Tag: Workshop

  • ವರ್ಕ್‍ಶಾಪ್‍ನಲ್ಲಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮ

    ವರ್ಕ್‍ಶಾಪ್‍ನಲ್ಲಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮ

    ಹೈದರಾಬಾದ್: ಅಗ್ನಿ ಅವಘಡದಿಂದಾಗಿ ಶುಕ್ರವಾರ ರಾತ್ರಿ ಹೈ ಎಂಡ್ ಕಾರುಗಳ ವರ್ಕ್‍ಶಾಪ್‍ನಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಿದೇಶಿ ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿವೆ.

    ಬರ್ಲಿನ್ ಮೋಟಾರ್ ವರ್ಕ್ಸ್, ಅತ್ತಾಪುರದ ರಾಧಾ ಕೃಷ್ಣ ನಗರದಲ್ಲಿ ಜರ್ಮನ್ ಮತ್ತು ಅಮೆರಿಕನ್ ಕಾರುಗಳ ಸ್ಥಳೀಯ ಕಾರ್ಯಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ವರ್ಕ್‍ಶಾಪ್‍ನಲ್ಲಿದ್ದ ಹಲವಾರು ಐಷಾರಾಮಿ ಕಾರುಗಳು ಬೆಂಕಿಯಿಂದಾಗಿ ಸುಟ್ಟುಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುವುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪ್ರತಿದಿನ ರಾತ್ರಿ 10 ಗಂಟೆಯವರೆಗೆ ತೆರೆದಿರುವ ವರ್ಕ್‍ಶಾಪ್‍ನಲ್ಲಿದ್ದ ಸಿಬ್ಬಂದಿ ಗ್ಯಾರೇಜ್‍ನಲ್ಲಿದ್ದ ಕಾರುಗಳಿಂದ ಬೆಂಕಿ ಹೊರಹೊಮ್ಮುತ್ತಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಕಾರುಗಳಿಗೆ ತೀವ್ರವಾಗಿ ಹಾನಿಯಾಗಿದ್ದು, ಹಾನಿಗೊಳಗಾದ ಆಸ್ತಿಯ ಒಟ್ಟು ಮೌಲ್ಯವನ್ನು ಇನ್ನೂ ಅಂದಾಜಿಸಬೇಕಾಗಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

  • ತಂತ್ರಜ್ಞಾನ ಅವಕಾಶ ಬಳಸಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ: ಉಮಾ ರೆಡ್ಡಿ

    ತಂತ್ರಜ್ಞಾನ ಅವಕಾಶ ಬಳಸಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ: ಉಮಾ ರೆಡ್ಡಿ

    ಬೆಂಗಳೂರು: ತಂತ್ರಜ್ಞಾನದ ಅವಕಾಶಗಳನ್ನು ಸೂಕ್ತವಾಗಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿ ಮಹಿಳಾ ಉದ್ಯಮಿಗಳಾಗಬಹುದು ಎಂದು ಹೈಟೆಕ್ ಮ್ಯಾಗ್ನಟಿಕ್ ಸಲ್ಯೂಶನ್ಸ್ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕ ಪತ್ರಕರ್ತೆಯರ ಸಂಘ, ಎಫ್ ಕೆಸಿಸಿಐ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಗರದಲ್ಲಿಂದು ಪತ್ರಕರ್ತೆಯರಿಗಾಗಿ ಆಯೋಜಿಸಿದ್ದ ಡಿಜಿಟಲ್ ಲಿಟರಸಿ ಕಾರ್ಯಾಗಾರದಲ್ಲಿ ತಂತ್ರಜ್ಞಾನ ಹಾಗೂ ಅವಕಾಶಗಳ ಕುರಿತು ಮಾತನಾಡಿದರು. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಪ್ರಸ್ತುತ ಡಿಜಿಟಲ್ ಲಿಟರಸಿ ಮುಖ್ಯವಾಗಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಯಿತು. ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಪ್ರತಿ ದಿನ ತಂತ್ರಜ್ಞಾನ ಅಪ್ ಗ್ರೇಡ್ ಆಗುತ್ತಿರುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು, ಪ್ರಯೋಜನಗಳು ಮತ್ತು ನೆಟ್ ವಕಿರ್ಂಗ್ ಕುರಿತು ಅರಿವು ಇರಲೇಬೇಕು. ಅಗತ್ಯವಿರುವ ಮತ್ತು ಸೂಕ್ತವಾದ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಮಹಿಳಾ ಉದ್ಯಮಿಯಾಗಬಹುದು ಎಂದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಜಿನಿ ರಮೇಶ್ ಮಾತನಾಡಿ, ಪ್ರತಿಯೊಬ್ಬರು ತಮ್ಮನ್ನು ತಾವು ತೆರೆದುಕೊಳ್ಳಲು ಸಾಮಾಜಿಕ ಜಾಲತಾಣ ಉತ್ತಮ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆದರೂ ಅವುಗಳನ್ನು ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆಯಿಂದ ಬಳಸಬೇಕು. ಈ ಅರಿವು ಅತ್ಯಗತ್ಯ ಎಂದು ತಿಳಿಸಿದರು. ಪತ್ರಕರ್ತೆಯರಿಗೆ ಅಗತ್ಯವಿರುವ ಸೋಶಿಯಲ್ ಮೀಡಿಯಾ, ಬಳಕೆ, ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿವರಿಸಿದರು.

    ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆ ಹಾಗೂ ಪತ್ರಕರ್ತೆಯರ ಮುಂದಿರುವ ಸವಾಲುಗಳ ಬಗ್ಗೆ ವಿವರಿಸಿದರು. ಕಾರ್ಯಾಗಾರದಲ್ಲಿ ಸಂಘದ ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆ ಕೆ.ಹೆಚ್. ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಎಲಿಗಾರ್, ಪಿಐಬಿ ಅಧಿಕಾರಿ ಜಯಂತಿ ಕೆ.ವೈ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತೆಯರು ಭಾಗವಹಿಸಿದ್ದರು.

  • ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

    ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

    – ಶೇ.33 ಸಿಬ್ಬಂದಿಯೊಂದಿಗೆ ಕಾರ್ಯಾರಂಭ

    ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ.

    ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ ಪ್ರವೇಶಿಸುವ ಎಲ್ಲ ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾದೊಂದಿಗೆ ದೇಹದ ಉಷ್ಣಾಂಶ ಅಳೆಯುವ ಥರ್ಮಲ್ ಸ್ಕ್ರೀನಿಂಗ್ ಬಳಸಲಾಗುತ್ತಿದೆ. ಈ ಮೂಲಕ ದಕ್ಷತೆಯೊಂದಿಗೆ ಸುರಕ್ಷಿತ ಸ್ಥಳಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.

    ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾಗಳು ಒಂದೇ ಬಾರಿಗೆ 20 ಜನರ ದೇಹದ ಉಷ್ಣಾಂಶ ಅಳೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಸಿಬ್ಬಂದಿಯ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ. ನೌಕರನ ದೇಹದ ಉಷ್ಣತೆಯು 37.5 ಸೆಲ್ಸಿಯಸ್ ದಾಟಿದರೆ ಥರ್ಮಲ್ ಸ್ಕ್ರೀನಿಂಗ್ ಕೆಂಪು ಬಣ್ಣ ತೋರಿಸಿ, ಬಜರ್ ಧ್ವನಿಯೊಂದಿಗೆ ಎಚ್ಚರಿಕೆ ನೀಡುತ್ತದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ.

    ಪ್ರವೇಶದ್ವಾರದಲ್ಲಿ ಅಳವಡಿರುವ ಸಿಸ್ಟಮ್ ಹೆಚ್ಚಿನ ಉಷ್ಣಾಂಶ ಸಂವೇದನೆಯೊಂದಿಗೆ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಕ್ಯಾಮೆರಾಗಳು ಹೆಚ್ಚು ನಿಖರವಾದ ಚಿತ್ರ ಮತ್ತು ತಾಪಮಾನ ವ್ಯತ್ಯಾಸದ ಮಾಹಿತಿಯನ್ನು ಸೆರೆಹಿಡಿಯಲು ಅನುಕೂಲವಾಗಿವೆ.

  • 7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

    7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

    – 1460 ಕೋಟಿ ಕೊಡಬೇಕಾದ ಕಡೆ ಕೇವಲ 1 ಕೋಟಿ
    – ಕಾಂಗ್ರೆಸ್ ಸರ್ಕಾರದ ಅವಧಿ ಯೋಜನೆ ಎಂದು ಕಡೆಗಣಿಸಿದ್ರಾ..?

    ಕೋಲಾರ: ಕೋಲಾರದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಕೇವಲ ದಾಖಲೆಗಳಲ್ಲಿಯೇ ಉಳಿಯಿತೇ ಎನ್ನುವ ಚರ್ಚೆ ಶುರುವಾಗಿದೆ. 7 ವರ್ಷಗಳ ಹಿಂದೆ ಲೋಕಸಭಾ ಚುನಾವಣೆ ಘೋಷಣೆಗೂ ಕೆಲವೇ ಕ್ಷಣಗಳ ಮೊದಲು ಶಂಕುಸ್ಥಾಪನೆ ಮಾಡಲಾದ ಯೋಜನೆ ಇದಾಗಿದ್ದು, ಅಂದಿನಿಂದ ಇಂದಿನವರೆಗೂ ಯೋಜನೆಗೆ ಮೋಕ್ಷ ಸಿಕ್ಕಿಲ್ಲ. ಆದರೆ ಕೇಂದ್ರ ಸರ್ಕಾರ ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ಮಾಡಲು ಮುಂದಾಗಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹೌದು. 2014ರ ಮಾರ್ಚ್ 5ರಂದು ಲೋಕಸಭೆ ಚುಣಾವಣೆಯ ದಿನಾಂಕ ಘೋಷಣೆ ನಿಗದಿಯಾಗಿತ್ತು. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಯಲ್ದೂರು ಬಳಿ 1,118 ಎಕರೆ ಪ್ರದೇಶದಲ್ಲಿ ಅಂದು ಬೆಳ್ಳಂಬೆಳಗ್ಗೆ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿಗೆ ಅಡಿಗಲ್ಲು ಹಾಕಿದ್ದರು. ಯೋಜನೆಯಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದೆಲ್ಲಾ ಹೇಳಿದ್ದರು.

    2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ರೈಲ್ವೇ ಕೋಚ್ ಫ್ಯಾಕ್ಟರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಯೋಜನೆ ಮತ್ತೆ ಅಂದ್ರೆ 2019ರ ಲೋಕಸಭೆ ಚುಣಾವಣೆಗೆ ಮೋಕ್ಷ ಸಿಗುತ್ತೆ ಎಂದುಕೊಳ್ಳಲಾಗಿತ್ತು. ರೈಲ್ವೇ ಕೋಚ್ ಜೊತೆಗೆ ಮೆಟ್ರೋ ತಯಾರಿ ಮಾಡುವ ಕಾರ್ಖಾನೆ ಮಾಡಲಾಗುವುದು ಎನ್ನುವು ಮೂಲಕ ಸಂಸದ ಮುನಿಯಪ್ಪ ಚುನಾವಣೆ ವೇಳೆ ಭರವಸೆ ನೀಡಿದ್ದರು. ಕೇಂದ್ರ ಒಪ್ಪಿದ್ದೆಯಾದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿಯನ್ನು ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅನುಮೋದನೆ ಮಾಡಿಸಿಕೊಂಡು ಬರುವುದಾಗಿ ಸಂಸದ ಮುನಿಯಪ್ಪ ಅಂದು ಹೇಳಿದ್ದರು. ಈ ಮೂಲಕ ರೈಲ್ವೇ ಕೋಚ್ ಫ್ಯಾಕ್ಟರಿಯನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಅಜೆಂಡಾದಲ್ಲಿ ಸೇರಿಸಿತ್ತು.

    2014ರಿಂದಲೂ ಕೇಂದ್ರ ಸರ್ಕಾರ ತನ್ನ ಬಜೆಟ್‍ನಲ್ಲಿ 1 ಕೋಟಿ ರೂಪಾಯಿಯನ್ನ ಮೀಸಲಿರಿಸಿಕೊಂಡೆ ಬರುತ್ತಿದೆ. ಇದಕ್ಕೆ ಬೇಕಾಗಿರುವ ಭೂಮಿ ಹಾಗೂ ಅದರ ಸ್ಥಾಪನೆಗೆ ಬೇಕಾದ 1,460 ಕೋಟಿ ರೂಪಾಯಿಯಲ್ಲಿ ಅರ್ಧದಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡಬೇಕು ಎನ್ನುವ ಒಪ್ಪಂದ ಕೂಡ ನಡೆದಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಇದಕ್ಕೆ ಒಪ್ಪಿಗೆಯನ್ನು ನೀಡಿ ಕರಾರು ಪತ್ರಕ್ಕೂ ಸಹಿ ಮಾಡಿದ್ದರು. ಆದರೆ ಯೋಜನೆ ಹಳ್ಳಹಿಡಿದಿದ್ದು, ರೈಲ್ವೇ ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಜಿಲ್ಲೆಗೆ ಸಾಕಷ್ಟು ಹಿನ್ನೆಡೆಯಾಗಿದ್ದು, 3 ಸಾವಿರ ಉದ್ಯೋಗ ಕಡಿತವಾಗಲಿದೆ. ಕಳೆದ 7 ವರ್ಷಗಳಿಂದ ಕೋಚ್ ಫ್ಯಾಕ್ಟರಿ ಆಗುತ್ತೆ, ಉದ್ಯೋಗವಕಾಶಗಳು ಹೆಚ್ಚೆಚ್ಚು ಸಿಗುತ್ತೆ ಎಂದುಕೊಂಡಿದ್ದ ಕೋಲಾರ ಭಾಗದ ಜನರಿಗೆ ನಿರಾಸೆ ಮೂಡಿದೆ. ಸದ್ಯ ವರ್ಕ್ ಶಾಪ್‍ನಿಂದಾಗಿ 2 ಸಾವಿರ ಉದ್ಯೋಗ ಮಾತ್ರ ಸೃಷ್ಟಿಯಾಗಲಿದ್ದು, ಅದು ಕೂಡ ಯಾವಾಗ ಆಗುತ್ತೆ ಎಂಬುದು ಇನ್ನೂ ಕಾದು ನೋಡಬೇಕಾಗಿದೆ.