Tag: Word Cup

  • ಶಮಿ ದಾಳಿಗೆ ಲಂಕಾ ಭಸ್ಮ – 302 ರನ್‌ಗಳ ಭರ್ಜರಿ ಜಯ, ಸೆಮಿಗೆ ಟೀಂ ಇಂಡಿಯಾ

    ಶಮಿ ದಾಳಿಗೆ ಲಂಕಾ ಭಸ್ಮ – 302 ರನ್‌ಗಳ ಭರ್ಜರಿ ಜಯ, ಸೆಮಿಗೆ ಟೀಂ ಇಂಡಿಯಾ

    ಮುಂಬೈ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (Word Cup Cricket) ಭಾರತದ (Team India) ಅಜೇಯ ಓಟ ಮುಂದುವರಿದಿದ್ದು ಸೆಮಿಫೈನಲ್‌ ಪ್ರವೇಶಿಸಿದೆ. ಶ್ರೀಲಂಕಾ (Sri Lanka) ವಿರುದ್ಧ ಭರ್ಜರಿ 302 ರನ್‌ಗಳಿಂದ ಜಯಗಳಿಸಿದ ಭಾರತ ಸೆಮಿಫೈನಲ್‌ (Semi Final) ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಟಾಸ್‌ ಸೋತು ಬ್ಯಾಟ್‌ ಮಾಡಿದ ಭಾರತ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕದ ಆಟದಿಂದ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಲಂಕಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.4 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು.   ಇದನ್ನೂ ಓದಿ: ಶತಕ ಮಿಸ್‌ ಆದ್ರೂ ಸಚಿನ್‌ ದಾಖಲೆ ಮುರಿದ ಕಿಂಗ್‌ ಕೊಹ್ಲಿ

    ಶ್ರೀಲಂಕಾ 3 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ತಂಡದ 4 ಮಂದಿ ಆಟಗಾರರು 0 ಸುತ್ತಿದ್ದರು. ಇತರ ರೂಪದಲ್ಲಿ 10 ರನ್‌( 5 ಬೈ, 1 ಲೆಗ್‌ಬೈ, 4 ವೈಡ್‌) ಬಂದ ಕಾರಣ ಲಂಕಾದ ಸ್ಕೋರ್‌ 50 ರನ್‌ ಗಡಿ ದಾಟಿತ್ತು.

    ಶಮಿ (Mohammed Shami) ಮಾರಕ ಬೌಲಿಂಗ್‌ ಮಾಡಿ 5 ವಿಕೆಟ್‌ ಕಿತ್ತರೆ ಸಿರಾಜ್‌ 3 ವಿಕೆಟ್‌ ಪಡೆದರು. ಬುಮ್ರಾ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಕಳಪೆ ಫೀಲ್ಡಿಂಗ್‌:
    ಭಾರತ 300 ರನ್‌ ಗಳಿಸಲು ಶ್ರೀಲಂಕಾ ತಂಡದ ಆಟಗಾರರೇ ಕಾರಣ. ಸುಲಭದ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರು. ಇದರ ಸಂಪೂರ್ಣ ಲಾಭವನ್ನು ಭಾರತದ ಬ್ಯಾಟರ್‌ಗಳು ಪಡೆದುಕೊಂಡರು.

    ರೋಹಿತ್‌ ಶರ್ಮಾ 4 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಶುಭಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ 179 ಎಸೆತಗಳಲ್ಲಿ 189 ರನ್‌ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್‌ ಕಟ್ಟಿದರು.  ಶುಭಮನ್‌ ಗಿಲ್‌ 92 ರನ್‌ ( 92 ಎಸೆತ, 11 ಬೌಂಡರಿ, 2 ಸಿಕ್ಸರ್‌), ವಿರಾಟ್‌ ಕೊಹ್ಲಿ 88 ರನ್‌ ( 94 ಎಸೆತ, 11 ಬೌಂಡರಿ) ಶ್ರೇಯಸ್‌ ಅಯ್ಯರ್‌ 82 ರನ್‌ (56 ಎಸೆತ, 3 ಬೌಂಡರಿ, 6 ಸಿಕ್ಸರ್‌) ರವೀಂದ್ರ ಜಡೇಜಾ 35 ರನ್‌ ( 24 ಎಸೆತ, 1 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.

    ಭಾರತದ ರನ್‌ ಏರಿದ್ದು ಹೇಗೆ?
    50 ರನ್‌ – 49 ಎಸೆತ
    100 ರನ್‌ – 98 ಎಸೆತ
    150 ರನ್‌ – 150 ಎಸೆತ
    200 ರನ್‌ – 198 ಎಸೆತ
    250 ರನ್‌ – 231 ಎಸೆತ
    300 ರನ್‌ – 270 ಎಸೆತ
    350 ರನ್‌ – 293 ಎಸೆತ
    357 ರನ್‌ – 300 ರನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ಇಸ್ಲಾಮಾಬಾದ್: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ನ (Word Cup) ವೇಳಾಪಟ್ಟಿ ಹೊರ ಬಿದ್ದಿದೆ. ಆದರೆ ರಾಷ್ಟ್ರೀಯ ತಂಡದ ವೇಳಾಪಟ್ಟಿ ಮತ್ತು ಸ್ಥಳಗಳ ಕುರಿತು ಪಾಕಿಸ್ತಾನ (Pakistan) ಕ್ರಿಕೆಟ್ ಮಂಡಳಿ (PCB) ಆಕ್ಷೇಪ ಎತ್ತಿದೆ.

    ಪಾಕ್‍ನ ಈ ಆಕ್ಷೇಪಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಿರ್ಲಕ್ಷಿಸಿದೆ. ಐಸಿಸಿ ಮತ್ತು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದ ವಿಶ್ವಕಪ್‍ನ ಅಂತಿಮ ವೇಳಾಪಟ್ಟಿಯಲ್ಲಿ ಈ ಹಿಂದೆ ಪ್ರಸ್ತಾಪಿಸಿದಂತೆ ಭಾರತದ ವಿರುದ್ಧ ಪಾಕಿಸ್ತಾನದ ಪಂದ್ಯವನ್ನು ಅಹಮದಾಬಾದ್‍ನಲ್ಲಿ ನಿಗದಿಪಡಿಸಲಾಗಿದೆ. ಆದರೆ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಸ್ಥಳಗಳನ್ನು ಬದಲಾಯಿಸುವ ಪಿಸಿಬಿಯ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಇದನ್ನೂ ಓದಿ: ICC ODI World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

    ಪಾಕಿಸ್ತಾನ ತಂಡದ ಮ್ಯಾನೇಜ್‍ಮೆಂಟ್‍ನ ಅಪೇಕ್ಷೆಯಂತೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಚೆನ್ನೈನಿಂದ ಬೆಂಗಳೂರಿಗೆ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಮರು ನಿಗದಿಪಡಿಸುವಂತೆ ಪಿಸಿಬಿ, ಐಸಿಸಿ ಮತ್ತು ಬಿಸಿಸಿಐಗೆ ಕೇಳಿಕೊಂಡಿದೆ.

    ಪಾಕಿಸ್ತಾನದ ಯಾವುದೇ ಆಕ್ಷೇಪಣೆಗಳು ಹಾಗೂ ವಿನಂತಿಗಳನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿಲ್ಲ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸೆಮಿಫೈನಲ್‍ಗಳನ್ನು ನಿಗದಿಪಡಿಸಲಾಗಿದೆ. ಆದರೂ ಪಿಸಿಬಿ ರಾಜಕೀಯ ಮತ್ತು ರಾಜತಾಂತ್ರಿಕ ಕಾರಣಗಳಿಂದಾಗಿ ಮುಂಬೈನಲ್ಲಿ ಆಡುವುದು ಆರಾಮದಾಯಕವಲ್ಲ ಎಂದು ಐಸಿಸಿಗೆ ತಿಳಿಸಿದೆ. ಅಲ್ಲದೇ ವೇಳಾಪಟ್ಟಿಯನ್ನು ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ T20 ಸರಣಿ – ಟೀಂ ಇಂಡಿಯಾಕ್ಕೆ ರಿಂಕು ಸಿಂಗ್‌ ಆಯ್ಕೆ?

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]