Tag: World Health Organisation

  • ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಹರಡುತ್ತಾ ಮಂಕಿಪಾಕ್ಸ್‌; ತಜ್ಞರು ಹೇಳೋದೇನು?

    ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಹರಡುತ್ತಾ ಮಂಕಿಪಾಕ್ಸ್‌; ತಜ್ಞರು ಹೇಳೋದೇನು?

    ನವದೆಹಲಿ: ಮಂಕಿಪಾಕ್ಸ್‌ ಸೋಂಕು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ನಂತರ, ಸೋಂಕಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಹಲವಾರು ಅಚ್ಚರಿದಾಯಕ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕ ಹೊಂದುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅವರಿಗೂ ಸೋಂಕು ಹರಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಲೈಂಗಿಕ ಕ್ರಿಯೆಯಿಂದ ಹರಡುತ್ತೆ ಸೋಂಕು
    ಮಂಕಿಪಾಕ್ಸ್‌ ಸೋಂಕು ತಗುಲಿರುವವರೊಂದಿಗೆ ಸಂಕರ್ಪ ಹೊಂದದರೆ ಅವರಿಗೂ ಸೋಂಕು ಹರಡಲಿದೆ. ಚುಂಬಿಸುವುದು, ಸ್ಪರ್ಷಿಸುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ಹರಡಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    WHO ಪ್ರಕಾರ ದದ್ದುಗಳು, ದೇಹದ ದ್ರವ (ದ್ರವ, ಕೀವು ಅಥವಾ ಚರ್ಮದ ಗಾಯಗಳಿಂದ ಬರುವ ರಕ್ತ) ಮತ್ತು ಹುರುಪುಗಳು ಇತರರಿಗೂ ಸೋಂಕು ಹರಡುತ್ತವೆ. ಲಾಲಾರಸದ ಮೂಲಕ ವೈರಸ್ ಹರಡುವುದರಿಂದ ಹುಣ್ಣುಗಳು, ಗಾಯಗಳು ಸಹ ಸಾಂಕ್ರಾಮಿಕವಾಗಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಸ್ತುಗಳು (ಬಟ್ಟೆ, ಹಾಸಿಗೆ, ಟವೆಲ್‌, ಅಡುಗೆ ಪಾತ್ರೆಗಳು) ವಸ್ತುಗಳು ಸಹ ಸೋಂಕಿನ ಮೂಲವಾಗಿರಬಹುದು.

    ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ. ಧೀರೇನ್ ಗುಪ್ತಾ, ಲೈಂಗಿಕ ಸಂಪರ್ಕದ ಸಮಯದಲ್ಲಿ ಮಂಕಿಪಾಕ್ಸ್ ಹರಡುವಿಕೆ ಹೆಚ್ಚಾಗುತ್ತದೆ. ಇದು ನಿಕಟ ಸಂಪರ್ಕದ ಸಮಯದಲ್ಲಿ ಸಂಭವಿಸಬಹುದು. ತಬ್ಬಿಕೊಳ್ಳುವುದು, ಮಸಾಜ್ ಮಾಡುವುದು ಮತ್ತು ಚುಂಬಿಸುವುದು ಮತ್ತು ದೀರ್ಘಾವಧಿಯ ಮುಖಾಮುಖಿ ಸಂಪರ್ಕವು ವೈರಸ್‌ ಹರಡುವಿಕೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ- ರಾಹುಲ್ ಗಾಂಧಿ ಪೊಲೀಸರ ವಶಕ್ಕೆ

    ಮಂಕಿಪಾಕ್ಸ್ ಲೈಂಗಿಕತೆಯ ಮೂಲಕ ಹರಡಬಹುದು. ಎಲ್ಲಾ ರೀತಿಯ ಸ್ಪರ್ಶದಿಂದ ಕಟ್ಟುನಿಟ್ಟಿನ ಪ್ರತ್ಯೇಕತೆ ಮುಖ್ಯ. ನೈರ್ಮಲ್ಯ ಕಾಪಾಡುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆರಂಭಿಕ ರೋಗಲಕ್ಷಣಗಳಿದ್ದಲ್ಲಿ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸುವ ಕೆಲಸವನ್ನು ಜನರು ಮಾಡಬೇಕು. ಮಂಕಿಪಾಕ್ಸ್‌ ಬಗ್ಗೆ ಜಾಗೃತಿ ಅಗತ್ಯ ಎಂದು ಗುಪ್ತಾ ಅವರು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜಸ್ಥಾನಕ್ಕೆ 100 ಆಕ್ಸಿಜನ್ ಕಾನ್ಸೆಂಟ್ರೇಟರ್ ದೇಣಿಗೆಯಾಗಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

    ರಾಜಸ್ಥಾನಕ್ಕೆ 100 ಆಕ್ಸಿಜನ್ ಕಾನ್ಸೆಂಟ್ರೇಟರ್ ದೇಣಿಗೆಯಾಗಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

    ಜೈಪುರ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ)ಯ ಜೈಪುರ ಘಟಕ 100 ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು  ರಾಜಸ್ಥಾನ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ.

    ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕೆ ಸಹಕರಿಸಿದ ವಿಶ್ವ ಆರೋಗ್ಯ ಸಂಸ್ಥೆಗೆ ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಅವರು ಧನ್ಯವಾದ ತಿಳಿಸಿದ್ದಾರೆ. ರಾಜ್ಯದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

    ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ಮೂಲಕ ಒದಗಿಸಲಾಗುವ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು  ಸಾಂಕ್ರಾಮಿಕ ರೋಗ ನಿಭಾಯಿಸುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತಿದೆ. ಈ ಕಾನ್ಸೆಂಟ್ರೇಟರ್‌ಗಳಿಗೆ ನಿಮಿಷಕ್ಕೆ 8 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮಥ್ರ್ಯವಿದೆ. ಅದನ್ನು ಅಗತ್ಯಕ್ಕೆ ಅನುಗುಣವಾಗಿ ನಿಮಿಷಕ್ಕೆ 10 ಲೀಟರ್‌ಗೆ ಹೆಚ್ಚಿಸಬಹುದು ಎಂದು ಅವರು ಡಬ್ಲ್ಯುಎಚ್‍ಒ ಪ್ರತಿನಿಧಿ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

  • WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಹರ್ಷವರ್ಧನ್

    WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ.ಹರ್ಷವರ್ಧನ್

    ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

    ಇಡೀ ಜಗತ್ತು ಕೋವಿಡ್-19 ವೈರಸ್‍ನಿಂದ ಬಳಲುತ್ತಿರುವ ಸಮಯದಲ್ಲಿ ಡಾ.ಹರ್ಷ್ ವರ್ಧನ್ ಅವರು ನೇಮಕಾತಿಯಾಗಿದ್ದಾರೆ. ಬಂದಿದೆ. ಜಪಾನ್‍ನ ಡಾ. ಹಿರೊಕಿ ನಕಟನಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದರು. ಅವರ ಸ್ಥಾನವನ್ನು ಡಾ.ಹರ್ಷವರ್ಧನ್ ವಹಿಸಿಕೊಂಡಿದ್ದು, 34 ಮಂದಿ ಸದಸ್ಯರನ್ನು ಈ ಕಾರ್ಯಕಾರಿ ಮಂಡಳಿ ಹೊಂದಿದೆ. ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳು ಮಂಗಳವಾರದ ಸಭೆಯಲ್ಲಿ ಸಹಿ ಮಾಡಿದ್ದವು.

    ಇದು ಪೂರ್ಣ ಪ್ರಮಾಣದ ಹುದ್ದೆಯಲ್ಲ, ಅಧ್ಯಕ್ಷರಾದವರು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಮೇ 22ರಿಂದ 3 ವರ್ಷಗಳವರೆಗೆ ಭಾರತದ ಪ್ರತಿನಿಧಿಯನ್ನು ನಾಮಾಂಕಿತ ಮಾಡುವುದಕ್ಕೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಗ್ರೂಪ್ ಅವಿರೋಧವಾಗಿ ತೀರ್ಮಾನಿಸಿತ್ತು.

    ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಹರ್ಷ್ ವರ್ಧನ್, “ನನ್ನ ವೈಯಕ್ತಿಕ ಧ್ಯೇಯವಾಕ್ಯವೆಂದರೆ ಸಂಪತ್ತು ಇಲ್ಲದವರ ಆರೋಗ್ಯವನ್ನು ಕಾಪಾಡುವುದು” ಎಂದು ಹೇಳಿದ್ದಾರೆ.

    “ಹೆಮ್ಮಾರಿ ಕೊರೊನಾ ವೈರಸ್‍ನಿಂದ ವಿಶ್ವಾದ್ಯಂತ 3.30 ಲಕ್ಷಕ್ಕೂ ಹೆಚ್ಚು ಮೃತಪಟ್ಟಿದ್ದು ದುಃಖ ತಂದಿದೆ. ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಆರ್ಥಿಕ ಹೊಡೆತ ಉಂಟಾಗಿದೆ. ಈ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವ ಜಾಗತಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಈ ಕಚೇರಿಗೆ ಪ್ರವೇಶಿಸುತ್ತಿದ್ದೇನೆ. ಮುಂದಿನ 2 ದಶಕಗಳಲ್ಲಿ ಅನೇಕ ಆರೋಗ್ಯ ಸವಾಲುಗಳು ಎದುರಾಗುತ್ತವೆ ಎನ್ನುವುದನ್ನ ನಾವು ಅರ್ಥಮಾಡಿಕೊಂಡಿದ್ದೇವೆ. ಎಲ್ಲಾ ಸವಾಲುಗಳನ್ನ ಹಂಚಿಕೆಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ತಿಳಿಸಿದರು.

    ‘ಬಡತನದ ಸಮಯದಲ್ಲೇ ನಾವು ನಮ್ಮ ದೇಶದಲ್ಲಿ ಸಿಡುಬು ಮತ್ತು ಪೋಲಿಯೊವನ್ನು ನಿರ್ಮೂಲನೆ ಮಾಡಿದ್ದೇವೆ. ತೀರಾ ಇತ್ತೀಚೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಭಾರೀ ಪ್ರಯಾಣದ ಸಾವು ನೋವು ತಡೆದಿದ್ದೇವೆ. ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲಿ ಕೇವಲ ಶೇ.3ರಷ್ಟು ಜನ ಸೋಂಕಿತರು ಮೃತಪಟ್ಟಿದ್ದಾರೆ. 135 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೇವಲ 1 ಲಕ್ಷಕ್ಕೂ ಅಧಿಕ ಜನರಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಈ ಪೈಕಿ ಶೇ.40ಕ್ಕಿಂತ ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ” ಎಂದು ಮಾಹಿತಿ ನೀಡಿದರು.