಾರತದಲ್ಲಿ 5ಜಿ ಸಂಬಂಧ ಹಲವು ಪರೀಕ್ಷೆಗಳು ನಡೆಯುತ್ತಿವೆ ಎಂದು ವಿವರಿಸಿದರು.

    2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರ ಆಗಸ್ಟ್ ನಲ್ಲಿ ಸಮಿತಿ ರಚಿಸಿತ್ತು. 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದರು.

    500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

    5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

    ಈ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಇಂಟರ್ ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.

  • ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ಜಿಮ್ನಾಸ್ಟಿಕ್ ವರ್ಲ್ಡ್  ಚಾಲೆಂಜ್ ಕಪ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.  ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ  14.150 ಅಂಕಗಳಿಸುವ ಮೂಲಕ 24 ವರ್ಷದ ದೀಪಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ರಿಯೋ ಒಲಿಂಪಿಕ್ಸ್ ನಲ್ಲಿ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಈಗ ಎರಡೂವರೆ ವರ್ಷದ ಬಳಿಕ ಟೂರ್ನಿಯಲ್ಲಿ ಭಾಗವಹಿಸಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ರಿಯೋ ಒಲಿಂಪಿಕ್ ಪದಕ ವಿಜೇತರಾಗಿದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಪರ ವಿಶೇಷ ಸಾಧನೆ ಮಾಡಿದ್ದ ದೀಪಾ ಕರ್ಮಕರ್ ಅವರಿಗೆ 2016ರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಗೌರವಿಸಿತ್ತು.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೀಪಾ ಕರ್ಮಾಕರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/TheBridge_IN/status/1015946961206239232

  • ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ವಿಶ್ವದಲ್ಲಿ 8, ಏಷ್ಯಾದಲ್ಲಿ ನಂಬರ್ ಒನ್ ಆಗಿದೆ ಭಾರತದ ಈ ಬೀಚ್

    ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ರಾಧಾನಗರ್ ಬೀಚ್ ವಿಶ್ವದಲ್ಲೇ 8ನೇ ಸುಂದರ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಅಮೆರಿಕದ ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್ ವಿಶ್ವದ 343 ಬೀಚ್‍ಗಳನ್ನು ಗುರುತಿಸಿ ಶ್ರೇಯಾಂಕ ನೀಡಿದೆ. ಈ ಪಟ್ಟಿಯಲ್ಲಿ ರಾಧಾನಗರ್ ಬೀಚ್‍ಗೆ ವಿಶ್ವದಲ್ಲಿ 8ನೇ ಸ್ಥಾನ ಸಿಕ್ಕಿದೆ.

    ಏಷ್ಯಾ ಖಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ರಾಧಾನಗರ್ ಬೀಚ್‍ಗೆ ಸಿಕ್ಕಿದರೆ, ಐದನೇ ಸ್ಥಾನವನ್ನು ಗೋವಾ ಬೀಚ್ ಪಡೆದುಕೊಂಡಿದೆ.

    ಬ್ರೆಜಿಲ್‍ನ ಫೆರ್ನಾಂಡೋ ಡಿ ನೂರನ್ಹಾ ಬೀಚ್ ವಿಶ್ವದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಫಿಲಿಪ್ಪೀನ್ಸ್ ವೈಟ್ ಬೀಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

    12 ತಿಂಗಳ ಅವಧಿಯಲ್ಲಿ ಈ ಬೀಚ್‍ಗೆ ಭೇಟಿ ನೀಡಿದ ಪ್ರವಾಸಿಗರು ನೀಡಿದ ರೇಟಿಂಗ್ ಆಧಾರದಲ್ಲಿ ಟ್ರಿಪ್ ಅಡ್ವೈಸರ್ ಈ ಶ್ರೇಯಾಂಕ ನೀಡಿದೆ.

  • ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಸಾನ್‍ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ.

    ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ. ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ರಾಷ್ಟ್ರದ ಸರಾಸರಿ 1 ಸಾವಿರ ಜನರಿಗೆ 1,263 ವಾಹನಗಳಿವೆ. ಮಾತ್ರವಲ್ಲದೇ ಈ ದೇಶ ಒಟ್ಟು ಜಿಡಿಪಿಯಲ್ಲೂ ಶ್ರೀಮಂತವಾಗಿದೆ.

    ಸಾನ್ ಮರಿನೋ ಹಾಗೂ ವಾಟಿಕನ್ ಸಿಟಿ ಈ ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿವೆ. ಇನ್ನು ಮೂರನೇ ರಾಷ್ಟ್ರವಾದ ಲೆಸ್ತೋ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಿಂದ ಸುತ್ತುವರಿದಿದೆ.