Tag: Womens Hostel

  • ದಾವಣಗೆರೆಯಲ್ಲಿ ಮಂತ್ರ ಮಾಂಗಲ್ಯ ಮೂಲಕ ಮದುವೆ; ಅನಾಥ ಯುವತಿ ಬಾಳಿಗೆ ದಾಂಪತ್ಯದ ಬೆಳಕು!

    ದಾವಣಗೆರೆಯಲ್ಲಿ ಮಂತ್ರ ಮಾಂಗಲ್ಯ ಮೂಲಕ ಮದುವೆ; ಅನಾಥ ಯುವತಿ ಬಾಳಿಗೆ ದಾಂಪತ್ಯದ ಬೆಳಕು!

    – ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

    ದಾವಣಗೆರೆ: ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಒಂದು ಅದ್ಭುತ ಕ್ಷಣ. ಅದರಲ್ಲೂ ನವ ಜೋಡಿಗಳು ಅದ್ಧೂರಿಯಾಗಿ ಮದುವೆಯಾಗಬೇಕೆಂದು ಬಯಸುವುದು ಸಾಮಾನ್ಯ. ಆದ್ರೆ ಇಲ್ಲಿ ಮದುವೆಗೆ ಅದ್ಧೂರಿ ಮಂಟಪವಿಲ್ಲ, ಆಡಂಬರದ ಓಲಗವಿಲ್ಲ, ಪುರೋಹಿತರ ಮಂತ್ರ ಘೋಷವಿಲ್ಲದೇ, ಸರಳವಾಗಿಯೇ ಮದುವೆಯಾಗಿ (Marriage) ವಧು, ವರ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ದಾವಣಗೆರೆ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ನಿಲಯ (Women’s Hostel) ಕುವೆಂಪು ಅವರ ಮಂತ್ರ ಮಾಂಗಲ್ಯ (Mantra Mangalya) ಪದ್ಧತಿಯಂತೆ ಸರಳ ವಿವಾಹ ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೇ ಮುಂದೆ ನಿಂತು ವಿವಾಹ ನೆರವೇರಿಸಿದರು.

    ದಿವ್ಯಾ ಎಂಬ ಯುವತಿಗೆ ಚಿತ್ರದುರ್ಗದ ನಾಗರಾಜ್ ಎಂಬಾತನ ಜೊತೆಗೆ ವಿವಾಹ ಮಾಡಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್ ಅವರೇ ಮುಂದೆ ನಿಂತು ಮದುವೆ ಮಾಡಿಸಿ, ವಧು-ವರರಿಗೆ ಶುಭ ಹಾರೈಸಿದರು. ಇದನ್ನೂ ಓದಿ: ಬಿಟ್‌ಕಾಯಿನ್‌ ಕೇಸ್‌ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್‌ಗೆ ನೋಟಿಸ್!

    ಸರಳ ಮದುವೆ ಸಮಾರಂಭದಲ್ಲಿ ಔತಣ ಕೂಟಕ್ಕೆ ಪಾಯಸ, ಜಿಲೇಬಿ, ಪೂರಿ, ಪನ್ನಿರ್ ಮಸಾಲ, ಅನ್ನ ಸಂಬಾರ್ ಮುಂತಾದ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಸರಳ ಮದುವೆ ನೆರವೇರಿದ ನಂತರ ವಧು-ವರರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲಾಯಿತು.

    ಸದ್ಯ, ವಧುವಿನ ಹೆಸರಲ್ಲಿ 15 ಸಾವಿರ ರೂ. ಮೊತ್ತದ ಬಾಂಡ್ ಅನ್ನು ಇಡಲಾಗಿದ್ದು, ಮೂರು ವರ್ಷಗಳ ನಂತರ ಬಡ್ಡಿಯ ಸಮೇತ ಹಣ ಹಿಂದಿರುಗಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್

  • ಲೇಡಿಸ್‌ ಹಾಸ್ಟೆಲ್‌ ಮುಂದೆಯೇ ಹಸ್ತಮೈಥುನ – ವಿಕೃತ ಕಾಮಿ ಹೆಡೆಮುರಿ ಕಟ್ಟಿದ ಕೊಡಗು ಪೊಲೀಸರು

    ಲೇಡಿಸ್‌ ಹಾಸ್ಟೆಲ್‌ ಮುಂದೆಯೇ ಹಸ್ತಮೈಥುನ – ವಿಕೃತ ಕಾಮಿ ಹೆಡೆಮುರಿ ಕಟ್ಟಿದ ಕೊಡಗು ಪೊಲೀಸರು

    ಮಡಿಕೇರಿ: ಮೆಡಿಕಲ್ ಕಾಲೇಜು ಮಹಿಳಾ ಹಾಸ್ಟೆಲ್ ಬಳಿ ನಿತ್ಯ ರಾತ್ರಿ ಸಮಯದಲ್ಲಿ ಆಟೋದಲ್ಲಿ‌ ಬಂದು ಹಾಸ್ಟೆಲ್ ವಿದ್ಯಾರ್ಥಿನಿಯರ ಮುಂದೆ ವಿಕೃತಿ ಮರೆಯುತ್ತಿದ್ದ ಕಾಮುಕನನ್ನು ಹೆಡೆಮುರಿ ಕಟ್ಟುವಲ್ಲಿ ಮಡಿಕೇರಿ (Madikeri) ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸಿಜಿಲ್ (27) ಎಂಬ ಆಟೋ ಚಾಲಕ ಬಂಧಿತ ಅರೋಪಿಯಾಗಿದ್ದಾನೆ. ಸಿಜಿಲ್ ಎಂಬಾತ ಕಳೆದ ಒಂದು ವಾರದಿಂದ ರಾತ್ರಿ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಲೇಡಿಸ್ ಹಾಸ್ಟೆಲ್ ಬಳಿ ಹೋಗಿ ಹಸ್ತಮೈಥುನ ಮಾಡಿಕೊಳ್ಳುವುದು ಕಂಡುಬಂದಿದೆ. ಈತನ ವರ್ತನೆಗಳು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಸಿಸಿಟಿವಿಯ ಚಹರೆಗಳ ಆಧರಿಸಿ ಅರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೊಡಗು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಂದ ಕೆಕೆಆರ್‌ಟಿಸಿ ಆದಾಯ ಭಾರೀ ಏರಿಕೆ

    ಆರೋಪಿ ಬೆಳಗ್ಗೆ ತೋಟದ ಕೆಲಸಕ್ಕೆ ಹೋಗಿ ರಾತ್ರಿ ಸಮಯದಲ್ಲಿ ಮಡಿಕೇರಿಯಲ್ಲಿ ಖಾಸಗಿ ಆಟೋವನ್ನು ಬಾಡಿಗೆಗೆ ತೆಗೆದುಕೊಂಡು, ಆಟೋ ಓಡಿಸುವ ನೆಪದಲ್ಲಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ರಾತ್ರಿಯೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಅಲ್ಲದೇ ಮೆಡಿಕಲ್ ಕಾಲೇಜಿನ ಕ್ಯಾಂಪಸ್ ಒಳಗೆ ಅಕ್ರಮವಾಗಿ ನುಸುಳಿಕೊಂಡು ಬರುತ್ತಿದ್ದ ಮೂವರು ಯುವಕರು ಕಾಲೇಜಿನ‌ ಯುವಕರ ಮೇಲೆ ಹಲ್ಲೆ ಹಾಗೂ ಧಮ್ಕಿ ಹಾಕುತ್ತಿದ್ದರು.

    ಮನು, ಪ್ರಸಾದ್, ಕಿರಣ್ ಮೂವರ ಮೇಲೆಯೂ ಪ್ರಕರಣ ದಾಖಲು ಮಾಡಿ, ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆಯಾಗಿದೆ. ಮತ್ತೋರ್ವನ ಪತ್ತೆಗಾಗಿ ಪೊಲೀಸರು ತಲಾಶ್‌ ನಡೆಸುತ್ತಿದ್ದಾರೆ. ಇಂತಹ ಯಾವುದೇ ಘಟನೆಗಳು ಶಾಲಾ-ಕಾಲೇಜುಗಳ ಬಳಿ ನಡೆಯುವ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ತಡ ಮಾಡಬೇಡಿ ಎಂದು ಶಾಲಾ ಕಾಲೇಜು ಆಡಳಿತ ಮಂಡಳಿಗೂ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜ್‌ ಕ್ಯಾಂಟೀನ್‌ನಲ್ಲಿ ಪ್ರಿನ್ಸಿಪಾಲ್‌ ನೇಣಿಗೆ ಶರಣು

    ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು. ಮಾಹಿತಿ ನೀಡಿ ಅಥವಾ ದೂರು ಕೊಡಲು ಭಯ ಇದ್ದರೆ ನಮ್ಮ ಕಚೇರಿಯ ಎಸ್‌ಪಿ ಮಡಿಕೇರಿ ವಿಳಾಸಕ್ಕೆ ಅನಾಮಧೇಯ ಪತ್ರವನ್ನಾದರೂ ಬರೆದು ಕಳಿಸಿ. ಆಗಲೂ ನಾವು ಅರ್ಜಿ ಸ್ವೀಕರಿಸಿ ತನಿಖೆ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಎಸ್‌ಪಿ ಧೈರ್ಯ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಹಾಸ್ಟೆಲ್‌ನಲ್ಲಿ ಯುವತಿಯ ಕೊಲೆ- ರೈಲ್ವೇ ಹಳಿಯಲ್ಲಿ ಆರೋಪಿಯ ಶವ ಪತ್ತೆ

    ಮಹಿಳಾ ಹಾಸ್ಟೆಲ್‌ನಲ್ಲಿ ಯುವತಿಯ ಕೊಲೆ- ರೈಲ್ವೇ ಹಳಿಯಲ್ಲಿ ಆರೋಪಿಯ ಶವ ಪತ್ತೆ

    ಮುಂಬೈ: ಮಹಿಳಾ ಹಾಸ್ಟೆಲ್‌ನಲ್ಲಿ (Womens Hostel) 18 ವರ್ಷದ ಯುವತಿಯನ್ನು ಹತ್ಯೆಗೈದ (Murder) ಬಳಿಕ ರೈಲ್ವೇ ಹಳಿಯಲ್ಲಿ ಆರೋಪಿಯ ಶವ ಪತ್ತೆಯಾದ ಘಟನೆ ದಕ್ಷಿಣ ಮುಂಬೈನ (Mumbai) ಚರ್ಚ್ ಗೇಟ್ (Church Gate) ಪ್ರದೇಶದಲ್ಲಿ ನಡೆದಿದೆ.

    ಕೊಲೆಯಾದ ಯುವತಿ ಬಾಂದ್ರಾದ ಉಪನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿಯಾಗಿದ್ದು, ಮೆರೈನ್ ಡ್ರೈವ್‌ನ (Marine Drive) ಮಹಿಳಾ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕೋಣೆಗೆ ಹೊರಗಿನಿಂದ ಬೀಗ ಹಾಕಿದ್ದು, ಆಕೆ ಹೊರಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ಒಡೆದು ಕೋಣೆಯೊಳಗೆ ನುಗ್ಗಿದಾಗ ದುಪ್ಪಟ್ಟ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಜಾರ್ಖಂಡ್‍ನಲ್ಲಿ ತಪ್ಪಿತ್ತು ರೈಲು ದುರಂತ!

    ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ನಂತರ ಸತ್ಯಾಂಶ ಗೊತ್ತಾಗಲಿದೆ. ಶೀಘ್ರವೇ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಘಟನೆಯ ನಂತರ ಅದೇ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವ ತಲೆಮರೆಸಿಕೊಂಡಿದ್ದು, ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಕುಕಿ ದಂಗೆಕೋರರೊಂದಿಗೆ ಬಿಎಸ್‌ಎಫ್ ಗುಂಡಿನ ಚಕಮಕಿ – ಓರ್ವ ಯೋಧ ಸಾವು, ಇಬ್ಬರಿಗೆ ಗಾಯ

    ಮೆರೈನ್ ಡ್ರೈವ್‌ನ ಮಹಿಳಾ ಹಾಸ್ಟೆಲ್‌ನಲ್ಲಿ 18 ವರ್ಷದ ಯುವತಿಯನ್ನು ಹತ್ಯೆಗೈದ ಆರೋಪದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ರೈಲ್ವೆ ಹಳಿ ಬಳಿ ಶವವನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಅದೇ ಹಾಸ್ಟೆಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಕನೋಜಿಯಾ ಎಂದು ಗುರುತಿಸಲಾಗಿದೆ. ಮುಂಬೈನ ಮರೈನ್ ‌ಡ್ರೈವ್ ಪಿಎಸ್ ಆತನ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್