Tag: Women’s Hockey

  • ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

    ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಹಾಕಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಸೋಲಿಸಿ ಭಾರತದ ಮಹಿಳಾ ತಂಡ ಕಂಚಿನ ಪದಕ ಗೆದ್ದಿದೆ.

    ಕಂಚಿನ ಪದಕಕ್ಕಾಗಿ ನಡೆದ ಹೋರಾಟ ಆರಂಭದಿಂದಲೂ ಎರಡು ತಂಡಗಳ ಮಧ್ಯೆ ಜಿದ್ದಾ ಜಿದ್ದಿನಿಂದ ಕೂಡಿತ್ತು. ಭಾರತ ಪ್ರಥಮ ಗೋಲು ಬಾರಿಸಿ ಪಂದ್ಯದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಆ ಬಳಿಕ ನ್ಯೂಜಿಲೆಂಡ್ ಒಂದು ಗೋಲು ಬಾರಿಸಿತು. ಈ ವೇಳೆ ಪಂದ್ಯ 1-1ರಲ್ಲಿ ಸಮಬಲ ಗೊಂಡಿತು. ಫುಲ್ ಟೈಮ್ ಮುಗಿದಾಗ ಪಂದ್ಯ 1-1ರಲ್ಲಿ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದನ್ನೂ ಓದಿ: ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ

    ಪೆನಾಲ್ಟಿ ಶೂಟೌಟ್‍ನಲ್ಲಿ ಭಾರತ ತಂಡದ ನಾಯಕಿ ಮತ್ತು ಗೋಲ್‍ಕೀಪರ್ ಸವಿತಾ ಪುನಿಯಾ ನಾಲ್ಕರಲ್ಲಿ ಮೂರು ಸೇವ್ ಮಾಡಿದ ಪರಿಣಾಮವಾಗಿ ಭಾರತ ತಂಡ ರೋಚಕವಾಗಿ ಗೆದ್ದು ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಭಾರತದ ಪುರುಷರ ಹಾಕಿ ತಂಡ ಕೂಡ ಫೈನಲ್‍ಗೆ ಲಗ್ಗೆ ಇಟ್ಟಿದೆ. ಚಿನ್ನ ಅಥವಾ ಬೆಳ್ಳಿ ಪದಕ ಖಚಿತಗೊಂಡಿದೆ. ಇದನ್ನೂ ಓದಿ: ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    Live Tv
    [brid partner=56869869 player=32851 video=960834 autoplay=true]

  • ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

    ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

    ಮಡಿಕೇರಿ: ಟೋಕಿಯೋ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಮಹಿಳಾ ತಂಡದ ಅಪ್ರತಿಮ ಸಾಧನೆಗೆ ಕಾರಣಕರ್ತರಾದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಮಾನಿಸಿ, 10 ಲಕ್ಷ ರೂ. ಪುರಸ್ಕಾರ ನೀಡಿ ಗೌರವಿಸಿದ್ದಾರೆ.

    ಅಂಕಿತಾ ಅವರಿಗೆ 10 ಲಕ್ಷ ರೂ.ಗಳ ಕೊಡುಗೆಯನ್ನು ಯೋಗಿ ಆದಿತ್ಯನಾಥ್ ನೀಡಿ ಪುರಸ್ಕರಿಸಿದ ಬಳಿಕ ಒಡಿಶಾದ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಯರನ್ನು ರಾಜ್ಯದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಪ್ರೋತ್ಸಾಹ  ಧನ ಕೊಡುಗೆ ಘೋಷಿಸಿದ ರಾಜ್ಯಪಾಲರು
    ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿದ್ದ ಅಂಕಿತಾ ಸುರೇಶ್ ಸೇರಿದಂತೆ ಕರ್ನಾಟಕದ ನಾಲ್ವರು ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ತಲಾ ಒಂದು ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಜೊತೆಗೆ ನಾಲ್ವರಿಗೆ ಶೀಘ್ರದಲ್ಲೇ ರಾಜ ಭವನದಲ್ಲಿ ಗೌರವ ಸನ್ಮಾನ ನೀಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

  • ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಸುರೇಶ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದ್ದಾರೆ.

    ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದ್ದು, ತಂಡದ ತರಬೇತಿದಾರರಿಗೆ ತುಂಬು ಹೃದಯದ ಧನ್ಯವಾದಗಳು. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಬೊಮ್ಮಾಯಿ, ಅಂಕಿತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಅಂಕಿತಾ ಅವರು ಮಡಿಕೇರಿ ಮೂಲದವರಾಗಿದ್ದು, ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಪ್ರಥಮ ಬಾರಿಗೆ ಒಲಂಪಿಕ್ಸ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಅಮೋಘ ಸಾಧನೆ ಮಾಡಿದ್ದು ಅವರಿಗೆ ಹಾಗೂ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸಿಎಂ ಸಂತಸ ವ್ಯಕ್ತಪಡಿಸಿದರು.

  • ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ವನಿತೆಯರಿಗೆ ಕೈ ತಪ್ಪಿದ ಕಂಚು

    ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ವನಿತೆಯರಿಗೆ ಕೈ ತಪ್ಪಿದ ಕಂಚು

    ಟೋಕಿಯೋ: ಭಾರತದ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ವಿರುದ್ಧ ಅಪ್ರತಿಮ ಹೋರಾಟ ನಡೆಸಿ 4-3 ಅಂತರದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಭಾರತಕ್ಕೆ ಕಂಚಿನ ಪದಕ ಕೈತಪ್ಪಿದೆ.

    ಮೊದಲನೇ ಕ್ವಾರ್ಟರ್​ನಲ್ಲಿ ಯಾವುದೇ ಗೋಲ್ ಗಳಿಸದೆ ಭಾರತ ಹಾಗೂ ಬ್ರಿಟನ್ ಎರಡು ತಂಡಗಳು ರಕ್ಷಣಾ ಆಟಕ್ಕೆ ಮೊರೆ ಹೋದರೆ. ಎರಡನೇ ಕ್ವಾರ್ಟರ್​ನಲ್ಲಿ ಮೊದಲು ಬ್ರಿಟನ್ ತಂಡ 2-0 ಮುನ್ನಡೆ ಪಡೆದುಕೊಂಡಿತ್ತು. ಬಳಿಕ ಪುಟಿದೆದ್ದ ಭಾರತ ತಂಡ ಗುರ್ಜಿತ್ ಕೌರ್ 25ನೇ ಮತ್ತು 26ನೇ ನಿಮಿಷದಲ್ಲಿ ಸಿಡಿಸಿದ ಸತತ ಎರಡು ಗೋಲ್‍ನ ನರೆವಿನಿಂದ 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ 29ನೇ ನಿಮಿಷದಲ್ಲಿ ವಂದನಾ ಕಟಾರಿತಯಾ ಸಿಡಿಸಿದ ಗೋಲ್ ಮೂಲಕ ಭಾರತ 3-2 ಗೋಲುಗಳ ಮುನ್ನಡೆ ಪಡೆಯಿತು.

    ಮೂರನೇ ಕ್ವಾರ್ಟರ್​ನಲ್ಲಿ ಬ್ರಿಟನ್ ಮತ್ತೆ ಗೋಲ್ ಬಾರಿಸಿ 3-3 ಸಮಬಲದ ಹೋರಾಟ ನಡೆಸಿತು. ನಾಲ್ಕನೇ ಕ್ವಾರ್ಟರ್ ಅಂತ್ಯದಲ್ಲಿ ಬ್ರಿಟನ್ 4-3 ಗೋಲುಗಳ ಮುನ್ನಡೆಯೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿತು.