Tag: Women’s World Cup

  • ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್‍’ನಿಂದ ಭಾರತ ತಂಡ ಮನೆಗೆ

    ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್‍’ನಿಂದ ಭಾರತ ತಂಡ ಮನೆಗೆ

    ಕ್ರೈಸ್ಟ್ ಚರ್ಚ್: ಮಹಿಳಾ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಎಡವಿದೆ. ಕೊನೆಯ ಓವರ್‌ನಲ್ಲಿ ಎಸೆದ ಆ ಒಂದು ನೋ ಬಾಲ್‍ನಿಂದಾಗಿ ಭಾರತ ಮಹಿಳಾ ತಂಡ ಪಂದ್ಯವನ್ನು ಕೈ ಚೆಲ್ಲಿ ಟೂರ್ನಿಯಿಂದ ಕಿಕ್ ಔಟ್ ಆಗಿದೆ.

     

    ಕೊನೆಯ ಓವರ್‌ನಲ್ಲಿ ಏನಾಯಿತು:
    ಕೊನೆಯ ಬಾಲ್ ವರೆಗೂ ರೋಚಕತೆಯಿಂದ ಕೂಡಿದ ಪಂದ್ಯದ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಟೀಂ ಇಂಡಿಯಾ ಪರ ಅನುಭವಿ ಬೌಲರ್ ದೀಪ್ತಿ ಶರ್ಮಾ ಕೊನೆಯ ಓವರ್ ಎಸೆಯಲು ಮುಂದಾದರು. ಆಫ್ರಿಕಾ ಪರ ಕೊನೆಯ ಓವರ್‌ನ ಮೊದಲ ಎಸೆತ ಎದುರಿಸಿದ ತ್ರಿಶಾ ಚೆಟ್ಟಿ 1 ರನ್ ಓಡಿದರು. ಎರಡನೇ ಎಸೆತದಲ್ಲಿ ಮಿಗ್ನಾನ್ ಡು ಪ್ರೀಜ್, ಲಾಂಗ್ ಆನ್ ಅತ್ತ ಹೊಡೆದು 2 ರನ್ ಕದಿಯಲು ಮುಂದಾದರು ಈ ವೇಳೆ ಹರ್ಮನ್‍ಪ್ರೀತ್ ಕೌರ್ ಕೈ ಸೇರಿದ ಚೆಂಡಿನಿಂದಾಗಿ, ತ್ರಿಶಾ ಚೆಟ್ಟಿ ರನೌಟ್ ಆಗಿ ಹೊರನಡೆದರು. ಕೊನೆಯ ನಾಲ್ಕು ಎಸೆತದಲ್ಲಿ 5 ರನ್ ಬೇಕಾಗಿತ್ತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತು. ಕೊನೆಯ ಎರಡು ಎಸೆತದಲ್ಲಿ 3 ರನ್ ಅವಶ್ಯಕತೆ ಇತ್ತು. 5ನೇ ಎಸೆತ ಎಸೆದ ದೀಪ್ತಿ ಶರ್ಮಾ ನೋ ಬಾಲ್ ಮಾಡಿದರು. ಇದರಿಂದ ಫ್ರೀ ಹಿಟ್ ಸಹಿತ 2 ರನ್‍ಗಳನ್ನು ಆಫ್ರಿಕಾ ಬ್ಯಾಟರ್‌ಗಳು ಕಸಿದರು. ಕೊನೆಯ 1 ಬಾಲ್‍ಗೆ 1 ರನ್ ಅವಶ್ಯಕತೆ ಇದ್ದಾಗ ಸ್ಟ್ರೈಕ್‌ನಲ್ಲಿದ್ದ ಮಿಗ್ನಾನ್ ಡು ಪ್ರೀಜ್ ಮಿಡ್ ವಿಕೆಟ್ ಮೇಲೆ ಹೊಡೆದು ಒಂಟಿ ರನ್ ಓಡಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋಲು – ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಿಂದ ಭಾರತ ಔಟ್

    https://twitter.com/rishabhgautam81/status/1508001031598194693

    ಈ ಮೂಲಕ ಆ ಒಂದು ನೋ ಬಾಲ್‍ನಿಂದಾಗಿ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು. ಇತ್ತ ಭಾರತದ ಸೋಲಿಗಾಗಿ ಕಾಯುತ್ತಿದ್ದ ವೆಸ್ಟ್ ಇಂಡೀಸ್, ಆಫ್ರಿಕಾ ಜೊತೆ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತು. ಇದನ್ನೂ ಓದಿ: ಧೋನಿ ಅರ್ಧಶತಕದಾಟ ವ್ಯರ್ಥ – ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಜಯ

    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 274 ರನ್‍ಗಳ ಗುರಿಯನ್ನು ಆಫ್ರಿಕಾಗೆ ನೀಡಿತ್ತು. ತಂಡದ ಬೃಹತ್ ಮೊತ್ತಕ್ಕೆ ಬ್ಯಾಟರ್‌ಗಳಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಬಳಿಕ ಭಾರತ ತಂಡದ ಬೌಲರ್‌ಗಳು ಗೆಲುವಿಗಾಗಿ ಹೋರಾಡಿದರೂ ಕೊನೆಯ ನಿಮಿಷದಲ್ಲಿ ಗೆಲುವು ಆಫ್ರಿಕಾಗೆ ದಕ್ಕಿತು.

  • ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ವೆಲ್ಲಿಂಗ್ಟನ್: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಬೃಹತ್ ದಾಖಲೆ ಬರೆದಿದ್ದಾರೆ.

    ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ನಡೆದ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಿಥಾಲಿ ಈಗ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ನಾಯಕಿಯಾಗಿ 23 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಈ ದಾಖಲೆಯಿಂದಾಗಿ ಅವರು, ಆಸ್ಟ್ರೇಲಿಯಾದ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ದಾಖಲೆಯನ್ನು ಹಿಂದಿಕ್ಕಿದರು. ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದೊಂದಿಗೆ ಮಿಥಾಲಿ ವಿಶ್ವಕಪ್‍ನಲ್ಲಿ 24ನೇ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನೊಂದಿಗೆ ಮಿಥಾಲಿ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಇದುವರೆಗೆ ನಡೆದ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಕಳೆದುಕೊಂಡು ಒಂದು ಪಂದ್ಯವನ್ನು ಗೆದ್ದಿದೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಭಾರತವು ಈವರೆಗೆ ಆಡಿದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಆದರೆ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 62 ರನ್‍ಗಳಿಂದ ಭಾರೀ ಅಂತರದಲ್ಲಿ ಸೋಲನುಭವಿಸಿತು. ನ್ಯೂಜಿಲೆಂಡ್ 50 ಓವರ್‍ಗಳಲ್ಲಿ 9 ವಿಕೆಟ್‍ಗೆ 260 ರನ್ ಗಳಿಸಿ ಭಾರತಕ್ಕೆ 261 ರನ್‍ಗಳ ಗುರಿಯನ್ನು ನೀಡಿತ್ತು. ಆಮಿ ಸ್ಯಾಟರ್ಥ್‍ವೈಟ್ 84 ಎಸೆತಗಳಲ್ಲಿ 75 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ರನ್‍ಗಳನ್ನು ಗಳಿಸಿದ್ದರು. ನಂತರದಲ್ಲಿ ಅಮೆಲಿಯಾ ಕೆರ್ 64 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

    ಭಾರತದ ಬೌಲಿಂಗ್ ವಿಭಾಗದ ಪರ ಪೂಜಾ ವಸ್ತ್ರಕರ್ ನಾಲ್ಕು ವಿಕೆಟ್ ಪಡೆದು ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದೇ ವೇಳೆ ರಾಜೇಶ್ವರಿ ಗಾಯಕ್ವಾಡ್ ಕೂಡ ಎರಡು ವಿಕೆಟ್ ಪಡೆದಿದ್ದರು. 261 ರನ್‍ಗಳ ಗುರಿ ಬೆನ್ನತ್ತಿದ ಭಾರತ 46.4 ಓವರ್‍ಗಳಲ್ಲಿ 198 ರನ್‍ಗಳಿಗೆ ಆಲೌಟಾಯಿತು. ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ಹರ್ಮನ್‍ಪ್ರೀತ್ ಕೌರ್ ಅವರು 63 ಎಸೆತಗಳಲ್ಲಿ 71 ರನ್ ಗಳಿಸಿದ ಹೊರತಾಗಿಯೂ ಭಾರತವು ಗೆಲುವನ್ನು ಸಾಧಿಸಲು ವಿಫಲವಾಯಿತು. ಇದೇ ವೇಳೆ ಮಿಥಾಲಿ 56 ಎಸೆತಗಳಲ್ಲಿ 31 ರನ್ ಗಳಿಸಲು ಯಶಸ್ವಿಯಾಗಿದ್ದರು.

  • ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಮೊದಲ ಪಂದ್ಯದಲ್ಲೇ ಬದ್ಧ ವೈರಿ ಪಾಕಿಸ್ತಾನದ ವಿರುದ್ಧದ ಭಾರತ 107 ರನ್ ಅಂತರದಿಂದ ಜಯಗಳಿಸಿದೆ‌.

    ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಗ್ ಮಾಡಿದ ಮಾಡಿದ ಭಾರತ 50 ಓವರ್‌ ನಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು. 225 ರನ್‍ಗಳ ಬೃಹತ್ ಗುರಿಯನ್ನು ಪಡೆದ ಪಾಕಿಸ್ತಾನ ಕೇವಲ 137 ರನ್‍ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಶೆಫಾಲಿ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಸ್ಮೃತಿ ಮಂಧಾನ, ಸ್ನೇಹಾ ರಾಣಾ, ಪೂಜಾ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ:  ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಭಾರತದ ನೀಡಿದ 245 ರನ್‍ಗಳ ಬೆನ್ನೆತ್ತಿದ ಪಾಕ್‍ಗೆ ಸಿದ್ರ ಅಮಿನ್(30) ಉತ್ತಮ ಆರಂಭ ಒದಗಿಸಿದರು. ಆದರೆ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಭಾರತದ ದಾಳಿಗೆ ಬೆಚ್ಚಿದ ಪಾಕ್ ತನ್ನೆಲ್ಲಾ ವಿಕೆಟ್‍ನ್ನು ಕಳೆದುಕೊಂಡು ಸೋಲನುಭವಿಸಿತು. ಇದನ್ನೂ ಓದಿ: ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ

  • ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಐಸಿಸಿ ವಿರುದ್ಧ ಮೈಕಲ್ ವಾನ್ ಗರಂ- ‘ಇದು ನಿಮ್ಮ ಕರ್ಮ’ ಎಂದ ನೆಟ್ಟಿಗರು

    ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಗಳ ವೇಳಾಪಟ್ಟಿಯನ್ನು ಬಹು ಎಚ್ಚರಿಕೆಯಿಂದ ಪ್ಲಾನ್ ಮಾಡಲಾಗುತ್ತದೆ. ಆದರೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮಾತ್ರ ಭಿನ್ನವಾಗಿದೆ. ‘ಮಾಡು ಇಲ್ಲವೇ ಮಡಿ’ ಎಂಬತ್ತಿರುವ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ರಿಸರ್ವ್ ಡೇ ಶೆಡ್ಯೂಲ್ ಮಾಡದಿರುವುದು ಸದ್ಯ ವಿಮರ್ಶೆಗೆ ಕಾರಣವಾಗಿದೆ.

    ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದ 2 ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯ ಆರಂಭವಾಗದೆ ರದ್ದಾಗಿವೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯ ಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ನೇರ ಫೈನಲ್ ಪ್ರವೇಶದ ಅವಕಾಶ ಪಡೆಯಿತು. ಇಂಗ್ಲೆಂಡ್ ತಂಡದ ರಿಸರ್ವ್ ಡೇ ಇಲ್ಲದ ಕಾರಣ ಟೂರ್ನಿಯಿಂದ ನಿರ್ಗಮಿಸಿತು.

    ಕಳೆದ ವಿಶ್ವಕಪ್‍ನಲ್ಲಿ ರನ್ನರ್ ಅಪ್ ಆಗಿದ್ದ ಇಂಗ್ಲೆಂಡ್ ಈ ಬಾರಿ ಸೆಮಿಸ್‍ಗೆ ತನ್ನ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರಿಂದ ಇಂಗ್ಲೆಂಡ್ ತಂಡದ ಕ್ರಿಕೆಟ್ ಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಐಸಿಸಿ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಹಲವರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡುವುದು ಜೀವನದ ಕನಸಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾಕೌಟ್ ಪಂದ್ಯದಲ್ಲಿ ಆಡುವುದು ಆಟಗಾರರಿಗೆ ಹೆಮ್ಮೆಯ ಸಂಗತಿ. ಇಂತಹ ಪಂದ್ಯಗಳಿಗೆ ರಿಸರ್ವ್ ಡೇ ಇಲ್ಲ ಎಂದರೇ ಅರ್ಥವಿರುವುದಿಲ್ಲ ಎಂದು ಐಸಿಸಿ ವಿರುದ್ಧ ಕಿಡಿಕಾರಿದ್ದರು.

    ಮೈಕಲ್ ವಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೆಲ ನೆಟ್ಟಿಗರು ವಾನ್‍ರನ್ನು ಟ್ರೋಲ್ ಮಾಡಿದ್ದಾರೆ. ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಬೌಂಡರಿ ನಿಯಮದ ಅನ್ವಯ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಅಂದು ಬೌಂಡರಿ ನಿಯಮದೊಂದಿಗೆ ಗೆಲುವು ಪಡೆದಿದ್ದ ನಿಮಗೆ ಇಂದು ತಕ್ಕ ಶಾಸ್ತಿ ಆಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

    ನೆಟ್ಟಿಗರ ಟ್ರೋಲ್‍ಗೆ ಪ್ರತಿಕ್ರಿಯೆ ನೀಡಿರುವ ವಾನ್, ನೀವು ಇದನ್ನು ಕರ್ಮ ಎಂದು ಪರಿಗಣಿಸುವುದಾದರೆ, ಇಂಗ್ಲೆಂಡ್ ತಂಡ ಅಂದು ಪಂದ್ಯದಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶನ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಯಾವ ಆಟಗಾರ್ತಿಯೂ ತಮ್ಮ ಕೌಶಲ್ಯಗಳನ್ನು ಪ್ರದರ್ಶನ ಮಾಡಲು ಅವಕಾಶವೇ ಲಭಿಸಿಲ್ಲ. ಏನೇ ಆಗಲಿ ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಬ್ಯಾಟಿಂಗ್ ಆರಂಭಕ್ಕೂ ಮುನ್ನವೇ 10 ರನ್ ಗಳಿಸಿದ ಟೀಂ ಇಂಡಿಯಾ – ವಿಡಿಯೋ ನೋಡಿ

    ಬ್ಯಾಟಿಂಗ್ ಆರಂಭಕ್ಕೂ ಮುನ್ನವೇ 10 ರನ್ ಗಳಿಸಿದ ಟೀಂ ಇಂಡಿಯಾ – ವಿಡಿಯೋ ನೋಡಿ

    ಗಯಾನ: ಮಹಿಳೆಯರ ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸುವ ಮೊದಲೇ 10 ರನ್ ಗಳಿಸಿದ ಅಚ್ಚರಿಯ ಘಟನೆ ನಡೆದಿದೆ.

    ವಿಶ್ವಕಪ್ ಟೂರ್ನಿಯ ಭಾನುವಾರ ಇಂಡೋ ಪಾಕ್ ಪಂದ್ಯದಲ್ಲಿ ಅಚ್ಚರಿಯ ಘಟನೆ ನಡೆದಿದ್ದು, ಪಾಕಿಸ್ತಾನದ ತಂಡದ ಮಹಿಳಾ ಆಟಗಾರ್ತಿಯರು ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಸುಲಭ ಜಯ ಪಡೆದಿತ್ತು.

    https://twitter.com/NaaginDance/status/1061914194981773312

    ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಗುರಿ ನೀಡಿತ್ತು. ಆದರೆ ಇನ್ನಿಂಗ್ಸ್ ವೇಳೆ ಪಿಚ್ ಡೇಂಜರ್ ಜೋನ್ ಪ್ರದೇಶದಲ್ಲಿ ಪದೇ ಪದೇ ರನ್ ಓಡುವ ಮೂಲಕ 10 ರನ್ ದಂಡ ಪಡೆದಿದ್ದಾರೆ. ಅಲ್ಲದೇ ಪಾಕ್ ಆಟಗಾರ್ತಿಯರು ಗಳಿಸಿದ್ದ 2 ರನ್ ಕೂಡ ಅವರಿಗೆ ಸಿಗಲಿಲ್ಲ. ಇದಕ್ಕೂ ಮುನ್ನ ಆನ್‍ಫೀಲ್ಡ್ ಅಂಪೈರ್ ಎರಡು ಬಾರಿ ಆಟಗಾರ್ತಿಯರಿಗೆ ಎಚ್ಚರಿಕೆ ನೀಡಿದ ಬಳಿಕವೂ ಎಚ್ಚೆತ್ತು ಕೊಳ್ಳದ ಕಾರಣ ಟೀಂ ಇಂಡಿಯಾಗೆ ಲಾಭವಾಯಿತು.

    ಪಾಕಿಸ್ತಾನದ ಆಟಗಾರ್ತಿಯರು ತಮ್ಮ ಆಶಿಸ್ತಿಗೆ ಸೂಕ್ತ ದಂಡ ತೆತ್ತಿದ್ದು, ಪಂದ್ಯದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕಿ ಜವೆರಿಯಾ ಖಾನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ಪಾಕಿಸ್ತಾನ ತಂಡದ ಆಟಗಾರ್ತಿಯರು ಇಂತಹದ್ದೇ ತಪ್ಪು ಮಾಡಿದ್ದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇದೇ ರೀತಿ ಆಶಿಸ್ತಿನ ವರ್ತನೆ ತೋರಿದ್ದರು.

    ವಿಶ್ವಕಪ್ ಟೂರ್ನಿಯ 8 ಗ್ರೂಪ್ ನಲ್ಲಿರುವ ಟೀಂ ಇಂಡಿಯಾ ಆಡಿರುವ 2 ಪಂದ್ಯಗಳಲ್ಲಿ ಜಯ ಸಾಧಿಸಿ ಮೊದಲ ಸ್ಥಾನದಲ್ಲಿದೆ. ಟೀಂ ಇಂಡಿಯಾ ಟೂರ್ನಿಯಲ್ಲಿ ಮುಂದಿನ ಪಂದ್ಯವನ್ನು ಐರ್ಲೆಂಡ್ ತಂಡದ ವಿರುದ್ಧ ಮಂಗಳವಾರ ಆಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಷ್ಟ್ರಗೀತೆ ಮುಗಿಯುತ್ತಿದಂತೆ ಬಾಲಕಿಯನ್ನು ಹೊತ್ತು ಸಾಗಿದ ಹರ್ಮನ್ ಪ್ರೀತ್ ಕೌರ್ – ವಿಡಿಯೋ ವೈರಲ್

    ರಾಷ್ಟ್ರಗೀತೆ ಮುಗಿಯುತ್ತಿದಂತೆ ಬಾಲಕಿಯನ್ನು ಹೊತ್ತು ಸಾಗಿದ ಹರ್ಮನ್ ಪ್ರೀತ್ ಕೌರ್ – ವಿಡಿಯೋ ವೈರಲ್

    ಗಯಾನ: ವಿಶ್ವ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್, ಪಂದ್ಯ ಆರಂಭ ಮುನ್ನ ರಾಷ್ಟ್ರಗೀತೆ ಗೌರವ ಸಲ್ಲಿಸುವ ಕಾರ್ಯಕ್ರಮದ ವೇಳೆ ಬಾಲಕಿಯನ್ನು ಹೊತ್ತು ಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಶ್ವಕಪ್ ನಲ್ಲಿ ಯಾವುದೇ ಅಂತರಾಷ್ಟ್ರೀಯ ಪಂದ್ಯ ಆರಂಭ ಆಗುವುದಕ್ಕೂ ಮುನ್ನ ಎರಡು ದೇಶಗಳ ರಾಷ್ಟ್ರಗೀತೆ ಗೌರವ ಸಲ್ಲಿಸುವುದು ಸಾಂಪ್ರದಾಯ. ಇದರಂತೆ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗಿತ್ತು. ಆದರೆ ಈ ವೇಳೆ ಆಟಗಾರ್ತಿಯರಿಗೆ ಸ್ವಾಗತ ಕೋರಲು ಆಗಮಿಸಿದ್ದ ಪುಟ್ಟ ಬಾಲಕಿ ಬಿಸಿಲಿನ ತಾಪಕ್ಕೆ ಬಳಲಿದ್ದಳು.

    https://twitter.com/NaaginDance/status/1061651193766662144?

    ತಮ್ಮ ಎದುರು ನಿಂತಿದ್ದ ಬಾಲಕಿ ಬಿಸಿಲಿನ ತಾಪಕ್ಕೆ ಬಳಲಿದ್ದನ್ನು ಗಮನಿಸಿದ ಕೌರ್ ತಕ್ಷಣ ಆಕೆಯನ್ನು ಹೊತ್ತು ಸಾಗಿದರು. ಬಳಿಕ ಮೈದಾನದ ಸಿಬ್ಬಂದಿ ಬಾಲಕಿಯನ್ನು ಪಡೆದರು. ಪಂದ್ಯದ ಆರಂಭದ ವೇಳೆಗೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಬಾಲಕಿಗೆ ಹೀಗಾಗಿದೆ. ಸದ್ಯ ಕೌರ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸುತ್ತಿರುವ ಹರ್ಮನ್ ಪ್ರೀತ್ ಕೌರ್ ಲೀಗ್ ಹಂತದ 2 ಪಂದ್ಯಗಳಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ವೇಗದ ಶತಕದ ದಾಖಲೆ ನಿರ್ಮಿಸಿದ್ದರು. ಅಲ್ಲದೇ ಪಾಕಿಸ್ತಾನ ವಿರುದ್ಧದ ಭಾನುವಾರ ನಡೆದ ಪಂದ್ಯದಲ್ಲೂ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews