Tag: workers

  • ಅಡಿಕೆ ಶೆಡ್ ನಿರ್ಮಾಣ ಮಾಡ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ – ಮೂವರು ದುರ್ಮರಣ

    ಅಡಿಕೆ ಶೆಡ್ ನಿರ್ಮಾಣ ಮಾಡ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ – ಮೂವರು ದುರ್ಮರಣ

    ಚಿತ್ರದುರ್ಗ: ಕಬ್ಬಿಣದ ಕಂಬ ನೆಡುವ ವೇಳೆ ವಿದ್ಯುತ್ ತಂತಿಗೆ ತಗುಲಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Holalkere) ತಾಲೂಕಿನ ಕಾಳಘಟ್ಟ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮದ ಶ್ರೀನಿವಾಸ್ ಎಂಬವರ ತೋಟದಲ್ಲಿ ಅಡಿಕೆ ಶೆಡ್ ನಿರ್ಮಾಣ ವೇಳೆ ಘಟನೆ ನಡೆದಿದೆ. ಶೆಡ್ ನಿರ್ಮಾಣ ಮಾಡಲು ಆಗಮಿಸಿದ್ದ ಗ್ಯಾರೆಹಳ್ಳಿಯ ರೈತ ಶ್ರೀನಿವಾಸ್ (35), ದಾವಣಗೆರೆ ಮೂಲದ ಕಾರ್ಮಿಕ ನಜೀರ್ (30), ಫಾರುಕ್ (30) ಮೃತ ಕಾರ್ಮಿಕರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಹೆಚ್ಚಾದ ತಲಾದಾಯ – ಶರಣ್‌ ಪ್ರಕಾಶ್ ಪಾಟೀಲ್

    ವಿದ್ಯುತ್ ಶಾಕ್‌ನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಣ್ಣ ವರ್ತಕರಿಗೆ ರಿಲೀಫ್‌ | 3 ವರ್ಷದ ಬಾಕಿ ತೆರಿಗೆ ವಸೂಲಿ ಮಾಡಲ್ಲ: ಸಿದ್ದರಾಮಯ್ಯ ಘೋಷಣೆ

  • ಇಂದು ʻಭಾರತ್‌ ಬಂದ್‌ʼ – ದೇಶಾದ್ಯಂತ 25 ಕೋಟಿ ಕಾರ್ಮಿಕರಿಂದ ಮುಷ್ಕರ, ಬೆಂಗ್ಳೂರಲ್ಲೂ ಪ್ರತಿಭಟನೆ

    ಇಂದು ʻಭಾರತ್‌ ಬಂದ್‌ʼ – ದೇಶಾದ್ಯಂತ 25 ಕೋಟಿ ಕಾರ್ಮಿಕರಿಂದ ಮುಷ್ಕರ, ಬೆಂಗ್ಳೂರಲ್ಲೂ ಪ್ರತಿಭಟನೆ

    ನವದೆಹಲಿ: ಕೇಂದ್ರದ ಕಾರ್ಮಿಕ-ರೈತ ವಿರೋಧಿ ಕ್ರಮಗಳು ಹಾಗೂ ಕಾರ್ಪೊರೇಟ್ ಪರ ನಿಲುವು ಖಂಡಿಸಿ ಇಂದು (ಬುಧವಾರ) ಭಾರತ್ ಬಂದ್‌ಗೆ (Bharat Bandh) 10ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿವೆ.

    ಬ್ಯಾಂಕಿಂಗ್, ಇನ್ಶುರೆನ್ಸ್, ಪೋಸ್ಟ್, ಗಣಿ, ಹೆದ್ದಾರಿ ಕಾರ್ಮಿಕರು ಸೇರಿದಂತೆ 25 ಕೋಟಿಗೂ ಅಧಿಕ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಬಂದ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಆದರೆ, ರಾಜ್ಯಕ್ಕೆ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಇದೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳು, ಮೆಟ್ರೋ, ಬಸ್ ಸಂಚಾರ, ಖಾಸಗಿ ಕಂಪನಿಗಳು ಇರಲಿವೆ. ಆದರೆ, ಬ್ಯಾಂಕಿಂಗ್ ಸೇವೆಯಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್‌ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್‌ ಏವಿಯೇಷನ್‌ ಸ್ಪಷ್ಟನೆ

    ಕಳೆದ ವರ್ಷ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಿವರವಾದ 17 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ ಎಂದು ಒಕ್ಕೂಟಗಳು ಹೇಳಿವೆ. ಸರ್ಕಾರ ದೇಶದ ಕಲ್ಯಾಣ ರಾಜ್ಯ ಸ್ಥಾನಮಾನವನ್ನು ಕೈಬಿಟ್ಟಿದೆ. ಅದು ವಿದೇಶಿ ಮತ್ತು ಭಾರತೀಯ ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಇದು ತೀವ್ರವಾಗಿ ಅನುಸರಿಸುತ್ತಿರುವ ನೀತಿಗಳಿಂದ ಸ್ಪಷ್ಟವಾಗಿದೆ ಎಂದು ಯೂನಿಯನ್ ಫೋರಂ ಹೇಳಿಕೆಯಲ್ಲಿ ತಿಳಿಸಿದೆ.

    ಕರ್ನಾಟಕದಲ್ಲಿ ಭಾರತ ಬಂದ್ ಎಫೆಕ್ಟ್ ಇಲ್ಲದಿದ್ದರೂ ಉತ್ತರ ಭಾರತದ ಹಲವೆಡೆ ಬಂದ್ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಳೆ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಅಡ್ಡಿ ಎದುರಾಗುತ್ತಾ? – ಕೇಂದ್ರ ನಾಯಕರ ಸಹಕಾರ ಕೇಳಿದ ಡಿಕೆಶಿ

    ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕೆರೆ
    ಇನ್ನೂ ದೇಶವ್ಯಾಪಿ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನಲ್ಲೂ AITUC, CITU, HMS, INTUC, SEWA ಸೇರಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಅದರಂತೆ ಫ್ರೀಡಂ ಪಾರ್ಕ್ ನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಲಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದ ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

    ಬಿಹಾರದಲ್ಲಿ ಆರ್‌ಜೆಡಿ ಕಾರ್ಯಕರ್ತರಿಂದ ರೈಲು ತಡೆ
    ಬಿಹಾರ ಮತ್ತು ಬಂಗಾಳದಲ್ಲಿ ಭಾರತ್‌ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿವೆ. ಆರ್‌ಜೆಡಿ ವಿದ್ಯಾರ್ಥಿ ಸಂಘಟನೆಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಬಂಗಾಳದಲ್ಲಿ ರಸ್ತೆ ತಡೆ, ಅಂಗಡಿ ಮುಂಗಟ್ಟುಗಳನ್ನ ಹಲವೆಡೆ ಬಂದ್‌ ಮಾಡಲಾಗಿದ್ದು, ಸಾರ್ವಜನಿಕ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು `ಮುರ್ಮಾಜೀ’ ಎಂದು ಉಚ್ಛರಿಸಿ ಅಪಮಾನ ಮಾಡಿದ ಖರ್ಗೆ

    ಬೇಡಿಕೆಗಳೇನು?
    * ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು
    * ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ತಿರಸ್ಕರಿಸಬೇಕು
    * ಕನಿಷ್ಠ ವೇತನ ಜಾರಿಗೊಳಿಸಬೇಕು
    * ಕೇಂದ್ರ ತಂದಿರುವ ನಿಯಮದಲ್ಲಿ ಸಂಘ ರಚಿಸುವ ಹಕ್ಕು ಕಸಿದುಕೊಳ್ಳಲಾಗಿದೆ
    * ಇದನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಬೇಕು
    * ಹೊಸ ಸಂಘ ರಚಿಸಲು ಅನುಮತಿ ನೀಡಬೇಕು
    * ಕೆಲಸದ ಅವಧಿಯನ್ನು 12 ಗಂಟೆಯಿಂದ 8ಗಂಟೆಗೆ ಕಡಿತಗೊಳಿಸಬೇಕು
    * ಗುತ್ತಿಗೆ ನೌಕರಿ ರದ್ದುಗೊಳಿಸಿ ಖಾಯಂ ನೌಕರಿ ಜಾರಿಯಾಗಬೇಕು

    ಏನಿರುತ್ತೆ? ಏನಿರಲ್ಲ?
    – ಕೈಗಾರಿಕೆಗಳು ಬಹುತೇಕ ಬಂದ್ .
    – ಕೆಲ ಬ್ಯಾಂಕ್ ಗಳಲ್ಲಿ ಸೇವೆ ವ್ಯತ್ಯಯ
    – ಎಲ್ಲಾ ಬ್ಯಾಂಕ್ ಗಳು ಕ್ಲೋಸ್ ಇರಲ್ಲ.
    – ಬ್ಯಾಂಕ್ ಒಟ್ಟು 8 ಯೂನಿಯನ್ ಇದೆ, ಅದ್ರಲ್ಲಿ 3 ಟ್ರೇಡ್ ಯೂನಿಯನ್ ಬೆಂಬಲ ಇದೆ.
    – ವಿಮೆ ಕಚೇರಿ ಬಂದ್ ಸಾಧ್ಯತೆ.
    – ಬಾಷ್, ಟೊಯೋಟಾ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಬಂದ್.
    – ಪೋಸ್ಟ್ ಆಫೀಸ್ ಇರಲಿದೆ.

  • ನಾಳೆ ಭಾರತ್ ಬಂದ್ – ಏನಿರುತ್ತೆ? ಏನಿರಲ್ಲ?

    ನಾಳೆ ಭಾರತ್ ಬಂದ್ – ಏನಿರುತ್ತೆ? ಏನಿರಲ್ಲ?

    ನವದೆಹಲಿ: ಕೇಂದ್ರದ ಕಾರ್ಮಿಕ-ರೈತ ವಿರೋಧಿ ಕ್ರಮಗಳು ಹಾಗೂ ಕಾರ್ಪೊರೇಟ್ ಪರ ನಿಲುವು ಖಂಡಿಸಿ ನಾಳೆ (ಬುಧವಾರ) ಭಾರತ್ ಬಂದ್‌ಗೆ (Bharat Bandh) 10ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿವೆ.

    ಬ್ಯಾಂಕಿಂಗ್, ಇನ್ಶುರೆನ್ಸ್, ಪೋಸ್ಟ್, ಗಣಿ, ಹೆದ್ದಾರಿ ಕಾರ್ಮಿಕರು ಸೇರಿದಂತೆ 25 ಕೋಟಿಗೂ ಅಧಿಕ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಬಂದ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಆದರೆ, ರಾಜ್ಯಕ್ಕೆ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಇದೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳು, ಮೆಟ್ರೋ, ಬಸ್ ಸಂಚಾರ, ಖಾಸಗಿ ಕಂಪನಿಗಳು ಇರಲಿವೆ. ಆದರೆ, ಬ್ಯಾಂಕಿಂಗ್ ಸೇವೆಯಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ.

    ಕಳೆದ ವರ್ಷ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ವಿವರವಾದ 17 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ ಎಂದು ಒಕ್ಕೂಟಗಳು ಹೇಳುತ್ತವೆ. ಸರ್ಕಾರ ದೇಶದ ಕಲ್ಯಾಣ ರಾಜ್ಯ ಸ್ಥಾನಮಾನವನ್ನು ಕೈಬಿಟ್ಟಿದೆ. ಅದು ವಿದೇಶಿ ಮತ್ತು ಭಾರತೀಯ ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಇದು ತೀವ್ರವಾಗಿ ಅನುಸರಿಸುತ್ತಿರುವ ನೀತಿಗಳಿಂದ ಸ್ಪಷ್ಟವಾಗಿದೆ ಎಂದು ಯೂನಿಯನ್ ಫೋರಂ ಹೇಳಿಕೆಯಲ್ಲಿ ತಿಳಿಸಿದೆ.

    ಕರ್ನಾಟಕದಲ್ಲಿ ಭಾರತ ಬಂದ್ ಎಫೆಕ್ಟ್ ಇಲ್ಲದಿದ್ದರೂ ಉತ್ತರ ಭಾರತದ ಹಲವೆಡೆ ಬಂದ್ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಳೆ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.

    ಏನಿರುತ್ತೆ? ಏನಿರಲ್ಲ?
    – ನಾಳೆ ಕೈಗಾರಿಕೆಗಳು ಬಹುತೇಕ ಬಂದ್ .
    – ಕೆಲ ಬ್ಯಾಂಕ್ ಗಳಲ್ಲಿ ಸೇವೆ ವ್ಯತ್ಯಯ ಆಗಬಹುದು.
    – ಎಲ್ಲಾ ಬ್ಯಾಂಕ್ ಗಳು ಕ್ಲೋಸ್ ಇರಲ್ಲ.
    – ಬ್ಯಾಂಕ್ ಒಟ್ಟು 8 ಯೂನಿಯನ್ ಇದೆ, ಅದ್ರಲ್ಲಿ 3 ಟ್ರೇಡ್ ಯೂನಿಯನ್ ಬೆಂಬಲ ಇದೆ.
    – ವಿಮೆ ಕಚೇರಿ ಬಂದ್ ಸಾಧ್ಯತೆ.
    – ಬಾಷ್, ಟೊಯೋಟಾ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಬಂದ್.
    – ಪೋಸ್ಟ್ ಆಫೀಸ್ ಇರಲಿದೆ.

  • ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

    ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ

    ಹುಬ್ಬಳ್ಳಿ/ಧಾರವಾಡ: ಮಳೆ-ಗಾಳಿಗೆ (Rain) ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹಳೇ ಹುಬ್ಬಳ್ಳಿಯ ಧಾರವಾಡ ಪ್ಲಾಟ್ ನಿವಾಸಿ ದಾವೂದ್ ಸವಣೂರು (52), ನೂರಾಣಿ ಪ್ಲಾಟ್ ನಿವಾಸಿ ರಫಿಕ್‌ಸಾಬ್ ಚನ್ನಾಪುರ (50) ಮೃತ ಕಾರ್ಮಿಕರು. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಮಹಾಂತೇಶ ಚವರಗುಡ್ಡ ಎಂಬವರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ನಿರ್ಮಾಣ ಆಗುತ್ತಿರುವ ಕಟ್ಟಡದ ಗಾರೆ ಕೆಲಸಕ್ಕೆ ಕೂಲಿ ಕಾರ್ಮಿಕರು ತೆರಳಿದ್ದರು. ಮಳೆ, ಗಾಳಿ ಜೋರಾಗಿ ಬೀಸಿದ್ದರಿಂದ ಗೋಡೆಯ ಬಳಿ ನಿಂತಿದ್ದರು. ಗಾಳಿ ರಭಸಕ್ಕೆ ಗೋಡೆ ಕುಸಿದು ಕೆಳಗೆ ಸಿಲುಕಿ ಸಾವು ಸಂಭವಿಸಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ

  • ಕೇವಲ 13 ಗಂಟೆಯಲ್ಲೇ 120 ಟನ್‌ ಕಬ್ಬು ಕಟಾವು ಮಾಡಿ ಲೋಡ್‌ – ಜೈ ಹನುಮಾನ್ ತಂಡಕ್ಕೆ ಜೈ

    ಕೇವಲ 13 ಗಂಟೆಯಲ್ಲೇ 120 ಟನ್‌ ಕಬ್ಬು ಕಟಾವು ಮಾಡಿ ಲೋಡ್‌ – ಜೈ ಹನುಮಾನ್ ತಂಡಕ್ಕೆ ಜೈ

    ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು (Sugarcane) ಬೆಳೆಯ ಕಟಾವು ಕಾರ್ಯ ಜೋರಾಗಿ ಸಾಗುತ್ತಿದ್ದು ಮುಧೋಳದಲ್ಲಿ ಕಬ್ಬು ಕಟಾವು ಮಾಡುವ ಜೈ ಹನುಮಾನ್ ಕಬ್ಬಿನ ತಂಡದ ಕಾರ್ಮಿಕರು (Workers) ವಿಶಿಷ್ಟ ಸಾಹಸ ಮರೆದು ಸುದ್ದಿಯಾಗಿದ್ದಾರೆ.

    ಕೇವಲ 13 ಗಂಟೆಯೊಳಗೆ ಮೂರು ಎಕರೆ ಕಬ್ಬು ಕಟಾವು ಮಾಡಿ, ಅದನ್ನ ಟ್ರ್ಯಾಕ್ಟರ್ ಗೆ ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    ಮುಧೋಳ ತಾಲೂಕಿನ ಹುಣಸಿಗುದ್ದಿ ತೋಟದ ಮನೆಯ ಬಳಿಯ ನಾಗಪ್ಪ ಮಾವಿನಮರ ಎಂಬುವರ ಹೊಲದಲ್ಲಿ ಕಾರ್ಮಿಕರು ಕೇವಲ 13 ಗಂಟೆಯಲ್ಲಿ 120 ಟನ್ ಕಬ್ಬು ಕಡಿದಿದ್ದಾರೆ. ಅಷ್ಟೇ ಅಲ್ಲದೇ ಈ ಅವಧಿಯ ಒಳಗಡೆ ಲೋಡ್‌ ಸಹ ಮಾಡಿದ್ದಾರೆ.

    ಜೈ ಹನುಮಾನ್ ತಂಡದ ಕಾರ್ಮಿಕರ ವಿಶಿಷ್ಟ ಸಾಹಸಕ್ಕೆ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.

     

  • ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

    ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

    – ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ದೇವೇಂದ್ರ ಫಡ್ನವಿಸ್

    ಮುಂಬೈ: ಟೆಂಪೊವೊಂದು (Tempo) ಮಿನಿವ್ಯಾನ್‌ಗೆ (Minivan) ಡಿಕ್ಕಿ ಹೊಡೆದ ಪರಿಣಾಮ ಮಿನಿವ್ಯಾನ್ ರಸ್ತೆಬದಿ ನಿಲ್ಲಿಸಿದ್ದ ಬಸ್‌ಗೆ ಡಿಕ್ಕಿ ಹೊಡೆದು 9 ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.

    ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.ಮಿನಿವ್ಯಾನ್ ನಾರಾಯಣಗಾಂವ್ (Narayangaon)  ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಟೆಂಪೊ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಿನಿವ್ಯಾನ್ ರಸ್ತೆ ಬದಿಯಲ್ಲಿದ್ದ ಖಾಲಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಿನಿವ್ಯಾನ್‌ನಲ್ಲಿದ್ದ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    ಇನ್ನು ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಪುಣೆ-ನಾಸಿಕ್ ಹೆದ್ದಾರಿಯ ನಾರಾಯಣಗಾಂವ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ಸಾವನ್ನಪ್ಪಿದ್ದು ದುರಾದೃಷ್ಟಕರ. ಅವರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಅಲ್ಲದೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: Chhattisgarh| ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟ – ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

  • ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಬೆಳಗಾವಿ: ಅನ್ನ – ನೀರು ನೀಡದೆ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೋಳ ತೊಡಿಸಿ ಹೊಟೇಲ್ ಕಾರ್ಮಿಕರಿಗೆ (labourers)  ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಜೀತ ಪದ್ಧತಿ ಇನ್ನೂ ಜೀವಂತವಿದೆಯೇ ಎಂಬುದಕ್ಕೆ ಈ ವರದಿ ಪುಷ್ಟಿ ನೀಡಿತ್ತು. ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ವರದಿ ಪ್ರಸಾರ ಮಾಡಿದ ಕೆಲವೇ ಸಮಯದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಖಾಸಗಿ ಢಾಬಾಗೆ ಗ್ರಾಮೀಣ ಸಿಪಿಐ ಸಮೀರ ಮುಲ್ಲಾ ಭೇಟಿ ನೀಡಿದ್ದಾರೆ. ತಹಶೀಲ್ದಾರ್‌ ಸಹ ಭೇಟಿ ನೀಡಿದ್ದು, ಢಾಬಾ ಮಾಲಿಕ ಹಾಗೂ ಕೆಲಸಗಾರರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್

    ಹೊಟೇಲ್ ಕೆಲಸಕ್ಕೆ ಉತ್ತರ ಭಾರತದ ಯುವಕರನ್ನು ಕರೆತಂದು ಪುಡಿಗಾಸು ಮುಂಗಡವಾಗಿ ನೀಡಿ ಅವರಿಗೆ ಚಿತ್ರಹಿಂಸೆ ಕೊಟ್ಟು ಕಾಲಿಗೆ ಬೇಡಿ ಹಾಕಿ ಕಬ್ಬಿಣದ ಸರಪಳಿಯಿಂದ ಕಟ್ಟಿ ಥಳಿಸುವ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಚಾಮರಾಜನಗರ| ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಸೌಲಭ್ಯವಿದ್ರೂ ರೋಗಿಗಳ ಪರದಾಟ

    ಮಾಲಿಕನ ಕುಕೃತ್ಯಕ್ಕೆ ರೋಸಿಹೋದ ಹೊಟೇಲ್ ಕೂಲಿ ಕಾರ್ಮಿಕರು ಬಿಡುಗಡೆ ಭಾಗ್ಯ ಯಾವಾಗ ಎಂಬುದನ್ನು ಕಾದು ನೋಡುತ್ತಿದ್ದರು. ಉತ್ತರ ಭಾರತದಿಂದ ಬಂದ ಯುವಕರಿಗೆ ಇಲ್ಲಿಯ ಭಾಷೆ ಬರುವುದಿಲ್ಲ. ಕಾಲಿಗೆ ಕೋಳ ತೊಟ್ಟುಕೊಂಡೇ ರೊಟ್ಟಿ ತಟ್ಟಿ ಜನರ ಹೊಟ್ಟೆ ತುಂಬಿಸುತ್ತಿದ್ದುದ್ದಂತು ವಿಷಾಧನಿಯ.

    ಇದೀಗ ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇಷ್ಟೊಂದು ಕಾಯ್ದೆ ಕಾನೂನುಗಳು ಪ್ರಬಲವಾಗಿದ್ದರೂ ಇಂಥ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೀತ ಪದ್ದತಿ ಸಂಪೂರ್ಣ ಹೊಗಲಾಡಿಸಲು ಕಠಿಣ ಕಾನೂನುಗಳಿದ್ದು ಹೋಟೆಲ್ ಮಾಲಿಕರಿಗೆ ಶಿಕ್ಷೆಯಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ತಿಳಿಸಿದ್ದಾರೆ.

  • ಮಹಾರಾಷ್ಟ್ರದ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ – 16 ಕಾರ್ಮಿಕರಿಗೆ ಗಾಯ

    ಮಹಾರಾಷ್ಟ್ರದ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ – 16 ಕಾರ್ಮಿಕರಿಗೆ ಗಾಯ

    ಮುಂಬೈ: ಸ್ಟೀಲ್ ಕಂಪನಿಯೊಂದರಲ್ಲಿ (Steel Company) ಬೆಂಕಿ ಅವಘಡ ಸಂಭವಿಸಿದ ಪರಿಣಾಮ 16 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಮಹಾರಾಷ್ಟ್ರದ (Maharashtra) ವಾರ್ಧಾ (Wardha) ಜಿಲ್ಲೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಮಾಹಿತಿ ಪಡೆದ ಆಡಳಿತ ಮಂಡಳಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಇದನ್ನೂ ಓದಿ: ಒಳ ಒಪ್ಪಂದದ ರೀತಿ ಲೋಕಾಯುಕ್ತ ಎಸ್ಪಿ ಸಿಎಂ ವಿಚಾರಣೆ ಮಾಡಿದ್ದಾರೆ: ಸ್ನೇಹಮಹಿ ಕೃಷ್ಣ ದೂರು

    ವಾರ್ಧಾ ಜಿಲ್ಲೆಯ ಭುಗಾಂವ್ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 16 ಕಾರ್ಮಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.  ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಾರ್ಧಾ ಜಿಲ್ಲಾಧಿಕಾರಿ ರಾಹುಲ್ ಕಾರ್ಡಿಲೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ

  • ಬಿಎಂಟಿಸಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಜಾರಿ

    ಬಿಎಂಟಿಸಿ ನೌಕರರಿಗೆ 1 ಕೋಟಿ ರೂ. ಅಪಘಾತ ವಿಮೆ ಜಾರಿ

    ಬೆಂಗಳೂರು: ಬಿಎಂಟಿಸಿ (BMTC) ನೌಕರರ (Workers) ಕುಟುಂಬಕ್ಕೆ ಸಾರಿಗೆ ಇಲಾಖೆ (Transportation Department)  ಗುಡ್‌ನ್ಯೂಸ್ ಕೊಟ್ಟಿದೆ. ಇನ್ನುಮುಂದೆ ಕೆಎಸ್‌ಆರ್‌ಟಿಸಿ (KSRTC) ಮಾದರಿಯಲ್ಲೇ ಬಿಎಂಟಿಸಿ  ನೌಕರರಿಗೂ 1 ಕೋಟಿ ರೂ. ಅಪಘಾತ ವಿಮೆ (Accident Insurance) ಸಿಗಲಿದೆ.

    ಇಂದಿನಿಂದಲೇ (ಫೆ.19) ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ನೀಡಲಾಗಿದೆ. ಬಿಎಂಟಿಸಿಯ 28,000 ನೌಕರರ ಕುಟುಂಬಗಳಿಗೆ ಈ ಸೌಲಭ್ಯ ಲಭಿಸಲಿದೆ. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ

    ಈ ಮೊದಲು ಬಿಎಂಟಿಸಿ ನೌಕರರಿಗೆ ಕೇವಲ 3 ಲಕ್ಷ ರೂ. ಪರಿಹಾರವಿತ್ತು. ಇನ್ನುಮುಂದೆ ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿರುವಾಗಲೂ ಸಂಭವಿಸುವ ಅಪಘಾತಕ್ಕೆ 1.15 ಕೋಟಿ ರೂ. ಪರಿಹಾರ ಸಿಗಲಿದೆ. ಅಲ್ಲದೇ ಸಿಬ್ಬಂದಿ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂ. ಪರಿಹಾರ ದೊರೆಯಲಿದೆ. ಇದನ್ನೂ ಓದಿ: ʻಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ – ಬರಹ ಬದಲಾವಣೆ ಸಮರ್ಥಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್‌

  • ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ಬಂಡೆ ಬ್ಲಾಸ್ಟ್ ಮಾಡುವ ವೇಳೆ ಅವಘಡ – ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

    ತುಮಕೂರು: ಬಂಡೆ ಬ್ಲಾಸ್ಟ್ (Rock Blast) ಮಾಡುವ ವೇಳೆ ಅವಘಡವೊಂದು ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು (Workers) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಘಟನೆ ನಡೆದಿದೆ. ಈ ಕ್ರಷರ್ (Crusher) ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬವರಿಗೆ ಸೇರಿದ್ದು, ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕ್ರಷರ್‌ನಲ್ಲಿ ಬಂಡೆಗೆ ಡ್ರಿಲ್ ಮಾಡಲು ಬೆಟ್ಟ ಹತ್ತಿದ ಇಬ್ಬರು ಕಾರ್ಮಿಕರು ಆಯತಪ್ಪಿ ಸುಮಾರು 100 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದು ಜೀವತೆತ್ತಿದ್ದಾರೆ. ಇದನ್ನೂ ಓದಿ: ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್

    ಕ್ರಷರ್ ಮಾಲೀಕನ ಬೇಜವಾಬ್ದಾರಿತನಕ್ಕೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಘಟನೆಯಿಂದ ಗಂಭೀರ ಗಾಯಗೊಂಡ ಮತ್ತೋರ್ವನನ್ನು ಬೆಂಗಳೂರಿನ (Bengaluru) ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ