Tag: world cup

  • Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    ಕೊಲಂಬೋ: ಏಷ್ಯಾ ಕಪ್‌ (Asia Cup) ಕಪ್‌ ವಿವಾದ ಜೀವಂತವಾಗಿರುವ ಬೆನ್ನಲ್ಲೇ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಇಂದು ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ( ICC Women’s World Cup) ಪಂದ್ಯದಲ್ಲಿ ದೊಡ್ಡ ಎಡವಟ್ಟಾಗಿದೆ.

    ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಹಾಕಲು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಫಾತಿಮಾ ಸನಾ ಆಗಮಿಸಿದರು. ಈ ವೇಳೆ ಇಬ್ಬರು ನಾಯಕಿಯರು ಹ್ಯಾಂಡ್‌ಶೇಕ್‌ ಮಾಡಲಿಲ್ಲ. ನಂತರ ಹರ್ಮನ್‌ಪ್ರೀತ್‌ ಕೌರ್‌  ಟಾಸ್‌ ಹಾಕಿದಾಗ ಫಾತಿಮಾ ಸನಾ ʼಟೇಲ್‌ʼ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ನಾಣ್ಯ ನೆಲಕ್ಕೆ ಬಿದ್ದ ಕೂಡಲೇ ಆಸ್ಟ್ರೇಲಿಯಾದ ನಿರೂಪಕ ಮೆಲ್ ಜೋನ್ಸ್ ʼಹೆಡ್ʼ ಎಂದು ಹೇಳಿದರು. ಆದರೆ ಐಸಿಸಿ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್ ಪಾಕ್‌ ನಾಯಕಿಯನ್ನು ಕರೆದರು. ಫಾತಿಮಾ ಸನಾ ಕೂಡಲೇ ನಾವು ಬೌಲಿಂಗ್‌ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಭಾರತದ ಆಟಗಾರ್ತಿಯರು ಬ್ಯಾಟಿಂಗ್‌ಗೆ ಇಳಿದರು. ಇದನ್ನೂ ಓದಿ:  ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಹರ್ಮನ್‌ಪ್ರೀತ್‌ ಕೌರ್‌ ಸಹ ರೆಫ್ರಿ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕೌರ್‌ ಅವರಿಗೆ ಟಾಸ್‌ನಲ್ಲಿ ಎಡವಟ್ಟಾಗಿದ್ದು ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ರೆಫ್ರಿ ನಿರ್ಧಾರವನ್ನು ವಿರೋಧಿಸಲಿಲ್ವಾ ಎಂಬ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಉತ್ತರ ಸಿಗಲಿದೆ.

    ರೆಫ್ರಿ ಶಾಂಡ್ರೆ ಫ್ರಿಟ್ಜ್ ಯಾಕೆ ತಪ್ಪು ನಿರ್ಧಾರ ಕೈಗೊಂಡರು? ಟೇಲ್‌ ಎಂದು ಹೇಳಿದರೂ ಫಾತಿಮಾ ಸನಾ ಹೋಗಿದ್ದು ಯಾಕೆ ಎಂದು ನೆಟ್ಟಿಗರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ವೇಳೆ ಪಾಕಿಸ್ತಾನ ಟಾಸ್‌ ಗೆದ್ದು ರೆಫ್ರಿ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ಕರೆದಿದ್ದರೆ ಇಷ್ಟು ಹೊತ್ತಿಗೆ ಐಸಿಸಿಯನ್ನು ಬಿಸಿಸಿಐ ಖರೀದಿಸಿದೆ ಎಂಬ ಟ್ರೆಂಡ್‌ ಆರಂಭವಾಗುತ್ತಿತ್ತು. ಜಯ್‌ ಶಾ ಅಧ್ಯಕ್ಷರಾಗಿರುವ ಕಾರಣ ಐಸಿಸಿ ಹೇಗೆ ಬೇಕಾದರೂ ಪಂದ್ಯವನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂಬ ಕಮೆಂಟ್‌ ಪಾಕ್‌ ಪರವಾಗಿ ಬರುತ್ತಿದ್ದವು ಎಂದು ಕ್ರಿಕೆಟ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    – ಇಲ್ಲಿದೆ ಗೆದ್ದವರು, ಸೋತವರ ಪಟ್ಟಿ

    ಯಾವುದೇ ಮಹತ್ವದ ಟೂರ್ನಿ ಒಂದು ಮಾದರಿಯಲ್ಲಿ ನಡೆಯಬೇಕಾದ್ರೆ ಅದರ ಸ್ವರೂಪ ಮೊದಲೇ ನಿರ್ಧಾರವಾಗಿರುತ್ತೆ.. ಆದ್ರೆ ಏಷ್ಯಾ ಕಪ್ (Asia Cup 2025) ಮಾತ್ರ ಹಾಗಲ್ಲ. 2022ರಲ್ಲಿ ನಡೆದ ಏಷ್ಯಾ ಕಪ್ ಟಿ20 ಮಾದರಿಯಲ್ಲಿ ನಡೆದಿತ್ತು. 2023ರಲ್ಲಿ ಏಕದಿನ ಮಾದರಿಯಲ್ಲಿ ನಡೆಯಿತು. ಇದೀಗ ಮತ್ತೆ ಟಿ20 ಮಾದರಿಗೆ ಬದಲಾಯಿಸಲಾಗಿದೆ. ಈ ರೀತಿ ಪ್ರತಿಬಾರಿಯೂ ಮಾದರಿ ಬದಲಾಯಿಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಏಷ್ಯಾ ಕಪ್‌ ಟಿ20 ಕ್ರಿಕೆಟ್‌ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಪಾಕಿಸ್ತಾನದ ವಿರುದ್ಧ ಸೂಪರ್‌ ಸಂಡೇ ಹೈವೋಲ್ಟೇಜ್‌ ಪಂದ್ಯವನ್ನಾಡಲಿದೆ.

    ವಿಶ್ವಕಪ್‌ಗೆ ಪೂರ್ವತಯಾರಿ ಏಷ್ಯಾ ಕಪ್
    1975ರಲ್ಲಿ ಪ್ರಾರಂಭವಾದ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ಅದೇ 2007ರಲ್ಲಿ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್ ಅನ್ನು ಪ್ರತಿ 2 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾ ಕಪ್ ಸಹ 2 ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ ಇದನ್ನು ವಿಶ್ವಕಪ್‌ಗೆ ಪೂರ್ವತಯಾರಿಯಾಗಿ ನಡೆಸಲು ಅನುಕೂಲ ಆಗುವಂತೆ ನಡೆಸಲು ಐಸಿಸಿ ನಿರ್ದೇಶನ ನೀಡಿದೆ. ಹಾಗಾಗಿ ಪ್ರತಿ ಬಾರಿ ಟಿ20 ವಿಶ್ವಕಪ್‌ಗೆ (T20 World Cup) ಮುನ್ನ ಟಿ20 ಮಾದರಿಯಲ್ಲಿ ಏಕದಿನ ವಿಶ್ವಕಪ್‌ಗೆ ಮುನ್ನ ಏಕದಿನ ಮಾದರಿಯಲ್ಲಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

    ಯಾವಾಗಿನಿಂದ ಈ ಬದಲಾವಣೆ?
    2015ರ ಬಳಿಕ ಈ ಬೆಳವಣಿಗೆ ನಡೆದಿದೆ. 2016 ರಲ್ಲಿ ಏಷ್ಯಾಕಪ್ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2016ರ ಟಿ20 ವಿಶ್ವಕಪ್‌ಗೂ ಮುನ್ನ ಸಿದ್ಧತೆಯಾಗಿತ್ತು. 2018 ರಲ್ಲಿ ಏಷ್ಯಾ ಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಿತು. ಇದು 2019ರ ಏಕದಿನ ವಿಶ್ವಕಪ್‌ಗೆ ಸಿದ್ಧತೆಯಾಗಿತ್ತು. 2022ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2022ರ ಟಿ20 ವಿಶ್ವಕಪ್‌ಗೆ ಪೂರ್ವತಯಾರಿ ಆಗಿತ್ತು. 2023 ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಿತು. ಇದು 2023ರ ಏಕದಿನ ವಿಶ್ವಕಪ್‌ಗೆ ಸಕಲ ಸಿದ್ಧತೆಯಾಗಿತ್ತು. 2025 ರಲ್ಲಿ ಟಿ20ಐ ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ. ಇದು 2026 ರ ಟಿ20ಐ ವಿಶ್ವಕಪ್‌ಗೆ ಪೂರ್ವ ಸಿದ್ಧತೆಯಾಗಿರಲಿದೆ. ಜೊತೆಗೆ ಎರಡೂ ಮಾದರಿಗಳ ಜನಪ್ರಿಯತೆ ಹೆಚ್ಚಲು, ಅಭಿಮಾನಿಗಳನ್ನು, ಪ್ರಾಯೋಜಕರನ್ನು ಹಿಡಿದಿಟ್ಟುಕೊಳ್ಳಲು ಐಸಿಸಿ ಮತ್ತು ಎಸಿಸಿ ಕಂಡುಕೊಂಡಿರುವ ತಂತ್ರವಾಗಿದೆ.

    ಭಾರತವೇ ಯಶಸ್ವಿ ತಂಡ
    ಏಷ್ಯಾಕಪ್‌ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ.

    ಭಾರತ – 8 ಪ್ರಶಸ್ತಿಗಳು
    ಶ್ರೀಲಂಕಾ – 6 ಪ್ರಶಸ್ತಿಗಳು
    ಪಾಕಿಸ್ತಾನ – 2 ಪ್ರಶಸ್ತಿಗಳು

    ರನ್ನರ್‌ ಅಪ್‌
    ಶ್ರೀಲಂಕಾ – 7 ಬಾರಿ ರನ್ನರ್‌ ಅಪ್‌
    ಭಾರತ – 3 ಬಾರಿ ರನ್ನರ್‌ ಅಪ್‌
    ಪಾಕಿಸ್ತಾನ – 3 ಬಾರಿ ರನ್ನರ್‌ ಅಪ್‌
    ಬಾಂಗ್ಲಾದೇಶ – 3 ಬಾರಿ ರನ್ನರ್‌ ಅಪ್‌

  • ಪಾಕ್‌ಗೆ ಹೀನಾಯ ಸೋಲು – ವಿಶ್ವಕಪ್‌ ಟೂರ್ನಿಯಿಂದಲೇ ಭಾರತ ಔಟ್‌

    ಪಾಕ್‌ಗೆ ಹೀನಾಯ ಸೋಲು – ವಿಶ್ವಕಪ್‌ ಟೂರ್ನಿಯಿಂದಲೇ ಭಾರತ ಔಟ್‌

    ದುಬೈ: ಮಹಿಳಾ ವಿಶ್ವಕಪ್‌ (World Cup) ಟೂರ್ನಿಯಿಂದ ಭಾರತ (Team India) ಹೊರ ಬಿದ್ದಿದೆ. ಪಾಕಿಸ್ತಾನದ (Pakistan) ವಿರುದ್ಧ ನ್ಯೂಜಿಲೆಂಡ್‌ 54 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ (New Zealand) 6 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ 11.4 ಓವರ್‌ಗಳಲ್ಲಿ 56 ರನ್‌ಗಳಿಸಿ ಹೀನಾಯವಾಗಿ ಸೋಲನ್ನು ಒಪ್ಪಿಕೊಂಡಿತು.

    ಒಂದು ವೇಳೆ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿ ಪಾಕಿಸ್ತಾನ ಗೆದ್ದಿದ್ದರೆ ರನ್‌ ರೇಟ್‌ ಆಧಾರದಲ್ಲಿ ಭಾರತಕ್ಕೆ ಸೆಮಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಈ ಮೂಲಕ ಭಾರತ 8 ವರ್ಷಗಳ ಬಳಿಕ ಗ್ರೂಪ್‌ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದೆ.

    ಭಾರತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಜಯಗಳಿಸಿತ್ತು.

    ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದು 8 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ ನ್ಯೂಜಿಲೆಂಡ್‌ 6 ಅಂಕ ಪಡೆದು ಎರಡನೇ ಸ್ಥಾನ ಪಡೆದಿದೆ. ಭಾರತ 4 ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನ ಒಂದು ಜಯದೊಂದಿಗೆ 4ನೇ ಸ್ಥಾನ ಪಡೆದರೆ ಆಡಿರುವ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾ ಸೋತಿದೆ.

  • ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ಮುಂಬೈ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ನಾವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

    ಈ ಮೂಲಕ ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯುವುದನ್ನು ಬಿಸಿಸಿಐ ಖಚಿತ ಪಡಿಸಿದಂತಾಗಿದೆ. ವಿಡಿಯೋ ಮೂಲಕ ಜಯ್‌ ಶಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

     

    ಟಿ20 ವಿಶ್ವಕಪ್‌ (T20 World Cup) ಗೆಲುವನ್ನು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್, ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ್‌ ಶಾ ಅರ್ಪಿಸಿದ್ದಾರೆ.

    ಒಂದು ವರ್ಷದೊಳಗೆ ನಾವು ಮೂರು ಫೈನಲ್‌ ಪಂದ್ಯ ಆಡಿದ್ದೇವೆ. ಕಳೆದ ವರ್ಷ ಜೂನ್ 11 ರಂದು ನಾವು WTC ಫೈನಲ್‌ನಲ್ಲಿ ಸೋತಿದ್ದೇವೆ. ನವೆಂಬರ್ 19 ರಂದು 10 ಪಂದ್ಯಗಳನ್ನು ಗೆದ್ದು ನಾವು ಹೃದಯಗಳನ್ನು ಗೆದ್ದರೂ ಏಕದಿನ ವಿಶ್ವಕಪ್‌ ಗೆಲ್ಲಲು ವಿಫಲವಾಗಿದ್ದೇವೆ. ಆದರೆ ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಾನು ಹೇಳಿದಂತೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೃದಯಗಳನ್ನು ಮತ್ತು ವಿಶ್ವಕಪ್ ಗೆದ್ದಿದೆ ಎಂದು ತಿಳಿಸಿದರು.

    ಫೈನಲ್‌ನ ಕೊನೆಯ ಐದು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಬೌಂಡರಿ ಲೈನ್‌ ಬಳಿ ಅತ್ಯುತ್ತಮ ಕ್ಯಾಚ್‌ ಹಿಡಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಜಯ್‌ ಶಾ ಶ್ಲಾಘಿಸಿದರು.

    2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಶಾ ಅವರ ಹೇಳಿಕೆಯಿಂದ ಭಾರತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಪಾಕಿಸ್ತಾನಕ್ಕೆ ತೆರಳುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬಾರಿ ರೋಹಿತ್‌ ಶರ್ಮಾ ನಾಯಕತ್ವದ ಅಡಿಯಲ್ಲಿ ಫೈನಲ್‌ ಆಡಿ ರನ್ನರ್‌ ಅಪ್‌ ಸ್ಥಾನವನ್ನು ಪಡೆದುಕೊಂಡಿದೆ.

    202-25ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಿದ 9 ಟೆಸ್ಟ್‌ ಪಂದ್ಯಗಳಲ್ಲಿ 6 ಪಂದ್ಯ ಗೆದ್ದು74 ಅಂಕ ಸಂಪಾದಿಸಿ 68.52 ಪಿಸಿಟಿಯೊಂದಿಗೆ (ಪರ್ಸಂಟೇಜ್‌ ಆಫ್‌ ಪಾಯಿಂಟ್‌) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯವಾಡಿದ್ದು 8 ಪಂದ್ಯ ಗೆದ್ದು90 ಅಂಕ ಸಂಪಾದಿಸಿ 62.50 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಸರಣಿ ಆಡಲಿದೆ.

  • ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

    ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

    ನವದೆಹಲಿ: ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಚಾಂಪಿಯನ್‌ ಟೀಂ ಇಂಡಿಯಾ (Team India) ಇಂದು ಬೆಳಗ್ಗೆ ತಾಯ್ನಾಡಿಗೆ ಆಗಮಿಸಿದೆ.

    ವೆಸ್ಟ್‌ಇಂಡೀಸ್‌ನ ಬಾರ್ಬಡೋಸ್‌ನಿಂದ ಹೊರಟಿದ್ದ ವಿಶೇಷ ವಿಮಾನ ದೆಹಲಿಯಲ್ಲಿರುವ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ.

    ಜೂ. 1ರಂದು ಬಾರ್ಬಡೋಸ್‌ಗೆ ಭೀಕರ ಬೆರಿಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ. ಈಗ ವಿಶೇಷ​ ವಿಮಾನದ ಮೂಲಕ T20 ವಿಶ್ವಕಪ್​ ಟ್ರೋಫಿಯೊಂದಿಗೆ ಆಟಗಾರರೆಲ್ಲ ಆಗಮಿಸಿದರು.

     

     

    ಪದಕ ಧರಿಸಿ ಇಳಿದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸದ್ಯ ಆಟಗಾರರು ದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಳಿಕ ಬೆಳಗ್ಗೆ 10 ಗಂಟೆಯ ವೇಳೆ ಪ್ರಧಾನಿ ಮೋದಿ (PM Narendra Modi) ಅವರ ನಿವಾಸಕ್ಕೆ ತೆರಳಲಿದ್ದಾರೆ.

    ಮೋದಿ ಭೇಟಿಯ ಬಳಿಕ ವಿಶೇಷ ವಿಮಾನದಲ್ಲಿ ಮುಂಬೈಗೆ ಆಟಗಾರರು ಆಗಮಿಸಲಿದ್ದಾರೆ.  ಸಂಜೆ 4 ಗಂಟೆಗೆ ಮುಂಬೈ ಮರೀನ್‌ ಡ್ರೈವ್‌ನಿಂದ ತೆರೆದ ವಾಹನದಲ್ಲಿ ವಾಂಖೆಡೆ ಸ್ಟೇಡಿಯಂವರೆಗೆ 2 ಕಿ.ಮೀ ರೋಡ್‌ ಶೋ  (Road Show) ನಡೆಯಲಿದೆ.

    ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ಟಿ 20 ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಲಿದ್ದಾರೆ.

  • ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ದುಬೈ: ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಮುಗಿದಿದ್ದು ಭಾರತ (Team India) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಟೂರ್ನಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ 2024 ರ ಕನಸಿನ ತಂಡವನ್ನು ಐಸಿಸಿ ಬಿಡುಗಡೆ ಮಾಡಿದೆ.

    ಈ ಆಟಗಾರರ ಪಟ್ಟಿಯಲ್ಲಿ ಫೈನಲ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್‌ ಕೊಹ್ಲಿಗೆ (Virat Kohli) ಸ್ಥಾನ ನೀಡಿಲ್ಲ. ಟೀಂ ಇಂಡಿಯಾದ 6 ಆಟಗಾರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್‌ ಕಾರ್ತಿಕ್‌ ರಿಎಂಟ್ರಿ

    ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌ ಸ್ಥಾನ ಪಡೆದಿದ್ದಾರೆ.

    ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ ಆಸ್ಟ್ರೇಲಿಯಾ ಮಾರ್ಕಸ್ ಸ್ಟೊಯಿನಿಸ್ ಮತ್ತು ವಿಂಡೀಸಿನ ನಿಕೋಲಸ್ ಪೂರನ್ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರನಾಗಿ ಆಫ್ರಿಕಾ ಆನ್ರಿಚ್ ನಾರ್ಟ್ಜೆ ಆಯ್ಕೆಯಾಗಿದ್ದಾರೆ.

    ಪ್ರತಿ ಕ್ರಿಕೆಟ್‌ ಟೂರ್ನಿ ಮುಗಿದ ಬಳಿಕ ಐಸಿಸಿ ಡ್ರೀಮ್‌ ತಂಡವನ್ನು ಪ್ರಕಟಿಸುತ್ತದೆ. ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪೈಕಿ ಕೇವಲ 12 ಮಂದಿಯನ್ನು ಮಾತ್ರ ಅಂತಿಮವಾಗಿ ಐಸಿಸಿ ಆಯ್ಕೆ ಮಾಡುತ್ತದೆ.

  • ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ಭಾರತ ಕ್ರಿಕೆಟ್ ತಂಡ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದು ಬೀಗಿದೆ. ಹೀಗಿರುವಾಗ ವಿಶ್ವಕಪ್ (World Cup 2024) ಭಾರತ ಕ್ರಿಕೆಟ್ ತಂಡದ ಸಾಧನೆಗೆ ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

    ರೋಹಿತ್ ಶರ್ಮಾ ತಂಡವನ್ನು ಯಶ್‌ ಕೊಂಡಾಡಿದ್ದಾರೆ. ಇತಿಹಾಸದಲ್ಲಿ ಕೆತ್ತಿದ ಗೆಲುವು. ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ‘ಜೈ ಹಿಂದ್’ ಎಂದು ನ್ಯಾಷನಲ್ ಸ್ಟಾರ್ ಯಶ್ (Yash) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಭಾರತ ತಂಡದ ಸಾಧನೆ ಬಗ್ಗೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ರತಿಕ್ರಿಯಿಸಿದ್ದಾರೆ. ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದೆ. ಅಭಿನಂದನೆಗಳು ಟೀಂ ಇಂಡಿಯಾ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ:ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್

     

    View this post on Instagram

     

    A post shared by Vinay Gowda (@vinaygowdaactor)


    ರಾಹುಲ್ ದ್ರಾವಿಡ್ ಅವರಿಗೆ ಅದ್ಭುತವಾಗಿ ವಿದಾಯ ಹೇಳಲಾಗಿದೆ. ಬಹಳ ಬಹಳ ಬಹಳ ಹೆಮ್ಮೆಯಾಗುತ್ತಿದೆ ಸರ್, ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯವಾದ ಹಾಗೂ ಆ ಕೊನೆಯ ಓವರ್‌ನಲ್ಲಿ ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್‌ಗೆ ವಿಶೇಷ ಧನ್ಯವಾದ ಎಂದಿದ್ದಾರೆ ಕಿಚ್ಚ ಸುದೀಪ್. ಅದಷ್ಟೇ ಅಲ್ಲ, ತಮ್ಮ ನಿವಾಸದಲ್ಲಿ ಆಪ್ತರಾದ ಚಕ್ರವರ್ತಿ ಚಂದ್ರಚೂಡ್, ವಿನಯ್ ಗೌಡ, ನಟ ಪ್ರದೀಪ್ ಜೊತೆ ಪಂದ್ಯ ವೀಕ್ಷಿಸಿ ಸುದೀಪ್ (Sudeep) ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, ಗೋಡೆ ಮೇಲೆ ವರ್ಲ್ಡ್ ಕಪ್ ಇಡೋರ್ ಆಗಬೇಕು ಎಂದು ನಟ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಅದಷ್ಟೇ ಅಲ್ಲ, ಐತಿಹಾಸಿಕ ವಿಜಯ ಎಂದು ರಿಷಬ್ ಶೆಟ್ಟಿ (Rishab Shetty) ಕೂಡ ಸಂಭ್ರಮಿಸಿದ್ದಾರೆ.

    ಇದು ನಮ್ಮದು, ನೀಲಿ ಉಡುಪು ತೊಟ್ಟ ನಮ್ಮ ಹೀರೋಗಳು ಇನ್ನು ಮುಂದೆ ವಿಶ್ವ ವಿಜೇತರು ಎಂದು ಕರೆಸಿಕೊಳ್ಳುತ್ತಾರೆ. ಆಟದ ಮೈದಾನದಲ್ಲಿ ನೀವು ತೋರಿದ ಛಾತಿಗೆ ತಲೆ ಬಾಗಿ ವಂದಿಸುತ್ತೇವೆ. ಸೂರ್ಯಕುಮಾರ್ ಯಾದವ್ ನೀವು ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸವನ್ನು ಸೇರಿ ಆಗಿದೆ. ಈ ಐತಿಹಾಸಿಕ ಜಯದ ಬಗ್ಗೆ ಹೆಮ್ಮೆಯಿದೆ ಎಂದು ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಂದಿಸಿದ್ದಾರೆ.

  • ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಭಾರತ (Team India) ಎರಡನೇ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ (Virat Kohli) ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ವಿಕೆಟ್‌ ಉರುಳುತ್ತಿದ್ದಾಗ ಗಟ್ಟಿ ಬಂಡೆಯಂತೆ ನಿಂತು 76 ರನ್‌ (59 ಎಸೆತ, 6 ಬೌಂಡರಿ, 2 ಸಿಕ್ಸರ್‌) ಸಿಡಿಸಿದ ವಿರಟ್‌ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಟಿ 20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು ಎಂದು ಹೇಳಿದರು.

    ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ ಟಿ20 ಪಂದ್ಯ. ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ತಿಳಿಸಿ ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

  • ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಭಾರತ ಟಿ20 ಚಾಂಪಿಯನ್‌ (T20 Champion) ಆಗುವುದರ ಜೊತೆ ಟಿ20 ವಿಶ್ವಕಪ್‌ನಲ್ಲಿ ವಿಶ್ವದಾಖಲೆ (World Record) ನಿರ್ಮಿಸಿದೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕಪ್‌ ಜಯಿಸಿದ ಏಕಮಾತ್ರ ತಂಡ ಎಂಬ ಹೆಗ್ಗಳಿಕೆಗೆ ಭಾರತ (Team India) ಪಾತ್ರವಾಗಿದೆ.

    ಹೌದು. ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಅಜೇಯವಾಗಿ ಫೈನಲ್‌ (Final) ಪ್ರವೇಶಿಸಿದ್ದವು. ಇದುವರೆಗಿನ ಟಿ20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್‌ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್‌ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿತ್ತು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್‌ ಪ್ರವೇಶಿಸಿದ್ದರೆ ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್‌ ಪ್ರವೇಸಿಸಿತ್ತು. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ತಂಡ ಎಂಬ ವಿಶಿಷ್ಟ ಸಾಧನೆ ನಿರ್ಮಾಣವಾಗುತಿತ್ತು. ಇದನ್ನೂ ಓದಿ: ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    ಹಾಗೆ ನೋಡಿದರೆ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಲೀಗ್‌ನಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೆಮಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಭಾರತ ಸೋಲಿಸಿತ್ತು. ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್‌ 8 ರಲ್ಲಿ ಇಂಗ್ಲೆಂಡ್‌, ವಿಂಡೀಸ್‌ ತಂಡವನ್ನು ಮಣಿಸಿತ್ತು. ಸೆಮಿಯಲ್ಲಿ ಅಫ್ಘಾನಿಸ್ತಾನ ದಕ್ಷಿಣ ಅಫ್ರಿಕಾಗೆ ಪ್ರಬಲ ಸ್ಪರ್ಧೆ ನೀಡಿರಲಿಲ್ಲ.

  • 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    ಬ್ರಿಡ್ಜ್‌ಟೌನ್‌: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಯನ್ನು (ICC Trophy) ಗೆದ್ದುಕೊಂಡಿದೆ.

    ಹೌದು. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ (ICC) ಆಯೋಜಿಸಿದ ಟ್ರೋಫಿಯನ್ನು ಭಾರತ ಗೆದ್ದುಕೊಂಡಿತ್ತು. ನಂತರ ಭಾರತ ಕಳೆದ 10 ವರ್ಷಗಳಿಂದ ಪ್ರಶಸ್ತಿಯ ಸನಿಹ ಬಂದು ಕೊನೆಯಲ್ಲಿ ಎಡವುತಿತ್ತು.

    2013 ರಲ್ಲಿ ಎಂಎಸ್‌ ಧೋನಿ (MS Dhoni) ನಾಯಕತ್ವದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ತಂಡವನ್ನು ಕೇವಲ 5 ರನ್‌ಗಳಿಂದ ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಮುಡಿಗೇರಿಸಿಕೊಂಡಿತ್ತು. ಈ ಟ್ರೋಫಿಯ ಬಳಿಕ ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ ಒಂದೇ ಒಂದು ಟ್ರೋಫಿಯನ್ನು ಗೆದ್ದುಕೊಂಡಿಲ್ಲ.

    ಅದರಲ್ಲೂ ಕಳೆದ 12 ತಿಂಗಳಿನಲ್ಲಿ ಭಾರತ ಮೂರು ಬಾರಿ ಫೈನಲ್‌ ಪ್ರವೇಶಿಸಿತ್ತು. ಕಳೆದ ವರ್ಷದ ಜೂನ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲಿನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ನಂತರ ಭಾರತದಲ್ಲಿ ನಡೆದ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಸೋತಿತ್ತು. ಆದರೆ ಮೂರನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಭಾರತ ಈ ಬಾರಿ ಟಿ20 ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

    ಯಾವ ವರ್ಷ ಏನಾಗಿತ್ತು?
    2014: ಟಿ20 ವಿಶ್ವಕಪ್‌
    ವಿಶ್ವಕಪ್‌ ಟಿ20 ಫೈನಲ್‌ನಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಭಾರತ 4 ವಿಕೆಟ್‌ ನಷ್ಟಕ್ಕೆ 13 ರನ್‌ ಗಳಿಸಿದರೆ ಶ್ರೀಲಂಕಾ 4 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತ್ತು.

    2015: ವಿಶ್ವಕಪ್‌
    ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 7 ವಿಕೆಟ್‌ ನಷ್ಟಕ್ಕೆ 328 ರನ್‌ ಹೊಡೆದರೆ ಭಾರತ 233 ರನ್‌ಗಳಿಗೆ ಆಲೌಟ್‌ ಆಗಿತ್ತು.

    2016: ಟಿ20 ವಿಶ್ವಕಪ್‌
    ಮುಂಬೈಯಲ್ಲಿ ನಡೆದ ಟಿ20 ಸೆಮಿಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್ ರೋಚಕ 7 ವಿಕೆಟ್‌ ಜಯ ಸಾಧಿಸಿತ್ತು. ಭಾರತ 2 ವಿಕೆಟ್‌ ನಷ್ಟಕ್ಕೆ 192 ರನ್‌ ಹೊಡೆದರೆ ವಿಂಡೀಸ್‌ 19.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದಿತ್ತು.

    2017: ಐಸಿಸಿ ಚಾಂಪಿಯನ್ಸ್‌ ಟ್ರೋಫಿ
    ಐಸಿಸಿ ಚಾಂಪಿಯನ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. ಮೊದಲು ಬ್ಯಾಟ್‌ ಮಾಡಿದದ ಪಾಕಿಸ್ತಾನ 4 ವಿಕೆಟ್‌ ನಷ್ಟಕ್ಕೆ 338 ರನ್‌ ಹೊಡೆದರೆ ಭಾರತ 158 ರನ್‌ಗಳಿಗೆ ಆಲೌಟ್‌ ಆಗಿತ್ತು.

    2019: ವಿಶ್ವಕಪ್‌
    ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ 239 ರನ್‌ ಗಳಿಸಿದ್ದರೆ ಭಾರತ 221 ರನ್‌ ಗಳಿಸಿ ಆಲೌಟ್‌ ಆಗಿತ್ತು. ಎಂಸ್‌ ಧೋನಿ ರನೌಟ್‌ ಆಗಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತ್ತು. 92 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 104 ಎಸೆತಗಳಲ್ಲಿ 116 ರನ್‌ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ವಾಲಿಸಿದ್ದರು. ಧೋನಿ ರನೌಟ್‌ ಬಲಿಯಾಗುವ ವೇಳೆ ಭಾರತಕ್ಕೆ 10 ಎಸೆತಗಳಲ್ಲಿ 25 ರನ್‌ ಅಗತ್ಯವಿತ್ತು

    2021 ಟಿ20 ವಿಶ್ವಕಪ್‌
    ಐಸಿಸಿ ಟೂರ್ನಿ ಪೈಕಿ 2021 ಟಿ20 ವಿಶ್ವಕಪ್‌ನಲ್ಲಿ ಭಾರತ ಅತ್ಯಂತ ಕೆಟ್ಟ ಸಾಧನೆ ಮಾಡಿತ್ತು. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದರೆ ಸ್ಕಾಟ್‌ಲ್ಯಾಂಡ್‌ ವಿರುದ್ಧ ಮಾತ್ರ ಗೆದ್ದಿತ್ತು.

    2022 ಟಿ20 ವಿಶ್ವಕಪ್‌
    ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ 6 ವಿಕೆಟ್‌ ನಷ್ಟಕ್ಕೆ 168 ರನ್‌ ಹೊಡೆದರೆ ಇಂಗ್ಲೆಂಡ್‌ ಕೇವಲ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 170 ರನ್‌ ಹೊಡೆದಿತ್ತು.

    2023 ವಿಶ್ವಕಪ್‌
    ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯಗಳಿಸಿ ಕಪ್‌ ಗೆದ್ದುಕೊಂಡಿತ್ತು. ಭಾರತ 240 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಆಸ್ಟ್ರೇಲಿಯಾ 4 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿತ್ತು.