Tag: World Test Championship

  • ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಚೆನ್ನೈ: ಸೆ.19ರಂದು ಪ್ರಾರಂಭವಾಗಲಿರುವ ಬಾಂಗ್ಲಾ-ಭಾರತ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್‌ನ (Test Championship) ಎರಡು ಪಂದ್ಯಗಳಲ್ಲಿ ಅದೃಷ್ಟ ಇದ್ದರೆ ವಿಶ್ವದ ನಂ.1 ಟೆಸ್ಟ್ ಬೌಲರ್ ಆರ್.ಅಶ್ವಿನ್ (R.Ashwin) 5 ದಾಖಲೆ ನಿರ್ಮಿಸಬಹುದು.

    ಮೊದಲ ಪಂದ್ಯ ಅಶ್ವಿನ್ ತವರೂರಾದ ಚೆನ್ನೈನ ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ (MA Chidambaram Stadium) ನಡೆಯಲಿದ್ದರೆ, ಎರಡನೇ ಪಂದ್ಯ ಸೆ.27ರಂದು ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ (Green Park Stadium) ನಡೆಯಲಿದೆ.

    ಸೆ.17ರಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಅಶ್ವಿನ್, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಅಶ್ವಿನ್ ಅತೀ ಹೆಚ್ಚು ವಿಕೆಟ್ ಪಡೆದುಕೊಂಡಿದ್ದರು.ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ

    ಆ ಐದು ದಾಖಲೆಗಳೇನು?
    1. ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್:
    ಸದ್ಯ ಅಶ್ವಿನ್ ತಮ್ಮ ಹೆಸರಲ್ಲಿ 174 ವಿಕೆಟ್‌ಗಳನ್ನು ಹೊಂದಿದ್ದಾರೆ. ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ನಥಾನ್ ಲಿಯಾನ್‌ರವರ (Nathan Lyon) ಹೆಸರಿನಲ್ಲಿ 187 ವಿಕೆಟ್‌ಗಳಿವೆ. ಅಶ್ವಿನ್ 14 ವಿಕೆಟ್‌ಗಳನ್ನು ಈ ಎರಡು ಪಂದ್ಯಗಳಲ್ಲಿ ಪಡೆದರೆ ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ.

    2. 2023-25ರವರೆಗೆ ನಡೆಯಲಿರುವ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್
    ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ (Josh Hazlewood) 51 ವಿಕೆಟ್‌ಗಳನ್ನು ಪಡೆದಿದ್ದು ಅಶ್ವಿನ್ 42 ವಿಕೆಟ್‌ಗಳನ್ನು ಹೊಂದಿದ್ದಾರೆ. ಈ ಎರಡು ಪಂದ್ಯದಲ್ಲಿ 10 ವಿಕೆಟ್ ತಮ್ಮದಾಗಿಸಿಕೊಂಡರೆ ಅಗ್ರ ಸ್ಥಾನಕ್ಕೇರಲಿದ್ದಾರೆ.

    3. ಅತಿಹೆಚ್ಚು ಬಾರಿ 5 ವಿಕೆಟ್ ದಾಖಲೆಗೆ ಒಂದೇ ಹೆಜ್ಜೆ:
    ಅಶ್ವಿನ್ ಈವರೆಗೆ ಆಡಿರುವ 34 ಪಂದ್ಯಗಳಲ್ಲಿ 10 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಲ್ಲದೇ ಆಸೀಸ್ ಕ್ರಿಕೆಟಿಗ ನಥಾನ್ ಲಿಯಾನ್ ಸಹ ಇದೇ ಸಾಧನೆ ಮಾಡಿದ್ದು, ಜಂಟಿಯಾಗಿ ಇಬ್ಬರೂ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಪೈಕಿ ಕನಿಷ್ಠ 1 ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದರೆ, ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.

    4.ಭಾರತ-ಬಾಂಗ್ಲಾ ನಡುವೆ ಅತಿ ಹೆಚ್ಚು ವಿಕೆಟ್:
    ಇಲ್ಲಿಯವರೆಗೂ ಬಾಂಗ್ಲಾ ವಿರುದ್ಧದ 6 ವಿಶ್ಚ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್, 31 ವಿಕೆಟ್ ಪಡೆದಿರುವ ಜಹೀರ್ ಖಾನ್ ಅವರ ದಾಖಲೆ ಮುರಿಯಲು 9 ವಿಕೆಟ್‌ಗಳ ಅಗತ್ಯವಿದೆ.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ

    5. ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಆಟಗಾರ:
    126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿಯವಗೂ ಅಶ್ವಿನ್ ಒಟ್ಟು 455 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 476 ವಿಕೆಟ್ ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿರುವ ಅನಿಲ್ ಕುಂಬ್ಳೆ (Anil Kumble) ಅವರ ದಾಖಲೆ ಮುರಿಯಲು ಅಶ್ವಿನ್ 22 ವಿಕೆಟ್ ಅಗತ್ಯವಿದೆ.

  • Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

    Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!

    ಡೊಮಿನಿಕಾ: 2023-25ನೇ ಸಾಲಿನ 3ನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಟೂರ್ನಿಯ ಆರಂಭದಲ್ಲೇ ಭಾರತ ಶುಭಾರಂಭ ಕಂಡಿದೆ. ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪದ್ಯದಲ್ಲೇ 141 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 2ನೇ ಪಂದ್ಯದಲ್ಲೂ ಅದ್ಭುತ ಜಯದೊಂದಿಗೆ ತವರಿನಲ್ಲೇ ವೆಸ್ಟ್‌ ಇಂಡೀಸ್‌ ತಂಡವನ್ನ ವೈಟ್‌ವಾಶ್‌ ಮಾಡುವ ಉತ್ಸಾಹದಲ್ಲಿದೆ.

    ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಭಾರತಕ್ಕೆ (Team India) ಈಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಹಾಲಿ ಟೆಸ್ಟ್‌ ಚಾಂಪಿಯನ್ಸ್‌ ಆಸ್ಟ್ರೇಲಿಯಾ ನಂ.1 ಸ್ಥಾನಕ್ಕೇರುವ ಸಾಧ್ಯತೆಗಳಿವೆ. ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಆಶಸ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ (Australia) 3 ಪಂದ್ಯಗಳ ಅಂತ್ಯಕ್ಕೆ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದರೆ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಕಳೆದುಕೊಳ್ಳಲಿದೆ. ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್

    ಒಂದು ವೇಳೆ ವಿಂಡೀಸ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ಸೋತರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ, ಭಾರತ 1-0 ಅಂತರದಲ್ಲಿ ಸರಣಿ ಗೆದ್ದುಕೊಳ್ಳಲಿದೆ. ಆಗ ಆಸ್ಟ್ರೇಲಿಯಾ ಆಶಸ್‌ನಲ್ಲಿ 3-1 ಅಂತರದಲ್ಲಿ ಗೆಲುವು ದಾಖಲಿಸಬೇಕಾಗುತ್ತದೆ. ಸರಣಿಯ ಅಂತಿಮ ಎರಡೂ ಪಂದ್ಯಗಳು ಡ್ರಾ ಆದರೂ ಆಸ್ಟ್ರೇಲಿಯಾ 2-1 ಅಂತರದಲ್ಲಿ ಸರಣಿ ಜಯ ದಾಖಲಿಸಲಿದೆ. ಇದನ್ನೂ ಓದಿ: ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್‌ ಪಡೆದು ಅಶ್ವಿನ್‌ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ

    ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತು ಮತ್ತೊಂದು ಪಂದ್ಯ ಗೆದ್ದರೆ ಆಸ್ಟ್ರೇಲಿಯಾ ತಂಡ 3-2 ಅಂತರದಲ್ಲಿ ಪ್ರಸಕ್ತ ಸಾಲಿನ ಆಷಸ್‌ ಸರಣಿಯನ್ನು ಗೆದ್ದುಕೊಳ್ಳಲಿದೆ. ಈ ಅಂತರದಲ್ಲಿ ಸರಣಿ ಗೆದ್ದು ವಿಶ್ವದ ನಂ.1 ಪಟ್ಟ ಕೂಡ ಪಡೆಯಬೇಕಾದರೆ, ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲಬೇಕು. ಇಲ್ಲವಾದರೆ ಟೀಂ ಇಂಡಿಯಾದ ನಂ.1 ಸ್ಥಾನದಲ್ಲಿ ಮುಂದುವರಿಯಲಿದೆ.

    2015ರ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಭಾರತ ಹೆಚ್ಚಿನ ಸಮಯ ಅಗ್ರಸ್ಥಾನದಲ್ಲಿ ಉಳಿದಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಮೊದಲ ಎರಡು ಆವೃತ್ತಿಯಲ್ಲಿ ರನ್ನರ್‌ ಅಪ್‌ ಪಡೆದುಕೊಂಡಿರುವ ಭಾರತ 3ನೇ ಆವೃತ್ತಿಯಲ್ಲಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಟ್ಟ ಗೆಲ್ಲುವ ವಿಶ್ವಾಸ ಹೊಂದಿದೆ. ಒಂದು ವೇಳೆ ಭಾರತ ಗೆದ್ದರೆ ಟಿ20, ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಮೂರು ಆವೃತ್ತಿಗಳಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ 2ನೇ ತಂಡವಾಗಲಿದೆ. ಭಾರತ ಎಂ.ಎಸ್‌ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟಿ20 ವಿಶ್ವಕಪ್‌ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಜಯ ಸಾಧಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • #WTC2023 ಫೈನಲ್ ರೇಸ್‍ನಲ್ಲಿ ಭಾರತ – ಆಸೀಸ್ ಸರಣಿ ನಿರ್ಣಾಯಕ

    #WTC2023 ಫೈನಲ್ ರೇಸ್‍ನಲ್ಲಿ ಭಾರತ – ಆಸೀಸ್ ಸರಣಿ ನಿರ್ಣಾಯಕ

    ಮುಂಬೈ: ಬಾಂಗ್ಲಾದೇಶ (Bangladesh) ವಿರುದ್ಧ ಟೀಂ ಇಂಡಿಯಾ (India) 2-0 ಅಂತರದಲ್ಲಿ ಟೆಸ್ಟ್ (Test) ಸರಣಿ ಗೆದ್ದುಕೊಂಡ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (World Test Championship) ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ಫೈನಲ್ ಆಸೆ ಚಿಗುರಿಕೊಂಡಿದೆ.

    ಭಾರತ, ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದ ಖುಷಿಯೊಂದಿಗೆ ಡಬ್ಲ್ಯೂಟಿಸಿ (WTC) ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿರುವುದು ಟೀಂ ಇಂಡಿಯಾಗೆ ಡಬಲ್ ಸಂತಸ ತಂದಿದೆ. ಆದರೆ ಭಾರತ ಫೈನಲ್ ಖಚಿತ ಪಡಿಸಿಕೊಳ್ಳಬೇಕಾದರೆ ಮುಂದಿನ ಆಸ್ಟ್ರೇಲಿಯಾ (Australia) ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ನಿರ್ಣಾಯಕ ಎನಿಸಿಕೊಂಡಿದೆ. ಇದನ್ನೂ ಓದಿ: ಅಶ್ವಿನ್‌, ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ – ಕ್ಲೀನ್‌ ಸ್ವೀಪ್‌ಗೈದ ಭಾರತ

    ಫೈನಲ್ ಲೆಕ್ಕಾಚಾರ:
    ಇದೀಗ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಈಗಾಗಲೇ ಆಸ್ಟ್ರೇಲಿಯಾ ಒಟ್ಟು 13 ಪಂದ್ಯಗಳಲ್ಲಿ 9 ಜಯ, 1 ಸೋಲು ಮತ್ತು 3 ಡ್ರಾ ಸಾಧಿಸಿ 76.92 ಸರಾಸರಿಯೊಂದಿಗೆ 120 ಅಂಕ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು, 8 ಜಯ, 4 ಸೋಲು ಮತ್ತು 2 ಡ್ರಾ ಸಾಧಿಸಿ 58.93 ಸರಾಸರಿಯೊಂದಿಗೆ 99 ಅಂಕ ಸಂಪಾದಿಸಿದೆ. ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದ್ದು (South Africa), 11 ಪಂದ್ಯಗಳಿಂದ 54.55 ಸರಾಸರಿಯಲ್ಲಿ 72 ಅಂಕ ಪಡೆದಿದೆ. ಇನ್ನೂ 4ನೇ ಸ್ಥಾನದಲ್ಲಿ ಶ್ರೀಲಂಕಾವಿದ್ದು (Sri Lanka), 10 ಪಂದ್ಯಗಳಿಂದ 53.33 ಸರಾಸರಿಯಲ್ಲಿ 64 ಅಂಕ ಗಳಿಸಿಕೊಂಡಿದೆ.

    ಇನ್ನುಳಿದಂತೆ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಕ್ರಮವಾಗಿ 5,6,7,8,9ನೇ ಸ್ಥಾನದಲ್ಲಿದೆ. ಈ 5 ತಂಡಗಳು ಬಹತೇಕ ಫೈನಲ್ ರೇಸ್‍ನಿಂದ ಹೊರಬಿದ್ದಿವೆ. ಇದೀಗ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳ ನಡುವೆ ಪೈಪೋಟಿ ಜೋರಾಗಿದೆ. ಇದನ್ನೂ ಓದಿ: 15ರ ಬಾಲಕನಿಗೆ ಕೈತಪ್ಪಿದ ಅವಕಾಶ ಹಿರಿಯ ಅಟಗಾರನಿಗೆ ಮಣೆ – 10 ತಂಡಗಳ ಫೈನಲ್ ಲಿಸ್ಟ್

    ಆಸ್ಟ್ರೇಲಿಯಾ ಬಹುತೇಕ ಫೈನಲ್ ಸ್ಥಾನ ಖಚಿತ ಪಡಿಸಿಕೊಂಡರೆ, ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ನಡುವೆ ಸ್ಪರ್ಧೆ ಏರ್ಪಟ್ದಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾ ಇನ್ನೆರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪೈಕಿ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆಲ್ಲಲೇ ಬೇಕು. ಈ ಸರಣಿ ಬಳಿಕ ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಆಡಳಿದೆ ಇದರಲ್ಲೂ ಜಯ ಸಾಧಿಸಿದರೆ ಮಾತ್ರ ಫೈನಲ್ ರೇಸ್‍ನಲ್ಲಿ ಉಳಿದುಕೊಳ್ಳಲಿದೆ.

    ಇತ್ತ ಭಾರತಕ್ಕೆ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧ ಸರಣಿ ನಿರ್ಣಾಯಕವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಫೆಬ್ರವರಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಭಾರತ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇ ಬೇಕು ಆಗ ಮತ್ತೆ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ.

    ಇನ್ನೊಂದು ತಂಡ ಶ್ರೀಲಂಕಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಎರಡು ಪಂದ್ಯ ಗೆಲ್ಲಬೇಕು ಜೊತೆಗೆ ಇತ್ತ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಪ್ರದರ್ಶನ ಅನುಸರಿಸಿ ಶ್ರೀಲಂಕಾಗೆ ಫೈನಲ್ ತಲುಪುವ ಅವಕಾಶವಿದೆ.

    ಹಾಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಶ್ರೇಷ್ಠ ಪ್ರದರ್ಶನ ತೋರಿ ಕನಿಷ್ಠ 3 ಪಂದ್ಯವನ್ನು ಗೆಲ್ಲುವತ್ತ ಗಮನ ಹರಿಸಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರಣಿ ಗೆದ್ದ ಇಂಗ್ಲೆಂಡ್‍ಗೆ ಶಾಕ್ – ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತ

    ಸರಣಿ ಗೆದ್ದ ಇಂಗ್ಲೆಂಡ್‍ಗೆ ಶಾಕ್ – ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತ

    ಲಂಡನ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಈ ನಡುವೆ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಳೆದುಕೊಂಡಿದೆ.

    ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್ ಪಾಯಿಂಟ್ ಏರಿಕೆ ಆಗಬೇಕಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‍ನಿಂದಾಗಿ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಮತ್ತು ಪಂದ್ಯದ ಶುಲ್ಕ ಶೇ.40 ರಷ್ಟು ದಂಡ ಕಟ್ಟಿದೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    ಐಸಿಸಿ ನಿಯಮದ ಪ್ರಕಾರ ಪಂದ್ಯವನ್ನು ನಿಗದಿತ ವೇಳೆಯಲ್ಲಿ ಮುಗಿಸಲು ವಿಫಲವಾಗುವ ತಂಡಕ್ಕೆ ಪಂದ್ಯದ ಶುಲ್ಕ ಶೇ.20 ದಂಡ ಮತ್ತು ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತಗೊಳಿಸುವ ನಿರ್ಣಯ ಕೈಗೊಂಡಿತ್ತು. ಈ ನಿಯಮದ ಪ್ರಕಾರ ಇಂಗ್ಲೆಂಡ್ ತಂಡ ತವರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಮುಗಿಸಲು ವಿಫಲವಾಗಿತ್ತು. ಹಾಗಾಗಿ ಮ್ಯಾಚ್‍ ರೇಫ್ರಿ ರೀಚಿ ರಿಚರ್ಡ್ಸನ್‌ ಇಂಗ್ಲೆಂಡ್ ತಂಡಕ್ಕೆ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್‌ ಅವರ ಭರ್ಜರಿ ಚೇಸಿಂಗ್ ಮೂಲಕ ಇಂಗ್ಲೆಂಡ್ ತಂಡ 5 ವಿಕೆಟ್‍ಗಳ ಜಯ ದಾಖಲಿಸಿತ್ತು. ಅಲ್ಲದೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.

    Live Tv

  • ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

    ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

    ಸಿಡ್ನಿ: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಡುವೆ ಇರುವಂತಹ ನಾಯಕತ್ವದ ವಿಭಿನ್ನತೆಯನ್ನು ನೋಡಲು ಕಾತುರನಾಗಿದ್ದೇನೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದ್ದಾರೆ.

    ಸ್ಥಳೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಬ್ರೆಟ್ ಲೀ, ಮುಂದೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಎರಡು ತಂಡದ ನಾಯಕರ ನಾಯಕತ್ವ ಮತ್ತು ಆಟ ವಿಭಿನ್ನವಾಗಿದೆ ವಿಲಿಯಮ್ಸನ್ ಶಾಂತಚಿತ್ತದ ನಾಯಕನಾದರೆ, ಕೊಹ್ಲಿ ಆಕ್ರಮಣಕಾರಿ ನಾಯಕತ್ವವನ್ನು ತೋರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ವಿರಾಟ್ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಆಕ್ರಮಣಕಾರಿಯಾಗಿ ಕಾಣಿಸಿಕೊಂಡರೆ, ವಿಲಿಯಮ್ಸನ್ ಶಾಂತಚಿತ್ತರಾಗಿ ನಾಯಕತ್ವ ನಿಭಾಯಿಸುತ್ತಾರೆ ಇದರೊಂದಿಗೆ ಅವರು ಸಮಯಕ್ಕೆ ಸರಿಯಾಗಿ ಬ್ಯಾಟಿಂಗ್‍ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಈ ಇಬ್ಬರೂ ಆಟಗಾರರ ಆಟ ಮತ್ತು ನಾಯಕತ್ವ ಗುಣ ಬೇರೆ ಬೇರೆಯಾಗಿದ್ದು, ವಿಲಿಯಮ್ಸನ್ ಬೋರ್ ಆಗದ ರೀತಿಯಲ್ಲಿ ಸಾಂಪ್ರಾದಾಯಿಕ ನಾಯಕತ್ವನ್ನು ನಿಭಾಯಿಸುತ್ತಿದ್ದಾರೆ ಮತ್ತು ಅವರ ಕ್ರಿಕೆಟ್ ಜ್ಞಾನ ಮೆಚ್ಚುವಂತದ್ದಾಗಿದೆ. ಕೊಹ್ಲಿ ಕೂಡ ಕ್ರಿಕೆಟ್‍ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು ಇದೀಗ ಈ ಇಬ್ಬರು ವಿಭಿನ್ನ ನಾಯಕರ ಕಾದಾಟ ನೋಡಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‍ಶಿಪ್ ಜೂನ್ 18ರಿಂದ ಸೌಥಾಂಪ್ಟನ್‍ನಲ್ಲಿ ನಡೆಯಲಿದ್ದು, ಈಗಾಗಲೇ ಭಾರತ ತಂಡ ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್‍ಗೆ ಒಳಗಾಗಿದೆ.

  • ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಮುಂಬೈ: ಟೀಂ ಇಂಡಿಯಾ ಆಟಗಾರರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಧರಿಸುವ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ. ಈ ಜೆರ್ಸಿ ರೆಟ್ರೋ ಶೈಲಿಯಲ್ಲಿದ್ದು, ಆಟಗಾರರು ಒಬ್ಬೊಬ್ಬರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಕ್ಕಾಗಿ ಟೀಂ ಇಂಡಿಯಾ ರೆಟ್ರೋ ಶೈಲಿಯ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇದೀಗ ಈ ರೆಟ್ರೋ ಶೈಲಿಯ ಜೆರ್ಸಿಯನ್ನು ತೊಟ್ಟು ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಾನು ಈ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಲು ಕಾತರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

     

    View this post on Instagram

     

    A post shared by Ravindra jadeja (@ravindra.jadeja)

    ಕಳೆದ ದಿನ ಭಾರತ ತಂಡದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ತೊಡುವ ರೆಟ್ರೋ ಜಂಪರ್ ಶೈಲಿಯ ಸ್ವೆಟರ್ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಇದೀಗ ಟೀಂ ಇಂಡಿಯಾ ಆಟಗಾರರು ತೊಟ್ಟಿರುವ ರೆಟ್ರೋ ಶೈಲಿಯ ಜೆರ್ಸಿ ಮತ್ತು ಸ್ವೆಟರ್‍ನಲ್ಲಿ ಯಾವುದೇ ಕಂಪನಿಯ ಲಾಂಛನವನ್ನು ಜೆರ್ಸಿಯ ಮುಂಭಾಗದಲ್ಲಿ ಬಳಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾಗಿರುವುದರಿಂದ ಕೇವಲ ಬಿಸಿಸಿಐ ಹಾಗೂ ಐಸಿಸಿ ಲೋಗೋ ಮಾತ್ರ ಬಳಸಿಕೊಳ್ಳಲಾಗಿದೆ. ಪ್ರಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲೋಗೋ ಸ್ವೆಟರ್ ಮೇಲೆ ಹಾಕಿಲ್ಲ. ಆದರೆ ಜೆರ್ಸಿಯ ಕೈ ತೋಳಿನ ಭಾಗದಲ್ಲಿ ಬೈಜುಸ್‍ನ ಲೋಗೋ ಹಾಕಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಟ ಜೂನ್ 18 ರಿಂದ ಇಂಗ್ಲೆಂಡ್‍ನ ಸೌಥಾಂಪ್ಟನ್‍ನಲ್ಲಿ ನಡೆಯಲಿದೆ.

  • ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 4 ವಿಕೆಟ್ ಪಡೆದರೆ ಅಶ್ವಿನ್ ನೂತನ ದಾಖಲೆ

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 4 ವಿಕೆಟ್ ಪಡೆದರೆ ಅಶ್ವಿನ್ ನೂತನ ದಾಖಲೆ

    ಮುಂಬೈ: ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ 4 ವಿಕೆಟ್ ಪಡೆದರೆ ನೂತನ ದಾಖಲೆ ಮಾಡಲಿದ್ದಾರೆ.

    ಡಬ್ಲ್ಯುಟಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಈಗಾಗಲೇ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ 14 ಪಂದ್ಯಗಳಿಂದ 70 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ಇದೀಗ ರವಿಚಂದ್ರನ್ ಅಶ್ವಿನ್‍ಗೆ ಕೇವಲ 4 ವಿಕೆಟ್‍ಗಳ ಅಗತ್ಯವಿದೆ. ಈಗಾಗಲೇ ಅಶ್ವಿನ್ 13 ಪಂದ್ಯಗಳಿಂದ 67 ವಿಕೆಟ್ ಕಬಳಿಸಿದ್ದಾರೆ. ಇನ್ನು 4 ವಿಕೆಟ್ ಪಡೆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುವ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡುವ ಇನ್ನೊಬ್ಬ ಬೌಲರ್ ಟಿಮ್ ಸೌಥಿ 10 ಪಂದ್ಯಗಳಿಂದ 51 ವಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ಈ ದಾಖಲೆ ಬರೆಯಲು ಇನ್ನೂ 20 ವಿಕೆಟ್ ಅವಶ್ಯಕತೆ ಇದೆ ಹಾಗಾಗಿ ಸೌಥಿ ದಾಖಲೆ ನಿರ್ಮಿಸುವುದು ಕಷ್ಟದ ಮಾತಾಗಿದೆ.

    ಆದರೆ ಅಶ್ವಿನ್ ಉತ್ತಮ ಅವಕಾಶವಿರುವುದರಿಂದಾಗಿ ಈ ದಾಖಲೆಯ ಒಡೆಯನಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಆದರೆ ಇಂಗ್ಲೆಂಡ್‍ನಲ್ಲಿ ನಡೆಯುವ ಡಬ್ಲ್ಯುಟಿಸಿ ಫೈನಲ್ ಪಂದ್ಯ ಸೌಥಾಂಪ್ಟನ್ ನಡೆಯಲಿದೆ. ಈ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಭಾರತ ತಂಡ ಕೇವಲ ಓರ್ವ ಸ್ಪಿನ್ ಬೌಲರ್‍ ನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ತಂಡದಲ್ಲಿ ಈಗಾಗಲೇ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ ಅಶ್ವಿನ್‍ಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಮಾತ್ರ ಈ ದಾಖಲೆ ನಿರ್ಮಿಸಲು ಅವಕಾಶವಿದೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಜೂನ್ 18ರಿಂದ 22 ವರೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯಾಟ ನಡೆಯಲಿದೆ. ಈಗಾಗಲೇ ಬಿಸಿಸಿಐ 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಆಟಗಾರರೂ ಕೂಡ ಈಗಾಗಲೇ ಮುಂಬೈನಲ್ಲಿ ಕಠಿಣ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

  • ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯ ಲಾರ್ಡ್ಸ್ ನಿಂದ ನ್ಯೂಜಿಲ್ಯಾಂಡ್‍ಗೆ ಶಿಫ್ಟ್

    ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯ ಲಾರ್ಡ್ಸ್ ನಿಂದ ನ್ಯೂಜಿಲ್ಯಾಂಡ್‍ಗೆ ಶಿಫ್ಟ್

    ಮುಂಬೈ: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವನ್ನು ಐತಿಹಾಸಿಕ ಇಂಗ್ಲೆಂಡ್‍ನ ಲಾರ್ಡ್ಸ್ ಅಂಗಳದಿಂದ ನ್ಯೂಜಿಲ್ಯಾಂಡ್‍ನ ಸೌತಾಂಪ್ಟನ್ ಅಂಗಳಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

    ಸ್ಥಳೀಯ ಮಾಧ್ಯಗಳೊಂದಿಗೆ ಮಾತನಾಡಿದ ಗಂಗೂಲಿ, ಫೈವ್ ಸ್ಟಾರ್ ಸೌಲಭ್ಯವನ್ನು ಹೊಂದಿರುವ ಕಾರಣ ಮತ್ತು ಬಯೋ ಬಬಲ್‍ನಲ್ಲಿ ಆಟಗಾರರನ್ನು ಇರಿಸಲು ಸುಲಭವಾಗುವ ರೀತಿಯಿಂದಾಗಿ ಪಂದ್ಯವನ್ನು ನ್ಯೂಜಿಲ್ಯಾಂಡ್‍ನ ಸೌತಾಂಪ್ಟನ್ ಅಂಕಣದಲ್ಲಿ ಜೂನ್ 18 ರಿಂದ 22 ವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಭಾರತ, ಇಂಗ್ಲೆಂಡ್ ವಿರುದ್ಧ 3-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿದ್ದಂತೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೆ ಅರ್ಹತೆ ಪಡೆದುಕೊಂಡಿತ್ತು. ಈ ಮೂಲಕ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಮೊದಲು ಟೆಸ್ಟ್ ಚಾಂಪಿಯನ್ ಶಿಪ್ ಇಂಗ್ಲೆಂಡ್‍ನ ಲಾರ್ಡ್ಸ್ ನಲ್ಲಿ ನಿಗದಿಯಾಗಿತ್ತು. ಆದರೆ ಇದೀಗ ನ್ಯೂಜಿಲ್ಯಾಂಡ್‍ನಲ್ಲಿ ನಡೆಯಲಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ನೋಡಲು ನಾನು ಕಾತರನಾಗಿದ್ದು, ಇದಕ್ಕಾಗಿ ನ್ಯೂಜಿಲ್ಯಾಂಡ್‍ಗೆ ತೆರಳಲು ಸಿದ್ಧನಾಗುತ್ತಿದ್ದೇನೆ. ನ್ಯೂಜಿಲ್ಯಾಂಡ್‍ನ ನ ಸೌತಾಂಪ್ಟನ್‍ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಗಂಗೂಲಿ ಹೇಳಿದ್ದಾರೆ.

    ಗಂಗೂಲಿ ಭಾರತದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವಿನ ಬಗ್ಗೆ ಮಾತನಾಡಿ, ಭಾರತ ತಂಡ ಉತ್ತಮವಾಗಿ ಆಡಿ ಸರಣಿ ಜಯದೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್‍ಗೆ ಅರ್ಹತೆ ಪಡೆದುಕೊಂಡಿದೆ. ಆಟಗಾರರು ಕೊರೊನಾ ಬಳಿಕ ಬಯೋ ಬಬಲ್‍ನಲ್ಲಿದ್ದುಕೊಂಡು ಕ್ರಿಕೆಟ್ ಆಡುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಕೂಡ ನಡೆಯಲಿದೆ ಎಂದರು.

    ಭಾರತ, ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಟೆಸ್ಟ್ ಸರಣಿ ಗೆದ್ದರೆ, ತವರಿನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಸರಣಿ ಜಯಿಸಿದೆ. ಭಾರತ ತಂಡದ ಪರ ರಿಷಬ್ ಪಂತ್ ಮಿಂಚುಹರಿಸುವ ಮೂಲಕ ತಂಡದಲ್ಲಿದ್ದ ಮಾಜಿ ಆಟಗಾರರಾದ ಸೆಹ್ವಾಗ್, ಯುವರಾಜ್, ಧೋನಿ ಬಳಿಕ ಉತ್ತಮ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

  • ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್‍ನಿಂದ ಇಂಗ್ಲೆಂಡ್ ಔಟ್ ಆಗಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾದ ಪೈಕಿ ಯಾರು ಅರ್ಹತೆ ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಮೂರನೇ ಪಂದ್ಯವನ್ನು 10 ವಿಕೆಟ್‌ಗಳಿಂದ ಭಾರತ ಜಯಸಿ 490 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. 442 ಅಂಕ ಪಡೆದಿರುವ ಇಂಗ್ಲೆಂಡ್‌ 4ನೇ ಸ್ಥಾನದಲ್ಲಿದೆ. 420 ಅಂಕ ಪಡೆದಿರುವ ನ್ಯೂಜಿಲೆಂಡ್‌ 2ನೇ ಸ್ಥಾನ, 332 ಅಂಕ ಹೊಂದಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದಿದ್ದರೂ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆಯುತ್ತಾ ಇಲ್ಲವೋ ಇನ್ನುವುದು 4ನೇ ಟೆಸ್ಟ್‌ ಫಲಿತಾಂಶದ ಮೇಲೆ ನಿಂತಿದೆ. ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದರೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಒಂದು ವೇಳೆ ಗೆಲ್ಲದೇ ಇದ್ದರೂ ಕನಿಷ್ಠ ಡ್ರಾ ಮಾಡಿಕೊಂಡರೂ ಭಾರತಕ್ಕೆ ಅವಕಾಶವಿದೆ.

    ಕೊನೆಯ ಪಂದ್ಯವನ್ನು ಭಾರತ ಸೋತರೆ ಇಂಗ್ಲೆಂಡ್‌ ಅರ್ಹತೆ ಪಡೆಯುವುದಿಲ್ಲ ಬದಲಾಗಿ ಆಸ್ಟ್ರೇಲಿಯಾ ಅರ್ಹತೆ ಪಡೆಯಲಿದೆ. ಆಸ್ಟ್ರೇಲಿಯಾ 332 ಅಂಕ ಪಡೆದರೂ ಅರ್ಹತೆ ಪಡೆಯಲು ಕಾರಣವಾಗಿರುವುದು ಪರ್ಸಟೇಜ್‌ ಆಫ್‌ ಪಾಯಿಂಟ್‌.

    ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ 70 ಪಿಸಿಟಿಯೊಂದಿಗೆ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಭಾರತ 490 ಅಂಕ ಪಡೆದರೂ 71.0 ಪಿಸಿಟಿ ಹೊಂದಿದೆ. ಅದೇ ಆಸ್ಟ್ರೇಲಿಯಾ 332 ಅಂಕದೊಂದಿಗೆ 69.2 ಪಿಸಿಟಿ ಹೊಂದಿದೆ. ಕೊನೆಯ ಟೆಸ್ಟ್‌ ಪಂದ್ಯವನ್ನು ಭಾರತ ಸೋತರೆ ಪಿಸಿಟಿ ಆಧಾರದ ಮೇಲೆ ಆಸ್ಟ್ರೇಲಿಯಾ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಈ ಕಾರಣಕ್ಕೆ ಭಾರತಕ್ಕೆ ಕೊನೆಯ ಟೆಸ್ಟ್‌ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲದೇ ಇದ್ದರೂ ಡ್ರಾ ಮಾಡಿಕೊಂಡರೂ ಕಪ್‌ ಜಯಿಸುವುದರ ಜೊತೆಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಅವಕಾಶ ಪಡೆಯಲಿದೆ.

  • ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

    ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

    ದುಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ವೈಟ್‍ವಾಶ್ ಕಂಡರೂ ಭಾರತ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದೆ.

    ತಾಯ್ನಾಡಿನಲ್ಲಿ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಚಳಿ ಬಿಡಿಸಿದ ವಿರಾಟ್

    ಭಾರತದ ವಿರುದ್ಧ ಗೆದ್ದು ಬೀಗಿರುವ ನ್ಯೂಜಿಲೆಂಡ್ ತಂಡವು ಟೆಸ್ಟ್ ಶ್ರೇಯಾಂಕದಲ್ಲಿ ಎರಡು ಸ್ಥಾನ ನೆಗೆತ ಕಂಡಿದೆ. ಟೀಂ ಇಂಡಿಯಾ 116 ಅಂಕ ಪಡೆದಿದ್ದರೆ, ಕಿವೀಸ್ 110 ಅಂಕ ಗಳಿಸಿದೆ. 108 ಅಂಕಗಳಿಂದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ – ಭಾರತಕ್ಕೆ ಹೀನಾಯ ಸೋಲು

    2019ರ ಡಿಸೆಂಬರ್- 2020ರ ಜನವರಿಯಲ್ಲಿ ಆಸ್ಟ್ರೇಲಿಯಾ ತಂಡವು 3-0 ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತ್ತು. ಇದರಿಂದಾಗಿ ಕಿವೀಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಈಗ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ. ಇದೇ ಸಮಯದಲ್ಲಿ ಇಂಗ್ಲೆಂಡ್ 105 ಅಂಕಗಳಿಂದ ನಾಲ್ಕನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾ 98 ಅಂಕಗಳಿಂದ ಐದನೇ ಸ್ಥಾನದಲ್ಲಿವೆ.

    ಟೆಸ್ಟ್ ಚಾಂಪಿಯನ್‍ಶಿಪ್:
    2019-21ರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2019ರಿಂದ ಒಟ್ಟು ನಾಲ್ಕು ಸರಣಿಯ 9 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದೆ. ಈ ಪೈಕಿ 7 ಪಂದ್ಯ ಗೆದ್ದಿದ್ದು, 2ರಲ್ಲಿ ಸೋಲು ಕಂಡು 3 ಸರಣಿಯನ್ನು ಗೆದ್ದು ಬೀಗಿದೆ. ಈ ಮೂಲಕ ಭಾರತವು 360 ಪಾಯಿಂಟ್ಸ್ ಗಳಿಸಿದೆ.

    ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಇದುವರೆಗೂ 3 ಸರಣಿಯಲ್ಲಿ 10 ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಗೆದ್ದರೆ, ಎರಡರಲ್ಲಿ ಸೋಲು ಕಂಡು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು ಎರಡು ಸರಣಿ ಗೆದ್ದಿರುವ ಆಸೀಸ್ ಪಡೆ 296 ಪಾಯಿಂಟ್ಸ್ ಗಳಿಸಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 3 ಸರಣಿಯಲ್ಲಿ 7 ಪಂದ್ಯ ಆಡಿದ್ದು, ಮೂರು ಪಂದ್ಯ ಗೆದ್ದು ಬೀಗಿದರೆ, 4ರಲ್ಲಿ ಸೋಲು ಕಂಡಿದೆ. ಒಂದು ಸರಣಿಯನ್ನು ತನ್ನ ಕೈವಶ ಮಾಡಿಕೊಂಡ ಕಿವೀಸ್ 180 ಪಾಯಿಂಟ್ಸ್ ಗಳಿಸಿದೆ. ಉಳಿದಂತೆ ಇಂಗ್ಲೆಂಡ್ 146 ಪಾಯಿಂಟ್ಸ್ ಗಳಿಂದ 4ನೇ ಸ್ಥಾನ, 140 ಪಾಯಿಂಟ್ಸ್ ಗಳಿಸಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.