Tag: World Yoga Day

  • World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

    World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

    ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ.

    hot kannada-actress-ragini-dwivedi-yoga-photos-goes-viral_

    ಮೊನ್ನೆಯಷ್ಟೇ ಅವರು ಯೋಗ ಮಾಡುತ್ತಿರುವ ವೀಡಿಯೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಟಿಯ ಯೋಗ ಲುಕ್ ಸಖತ್ ಗ್ಲಾಮರಸ್ ಆಗಿ ಬಂದಿದೆ. ರಾಗಿಣಿ ಲುಕ್ ಇಂಟರ್‌ನೆಟ್‌ನಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.

    hot kannada-actress-ragini-dwivedi-yoga-photos-goes-viral_

    ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ:ಜಗ್ಗೇಶ್ ಗೆ ಕನ್ನಡ ಪಾಠ ಮಾಡಿದ ನಾಗ್ತಿ ಮೇಷ್ಟ್ರು

    hot kannada-actress-ragini-dwivedi-yoga-photos-goes-viral_

    ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ.

    kannada-actress-ragini-dwivedi-yoga-photos-goes-viral_

    ಇದೀಗ ತಮ್ಮ ಫಿಟ್‌ನೆಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಯೋಗ ಮಾಡ್ತಿರುವ ವೀಡಿಯೋ ಶೇರ್ ಮಾಡುವ ಮೂಲಕ ತಾವೆಷ್ಟು ಫಿಟ್ ಎಂಬುದನ್ನ ನಟಿ ತಿಳಿಸಿದ್ದಾರೆ. ಜೊತೆಗೆ ಇತರರು ಯೋಗ ಮಾಡಲು ಅವರು ಪ್ರೇರೇಪಿಸಿದ್ದಾರೆ.

    hot kannada-actress-ragini-dwivedi-yoga-photos-goes-viral_

    ಕನ್ನಡ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಾಗಿಣಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅವರು ಜೈಲಿಗೆ ಹೋಗಿ ಬಂದ ದಿನಗಳ ಬಗ್ಗೆ ಪುಸ್ತಕ ಬರೆಯುವುದಾಗಿ ಹೇಳಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.

    ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬಹುಭಾಷಾ ಕಲಾವಿದೆಯಾಗಿ ರಾಗಿಣಿ ಮಿಂಚ್ತಿದ್ದಾರೆ. ಬಾಲಿವುಡ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಅಲ್ಲದೇ ಮೊನ್ನೆಯಷ್ಟೇ ಅವರು ಮೂರನೇ ಮಲಯಾಳಂ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

    hot kannada-actress-ragini-dwivedi-yoga-photos-goes-viral_

    ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ (Shankar Konamanahalli) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಆರ್ ಕೆ ಚಂದನ್ (R.K.Chandan) ನಟಿಸುತ್ತಿದ್ದಾರೆ.

    ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಶೇಡ್ ಗಳಲ್ಲಿ ಅವರ ಪಾತ್ರವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನವಿರುವ  “ಬಿಂಗೋ” ಚಿತ್ರಕ್ಕೆ  ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿದೆ.

  • ಕಾರವಾರ ಕಡಲತೀರದಲ್ಲಿ ನೌಕಾದಳ ಸಿಬ್ಬಂದಿಯಿಂದ ಯೋಗ ದಿನಾಚರಣೆ

    ಕಾರವಾರ ಕಡಲತೀರದಲ್ಲಿ ನೌಕಾದಳ ಸಿಬ್ಬಂದಿಯಿಂದ ಯೋಗ ದಿನಾಚರಣೆ

    ಕಾರವಾರ: ಪ್ರತಿವರ್ಷ ಜೂನ್ 21ರಂದು ವಿಶ್ವ ಯೋಗದಿನವನ್ನಾಗಿ (World Yoga Day) ಆಚರಿಸಲಾಗುತ್ತದೆ. ಈ ಹಿನ್ನೆಲೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರದಲ್ಲಿ (Karwar) ನೌಕಾದಳ ಸಿಬ್ಬಂದಿ (Naval Personnel) ಏಕಕಾಲದಲ್ಲಿ ಯೋಗ (Yoga) ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ.

    ನೌಕಾದಳದ 200ಕ್ಕೂ ಹೆಚ್ಚು ಸಿಬ್ಬಂದಿ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದರು. ಅನೇಕ ರೀತಿಯ ಯೋಗ ಭಂಗಿಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಗೆ ಹೆಚ್ಚಿನ ಮೆರುಗನ್ನು ತುಂಬಿದರು. ಇದನ್ನೂ ಓದಿ: ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ: ಮೋದಿ

    ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿ, ರೋಟರಿ ಕ್ಲಬ್, ಎನ್‌ಸಿಸಿ, ಸ್ಕೌಟ್ ಗೈಡ್ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕಾಂದೂ, ಎಸ್ಪಿ ವಿಷ್ಣುವರ್ಧನ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿ ಯೋಗಾಭ್ಯಾಸ ನಡೆಸಿದರು. ಇದನ್ನೂ ಓದಿ: ಯೋಗಾ ಯೋಗ – ಶರೀರ, ಮನಸ್ಸಿನ ಆರೋಗ್ಯದ ಕೊಂಡಿ ಯೋಗ

    ಇಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ 9ನೇ ಯೋಗ ದಿನಾಚರಣೆಯ ನೇತೃತ್ವವನ್ನು ಮೋದಿ ವಹಿಸಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:25 ರಿಂದ 6:30ರ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯ ಫೈಟ್‌ ದೆಹಲಿಗೆ ಶಿಫ್ಟ್‌

  • 5ನೇ ಅಂತರಾಷ್ಟ್ರೀಯ ಯೋಗ ದಿನ – ರಾಂಚಿಯಲ್ಲಿ ಮೋದಿ ಯೋಗಾಸನ

    5ನೇ ಅಂತರಾಷ್ಟ್ರೀಯ ಯೋಗ ದಿನ – ರಾಂಚಿಯಲ್ಲಿ ಮೋದಿ ಯೋಗಾಸನ

    ರಾಂಚಿ: 5ನೇ ಅಂತರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾದ್ಯಂತ ಎಲ್ಲರಿಗೂ ಶುಭ ಕೋರಿದ್ದಾರೆ. ಅಲ್ಲದೆ ರಾಂಚಿಯ ಮೈದಾನದಲ್ಲಿ ಯೋಗ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ.

    ಯೋಗ ಮಾಡಲು ಮೋದಿ ಅವರು ಗುರುವಾರ ರಾಂಚಿಗೆ ತಲುಪಿದ್ದರು. ಮೋದಿ ಅವರ ಜೊತೆ ಯೋಗ ಮಾಡಲು ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹೆಸರನ್ನು ನೊಂದಾಯಿಸಿದ್ದರು. ಆದರೆ ಜನ ಹೆಚ್ಚಾದ ಕಾರಣ ಅವರಿಗೆ ಹತ್ತಿರದ ಬೇರೆ ಮೈದಾನದಲ್ಲಿ ಯೋಗದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಾರಿ ‘ಯೋಗ್ ಫಾರ್ ಹಾರ್ಟ್’ ಥೀಮ್‍ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

    ಪ್ರಭಾತ್ ತಾರಾ ಮೈದಾನದಲ್ಲಿ ಮಾತನಾಡಿದ ಅವರು, ಯೋಗವು ಶಿಸ್ತು, ಸಮರ್ಪಣೆ ಹಾಗೂ ನಾವು ಅದನ್ನು ಜೀವನದುದ್ದಕ್ಕೂ ಪಾಲಿಸಬೇಕು. ಯೋಗವು ವಯಸ್ಸು, ಬಣ್ಣ, ಜಾತಿ, ಪಂಥ, ಸಿರಿತನ- ಬಡತನ, ಪ್ರಾಂತ್ಯ ಮತ್ತು ಗಡಿಯ ಭೇದವನ್ನು ಮೀರಿದೆ. ಯೋಗ ಎಲ್ಲರದ್ದು ಹಾಗೂ ಎಲ್ಲರೂ ಯೋಗಕ್ಕಾಗಿ ಇದ್ದಾರೆ ಎಂದು ಹೇಳಿದ್ದಾರೆ.

    ಡ್ರಾಯಿಂಗ್ ರೂಮಿನಿಂದ ಬೋರ್ಡ್ ರೂಮಿನವರೆಗೆ, ನಗರದ ಉದ್ಯಾನವನಗಳಿಂದ ಹಿಡಿದು ಕ್ರೀಡಾ ಸಂಕೀರ್ಣದವರೆಗೆ ಇಂದು ಯೋಗ ಮಾಡಲಾಗುತ್ತಿದೆ. ಇಂದಿನ ಬದಲಾಗುತ್ತಿರುವ ಕಾಲದಲ್ಲಿ ನಾವು ಆರೋಗ್ಯದ ಮೇಲೆ ಗಮನಹರಿಸಬೇಕು. ಯೋಗದಿಂದ ಮಾತ್ರ ನಮಗೆ ಈ ಶಕ್ತಿ ಸಿಗಲು ಸಾಧ್ಯ ಎಂದರು.

    28 ಶಾಲೆಯಿಂದ 2,600ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ಕ್ರೀನ್‍ಗಳನ್ನು ಹಾಕಲಾಗಿತ್ತು. ಸುರಕ್ಷಿತೆಗಾಗಿ 100ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿತ್ತು. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕೂಡ ನೇಮಿಸಲಾಗಿತ್ತು.

    ಈ ಬಾರಿ 5ನೇ ಅಂತರಾಷ್ಟ್ರೀಯ ಯೋಗ ದಿನವಾಗಿದ್ದು, ಮೊದಲು ಅಂದರೆ 2015ರಲ್ಲಿ ದೆಹಲಿಯಲ್ಲಿ ಯೋಗ ಆಚರಿಸಲಾಗಿತ್ತು. ಬಳಿಕ ಚಂಡಿಗಢ್, ಲಕ್ನೋ, ದೆಹರದೂನ್‍ನಲ್ಲಿ ಆಚರಿಸಲಾಗಿತ್ತು. ಈ ಬಾರಿ ಮೋದಿಯವರು ರಾಂಚಿಯಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಲದಾಖ್: ವಿಶ್ವ ಯೋಗ ದಿನಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ದೇಶದೆಲ್ಲೆಡೆ ಈ ಸುದಿನಕ್ಕಾಗಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲದಾಖ್‍ನಲ್ಲಿ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಸುದ್ದಿಯಾಗಿದ್ದಾರೆ.

    ಸುಮಾರು 18,000 ಅಡಿ ಎತ್ತರದ ಲದಾಖ್‍ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಹಿಮದ ರಾಶಿ ನಡುವೆ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದನ್ನೂ ಓದಿ:ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಐಟಿಬಿಪಿ ಸಿಬ್ಬಂದಿ ಯೋಗ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಉಣ್ಣೆಯ ವಸ್ತ್ರಗಳನ್ನು ತೆಗೆದು ಯೋಗ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

    ಈ ಬಗ್ಗೆ ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್ ಅವರು ಮಾತನಾಡಿ, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜನರ ಜೀವನದಲ್ಲಿ ಯೋಗ ಪ್ರಮುಖ ಅಂಶವಾಗಿದೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೇಳಿದರು.

    ಯೋಗ ಹಾಗೂ ಯೋಗದ ಪ್ರಾಮುಖ್ಯತೆ ಬಗ್ಗೆ ಐಟಿಬಿಪಿ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಕೆಲವು ಫೋಟೋಗಳು, ವಿಡಿಯೋಗಳನ್ನು ಕೂಡ ಐಟಿಬಿಪಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಭುವನೇಶ್ವರ: ಜೂನ್ 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಭದ್ರತಾ ಪಡೆಯ ಯೋಧರು ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಯು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ಯೋಧರು ಯೋಗಾಭ್ಯಾಸ ಮಾಡಿದರೆ ಅಷ್ಟೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ನಮ್ಮ ಕೆಚ್ಚೆದೆಯ ಯೋಧರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಯೋಗಾಭ್ಯಾಸ ಮಾಡಿ ತಯಾರಿ ನಡೆಸುತ್ತಿರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    5 ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಜೂನ್ 21ರಂದು ಆಚರಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯಂತೆ ಜೂನ್ 21 2014ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಯಶಸ್ವಿಯಾಗಿ ಎಲ್ಲಡೆ ಆಚರಿಸಲಾಗಿದೆ.

    ಕಳೆದ ಬಾರಿ 4ನೇ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಡೆಹ್ರಾಡೂನ್‍ನಲ್ಲಿ ಆಚರಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಕೂಡ ಪಾಲ್ಗೊಂಡಿದ್ದರು. ಹಾಗೆಯೇ ಈ ಬಾರಿ ಜಾರ್ಖಂಡ್‍ನ ರಾಂಚಿಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಬೆಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಇಂದು ಸಾಮಾನ್ಯ ಜನರಿಂದ ಭಾರತದ ತಾರೆಯರು ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಸ್ಯಾಂಡಲ್‍ವುಡ್ ಗೋಲ್ದನ್ ಸ್ಟಾರ್ ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡಿದ್ದಾರೆ.

    ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಯೋಗಭ್ಯಾಸವನ್ನು ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರಾ ಹಾಗೂ ಪುತ್ರ ವಿಹಾನ್‍ನೊಂದಿಗೆ ಯೋಗ ಮಾಡಿದ್ದು, ತನ್ನ ತಂದೆ ಜೊತೆ ಸೇರಿ ಮಗಳು ಚಾರಿತ್ರ್ಯಾ ಕೂಡ ಯೋಗ ಮಾಡಿದ್ದಾರೆ. ಚಾರಿತ್ರ್ಯಾ ಕಷ್ಟ ಇರುವ ಆಸನಗಳನ್ನೆಲ್ಲಾ ತನ್ನ ತಂದೆ ಜೊತೆ ಮಾಡಿ ತೋರಿಸಿದ್ದಾರೆ.

    ಗಣೇಶ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನ ಜಿಮ್‍ಗೆ ಹೋಗಿ ಯೋಗವನ್ನು ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದೆ.

  • ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಬಾಗಲಕೋಟೆ: ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ವಿಶ್ವನಾಥ್ ಬಿರಾದಾರ(50) ಮೃತ ದುರ್ದೈವಿ ಶಿಕ್ಷಕ. ತೇರದಾಳ ಪಟ್ಟಣದ ಜೆವಿ ಮಂಡಲ ಸಂಸ್ಥೆಯ ಗುರುಕುಲ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಭಾಗಿಯಾಗಿದ್ದರು. ಯೋಗ ಮಾಡುತ್ತಿದ್ದ ವೇಳೆಯೇ ವಿಶ್ವನಾಥ್ ಅವರಿಗೆ ಹೃದಯಾಘಾತವಾಗಿದೆ.

    ವಿಶ್ವನಾಥ್ ಎಸ್.ಜೆ. ಹೆಣ್ಣು ಮಕ್ಕಳ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿದ್ದು, ಮೊದಲಿಂದಲೂ ಯೋಗ ಅಭ್ಯಾಸ ಮಾಡುತ್ತಿದ್ದರು. ಸದ್ಯ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಶ್ವ ಯೋಗ ದಿನಾಚರಣೆಗೆ ಕೊಪ್ಪಳ ಜಿಲ್ಲಾಡಳಿತದಿಂದ ನಿರಾಸಕ್ತಿ

    ವಿಶ್ವ ಯೋಗ ದಿನಾಚರಣೆಗೆ ಕೊಪ್ಪಳ ಜಿಲ್ಲಾಡಳಿತದಿಂದ ನಿರಾಸಕ್ತಿ

    -ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡ ಸಂಸದ ಸಂಗಣ್ಣ ಕರಡಿ

    ಕೊಪ್ಪಳ: ವಿಶ್ವ ಯೋಗ ದಿನಾಚರಣೆಗೆ ಜಿಲ್ಲಾಡಳಿತವು ನಿರ್ಲಕ್ಷ್ಯ ತೋರಿದ್ದಕ್ಕೆ ಅಧಿಕಾರಿಗಳನ್ನು ಸಂಸದ ಸಂಗಣ್ಣ ಕರಡಿಯವರು ತರಾಟೆ ತೆಗೆದುಕೊಂಡಿದ್ದಾರೆ.

    ಜೂನ್ 21ರಂದು ವಿಶ್ವ ಯೋಗದಿನವನ್ನು ವಿಶ್ವದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. 4ನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ಖುದ್ದು ಪಾಲ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಆಚರಿಸಿದ್ದಾರೆ.

    ಇಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ಯೋಗ ದಿನಾಚರಣೆಗೆ ನಿರ್ಲಕ್ಷ್ಯ ತೋರಿದ ಘಟನೆ ಕಂಡುಬಂದಿದೆ. ಬೆಳಗ್ಗೆ 6 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ, 6.30 ಆದರೂ ಸಿದ್ಧಗೊಂಡಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಸಂಸದರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೋಪಗೊಂಡು, ಸ್ಥಳದಲ್ಲಿದ್ದ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದಾರೆ. ನಂತರ ಕಾರ್ಯಕ್ರಮ ಮೊಟಕುಗೊಳಿಸಿ ಹೊರಟು ಹೋಗಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಂಸದರು, ಜಿಲ್ಲಾಡಳಿತ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ. ಇಂದು ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಕೊಪ್ಪಳದಲ್ಲಿ ಮಾತ್ರ ಯೋಗ ದಿನಾಚರಣೆಗೆ ಅವಮಾನ ಮಾಡಿರುವುದು ದುರಂತದ ಸಂಗತಿಯಾಗಿದೆ. ಇದರಲ್ಲಿ ಜಿಲ್ಲಾಡಳಿತದ ಬೇಜವಬ್ದಾರಿ ಎದ್ದು ಕಾಣುತ್ತಿದ್ದು, ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

  • ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ನವದೆಹಲಿ: ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣದಲ್ಲಿಯೇ ಯೋಗಾಸಗಳನ್ನು ಮಾಡುವ ಮೂಲಕ ಜಗತ್ತಿನ ಜನರ ಗಮನ ಸೆಳೆದಿದ್ದಾರೆ.

    ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶಸದಲ್ಲಿ ಯೋಗಾಸ ಪ್ರದರ್ಶಿಸಿದ್ರು. ಅವರ ಫೋಟೋ ಕೆಳಗೆ “ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು” ಎಂದು ಬರೆದು ಐಎಎಫ್ ಟ್ವೀಟ್ ಮಾಡಿದೆ.

    ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಪೂರ್ವ ನೌಕಾದಳದ ಕಮಾಂಡರ್ ಸಿಬ್ಬಂದಿ ಹಾಗೂ ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ (ಸಬ್ ಮೆರಿನ್) ಸಿಬ್ಬಂದಿ ಕೂಡ ವಿಶ್ವ ಯೋಗ ಭಾಗವಹಿಸಿದರು. ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿ ಸಬ್‍ಮೆರಿನ್ ನಲ್ಲಿಯೇ ಯೋಗಾಸನ ಮಾಡಿದರು.

  • ಸಹೋದರಿಯರ ಮನಸೆಳೆವ ಜಲ ಯೋಗ!

    ಸಹೋದರಿಯರ ಮನಸೆಳೆವ ಜಲ ಯೋಗ!

    ಬೆಂಗಳೂರು: ಇಂದು ನಾಲ್ಕನೇ ವಿಶ್ವ ಯೋಗದಿನದ ನಿಮಿತ್ತ ಸಹೋದರಿಯರಿಬ್ಬರು ನೀರಿನಲ್ಲಿ ಯೋಗ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಆನೇಕಲ್ ಪಟ್ಟಣದ ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಇಬ್ಬರು ಸಹೋದರಿಯರು ನೀರಿನ ಮೇಲೆ ತೇಲುತ್ತ ಕೈಯಲ್ಲಿ ದೀಪ ಹಿಡಿದು ವಿವಿಧ ಯೋಗದ ಆಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಇವರಿಬ್ಬರೂ ನೀರಲ್ಲಿ ದೀಪ ನಂದದಂತೆ ಯೋಗಾಸನ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

    ನಿತ್ಯಾಶ್ರೀ ಹಾಗೂ ತನುಶ್ರೀಯವರಿಗೆ ತಂದೆ ಸುಬ್ರಹ್ಮಣ್ಯ ಅವರೇ ಗುರುಗಳು. ಸುಬ್ರಹ್ಮಣ್ಯ ಅವರು ಕೂಡಾ ಯಾವುದೇ ಗುರುಗಳಿಂದ ಜಲ ಯೋಗವನ್ನು ಕಲಿತಿಲ್ಲವಂತೆ. ಋಷಿಮುನಿಗಳ ಜಲ ಯೋಗದ ಕುರಿತು ಓದಿ, ತಿಳಿದು ತಾವೇ ಸ್ವಯಂ ಕಲಿತಿದ್ದಾರೆ. ಹಾಗೇ ತಮ್ಮ ಮಕ್ಕಳಿಗೂ ಜಲ ಯೋಗವನ್ನು ಕಲಿಸಿದ್ದಾರೆ.

    ಎಲೆ ಮರೆಕಾಯಿಯಂತಿದ್ದ ನಿತ್ಯಾಶ್ರೀ ಹಾಗೂ ತನುಶ್ರೀ ಸಹೋದರಿಯರ ಪ್ರತಿಭೆ ವಿಶ್ವ ಯೋಗ ದಿನದಿಂದಾಗಿ ಬೆಳಕಿಗೆ ಬಂದಿದ್ದು, ಸದ್ಯ ಈ ಸಹೋದರಿಯರು ಅನೇಕರ ಮನೆ ಮಾತಾಗಿದ್ದಾರೆ.