Tag: wood

  • ಬಿಸಿಲಿನ ಝಳಕ್ಕೆ ಗುಡುಗು ಸಹಿತ ಆಲಿಕಲ್ಲು ಮಳೆ

    ಬಿಸಿಲಿನ ಝಳಕ್ಕೆ ಗುಡುಗು ಸಹಿತ ಆಲಿಕಲ್ಲು ಮಳೆ

    – ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

    ಚಿಕ್ಕಮಗಳೂರು/ಹಾವೇರಿ: ಹೇಳೋಕೆ ಮಲೆನಾಡಾದರೂ ಬಿಸಿಲಿನ ತಾಪ 36 ರಿಂದ 38 ಸೆಲ್ಸಿಯಸ್ ನಷ್ಟಿದ್ದ ಕಾಫಿನಾಡು, ಮಲೆನಾಡು ಭಾಗದಲ್ಲಿ ವರುಣನ ಮೊದಲ ಅಬ್ಬರಕ್ಕೆ ಹೈರಾಣಾಗಿದ್ದಾರೆ.

    ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು 45 ನಿಮಿಷಗಳ ಕಾಲ ಸುರಿದ ಭಾರೀ ಮಳೆ-ಗಾಳಿಗೆ ಜನ ಕಂಗಾಲಾಗಿದ್ದಾರೆ. ಇದೇ ವೇಳೆ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ಸುಮಾರು 90 ಅಡಿ ಎತ್ತರದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಡಿಲಿನ ರಭಸಕ್ಕೆ ತೆಂಗಿನ ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ದಿಢೀರನೆ ಸುರಿದ ಮಳೆಗೆ ಮಕ್ಕಳು ಭಯದಿಂದ ಮನೆಯತ್ತ ಓಡುತ್ತಿದ್ದ ದೃಶ್ಯವೂ ಕೂಡ ಮನೋಜ್ಞವಾಗಿತ್ತು. ಬಾಳೆಹೊನ್ನೂರಿನ ಸುತ್ತಮುತ್ತ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಮಿತಿ ಮೀರುತ್ತಿದೆ. ಜನರು ವರುಣನ ಆಗಮನಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕೂತಿದ್ದರು. ಬಿಸಿಲಿನ ತಾಪಕ್ಕೆ ಕಾಫಿ, ಮೆಣಸು, ಅಡಿಕೆ ಹಾಗೂ ಇತರೆ ಆಹಾರ ಹಾಗೂ ವಾಣಿಜ್ಯ ಬೆಳೆಗಳು ಸೊರಗಿದ್ದವು. ದಿಢೀರನೆ ಭಾರೀ ಮಳೆಯಾಗಿದ್ದರಿಂದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

    ಇನ್ನೂ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹಾವೇರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಶುಕ್ರವಾರ ಸಂಜೆ ವೇಳೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನರಿಗೆ ಆಲಿಕಲ್ಲು ಮಳೆ ಕೊಂಚ ರಿಲ್ಯಾಕ್ಸ್ ನೀಡಿದೆ. ಮಳೆರಾಯ ತನ್ನೊಂದಿಗೆ ಆಲಿಕಲ್ಲುಗಳನ್ನ ಸುರಿಸಿದ್ದು, ಜಿಲ್ಲೆಯ ಜನರಿಗೆ ಖುಷಿ ನೀಡಿದ್ದಾನೆ. ಸೂರ್ಯನ ತಾಪದಿಂದ ಬೇಸತ್ತು ಆಕಾಶ ನೋಡುತ್ತಿದ್ದ ಜನರಿಗೆ ಹದಿನೈದು ನಿಮಿಷಗಳ ಕಾಲ ಸುರಿದ ಮಳೆ ತಂಪು ತಂಪು ಕೂಲ್ ಕೂಲ್ ಎನ್ನುವ ವಾತಾವರಣ ಸೃಷ್ಟಿಸಿತ್ತು.

  • ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಬೆಳಗಾವಿ: ಜೀವದ ಹಂಗು ತೊರೆದು ಚಲಿಸುತ್ತಿರುವ ರೈಲಿನ ವಿರುದ್ಧ ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನೇ ಯುವಕರಿಬ್ಬರು ತಪ್ಪಿಸಿದ್ದು, ಸಾವಿರಾರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

    ರಿಯಾಜ್ ಹಾಗೂ ತೋಫಿಕ್ ಸಾಹಸಿ ಯುವಕರು. ಶುಕ್ರವಾರ ಸಂಜೆ ಬೆಳಗಾವಿಯ ಖಾನಾಪೂರದ ಗಾಂಧಿ ನಗರದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲ್ಹಾಪುರ – ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಚಲಿಸುತ್ತಿತ್ತು. ಆದರೆ ರೈಲಿನ ಟ್ರ್ಯಾಕ್ ಮೇಲೆ ಏಕಾಎಕಿ ಮರ ಬಿದ್ದಿದೆ. ಇದೇ ಮಾರ್ಗವಾಗಿ ಬೈಕ್ ಮೇಲೆ ರಿಯಾಜ್ ಹಾಗೂ ತೋಫಿಕ್ ತೋಟದ ಕಡೆಗೆ ಹೋಗುತ್ತಿದ್ದರು. ಆಗ ಟ್ರ್ಯಾಕ್ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ್ದಾರೆ. ಇದನ್ನು  ಓದಿ: ಬಸ್‍ನಲ್ಲಿ ಕಾಣಿಸ್ತು ಬೆಂಕಿ ಕಿಡಿ – 1 ಕಿಮೀ ಹಿಂಬಾಲಿಸಿ ಬಂದು 70 ಪ್ರಯಾಣಿಕರ ಜೀವ ಉಳಿಸಿದ ಬೈಕ್ ಸವಾರ

    ಅತ್ತ ದೂರದಲ್ಲಿ ರೈಲು ಬರುವುದನ್ನು ಗಮನಿಸಿದ್ದಾರೆ. ತಕ್ಷಣ ಇಬ್ಬರು ತಮ್ಮ ಶರ್ಟ್ ಬಿಚ್ಚಿ ರೈಲಿನ ಮುಂದೆ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ. ಇದನ್ನು ನೋಡಿದ ರೈಲು ಸಿಬ್ಬಂದಿ ತಕ್ಷಣ ಬ್ರೇಕ್ ಹಾಕಿದ್ದಾರೆ. ರೈಲು ಸರಿಯಾಗಿ ಮರದ ಹತ್ತಿರವೇ ಬಂದು ನಿಂತಿದೆ. ಒಂದು ವೇಳೆ ಯುವರಿಬ್ಬರು ಈ ಸಾಹಸ ಮಾಡಿಲ್ಲ ಎಂದಿದ್ದರೆ, ರೈಲಿನಲ್ಲಿದ್ದ ಅಷ್ಟು ಪ್ರಯಾಣಿಕರಿಗೂ ಅಪಾಯವಾಗುವ ಸಾಧ್ಯತೆ ಇತ್ತು.

    ಈ ರೈಲಿನಲ್ಲಿ 1,200 ಜನರು ಪ್ರಯಾಣ ಮಾಡುತ್ತಿದ್ದರು. ಆದರೆ ಯುವಕರಿಬ್ಬರು ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ರಿಯಾಜ್ ಹಾಗೂ ತೋಫಿಕ್ ಸಾಹಸದ ಬಗ್ಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರಿಬ್ಬರಿಗೆ ಶೌರ್ಯ ಪ್ರಶಸ್ತಿ ಕೊಡಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿ ರಸ್ತೆಗೆ ಉರುಳಿ ಬಿತ್ತು ಬೃಹತ್ ಮರ

    ಹುಬ್ಬಳ್ಳಿ ರಸ್ತೆಗೆ ಉರುಳಿ ಬಿತ್ತು ಬೃಹತ್ ಮರ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ಅವಾಂತರ ಸೃಷ್ಟಿಯಾಗಿದೆ.

    ಈ ಘಟನೆ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್‍ನ ಬಳಿ ನಡೆದಿದೆ. ವಿದ್ಯುತ್ ಪ್ರವಹಿಸುತ್ತಿದ್ದ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮುಂಜಾಗ್ರತವಾಗಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.

    ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಕಂಬಗಳು ನೆಲಕ್ಕೆ ಉರುಳಿತ್ತು. ಪಾಲಿಕೆ ಸಿಬ್ಬಂದಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಧರೆಗುರುಳಿದ ಮರ, ಕುಸಿದ ಗುಡ್ಡ

    ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಧರೆಗುರುಳಿದ ಮರ, ಕುಸಿದ ಗುಡ್ಡ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿಗರು ತತ್ತರಿಸಿದ್ದಾರೆ. ಇತ್ತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಬೃಹತ್ ಮರಗಳು, ರಸ್ತೆ ಬದಿಯ ಗುಡ್ಡಗಳು ಧರೆಗುರುಳಿದ್ದು, ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

    ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರ ಹಾಂದಿ ಬಳಿ ಬೃಹತ್ ಮರವೊಂದು ರಸ್ತೆ ಬಿದ್ದ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಡ್ಡ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಭಾನುವಾರವಾದ್ದರಿಂದ ಸಾವಿರಾರು ಪ್ರವಾಸಿಗರು ಗಿರಿಭಾಗ ಮತ್ತು ದತ್ತಪೀಠಕ್ಕೆ ಬಂದಿದ್ದರು. ಆದರೆ ಮಾರ್ಗ ಮಧ್ಯೆ ಅಂದರೆ ಚಿಕ್ಕಮಗಳೂರಿನ ಕೈಮರ ಸಮೀಪ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ಗಿರಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಮತ್ತು ಸ್ಥಳಿಯರು ಪರದಾಟ ಮಾಡಿದ್ದಾರೆ.

    ಕುದುರೆಮುಖ, ಕಳಸದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಕಳೆದ 40 ದಿನದಲ್ಲಿ 12 ಬಾರಿ ಮುಳುಗಿರುವ ಈ ಸೇತುವೆ ಇದೀಗ 13ನೇ ಬಾರಿ ಮುಳುಗುವ ಸಾಧ್ಯತೆ ಇದೆ. ಭದ್ರೆಯ ಒಡಲಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಹೇರೂರು ಬಳಿಯೂ ಗುಡ್ಡ ಕುಸಿದಿದ್ದು, ಹೇರೂರು-ಬಸರಿಕಟ್ಟೆ ಮಾರ್ಗ ಕೂಡ ಬಂದ್ ಆಗಿದೆ. ಇತ್ತ ಸುರಿಯುತ್ತಿರುವ ಮಳೆ ಕಾರ್ಯಚರಣೆಗೂ ಅಡ್ಡಿಯುಂಟು ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕತ್ತರಿಸಿದ ಮಹಿಳಾ ಅಧಿಕಾರಿ!

    ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕತ್ತರಿಸಿದ ಮಹಿಳಾ ಅಧಿಕಾರಿ!

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ ಕಾರಣ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಇದನ್ನು ಮಹಿಳಾ ಅಧಿಕಾರಿಯೊಬ್ಬರು ಸ್ವತಃ ತಾವೇ ಕತ್ತರಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ತಾಲೂಕಿನ ಕೊಂತನಮನೆ ಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಅಧಿಕಾರಿ ಕವಿತಾ ಅವರು ಅನಾರೋಗ್ಯ ಪೀಡಿತ ತಮ್ಮ ತಂದೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಅವರು ಹೋಗುವ ರಸ್ತೆ ಮಧ್ಯೆ ಭಾರೀ ಗಾತ್ರದ ಮರವೊಂದು ಬಿದ್ದಿತ್ತು. ಅದನ್ನು ಕಾರ್ಮಿಕರು ಕತ್ತರಿಸುತ್ತಿರುವುದು ಕಂಡಿದೆ.

    ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕವಿತಾ ಅವರು ಕೂಡಲೇ ಕಾರಿನಿಂದ ಇಳಿದು ಗರಗಸವನ್ನು ಹಿಡಿದು ತಾವೂ ಕೂಡ ಕೆಲಸ ಮಾಡಿ ಮರವನ್ನು ಪಕ್ಕಕ್ಕೆ ಹಾಕಿದ್ದಾರೆ. ಬಳಿಕ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಈ ಕುರಿತು ಕವಿತಾ ಅವರು ಈ ಸಮಸ್ಯೆಗಳನ್ನು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಕವಿತಾ ಅರಕಲಗೂಡು ಪಟ್ಟಣ ಪಂಚಾಯಿತಿಯ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಜನಪರ ಕಾಳಜಿಯಿಂದಾಗಿ ಚಿರಪರಿಚಿತ ಅಧಿಕಾರಿಯಾಗಿದ್ದಾರೆ.

  • ನಾಯಿಗಳಿಗೆ ಹೆದರಿ ಮರವೇರಿದ ಚಿರತೆ

    ನಾಯಿಗಳಿಗೆ ಹೆದರಿ ಮರವೇರಿದ ಚಿರತೆ

    ಮೈಸೂರು: ನಾಯಿಗಳಿಗೆ ಹೆದರಿ ಚಿರತೆಯೊಂದು ಮರವೇರಿ ಕುಳಿತ ಘಟನೆ ಜಿಲ್ಲೆ ಹುಣಸೂರಿನ ಕಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಕಳ್ಳಿಕೊಪ್ಪಲು ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ನೋಡಿದ ನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ನಾಯಿಗಳಿಗೆ ಹೆದರಿದ ಚಿರತೆ ಮರವೇರಿ ಕುಳಿತಿದೆ. ಈ ಬಗ್ಗೆ ಸ್ಥಳಿಯರು ಅರಣ್ಯ ಅಧಿಕಾರಿಗಳಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಬಲೆ ಬೀಸಿ ಬಂಧಿಸಿದ್ದಾರೆ. ಗ್ರಾಮದಲ್ಲಿ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

  • ಭಾರೀ ಮಳೆಗೆ ನದಿಯಂತಾದ ರಸ್ತೆ- ಧರೆಗುರುಳಿದ ಮರ, ವಿದ್ಯುತ್ ಕಂಬಗಳು

    ಭಾರೀ ಮಳೆಗೆ ನದಿಯಂತಾದ ರಸ್ತೆ- ಧರೆಗುರುಳಿದ ಮರ, ವಿದ್ಯುತ್ ಕಂಬಗಳು

    ರಾಮನಗರ/ವಿಜಯಪುರ: ಕೆಲವು ದಿನಗಳಿಂದ ಪ್ರತಿದಿನ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಜನರ ಜೀವನ ಅಸ್ತವ್ಯಸ್ಥಗೊಂಡಿದೆ.

    ರಾಮನಗರ ತಾಲೂಕಿನ ಹುಚ್ಚಮ್ಮನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ಗಾಳಿ ಸಹಿತ ಮಳೆಯಾಗಿದ್ದು, ಎಲ್ಲೆಡೆ ಮರಗಳು ಮತ್ತು ವಿದ್ಯುತ್ ಧರೆಗುರುಳಿವೆ. ಇತ್ತ ಗಾಳಿಗೆ ಮನೆ ಹಾಗೂ ದನದ ಕೊಟ್ಟಿಗೆ ಶೀಟುಗಳು ಹಾರಿ ಹೋಗಿವೆ. ಮಳೆಯಿಂದ ಸುಮಾರು 20 ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

    ಇನ್ನು ವಿಜಯಪುರ ಸಿಂದಗಿ ತಾಲೂಕಿನಲ್ಲಿ ನಸುಕಿನ ಜಾವದಲ್ಲೆ ಧಾರಾಕಾರ ಮಳೆ ಆರಂಭವಾಗಿದೆ. ಸತತ ಎರಡು ಗಂಟೆಗಳಿಂದ ಮಳೆ ಸುರಿಯುತ್ತಿದೆ. ಮಳೆಯಿಂದ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಹಳ್ಳದಂತೆ ನೀರು ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಪಡುತ್ತಿದ್ದಾರೆ.

  • ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

    ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

    ರಾಮನಗರ: ಭಾರೀ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರವೊಂದು ಮುರಿದು ಬಿದ್ದ ಕಾರಣ 2 ಗಂಟೆಗಳ ಕಾಲ ಚಾಮುಂಡಿ ಎಕ್ಸ್ ಪ್ರೆಸ್ ರೈಲು ಕೆಟ್ಟು ನಿಂತ ಘಟನೆ ರಾಮನಗರ ತಾಲೂಕಿನ ಕೆಂಗಲ್ ಸಮೀಪ ಬಳಿ ನಡೆದಿದೆ.

    ರೈಲು ಮಾರ್ಗದ ಪವರ್ ಲೈನ್ ಮೇಲೆ ನೀಲಗಿರಿ ಮರದ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಚಾಮುಂಡಿ ಎಕ್ಸ್ ಪ್ರೆಸ್ ಮೇಲೆ ಸಹ ಕೊಂಬೆ ಬಿದ್ದಿದೆ. ಪರಿಣಾಮ ರೈಲಿನ ಹೆಡ್ ಲೈಟ್ ಒಡೆದು ಹೋಗಿದ್ದು, ರೈಲಿನ ಚಕ್ರಗಳ ನಡುವೆ ಪವರ್ ಲೈನ್ ತುಂಡಾಗಿ ಬಿದ್ದಿದೆ.

    ಈ ಕುರಿತು ಮಾಹಿತಿ ಪಡೆದ ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ದುರಸ್ಥಿ ಕಾರ್ಯ ಮಾಡಿದ್ದಾರೆ. ಆದರೆ ದುರಸ್ಥಿ ಕಾರ್ಯ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆದ್ದಾರಿಗೆ ನಡೆದು ಬಂದು ಇತರೇ ವಾಹನಗಳ ಮೂಲಕ ಪ್ರಯಾಣ ಮುಂದುವರೆಸಿದರು.

  • ತಡರಾತ್ರಿ ಬಿರುಗಾಳಿ ಮಳೆ ರೌದ್ರಾವತಾರ – ಉಡುಪಿ ಜನಜೀವನ ಅಸ್ತವ್ಯಸ್ಥ

    ತಡರಾತ್ರಿ ಬಿರುಗಾಳಿ ಮಳೆ ರೌದ್ರಾವತಾರ – ಉಡುಪಿ ಜನಜೀವನ ಅಸ್ತವ್ಯಸ್ಥ

    ಉಡುಪಿ: ಭಾನುವಾರ ತಡರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಗುಡುಗು ಸಿಡಿಲಿನಿಂದ ಕೂಡಿದ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಭಾರೀ ಗಾಳಿಗೆ ವಿದ್ಯುತ್ ಕಂಬಗಳೂ ಬಿದ್ದಿದೆ. ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.

    ಶಿರಿಬೀಡು ಸಮೀಪ ಕೆಲವು ಮನೆಗಳಿಗೆ ನೀರು ನುಗ್ಗಿದೆ. ದೊಡ್ಡಣಗುಡ್ಡೆಯಲ್ಲಿ ನೂರಾರು ಮರಗಳು ರಸ್ತೆಗೆ ಬಿದ್ದಿದ್ದು ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ. ತಡರಾತ್ರಿಯ ಬಿರುಗಾಳಿ ಮಳೆ ರೌದ್ರಾವತಾರ ತೋರಿತ್ತು. ಉಡುಪಿಯ ಜನತೆ ಬಂದ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬಂದ್ ಗೆ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದರೂ, ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿವೆ.

    ಬ್ರಹ್ಮಗಿರಿ, ಅಂಬಾಗಿಲುವಿನಲ್ಲಿ ಮರಗಳು ಉರುಳಿದ್ದು, ಟ್ರಾನ್ಸ್ ಫಾರ್ಮರ್ ಕೂಡ ರಸ್ತೆಗೆ ಉರುಳಿದೆ. ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಿಲ್ಲೆಯಲ್ಲಿ ಉರುಳಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆಯಿಂದ ಮೆಸ್ಕಾಂ ಸಿಬ್ಬಂದಿಗಳು ಪರದಾಟ ನಡೆಸುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಸಿಡಿಲಿಗೆ ಕ್ಷಣಾರ್ಧದಲ್ಲಿ ಮರ ಭಸ್ಮ!

    ಬೆಂಗ್ಳೂರಲ್ಲಿ ಸಿಡಿಲಿಗೆ ಕ್ಷಣಾರ್ಧದಲ್ಲಿ ಮರ ಭಸ್ಮ!

    ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಸುತ್ತಮುತ್ತ ಸಂಜೆ ವೇಳೆಗೆ ಭರ್ಜರಿ ಮಳೆಯಾಗುತ್ತಿದೆ.

    ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮರವೊಂದು ಭಸ್ಮವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದ ಅಂಬೇಡ್ಕರ್ ಕಾಲೋನಿ ಬಳಿ ಈ ಘಟನೆ ಸಂಭವಿಸಿದೆ.

    ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಇದೇ ಸಂದರ್ಭದಲ್ಲಿ ಸಾಕಮ್ಮ ಮನೆಯ ಬಳಿ ಸಿಡಿಲು ಬಡಿದಿದೆ. ತಕ್ಷಣ ಬೆಂಕಿ ಹೊತ್ತಿಕೊಂಡು ಮರ ಸಂಪೂರ್ಣ ಭಸ್ಮವಾಗಿದೆ. ಈ ದೃಶ್ಯ ಪಕ್ಕದ ಅಂಬರೀಶ್ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಅವಘಡದಿಂದ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಸದ್ಯ ಸಿಡಿಲು ಬಡಿದ ಮರ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿರೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.