Tag: wood

  • ಭಾರೀ ಮಳೆ – ಧರೆಗುರುಳಿದ ಮರ, ಕಾಂಪೌಂಡ್, ವಿದ್ಯುತ್ ಕಂಬಗಳು

    ಭಾರೀ ಮಳೆ – ಧರೆಗುರುಳಿದ ಮರ, ಕಾಂಪೌಂಡ್, ವಿದ್ಯುತ್ ಕಂಬಗಳು

    ಬೆಂಗಳೂರು: ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆಯಿಂದಾಗಿ ಕಾಂಪೌಂಡ್ ಕುಸಿದು ಅನೇಕ ಮರಗಳು ಹಾಗೂ ಹತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಸಂಭವಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಂಚೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಮಹಾಸಾಗರದಲ್ಲಿ ಉಂಟಾದ ಬಿರುಗಾಳಿ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಈ ಮಳೆಗೆ ಮಂಚೇನಹಳ್ಳಿ ಗ್ರಾಮಸ್ಥರು ರಾತ್ರಿಯಿಡೀ ವಿದ್ಯುತ್ ಇಲ್ಲದೆ ಪರದಾಡುವಂತಾದ ಪರಿಸ್ಥಿತಿ ಉಂಟಾಗಿದೆ.

    ಇನ್ನೂ ಮರವೊಂದು ಉರುಳಿ ಬಿದ್ದಿದ್ದು, ಮರತೆಗೆಸುವಂತೆ ಗ್ರಾಮಸ್ಥರು ಅರಣ್ಯಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಆದರೆ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಆಗಮಿಸಿದ ಕಾರಣ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರೇ ಮರ ತೆರವಿಗೆ ಮುಂದಾಗಿದ್ದಾರೆ.

    ಇನ್ನೂ ಮೂರುದಿನ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಮಂಗ್ಳೂರಲ್ಲಿ ಮಳೆಗೆ ಮರ ಉರುಳಿ ಬಿದ್ದು ನಾಲ್ಕು ಕಾರು ಜಖಂ!

    ಮಂಗ್ಳೂರಲ್ಲಿ ಮಳೆಗೆ ಮರ ಉರುಳಿ ಬಿದ್ದು ನಾಲ್ಕು ಕಾರು ಜಖಂ!

    ಮಂಗಳೂರು: ಗುರುವಾರ ತಡರಾತ್ರಿ ಸುರಿದ ಗಾಳಿ ಮಳೆಗೆ ಭಾರೀ ಗಾತ್ರದ ಮರ ಉರುಳಿ ಬಿದ್ದು, ನಾಲ್ಕು ಕಾರು ಜಖಂಗೊಂಡಿದೆ.

    ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಮರದ ಬಳಿ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಮೂರು ವಿದ್ಯುತ್ ಕಂಬ ಕೂಡ ಉರುಳಿ ಬಿದ್ದಿದೆ. ಇದರಿಂದಾಗಿ ಮರದ ಕೆಳಗೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಜಖಂ ಆಗಿದ್ದು ಭಾರೀ ನಷ್ಟವಾಗಿದೆ.

    ಗುರುವಾರ ರಾತ್ರಿ ಮಳೆಯಾಗಿದ್ದರಿಂದ ವಿದ್ಯುತ್ ಶಾಕ್ ದುರಂತದಿಂದ ಜನರು ಪಾರಾಗಿದ್ದಾರೆ. ಸದ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರ ತೆರವು ಕಾರ್ಯ ನಡೆಸಿದ್ದಾರೆ.

  • ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

    ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

    ಬೆಂಗಳೂರು: ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರು ಪರದಾಡಿದ್ದಾರೆ.

    ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಸರ್ಕಲ್ ಮಾರಮ್ಮ ಮತ್ತು ಟಾಟಾ ಇನ್ಸ್ ಸ್ಟಿಟ್ಯೂಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಅಷ್ಟೇ ಅಲ್ಲದೇ ರಾಮಯ್ಯ ಕಾಲೇಜು ಮುಂಭಾಗ ಕಾರಿನ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಲ್ಲೇಶ್ವರಂ 10ನೇ ಕ್ರಾಸ್, ಮಹಾಲಕ್ಷ್ಮಿ ಲೇಔಟ್, ಸದಾಶಿವ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ಮರಗಳು ಬಿದ್ದಿವೆ. ಮೇಖ್ರಿ ಸರ್ಕಲ್, ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಮುಂಭಾಗ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದೆ. ಪರಿಣಾಮ ಪ್ಯಾಲೆಸ್ ಗ್ರೌಂಡ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಯಶವಂತಪುರ ಬಸ್ ಸ್ಟ್ಯಾಂಡ್ ತುಂಬಾ ನೀರು ತುಂಬಿ ಪ್ರಯಾಣಿಕರು ಪರದಾಡುವಂತಾಗಿತ್ತು.

    ಇನ್ನೂ ರಾಮಯ್ಯ ಆಸ್ಪತ್ರೆ ಮುಂದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಕಾರು, ಬೈಕ್ ಗಳ ಮೇಲೆ ಮರ ಉರುಳಿದೆ. ಕೂಡಲೇ ಸಾರ್ವಜನಿಕರು ಕಾರಿನಲ್ಲಿದ್ದ ಚಾಲಕನನ್ನ ರಕ್ಷಣೆ ಮಾಡಿದ್ದಾರೆ. ಮರ ಬಿದ್ದ ರಭಸಕ್ಕೆ ಒಲಾ ಕಾರು ಮತ್ತು ಟಿವಿಎಸ್ ಬೈಕ್ ಜಖಂ ಆಗಿದೆ. ಆದರೆ ಮರ ಬಿದ್ದು ಅರ್ಧ ಗಂಟೆ ಆಗಿದ್ದರೂ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಬಂದಿರಲಿಲ್ಲ.

    ಪೂರ್ವ ಮುಂಗಾರಿನಲ್ಲಿ ಸಮಯದಲ್ಲಿ ರಾಜ್ಯಾದ್ಯಂತ ಭಾರೀ ಗುಡುಗು ಗಾಳಿ ಸಹಿತ ಆಗಾಗ ಮಳೆಯಾಗುವುದು ಸಹಜ. ಮೇ ತಿಂಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಮುಂದುವರೆಯಲಿದೆ. ಮೋಡಗಳ ಸಾಲು ನಿರ್ಮಾಣವಾಗಿರುವ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ವರ್ಷಕ್ಕೊಮ್ಮೆ ಹೂ ಬಿಡುತ್ತೆ ಈ ಮರ- ತನ್ನ ಸಮೃದ್ಧಿಯಿಂದಲೇ ಹೇಳುತ್ತೆ ಭವಿಷ್ಯ

    ವರ್ಷಕ್ಕೊಮ್ಮೆ ಹೂ ಬಿಡುತ್ತೆ ಈ ಮರ- ತನ್ನ ಸಮೃದ್ಧಿಯಿಂದಲೇ ಹೇಳುತ್ತೆ ಭವಿಷ್ಯ

    ಕೋಲಾರ: ಈ ಮರ ವರ್ಷಕ್ಕೊಮ್ಮೆ ಹೂ ಬಿಟ್ಟು, ತನ್ನ ನಗುವಿನಿಂದಲೇ ತನ್ನ ಸಮೃದ್ಧಿಯಿಂದಲೇ ಊರಿನ ಸಮೃದ್ಧಿಯನ್ನು ಸೂಚಿಸುವ ವಿಶೇಷವಾದ ಮರವೊಂದು ಜಿಲ್ಲೆಯಲ್ಲಿದೆ.

    ಮೈತುಂಬ ಬಿಳಿಯ ಬಣ್ಣದ ಹೂ ಮುಡಿದು ನಗು ನಗುತ್ತಿರುವ ಬೃಹತ್ ಮರ, ಮರದ ಕೆಳಗೆ ಪ್ರತಿಷ್ಠಾಪನೆ ಮಾಡಲಾಗಿರುವ ನೂರಾರು ನಾಗರ ಕಲ್ಲುಗಳು. ಇಂತಹದೊಂದು ಅಪರೂಪದ ಮರ ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದ ಬಳಿಯ ಬಿಳಿ ಬೆಟ್ಟದಲ್ಲಿದೆ.

    ಈ ಅಪರೂಪವಾಗಿ ಕಂಡುಬರುವ ಜಾತಕ ಹೇಳುವ ಈ ಜಾಲಾರಿ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಮಹಾ ಶಿವರಾತ್ರಿ ಸಮಯದಲ್ಲಿ ಅಥವಾ ಯುಗಾದಿ ಸಮಯದಲ್ಲಿ ಹೂಬಿಡುವ ಮರ ಈ ಪ್ರದೇಶದ ಹವಾಮಾನ, ಮಳೆ, ಬೆಳೆ, ಸಮೃದ್ಧಿಯ ಸೂಚನೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಮರ ಪೂರ್ತಿ ಹೂ ಬಿಟ್ಟರೆ ಆ ವರ್ಷ ಎಲ್ಲಾ ಭಾಗದಲ್ಲೂ ಸಮೃದ್ಧಿ ಎಂದು ಅರ್ಥ. ಒಂದು ವೇಳೆ ಮರದ ಕೆಲವೇ ಕೆಲವು ಭಾಗದಲ್ಲಿ ಹೂ ಬಿಟ್ಟರೆ ಹೂ ಬಿಟ್ಟಿರುವ ಭಾಗದಲ್ಲಿ ಮಾತ್ರ ಸಮೃದ್ಧಿಯಾಗಿ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ.

    ಒಂದು ವೇಳೆ ಮರದ ಒಂದೇ ಒಂದು ಭಾಗದಲ್ಲಿ ಹೂ ಬಿಟ್ಟರೆ ಆ ಭಾಗದಲ್ಲಿ ಮಾತ್ರ ಮಳೆ ಬೆಳೆಯಾಗಿ ಉಳಿದೆಡೆ ಬರಗಾಲ ಆವರಿಸುತ್ತದೆ ಎಂದರ್ಥ. ಆ ವರ್ಷದಲ್ಲಿ ಹೂ ಬಿಡದೇ ಬರೀ ಎಲೆ ಚಿಗುರು ಮೂಡಿದರೆ ಸಂಪೂರ್ಣ ಬರಗಾಲ ಎಂದು ನಂಬಲಾಗುತ್ತದೆ. ಕಳೆದ ವರ್ಷವೂ ಜಾಲಾರಿ ಮರ ಮೈತುಂಬ ಹೂ ಬಿಟ್ಟಿತ್ತು ಆ ಕಾರಣದಿಂದಲೇ ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷವೂ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ವಿಶೇಷತೆ ಎಂದರೆ ಎರಡು ವರ್ಷದ ಹಿಂದೆ ಹೂ ಬಿಡದ ಕಾರಣ ಜಿಲ್ಲೆಯಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಬಹಳ ಅಪರೂಪದ ಈ ಜಾಲಾರಿ ಮರವನ್ನು ಜಾತಕ ಹೇಳುವ ಮರ ಎಂದು ಕರೆಯುತ್ತಾರೆ. ಈ ಮರಕ್ಕೆ ದೈವಿ ಸ್ವರೂಪವನ್ನು ನೀಡಲಾಗಿದೆ. ಕಾರಣ ಈ ಮರದಲ್ಲಿ ಸಾಕ್ಷಾತ್ ಪರಮೇಶ್ವರನು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಅದಕ್ಕಾಗಿ ವರ್ಷಕ್ಕೊಮ್ಮೆ ಈ ಮರ ಹೂ ಬಿಟ್ಟಾಗ ಇಲ್ಲಿ ಪರಮೇಶ್ವರನ ರೂಪದಲ್ಲಿ ಈ ಮರದಲ್ಲಿ ಸರ್ಪಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ ಈ ಮರದ ಕೆಳಗೆ ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದರಂತೆ ನಾಗ ದೋಷಗಳು ಇದ್ದರೆ ಈ ಮರದ ಕೆಳಗೆ ನಿಂತು ದೇವರನ್ನು ಪ್ರಾರ್ಥನೆ ಮಾಡಿದ್ರೆ ದೋಷಗಳು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಸ್ಥಳಿಯರಾದ ಮುನಿಯಪ್ಪ ತಿಳಿಸಿದ್ದಾರೆ.

  • ಮರಕ್ಕೆ ಡಿಕ್ಕಿ ಹೊಡೆದ ಡಿಲಕ್ಸ್ ಬಸ್- 11 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಮರಕ್ಕೆ ಡಿಕ್ಕಿ ಹೊಡೆದ ಡಿಲಕ್ಸ್ ಬಸ್- 11 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಡಿಲಕ್ಸ್ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದು, 11 ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಇಂದು ಬೆಳಗ್ಗಿನ ಜಾವದಲ್ಲಿ ನಡೆದಿದೆ.

    ಕ್ಯಾಲಿಕಟ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್, ಶ್ರೀರಂಗಪಟ್ಟಣದ ಕೆಆರ್‍ಎಸ್ ರಸ್ತೆಯ ಪಂಪ್ ಹೌಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳೀಯರು ಮತ್ತು ಪೆÇಲೀಸರ ನೆರವಿನೊಂದಿಗೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಘಟನೆ ಬಗ್ಗೆ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬಳ್ಳಾರಿಯಲ್ಲಿ ಸಾಮಿಲ್ ಗೆ ಬೆಂಕಿ: ಕೋಟ್ಯಾಂತರ ರೂ. ಮೌಲ್ಯದ ಮರಗಳು ಭಸ್ಮ

    ಬಳ್ಳಾರಿಯಲ್ಲಿ ಸಾಮಿಲ್ ಗೆ ಬೆಂಕಿ: ಕೋಟ್ಯಾಂತರ ರೂ. ಮೌಲ್ಯದ ಮರಗಳು ಭಸ್ಮ

    – ಕಿಡಿಗೇಡಿಗಳ ಮೇಲೆ ಶಂಕೆ

    ಬಳ್ಳಾರಿ: ಇಲ್ಲಿನ ತೋರಣಗಲ್‍ನಲ್ಲಿ ಸಾಮೀಲ್‍ಗೆ ಬೆಂಕಿ ಬಿದ್ದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಗುರುವಾರ ರಾತ್ರಿಯಿಡೀ ಹೊತ್ತಿ ಉರಿದ ಘಟನೆ ನಡೆದಿದೆ.

    ಜಮಾಲುದ್ದಿನ್ ಅನ್ನೋರಿಗೆ ಸೇರಿದ್ದ ಸಾಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಅಂದಾಜು ಒಂದೂವರೆ ಕೋಟಿ ರೂ. ಮೌಲ್ಯದ ಮರದ ದಿಮ್ಮಿಗಳು ಸುಟ್ಟು ಕರಕಲಾಗಿವೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ 4 ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

    ಸದ್ಯ ಬೆಂಕಿ ಹತೋಟಿಗೆ ಬಂದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾರೋ ಕಿಡಿಗೇಡಿಗಳು ಬೇಕಂತಾನೇ ಬೆಂಕಿ ಹಚ್ಚಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

    https://www.youtube.com/watch?v=HG9POo_H1ls&feature=youtu.be