Tag: World Cup public TV

  • ಕೆಎಲ್ ರಾಹುಲ್, ಪಾಂಡ್ಯ ವಿಶ್ವಕಪ್ ಭವಿಷ್ಯದ ಮೇಲೆ ತೂಗುಗತ್ತಿ

    ಕೆಎಲ್ ರಾಹುಲ್, ಪಾಂಡ್ಯ ವಿಶ್ವಕಪ್ ಭವಿಷ್ಯದ ಮೇಲೆ ತೂಗುಗತ್ತಿ

    ನವದೆಹಲಿ: ಬಿಸಿಸಿಐ ಕೆಲ ದಿನಗಳ ಹಿಂದೆಯಷ್ಟೇ 2019ರ ವಿಶ್ವಕಪ್‍ಗೆ 15 ಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿಶ್ವಕಪ್‍ಗೆ ತೆರಳುವ ಕುರಿತು ಅನುಮಾನಗಳು ಮೂಡಿದೆ.

    ಕಾಫಿ ವಿಥ್ ಕರಣ್ ಶೋನಲ್ಲಿ ಮಹಿಳೆಯರಿಗೆ ಅಗೌರವ ತೋರಿ ಮಾತನಾಡಿದ್ದರ ಕುರಿತು ತನಿಖೆ ಮುಂದುವರಿದಿದೆ. ಏಪ್ರಿಲ್ 09 ಮತ್ತು 10 ರಂದು ರಾಹುಲ್, ಪಾಂಡ್ಯ ಸುಪ್ರೀಂ ಕೋರ್ಟ್ ನೇಮಕ ಮಾಡಿದ ನ್ಯಾ. ಡಿಕೆ ಜೈನ್ ಅವರ ಎದುರು ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಆದರೆ ಈ ವರದಿಯನ್ನು ನ್ಯಾಯಮೂರ್ತಿಗಳು ಬಿಸಿಸಿಐಗೆ ಸಲ್ಲಿಸಬೇಕಿದೆ.

    ಒಂದೊಮ್ಮೆ ಕಾರ್ಯಕ್ರಮದಲ್ಲಿ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ ಎಂಬುವುದು ತೀರ್ಮಾನವಾದರೆ ಅವರ ಮೇಲೆ ಮತ್ತೆ ನಿಷೇಧ ವಿಧಿಸುವ ಸಾಧ್ಯತೆ ಇದೆ. ವಿಶ್ವಕಪ್ ಆಟಗಾರರ ಪಟ್ಟಿಯನ್ನು ಬದಲಾವಣೆ ಮಾಡಲು ಐಸಿಸಿ 23ರ ವರೆಗೂ ಅವಕಾಶ ನೀಡಿದ ಪರಿಣಾಮ ಬಿಸಿಸಿಐ ಆಟಗಾರರ ಬದಲಿಯಾಗಿ ಆಯ್ಕೆ ಮಾಡಲು ಅವಕಾಶ ಪಡೆದಿದೆ. ಈ ಇಬ್ಬರು ಆಟಗಾರರ ನಿಷೇಧವಾದರೆ ಬಿಸಿಸಿಐ ಘೋಷಿಸಿರುವ ಸ್ಟ್ಯಾಂಡ್ ಬೈ ಪ್ಲೇಯರ್ ಗೆ ಅವಕಾಶವನ್ನು ಪಡೆಯುತ್ತಾರೆ.

    ಇಬ್ಬರು ಕ್ರಿಕೆಟಿಗರೊಂದಿಗೆ ಮಾತನಾಡಿದ ಬಳಿಕ ಹೇಳಿಕೆ ನೀಡಿದ್ದ ನ್ಯಾ. ಜೈನ್ ಅವರು, ಘಟನೆ ಬಗ್ಗೆ ಅಗತ್ಯ ವಿವರಗಳನ್ನು ನೀಡಿದ್ದಾರೆ. ಈ ಬಗ್ಗೆ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದ್ದರು.

  • ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಧೋನಿಯನ್ನು ಟೀಕಿಸೋ ಮಂದಿಗೆ ಶೇನ್ ವಾರ್ನ್ ಟಾಂಗ್!

    ಚೆನ್ನೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡದಲ್ಲಿ ಅನುಭವಿ ಆಟಗಾರ ಎಂಎಸ್ ಧೋನಿ ಇರಲೇ ಬೇಕು ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್ ವಾರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತಂಡ ಕಠಿಣ, ಒತ್ತಡದ ಸನ್ನಿವೇಶಗಳನ್ನು ಎದುರಿಸಲು ಅನುಭವಿ ಆಟಗಾರ ಧೋನಿ ಅವರ ಅಗತ್ಯವಿದೆ. ನನ್ನ ಪ್ರಕಾರ ಧೋನಿ ಅದ್ಭುತ ಆಟಗಾರ. ಧೋನಿ ತಂಡದಲ್ಲಿ ಇರುವುದು ಅಷ್ಟೇ ಉತ್ತಮ ಎಂದು ವಾರ್ನ್ ಹೇಳಿದ್ದಾರೆ.

    ಇದೇ ವೇಳೆ ಧೋನಿ ಅವರನ್ನು ಟೀಕೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶೇನ್ ವಾರ್ನ್, ಧೋನಿ ಅವರನ್ನು ಟೀಕೆ ಮಾಡುವವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬುವುದೇ ತಿಳಿದಿರುವುದಿಲ್ಲ. ವಿಶ್ವಕಪ್ ಎದುರಿಸಲಿರುವ ಟೀಂ ಇಂಡಿಯಾ ತಂಡಕ್ಕೆ ಧೋನಿ ಅವರ ಅನುಭವ, ನಾಯಕತ್ವದ ತಂತ್ರಗಾರಿಕೆ ಅಗತ್ಯವಿದೆ ಎಂದರು.

    ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ನಿರೀಕ್ಷೆಯ ತಂಡಗಳಾಗಿವೆ. ಏಕೆಂದರೆ ಇತ್ತಂಡಗಳು ಕಳೆದ ಒಂದು ವರ್ಷದಲ್ಲಿ ಅಂತಹ ಉತ್ತಮ ಪ್ರದರ್ಶನಗಳನ್ನು ನೀಡಿದೆ. ಆದರೆ ಆಸೀಸ್ ತಂಡವೂ ಕೂಡ ವಿಶ್ವಕಪ್ ವಿನ್ನಿಂಗ್ ರೆಸ್‍ನಲ್ಲಿದೆ ಎಂದು ತಿಳಿಸಿದರು.

    ಬಹು ನಿರೀಕ್ಷೆಯ ವಿಶ್ವಕಪ್ ಟೂರ್ನಿ ಮೇ 30 ರಿಂದ ಜುಲೈ 14ರ ವರೆಗೂ ನಡೆಯಲಿದೆ. ಟೀಂ ಇಂಡಿಯಾ ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv