Tag: wonder la

  • ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್

    ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್

    ಬೆಂಗಳೂರು: ಇಂದು ದೇಶಾದ್ಯಂತ ಗಣೇಶ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ವಂಡರ್ ಲಾ ಈ ಬಾರಿ ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದೆ. ಇದನ್ನೂ ಓದಿ:  ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    Wonder La

    ಹೌದು, ಗಣೇಶ ಚತುರ್ಥಿ ದಿನದ ಅಂಗವಾಗಿ ವಂಡರ್ ಲಾ ವತಿಯಿಂದ ವಿಶೇಷ ಕೊಡುಗೆ ನೀಡಲಾಗಿದೆ. ಭಗವಾನ್ ಶ್ರೀ ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರು ನೀವು ಇಟ್ಟುಕೊಂಡಿದ್ದರೆ, ಅವರಿಗೆ ಸೆಪ್ಟೆಂಬರ್ 10ರ ಗಣೇಶ ಹಬ್ಬದಂದು ಉಚಿತ ಪಾಸ್ ನೀಡುತ್ತಿದೆ. ಇಂಥ 100 ಪಾಸ್ ನೀಡಲು ನಿರ್ಧರಿಸಿದೆ. ಇದನ್ನೂ ಓದಿ:  6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    Wonder La

    ಶ್ರೀ ಗಣೇಶನ ವಿವಿಧ ಹೆಸರು ಹೊಂದಿರುವ ಜನರು ವಂಡರ್ ಲಾಗೆ ನೇರವಾಗಿ ಭೇಟಿ ನೀಡಿ ಉಚಿತ ಪಾಸ್ ಪಡೆಯಬಹುದು. ಈ ಕೊಡುಗೆ ಪಡೆಯಲು ಅರ್ಹರಾಗಿರುವವರು ನಿಮ್ಮ ಹೆಸರನ್ನು ಸೂಚಿಸುವ ಯಾವುದಾದರೂ ಗುರುತಿನ ಚೀಟಿ ತರುವುದು ಕಡ್ಡಾಯ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 080-37230333, 080-35073966.

  • ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಬೆಂಗಳೂರು: ಕೋವಿಡ್‍ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಗಳಿಗಾಗಿ (ಕೋವಿಡ್ ಏಂಜಲ್ಸ್) ವಂಡರ್‍ಲಾ ಹಾಲಿಡೇಸ್ ಗೌರವಾರ್ಥವಾಗಿ ಉಚಿತ ವಂಡರ್‍ಲಾ ಪಾರ್ಕ್ ಪಾಸ್ ನೀಡಲು ಮುಂದಾಗಿದೆ.

    ವೈದ್ಯರು, ನರ್ಸ್ ಗಳು, ಸಹಾಯಕ ಸಿಬ್ಬಂದಿ, ಮಾಧ್ಯಮ ವರದಿಗಾರರು, ಪೊಲೀಸರು, ಸ್ಮಶಾನದಲ್ಲಿ ಕೆಲಸ ಮಾಡುವವರು, ಆಶಾ ಕಾರ್ಯಕರ್ತೆಯರು ಈ ಕೊಡುಗೆಗೆ ಅರ್ಹರಾಗಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರಿಗೂ ಸಹ ಉಚಿತ ಪಾಸ್ ನೀಡಲು ನಿರ್ಧರಿಸಿದೆ. ಈ ಉಚಿತ ಪಾಸ್ ಒಟ್ಟು 1,500 ಕೋವಿಡ್ ಏಂಜಲ್ಸ್‍ಗಳು ಹಾಗೂ ಅವರ ಕುಟುಂಬವೂ ಸೇರಿದಂತೆ ಒಟ್ಟು 6 ಸಾವಿರ ಮಂದಿಗೆ ಸಿಗಲಿದೆ. ಜೊತೆಗೆ ಭೋಜನ, ಚಹಾ ಹಾಗೂ ಎಲ್ಲಾ ರೈಡ್‍ಗಳ ಬಳಕೆಗೂ ಉಚಿತ ಅವಕಾಶವಿರಲಿದೆ.

    ಇದರ ಉಪಯೋಗ ಪಡೆಯಲು ಅರ್ಹರು http://www.wonderla.com ವಂಡರ್‍ಲಾ ವೆಬ್‍ಸೈಟ್‍ನಲ್ಲಿ ಭೇಟಿ ನೀಡಬಹುದು. ಅಥವಾ ತಮ್ಮ ಸುತ್ತಮುತ್ತಲು ಇರುವ ಈ ವಾರಿಯರ್ಸ್‍ಗಳ ಕೆಲಸಗಳನ್ನು ಎತ್ತಿ ತೋರಿಸುವ ವಿಡಿಯೋ ಹಾಗೂ ಫೋಟೋಗಳನ್ನು @wonderla_in ಅಥವಾ wonderla @ facebook.com/ Wonderla ಫೇಸ್‍ಬುಕ್ ಪೇಜ್‍ಗೆ ಟ್ಯಾಗ್ ಮಾಡಬಹುದು. ಇದನ್ನೂ ಓದಿ: ಐವರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ 2021 ಕಿರೀಟ

    ಈ ಕೊಡುಗೆಯು ಆಗಸ್ಟ್ 2ರಿಂದ 8ರವರೆಗೆ ಇರಲಿದ್ದು, ಈ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ 08037230333 ಮತ್ತು 080 35073966 ಇಲ್ಲಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ 1500 ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ (6000 ಜನ) ಉಚಿತ ಪಾಸ್ ಜೊತೆಗೆ ಇತರೆ ಸೌಲಭ್ಯ ಹಾಗೂ ಗೌರವಗಳು ಸಲ್ಲಲಿದೆ.