Tag: Wooden plank

  • ಮರದ ಹಲಗೆಯಿಂದ ತಾಯಿಯನ್ನೇ ಹತ್ಯೆಗೈದ ಮಗ

    ಮರದ ಹಲಗೆಯಿಂದ ತಾಯಿಯನ್ನೇ ಹತ್ಯೆಗೈದ ಮಗ

    ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಮರದ ಹಲಗೆಯಿಂದ ಹತ್ಯೆಗೈದ ಅಮಾನವೀಯ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ.

    ಜಿತೇಂದ್ರ ಕನ್ಹರ್(30) ಬಂಧಿತ ಆರೋಪಿ. ಒಡಿಶಾದ ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ಈತ 61 ವರ್ಷದ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ಬೆಳಗ್ಗೆ ಜಗಳವಾಡಿದ ನಂತರ ಕೋಪ ಗೊಂಡಿದ್ದ. ಈ ಕೋಪ ಮಿತಿಮೀರಿದ್ದು, ತಾಯಿಯನ್ನು ಜಿತೇಂದ್ರ ಮರದ ಹಲಗೆಯಿಂದ ಹೊಡೆದಿದ್ದಾನೆ.

    crime

    ಸ್ಥಳೀಯರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು. ಮೃತಪಟ್ಟ ವಿಷಯವನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಫುಲ್ಬಾನಿ ಉಪವಿಭಾಗದ ಪೊಲೀಸ್ ಅಧಿಕಾರಿ ಮಹೇಂದ್ರ ಮುರ್ಮು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    POLICE JEEP

    ಘಟನೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಿತೇಂದ್ರ ಕನ್ಹರ್‍ನನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹೊರಗುತ್ತಿಗೆ ನೀಡುವ ನಿರ್ಧಾರ ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್‍ಗಳಿಂದ ಮುಷ್ಕರ

  • 10 ತಿಂಗಳ ಕಂದಮ್ಮನ ತಲೆ ಮೇಲೆ ಬಿತ್ತು ಮರದ ಹಲಗೆ

    10 ತಿಂಗಳ ಕಂದಮ್ಮನ ತಲೆ ಮೇಲೆ ಬಿತ್ತು ಮರದ ಹಲಗೆ

    ಬೀಜಿಂಗ್: 10 ತಿಂಗಳ ಗಂಡು ಮಗುವಿನ ತಲೆಯ ಮೇಲೆ ಮರದ ಹಲಗೆಯೊಂದು ಬಿದ್ದಿರುವ ಘಟನೆ ನೈಋತ್ಯ ಚೀನಾದದಲ್ಲಿ ನಡೆದಿದೆ. ಮಗುವಿನ ಮೇಲೆ ಮರದ ಹಲಗೆ ಬೀಳುವ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾರ್ಚ್ 16ರಂದು ಈ ಘಟನೆ ನಡೆದಿದ್ದು, ಮಗುವಿನ ತಲೆಯ ಮೇಲೆ ಮರದ ಹಲಗೆ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 16ರಂದು ಮಧ್ಯಾಹ್ನ 1ಗಂಟೆಗೆ ಲಿಯು ಎಂಬ ಮಹಿಳೆ ತಮ್ಮ ಮೊಮ್ಮಗನನ್ನು ಬೇಬಿ ಸಿಟಿಂಗ್ ಚೇರ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಮೇಲಿಂದ ಸುಮಾರು 2 ಕೆಜಿ ತೂಕವುಳ್ಳ ಮರದ ಹಲಗೆ ಕಂದಮ್ಮನ ತಲೆಯ ಮೇಲೆ ಬಿದ್ದಿದೆ.

    ಮಗುವಿನ ಮೇಲೆ ಹಲಗೆ ಬೀಳುತ್ತಿದ್ದಂತೆ ಲಿಯು ಮೊಮ್ಮಗನನ್ನು ಸ್ಥಳೀಯ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಮಗುವಿನ ಹಣೆಯ ಮೇಲೆ 8 ಸೆಂಟಿ ಮೀಟರ್ (3.15 ಇಂಚು) ಆಳವಾದ ಗಾಯವಾಗಿದೆ. ಮಗುವಿಗೆ ಚಿಕಿತ್ಸೆ ನೀಡಲಾಗತ್ತಿದ್ದು, ಅದರ ಸ್ಥಿತಿ ಚಿಂತಾಜನಕವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆಂದು ವರದಿಯಾಗಿದೆ.

    ಮಗುವಿನದ್ದು ಮೃದು ಹಣೆಯಾಗಿದ್ದರಿಂದ ಮೂಳೆಗಳು ಮುರಿತಕ್ಕೊಳಗಾಗಿದ್ದು, ಅವುಗಳ ಜೋಡಣೆ ಕಾರ್ಯ ನಡೆಯುತ್ತಿದೆ ಅಂತಾ ಮಗುವಿನ ತಾಯಿ ಖಿನ್ ತಿಳಿಸಿದ್ದಾರೆ.

    ಘಟನೆಯ ಬಳಿಕ ಸ್ಥಳೀಯ ಭದ್ರತಾ ಸಿಬ್ಬಂದಿ, ಬಾಲ್ಕನಿಯಲ್ಲಿ ಅಲಂಕಾರಿಕವಾಗಿ ಮರದ ಹಲಗೆಗಳು, ಹೂ ಕುಂಡಗಳನ್ನು ಬೀಳುವ ರೀತಿಯಲ್ಲಿ ಇರಿಸಬಾರದು ಅಂತಾ ಸುತ್ತೋಲೆಯನ್ನು ಹೊರಡಿಸಿದ್ದಾರೆ.

    ಈ ಸಂಬಂಧ ಯುಝಹಾಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೇಲೆ ಹಲಗೆ ಹೇಗೆ ಬಿತ್ತು ಮತ್ತು ಯಾರ ಮನೆಯ ಬಾಲ್ಕನಿಯಿಂದ ಬಿದ್ದಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    https://youtu.be/KPqRN5aLrvk