Tag: Work from Home

  • ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ (Traffic Jam) ಪೊಲೀಸ್ ಇಲಾಖೆ ಹೊಸ ಪ್ಲಾನ್ ಮಾಡಿದೆ. ಬೆಂಗಳೂರು ಟೆಕ್ಕಿಗಳಿಗೆ ಪ್ರತಿ ಬುಧವಾರದಂದು ವರ್ಕ್ ಫ್ರಂ ಹೋಂ (Work From Home) ಮಾಡುವಂತೆ ಐಟಿ ಕಂಪನಿಗಳಿಗೆ (IT Company) ಸಲಹೆ ನೀಡಿದೆ.

    ಐಟಿ ಕಂಪನಿಗಳು ಇರುವ ಪ್ರದೇಶಗಳು, ಅದರ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತ ಆಗುತ್ತಿದೆ ಹೀಗಾಗಿ ಬುಧವಾರ ಒಂದು ದಿನ ವರ್ಕ್‌ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಬೇಕೆಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಕಾರ್ತಿಕ್ ರೆಡ್ಡಿ ಸಲಹೆ ನೀಡಿದ್ದಾರೆ.  ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಸಲಹೆ ಏನು?
    – ಪೀಕ್ ಅವರ್ ಬಿಟ್ಟು ಬೆಳಗ್ಗೆ 7:30 ಅಥವಾ 8 ಗಂಟೆಗೆ ಕಂಪನಿ ಆರಂಭಿಸಬೇಕು. ಇದನ್ನೂ ಓದಿ: ಬ್ರೇಕಪ್‌ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕೇವಲ 2 ಸಾವಿರಕ್ಕಾಗಿ ಬಿತ್ತು ಹೆಣ!
    – ಔಟರ್ ರಿಂಗ್ ರೋಡ್‌ನಲ್ಲಿ ಇರುವ ಕಂಪನಿಗಳ ಸಮಯ ಬದಲಾವಣೆ ಮಾಡಬೇಕು
    – ಪ್ರತಿ ಬುಧವಾರ ವರ್ಕ್ ಫ್ರಂ ಹೋಮ್‌ಗೆ ಸಲಹೆ, ಐಟಿ ಕಂಪನಿಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಿ
    – ಬಿಎಂಟಿಸಿ ಬಸ್‌ಗಳ ಮೂಲಕ ಪಿಕಪ್-ಡ್ರಾಪ್‌ಗೆ ಎಸಿ ಬಸ್ ಕೊಡೋದಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದೆ
    – ಸಾರ್ವಜನಿಕರು ಸ್ವಂತ ವೆಹಿಕಲ್ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ

    ಬುಧವಾರವೇ ಯಾಕೆ?
    ಬುಧವಾರ ವಾರದ ಮಧ್ಯದಲ್ಲಿ ಬರುವ ಕಾರಣ ಸಾಧಾರಣವಾಗಿ ಐಟಿ ಕಂಪನಿಗಳಲ್ಲಿ ಹೆಚ್ಚಾಗಿ ಯಾರೂ ರಜೆ ತೆಗೆದುಕೊಳ್ಳುವುದಿಲ್ಲ. ಸಾಧಾರಣವಾಗಿ ದೀರ್ಘ ರಜೆ ಹಾಕುವವರು ಸೋಮವಾರ, ಮಂಗಳವಾರ ಅಥವಾ ಗುರುವಾರ, ಶುಕ್ರವಾರ ಹಾಕುತ್ತಾರೆ. ಆಗ ಶನಿವಾರ, ಭಾನುವಾರ ಸೇರಿ 4 ದಿನ ಸಿಗುತ್ತದೆ. ಒಂದು ವೇಳೆ ಬುಧವಾರ ವರ್ಕ್‌ ಫ್ರಂ ಕೊಟ್ಟರೆ ಮನೆಯಲ್ಲೇ ಕೆಲಸ ಮಾಡಬಹುದು. ಜೊತೆ ಊರಿಗೆ ಹೋಗಿದ್ದವರು ಅಲ್ಲಿಯೇ ಕೆಲಸ ಮಾಡಬಹುದು. ಇದರಿಂದ ಸ್ವಲ್ಪ ಟ್ರಾಫಿಕ್‌ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

    ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಅಮೆರಿಕನ್ನರ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿರುವ ಟ್ರಂಪ್‌ 80 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅಲ್ಲದೇ ಶ್ವೇತಭವನ ತಲುಪಿದ ಬಳಿಕ ಇನ್ನಷ್ಟು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡ ಟ್ರಂಪ್‌, ವಿಶೇಷ ಅಧಿಕಾರ ಬಳಸಿ 2021ರಲ್ಲಿ ನಡೆದ ವಾಷಿಂಗ್ಟನ್‌ ಗಲಭೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಮಹತ್ವದ ಆದೇಶಗಳಿಗೆ ಸಹಿ ಹಾಕುವ ಮುನ್ನವೇ ಜೋ ಬೈಡನ್‌ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ 80 ವಿನಾಶಕಾರಿ ಕ್ರಮಗಳನ್ನು ಹಿಂಪಡೆಯುವುದಾಗಿ ಟ್ರಂಪ್‌ ಗುಡುಗಿದ್ದಾರೆ. ಇದನ್ನೂ ಓದಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸ್ವೀಕಾರ – ಮೋದಿ ವಿಶ್‌

    ಪ್ರಮುಖ ಆದೇಶಗಳೇನು?
    ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು. ಮೆಕ್ಸಿಕೋ ಗಡಿಗೆ ಸೇನೆ ಕಳುಹಿಸುವುದು ನಮ್ಮ ಆದ್ಯತೆ ಆಗಿದೆ. ಅಲ್ಲದೇ ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ತಡೆಯುವುದು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನ ದೇಶದಿಂದ ಹೊರಹಾಕುವುದು ಆದ್ಯತೆಯಾಗಿದೆ. ಅಲ್ಲದೇ ಅಮೆರಿಕ ಗಡಿಯುದ್ಧಕ್ಕೂ ಸೇನೆ ನಿಯೋಜಿಸಲು ತಕ್ಷಣ ಆದೇಶ ಹೊರಡಿಸುತ್ತೇನೆ ಎಂಬುದಾಗಿಯೂ ಟ್ರಂಪ್‌ ಘೋಷಿಸಿದ್ದಾರೆ.

    ಅಷ್ಟೇ ಅಲ್ಲದೇ ಪಳೆಯುಳಿಕೆ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು, ಪರಿಸರ ನಿಯಮಗಳನ್ನು 2021ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕದನ ವಿರಾಮದ ಮೊದಲ ಹೆಜ್ಜೆ ಯಶಸ್ವಿ: ಹಮಾಸ್‌ನಿಂದ ಮೂವರು ಒತ್ತೆಯಾಳು ಬಿಡುಗಡೆ

    ವರ್ಕ್‌ಫ್ರಮ್‌ ಹೋಮ್‌ ರದ್ದು:
    ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಕೊನೆಗೊಳಿಸುವ ಆದೇಶವನ್ನು ಟ್ರಂಪ್‌ ಮೊದಲು ಪ್ರಕಟಿಸಿದ್ದಾರೆ. ಸರ್ಕಾರದ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಏಜೆನ್ಸಿ ಮುಖ್ಯಸ್ಥರು, ವಿಭಾಗಗಳು ಆದಷ್ಟು ಬೇಗ ವರ್ಕ್‌ ಫ್ರಮ್‌ ಹೋಮ್‌ ನಿಯಮವನ್ನು ಹಿಂತೆಗೆದುಕೊಳ್ಳಬೇಕು. ಅಗತ್ಯಬಿದ್ದಲ್ಲಿ ಆಯಾ ಏಜೆನ್ಸಿ, ಇಲಾಖೆ ಮುಖ್ಯಸ್ಥರು ವಿನಾಯಿತಿ ನೀಡಲಿದ್ದಾರೆ ಎಂದು ಟ್ರಂಪ್‌ ಕಾರ್ಯಾದೇಶದಲ್ಲಿ ತಿಳಿಸಿದ್ದಾರೆ.

    ಟ್ರಂಪ್‌ ಆದೇಶದ ಪ್ರಮುಖ ಅಂಶಗಳು:
    * ವಾಘ್‌ ಸ್ವಾತಂತ್ರ್ಯ ಮರುಸ್ಥಾಪಿಸುವುದು ಮತ್ತು ಫೆಡರಲ್‌ ಸೆನ್ಸಾರ್‌ಶಿಪ್‌ ಕೊನೆಗೊಳಿಸುವುದು
    * ಗಲ್ಫ್‌ ಆಫ್‌ ಮೆಕ್ಸಿಕೊವನ್ನು ಗಲ್ಫ್‌ ಆಫ್‌ ಅಮೆರಿಕ ಎಂದು ಮರುನಾಮಕರಣ ಮಾಡುವುದು
    * ಚೀನಾ ನಿರ್ವಹಣೆ ಮಾಡುತ್ತಿರುವ ಪನಾಮ ಕಾಲುವೆಯನ್ನು ಮರಳಿ ಪಡೆಯುವುದು
    * ಅಮೆರಿಕದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸ್ಥಗಿತಗೊಂಡಿದ್ದ ಟಿಕ್‌ಟಾಕ್‌ ಸೇವೆಯನ್ನು ಮುಂದಿನ 24 ಗಂಟೆಯಲ್ಲಿ ಪ್ರಾರಂಭಿಸುವುದು ಎಂಬಿತ್ಯಾದಿ ಅದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

    ಅಮೆರಿಕದಲ್ಲಿರೋದು ಎರಡೇ ಲಿಂಗ:
    ತೃತೀಯ ಲಿಂಗಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಟ್ರಂಪ್‌, ಇನ್ಮುಂದೆ ಅಮೆರಿಕದಲ್ಲಿ 2 ಲಿಂಗಗಳಷ್ಟೇ ಇರುತ್ತವೆ ಎಂದು ಘೋಷಿಸಿದ್ದಾರೆ. ಅಲ್ಲದೇ ಮಹಿಳೆಯರ ಕ್ರೀಡೆಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ನೀಡುವುದನ್ನು ನಿಷೇಧಿಸುತ್ತೇನೆ ಎಂಬುದಾಗಿಯೂ ಟ್ರಂಪ್‌ ಘೋಷಿಸಿದ್ದಾರೆ.

  • Tumakuru | ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ 14.15 ಲಕ್ಷ ವಂಚನೆ

    Tumakuru | ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ 14.15 ಲಕ್ಷ ವಂಚನೆ

    ತುಮಕೂರು: ವರ್ಕ್ ಫ್ರಮ್ ಹೋಂ (Work From Home) ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಖದೀಮರು 14.15 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಮನೆಯಲ್ಲಿದ್ದು ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ (Sira) ಪಟ್ಟಣದ ಜ್ಯೋತಿ ನಗರದ ಬಿ.ವೀಣಾ ಎಂಬುವರು 14.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!

    ಆರೋಪಿಗಳು ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿ ‘ವರ್ಕ್ ಫ್ರಮ್ ಹೋಂ’ ಬಗ್ಗೆ ವಿವರಿಸಿದ್ದಾರೆ. ನಂತರ ಲಿಂಕ್‌ವೊಂದನ್ನು ಕಳುಹಿಸಿ ಅದರಲ್ಲಿ ಲಾಗಿನ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಇದಾದ ಬಳಿಕ ವೀಣಾ ಮತ್ತು ಅವರ ಪತಿಯ ಬ್ಯಾಂಕ್ ಖಾತೆಯ ವಿವರ ಪಡೆದು, ಪತಿಯ ಖಾತೆಗೆ ಬೋನಸ್ ಎಂದು 800 ರೂ. ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ನಂತರ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದರೆ ಜಾಸ್ತಿ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ವೀಣಾ ನ.11ರಿಂದ 27ರವರೆಗೆ ಹಂತ ಹಂತವಾಗಿ ಒಟ್ಟು 14.15 ಲಕ್ಷ ಹಣ ವರ್ಗಾಯಿಸಿದ್ದಾರೆ. ಹೂಡಿಕೆ ದುಡ್ಡು ವಾಪಸ್ ಕೇಳಿದಾಗ ಇನ್ನೂ 18 ಲಕ್ಷ ರೂ. ಕಟ್ಟಿದರೆ ಮಾತ್ರ ಹಣ ಮರಳಿಸುತ್ತೇವೆ ಎಂದಿದ್ದಾರೆ. ಇದೀಗ ವಂಚನೆಗೊಳಗಾಗಿ ಕಳೆದುಕೊಂಡಿರುವ ಹಣ ವಾಪಸ್ ಕೊಡಿಸುವಂತೆ ವೀಣಾ ಸೈಬರ್ ಠಾಣೆಯ ಮೊರೆ ಹೋಗಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!

  • ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ವಾಷಿಂಗ್ಟನ್: ಫೇಸ್‌ಬುಕ್ (Facebook) ಮಾತೃಸಂಸ್ಥೆ ಮೆಟಾ (Meta) ತನ್ನ ಉದ್ಯೋಗಿಗಳಿಗೆ ಆಫೀಸ್‌ಗೆ (Office) ಮರಳುವಂತೆ ಸೂಚಿಸಿದ್ದು, ಮರಳದೇ ಇದ್ದಲ್ಲಿ ಉದ್ಯೋಗಿಗಳನ್ನು ಕೆಲಸದಿಂದಲೇ ಕಿತ್ತು ಹಾಕುವುದಾಗಿ ಮೆಟಾ ಖಡಕ್ ಎಚ್ಚರಿಕೆಯನ್ನು ನೀಡಿದೆ.

    ಕೋವಿಡ್ ಬಳಿಕ ಮೆಟಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕೊನೆಗೊಳಿಸಿ ಆಫೀಸ್‌ಗೆ ಮರಳುವಂತೆ ತಿಳಿಸಿತ್ತು. ಆದರೆ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ. ಇದೀಗ ರಿಟರ್ನ್ ಟು ಆಫೀಸ್ (RTO) ನೀತಿಯ ಮೇಲೆ ಮೆಟಾ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

    ಈ ಬಗ್ಗೆ ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಲೋರಿ ಗೋಲರ್ ಕಂಪನಿಯಲ್ಲಿ ಆರ್‌ಟಿಒ ಕುರಿತಾಗಿ ಉದ್ಯೋಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ಹೊಸ ನೀತಿಯಂತೆ ಕಂಪನಿಯ ಉದ್ಯೋಗಿಗಳು ನಿಯೋಜಿಸಲಾದ ಕಚೇರಿಯಿಂದಲೇ ಕೆಲಸ ಮಾಡಬೇಕು ಅಥವಾ ವಾರಕ್ಕೆ ಕನಿಷ್ಠ 3 ದಿನವಾದರೂ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಈಗಾಗಲೇ ಮನೆಯಿಂದ ಕೆಲಸ ಮಾಡಲು ಅನುಮೋದನೆ ನೀಡಲಾಗಿರುವ ಉದ್ಯೋಗಿಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌!

    ಆರ್‌ಟಿಒ ನೀತಿ ಸೆಪ್ಟೆಂಬರ್ 5 ರಿಂದ ಜಾರಿಗೆ ಬರಲಿದೆ. ಇತರ ಕಂಪನಿಗಳಂತೆ ಈ ನೀತಿಯನ್ನು ಉದ್ಯೋಗಿಗಳು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಕಂಪನಿಯ ಕೆಲಸವೂ ಕೂಡಾ ಭವಿಷ್ಯದಲ್ಲಿ ತಂತ್ರಜ್ಞಾನ ಬೆಳೆದಂತೆ ಸುಧಾರಿಸುತ್ತದೆ ಎಂಬ ಭರವಸೆಯಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

    ಈ ಹಿಂದೆ ಟ್ವಿಟ್ಟರ್ ಸೇರಿದಂತೆ ಹಲವು ಕಂಪನಿಗಳು ಕೂಡಾ ತನ್ನ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳುವಂತೆ ಎಚ್ಚರಿಕೆಯನ್ನು ನೀಡಿದ್ದವು. ಈಗ ಎಕ್ಸ್ ಆಗಿ ಬದಲಾಗಿರುವ ಟ್ವಿಟ್ಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಬಳಿಕ ಉದ್ಯೋಗಿಗಳಿಗೆ ವಾರಕ್ಕೆ 40 ಗಂಟೆ ಕಚೇರಿಯಲ್ಲಿ ಹಾಜರಿರುವಂತೆ ತಿಳಿಸಲಾಗಿತ್ತು. ಒಂದು ವೇಳೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಕೊನೆಗೊಳಿಸಿ ಕಚೇರಿಗೆ ಮರಳಲು ಇಷ್ಟಪಡದೇ ಹೋದರೆ ಅವರು ದಾರಾಳವಾಗಿ ರಾಜೀನಾಮೆ ಸಲ್ಲಿಸಬಹುದು ಎಂದು ಮಸ್ಕ್ ಹೇಳಿದ್ದರು. ಇದನ್ನೂ ಓದಿ: ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ (Corona Virus) ನಿಂದಾಗಿ ದೇಶಾದ್ಯಂತ ವರ್ಕ್ ಫ್ರಂ ಹೋಮ್ ಜಾರಿಗೆ ತರಲಾಗಿತ್ತು. ಇದೀಗ ಕಂಪನಿಯೊಂದು ವರ್ಕ್ ಫ್ರಂ ಹೋಂ ಸಾಕು, ಆಫೀಸಿಗೆ ಬಂದು ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಹಿಳಾ ಟೆಕ್ಕಿಗಳು (Women Techies) ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಹೌದು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಆಫೀಸಿಗೆ ಬಂದು ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಮನೆಯಿಂದ ಕಲಸ ಮಾಡುತ್ತಿದ್ದೀರ. ಇನ್ಮೇಲೆ ಕಡ್ಡಾಯವಾಗಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಕಂಪನಿ ಹೇಳಿದೆ. ಈ ಸೂಚನೆ ಹೊರ ಬೀಳುತ್ತಿದ್ದಂತೆಯೇ ಮಹಿಳಾ ಟೆಕ್ಕಿಗಳು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

    ಈ ಸಂಬಂಧ ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ (Milind Lakkad) ಮಾತನಾಡಿ, ಕಂಪನಿಯು ಮನೆಯಿಂದಲೇ ಕೆಲಸ ಮಾಡಿದ್ದು ಸಾಕು, ಕಚೇರಿಗೆ ಬಂದು ಕಾರ್ಯ ನಿರ್ವಹಿಸಿ ಎಂದು ಹೇಳಿದ ನಂತರ ಅನೇಕ ಮಂದಿ ಉದ್ಯೋಗಿಗಳಿಂದ ರಾಜೀನಾಮೆ ಪತ್ರಗಳು ಬಂದವು. ಅದರಲ್ಲಿ ಹೆಚ್ಚಿನದ್ದು ಮಹಿಳೆಯರ ರಾಜೀನಾಮೆ ಪತ್ರಗಳೇ ಆಗಿವೆ. ಆದರೆ ಈ ಮಹಿಳಾ ಉದ್ಯೋಗಿಗಳ ರಾಜೀನಾಮೆ (Women Employees Resign) ಯು ತಾರತಮ್ಯದಿಂದ ಪ್ರೇರಿತವಾಗಿಲ್ಲ. ಸಾಮಾನ್ಯವಾಗಿ ಟಿಸಿಎಸ್ ಕಂಪನಿಯಲ್ಲಿ ಹಿಂದೆಲ್ಲ ಪುರುಷರಿಗಿಂತ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಮ್ (Work From Home) ರದ್ದತಿ ಎಂಬುದು ಹೇಳಿದ್ದಾರೆ.

    ಟಿಸಿಎಸ್ ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35% ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿ ನಿಲ್ಲಿಸಿದ ನಂತರ ಮಹಿಳಾ ಟೆಕ್ಕಿಗಳು ಹೆಚ್ಚಾಗಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    ಒಟ್ಟಿನಲ್ಲಿ ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ಪ್ರಪಂಚದಾದ್ಯಂತ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್‍ಪು‌ಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಕೆಲ ಕಂಪನಿಗಳ ಮ್ಯಾನೇಜ್ಮೆಂಟ್ ವಾದವಾಗಿತ್ತು. ಆದರೆ ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

  • ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ  ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

    ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಬಾಡಿಗೆ ಮನೆ (Rented House), ಅಪಾರ್ಟ್‌ಮೆಂಟ್‍ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಟೆಕ್ಕಿಗಳಿಗೆ ವರ್ಕ್ ಫ್ರಮ್ ಹೋಂ ಮುಗಿಯುತ್ತಿದ್ದಂತೆ ಬಾಡಿಗೆ ರೇಟ್ ದಿಢೀರ್ ಏರಿಕೆಯಾಗಿದೆ. ಆದರೆ ಗಗನಕ್ಕೇರಿದ ಮನೆ ಬಾಡಿಗೆಯಿಂದ ಟೆಕ್ಕಿಗಳಿಗೆ ಸಂಕಷ್ಟ ಎದುರಾಗಿದ್ದು, ದುಬಾರಿ ಬಾಡಿಗೆಗೆ ಫುಲ್ ಸುಸ್ತಾಗಿದ್ದಾರೆ.

    ಕೋವಿಡ್ (Covid 19) ವೇಳೆ ಸ್ವಂತ ಊರುಗಳತ್ತ ಮುಖ ಮಾಡಿದ್ದ ಟೆಕ್ಕಿಗಳು, ವರ್ಕ್ ಫ್ರಂ ಹೋಮ್ (Work From Home) ಮೂಲಕವೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಬಹುತೇಕ ಐಟಿ ಕಂಪನಿಗಳು ಇದೀಗ ಆಫ್ ಲೈನ್ ಕೆಲಸವನ್ನು ಶುರು ಮಾಡಿಕೊಂಡಿವೆ. ಹೀಗಾಗಿ ಬಹುತೇಕ ಉದ್ಯೋಗಿಗಳು ವಿವಿಧ ರಾಜ್ಯಗಳಿಂದ ನಗರಕ್ಕೆ ಮರಳಿದ್ದಾರೆ. ಆದರೆ 2021ಕ್ಕೆ ಹೋಲಿಸಿದರೆ 2023ರಲ್ಲಿ ಸರಾಸರಿ ಬಾಡಿಗೆ ಶೇ. 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಟೆಕ್ ಕಾರಿಡಾರ್ ಹಾಗೂ ಐಟಿ ಪಾರ್ಕ್ ಸುತ್ತಮುತ್ತ ದುಬಾರಿ ಬಾಡಿಗೆ ಕೊಡುವ ಬದಲು, ಹೊಸ ಅಪಾರ್ಟ್‍ಮೆಂಟ್ (Apartment) ಖರೀದಿಯೇ ಬೆಸ್ಟ್ ಎಂದು ಟೆಕ್ಕಿಗಳು ಹೇಳುತ್ತಿದ್ದಾರೆ.

    ಏರಿಕೆಯಾದ ಮನೆ ಬಾಡಿಗೆಯ ವಿವರ: 1 ಬಿಹೆಚ್‍ಕೆ ಮನೆ ಬಾಡಿಗೆಯ ದರವು 2020ರಲ್ಲಿ ಸುಮಾರು 6,000- 25,000 ರೂ. ಇತ್ತು. ಆದರೆ 2023ರ ವೇಳೆಗೆ 7,500- 31,000 ಆಗಿದೆ. ಅದೇ ರೀತಿ 2 ಬಿಹೆಚ್‍ಕೆ ಮನೆಗಳ ಬಾಡಿಗೆಯು 2020ರಲ್ಲಿ 7,000 – 50,000 ರೂ. ವರೆಗೆ ಇದ್ದರೇ, 2023ರ ವೇಳೆಗೆ 8,000- 58,000 ರೂ. ಹೆಚ್ಚಾಗಿದೆ. ಜೊತೆಗೆ 3 ಬಿಹೆಚ್‍ಕೆ ಮನೆ ಬಾಡಿಗೆಯು 2020ರಲ್ಲಿ 10,000- 85,000 ರೂ. ಇದ್ದರೇ, 2023ರ ವೇಳೆಗೆ 12,000 – 1 ಲಕ್ಷ ರೂ. ಗಳವರೆಗೆ ಏರಿಕೆ ಆಗಿದೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ಇಂದು 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ಅರ್ಜಿ ವಿಚಾರಣೆ

    ಕೆಲವು ಐಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಶೇ. 30ರಷ್ಟು ಬಾಡಿಕೆ ಏರಿಕೆಯಾಗಿದೆ. ಈ ವರ್ಷ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಬನ್ನೇರುಘಟ್ಟ ರಸ್ತೆ, ಐಟಿಪಿಎಲ್, ಸರ್ಜಾಪುರ, ಸಿವಿ ರಾಮನ್ ನಗರ, ಮಾರತಹಳ್ಳಿ, ಕೊಡಿಗೇಹಳ್ಳಿ, ಎಚ್‍ಎಸ್‍ಆರ್ ಲೇಔಟ್, ದೊಮ್ಮಲೂರಿನಲ್ಲಿ ಏರಿಕೆಯಾಗಿದೆ. ಎ-ಗ್ರೇಡ್ ಅಪಾರ್ಟ್‍ಮೆಂಟ್‍ಗಳಲ್ಲಿ 2 ಬಿಹೆಚ್‍ಕೆ 40,000 ರೂ. ಬಾಡಿಗೆ ಇದೆ. ದೊಮ್ಮಲೂರಿನಲ್ಲಿ 2020ರಲ್ಲಿ 2 ಬಿಹೆಚ್‍ಕೆ ಅಪಾರ್ಟ್‍ಮೆಂಟ್ ಬಾಡಿಗೆ 15 ರಿಂದ 20 ಸಾವಿರ ರೂ. ಇತ್ತು. ಆದರೆ ಇದೀಗ 2 ಬಿಹೆಚ್‍ಕೆ ಅಪಾರ್ಟ್‍ಮೆಂಟ್ ಬಾಡಿಗೆ 30,000 ರೂ. ಆಗಿದೆ. ಕೊಡಿಗೆಹಳ್ಳಿ ಸುತ್ತಮುತ್ತ 2020ರಲ್ಲಿ ತಿಂಗಳಿಗೆ 25,000 ರೂ. ಬಾಡಿಗೆ ಇತ್ತು. ಕೊಡಿಗೆಹಳ್ಳಿ ಸುತ್ತಮುತ್ತ ಈಗ 50,000 ರೂ. ಬಾಡಿಗೆ ದರ ಏರಿಕೆ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ

  • ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್

    ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಬಳಿಕ ಅದರ ಉದ್ಯೋಗಿಗಳ (Employees) ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಪ್ರಾರಂಭಿಸಿದ್ದಾರೆ. ಕಂಪನಿಯ ಹೆಚ್ಚುವರಿ ಉದ್ಯೋಗಿಗಳನ್ನು ಕಡಿತಗೊಳಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದಾಯಕಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಸ್ಕ್ ಮಾಡುತ್ತಿದ್ದಾರೆ.

    ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ 2 ವಾರಗಳೊಳಗೆ ಕಂಪನಿಯ ಅರ್ಧದಷ್ಟು ಉದ್ಯೋಗಿಗನ್ನು ವಜಾಗೊಳಿಸಿದ್ದಾರೆ (Layoff). ಅದರಲ್ಲೂ ಹೆಚ್ಚಾಗಿ ಉನ್ನತ ಕಾರ್ಯನಿರ್ವಾಹಕರನ್ನೇ ಹೊರದಬ್ಬಿದ್ದಾರೆ. ಇದರೊಂದಿಗೆ ಉದ್ಯೋಗಳು ಇನ್ನು ಮನೆಯಿಂದ ಕೆಲಸ ಮಾಡುವುದನ್ನು ಬಿಟ್ಟು, ಕಚೇರಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

    ಮಸ್ಕ್ ತನ್ನ ಉದ್ಯೋಗಿಗಳಿಗೆ ಹೊಸ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಅದರಲ್ಲಿ ತನ್ನ ಉದ್ಯೋಗಿಗಳು ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು. ಕಂಪನಿಯಲ್ಲಿ ಸಿಗುವ ಉಚಿತ ಆಹಾರವನ್ನು ಕಡಿತಗೊಳಿಸಲಾಗುವುದು ಮಾತ್ರವಲ್ಲದೇ ಇನ್ನು ಕೂಡಾ ವರ್ಕ್ ಫ್ರಂ ಹೋಂ (WFH) ಮಾಡುತ್ತಿರುವವರು ಕಡ್ಡಾಯವಾಗಿ ಕಚೇರಿಗೆ ಮರಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    Elon Musk twitter 1

    ಇನ್ನು ಮುಂದೆ ಉದ್ಯೋಗಿಗಳು ಕಂಪನಿಗಾಗಿ ಹೆಚ್ಚು ಶ್ರಮವಹಿಸಬೇಕು. ಕೊರೊನಾ ಕಳೆದಿದ್ದು, ಇನ್ನು ಕೂಡಾ ಕಂಪನಿಗೆ ಮರಳಲು ಬಯಸದೇ ಮನೆಯಲ್ಲೇ ಕೆಲಸ ಮಾಡುತ್ತಿರುವವರು ಕಂಪನಿಯನ್ನೇ ತೊರೆದಿರುವಂತೆ ಪರಿಗಣಿಸಲಾಗುವುದು ಎಂದು ಮಸ್ಕ್ ಉದ್ಯೋಗಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸ್ತೀವಿ – ಕೇಜ್ರಿವಾಲ್ ಭರವಸೆ

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಂ – ಖಾಸಗಿ ಕಂಪನಿಗಳು ಅಳವಡಿಸಿ: ಗೋಪಾಲ್ ರೈ

    ದೆಹಲಿಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಂ – ಖಾಸಗಿ ಕಂಪನಿಗಳು ಅಳವಡಿಸಿ: ಗೋಪಾಲ್ ರೈ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ದಿನದಿಂದ ದಿನಕ್ಕೆ ವಾಯುಮಾಲಿನ್ಯ ಮಿತಿ ಮೀರುತ್ತಿದೆ. ಹಾಗಾಗಿ ಸರ್ಕಾರಿ ಕಚೇರಿಯಲ್ಲಿ 50% ನೌಕರರು ಮಾತ್ರ ಕೆಲಸ ನಿರ್ವಹಿಸಿ, ಉಳಿದ 50% ನೌಕರರು ವರ್ಕ್ ಫ್ರಮ್ ಹೋಂ (Work From Home) ಮಾಡುವಂತೆ ದೆಹಲಿ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಸರ್ಕಾರಿ ನೌಕರರು 50% ರಷ್ಟು ಕಚೇರಿಗೆ ಆಗಮಿಸಿ ಉಳಿದ 50% ನೌಕರರು ಮನೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಈ ನಿಯಮವನ್ನು ಖಾಸಗಿ ಕಂಪನಿಗಳು ಕೂಡ ಅಳವಡಿಕೆ ಮಾಡಿಕೊಂಡಲ್ಲಿ ಸಹಕಾರವಾಗಲಿದೆ ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಮತ್ತು ಡೀಸೆಲ್, ಲಘು-ಮಧ್ಯಮ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ- ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಮಸ್ಯೆ

    ನಿರ್ಬಂಧ:
    ಕಟ್ಟಡ ನಿರ್ಮಾಣಗಳು, ಥರ್ಮಲ್ ಪ್ಲಾಂಟ್‍ಗಳನ್ನು ಮುಚ್ಚಲಾಗಿದೆ. ಡೀಸೆಲ್ ಲಘು-ಮಧ್ಯಮ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಸರ್ಕಾರಿ ನೌಕರರಿಗೆ 50% ವರ್ಕ್ ಫ್ರಮ್ ಹೋಂ. ಖಾಸಗಿ ಸಂಸ್ಥೆಗಳಿಗೂ ವರ್ಕ್ ಫ್ರಮ್ ಹೋಂಗೆ ಸಲಹೆ. ಶಾಲೆಗಳನ್ನು ಮುಚ್ಚಲಾಗಿದೆ. ಹೊರಾಂಗಣ, ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

    5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೊರಾಂಗಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವೃದ್ಧರ ಆರೋಗ್ಯದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸುತ್ತಿದೆ. ದೆಹಲಿಯಲ್ಲಿ ಆಡ್‌, ಇವನ್‌ (ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟ) ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ ಪ್ರಮಾಣ – ಸಮ, ಬೆಸ ವ್ಯವಸ್ಥೆ ಜಾರಿಗೆ ಚಿಂತನೆ

    ಆಡ್‌, ಇವನ್‌ ಎಂದರೇನು?
    ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟ ಅಂದರೆ ಒಂದು ದಿನ 1, 3, 5, 7, 9ರಲ್ಲಿ ಕೊನೆಯಾಗುವ ನಂಬರ್‌, ಇನ್ನೊಂದು ದಿನ 2, 4, 6, 8ರಲ್ಲಿ ಕೊನೆಯಾಗುವ ನಂಬರ್‌ಗಳ ವಾಹನಗಳು ರಸ್ತೆಗೆ ಇಳಿಯಲು ಅನುಮತಿ ನೀಡುವ ವ್ಯವಸ್ಥೆ.

    Live Tv
    [brid partner=56869869 player=32851 video=960834 autoplay=true]

  • ವರ್ಕ್ ಫ್ರಮ್ ಹೋಮ್‌ನಿಂದ ಸೆಕ್ಸ್ ವೀಡಿಯೋ ನೋಡುವವರ ಸಂಖ್ಯೆ ಹೆಚ್ಚಳ!

    ವರ್ಕ್ ಫ್ರಮ್ ಹೋಮ್‌ನಿಂದ ಸೆಕ್ಸ್ ವೀಡಿಯೋ ನೋಡುವವರ ಸಂಖ್ಯೆ ಹೆಚ್ಚಳ!

    ಲಂಡನ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದು, ಇದರಿಂದ ಯುಕೆ ನಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಹೆಚ್ಚಿನ ಜನ ವ್ಯಸನಿಗಳಾಗುತ್ತಿದ್ದಾರೆ ಎಂಬವುದು ಸರ್ವೇಯೊಂದರಲ್ಲಿ ಬಯಲಾಗಿದೆ.

    ವರ್ಕ್ ಫ್ರಂ ಹೋಮ್ ಜನಪ್ರಿಯವಾದಾಗಿನಿಂದ ಪೋರ್ನೋಗ್ರಫಿ ನೋಡುವ ಯುಕೆ ನಾಗರಿಕರ ಸಂಖ್ಯೆ ವಾಸ್ತವವಾಗಿ ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ. ತಜ್ಞರ ಪ್ರಕಾರ, ವರ್ಕ್ ಫ್ರಮ್ ಹೋಮ್ ಸಾಂದರ್ಭಿಕ ಅಶ್ಲೀಲ ವೀಕ್ಷಕರನ್ನೂ ವ್ಯಸನಿಗಳನ್ನಾಗಿ ಮಾಡಲು ಕಾರಣವಾಗಿದೆ. ಈ ಮೂಲಕ ಸಮಸ್ಯೆಗೆ ಸಿಲುಕಿ ವೈದ್ಯಕೀಯ ಆರೈಕೆ ಪಡೆಯುತ್ತಿರುವವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಆದ್ದರಿಂದ ಅಶ್ಲೀಲ ವ್ಯಸನಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ. ಇದನ್ನೂ ಓದಿ: ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ಅಶ್ಲೀಲ ವ್ಯಸನವು ಲೈಂಗಿಕ ವ್ಯಸನದ ಒಂದು ಭಾಗವಾಗಿದೆ. ಇದರಿಂದ ಮುಕ್ತರಾಗಲು ಲಂಡನ್ನಿನ ಲಾರೆಲ್ ಸೆಂಟರ್ ಲೈಂಗಿಕ ಚಿಕಿತ್ಸಾಲಯದಲ್ಲಿ, ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಾ ಅಶ್ಲೀಲತೆ ವೀಕ್ಷಿಸುವವರಿಗೆ ರಿಮೋಟ್ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಕೇಂದ್ರದ ಕ್ಲಿನಿಕಲ್ ನಿರ್ದೇಶಕಿ ಪೌಲಾ ಹಾಲ್ ಈ ಕುರಿತು ಮಾತನಾಡಿದ್ದು, ಡಬ್ಲ್ಯುಎಫ್‌ಎಚ್ ಎಂದರೆ ಜನರು ಈಗ ತಮ್ಮ ಕಂಪ್ಯೂಟರ್ಗಳ ಮುಂದೆ ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಏಕಾಂಗಿಯಾಗಿ ಕಳೆಯುತ್ತಿದ್ದಾರೆ ಎಂಬುದನ್ನು ಅಂದಾಜಿಸುವುದು ಆಗಿದೆ. ಲಾರೆಲ್ ಚಿಕಿತ್ಸಾಲಯವು 2019ರಲ್ಲಿ 950 ಮಂದಿಗೆ ಲೈಂಗಿಕ ವ್ಯಸನದಿಂದ ಮುಕ್ತರಾಗಲು ಚಿಕಿತ್ಸೆ ನೀಡಿತ್ತು. ಆದರೆ ಪ್ರಸಕ್ತ 2022ರ ವರ್ಷದಲ್ಲಿ ಈಗಾಗಲೇ 750 ಮಂದಿಗೆ ಚಿಕಿತ್ಸೆ ನೀಡುತ್ತಿದೆ. ಹೀಗಾಗಿ ಲೈಂಗಿಕ ವ್ಯಸನಿಗಳ ಸಂಖ್ಯೆ ಹೆಚ್ಚಾಗ್ತಿದೆ ಎಂದು ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    ನವದೆಹಲಿ: ವಿಶೇಷ ಆರ್ಥಿಕ ವಲಯ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ಅವಧಿಗೆ ಮನೆಯಿಂದ ಕೆಲಸ ಮಾಡುವ (WFH) ಅವಕಾಶವಿದ್ದು, ಒಟ್ಟು ಉದ್ಯೋಗಿಗಳ ಪೈಕಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನಿಯಮವನ್ನು ವಿಸ್ತರಿಸಬಹುದು ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

    ಅದಕ್ಕಾಗಿ ವಾಣಿಜ್ಯ ಇಲಾಖೆಯು ವಿಶೇಷ ಆರ್ಥಿಕ ವಲಯಗಳ ನಿಯಮ -2006 ರಲ್ಲಿ ವರ್ಕ್ ಫ್ರಮ್ ಹೋಂಗಾಗಿ ಹೊಸ ನಿಯಮ 43ಎ ಅನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZ) ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿ – ನಿಬಂಧನೆ ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ- ವಜಾಗೊಂಡಿದ್ದ ಕಾರ್ಮಿಕ ಮರು ನೇಮಕ

    ಹೊಸ ನಿಯಮವು ವಿಶೇಷ ಆರ್ಥಿಕ ವಲಯ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನೀಡುತ್ತದೆ. ಇವರಲ್ಲಿ ಐಟಿ ಅಥವಾ ಐಟಿಇಎಸ್ ಎಸ್‌ಇಜೆಡ್ ಘಟಕಗಳ ಉದ್ಯೋಗಿಗಳು, ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಆಫ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರು ಈ ನಿಯಮಕ್ಕೆ ಒಳಪಡಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬೈಕ್, ಕಾರು ನಡುವೆ ಭೀಕರ ಅಪಘಾತ- ಬಾಲಕ ಸೇರಿ ಒಂದೇ ಕುಟುಂಬದ ಇಬ್ಬರ ಸಾವು

    ಮನೆಯಿಂದ ಕೆಲಸ ಮಾಡುವುದನ್ನು ಈಗ ಗರಿಷ್ಠ ಒಂದು ವರ್ಷದ ಅವಧಿಗೆ ಅನುಮತಿಸಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಇನ್ನೊಂದು ವರ್ಷಕ್ಕೆ ಜಿಲ್ಲಾಧಿಕಾರಿ ಒಂದು ಬಾರಿಗೆ ಮಾತ್ರ ಮಾತ್ರ ವಿಸ್ತರಿಸಬಹುದಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]