Tag: workers

  • ಯುಎಇಯಲ್ಲಿ ಸಿಲುಕಿದ್ದ 49ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರಿಗೆ ಉದ್ಯೋಗ

    ಯುಎಇಯಲ್ಲಿ ಸಿಲುಕಿದ್ದ 49ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರಿಗೆ ಉದ್ಯೋಗ

    ಒಮಾನ್: ಏಜೆಂಟ್‍ನಿಂದ ವಂಚನೆಗೊಳಗಾಗಿ ಯುಎಇಯ ಅಪಾರ್ಟ್‍ಮೆಂಟ್ ಒಂದರಲ್ಲಿ 64ಕ್ಕೂ ಹೆಚ್ಚಿನ ಭಾರತೀಯ ಕಾರ್ಮಿಕರು ಸಿಲುಕಿಕೊಂಡಿದ್ದರು. ಇದೀಗ ಅವರಲ್ಲಿ 49 ಕಾರ್ಮಿಕರಿಗೆ ಉದ್ಯೋಗ ನೀಡಿ ಸಹಾಯ ಮಾಡಲು 20 ಕಂಪನಿಗಳು ಮುಂದಾಗಿದೆ. ಉಳಿದವರನ್ನು ತಮ್ಮ ತಾಯ್ನಾಡಿಗೆ ಮರಳಿ ಕಳುಹಿಸಲಾಗಿದೆ.

    ಈ ಪ್ರಕರಣವನ್ನು ನಿಭಾಯಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರಾದ ಶಿರಾಲಿ ಶೇಖ್ ಮುಜಾಫರ್ ಮತ್ತು ಹಿದಾಯತ್ ಅಡೂರ್‍ರವರನ್ನು ಕಂಪನಿಗಳು ಸಂಪರ್ಕಿಸಿ ಕಾರ್ಮಿಕರ ಸಿವಿಗಳನ್ನು ಕಳುಹಿಸುವಂತೆ ತಿಳಿಸಲಾಯಿತು. ಕರ್ನಾಟಕದ ಎನ್‍ಆರ್‍ಐ ಅಧ್ಯಕ್ಷ ಮತ್ತು ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಒಡೆತನದ ಫಾರ್ಚೂನ್ ಪ್ಲಾಜಾ ಹೋಟೆಲ್‍ನಲ್ಲಿ ನಿರುದ್ಯೋಗಿಗಳಿಗೆ ಇಂಟರ್ ವ್ಯೂ ನಡೆಸಲಾಯಿತು. ಅಲ್ಲದೆ ತೊಂದರೆಗೀಡಾದ ಕಾರ್ಮಿಕರಿಗೆ ಹೋಟೆಲ್‍ನಲ್ಲಿ ಆಶ್ರಯ ನೀಡುವುದಾಗಿ ಭರವಸೆ ನೀಡಲಾಗಿದೆ.

    ಬಹುತೇಕ ಕಾರ್ಮಿಕರು ಬಡಗಿಗಳು ಮತ್ತು ಭಾರತ ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ ಎಸಿ ತಂತ್ರಜ್ಞರಾಗಿದ್ದಾರೆ. ನುರಿತ ಕಾರ್ಮಿಕರ ಅವಶ್ಯಕತೆ ಹಲವಾರು ಕಂಪನಿಗಳಿಗಿದ್ದು, ಸಹಾಯ ಮಾಡಲು ಸಂತೋಷದಿಂದ ಒಪ್ಪಿಕೊಂಡಿದೆ. ಅವರಿಗೆ ವಸತಿ ಸೌಕರ್ಯಗಳನ್ನು ಮತ್ತು ಊಟದ ವ್ಯವಸ್ಥೆಯನ್ನು ಸಹ ಕಂಪನಿಯೇ ನೋಡಿಕೊಳ್ಳಲಿದೆ.

  • ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

    ತೆಲಂಗಾಣದಲ್ಲಿ ನಾಳೆಯಿಂದ 10 ದಿನಗಳ ಕಾಲ ಲಾಕ್‍ಡೌನ್

    ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ತೆಲಂಗಾಣ ಸರ್ಕಾರ ರಾಜ್ಯದಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್‍ಗೊಳಿಸಿಲು ನಿರ್ಧರಿಸಿದೆ.

    ಈ ನಿರ್ಬಂಧಗಳು ಮೇ 12ರ ಬುಧವಾರದಿಂದ ಜಾರಿಗೆ ಬರಲಿದ್ದು, ಮೇ 22ರವರೆಗೂ ಮುಂದುವರಿಯುತ್ತದೆ. ನಾಳೆಯಿಂದ ಬೆಳಗ್ಗೆ 10 ಗಂಟೆಯಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಕಳೆದ ವಾರ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‍ರವರು ಲಾಕ್‍ಡೌನ್‍ಗೊಳಿಸುವುದನ್ನು ಮುಂದೂಡಿದರು. ಅದರಿಂದ ಜನರು ಜೀವನ ನಡೆಸಲು ಕಷ್ಟವಾಗುತ್ತದೆ ಮತ್ತು ಆರ್ಥಿಕತೆಯು ಸಂಪೂರ್ಣ ಕುಸಿಯುತ್ತದೆ. ಲಾಕ್‍ಡೌನ್ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ತೆಲಂಗಾಣದಲ್ಲಿ 25 ರಿಂದ 30 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಲಾಕ್‍ಡೌನ್ ಕಾರ್ಮಿಕರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದ್ದನ್ನು ನಾವು ನೋಡಿದ್ದೇವೆ. ಅವರು ಇದೀಗ ಸ್ಥಳಾಂತರವಾದರೆ ಮತ್ತೆ ಅವರು ಹಿಂದಿರುಗುವುದಿಲ್ಲ ಎಂದಿದ್ದರು.

  • ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

    ಮಡಿಕೇರಿ: ಕಾಫಿ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬರಡಿ ಗ್ರಾಮದಲ್ಲಿ ನಡೆದಿದೆ.

    ಕಾಡಾನೆ ದಾಳಿಯಿಂದ ಗಾಯಗೊಂಡ ಸುರೇಂದ್ರ(50) ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೋರ್ವ ಕಾರ್ಮಿಕ ಜನಾರ್ದನ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾಡಾನೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಠಾತ್ ದಾಳಿ ಮಾಡಿದೆ. ವಿಷಯ ತಿಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ವೇಳೆ ಕಾಡಾನೆ ಕಾಫಿ ತೋಟದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕೆಲ ದಿನಗಳಿಂದ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಯಿಂದ ರೈತರ ಕೃಷಿ ಫಸಲು ನಾಶವಾಗುತ್ತಿದ್ದು, ಕಾರ್ಮಿಕರ ಮೇಲೆ ನಿರಂತರ ದಾಳಿಮಾಡುತ್ತಿದೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದ್ದು, ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟಲು ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದರು.

    ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುರೇಂದ್ರರನ್ನು ಮಡಿಕೇರಿಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಾಯ ಪತ್ರಿಕೆಯೊಂದಿಗೆ ಮಾತನಾಡಿ ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಸೋಲಾರ್ ವಿದ್ಯುತ್ ತಂತಿ ಮೇಲೆ ಮಳೆಯಿಂದ ಮರ ಬಿದ್ದು ತುಂಡಾಗಿದೆ. ಕಾಡಾನೆಯೊಂದು ಬರಡಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು.

  • ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಮಡಿಕೇರಿ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಕಫ್ರ್ಯೂ ಜಾರಿಗೊಳಿಸಿ ನಾಲ್ಕು ದಿನ ಕಳೆಯುತ್ತಿದೆ. ಈ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ಮಾಡುತ್ತಿರುವ ಪೊಲೀಸರು. ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹೀಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ಇಂದು ಪೊಲೀಸರಿಗೆ ಹಣ್ಣು ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೊರೊನಾ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಸಾರ್ವಜನಿಕರಿಗಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆಯ ಕಾರ್ಯವನ್ನು ಮನಗಂಡು ತಿತಿಮತಿ ಗಡಿಬಾಗದಿಂದ ಗೋಣಿಕೊಪ್ಪಲು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯಗಳ ಕಿಟ್ ವಿತರಿಸಿದರು.

    ಕಫ್ರ್ಯೂ ಹಿನ್ನೆಲೆಯಲ್ಲಿ ಪೊಲೀಸರಿಗೆ ಸರಿಯಾದ ಸಮಯಕ್ಕೆ ಊಟ, ಕಾಫಿ, ತಂಪು ಪಾನಿಯಗಳು ಸಿಗುತ್ತಿಲ್ಲ. ಸದಾ ಸಾರ್ವಜನಿಕರಿಗಾಗಿ ದುಡಿಯುವ ಪೊಲೀಸರ ಕಷ್ಟವನ್ನರಿತ ಯುವ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

  • ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಚೆನ್ನೈ: ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದು, ನೂರಾರು ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಮಿಳು ನಟ ಸಿದ್ಧಾರ್ಥ್ ಆರೋಪಿಸಿದ್ದಾರೆ. ಈ ಬಗ್ಗೆ ಇದೀಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಈ ಕುರಿತು ಟ್ವೀಟ್ ಮಾಡಿರುವ ಸಿದ್ಧಾರ್ಥ್, ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ. ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆರಿಕೆ ಕರೆಗಳು ಬರುತ್ತಿವೆ. ಬಿಜೆಪಿಯ ಲಿಂಕ್ ಹಾಗೂ ಡಿಪಿಗಳೊಂದಿಗೆ ಎಲ್ಲ ನಂಬರ್‍ಗಳನ್ನು ದಾಖಲಿಸಿದ್ದೇನೆ ಹಾಗೂ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸುಮ್ಮನಿರುವುದಿಲ್ಲ, ಪ್ರಯತ್ನಿಸುತ್ತಲೇ ಇರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವೀಟ್‍ನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ತಮಿಳುನಾಡು ಬಿಜೆಪಿಯ ಹಲವು ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅವುಗಳಲ್ಲಿ ಇದೂ ಒಂದು. ಬಿಜೆಪಿ ಸದಸಯರು ನಿನ್ನೆ ನನ್ನ ಫೋನ್ ನಂಬರ್ ಲೀಕ್ ಮಾಡಿದ್ದಾರೆ. ನನ್ನ ಮೇಲೆ ದಾಳಿ ನಡೆಸಿ, ಕಿರುಕುಳ ನೀಡುವಂತೆ ಜನರಿಗೆ ಹೇಳಿದ್ದಾರೆ.

    ಈ ವ್ಯಕ್ತಿ ಇನ್ನೆಂದೂ ಇನ್ನೆಂದೂ ಬಾಯ್ಬಿಡಬಾರದು ಬರೆದಿದ್ದಾರೆ. ಕೋವಿಡ್‍ನಿಂದ ನಾವು ಬದುಕಬಹುದು, ಇಂತಹ ಜನರಿಂದ ನಾವು ಉಳಿಯಲು ಸಾಧ್ಯವೇ ಎಂದು ಸಿದ್ಧಾರ್ಥ್ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

    ಈ ಕುರಿತು ಇದೀಗ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಟ್ರೆಂಡಿಂಗ್‍ನಲ್ಲಿದೆ. ಕೋವಿಡ್ ನಿರ್ವಹಣೆ ವಿಚಾರವಾಗಿ ಸಿದ್ಧಾರ್ಥ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  • ತವರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ, ಮೂವರು ಸಾವು

    ತವರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರಿದ್ದ ಬಸ್ ಪಲ್ಟಿ, ಮೂವರು ಸಾವು

    ಭೋಪಾಲ್: ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳತ್ತ ವಲಸೆ ಹೋಗುತ್ತಿದ್ದ ಕಾರ್ಮಿಕರ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರಿನ ಝೋರಾಸಿ ಘಾಟ್‍ನಲ್ಲಿ ಇಂದು ನಡೆದಿದೆ.

    ದೆಹಲಿಯಿಂದ ಮಧ್ಯಪ್ರದೇಶದ ಟಿಕ್ಮಘರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿದೆ. ಬಸ್‍ನಲ್ಲಿ 100 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಪಘಾತವು ರಸ್ತೆ ತಿರುವಿನಲ್ಲಿ ಸಂಭವಿಸಿದೆ. ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಕಷ್ಟವಾಗಿದೆ. ಹೀಗಾಗಿ ಬಸ್ ಕೆಳಮುಖವಾಗಿ ಬಿದ್ದಿದೆ. ಬಸ್‍ನ ಚಾಲಕ ಪರಾರಿಯಾಗಿದ್ದಾನೆ. ಆತ ಕುಡಿದಿದ್ದಾನೆ ಎಂಬ ಆರೋಪ ಬಂದಿದೆ ಎಂದು ಭಿಲೋವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅನಿಲ್ ಸಿಂಗ್ ಭಡೋರಿಯಾ ಹೇಳಿದ್ದಾರೆ.

    ಬಸ್ ಪಲ್ಟಿಯಾಗುತ್ತಿದ್ದಂತೆ ಕೆಲವರು ರಸ್ತೆ ಮೇಲೆ ಹಾರಿದ್ದಾರೆ. ಕೆಲವರು ಕಿಟಕಿ ಗಾಜುಗಳನ್ನು ಒಡೆದುಕೊಂಡು ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಸಾವಿರಾರು ಮಂದಿ ವಲಸೆ ಕಾರ್ಮಿಕರು ಕೂಲಿ ಕೆಲಸದ ಮಾಡುತ್ತಾ ನವದೆಹಲಿಯಲ್ಲಿ ನೆಲೆಸಿದ್ದಾರೆ. ಕೋವಿಡ್ ಸೋಂಕು ಇರುವ ಕಾರಣದಿಂದಾಗಿ ಒಂದುವಾರ ಲಾಕ್‍ಡೌನ್ ಮಾಡಲಾಗಿದೆ. ಕೊರೊನಾ ಹೆಚ್ಚಳವಾದರೆ ಸಂಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಬಹುದು ಎಂದು ವಲಸೆ ಕಾರ್ಮಿಕರು ತಮ್ಮ ತವರೂರಿನತ್ತ ಮುಖಮಾಡಿದ್ದಾರೆ.

  • ಸಿಮೆಂಟ್ ತುಂಬಿದ ವಾಹನ ಪಲ್ಟಿ – ಇಬ್ಬರು ಕಾರ್ಮಿಕರು ದಾರುಣ ಸಾವು

    ಸಿಮೆಂಟ್ ತುಂಬಿದ ವಾಹನ ಪಲ್ಟಿ – ಇಬ್ಬರು ಕಾರ್ಮಿಕರು ದಾರುಣ ಸಾವು

    ವಿಜಯಪುರ: ಸಿಮೆಂಟ್ ತುಂಬಿಕೊಂಡು ಕೆಲಸದ ಕಡೆಗೆ ಸಾಗುತ್ತಿದ್ದ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಗೆದ್ದಲಮರಿ ತಾಂಡಾದ ನಿವಾಸಿ ವೆಂಕಟೇಶ್ ಪವಾರ(40) ಹಾಗೂ ಢವಳಗಿ ನಿವಾಸಿ ನಾಗಪ್ಪ ದಂಡೆನ್ನವರ್(45) ಎಂದು ಗುರುತಿಸಲಾಗಿದೆ. ಇವರೊಂದಿಗೆ ಇನ್ನು ಇಬ್ಬರು ಕಾರ್ಮಿಕರು ಮುದ್ದೇಬಿಹಾಳದಿಂದ ನೇಬಗೇರಿಗೆ ಸಿಮೆಂಟ್ ತುಂಬಿಕೊಂಡು ಲಾರಿಯಲ್ಲಿ ಹೊಗುವಾಗ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ ಇನ್ನಿಬ್ಬರಿಗೆ ಗಾಯಗಳಾಗಿವೆ.

    ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಾಹನ ಪಲ್ಟಿಯಾಗಲು ಕಾರಣ ಏನೆಂದು ತಿಳಿದುಬಂದಿಲ್ಲ. ಈ ಕುರಿತು ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಖಾಸಗೀಕರಣ ವಿರೋಧಿಸಿ ಬಿಇಎಲ್, ಹೆಚ್‍ಎಎಲ್ ನೌಕರರ ಪ್ರತಿಭಟನೆ

    ಖಾಸಗೀಕರಣ ವಿರೋಧಿಸಿ ಬಿಇಎಲ್, ಹೆಚ್‍ಎಎಲ್ ನೌಕರರ ಪ್ರತಿಭಟನೆ

    ಬೆಂಗಳೂರು: ಖಾಸಗೀಕರಣ ವಿರೋಧಿಸಿ, ಖಾಸಗೀಕರಣ ವಿರೋಧಿ ವೇದಿಕೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರ ಭಾಗವಾಗಿ ಜಾಲಹಳ್ಳಿಯ ಬಿಇಎಲ್ ಹಾಗೂ ಹೆಚ್‍ಎಎಲ್ ನೌಕರರು ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

    ದೇಶದ ನಿರ್ಮಾಣಕ್ಕೆ ಹಾಗೂ ಕೃಷಿ ಕೇತ್ರಗಳ ಬೆಳವಣಿಗೆಗೆ ಮೂಲ ಕಾರಣವಾಗಿರುವ ಸಾರ್ವಜನಿಕ ಸಂಸ್ಥೆಗಳ ಉಳಿವಿಗಾಗಿ ಹಾಗೂ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಹೆಚ್‍ಎಎಲ್, ಬಿಇಎಂಎಲ್, ಬಿಇಎಲ್, ಬಿಹೆಚ್‍ಇಎಲ್, ವಿಐಎಸ್‍ಎಲ್, ಎಲ್‍ಐಸಿ ಸೇರಿದಂತೆ ಹಲವು ಕಂಪನಿಗಳು ಸಹ ಕೇಂದ್ರದ ಖಾಸಗೀಕರಣ ನೀತಿಗೆ ಆಕ್ರೋಶ ವ್ಯಕ್ತಪಡಿಸಿವೆ.

    ಲಾಕ್ ಡೌನ್ ಸಂದರ್ಭದಲ್ಲಿ ಬಿಇಎಲ್, ಬೆಮಲ್, ಹೆಚ್‍ಎಎಲ್ ಜನರ ಪರವಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯ ತೋರಿವೆ. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆ ಸೇರಿದಂತೆ ಜನರಿಗೆ ಬದುಕಲು ಬೇಕಾದ ಎಲ್ಲಾ ಸಹಕಾರವನ್ನು ನೀಡಿವೆ. ಅಷ್ಟೇ ಅಲ್ಲ ಈ ಸಾರ್ವಜನಿಕ ಉದ್ದಿಮೆಗಳು ಕೋಟ್ಯಂತರ ಹಣವನ್ನು ಕೇಂದ್ರಕ್ಕೆ ಸಾಲ ಕೊಡುವಷ್ಟು ಲಾಭ ತಂದರೂ ಕೂಡ ಇವುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಎಷ್ಟು ಸರಿ ಎಂದು ಸಂಘಟಕರು ಪ್ರಶ್ನೆ ಮಾಡಿದರು.

    ಭಾರತ್ ಎಲೆಕ್ಟ್ರಾನಿಕ್ಸ್ ಯುನಿಯನ್‍ನ ಪ್ರಧಾನ ಕಾರ್ಯದರ್ಶಿ ಆಂಟೋನಿ ಪಿಂಟೋ ಮಾತನಾಡಿ, ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ನಾವು ಒಪ್ಪುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಭಾಗಿಯಾಗಿದ್ದರು.

  • ಕಲುಷಿತ ನೀರು ಸೇವಿಸಿ ಓರ್ವ ಸಾವು, 10 ಮಂದಿ ಅಸ್ವಸ್ಥ

    ಕಲುಷಿತ ನೀರು ಸೇವಿಸಿ ಓರ್ವ ಸಾವು, 10 ಮಂದಿ ಅಸ್ವಸ್ಥ

    – ಕಲುಷಿತ ನೀರು ಸೇವಿಸಿ ಪ್ರಾಣಕಳೆದುಕೊಂಡ

    ಕೋಲ್ಕತ್ತಾ: ಕಲುಸಿತ ನೀರನ್ನು ಕುಡಿದು ಒರ್ವವ್ಯಕ್ತಿ ಸಾವನ್ನಪ್ಪಿದ್ದು, 10 ಜನರು ಅನಾರೋಗ್ಯದಿಂದ ಬಳಲುತ್ತಿರುವ ಘಟನೆ ಭವಾನಿಪುರದ ಕೆಎಂಸಿ ಲೇಬರ್ ಕ್ವಾರ್ಟರ್ಸ್‍ನಲ್ಲಿ ನಡೆದಿದೆ.

    ಭುವನೇಶ್ವರ ದಾಸ್(43) ಕೊಳಚೆನೀರಿನಿಂದ ಕಲುಷಿತವಾದ ನೀರನ್ನು ಕುಡಿದು ಪ್ರಾಣಬಿಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಲುಷಿತ ನೀರು ಹೇಗೆ ಕುಡಿಯುವ ನೀರಿಗೆ ಮಿಶ್ರಣವಾಯಿತು ಎಂಬುದು ತಿಳಿದು ಬರಬೇಕಿದೆ.

    ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್‍ನ (ಕೆಎಂಸಿ) ಕಾರ್ಮಿಕರ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರುವ ಜನರು ಕೊಳಚೆನೀರಿನಿಂದ ಕಲುಷಿತಗೊಂಡ ನೀರನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಹಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅಗತ್ಯ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಆ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಈ ಸಂಬಂಧ ಸಂಬಂಧಿಸಿದ ಇಲಾಖೆಗಳಿಂದ ವರದಿ ಕೋರಿದ್ದೇನೆ ಎಂದು ವಾರ್ಡ್ ಕಾರ್ಪೋರೇಟರ್ ರತನ್ ಮಲಾಕರ್ ತಿಳಿಸಿದ್ದಾರೆ.

  • ಶಾಲೆ ಕಾಂಪೌಂಡ್ ಕುಸಿದು 6 ಸಾವು, ಮೂವರಿಗೆ ಗಾಯ

    ಶಾಲೆ ಕಾಂಪೌಂಡ್ ಕುಸಿದು 6 ಸಾವು, ಮೂವರಿಗೆ ಗಾಯ

    ಪಾಟ್ನಾ: ಶಾಲೆ ಕಟ್ಟಡದ ಕಾಂಪೌಂಡ್‍ವೊಂದು ಕುಸಿದು 6 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಸೋಮವಾರ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.

    ರಾಜಧಾನಿ ಪಾಟ್ನಾದಿಂದ 190 ಕಿ.ಮೀ ದೂರದಲ್ಲಿರುವ ಮಹೆಶ್‍ಖುಂಟ್ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ಬರುವ ಚಂಡಿ ಟೋಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದಿದೆ. ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಾಲೆಯ ಬಳಿ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಶಾಲೆಯ ಕಾಂಪೌಂಡ್ ನನ್ನು ಕೆಡವಲು ಜೆಸಿಬಿ ಯಂತ್ರವನ್ನು ಬಳಸಲಾಗಿತ್ತು. ಸರಿಯಾದ ಯೋಜನೆ ರೂಪಿಸದೆ ಗೋಡೆ ನಿರ್ಮಿಸಲು ಮುಂದಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ನಿರ್ಮಾಣದ ಉಸ್ತುವಾರಿ ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.