Tag: Women’s T20 Challenge

  • ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ಪುಣೆ: ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ನೋವಾಸ್ 4 ರನ್‌ಗಳ ರೋಚಕ ಜಯ ದಾಖಲಿಸಿ ಚಾಂಪಿಯನ್ ಆಗಿದೆ.

    ಗೆಲ್ಲಲು 166 ರನ್ ಗುರಿ ಪಡೆದ ವೆಲಾಸಿಟಿ ಪರ ಲಾರಾ ವೊಲ್ವಾರ್ಡ್ಟ್ ಅಜೇಯ 65 ರನ್‌ (44 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಕೊನೆಯ ಎಸೆತದವರೆಗೆ ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ನಡೆಸಿದರು. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್‌ ನೀಡಲು ವಿಫಲರಾದರು. ಇತರ ಬ್ಯಾಟರ್‌ಗಳನ್ನು ಅಬ್ಬರಿಸಲು ಸೂಪರ್ನೋವಾಸ್ ತಂಡದ ಬೌಲರ್ಸ್ ಅವಕಾಶ ನೀಡಲಿಲ್ಲ. ಸ್ಲಾಗ್‌ ಓವರ್‌ಗಳಲ್ಲಿ ಸಿಮ್ರಾನ್ ಬಹದ್ದೂರ್ ಗೆಲುವಿಗಾಗಿ ಹೋರಾಡಿದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗದೆ ಅಂತಿಮವಾಗಿ ವೆಲಾಸಿಟಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಪೇರಿಸಲಷ್ಟೇ ಶಕ್ತವಾಗಿ ಫೈನಲ್‍ನಲ್ಲಿ ಮುಗ್ಗರಿಸಿತು. ಸೂಪರ್ನೋವಾಸ್ ಪರ ಅಲಾನಾ ಕಿಂಗ್ ಪ್ರಮುಖ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಈ ಬಾರಿ ಮಹಿಳಾ ಟಿ20 ಚಾಲೆಂಲ್‍ಗೆ ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಮೂರು ತಂಡಗಳು ಭಾಗವಹಿಸಿದ್ದವು. ಸೂಪರ್ನೋವಾಸ್‍ಗೆ ಹರ್ಮನ್ ಪ್ರೀತ್ ಕೌರ್, ಟ್ರೈಲ್ಬ್ಲೇಜರ್ಸ್‍ಗೆ ಸ್ಮೃತಿ ಮಂದಾನ ಮತ್ತು ವೆಲಾಸಿಟಿ ತಂಡಕ್ಕೆ ದೀಪ್ತಿ ಶರ್ಮಾ ನಾಯಕಿಯಾಗಿದ್ದರು. ಪುಣೆಯ ಎಮ್‍ಸಿಎ ಮೈದಾನದಲ್ಲಿ ಎಲ್ಲಾ ಪಂದ್ಯಗಳು ನಡೆಯಿತು. ಸೂಪರ್ನೋವಾಸ್ ಮತ್ತು ವೆಲಾಸಿಟಿ ತಂಡಗಳು ಫೈನಲ್‍ನಲ್ಲಿ ಮುಖಾಮುಖಿಯಾಗಿ ಸೂಪರ್ನೋವಾಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ.

    ಈ ಮೊದಲು ಟಾಸ್ ಗೆದ್ದ ವೆಲಾಸಿಟಿ ಎದುರಾಳಿ ತಂಡ ಸೂಪರ್ನೋವಾಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಬ್ಯಾಟರ್ಸ್ ವೆಲಾಸಿಟಿ ಬೌಲರ್‌ಗಳ ಬೆವರಿಳಿಸಿದರು.

    ಆರಂಭಿಕ ಆಟಗಾರ್ತಿ ಪ್ರಿಯಾ ಪುನಿಯಾ 28 ರನ್ (29 ಎಸೆತ, 2 ಸಿಕ್ಸ್), ಡಿಯಾಂಡ್ರಾ ಡಾಟಿನ್ 62 ರನ್ (44 ಎಸೆತ, 1 ಬೌಂಡರಿ, 4 ಸಿಕ್ಸ್) ಮತ್ತು ಹರ್ಮನ್‍ಪ್ರೀತ್ ಕೌರ್ 43 ರನ್ (29 ಎಸೆತ, 1 ಬೌಂಡರಿ, 3 ಸಿಕ್ಸ್) ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 165 ರನ್‍ಗಳ ಉತ್ತಮ ಮೊತ್ತ ಕಲೆಹಾಕಿತು.

  • ಮಹಿಳಾ T20 ಚಾಲೆಂಜ್‍ಗೆ ದೀಪ್ತಿ, ಹರ್ಮನ್‍ಪ್ರೀತ್, ಮಂದಾನ ನಾಯಕಿಯರು – 3 ತಂಡ ಪ್ರಕಟಿಸಿದ ಬಿಸಿಸಿಐ

    ಮಹಿಳಾ T20 ಚಾಲೆಂಜ್‍ಗೆ ದೀಪ್ತಿ, ಹರ್ಮನ್‍ಪ್ರೀತ್, ಮಂದಾನ ನಾಯಕಿಯರು – 3 ತಂಡ ಪ್ರಕಟಿಸಿದ ಬಿಸಿಸಿಐ

    ಮುಂಬೈ: ಐಪಿಎಲ್ ನಡುವೆ ಮಹಿಳಾ ಟಿ20 ಚಾಲೆಂಜ್ ಟೂರ್ನಿಗಾಗಿ ಬಿಸಿಸಿಐ ಮೂರು ತಂಡಗಳನ್ನು ಪ್ರಕಟಿಸಿ ಟೀಂ ಇಂಡಿಯಾದ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾರನ್ನು ನಾಯಕಿರನ್ನಾಗಿ ಆಯ್ಕೆ ಮಾಡಿದೆ.

    ಈ ಬಾರಿ ಟಿ20 ಚಾಲೆಂಜ್‍ಗೆ ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಮೂರು ತಂಡಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಸೂಪರ್ನೋವಾಸ್‍ಗೆ ಹರ್ಮನ್ ಪ್ರೀತ್ ಕೌರ್, ಟ್ರೈಲ್ಬ್ಲೇಜರ್ಸ್‍ಗೆ ಸ್ಮೃತಿ ಮಂದಾನ ಮತ್ತು ವೆಲಾಸಿಟಿ ತಂಡಕ್ಕೆ ದೀಪ್ತಿ ಶರ್ಮಾರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿದೆ. ಮಹಿಳಾ ಟಿ20 ಚಾಲೆಂಜ್ ಮೇ 23 ರಿಂದ 28ರ ವರೆಗೆ ಪುಣೆಯ ಎಮ್‍ಸಿಎ ಮೈದಾನದಲ್ಲಿ ನಡೆಯಲಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ಒಟ್ಟು 12 ಮಂದಿ ಅಂತಾರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. 16 ಸದಸ್ಯರ ಮೂರು ತಂಡಗಳನ್ನು ಅಂತಾರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಮೊದಲ ಪಂದ್ಯ ಸೂಪರ್ನೋವಾಸ್ ಮತ್ತು ಟ್ರೈಲ್ಬ್ಲೇಜರ್ಸ್ ನಡುವೆ ಮೇ 23 ರಂದು ನಡೆಯಲಿದೆ. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಮೇ 24 ರಂದು ಸೂಪರ್ನೋವಾಸ್ ಮತ್ತು ವೆಲಾಸಿಟಿ ನಡುವೆ ನಡೆಯಲಿದ್ದು, 26 ರಂದು ವೆಲಾಸಿಟಿ ತಂಡ ಟ್ರೈಲ್ಬ್ಲೇಜರ್ಸ್ ಎದುರಿಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದೆ.