Tag: world

  • ಹಿನ್ನೋಟ: 2024ರಲ್ಲಿ ಆದ ಪ್ರಮುಖ ಘಟನಾವಳಿಗಳಿವು..

    ಹಿನ್ನೋಟ: 2024ರಲ್ಲಿ ಆದ ಪ್ರಮುಖ ಘಟನಾವಳಿಗಳಿವು..

    2024ರ ಕೊನೆ ದಿನ ಇಂದು. ಈ ವರ್ಷದ ಅಸ್ತಮಾನವಾಗಿ 2025ರ ಉದಯಿಸುವ ಸಂದರ್ಭ. ಹಿಂದಿನ ಘಟನಾವಳಿಗಳ ಮೆಲುಕು ಹಾಕುತ್ತಾ ಮುಂದಡಿ ಇಡುವ ಸಮಯ ಬಂದಿದೆ. ಹೊಸ ವರ್ಷ ಸ್ವಾಗತಿಸುವ ಹೊತ್ತಲ್ಲಿ, ತೆರೆಗೆ ಸರಿಯುತ್ತಿರುವ ವರ್ಷದಲ್ಲಿ ಜಗತ್ತಿನಲ್ಲಾದ ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸೋಣ. 2024ರಲ್ಲಿ ಆದ ಪ್ರಮುಖ 10 ಘಟನಾವಳಿಗಳೇನು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

    ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ
    ಜನವರಿ: ಬರೋಬ್ಬರಿ 500 ವರ್ಷಗಳ ಹೋರಾಟ ಮತ್ತು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿ, ಅಯೋಧ್ಯೆ ರಾಮಮಂದಿರ ಕೊನೆಗೂ ಉದ್ಘಾಟನೆಯಾಗಿ, ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಜ.22 ರಂದು ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯಾಯಿತು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತನೆ 5 ಅಡಿ ಎತ್ತರದ ಮಂದಸ್ಮಿತ ಬಾಲರಾಮ ಅಯೋಧ್ಯೆ ರಾಮಮಂದಿರದಲ್ಲಿ ಪಟ್ಟಾಭಿಷಿಕ್ತನಾದನು. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವತೀರ್ಥಪ್ರಸನ್ನ ಶ್ರೀಗಳ ಮುಂದಾಳತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ವಿದ್ಯುತ್‌ ದೀಪಾಲಂಕಾರದಿಂದ ಅಯೋಧ್ಯೆ ಝಗಮಗಿಸಲು ಮಂಗಳೂರಿನವರ ಸೇವೆ ಸ್ಮರಣೀಯ.

    ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವಾಲಯ
    ಫೆಬ್ರವರಿ: ಮುಸ್ಲಿಂ ರಾಷ್ಟ್ರ ಸಂಯುಕ್ತ ಅರಬ್‌ ಒಕ್ಕೂಟ (UAE)ದಲ್ಲಿ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಾಯಿತು. ದೇವಾಲಯ ನಿರ್ಮಾಣಕ್ಕೆ ಭೂಮಿಯನ್ನು ಯುಎಇ ಸರ್ಕಾರ ದಾನ ಮಾಡಿದೆ. BAPS ದೇವಾಲಯದ ನಿರ್ಮಾಣವನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಅಯೋಧ್ಯೆ ರಾಮಮಂದಿರವನ್ನು ಉದ್ಘಾಟಿಸಿದ ಕೆಲವೇ ವಾರಗಳ ನಂತರ, ದುಬೈನ ಅಬುಧಾಬಿಯಲ್ಲಿ ಸ್ಥಾಪಿತವಾದ ಹಿಂದೂ ದೇವಾಲಯವನ್ನು 2024ರ ಫೆಬ್ರವರಿ 14 ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇವಾಲಯವನ್ನು ಉದ್ಘಾಟಿಸಿದರು.

    ಬೆಂಗಳೂರು ಕೆಫೆ ಬಾಂಬ್‌ ಸ್ಫೋಟ
    ಮಾರ್ಚ್‌: ಸಿಲಿಕಾನ್‌ ಸಿಟಿ ಬೆಂಗಳೂರಿನ ಜನ ಬೆಚ್ಚಿ ಬೀಳುವಂತಹ ಉಗ್ರ ಚಟುವಟಿಕೆಯೊಂದು ರಾಜಧಾನಿಯಲ್ಲಿ ನಡೆಯಿತು. ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ಕುಂದಲಹಳ್ಳಿಯ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಬಾಂಬ್‌ ಸ್ಫೋಟಿಸಲಾಯಿತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದೆ.

    ಇಸ್ರೇಲ್‌ ಮೇಲೆ ಇರಾನ್‌ ದಾಳಿ
    ಏಪ್ರಿಲ್: ಇಸ್ರೇಲ್‌ ಮೇಲೆ ಇರಾನ್‌ ಸೇನೆಯಿಂದ ಮೊದಲ ಬಾರಿ ನೇರ ದಾಳಿ ನಡೆಯಿತು. 30 ಕ್ಕೂ ಹೆಚ್ಚು ಕ್ಷಿಪಣಿಗಳು, 170 ಡ್ರೋನ್‌, 120 ಕ್ಕೂ ಹೆಚ್ಚು ಗುರಿ ನಿರ್ದೇಶಿತ ಕ್ಷಿಪಣಿಗಳಿಂದ ದಾಳಿ ನಡೆಸಲಾಯಿತು.

    ಪ್ರಜ್ವಲ್‌ ರೇವಣ್ಣ ಅರೆಸ್ಟ್‌
    ಮೇ: ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹರಣ, ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದಲ್ಲಿ ಜೆಡಿಎಸ್‌ ಸಂಸದರಾಗಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲಾಯಿತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ತಂಡವು ಅವರನ್ನು ಬಂಧಿಸಿತ್ತು. ಆರೋಪಿ ಜೈಲಿನಲ್ಲಿದ್ದಾರೆ.

    ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ
    ಜೂನ್: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತು. ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ದಾಖಲೆ ಬರೆದರು. ಬಿಜೆಪಿ ಸ್ಥಾನ ಗಳಿಕೆ ಕೊಂಚ ಕುಸಿತವಾಗಿ ಎನ್‌ಡಿಎಗೆ 295, ಇಂಡಿಯಾ ಕೂಟಕ್ಕೆ 230 ಸ್ಥಾನ ಸಿಕ್ಕಿತು. 10 ವರ್ಷಗಳ ಬಳಿಕ ಕಾಂಗ್ರೆಸ್ಸಿಗೆ ಅಧಿಕೃತ ಪ್ರತಿಪಕ್ಷ ಸ್ಥಾನ ಸಿಕ್ಕಿತು.

     

    ಸ್ಟಾರ್‌ ನಟ ದರ್ಶನ್‌ ಅರೆಸ್ಟ್
    ಜುಲೈ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌, ಪವಿತ್ರಾಗೌಡ ಸೇರಿ 17 ಮಂದಿ ಬಂಧನಕ್ಕೆ ಒಳಗಾದರು. ನಟ ದರ್ಶನ್‌ಗೆ 6 ತಿಂಗಳ ಬಳಿಕ ಜಾಮೀನು ಸಿಕ್ಕಿತು. ಈ ಅವಧಿಯಲ್ಲಿ ಜೈಲಿನಲ್ಲಿ ರಾಜಾತಿಥ್ಯ ವಿವಾದ, ಬೆನ್ನುನೋವಿನಂತಹ ಅನೇಕ ಸಮಸ್ಯೆಗಳನ್ನು ನಟ ಎದುರಿಸಿದರು.


    ವಯನಾಡು ಭೂಕುಸಿತ ದುರಂತ: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತವಾಗಿ 200 ಕ್ಕೂ ಅಧಿಕ ಮಂದಿ ಸಾವಿಗೀಡಾದರು. ಮಣ್ಣಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿ ದುರಂತ ಸಂಭವಿಸಿತು.

    ಬಾಂಗ್ಲಾದಲ್ಲಿ ಕ್ಷಿಪ್ರಕ್ರಾಂತಿ; ಪ್ರಧಾನಿ ನಿವಾಸದ ಮೇಲೆ ದಾಳಿ
    ಆಗಸ್ಟ್‌: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟ ಜೋರಾಗಿ ಹಿಂಸಾರೂಪ ತಳೆಯಿತು. ದೇಶದ ಜನತೆ ಪ್ರಧಾನಿಗಳ ನಿವಾಸದ ಮೇಲೆ ಮುತ್ತಿಗೆ ಹಾಕಿದರು. ಜನರ ಪ್ರತಿಭಟನೆಯಿಂದ ಬೆಚ್ಚಿದ ಪ್ರಧಾನಿ ಶೇಖ್‌ ಹಸೀನಾ ಪಲಾಯನ ಮಾಡಿದರು. ಬಾಂಗ್ಲಾ ಬಿಟ್ಟು ಭಾರತದಲ್ಲಿ ಆಶ್ರಯ ಪಡೆದರು. ಹಿಂಸಾಚಾರಕ್ಕೆ ನೂರಾರು ಮಂದಿ ಬಲಿಯಾದರು. ಹಿಂದೂ ನರಮೇಧ ಕೂಡ ನಡೆದು ಸಂಚಲನ ಮೂಡಿಸಿತು.

    ತಿರುಪತಿ ಲಡ್ಡು ವಿವಾದ
    ಸೆಪ್ಟೆಂಬರ್: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದ ತಯಾರಿಕೆಗೆ ಪ್ರಾಣಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪ ದೇಶಾದ್ಯಂತ ಸಂಚಲನ ಮೂಡಿಸಿತು. ‘ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬನ್ನು ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು’ ಎಂದು ಸಿಎಂ ಚಂದ್ರಬಾಬು ನಾಯ್ಡು ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತು.

    ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ
    ಅಕ್ಟೋಬರ್: ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್‌ ದಾಳಿ ನಡೆಸಿತು.‌ ಪ್ಯಾಲೆಸ್ತೀನ್‌, ಲೆಬನಾನ್‌ ಮೇಲೆ ದಾಳಿ ಇಸ್ರೇಲ್‌ ದಾಳಿ ಮಾಡಿತು. ಇದರ ಬೆನ್ನಲ್ಲೇ ಇರಾನ್‌ ಕೂಡ ಇಸ್ರೇಲ್‌ ಮೇಲೆ ದಾಳಿ ಮಾಡಿತು. ಹೀಗೆ, ಮಧ್ಯಪ್ರಾಚ್ಯ ಸಂಘರ್ಷ ನಡೆಯಿತು.

    ಅಮೆರಿಕ ಅಧ್ಯಕ್ಷಗಾದಿಗೆ ಮತ್ತೆ ಟ್ರಂಪ್‌
    ನವೆಂಬರ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಜಯಗಳಿಸಿದರು. ದೊಡ್ಡಣಗೆ ಮತ್ತೆ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಟ್ರಂಪ್ ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿದ್ದ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಹೀನಾಯ ಸೋಲನುಭವಿಸಿದರು.

    ದಕ್ಷಿಣ ಕೊರಿಯಾ ವಿಮಾನ ದುರಂತ
    ಡಿಸೆಂಬರ್‌: ದಕ್ಷಿಣ ಕೊರಿಯಾದಲ್ಲಿ ವಿಮಾನ ದುರಂತವೊಂದು ಸಂಭವಿಸಿ 179 ಮಂದಿ ದಾರುಣ ಸಾವಿಗೀಡಾದರು. ಮುವಾನ್‌ ಏರ್‌ಪೋರ್ಟ್‌ನಲ್ಲಿ ರನ್‌ವೇನಿಂದ ಪಕ್ಕಕ್ಕೆ ಜಾರಿದ ವಿಮಾನವು ಕಾಂಕ್ರಿಟ್‌ ಗೋಡೆಗೆ ಡಿಕ್ಕಿ ಹೊಡೆಯಿತು. ತಕ್ಷಣ ಹೊತ್ತಿಕೊಂಡ ಬೆಂಕಿಯಿಂದ 181 ಪ್ರಯಾಣಿಕರ ಪೈಕಿ, 179 ಮಂದಿ ಜೀವ ಕಳೆದುಕೊಂಡರು. ಇಬ್ಬರು ಮಾತ್ರ ಬದುಕುಳಿದಿದ್ದಾರೆ.

  • ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ನಸಂಖ್ಯೆಯಲ್ಲೀಗ ಭಾರತ ನಂ.1 ರಾಷ್ಟ್ರ. ಈಗ್ಲೂ ದೇಶದ ಹಲವೆಡೆ ಅವಿಭಕ್ತ ಕುಟುಂಬಗಳು ನೆಲೆ ನಿಂತಿರೋದು ವಿಶೇಷ. ಇಂತಹ ಕುಟುಂಬಗಳಲ್ಲಿ ಕನಿಷ್ಠ ಅಂದ್ರೂ 15 ರಿಂದ 30 ಸದಸ್ಯರನ್ನ ನಾವು ಕಾಣ್ತೇವೆ. ಆದ್ರೆ ಇಲ್ಲೊಂದು ಒಂದು ದೇಶವಿದೆ, ಅಲ್ಲಿನ ಒಟ್ಟು ಜನಸಂಖ್ಯೆ, ವಿಸ್ತೀರ್ಣವನ್ನ ಕೇಳಿದ್ರೆ ಒಂದು ಅವಿಭಕ್ತ ಕುಟುಂಬದ ಜನಸಂಖ್ಯೆಗಿಂತಲೂ ಹೆಚ್ಚೇನು ಇಲ್ಲ ಅನ್ನೋದು ಅಚ್ಚರಿ. ಯಾವ್ದು ಆ ದೇಶ? ಎಲ್ಲಿದೆ ಆ ದೇಶ? ಅಲ್ಲಿನ ವಿಶೇಷತೆಯಾದ್ರೂ ಏನೂ? ನೋಡೋಣ ಬನ್ನಿ…..

    ವಿಶ್ವದ ಅತಿಸಣ್ಣ ದೇಶ (Smallest Country) ಯಾವ್ದು ಅಂದ್ರೆ ವ್ಯಾಟಿಕನ್ ಸಿಟಿ ಅಂತಾರೆ. ಆದ್ರೆ ಅದಕ್ಕಿಂತಲೂ ಚಿಕ್ಕ ದೇಶವೊಂದಿದೆ. ಅದುವೇ ಸೀ ಲ್ಯಾಂಡ್ (ಪ್ರಿನ್ಸಿಪಾಲಿಟಿ ಆಫ್ ಸೀ ಲ್ಯಾಂಡ್ (Principality of Sealand) ಅಂತಲೂ ಕರೆಯುತ್ತೇವೆ). ತನ್ನದೇ ಕರೆನ್ಸಿ, ನ್ಯಾಷನಲ್ ಫ್ಲ್ಯಾಗ್, ಪಾಸ್‌ಪೋರ್ಟ್ ಒಳಗೊಂಡಿರೋ ಈ ದೇಶ ನಿರ್ಮಾಣ ಆಗಿರೋದು ಪಾಳುಬಿದ್ದಿರುವ ಎರಡು ಟವರ್‌ಗಳ ಮೇಲೆ. ಇಂಗ್ಲೆಂಡ್‌ನ (England) ಸೊಫೋಕ್ಲೆಸ್ ಕರಾವಳಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರೋ ದೇಶದಲ್ಲಿ ವಾಸಿಸುತ್ತಿರೋದು ಕೇಲವ 27 ಜನ ಮಾತ್ರ. 2ನೇ ವಿಶ್ವಯುದ್ಧದ (2nd World War) ಸಂದರ್ಭದಲ್ಲಿ ಬ್ರೀಟಿಷರಿಂದ ಸ್ಥಾಪಿಸಲ್ಪಟ್ಟ ಈ ದೇಶ ಇಂದಿಗೂ ಅಸ್ತಿತ್ವದಲ್ಲಿದ್ದು, ಮೈಕ್ರೋ ನೇಷನ್ ಅಂತಾನೇ ಫೇಮಸ್ ಆಗಿದೆ. ಆದ್ರೆ ಇದಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕಿಲ್ಲ.

    ಮೈಕ್ರೋ ನೇಷನ್ ನಿರ್ಮಾಣವಾಗಿದ್ದು ಹೇಗೆ..?
    2ನೇ ವಿಶ್ವ ಮಹಾಯುದ್ಧದ ವೇಳೆಗೆ ಹತ್ತಿರವಿರುವಾಗ ಅಂದ್ರೆ 1943ರ ಅವಧಿಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ನಿರ್ಮಾಣ ಈ ಸೀ ಲ್ಯಾಂಡ್ ಅನ್ನ ನಿರ್ಮಾಣ ಮಾಡಿತು. ಆಗ ಸೈನ್ಯ ಮತ್ತು ನೌಕಾಪಡೆಯ ಭದ್ರ ಕೋಟೆಯನ್ನಾಗಿ ಬಳಸಲು ಈ ಸೀ ಲ್ಯಾಂಡ್ ಅನ್ನ ಸಮುದ್ರದ ಮಧ್ಯೆ ಸ್ಥಾಪಿಸಲಾಯಿತು. ಈ ಪಾಳುಬಿದ್ದ ಗೋಪುರಗಳ ಮೇಲಿರುವ ಭೂಮಿಯನ್ನ ರಫ್ ಟವರ್ ಅಂತಾ ಕರೀತಾರೆ. ಮಹಯುದ್ಧದ ಸಂದರ್ಭದಲ್ಲಿ ಬ್ರಿಟನ್ ಹಿಡಿತ ಸಾಧಿಸುವಲ್ಲಿ ಈ ಸೀ ಲ್ಯಾಂಡ್ ಮಾರ್ಗ ಯಶಸ್ವಿ ಪ್ರಯೋಗವಾಯ್ತು. ವಿಶ್ವ ಮಹಾಯುದ್ಧ ಮುಗಿದ ಬಳಿಕ ಈ ಕೋಟೆಯನ್ನ ಕೆಡೆವಲು ನಿರ್ಧರಿಸಲಾಯಿತು. ನಂತರ ಇದು ಸ್ವತಂತ್ರವಗಿ ದೇಶವೆಂದು ಘೋಷಿಸಿಕೊಂಡಿತು. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ರಫ್ ಟವರ್ ಅನ್ನ 1965 ರಲ್ಲಿ ಜ್ಯಾಕ್ ಮೂರ್ ಮತ್ತು ಮಗಳು ಜೇನ್ ವಶಪಡಿಸಿಕೊಂಡಿದ್ದರು. 1967 ರಲ್ಲಿ ಈ ಸ್ಥಳವನ್ನ ಬ್ರಿಟಿಷ್ ಮೇಜರ್ ಪ್ಯಾಡಿ ರಾಯ್ ಬೇಟ್ಸ್ ತಮ್ಮ ತೆಕ್ಕೆಗೆ ತೆಗೆದುಕೊಂಡ್ರು. ಪ್ಯಾಡಿ ರಾಯ್ ಬೇಟ್ಸ್ ದರೋಡೆಕೋರರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ರು. ಈ ಟವರ್ ಅನ್ನು ವಶಪಡಿಸಿಕೊಂಡು ಕಡಲುಗಳ್ಳರಿಗಾಗಿ ರೇಡಿಯೊ ಕೇಂದ್ರವೊಂದನ್ನ ತೆರೆದಿದ್ರು. ರೇಡಿಯೋ ಎಸ್ಸೆಕ್ಸ್ ಎಂಬ ಹೆಸರಿನಲ್ಲಿ ಇದನ್ನು ಆರಂಭಿಸಿದ್ರೂ, ಅಲ್ಲಿ ಯಾವ್ದೇ ಕಾರ್ಯಕ್ರಮ ಪ್ರಸಾರ ಪ್ರಾರಂಭಿಸಲಾಗಿರಲಿಲ್ಲ. ಸೀ ಲ್ಯಾಂಡ್ ಇಂಟರ್ ನ್ಯಾಷನಲ್ ಗಡಿ ನೀರಿನಲ್ಲಿ ನಿರ್ಮಾಣಗೊಂಡಿದ್ದರಿಂದ ಬಿಬಿಸಿಯೊಂದೇ ಅಧಿಕೃತವಾಗಿತ್ತು.

    ಕೆಲ ವರ್ಷಗಳ ನಂತರ ಬೇಟ್ಸ್ ರಫ್ ಟವರ್ ಅನ್ನು ಸ್ವತಂತ್ರ ಪ್ರದೇಶವೆಂದು ಘೋಷಿಸಿಕೊಂಡ ಬಳಿಕ ಸೀ ಲ್ಯಾಂಡ್ ದೇಶ ಎಂದು ಪರಿಗಣಿಸಲಾಯಿತು. 2ನೇ ಮಹಾಯುದ್ಧದ ವೇಳೆ ಬ್ರಿಟಿಷ್ ಸೈನ್ಯದಲ್ಲಿ ಪ್ಯಾಡಿ ರಾಯ್ ಬೇಟ್ಸ್ 1975 ರಲ್ಲಿ ಸೀ ಲ್ಯಾಂಡ್‌ಗಾಗಿ ಸಂವಿಧಾನ ಹಾಗೂ ರಾಷ್ಟ್ರ ಗೀತೆಯೊಂದನ್ನ ಪರಿಚಯಿಸಿದ್ರು. ಅಷ್ಟೇ ಅಲ್ಲ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಹಾಗೂ ಪಾಸ್‌ಪೋರ್ಟ್ ಸಹ ರೂಪಿಸಿದರು. ಇಂದಿಗೂ ಅದು ಅನ್ವಯವಾಗಿದೆ. ಬೇಟ್ಸ್ 2012ರ ಅಕ್ಟೋಬರ್ 9 ರಂದು ತಾನು ಸೀ ಲ್ಯಾಂಡಿನ ರಾಜ ಅಂತ ಘೋಷಿಸಿಕೊಂಡರು. ರಾಯ್ ಬೇಟ್ಸ್ ಮರಣದ ನಂತರ ಅವರ ಮಗ ಮೈಕೆಲ್ ಬೇಟ್ಸ್ ತಮ್ಮ ತಂದೆಯ ಸ್ಥಾನವನ್ನ ಅಲಂಕರಿಸಿಕೊಂಡರು. ಸದ್ಯ ಪ್ರಿನ್ಸ್ ಲಿಯಾಮ್ ಹಾಗೂ ಪ್ರಿನ್ಸ್ ಜೇಮ್ಸ್ ಅವಳಿ ಬ್ರದರ್ಸ್ ಇದನ್ನ ನೋಡಿಕೊಳ್ತಿದ್ದಾರೆ.

    ಅಕ್ರಮ ಪ್ರವೇಶ ಮಾಡಿದ್ರೆ 3 ತಿಂಗಳು ಜೈಲು ಗ್ಯಾರಂಟಿ!
    ಇಂಗ್ಲೆಂಡ್‌ನ ಉತ್ತರ ಸಮುದ್ರದಲ್ಲಿ ಕೇವಲ 550 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮೈಕ್ರೋ ನೇಷನ್‌ನಲ್ಲಿ ಸಾಕಷ್ಟು ವಿಶೇಷತೆಗಳನ್ನ ಕಾಣ್ಬೋದು. 27 ಜನಸಂಖ್ಯೆಯನ್ನ ಹೊಂದಿರೋ ಈ ದೇಶ ಭದ್ರತೆಗೋಸ್ಕರ ತನ್ನದೇ ಪುಟ್ಟ ಸೇನೆಯನ್ನ ಒಳಗೊಂಡಿದೆ. ನೀರಿನ ಮಧ್ಯೆಯಿದ್ದರೂ ಸಮುದ್ರದ ಅಲೆಗಳ ಹೊಡೆತವನ್ನ ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆ. ಈ ದೇಶಕ್ಕೆ ಹೋಗ್ಬೇಕು ಅಂದ್ರೆ ಸ್ಪೆಷಲ್ ಪರ್ಮಿಷನ್ ಬೇಕಂತೆ. ಲಂಡನ್‌ನಿಂದ ಸುಮಾರು 2 ಗಂಟೆ ಪ್ರಯಾಣ ಬೆಳೆಸಿದ್ರೆ ಮೈಕ್ರೋ ನೇಷನ್‌ನ ಈಸಿಯಾಗಿ ಸೇರ್ಬೋದು. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

    ಇಲ್ಲಿನ ವಿಶೇಷತೆ ನೋಡೊದಾದ್ರೆ ಪಾಳುಬಿದ್ದಂತೆ ಕಾಣುವ ಈ ಎರಡು ಟವರ್‌ಗಳ ಒಳಗೆಯೇ 7 ಬೆಡ್‌ರೂಮ್ ಇವೆ. ಜೊತೆಗೆ ಅಡುಗೆ ಮನೆ, ಲಿವಿಂಗ್ ರೂಂ, ಮಿನಿ ಸ್ಟಡಿ ಹಾಲ್, ಜಿಮ್ ಕೊಠಡಿ, ಸ್ಫೋರ್ಟ್ಸ್ ರೂಮ್, ಜೈಲನ್ನೂ ಒಳಗೊಂಡಿದೆ. ಸೋಲಾರ್ ಶಕ್ತಿಯಿಂದಲೇ ಇಲ್ಲಿಗೆ ವಿದ್ಯುತ್ ಸೌಲಭ್ಯ ಸಿಗುತ್ತೆ. 24*7 ಭದ್ರತಾ ಸಿಬ್ಬಂದಿಯೂ ಇರ್ತಾರೆ. ಇಲ್ಲಿಗೆ ಬರುವವರಿಗೆ ಪಾಸ್‌ಪೋರ್ಟ್ ಕಡ್ಡಾಯಗೊಳಿಸಿರುವ ದೇಶ ಕೋವಿಡ್ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನೂ ಕಡ್ಡಾಯಗೊಳಿಸಿದೆ. ಅನುಮತಿ ಇಲ್ಲದೇ ಎಂಟ್ರಿ ಕೊಟ್ರೆ 3 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗೋದಂತೂ ಗ್ಯಾರಂಟಿ.

    ಸೀ ಲ್ಯಾಂಡ್‌ನ ಜನಸಂಖ್ಯೆ ಹೆಚ್ಚಿಸೋದಕ್ಕಾಗಿ ಅವಳಿ ಬ್ರದರ್ಸ್ ಸದ್ಯದಲ್ಲೇ ಆನ್‌ಲೈನ್‌ನಲ್ಲಿ ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ. ಜೊತೆಗೆ ಡಿಜಿಟಲ್ ಕರೆನ್ಸಿಯನ್ನೂ ಜಾರಿಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದ್ರೆ ಇಂದಿಗೂ ಇದನ್ನ ಯುಕೆ ಸರ್ಕಾರವಾಗ್ಲಿ, ವಿಶ್ವ ಸಂಸ್ಥೆಯಾಗ್ಲಿ ಅಧಿಕೃತ ದೇಶವೆಂದು ಪರಿಗಣಿಸಿಲ್ಲ, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಅಂತಾ ಅವಳಿ ಬ್ರದರ್ಸ್ ಹೇಳಿದ್ದಾರೆ.

    ಕಳೆದ 54 ವರ್ಷಗಳಿಂದ, ಇದು ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಸೀ ಲ್ಯಾಂಡ್ ಅಂತಾರಾಷ್ಟ್ರೀಯವಾಗಿ ದೇಶವೆಂದು ಗುರುತಿಸಲ್ಪಟ್ಟಿಲ್ಲ. ಆದ್ರೆ ಪ್ರಪಂಚದ ಉಳಿದ ದೇಶಗಳಂತೆ ಸ್ವಂತ ಕರೆನ್ಸಿ ಮತ್ತು ಅಂಚೆ ಚೀಟಿಗಳನ್ನ ಹೊಂದಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಏಲಿಯನ್ ಅಟ್ಯಾಕ್, ಸೋಲರ್ ಸುನಾಮಿ – ವಿಶ್ವದ ಅಂತ್ಯದ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ

    ಸೋಫಿಯಾ: 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ (Alien Attack), ಸೋಲರ್ ಸುನಾಮಿಯಂತಹ (Solar Storm) ಅನೇಕ ಗಂಡಾ ತರಗಳಿಂದ ವಿಶ್ವ ನಾನಾ ರೀತಿಯ ತೊಂದರೆಗಳನ್ನು ಎದುರಿಸಲಿದೆ ಎಂದು ನಾಸ್ಟ್ರಾಡಾಮಸ್‌ (Nostradamus) ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ (Baba Vanga) ಭವಿಷ್ಯವಾಣಿ ನುಡಿದಿದ್ದಾರೆ. ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದ ನಾಯಕ-ಭಾರತದ ಬೌಲರ್ – ಏಕದಿನ ಸರಣಿ ಆರಂಭಕ್ಕೂ ಮುನ್ನ ಔಟ್

    ಬಾಬಾ ವಂಗಾರ 2023ರ ಭವಿಷ್ಯವಾಣಿ ಏನು?
    2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕಾಂತೀಯ ಕವಚವು ನಾಶವಾಗುತ್ತದೆ. ಭೂಮಿಯ ಮೇಲೆ ಏಲಿಯನ್‌ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ

    ಬಾಬಾ ವಂಗಾ (Baba Vanga) ಅವರ 2023ರ ಭಯಾನಕ ಭವಿಷ್ಯವಾಣಿಗಳು, ಭೂಮಿಯು ಈಗ ಬ್ರಹ್ಮಾಂಡದಲ್ಲಿ ಅನಿಶ್ಚಿತ ಸಮತೋಲನದಲ್ಲಿ ಉಳಿದಿದೆ. ನಂತರ ಅದು ತನ್ನ ಕಕ್ಷೆಯನ್ನು ಬದಲಿಸುತ್ತದೆ. ಇದರಲ್ಲಿನ ಸಣ್ಣ ಬದಲಾವಣೆಯೂ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟುಮಾಡಬಹುದು. ಆಗ ಪರಿಸ್ಥಿತಿ ನಿಜಕ್ಕೂ ಭೀರಕವಾಗಿರುತ್ತದೆ ಎಂದು ಹೇಳಲಾಗಿದೆ.

    2023ರ ವೇಳೆಗೆ ಪ್ರಯೋಗಾಲಯಗಳಲ್ಲಿ ಮಾನವರನ್ನು ಉತ್ಪಾದಿಸಲಾಗುತ್ತದೆ (Humans Produce Laboratories). ಹುಟ್ಟದ ಮಗುವಿಗೆ ತಮ್ಮ ಆಯ್ಕೆಯ ಬಣ್ಣ ಮತ್ತು ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಸಂದರ್ಭ ಬರುತ್ತದೆ. ಈ ಜನನದ ಪ್ರಕ್ರಿಯೆಯು ಮಾನವನ ನಿಯಂತ್ರಣದಲ್ಲಿರುತ್ತದೆ ಮತ್ತು ಬಾಡಿಗೆ ತಾಯ್ತನದ ಸಮಸ್ಯೆಯು ಅದರ ಆವಿಷ್ಕಾರದೊಂದಿಗೆ ಕೊನೆಗೊಳ್ಳುತ್ತದೆ. ವಿದ್ಯುತ್ ಸ್ಥಾವರದಲ್ಲಿನ ಸ್ಫೋಟವು ವಿಷಕಾರಿ ಮೋಡಗಳ ರಚನೆಗೆ ಕಾರಣವಾಗಬಹುದು. ಇದು ಇಡೀ ಏಷ್ಯಾ ಖಂಡವೇ ಮಂಜು ಕವಿಯುವಂತೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಇತರ ದೇಶಗಳು ಸಹ ಗಂಭೀರ ಕಾಯಿಲೆಗಳಿಂದ ಬಾಧಿಸತೊಡಗುತ್ತವೆ.

    Live Tv

    [brid partner=56869869 player=32851 video=960834 autoplay=true]

  • ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ವಾಷಿಂಗ್ಟನ್: 13 ದಶಕೋಟಿ ವರ್ಷಗಳಷ್ಟು ಹಿಂದೆ ಜಗತ್ತು ಹೇಗಿತ್ತು? ಅಂದಿನ ಆಗಸದಲ್ಲಿ ಕಾಣುತ್ತಿದ್ದ ಶತಕೋಟಿ ತಾರೆಗಳು, ನಕ್ಷತ್ರಪುಂಜಗಳು ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಡಲಾಗಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದು, ಇದು ಪ್ರಪಂಚ ಹುಟ್ಟಿದ ಸಮಯ ಆಕಾಶ ಹೇಗೆ ಕಾಣಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದೆ. ನೀಲಿ, ಕಿತ್ತಳೆ ಹಾಗೂ ಬಿಳಿ ಬಣ್ಣದಲ್ಲಿರುವ ಗ್ಯಾಲಾಕ್ಸಿಗಳು ಗಮನ ಸೆಳೆದಿವೆ. ಇನ್ನೂ ವಿಶೇಷವಾಗಿ ಈ ಟೆಲಿಸ್ಕೋಪ್ ತೆಗೆದಿರುವ ಮೊದಲ ಚಿತ್ರ ಇದಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಚಿತ್ರಣ ಇದು ಎಂದು ತಜ್ಞರು ಅಂದಾಜು ಮಾಡಿದ್ದು, ಇದೊಂದು ಐತಿಹಾಸಿಕ ದಿನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಇನ್ನು ಮುಂದೆ ಸೃಷ್ಟಿಗೆ ಕಾರಣವಾದ, ವಿಸ್ಮಯ ವಿಚಾರಗಳು ಹಾಗೂ ಅತ್ಯಗತ್ಯ ಮಾಹಿತಿಗಳನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಒದಗಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ನವದೆಹಲಿ: ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

    ಹೌದು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್‌ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್‌ ಹಕ್ಕು 33 ಕೋಟಿ ರೂ. ಇದನ್ನೂ ಓದಿ: ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ಸಾಧಾರಣವಾಗಿ ಟೀವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಈಗ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಪ್ರತಿಕ್ರಿಯಿಸಿ, ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರೀಡಾ ಉದ್ಯಮಕ್ಕೆ ಹೊಸ ಬೆಂಚ್-ಮಾರ್ಕ್‌ ಆಗಲಿದೆ. ಯಾವುದೇ ಸಂಖ್ಯೆಯನ್ನು ಊಹಿಸಲು ಬಯಸುವುದಿಲ್ಲ. ಆದರೆ ಇದು ದಾಖಲೆ ಮುರಿಯುವ ಸಂಖ್ಯೆಯಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಈ ಬಾರಿ ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ. ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

  • ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

    ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ

    ನವದೆಹಲಿ: ಕಚ್ಚಾ ತೈಲವನ್ನು ಅಗ್ಗದ ದರದಲ್ಲಿ ರಷ್ಯಾದಿಂದ ಖರೀದಿ ಮಾಡುತ್ತಿರುವ ಭಾರತ ಈಗ ದ್ರವೀಕೃತ ನೈಸರ್ಗಿಕ ಅನಿಲವನ್ನು(LNG) ಕಡಿಮೆ ದರದಲ್ಲಿ ಖರೀದಿ ಮಾಡಿದೆ.

    ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೊರೇಷನ್(ಜಿಎಸ್‌ಪಿಸಿ) ಮತ್ತು ಗೇಲ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಕಂಪನಿಗಳು ಇತ್ತೀಚೆಗೆ ರಷ್ಯಾದಿಂದ ಹಲವಾರು ಎಲ್‌ಎನ್‌ಜಿ ಸ್ಪಾಟ್ ಶಿಪ್‌ಮೆಂಟ್‌ಗಳನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ – ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ಈ ವಿಚಾರದ ಬಗ್ಗೆ ತಿಳಿದ ವ್ಯಕ್ತಿಗಳು ಮಾಹಿತಿ ನೀಡಿದ್ದು, ಮತ್ತಷ್ಟು ಖಾಸಗಿ ಮಾಹಿತಿಗಳನ್ನು ಅವರು ನೀಡಲು ನಿರಾಕರಿಸಿದ್ದಾರೆ. ಜಿಎಸ್‌ಪಿಸಿ, ಗೇಲ್‌ ಮತ್ತು ಭಾರತದ ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ಎಲ್‌ಎನ್‌ಜಿ ಮೇಲೆ ಯಾವುದೇ ನೇರ ನಿರ್ಬಂಧಗಳಿಲ್ಲ. ಆದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲ ದೇಶಗಳು ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ರಷ್ಯಾದಿಂದ ಎಲ್‌ಎನ್‌ಜಿ ಖರೀದಿಯನ್ನು ಸ್ಥಗಿತಗೊಳಿಸಿದೆ.

  • 2.5 ಅಡಿ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ನಿಧನ

    2.5 ಅಡಿ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ನಿಧನ

    ಟರ್ಕಿ: 72 ಸೆಂಟಿಮೀಟರ್ ಎತ್ತರವಿದ್ದ ಪ್ರಪಂಚದ ಮಾಜಿ ಕುಬ್ಜ ಮಹಿಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಎಲಿಫ್ ಕೊಕಾಮನ್(33) ಮೃತಪಟ್ಟಿದ್ದಾರೆ. 72 ಸೆಂಟಿಮೀಟರ್ ಎತ್ತರವಿದ್ದ(2.5 ಅಡಿ) ವಿಶ್ವದ ಮಾಜಿ ಕುಬ್ಜ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ಎಲಿಫ್ ಕೊಕಾಮನ್ ಓಸ್ಮಾನಿಯಾದ ಟರ್ಕಿಶ್‌ನ ಕದರ್ಲಿ ಪಟ್ಟಣದಲ್ಲಿ ವಾಸವಾಗಿದ್ದರು. ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ

    ಕಳೆದ ಮಂಗಳವಾರ ಅನಾರೋಗ್ಯಕ್ಕೀಡಾಗಿದ್ದ ಕೊಕಾಮನ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ನ್ಯುಮೋನಿಯಾದಿಂದ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ. ಕೊಕಾಮನ್ ವಿಶ್ವದ ಅತಿ ಕುಬ್ಜ ಯುವತಿ ಎಂಬ ದಾಖಲೆಗೆ ಪಾತ್ರವಾಗಿದ್ದರು. 2010ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದ್ದರು.

  • ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ

    ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ

    ದುಬೈ: ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ ಆಗಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ ಎಂದು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್ ಶನಿವಾರ ಘೋಷಿಸಿದ್ದಾರೆ.

    ದುಬೈ 2.65 ಲಕ್ಷ ಕೋಟಿ ಹಣ ಮತ್ತು 1.4ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕವಾಗಿ ಅಳವಡಿಸಿಕೊಳ್ಳಲಾಗಿದೆ. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ. ಈ ಘಟಕಗಳು 1,800ಕ್ಕೂ ಹೆಚ್ಚು ಡಿಜಿಟಲ್ ಸೇವೆಯನ್ನು ಮತ್ತು 10,500ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತದೆ. ಇದರಿಂದ ದುಬೈ ನಿವಾಸಿಗಳ ನಿರೇಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಶೇಖ್ ಹಮದ್ ತಿಳಿಸಿದ್ದಾರೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ

  • ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

    ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

    ವಾಷಿಂಗ್ಟನ್: ವಿಶ್ವಾದ್ಯಂತ ಇಂದು ಸಾಮಾಜಿಕ ಜಾಲತಾಣ, ಸರ್ಕಾರ ಮತ್ತು ಕೆಲ ಪ್ರಮುಖ ಸುದ್ದಿ ವೆಬ್‍ಸೈಟ್‍ಗಳು ಡೌನ್ ಆಗಿತ್ತು.

    ಅಮೆರಿಕ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸೇವಾ ಪೂರೈಕೆದಾರ ಫಾಸ್ಟ್ಲಿಯಲ್ಲಿನ ಸಿಡಿಎನ್(Content Delivery Network) ದೋಷದಿಂದ ಹಲವು ವೆಬ್‍ಸೈಟ್‍ಗಳಿಗೆ ಸಮಸ್ಯೆಯಾಗಿತ್ತು. ಇದನ್ನೂ ಓದಿ: ವರ್ಕ್ ಫ್ರಂ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಫಾಸ್ಟ್ಲಿ ಜಾಗತಿಕವಾಗಿ ನಮ್ಮ ಪಿಒಪಿಗಳಲ್ಲಿ ಸಮಸ್ಯೆ ಕಾರಣವಾಗಿದ್ದ ಸರ್ವಿಸ್ ಕಾನ್ಫಿಗರೇಷನ್ ನನ್ನು ಗುರುತಿಸಿದ್ದೇವೆ ಮತ್ತು ಆ ಕಾನ್ಫಿಗರೇಷನ್ ಅನ್ನು ನಿಷ್ಕ್ರಿಯಗೊಳಿಸಿದ್ದೇವೆ. ನಮ್ಮ ಜಾಗತಿಕ ನೆಟ್‍ವರ್ಕ್ ಮತ್ತೆ ಸರಿಯಾಗುತ್ತಿದೆ ಎಂದು ಹೇಳಿದೆ.

    ಅಮೆಜಾನ್, ರೆಡಿಟ್, ಫೈನಾನ್ಷಿಯಲ್ ಟೈಮ್ಸ್, ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಬ್ಲೂಮ್‍ಬರ್ಗ್ ನ್ಯೂಸ್, ಇಂಗ್ಲೆಂಡ್ ಸರ್ಕಾರ ಸೇರಿದಂತೆ ಸುದ್ದಿ ಸಂಸ್ಥೆಗಳು ನಿರ್ವಹಿಸುವ ವೆಬ್‍ಸೈಟ್‍ಗಳು ಡೌನ್ ಆಗಿತ್ತು.

  • ವಿಶ್ವಕ್ಕೆ ಹೋಲಿಸಿದ್ರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ

    ವಿಶ್ವಕ್ಕೆ ಹೋಲಿಸಿದ್ರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ

    ನವದೆಹಲಿ: ಅತಿ ಹೆಚ್ಚು ಕೊರೊನಾ ಪೀಡಿತರು ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಎಂದು ಸರ್ಕಾರ ಹೇಳಿದೆ. ಭಾರತದಲ್ಲಿ  10 ಲಕ್ಷ ಜನಸಂಖ್ಯೆಗೆ 2 ಮಂದಿ ಮಾತ್ರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ.

    ಇಲ್ಲಿಯವರೆಗೆ ಭಾರತದಲ್ಲಿ 24 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 3,163 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 41 ಮಂದಿ ಮೃತಪಡುತ್ತಿದ್ದಾರೆ.

    1 ಲಕ್ಷ ಮಂದಿಗೆ ಯಾವ ದೇಶದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ?
    (ಆವರಣದಲ್ಲಿ ನೀಡಿರುವುದು ಒಟ್ಟು ಸಾವಿನ ಸಂಖ್ಯೆ)
    ಅಮೆರಿಕ 26.6(87,180), ಇಂಗ್ಲೆಂಡ್ 52.1(34,636), ಇಟಲಿ 52.8(31,908), ಫ್ರಾನ್ಸ್ 41.9(28,059), ಸ್ಪೇನ್ 59.2(27,650), ನೆದರ್‍ಲ್ಯಾಂಡ್ 33.0(5,680), ಸ್ವೀಡನ್ 36.1(3,679) ಭಾರತ 0.2(3,163) ಮಂದಿ ಮೃತಪಟ್ಟಿದ್ದಾರೆ.

    ಕಳೆದ 24 ಗಂಟೆಯಲ್ಲಿ(ಇಂದು ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ ವೇಳೆ) ಒಟ್ಟು 1,01,475 ಪರೀಕ್ಷೆಗಳನ್ನು ನಡೆಸಲಾಗಿದ್ದು 4,970 ಮಂದಿಗೆ ಸೋಂಕು ಬಂದಿದೆ. ಒಟ್ಟು 2,350 ಮಂದಿ ಗುಣಮುಖರಾಗಿದ್ದು, 134 ಮಂದಿ ಸಾವನ್ನಪ್ಪಿದ್ದಾರೆ.

    ಭಾರತದಲ್ಲಿ ಇಲ್ಲಿಯವರೆಗೆ 24,04,267 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದ್ದು, ಒಟ್ಟು 1,01,139 ಮಂದಿಗೆ ಸೋಂಕು ಬಂದಿದೆ. 39,174 ಮಂದಿ ಡಿಸ್ಚಾರ್ಜ್ ಆಗಿದ್ದು, 58,802 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 3,163 ಮಂದಿ ಸಾವನ್ನಪ್ಪಿದ್ದಾರೆ.

    ಯಾವ ರಾಜ್ಯದಲ್ಲಿ ಎಷ್ಟು?
    ಮಹಾರಾಷ್ಟ್ರ 35,058, ತಮಿಳುನಾಡು 11,760, ಗುಜರಾತ್ 11,745, ದೆಹಲಿ 10,054, ರಾಜಸ್ಥಾನ 5,507, ಮಧ್ಯಪ್ರದೇಶ 5,236, ಉತ್ತರ ಪ್ರದೇಶ 4,605, ಪಶ್ಚಿಮ ಬಂಗಾಳ 2,825, ಆಂಧ್ರಪ್ರದೇಶದಲ್ಲಿ 2,474 ಮಂದಿಗೆ ಸೋಂಕು ಬಂದಿದೆ.