Tag: workers

  • ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    ಮುಂಬೈ: ಸಮೃದ್ಧಿ ಎಕ್ಸ್‌ಪ್ರೆಸ್ ವೇಯ (Samruddhi Expressway) ಮೂರನೇ ಹಂತದ ನಿರ್ಮಾಣದ ವೇಳೆ ಸೇತುವೆಯ ಚಪ್ಪಡಿಯ ಮೇಲೆ ಕ್ರೇನ್ (Crane) ಕುಸಿದು ಬಿದ್ದಿದ್ದು, 16 ಮಂದಿ ಕಾರ್ಮಿಕರು (Workers) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಥಾಣೆ (Thane) ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಮಧ್ಯರಾತ್ರಿ 12 ಗಂಟೆಯ ವೇಳೆ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಬೈಲ್ ಗ್ಯಾಂಟ್ರಿ ಕ್ರೇನ್ ಅನ್ನು ಸೇತುವೆ ನಿರ್ಮಾಣದಲ್ಲಿ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್‌ಗಳನ್ನು ಸ್ಥಾಪಿಸಲು ಬಳಸಲಾಗುತ್ತದೆ. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ಕಲ್ಲು ತೂರಾಟ – ಹರಿಯಾಣದಲ್ಲಿ ಹಿಂಸಾಚಾರ, ಇಬ್ಬರು ಸಾವು

    ಮುಂಬೈನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಶಹಪುರ್ ತೆಹಸಿಲ್ ಸರ್ಲಾಂಬೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

    ಮಂಗಳವಾರ ಮುಂಜಾನೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಎಂಎಸ್‌ಆರ್‌ಡಿಸಿ ಸಚಿವ ದಾದಾ ಭೂಸೆ, ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ ಎಂದರು. ಅಧಿಕಾರಿಗಳ ಪ್ರಕಾರ ಕನಿಷ್ಟ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಪೇದೆ

    ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆಗೈದ ಪಾಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಮತ್ತೊಂದು ದುರಂತ – ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು

    ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಮತ್ತೊಂದು ದುರಂತ – ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು

    ಭುವನೇಶ್ವರ: ಒಡಿಶಾದಲ್ಲಿ (Odisha) ನಡೆದ ತ್ರಿವಳಿ ರೈಲು ಅಪಘಾತದ ಬೆನ್ನಲ್ಲೇ, ಗೂಡ್ಸ್ ರೈಲಿಗೆ (Goods Train) ಸಿಲುಕಿ 6 ಕಾರ್ಮಿಕರು (Workers) ಸಾವನ್ನಪ್ಪಿದ ಘಟನೆ ಒಡಿಶಾದ ಜಾಜ್‌ಪುರ (Jajpur) ಜಿಲ್ಲೆಯಲ್ಲಿ ನಡೆದಿದೆ.

    ಮೃತ ಕಾರ್ಮಿಕರು ಜಾಜ್‌ಪುರ ಕಿಯೋಂಜರ್ ರಸ್ತೆ ರೈಲು ನಿಲ್ದಾಣದಲ್ಲಿ ರೈಲ್ವೆ ಸೈಡಿಂಗ್ (Railway Siding) ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ಗುಡುಗು ಸಹಿತ ಮಳೆಯಾಗಿದ್ದರಿಂದ (Thunder Storm) ಅಲ್ಲೇ ನಿಂತಿದ್ದ ಗೂಡ್ಸ್ ರೈಲಿನ ಅಡಿಯಲ್ಲಿ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್ ರೈಲಿಗೆ ಎಂಜಿನ್ ಜೋಡಿಸಿರಲಿಲ್ಲ. ಜೋರು ಮಳೆಯಿಂದಾಗಿ ರೈಲು ಚಲಿಸಲು ಪ್ರಾಂಭಿಸಿದ್ದು, ಅದರ ಅಡಿಯಲ್ಲಿ ಆಶ್ರಯ ಪಡೆದಿದ್ದ ಕಾರ್ಮಿಕರು ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರಜ್ಞಾ ಠಾಕೂರ್‌ನೊಂದಿಗೆ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಯುವತಿ ನಾಪತ್ತೆ- ಮುಸ್ಲಿಂ ಯುವಕನೊಂದಿಗೆ ಪರಾರಿ?

    ಘಟನೆಯಿಂದ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಟಕ್‌ನಲ್ಲಿರುವ (Cuttack) ಎಸ್‌ಸಿಬಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡಿರುವ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಂಬಧಂಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ತೆರಳುತ್ತಿದ್ದ ಅಂಬುಲೆನ್ಸ್‌ಗೆ ಬೆಂಕಿಯಿಟ್ಟ ಜನರ ಗುಂಪು – 8ರ ಬಾಲಕ, ತಾಯಿ ದುರ್ಮರಣ

    ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದ 5 ದಿನಗಳ ಬಳಿಕ ಈ ಘಟನೆ ನಡೆದಿದೆ. ಒಡಿಶಾ ರೈಲು ಅಪಾಘಾತದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದು, ತನಿಖಾಧಿಕಾರಿಗಳು ಮಾನವ ದೋಷ, ಸಿಗ್ನಲ್ ವೈಫಲ್ಯ ಮತ್ತು ಮೂರು ರೈಲುಗಳ ಅಪಘಾತದ ಹಿಂದಿನ ಸಂಭವನೀಯ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಮೃತ ವ್ಯಕ್ತಿಯನ್ನು ಪತಿ ಎಂದ ಮಹಿಳೆ

  • ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

    ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

    ಹಾಸನ: ಕೂಲಿ ಕೆಲಸಕ್ಕೆಂದು (Wage Work) ಕರೆದುಕೊಂಡು ಬಂದು ಕೂಡಿ ಹಾಕಿದ್ದ 18 ಮಂದಿ ಕಾರ್ಮಿಕರನ್ನು (Workers) ರಕ್ಷಿಸಿ ಆರೋಪಿಯನ್ನು ಬಂಧಿಸಿದ ಘಟನೆ ಹಾಸನದ (Hassan) ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಹಾಸನ ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುನೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಿರ್ಗತಿಕರಿಗೆ ಕೆಲಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದು ಎಲ್ಲರನ್ನೂ ಒಂದೆಡೆ ಕೂಡಿ ಹಾಕಿದ್ದ. ಅಲ್ಲದೇ ಕಾರ್ಮಿಕರಿಗೆ ಸರಿಯಾಗಿ ವೇತನ ಮತ್ತು ಆಹಾರ ನೀಡದೆ ದುಡಿಸಿಕೊಳ್ಳುತ್ತಿದ್ದ. ಒಂದೇ ವಾಹನದಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಮತ್ತೆ ತನ್ನ ತೋಟದ ಮನೆಯಲ್ಲಿ ಕೂಡಿ ಹಾಕುತ್ತಿದ್ದ ಕಿರಾತಕನನ್ನು ಬಂಧಿಸುವಲ್ಲಿ (Arrest) ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಓಗೆ ನೋಟಿಸ್

    ರೈಲ್ವೆ, ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರನ್ನು ಕರೆದುಕೊಂಡು ಬಂದು ಬಂಧಿಸಿಟ್ಟಿದ್ದು ಮಾತ್ರವಲ್ಲದೇ ಯಾರನ್ನೂ ಹೊರಗೆ ಬಿಡದೆ ದುಡಿಸಿಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಕಾರ್ಮಿಕರು ಸ್ನಾನ, ಬಟ್ಟೆ, ಆಹಾರವಿಲ್ಲದೇ ಪರದಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 18 ಮಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಆರೋಪಿ ಮುನೇಶ್ ಈ ಹಿಂದೆಯೂ ಇಂತಹದೇ ಕೃತ್ಯಗಳಲ್ಲಿ ಭಾಗಿಯಾಗಿದ್ದು, ನಾಲ್ಕನೇ ಬಾರಿಗೆ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಂ ಖಾಲಿ ಮಾಡಿಸಿದ್ದ ಅಧಿಕಾರಿಗೆ ಬಿತ್ತು 53 ಸಾವಿರ ದಂಡ!

  • ಧರಣಿಗೆ ಕೂತ ನಟ ಅನಿರುದ್ಧ: ಕೋವಿಡ್ ಸಮಯದ ದೇವರಿಗೆ ಬೆಂಬಲ

    ಧರಣಿಗೆ ಕೂತ ನಟ ಅನಿರುದ್ಧ: ಕೋವಿಡ್ ಸಮಯದ ದೇವರಿಗೆ ಬೆಂಬಲ

    ರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರು (workers) ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿಗೆ (support) ಕೂತಿದ್ದಾರೆ. ಒಳಗುತ್ತಿಗೆಯ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಮುಷ್ಕರ ನಡೆಸಿದ್ದಾರೆ. ಈ ಧರಣಿಗೆ ಬೆಂಬಲಿಸಿ ನಟ ಅನಿರುದ‍್ಧ (Aniruddha) ಕೂಡ ಜೊತೆಯಾಗಿದ್ದಾರೆ.

    ಈ ಹಿಂದೆ ಪೌರ ಕಾರ್ಮಿಕರ ಪರವಾಗಿಯೂ ಅನಿರುದ್ಧ ಮಾತನಾಡಿದ್ದರು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದರು. ಇದೀಗ ಆರೋಗ್ಯ ಇಲಾಖೆಯ ಒಳಗುತ್ತಿಗೆಯ ನೌಕರರ ಬೆನ್ನಿಗೆ ನಿಂತಿದ್ದಾರೆ. ಹೋರಾಟ ಸ್ಥಳಕ್ಕೆ ಆಗಮಿಸಿದ ಅವರು, ಹಲವು ಗಂಟೆಗಳ ಕಾಲ ಅವರೊಂದಿಗೆ ಧರಣಿಗೂ ಕೂತರು. ಅವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಇದನ್ನೂ ಓದಿ: ರಮ್ಯಾಗಿಂತ ಸಾನ್ಯಗೆ ವಯಸ್ಸಾಯ್ತಾ? ಕಾಲೆಳೆದ ನೆಟ್ಟಿಗರು

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿರುದ್ಧ, ‘ಆರೋಗ್ಯ ಸಿಬ್ಬಂದಿ ನಮಗೆ ಕೋವಿಡ್ ಕಾಲದ ದೇವರು ಆಗಿದ್ದರು. ಇಂದು ಆ ದೇವರುಗಳು ಬೀದಿಗೆ ಬಂದಿದ್ದಾರೆ. ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ನ್ಯಾಯಯುತ ಬೇಡಿಕೆ ಕೇಳುತ್ತಿದ್ದಾರೆ. ಕೂಡಲೇ ಸರಕಾರ ಅವರ ನೋವಿಗೆ ಸ್ಪಂದಿಸಬೇಕು. ನ್ಯಾಯ ಸಿಗಬೇಕು’ ಎಂದು ಅವರು ಹೇಳಿದ್ದಾರೆ.

  • ಕಳ್ಳತನದ ಶಂಕೆ – ವ್ಯಕ್ತಿಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸಿದ ಕಾರ್ಮಿಕರು

    ಕಳ್ಳತನದ ಶಂಕೆ – ವ್ಯಕ್ತಿಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸಿದ ಕಾರ್ಮಿಕರು

    ಚೆನ್ನೈ: ಕಳ್ಳತನ (Theft) ಮಾಡಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು (Man) ಮರಕ್ಕೆ ಕಟ್ಟಿ ಹಾಕಿ, ಥಳಿಸಿ ಕೊಂದಿರುವ ಕ್ರೂರ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ವರದಿಗಳ ಪ್ರಕಾರ ತಿರುಚ್ಚಿ-ಮದುರೈ ಹೆದ್ದಾರಿಯ ಮಣಿಗಂಡಂನಲ್ಲಿ ಘಟನೆ ನಡೆದಿದೆ. ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಮಿಲ್‌ನಲ್ಲಿ (Saw Mill)ಕೆಲಸ ಮಾಡುತ್ತಿದ್ದ ವಿವಿಧ ರಾಜ್ಯಗಳ ಕಾರ್ಮಿಕರು ಈ ಕೃತ್ಯವನ್ನು ನಡೆಸಿದ್ದಾರೆ.

    ಅಪರಿಚಿತ ವ್ಯಕ್ತಿಯೊಬ್ಬ ಮಿಲ್‌ನೊಳಗೆ ಅನುಮತಿಯಿಲ್ಲದೇ ನುಗ್ಗುವುದನ್ನು ನೋಡಿದ ಕಾರ್ಮಿಕರು ಆತನನ್ನು ಹಿಡಿದು, ಕಳ್ಳತನದ ಆರೋಪವನ್ನು ಮಾಡಿದ್ದಾರೆ. ಬಳಿಕ ಆತನನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

    ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನನ್ನು ತುವಕುಡಿಯ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಆತನ ಕುತ್ತಿಗೆ, ಎದೆ, ಬಲಗೈ, ಬಲ ಮೊಣಕಾಲು ಹಾಗೂ ಗುಪ್ತಾಂಗದ ಮೇಲೂ ಗಾಯಗಳಾಗಿರುವುದು ಕಂಡುಬಂದಿದೆ.

    CRIME

    ಪೊಲೀಸರು ಮಿಲ್ ಮಾಲೀಕ ಧೀರೇಂದರ್ ಸೇರಿದಂತೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಫೈಝಲ್ ಶೇಕ್ ಹಾಗೂ ಮಫ್ಜುಲ್ ಹುಕ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೂದಲು ಕಸಿ ಮಾಡಲು ಹೋಗಿ ಎಡವಟ್ಟು- ನೋವಿನಿಂದ ನರಳಿ ನರಳಿ ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ – 7 ಸಾವು, ಒಬ್ಬರ ಸ್ಥಿತಿ ಗಂಭೀರ

    ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ – 7 ಸಾವು, ಒಬ್ಬರ ಸ್ಥಿತಿ ಗಂಭೀರ

    ಗಾಂಧೀನಗರ: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್(Lift) ಕುಸಿದು(Collapse) 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್‌ನ(Gujarat) ಅಹಮದಾಬಾದ್‌ನಲ್ಲಿ(Ahmedabad) ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ಸುಮಾರು 10 ಗಂಟೆಯ ವೇಳೆಗೆ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದ ಲಿಫ್ಟ್ ಕುಸಿದಿದೆ. ಲಿಫ್ಟ್ ಕುಸಿತದ ವೇಳೆ ಅದರಲ್ಲಿ 8 ಕಾರ್ಮಿಕರಿದ್ದರು ಎನ್ನಲಾಗಿದೆ.

    ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ)ಯ ಅಗ್ನಿಶಾಮಕ ದಳ ಅಥವಾ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಯಾವುದೇ ಕರೆಗಳು ಬಂದಿಲ್ಲ ಎನ್ನಲಾಗಿದೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಂದಕಕ್ಕೆ ಉರುಳಿದ ಮಿನಿಬಸ್‌ – 10 ಮಂದಿ ದುರ್ಮರಣ, 28 ಮಂದಿಗೆ ಗಾಯ

    ನಮಗೆ ಘಟನೆಯ ಬಗ್ಗೆ ಯಾವುದೇ ಏಜೆನ್ಸಿ ಅಥವಾ ಡೆವೆಲಪರ್‌ಗಳಿಂದ ಕರೆ ಬಂದಿರಲಿಲ್ಲ. ಮಾಧ್ಯಮಗಳ ವರದಿ ಹಾಗೂ ಪ್ರತಿನಿಧಿಗಳಿಂದ ಬಂದ ದೂರವಾಣಿ ಮೂಲಕ ಘಟನೆ ಬಗ್ಗೆ ತಿಳಿದುಕೊಂಡೆವು. ಬಳಿಕ ಘಟನೆ ಬಗ್ಗೆ ಪರಿಶೀಲಿಸಲು ಸ್ಥಳಕ್ಕೆ ಬಂದೆವು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ.

    ಇದು ಖಾಸಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗುಸರಾಯ್‍ನಲ್ಲಿ ಗುಂಡಿನ ದಾಳಿ – 11 ಮಂದಿಗೆ ಗಂಭೀರ ಗಾಯ, ಓರ್ವ ಸಾವು

    Live Tv
    [brid partner=56869869 player=32851 video=960834 autoplay=true]

  • ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ

    ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ

    ಲಕ್ನೋ: ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಬಾರಾಬಂಕಿಯ ಮಹುಂಗುಪುರ ಬಳಿ ಡಬಲ್ ಡೆಕ್ಕರ್ ಬಸ್‍ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ನೇಪಾಳಿ ವಲಸೆ ಕಾರ್ಮಿಕರು ಡಬಲ್ ಡೆಕ್ಕರ್ ಬಸ್‌ನಲ್ಲಿ ಗೋವಾಕ್ಕೆ ತೆರಳುತ್ತಿದ್ದಾಗ ಅದರ ಒಂದು ಟೈರ್ ಪಂಕ್ಚರ್ ಆಗಿದೆ. ನಂತರ ಬಸ್ಸಿನ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: 2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು

    ಬಸ್ಸಿನಲ್ಲಿದ್ದ ಸುಮಾರು 60 ಪ್ರಯಾಣಿಕರಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಇದೀಗ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾರಾಬಂಕಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆರು ಗಾಯಾಳುಗಳನ್ನು ಲಕ್ನೋ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ ಎಂದು ಬರಾಬನಿ ಹಿರಿಯ ಪೊಲೀಸ್ ಅಧಿಕಾರಿ ಪೂರ್ಣೇಂದು ಸಿಂಗ್ ತಿಳಿಸಿದ್ದಾರೆ.

    ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರನ್ನು ನೇಪಾಳಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ 5 ಶಾಸಕರನ್ನು ಕಳೆದುಕೊಂಡ ನಿತೀಶ್ ಕುಮಾರ್ – ಜೆಡಿಯು ಎಂಎಲ್‌ಎಗಳು ಬಿಜೆಪಿಯೊಂದಿಗೆ ವಿಲೀನ

    Live Tv
    [brid partner=56869869 player=32851 video=960834 autoplay=true]

  • ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಭೋಪಾಲ್: ಏಳು ತಿಂಗಳಿನಿಂದ ಸರಿಯಾಗಿ ಸಂಬಳ ನೀಡಿಲ್ಲ ಎಂದು ಖಾಸಗಿ ಕಂಪನಿಯ ಏಳು ಉದ್ಯೋಗಿಗಳು ಇಂದೋರ್‌ನ ಕಾರ್ಖಾನೆಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇದೀಗ ಅವರನ್ನು ಸರ್ಕಾರಿ ಎಂವೈ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ನಿಯಮಿತವಾಗಿ ವೇತನ ನೀಡಿಲ್ಲ. ಅಲ್ಲದೇ ಅವರನ್ನು ಬೇರೆ ಶಾಖೆಗೆ ವರ್ಗಾಯಿಸಲಾಗುತ್ತಿದೆ. ಅದಕ್ಕಾಗಿಯೇ ನಮ್ಮ ಸ್ನೇಹಿತರು ವಿಷ ಸೇವಿಸಿದ್ದಾರೆ ಎಂದು ಸಹೋದ್ಯೋಗಿ ಅನಿಲ್ ನಿಗಮ್ ಎಂಬವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಮಗಾರಿ ಉದ್ಘಾಟನೆ ವೇಳೆ ಎಡವಟ್ಟು – ಜನರ ನೂಕುನುಗ್ಗಲಿನಿಂದ ಹೈರಾಣಾದ ಶ್ರೀರಾಮುಲು

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಕುಶ್ವಾಹ ಮಾತನಾಡಿ, ಕಾರ್ಖಾನೆಯ ಕಾರ್ಮಿಕರಿಗೆ ಕಳೆದ ಏಳು ತಿಂಗಳಿಂದ ಸಂಬಳ ನೀಡಿಲ್ಲ. ಅವರು ಮಾಡ್ಯುಲರ್ ಕಿಚನ್‍ಗಳಿಗೆ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಬಂಗಾಂಗದ ಇನ್ನೊಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ನಾವು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

    Live Tv
    [brid partner=56869869 player=32851 video=960834 autoplay=true]

  • ಮಿತಿಮೀರಿದ ಚಿರತೆ ಹಾವಳಿ – ಜೀವಭಯದಿಂದ ತೋಟದ ಕೆಲಸಕ್ಕೆ ಬಾರದ ಕಾರ್ಮಿಕರು

    ಮಿತಿಮೀರಿದ ಚಿರತೆ ಹಾವಳಿ – ಜೀವಭಯದಿಂದ ತೋಟದ ಕೆಲಸಕ್ಕೆ ಬಾರದ ಕಾರ್ಮಿಕರು

    ಹಾಸನ: ನಾಯಿ, ಹಸು, ಕರುಗಳನ್ನು ಹೊತ್ತೊಯ್ದು ಚಿರತೆಯೊಂದು ತಿಂದು ಹಾಕುತ್ತಿದೆ. ಈ ಘಟನೆಗಳು ಮಿತಿಮೀರಿ ನಡೆಯುತ್ತಿರುವುದರಿಂದ ಕಾರ್ಮಿಕರು ಜೀವ ಭಯಪಟ್ಟು ಕಾಫಿ ತೋಟದ ಕೆಲಸಕ್ಕೆ ಬರುತ್ತಿಲ್ಲ. 

    ಹಾಸನ ಜಿಲ್ಲೆ, ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಲಿಂಗರಾಜು ಅವರಿಗೆ ಸೇರಿದ ಹಸು ಮೇಯುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ, ಹೊತ್ತೊಯ್ದು ತಿಂದು ಹಾಕಿದೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಾಯಿ, ಕರು, ಹಸುಗಳನ್ನು ಹೊಯ್ಯೊಯ್ದು ತಿಂದು ಹಾಕುತ್ತಿದೆ ಎಂದು ಜನರು ಆತಂಕ ವ್ತಕ್ತಪಡಿಸುತ್ತಿದೆ. ಈ ಹಿನ್ನೆಲೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಂದೇ ಸಿರಿಂಜ್‍ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್ 

    ಅಡಿಬೈಲು ಗ್ರಾಮದ ಸುತ್ತಮುತ್ತ ಹಗಲು ವೇಳೆಯಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿರತೆ ದಾಳಿ ಮಾಡುವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬಾರದಂತಾಗಿದೆ. ಇದರಿಂದ ಕಾಫಿ ತೋಟದ ಮಾಲೀಕರಿಗೆ ತೀವ್ರ ತೊಂದರೆಯುಂಟಾಗಿದೆ.

    ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದು, ಶೀಘ್ರವೇ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಂಪನಿಯಲ್ಲಿ ದುರಂತ- 8 ಕಾರ್ಮಿಕರಿಗೆ ಗಾಯ

    ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಂಪನಿಯಲ್ಲಿ ದುರಂತ- 8 ಕಾರ್ಮಿಕರಿಗೆ ಗಾಯ

    ಹುಬ್ಬಳ್ಳಿ: ತಾರಿಹಾಳದಲ್ಲಿರುವ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಂಪನಿಯಲ್ಲಿ ಭಾರೀ ದುರಂತ ಸಂಭವಿಸಿದೆ.

    ಹುಟ್ಟುಹಬ್ಬಕ್ಕೆ ಬಳಸುವ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಭಾರೀ ಸ್ಫೋಟ ಉಂಟಾಗಿ 8 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚನ್ನವ್ವ (42), ಪ್ರೇಮಾ (20), ಮಾಳೇಶ (27), ನನ್ನಿಮಾ (35), ವಿಜಯಲಕ್ಷ್ಮಿ (34), ಮಲ್ಲಿಕರೆಹಾನ (18), ನಿರ್ಮಲಾ (29) ಹಾಗೂ ಗೌರವ (45) ಗಾಯಗೊಂಡವರು. ಇವರನ್ನೆಲ್ಲ ಕಿಮ್ಸ್‍ಗೆ ದಾಖಲಿಸಲಾಗಿದೆ.

    ಕಾರ್ಯಾಚರಣೆಯ ವೇಳೆಯಲ್ಲೂ ಸ್ಪಾರ್ಕ್ ಲಿಂಕ್ ಘಟಕ ಮತ್ತೆ ಸ್ಫೋಟ ಸಂಭವಿಸಿದ್ದು, ಇದು ಜನರಲ್ಲಿ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರ ಹರಸಾಹ ಪಟ್ಟರು. 15 ದಿನಗಳ ಹಿಂದಷ್ಟೇ ಕಾರ್ಖಾನೆ ಶುರುವಾಗಿತ್ತು. ಅಗ್ನಿಶಾಮಕ ಪಡೆಯಿಂದ ಅನುಮತಿ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.

    ಈ ಬಗ್ಗೆ ಪೊಲೀಸ್ ಕಮಿಷನರ್ ಲಾಭೂರಾಮ್ ಮಾಧ್ಯಮಗಳ ಜೊತೆ ಮಾತನಾಡಿ, 8 ಮಂದಿ ಗಾಯಾಳುಗಳನ್ನು ಕಿಮ್ಸ್ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳ ಬೆಂಕಿ ಹತೋಟಿಗೆ ತಂದಿದೆ. ಫ್ಯಾಕ್ಟರಿ ಮಾಲೀಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು. ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದವ ಶವವಾಗಿ ಪತ್ತೆ – ತಕ್ಷಣವೇ ಐದು ಲಕ್ಷ ರೂ. ಪರಿಹಾರ ವಿತರಣೆ

    ಅವಘಡ ಸ್ಥಳಕ್ಕೆ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ್ ಬೆಲ್ಲದ ಭೇಟಿ ನೀಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ಘಟನೆ ನಡೆಬಾರದಿತ್ತು ನಡೆದಿದೆ. ಈ ಫ್ಯಾಕ್ಟರಿ ಕೇವಲ 15 ದಿನದಿಷ್ಟೆ ಆರಂಭವಾಗಿದೆ. ಈ ಫ್ಯಾಕ್ಟರಿ ಅನಧಿಕೃತವಾಗಿದೆ ಯಾರು ತಿಳಿಯದೆ ಆರಂಭ ಮಾಡಲಾಗಿದೆ. ಘಟನೆಯಿಂದ ಫ್ಯಾಕ್ಟರಿ ಮಾಲೀಕ ತಬ್ಸಿಮ್ ಶೇಕ್ ಹೆದರಿ ತಲೆ ಮೆರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]