Tag: workers

  • ಸ್ವಗ್ರಾಮಗಳಿಗೆ ತೆರಳಲು ಅವಕಾಶ ನಿರಾಕರಣೆ- ಪೊಲೀಸರು, ಕಾರ್ಮಿಕರ ನಡ್ವೆ ಸಂಘರ್ಷ

    ಸ್ವಗ್ರಾಮಗಳಿಗೆ ತೆರಳಲು ಅವಕಾಶ ನಿರಾಕರಣೆ- ಪೊಲೀಸರು, ಕಾರ್ಮಿಕರ ನಡ್ವೆ ಸಂಘರ್ಷ

    ಗಾಂಧಿನಗರ: ಸ್ವಗ್ರಾಮಗಳಿಗೆ ಮರುಳುತ್ತಿದ್ದವರನ್ನ ತಡೆದ ಪೊಲೀಸರ ಮೇಲೆ ಪ್ರವಾಸಿ ಕಾರ್ಮಿಕರು ಕಲ್ಲು ತೋರಿ, ಹಲ್ಲೆ ನಡೆಸಿರುವ ಘಟನೆ ಅಹಮದಾಬಾದ್ ನ ವಸ್ತ್ರಪುರ ರಸ್ತೆಯಲ್ಲಿ ನಡೆದಿದೆ.

    ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಗುಜರಾತ್‍ನ ಅಹಮದಾಬಾದಿನಿಂದ ನೂರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳತ್ತ ನಡೆದು ಹೊರಟಿದ್ದರು. ಈ ವೇಳೆ ಸ್ವಗ್ರಾಮಗಳಿಗೆ ತೆರಳದಂತೆ ಪೊಲೀಸರು ಕಾರ್ಮಿಕರನ್ನು ತಡೆದಿದ್ದಾರೆ. ಆಗ ಪೊಲೀಸರ ನಡೆಗೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದು, ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದೆ.

    ಈ ವೇಳೆ ಪ್ರವಾಸಿ ಕಾರ್ಮಿಕರನ್ನು ತಡೆಯಲು ಪೊಲೀಸರು ಟಯರ್ ಗ್ಯಾಸ್ ಸಿಡಿಸಿದ್ದರು. ಇದರಿಂದ ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಕಾರ್ಮಿಕರು ಪೊಲೀಸರ ಮೇಲೆ ಕಲ್ಲುಗಳನ್ನು ತೋರಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಕ್ಕೆ ಬಂದಿದ್ದು, ಕೆಲವು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

  • ಕಾರ್ಮಿಕರ ವಿಚಾರದಲ್ಲಿ ಕೇಂದ್ರದ ಜೊತೆ ರಾಜ್ಯ ಸಮನ್ವಯತೆ ಸಾಧಿಸುತ್ತಿಲ್ಲ: ಜಾವೇಡ್ಕರ್

    ಕಾರ್ಮಿಕರ ವಿಚಾರದಲ್ಲಿ ಕೇಂದ್ರದ ಜೊತೆ ರಾಜ್ಯ ಸಮನ್ವಯತೆ ಸಾಧಿಸುತ್ತಿಲ್ಲ: ಜಾವೇಡ್ಕರ್

    ನವದೆಹಲಿ: ಲಾಕ್‍ಡೌನ್ ನಡುವೆ ಪ್ರವಾಸಿ ಕಾರ್ಮಿಕರ ಸಂಕಷ್ಟ ಬಗೆಹರಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಆರೋಪಿಸಿದ್ದಾರೆ.

    ಪ್ರವಾಸಿ ಕಾರ್ಮಿಕರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಕಾರ್ಮಿಕರ ನೆರವಿಗೆ ನಿಂತಿದೆ. ಆದರೆ ರಾಜ್ಯ ಸರ್ಕಾರಗಳಿಂದ ಸೂಕ್ತ ಪ್ರತಿಕ್ರಿಯೆ ಬರುತ್ತಿಲ್ಲ ಎಂದಿದ್ದಾರೆ.

    ಪಶ್ಚಿಮ ಬಂಗಾಳಕ್ಕೆ ನಾವು 105 ರೈಲುಗಳನ್ನು ಬಿಡಲು ಸಿದ್ಧವಿದ್ದೇವೆ. ಆದರೆ ಮಮತಾ ಬ್ಯಾನರ್ಜಿಯವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಮಹಾರಾಷ್ಟ್ರ, ಜಾರ್ಖಂಡ್, ಪಂಜಾಬ್, ಛತ್ತೀಸ್‍ಗಢನಂತಹ ರಾಜ್ಯಗಳು ಕೂಡ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಜಾವೇಡ್ಕರ್ ಆರೋಪಿಸಿದ್ದಾರೆ.

    ಕಾಂಗ್ರೆಸ್ ಅಧಿಕಾರದಲ್ಲಿಲ್ಲ ಎನ್ನುವ ದುಃಖವಿದೆ. ಅದು ಮೋದಿ ಸರ್ಕಾರವನ್ನು ನಂಬುವುದಿಲ್ಲ, ಹೀಗಾಗಿ ಆರೋಪ ಮಾಡುತ್ತಾರೆ. ಪರಿಹಾರ ಕಾರ್ಯಗಳು ರಾಜ್ಯ ಸರ್ಕಾರದ ನೆಲಗಳ ಮೇಲೆ ಮಾಡಬೇಕಾದ ಕಾರಣ ಹೆಚ್ಚು ಕೇಂದ್ರ ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತವಾಗಿರುತ್ತದೆ ಇಲ್ಲಿ ಸಮನ್ವಯ ಮುಖ್ಯ ಎಂದರು.

    ಜನರು ಈಗ ವೈರಸ್‍ನೊಂದಿಗೆ ಬದುಕಲು ಪ್ರಾರಂಭಿಸಬೇಕು. ಅವರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರ್ಥಿಕ ಚಟುವಟಿಕೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿ ಎಂದು ನಾನು ಆಶಿಸುತ್ತೇನೆ. ಕೆಂಪು ವಲಯಗಳಲ್ಲಿ ಕೆಲವು ನಿರ್ಬಂಧಗಳಿವೆ. ಆದರೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿವೆ. ಆತ್ಮನಿರ್ಭಾರ ಭಾರತ್ ಮಹಾತ್ಮ ಗಾಂಧಿಯವರ ವಿಚಾರಗಳಿಗೆ ಅನುಗುಣವಾಗಿದೆ. ಆದರೆ ಸ್ವಾವಲಂಬಿಗಳಾಗುವುದಿಲ್ಲ, ಪ್ರಪಂಚದೊಂದಿಗೆ ಸಂಬಂಧವನ್ನು ಕಡಿತಗೊಳಿಸುವುದು ಎಂದರ್ಥವಲ್ಲ ಎಂದು ಹೇಳಿದರು.

  • ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಕಾಲ್ನಡಿಗೆಯಲ್ಲಿ ತೆರಳ್ತಿದ್ದವರಿಗೆ ಆಹಾರದ ಜೊತೆ ಪಾದರಕ್ಷೆ ನೀಡಿದ ಪೊಲೀಸರು

    ಜೈಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ನಂತರ ಅನೇಕ ಪ್ರವಾಸಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ನಡೆದುಕೊಂಡೇ ತಮ್ಮ ತಮ್ಮ ಗ್ರಾಮಗಳಿಗೆ ತಲುಪುತ್ತಿದ್ದಾರೆ. ಇದೀಗ ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ರಾಜಸ್ಥಾನ ಪೊಲೀಸರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕಾಲ್ನಡಿಗೆ ಮೂಲಕ ಹೋಗುವ ಕಾರ್ಮಿಕರಿಗೆ ಅನೇಕರು ಊಟ, ನೀರಿನ ಸಹಾಯ ಮಾಡಿದ್ದಾರೆ. ಇದೀಗ ರಾಜಸ್ಥಾನ ಪೊಲೀಸರ ತಂಡವೊಂದು ಕಾರ್ಮಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲಿಗಳ ಪ್ಯಾಕೆಟ್‍ಗಳನ್ನು ನೀಡಿದ್ದಾರೆ. ಜೊತೆಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಚಪ್ಪಲಿಯನ್ನು ಪೂರೈಕೆ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದ ಉದ್ಯೋಗ ಮತ್ತು ಹಣವಿಲ್ಲದ ಕಾರಣ ಸಾವಿರಾರು ಪ್ರವಾಸಿ ಕಾರ್ಮಿಕರು ಜೈಪುರ-ಆಗ್ರಾ ಹೆದ್ದಾರಿ ಮೂಲಕ ತಮ್ಮ ರಾಜ್ಯಗಳಿಗೆ ಮರಳುತ್ತಿದ್ದರು. ಅದರಲ್ಲೂ ಇಂತಹ ಬಿಸಿಲಿನಲ್ಲಿ ಕಾರ್ಮಿಕರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.

    ಈ ವೇಳೆ ಪೊಲೀಸರ ಗುಂಪೊಂದು ಹೆದ್ದಾರಿಯಲ್ಲಿ ನಿಂತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಹೊಸ ಚಪ್ಪಲಿಗಳನ್ನು ಒದಗಿಸಿದೆ. ಪೊಲೀಸ್ ತಂಡದ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಉದ್ಯೋಗ ಖಾತ್ರಿ ಕೂಲಿಕಾರರ ಟಂಟಂ ಪಲ್ಟಿ- 30 ಜನರಿಗೆ ಗಾಯ

    ಉದ್ಯೋಗ ಖಾತ್ರಿ ಕೂಲಿಕಾರರ ಟಂಟಂ ಪಲ್ಟಿ- 30 ಜನರಿಗೆ ಗಾಯ

    ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಗಣದಿನ್ನಿಯಲ್ಲಿ ಟಂಟಂ ಆಟೋ ಪಲ್ಟಿಯಾಗಿ 30 ಜನ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.

    ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಣದಿನ್ನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮುಗಿಸಿ ಮರಳುವಾಗi ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ ಹೊಡೆದಿದೆ. ಅಗತ್ಯಕ್ಕಿಂತ ಹೆಚ್ಚು ಜನರನ್ನ ಟಂಟಂ ನಲ್ಲಿ ತುಂಬಿಕೊಂಡು ಬರಲಾಗುತ್ತಿತ್ತು. ಸಾಮಾಜಿಕ ಅಂತರವನ್ನೇ ಮರೆತು ಕೆಲಸಕ್ಕೆ ಕರೆದೊಯ್ಯಲಾಗಿತ್ತು.

    ಕೆಲಸ ಮುಗಿಸಿ ಗ್ರಾಮಕ್ಕೆ ಮರಳುವಾಗ ಟಂಟಂ ಪಲ್ಟಿಯಾಗಿದೆ. ಗಾಯಾಳುಗಳನ್ನ ಸಿರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ರಾಯಚೂರಿನ ರಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಐದು ಜನರನ್ನ ಮಾತ್ರ ಬಳ್ಳಾರಿಗೆ ರವಾನಿಸಲಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

  • ತನ್ನೂರು ಸೇರಲು ಹಾತೊರೆಯುತ್ತಿರುವ ಗರ್ಭಿಣಿ – ಬಿಹಾರದ ಕಾರ್ಮಿಕರಿಗೆ ರಾಯಚೂರಿನಿಂದ ಬಸ್ ವ್ಯವಸ್ಥೆ

    ತನ್ನೂರು ಸೇರಲು ಹಾತೊರೆಯುತ್ತಿರುವ ಗರ್ಭಿಣಿ – ಬಿಹಾರದ ಕಾರ್ಮಿಕರಿಗೆ ರಾಯಚೂರಿನಿಂದ ಬಸ್ ವ್ಯವಸ್ಥೆ

    – ಕಲಬುರಗಿಯಿಂದ ಕರೆದೊಯ್ಯಲು ಶ್ರಮಿಕ್ ರೈಲು ಸಿದ್ಧ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ರಾಯಚೂರಿನಲ್ಲಿಯೇ ಉಳಿದಿದ್ದ ಬಿಹಾರ ಮೂಲದ ಕಾರ್ಮಿಕರನ್ನ ಅವರ ಊರುಗಳಿಗೆ ಕಳುಹಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.

    ಕೇಂದ್ರ ಸರ್ಕಾರ ಶ್ರಮಿಕ್ ರೈಲು ವ್ಯವಸ್ಥೆ ಮಾಡಿರುವ ಹಿನ್ನೆಲೆ ರಾಯಚೂರಿನಿಂದ ಕಲಬುರಗಿಗೆ ಬಸ್ ಮೂಲಕ ಕಾರ್ಮಿಕರು ಹೊರಡಲಿದ್ದಾರೆ. ಕಲಬುರಗಿಯಿಂದ ಬಿಹಾರಕ್ಕೆ ರೈಲಿನ ವ್ಯವಸ್ಥೆಯಾಗಿದ್ದು, ಇನ್ನೂ ಸಮಯ ನಿಗದಿಯಾಗಿಲ್ಲ. ಹೀಗಾಗಿ ಅದಕ್ಕೂ ಮುನ್ನ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಕಲಬುರಗಿ ತಲುಪಲು ಬಸ್ ವ್ಯವಸ್ಥೆ ಮಾಡಲಾಗಿದೆ.

    ಬಸ್ ಹಾಗೂ ರೈಲಿನ ಎಲ್ಲಾ ಖರ್ಚುಗಳನ್ನ ಅವರೇ ಭರಿಸಬೇಕಿದೆ. ರಾಯಚೂರಿನಲ್ಲಿ 273 ಜನ ಬಿಹಾರಿಗಳಿದ್ದು, ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನ ಕ್ವಾರಂಟೈನ್ ಮಾಡಿ ಉಳಿದವರನ್ನ ಬಿಹಾರಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ.

    ವಿವಿಧ ವ್ಯಾಪಾರ ಹಾಗೂ ಕೂಲಿ ಕೆಲಸಕ್ಕಾಗಿ ಬಂದ ಬಿಹಾರಿಗಳು ಲಾಕ್‍ಡೌನ್ ಹಿನ್ನೆಲೆ ಕರ್ನಾಟಕದಲ್ಲೇ ಉಳಿದಿದ್ದರು. ಬಿಹಾರಕ್ಕೆ ತೆರಳುತ್ತಿರುವವರಲ್ಲಿ ಎಲ್ಲಾ ವಯಸ್ಸಿನವರಿದ್ದು, ಗರ್ಭಿಣಿಯರು ಇದ್ದಾರೆ. ಹೀಗಾಗಿ ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ.

  • ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದ 600ಕ್ಕೂ ಹೆಚ್ಚು ಬಿಹಾರಿ ಕಾರ್ಮಿಕರು

    ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದ 600ಕ್ಕೂ ಹೆಚ್ಚು ಬಿಹಾರಿ ಕಾರ್ಮಿಕರು

    – ಸಾಮಾಜಿಕ ಅಂತರ ಇಲ್ಲವೇ ಇಲ್ಲ

    ಬೆಂಗಳೂರು: ತಮ್ಮ ತವರು ರಾಜ್ಯಕ್ಕೆ ಹೋಗಲು ಬಿಹಾರಿ ಕೂಲಿ ಕಾರ್ಮಿಕರು ಬೆಂಗಳೂರಿನ ಸ್ಯಾಟ್‍ಲೈಟ್ ಬಸ್ ನಿಲ್ದಾಣ ಬಳಿ ನೂರಾರು ಜನ ಜಮಾಯಿಸಿದ್ದಾರೆ.

    ಪೊಲೀಸರು ಸುಮಾರು 150 ಜನರಿಗೆ ಮಾತ್ರ ಆನ್‍ಲೈನ್‍ನಲ್ಲಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟು, ತಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಲು ನಿರ್ಧರಿಸಿದ್ದರು. ಆದರೆ ಏಕಾಏಕಿ 600ಕ್ಕೂ ಹೆಚ್ಚು ಜನ ಯಾವುದೇ ಸಾಮಾಜಿಕ ಅಂತರವಿಲ್ಲದೇ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಜಮಾಯಿಸಿದ್ದಾರೆ.

    ಆನ್‍ಲೈನ್‍ನಲ್ಲಿ ಟಿಕೆಟ್ ನೊಂದಾಯಿಸಿಕೊಳ್ಳಲು ಬಿಹಾರಿ ಕಾರ್ಮಿಕರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಕುಳಿತಿದ್ದಾರೆ. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದ ಕಾರಣ ಸಾಮಾಜಿಕ ಅಂತರ ಕಾಪಾಡದಕ್ಕೆ ಪೊಲೀಸರು ಲಾಠಿ ಬೀಸಿದ್ದಾರೆ. ಇದಕ್ಕೂ ಬಿಹಾರಿ ಕಾರ್ಮಿಕರು ಬಗ್ಗಲಿಲ್ಲ. ನಂತರ ಕೆಎಸ್‌ಆರ್‌ಪಿ ವಾಹನ ಮೂಲಕ ಹೆಚ್ಚುವರಿ ಪೊಲೀಸರನ್ನ ಸ್ಥಳಕ್ಕೆ ಕರಿಸಿಕೊಳ್ಳಲಾಗಿದೆ.

    ಈ ವೇಳೆ ಗುಂಪು ಗುಂಪಾಗಿ ಇದ್ದವರನ್ನು ಪೊಲೀಸರು ಚದುರಿಸಿದರು. ಆದರೆ ರಸ್ತೆಯ ಡಿವೈಡರ್ ಜಂಪ್ ಮಾಡಿ ಮತ್ತೆ ರಸ್ತೆ ಪಕ್ಕದಲ್ಲೇ ನಿಂತುಕೊಂಡು ಉದ್ಧಟತನ ಪ್ರದರ್ಶಿಸಿದ್ದಾರೆ.

     

  • ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ರಾಯಚೂರು: ನಗರದ ಹತ್ತಿ ಮಿಲ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶದ ಕಾರ್ಮಿಕರು ಲಾಕ್‍ಡೌನ್ ಹಿನ್ನೆಲೆ ನಡೆದುಕೊಂಡೇ ತಮ್ಮ ಊರುಗಳಿಗೆ ಹೊರಟಿದ್ದಾರೆ.

    ಲಾಕ್‍ಡೌನ್ ನಿಂದ ಕಂಗಾಲಾದ ಸುಮಾರು 70 ಜನ ಕಾರ್ಮಿಕರು ಕೆಲಸವಿಲ್ಲದೆ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾರೆ. ಕುಟುಂಬ ಸಮೇತ ಗಂಟುಮೂಟೆ ಕಟ್ಟಿಕೊಂಡು ರಾಯಚೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ. ಮಕ್ಕಳು, ಮಹಿಳೆಯರು, ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೊರಟಿದ್ದಾರೆ.

    ಸರ್ಕಾರ ಸೇವಾಸಿಂಧು ವೈಬ್‍ಸೈಟ್ ಆರಂಭಿಸಿದ್ದರೂ ಇವರಿಗೆ ಅನುಕೂಲವಾಗಿಲ್ಲ. ಸಮಪರ್ಕ ಮಾಹಿತಿ ಇಲ್ಲದೆ ಕಂಗಾಲಾಗಿ ನಡೆದುಕೊಂಡೇ ಸ್ವಗಾಮಕ್ಕೆ ಹೊರಟಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಕೆಲಸವಿಲ್ಲದ ಕಾರಣಕ್ಕೆ ಊಟಕ್ಕೂ ತೊಂದರೆಯಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ನಡೆದುಕೊಂಡೇ ಹೊರಟಿರುವುದರಿಂದ ಸದ್ಯ ರಾಯಚೂರು ಜಿಲ್ಲಾಡಳಿತ ಕಾರ್ಮಿಕರನ್ನು ತಡೆದಿದೆ.

    ಸದ್ಯ ಊಟದ ವ್ಯವಸ್ಥೆ ಮಾಡಿದ್ದು, ಊರಿಗೆ ತೆರಳಲು ಅನುಕೂಲ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಕಾರ್ಮಿಕರು ರಾಯಚೂರಿನ ಚಿಕ್ಕಸುಗೂರು ಬಳಿ ಉಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ವ್ಯವಸ್ಥೆ ಮಾಡದಿದ್ದರೆ ನಡೆದುಕೊಂಡೇ ಹೋಗಲು ಕಾರ್ಮಿಕರು ನಿರ್ಧರಿಸಿದ್ದಾರೆ.

  • ಕ್ವಾರಂಟೈನ್‍ನಲ್ಲಿರುವವರಿಗೆ ಊಟದ ಕೊರತೆ: ಹೊರಗೆ ಓಡಾಡುತ್ತಿರುವ ಕಾರ್ಮಿಕರು

    ಕ್ವಾರಂಟೈನ್‍ನಲ್ಲಿರುವವರಿಗೆ ಊಟದ ಕೊರತೆ: ಹೊರಗೆ ಓಡಾಡುತ್ತಿರುವ ಕಾರ್ಮಿಕರು

    ರಾಯಚೂರು: ಜಿಲ್ಲೆಯಲ್ಲಿ ವಿವಿಧೆಡೆ ಕ್ವಾರಂಟೈನ್ ಮಾಡಿರುವ ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಹೀಗಾಗಿ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದಾರೆ.

    ರಾಯಚೂರಿನ ಬೋಳಮಾನದೊಡ್ಡಿ ರಸ್ತೆಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ವಿವಿಧೆಡೆಯಿಂದ ಬಂದಿರುವ ಕೂಲಿ ಕಾರ್ಮಿಕರನ್ನು ಇರಿಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಮೂಲಭೂತ ಕೊರತೆ ಹಿನ್ನೆಲೆ ಕಾರ್ಮಿಕರು ಹೊರಗೆ ಬರುತ್ತಿದ್ದು, ಸುತ್ತಮುತ್ತಲ ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.

    ಕ್ವಾರಂಟೈನ್ ಕೇಂದ್ರದ ಅಕ್ಕ ಪಕ್ಕದ ಅಂಗಡಿಗಳಲ್ಲಿ ಸಾಬೂನು, ಬಿಸ್ಕೆಟ್, ನೀರಿನ ಬಾಟಲ್ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲು ಕೂಲಿ ಕಾರ್ಮಿಕರು ಹೊರಗಡೆ ಬರುತ್ತಿದ್ದಾರೆ. ಮೂರು ದಿನಗಳಿಂದ ಇಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರು ಸಿಕ್ಕಸಿಕ್ಕಲ್ಲೆಲ್ಲಾ ಓಡಾಡುತ್ತಿದ್ದಾರೆ. ಕ್ವಾರಂಟೈನ್ ಇದ್ದವರು ಹೊರಗಡೆ ತಿರುಗಾಡುತ್ತಿರುವ ಹಿನ್ನೆಲೆ ಬಡಾವಣೆ ನಾಗರಿಕರಲ್ಲಿ ಆತಂಕ ಹೆಚ್ಚಾಗಿದ್ದು, ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕ್ವಾರಂಟೈನ್ ನಲ್ಲಿದ್ದವರು ಹೊರಗೆ ಬಾರದಂತೆ ನಿಗಾ ವಹಿಸಬೇಕೆಂದು ಆಗ್ರಹಿಸಿದ್ದಾರೆ.

    ಲಿಂಗಸುಗೂರಿನ ದೇವರಭೂಪುರ ಗ್ರಾಮದಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಊಟ ನೀರು ಕೊಡದೆ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಇಲ್ಲಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 23 ಜನರನ್ನ ನಿನ್ನೆ ರಾತ್ರಿಯಿಂದ ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದ ಪೂನಾದಿಂದ ಬಂದಿರುವ 23 ಜನರಿದ್ದು ಅವರಲ್ಲಿ 13 ಮಕ್ಕಳಿದ್ದಾರೆ. ರಾತ್ರಿ ತಡವಾಗಿದ್ದಕ್ಕೆ ಊಟ ನೀಡಿಲ್ಲ, ಬೆಳಿಗ್ಗೆಯೂ ಊಟ, ನೀರಿಲ್ಲದೆ ಕಾರ್ಮಿಕರು ಪರದಾಡಿದ್ದಾರೆ. ಶಾಲೆ ಬಳಿ ಸುಳಿಯದ ಅಧಿಕಾರಿಗಳು ಗ್ರಾಮಸ್ಥರ ದೂರು ಹಾಗೂ ಆಕ್ರೋಶದ ಬಳಿಕ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾರ್ಮಿಕರೆಲ್ಲ ಲಿಂಗಸುಗೂರು ತಾಲೂಕಿನ ಪರಾಂಪೂರ ತಾಂಡಾ ನಿವಾಸಿಗಳಾಗಿದ್ದಾರೆ.

  • ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    – ನಮ್ಮ ಜಿಲ್ಲೆಯ ಕಾರ್ಮಿಕರಿಗಾಗಿ ಎಲ್ಲ ರೀತಿಯ ಸಹಾಯ ಮಾಡ್ತೇನೆ
    – ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಇದು ಸಕಾಲ

    ಯಾದಗಿರಿ: ಬೇರೆ ರಾಜ್ಯದಿಂದ ಬಂದ ಜನರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

    ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಯಾದಗಿರಿ ಜಿಲ್ಲೆ ಗ್ರೀನ್ ಝೋನ್ ನಲ್ಲಿರುವ ಕಾರಣ ವಿವಿಧ ಜಿಲ್ಲೆಗಳಿಂದ ಮತ್ತು ರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಕಾರ್ಮಿಕರನ್ನು ಕರೆತರಲು ಸಿದ್ಧತೆ ನಡೆಸಾಲಗಿದೆ. ಆದರೆ ಇದಕ್ಕೆ ಜಿಲ್ಲೆಯ ಹಲವು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ಕಾರ್ಮಿಕರಿಗೆ ನಾವು ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ.

    ಕೋವಿಡ್ 19 ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಗೆ ಬಂದಿರುವವರಿಗೆ ಸರ್ಕಾರಿ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಇದರಿಂದ ಭಾವುಕರಾದ ರಾಜೂಗೌಡ, ಕೊರೊನಾ ಯಾರ ಪಾಪದಿಂದ ಬಂದಿದ್ದಲ್ಲ, ಇದರ ವಿರುದ್ಧ ಎಲ್ಲರೂ ಹೋರಾಡಬೇಕು. ಜಿಲ್ಲಾಡಳಿತ ನನ್ನ ಮನೆ ಕೇಳಿದರೂ ನಾನು ಬಿಟ್ಟು ಕೊಡಲು ಸಿದ್ಧ ಎಂದಿದ್ದಾರೆ.

    ಮದ್ಯಪಾನ ನಿಷೇಧಿಸುವಂತೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯ ಮಾರಾಟ ನಿಷೇಧ ಮಾಡಲು ಇದು ಸೂಕ್ತ ಸಮಯ, ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಕುಡುಕರು ಮದ್ಯ ವ್ಯಸನದಿಂದ ದೂರವಾಗಿದ್ದಾರೆ. ಇದನ್ನು ಅರಿತು ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದರು.

  • ಗೋವಾದಿಂದ ಬಂದಿಳಿದ 200ಕ್ಕೂ ಅಧಿಕ ಕೂಲಿ ಕಾರ್ಮಿಕರು

    ಗೋವಾದಿಂದ ಬಂದಿಳಿದ 200ಕ್ಕೂ ಅಧಿಕ ಕೂಲಿ ಕಾರ್ಮಿಕರು

    ಗದಗ: ಗೋವಾ ರಾಜ್ಯಕ್ಕೆ ದುಡಿಯಲು ಹೋಗಿದ್ದ ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಕೂಲಿ ಕಾರ್ಮಿಕರು ಮತ್ತೆ ತಾಯಿನಾಡಿಗೆ ವಾಪಸ್ ಬಂದಿದ್ದಾರೆ.

    ಜಿಲ್ಲೆಯ ನಾಗಾವಿತಾಂಡ, ಬೆಳಧಡಿ, ಅಡವಿಸೋಮಾಪುರ ತಾಂಡ, ಕಳಸಾಪೂರ ತಾಂಡ ಸೇರಿದಂತೆ ಅನೇಕ ಗ್ರಾಮಗಳ ಜನರು ಗೋವಾ ರಾಜ್ಯಕ್ಕೆ ವಲಸೆ ಹೋಗಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಇವರಿಗೆಲ್ಲಾ ಸ್ವ ಗ್ರಾಮಗಳಿಗೆ ಬರಲು ಸಾಧ್ಯವಾಗಿರಲಿಲ್ಲ. ಸದ್ಯ ಲಾಕ್‍ಡೌನ್ ಸಡಿಲಿಕೆ ನಂತರ ಗೋವಾ ಸರ್ಕಾರ ಇವರ ಮನವಿಗೆ ಸ್ಪಂದಿಸಿ ಕದಂಬ ಬಸ್ ಮೂಲಕ ಗದುಗಿಗೆ ಕಳುಹಿಸಿದ್ದಾರೆ.

    ಇಂದು ಗೋವಾ ರಾಜ್ಯದಿಂದ ಬಂದ 200ಕ್ಕೂ ಅಧಿಕ ಕಾರ್ಮಿಕರಿಗೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಲಾಯಿತು. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡ ನಂತರ ಅವರ ಊರುಗಳಿಗೆ ತಲುಪಿಸಿದರು.

    14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು. ಯಾರೂ ಅನಾವಶ್ಯಕವಾಗಿ ಹೊರಬರಬಾರದು, ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರಿಗೆ ತಿಳುವಳಿಕೆ ನೀಡಿದರು.