Tag: Women’s Premier League

  • ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

    ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

    ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನ (Women’s Premier League) ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 16 ವರ್ಷಗಳ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡುವ ಜೊತೆಗೆ ಕೋಟಿ ಕೋಟಿ ಬಹುಮಾನವನ್ನು ಆರ್‌ಸಿಬಿ ಮಹಿಳಾ ತಂಡ (RCB Womens Team) ಬಾಚಿಕೊಂಡಿತು.

    ಅರುಣ್ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಸೋಫಿ ಮೊಲಿನೆಕ್ಸ್‌, ಶ್ರೇಯಾಂಕ ಪಾಟೀಲ್ ಅವರ ಸ್ಪಿನ್‌ ಮೋಡಿಗೆ ನಲುಗಿ 113 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬೌಲಿಂಗ್‌ನಲ್ಲಿ ವಿಕೆಟ್‌ ಪಡೆಯದಿದ್ದರೂ ಕೊನೇ ಓವರ್‌ವರೆಗೂ ಹೋರಾಟ ನಡೆಸಿದ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತು. ನಂತರ ವಿಜೇತ ತಂಡ ಹಾಗೂ ರನ್ನರ್‌ ಅಪ್‌ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.

    ಆರ್‌ಸಿಬಿ ದೋಚಿದ ಬಹುಮಾನದ ಮೊತ್ತ ಎಷ್ಟು?
    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್‌ ಆದ ಆರ್‌ಸಿಬಿ ಮಹಿಳಾ ತಂಡಕ್ಕೆ 6 ಕೋಟಿ ರೂ. ಗಳ ನಗದು ಬಹುಮಾನ ನೀಡಲಾಗಿದೆ. ರನ್ನರ್‌ ಅಪ್ ಪ್ರಶಸ್ತಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತು.

    ಬಹುಮಾನದ ವಿವರ:
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಚಾಂಪಿಯನ್‌): 6 ಕೋಟಿ ರೂ.
    ಡೆಲ್ಲಿ ಕ್ಯಾಪಿಟಲ್ಸ್‌ (ರನ್ನರ್‌ ಅಪ್‌): 3 ಕೋಟಿ ರೂ.
    ಶಫಾಲಿ ವರ್ಮಾ (ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ (ಸಿಕ್ಸರ್‌ ಆಫ್‌ ದಿ ಮ್ಯಾಚ್‌): 1 ಲಕ್ಷ ರೂ.
    ಶಫಾಲಿ ವರ್ಮಾ ( ಸಿಕ್ಸರ್‌ ಆಫ್‌ ದಿ ಸೀಸನ್‌): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್‌ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
    ಎಲಿಸ್‌ ಪೆರ್ರಿ (ಆರಂಜ್‌ ಕ್ಯಾಪ್): 5 ಲಕ್ಷ ರೂ.
    ಶ್ರೇಯಾಂಕಾ ಪಾಟೀಲ್ (ಪರ್ಪಲ್‌ ಕ್ಯಾಪ್‌): 5 ಲಕ್ಷ ರೂ.
    ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

  • ಕರ್ನಾಟಕದ ಯುವ ಆಟಗಾರ್ತಿ 1.3 ಕೋಟಿಗೆ ಸೇಲ್‌ – ಇತಿಹಾಸ ನಿರ್ಮಿಸಿದ ವೃಂದಾ ದಿನೇಶ್‌

    ಕರ್ನಾಟಕದ ಯುವ ಆಟಗಾರ್ತಿ 1.3 ಕೋಟಿಗೆ ಸೇಲ್‌ – ಇತಿಹಾಸ ನಿರ್ಮಿಸಿದ ವೃಂದಾ ದಿನೇಶ್‌

    ದುಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (Women’s Premier League) ಕರ್ನಾಟಕದ (Karnataka) ಯುವ ಆಟಗಾರ್ತಿ ವೃಂದಾ ದಿನೇಶ್‌ (Vrinda Dinesh) ಅವರು 1.3 ಕೋಟಿ ರೂ.ಗೆ ಯುಪಿ ವಾರಿಯರ್ಸ್‌ (UP Warriorz) ತಂಡಕ್ಕೆ ಸೋಲ್ಡ್‌ ಆಗಿದ್ದಾರೆ.

    ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷ ವೃಂದಾ ಇನ್ನೂ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಹೀಗಿದ್ದರೂ ದೇಶೀಯ ಪಂದ್ಯಗಳಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಗಮನಿಸಿ ಯುಪಿ ತಂಡ ವೃಂದಾ ಅವರನ್ನು ಖರೀದಿಸಿದೆ. ಈ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸದೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಎರಡನೇ ಆಟಗಾರ್ತಿಯಾಗಿ ವೃಂದಾ ದಿನೇಶ್‌ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

     

    ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂ. ಇತ್ತು. ಆದರೆ ಘಟಾನುಘಟಿ ಆಟಗಾರರ್ತಿಯರನ್ನು ಹಿಂದಿಕ್ಕಿ ಭಾರೀ ಮೊತ್ತಕ್ಕೆ ವೃಂದಾ ಈಗ ಮಾರಾಟವಾಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು 2021ರಲ್ಲಿ ಬರೋಡಾ 83 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. ಛತ್ತೀಸ್‌ಗಢದ ವಿರುದ್ಧ ಪಂದ್ಯದಲ್ಲಿ 67 ರನ್‌ ಹೊಡೆದಿದ್ದರು.

    ಮಹಿಳಾ ಹಿರಿಯರ ಏಕದಿನ ಸೀರಿಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು 11 ಇನ್ನಿಂಗ್ಸ್‌ಗಳಿಂದ 477 ರನ್‌ ಹೊಡೆದಿದ್ದರು. ವೃಂದಾ ಎಸಿಸಿ ಎಮರ್ಜಿಂಗ್‌ ಟೀಂ ಕಪ್‌ ಜಯಿಸಿದ ಭಾರತ ಎ ತಂಡದ ಭಾಗವಾಗಿದ್ದರು.

     

  • Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‍ನ (Women’s Premier League) 5 ತಂಡಗಳು 4,699.99 ಕೋಟಿ ರೂ.ಗೆ ಹರಾಜಾಗಿ ದಾಖಲೆ ಬರೆದಿದೆ.

    ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ (IPL) ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ಡೆಲ್ಲಿ ಹಾಗೂ ಲಕ್ನೋ ತಂಡಗಳು ಕಣಕ್ಕಿಳಿಯಲಿವೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಅದಾನಿ ಗ್ರೂಪ್ (Adani Sportsline Pvt Ltd) ದಾಖಲೆಯ ಮೊತ್ತ ನೀಡಿ ಅಹಮದಾಬಾದ್ (Ahmedabad) ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದಾನಿ ಗ್ರೂಪ್ 1,289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸ್‍ನ್ನು ಖರೀದಿಸಿದೆ.

    ಉಳಿದ ಫ್ರಾಂಚೈಸಿಯು 1000 ಕೋಟಿಗಿಂತ ಅಧಿಕ ಬಿಡ್ ಮಾಡಲಿಲ್ಲ. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ (Mumbai) ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು (Bengaluru) ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಜೆಎಸ್‍ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ (Delhi) ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 757 ಕೋಟಿ ರೂ. ನೀಡಿ ಲಕ್ನೋ (Lucknow) ಫ್ರಾಂಚೈಸಿಯನ್ನು ಖರೀದಿಸಲು ಯಶಸ್ವಿಯಾಗಿದೆ. ಈ ಮೂಲಕ ಒಟ್ಟು 4,669.99 ಕೋಟಿ ರೂ.ಗೆ 5 ಫ್ರಾಂಚೈಸ್‍ಗಳು ಹರಾಜಾಗಿವೆ.

    ಈ ಮೂಲಕ 2008ರಲ್ಲಿ ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‍ಗಿಂತಲೂ ಹೆಚ್ಚು ಮೊತ್ತಕ್ಕೆ ಮಹಿಳಾ ಐಪಿಎಲ್ ತಂಡಗಳು ಹರಾಜಾಗಿ ದಾಖಲೆ ಬರೆದುಕೊಂಡಿದೆ. ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‌ನಲ್ಲಿ 8 ಫ್ರಾಂಚೈಸ್‌ಗಳು 2,894 ರೂ. ನೀಡಿ 8 ತಂಡಗಳನ್ನು ಖರೀದಿತ್ತು. ಈ ಮೊದಲು ಮಹಿಳಾ ಐಪಿಎಲ್‌ನ  2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18)  ಖರೀದಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k