Tag: Women’s Day

  • #ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

    #ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

    ಬೆಂಗಳೂರು: ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅತಿ ದೊಡ್ಡ ವೇದಿಕೆಯಾದ ಕೂ ಮಹಿಳಾ ದಿನದ ಪ್ರಯುಕ್ತ #BejhijhakBol (ಮನಸ್ಸು ಬಿಚ್ಚಿ ಮಾತಾಡಿ) ಎಂಬ ಒಂದು ಅರ್ಥ ಪೂರ್ಣ ಅಭಿಯಾನವನ್ನು ಆಯೋಜಿಸಿದೆ.

    ಈ ಅಭಿಯಾನದಲ್ಲಿ ಮಹಿಳೆಯರು ಭಯ ಅಥವಾ ಯಾವುದೇ ಹಿಂಜರಿಕೆಯಿಲ್ಲದೆ ಸ್ಫೂರ್ತಿದಾಯಕ ವೀಡಿಯೊ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಬಹುದಾಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಈ ಮೂಲಕ ಭಾವನೆಗಳನ್ನು ಮುಕ್ತವಾಗಿಸುವ ಮತ್ತು ತೆರೆದಿಡುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ.


    ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರಾರಂಭಿಸಲಾಗಿರುವ ಈ ಅಭಿಯಾನವು 2022 ರ ಥೀಮ್ ಗೆ ಅನುಗುಣವಾಗಿದೆ- ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ – ಅನಿಯಂತ್ರಿತ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಅಂತರ್ಸಂಪರ್ಕಿತ ಜಗತ್ತಿನಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವ ಅಗತ್ಯವನ್ನು ಸಾರುತ್ತಿದೆ.

    ಕೂ ವೇದಿಕೆಯ ಪ್ರಮುಖವಾಗಿ ಪ್ರತಿಪಾದಿಸುವ ಭಾಷಾ ಪ್ರಧಾನ ಸ್ವಯಂ ಅಭಿವ್ಯಕ್ತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿರುವ ಈ ಅಭಿಯಾನವು, ನಿಮ್ಮ ಹೃದಯದ ಮಾತು ಏನೇ ಇರಲಿ, ನಿರ್ಭಿಡೆಯಿಂದ ಮಾತಾಡಿ ಎಂಬ ಅಡಿಬರಹದ ಮೂಲಕ ಎಲ್ಲ ಬಂಧಗಳನ್ನು ಕಳಚಿ ಮಾತಾಡಿ ಎಂದು ಹೇಳುತ್ತಿದೆ.

     ಡಿಜಿಟಲ್ ಜಗತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೆನಪಿಸಿ ಭಾಷೆಯಂತೆಯೇ ಲಿಂಗ ಅಡೆತಡೆಗಳನ್ನು ಹಿಮ್ಮೆಟ್ಟಿ ನಿಲ್ಲುವ, ಅಳಿಸಿ ಹಾಕುವ ಕೂ ವೇದಿಕೆಯ ತತ್ವವನ್ನು ಇದು ಪುನರುಚ್ಚರಿಸುತ್ತದೆ. ಆನ್ಲೈನ್ ನಲ್ಲಿ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಯೊಬ್ಬ ಭಾರತೀಯನನ್ನು ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಕೂ ನಿರ್ಮಾಣವಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ

    ನಗರಗಳು, ಸಂಸ್ಕೃತಿಗಳು ಮತ್ತು ಸಮಾಜಗಳಾದ್ಯಂತ ಇರುವ ಸಾಮಾನ್ಯ ಮಹಿಳೆಯರನ್ನು (ಸೆಲೆಬ್ರಿಟಿಗಳಲ್ಲ) ಚಿತ್ರಿಸುವ ಮೂಲಕ ವೀಡಿಯೊ ಈ ಭಾವನೆಯನ್ನು ಪ್ರತಿಬಿಂಬಿಸುತ್ತದೆ, ಅವರ ದೈನಂದಿನ ಜೀವನದಲ್ಲಿ ಅವರು ತಮ್ಮ ಆಯ್ಕೆಯ ಸಂಭಾಷಣೆಗಳನ್ನು ವ್ಯಕ್ತಪಡಿಸುವ ಮತ್ತು ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    Koo App

    #ವಿಶ್ವ_ಮಹಿಳಾ_ದಿನಾಚರಣೆ #ಹೆಣ್ಣಿಗೊಂದು_ನಮನ ಹೆಣ್ಣೆಂದರೆ ತಾಳ್ಮೆ, ತಾಳ್ಮೆಗೆ ಮತ್ತೊಂದು ಹೆಸರೇ ಹೆಣ್ಣು. ಸೃಷ್ಟಿಯ ಪರ್ಯಾಯವೇ ಹೆಣ್ಣು, ಹರಿಯುವ ನದಿಗೆ ಹೆಣ್ಣನ್ನು ಹೋಲಿಕೆ ಮಾಡುತ್ತಾರೆ. ಏಕೆಂದರೆ ಹರಿಯುವ ನದಿ,ನಾವು ಯೇನೆಮಾಡಿದರು ಎಷ್ಟೇ ಕಲ್ಮಶಗೊಳಿಸಿದರು ಕೂಡ ತನ್ನ ಹರಿಯುವೆಕೆಯನ್ನು ಮುಂದುವರೆಸುತ್ತದೆ. ಹಾಗು ತನ್ನಲ್ಲಿರುವ ಕಲ್ಮಶವನ್ನು ನದಿಯ ಆಳಕ್ಕೆ ಹಾಕಿ ಪರಿಶುದ್ಧವಾಗಿ ಕಂಗೊಳಿಸುತ್ತದೆ . ಹೆಣ್ಣು ಕೂಡ ತನ್ನೆಲ್ಲ ಕಷ್ಟವನ್ನು ಬದಿಗಿಟ್ಟು ಸದಾನಗುತ್ತಿರುತ್ತಾಳೆ.

    ಲಕ್ಷ್ಮೀ ಮಹಾಂತೇಶ್ ದೊಡಮನಿ (@ಲಕ್ಷ್ಮೀಮಹಾಂತೇಶ್ದೊಡಮನಿ) 8 Mar 2022

    ;

    ಶೇ 40ರಷ್ಟು ಸಕ್ರಿಯ ಮಹಿಳಾ ಬಳಕೆದಾರರನ್ನು ಹೊಂದಿರುವ ಕೂ ಒಂದು ಸುರಕ್ಷಿತ, ವಿಶ್ವಾಸಾರ್ಹ ವೇದಿಕೆಯಾಗಿ ಗುರುತಿಸಿಕೊಂಡಿದೆ. ವೈದ್ಯರು, ವಕೀಲರು, ವೃತ್ತಿಪರರು, ವಾಣಿಜ್ಯೋದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ನಟರು, ಬರಹಗಾರರು, ಕವಿಗಳು ಮತ್ತು ಗೃಹಿಣಿಯರು.. ಹೀಗೆ ಎಲ್ಲ ವರ್ಗಕ್ಕೆ ಸೇರಿರುವ ಮಹಿಳೆಯರು ಈ ವೇದಿಕೆಯನ್ನು ಬಳಸುತ್ತಿದ್ದು ಆರೋಗ್ಯಕರ ಚರ್ಚೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಬರಹಗಳ ಮೂಲಕ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಾರೆ.

    ತಮ್ಮದೇ ಮಾತೃ ಭಾಷೆಯಲ್ಲಿ ಮನಸ್ಸಿನ ಮಾತು ವ್ಯಕ್ತಪಡಿಸಬಹುದಾದ ಈ ವೇದಿಕೆಯನ್ನು ಇನ್ನೂ ಬಳಸದೆ ಇರುವವರು, ಇಲ್ಲಿನ ವೈವಿದ್ಯತೆಯನ್ನು ಅನುಭವಿಸದಿರುವವರು ಮಹಿಳಾ ದಿನದಂದು #BejhijhakBol ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಮಾತುಗಳನ್ನು ಜಗತ್ತಿಗೆ ಕೇಳಿಸಿ. ಇದನ್ನೂ ಓದಿ: ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ: ಸುಧಾಕರ್

    Koo App

    #ಹೆಮ್ಮೆಯಮಹಿಳೆ ಅಮ್ಮ ಸುಧಾ ಮೂರ್ತಿ ಸರಳತೆಯ ಸಾಕಾರ ಮೂರ್ತಿ ಯಾವುದೇ ಆಡಂಬರ ಇಲ್ಲದ ಜೀವನ ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು ಬಡುವರಿಗೆ ನೊಂದಂವರಿಗೆ ಅದೇಷ್ಟೋ ಸಂತ್ರಸ್ತರ ನೆರವಿಗೆ ಬಂದ ನಮ್ಮ ಹೆಮ್ಮೆಯ ಅಮ್ಮಾ ಜಗತ್ತಿನ ಶ್ರೀಮಂತಿಕೆಯಲ್ಲಿ ಉನ್ನತ ಸ್ಥಾನದಲ್ಲಿದ್ದರು ಗರ್ವಪಡದ ಪರಿಶುದ್ಧ ಮನಸ್ಸು ಅವರದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ರಾಜ್ಯೋತ್ಸವ ಪ್ರಶಸ್ತಿ ಇನ್ನು ಅನೇಕ ಪ್ರಶಸ್ತಿಗಳು ಇವರನ್ನು ಗುರುತಿಸಿಕೊಂಡು ಬಂದಿವೆ .????????

    ಉಮೇಶ ಉಮೇಶ (@ಉಮೇಶ.._ಉಮೇಶ) 8 Mar 2022


    ‘ಅಂತರ್ಜಾಲದಲ್ಲಿ ತಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಯಸುವ ಎಲ್ಲರಿಗೂ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ಕೂ ಪ್ರೋತ್ಸಾಹಿಸುತ್ತದೆ. ಬಹುಭಾಷಾ ಇಂಟರ್ ಫೇಸ್ ಸಕ್ರಿಯಗೊಳಿಸುವುದರ ಮೂಲಕ ಭಾಷೆಯ ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ, ಸ್ವಯಂ ಅಭಿವ್ಯಕ್ತಿಯ ವಿಷಯ ಬಂದಾಗ, ತನಗೆ ತಡೆಯೊಡ್ಡುವ ಪರದೆಯನ್ನು ಸರಿಸುವ ಮಹಿಳೆಯರಿಗೆ ನಾವು ಶಕ್ತಿ ನೀಡುತ್ತೇವೆ. #BejhijhakBol ಅಭಿಯಾನವು ತಮ್ಮ ಆಲೋಚನೆಗಳನ್ನು ಅನಿರ್ಬಂಧಿತ ರೀತಿಯಲ್ಲಿ, ಮತ್ತು ತಮ್ಮ ಸ್ಥಳೀಯ ಭಾಷೆಯಲ್ಲಿ ಹಂಚಿಕೊಳ್ಳಲಿಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಮಹಿಳೆಯರನ್ನು ಪ್ರೇರೇಪಿಸುತ್ತದೆ. ಡಿಜಿಟಲ್ ಪರಿವರ್ತನೆಯ ಜಗತ್ತಿನಲ್ಲಿ ಭಾಷೆ ಅಥವಾ ಲಿಂಗ ಅಡ್ಡಿಯಾಗಬಾರದು. ಈ ಅಭಿಯಾನವು ನಮ್ಮ ವೇದಿಕೆಯನ್ನು ಜನರ ಡಿಜಿಟಲ್ ಬದುಕಿನ ಅವಿಭಾಜ್ಯ ಅಂಗವಾಗುವುದಕ್ಕೆ ಹಾಗೂ ಕೂ ಪ್ರಯಾಣಕ್ಕೂ ಹೆಚ್ಚಿನ ವೇಗ ನೀಡಲಿದೆ’ ಎಂದು ಕೂ ವಕ್ತಾರರು ಹೇಳಿದರು.

  • ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್

    ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್

    ರಾಂಚಿ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಜಾರ್ಖಂಡ್‍ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಕುದುರೆ ಏರಿ ವಿಧಾನಸಭೆಗೆ ಆಗಮಿಸಿ ಗಮನ ಸೆಳೆದಿದ್ದಾರೆ.

    ಅಂಬಾ ಪ್ರಸಾದ್, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಇಂದು ವಿಧಾನಸಭೆಗೆ ಕುದುರೆ ಏರಿ ಬರುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ಅವರತ್ತ ಕಣ್ಣಾಡಿಸಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಾ ಪ್ರಸಾದ್, ಈ ಕುದುರೆಯನ್ನು ನನಗೆ ಸೇನೆಯ ನಿವೃತ್ತ ಅಧಿಕಾರಿ ರವಿ ರಾಥೋಡ್ ಅವರು ಅಂತರಾಷ್ಟ್ರೀಯ ಮಹಿಳಾ ದಿನಚರಣೆಯ ಪ್ರಯುಕ್ತ ಕೊಡುಗೆಯಾಗಿ ನೀಡಿದ್ದಾರೆ ಎಂದರು.

    ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗಾ, ಝಾನ್ಸಿ ಕಿ ರಾಣಿ ಇದ್ದಾಳೆ, ಪ್ರತಿ ಸವಾಲನ್ನು ಮಹಿಳೆ ಶಕ್ತಿಯಿಂದ ಎದುರಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರತಿ ಕ್ಷೇತ್ರದಲ್ಲೂ ಮಹಿಳೆಯನ್ನು ಮುಂದೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ:  ಕೊಚ್ಚಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

     

  • ಕೊಚ್ಚಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ಕೊಚ್ಚಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ತಿರುವನಂತಪುರಂ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕೇರಳದ ಕೊಚ್ಚಿ ಮೆಟ್ರೋ ರೈಲಿನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಮೆಟ್ರೋದಲ್ಲಿ ಪಯಾಣಿಸಲು ಅನುಮತಿ ನೀಡಲಾಗಿದೆ.

    ಈ ಕುರಿತಂತೆ ಕೊಚ್ಚಿ ಮೆಟ್ರೋ ರೈಲ್ವೇ(ಕೆಎಂಆರ್‍ಎಲ್), ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರು ಕೊಚ್ಚಿ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ನಿಲ್ದಾಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ. ಇಷ್ಟಲ್ಲದೇ ಈ ವಿಶೇಷ ದಿನದಂದು 10 ಪ್ರಮುಖ ನಿಲ್ದಾಣಗಳಲ್ಲಿ ಮಹಿಳಾ ಸಿಬ್ಬಂದಿ ನಿಲ್ದಾಣ ನಿಯಂತ್ರಕರಾಗಿರುತ್ತಾರೆ ತಿಳಿಸಿದೆ. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಕೊಚ್ಚಿ ಮೆಟ್ರೋ ಟ್ವೀಟ್‍ನಲ್ಲಿ, ಮಾರ್ಚ್ 8, ಅಂತರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರು ಕೊಚ್ಚಿ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಸ್ಟೇಷನ್‍ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮೊದಲಿಗೆ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‍ನಲ್ಲಿ 1975ರಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಲಾಯಿತು. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಐತಿಹಾಸಿಕ ಮತ್ತು ರಾಜಕೀಯ ಸಾಧನೆಗಳಿಗೆ ಒತ್ತು ನೀಡುವ ಉದ್ದೇಶದಿಂದ. ಮತ್ತು 1977 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಿತು.

  • ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

    ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

    ಧಾರವಾಡ: ಜುಂಬಾ ನೃತ್ಯದಲ್ಲಿ ಮಹಿಳೆಯರ ಮೈ ಮೇಲೆ ಸಾಂಪ್ರದಾಯಿಕ ಸೀರೆಯಿದ್ರೆ, ಕಾಲಲ್ಲಿ ಮಾತ್ರ ಕ್ರೀಡಾ ಶೂ. ಮಗದೊಂದು ಕಡೆ ಸೀರೆಯಲ್ಲೇ ಪಾಶ್ಚಿಮಾತ್ಯ ಸಂಗೀತಕ್ಕೂ ಸಖತ್ ಸ್ಟೆಪ್ ಹಾಕುತ್ತಿರುವ ಮಹಿಳಾ ಸಮೂಹ. ಇಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಕಂಡು ಬಂದ ದೃಶ್ಯ.

    ಯಾವುದೇ ಕಾರ್ಯಕ್ರಮವಿದ್ದರೂ ಮಹಿಳೆಯರು ಅಂದ-ಚೆಂದವಾಗಿ ಉಡುಗೆ-ತೊಡುಗೆ ಜೊತೆಗೆ ಶೃಂಗಾರ ಮಾಡಿಕೊಂಡು ಬರುವುದು ಸಾಮಾನ್ಯ. ಆದರೆ ಇಲ್ಲಿ ಓಡೋದಕ್ಕಾಗಿಯೇ ಮಹಿಳೆಯರು ಹೀಗೆ ಸೀರೆಯಲ್ಲಿ ಬಂದಿದ್ದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿಯ ಪ್ರದರ್ಶನದ ಪ್ರಯುಕ್ತ ರೋಟರಿ ಕ್ಲಬ್ ಆಫ್ ಸೆವೆಲ್ ಹಿಲ್ಸ್ ಧಾರವಾಡ ಘಟಕದ ವತಿಯಿಂದ ಆಯೋಜಿಸಿದ್ದ ಸೀರೆಯಲ್ಲಿ ನಾರಿಯರ ಓಟದ ದೃಶ್ಯ ಇದು. ಸೀರೆಯಲ್ಲಿ ನೂರಾರು ಮಹಿಳೆಯರು ಉತ್ಸಾಹದಿಂದಲೇ ಆಗಮಿಸಿ, ನಾವು ಎಲ್ಲದಕ್ಕೂ ಸೈ ಅನ್ನೋದನ್ನು ಇಲ್ಲಿ ತೋರಿಸಿಕೊಟ್ಟರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ

    ಸೀರೆಯಲ್ಲಿ ನಾರಿಯರ ಓಟದ ಬಗ್ಗೆ ಮುಂಚಿತವಾಗಿಯೇ ಎಲ್ಲರಿಗೂ ತಿಳಿಸಲಾಗಿತ್ತು. ಹೀಗಾಗಿ ಧಾರವಾಡ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಕಡೆಗಳಿಂದ ಮಹಿಳೆಯರು ಈ ಓಟದಲ್ಲಿ ಪಾಲ್ಗೊಂಡಿದ್ದರು. ವೈದ್ಯರು, ಉದ್ಯಮಿಗಳು, ಶಿಕ್ಷಕರು, ಸರ್ಕಾರಿ ಉದ್ಯೋಗಿಗಳು, ಸಂಘಟಕರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಂದ ಹಿಡಿದು ಕಾಲೇಜು ವಿದ್ಯಾರ್ಥಿನಿಯರು ಮಾತ್ರವಲ್ಲ ಸಾಮಾನ್ಯ ಗೃಹಸ್ಥ ಮಹಿಳೆಯರೂ ಪಾಲ್ಗೊಂಡಿದ್ದರು. ಇದನ್ನೂ ಓದಿ : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಬೆಳಗ್ಗೆ 6.30ಕ್ಕೆ ಸರಿಯಾಗಿ ಧಾರವಾಡ ಕೆಸಿಡಿ ಮೈದಾನದಲ್ಲಿ ಜಮಾವಣೆಗೊಂಡ ಮಹಿಳೆಯರಿಗೆ ಮೊದಲು ಅರ್ಧ ಗಂಟೆಗಳ ಕಾಲ ವಾರ್ಮಾಪ್ ಗಾಗಿ ಜುಂಬಾ ಡ್ಯಾನ್ಸ್ ಮಾಡಿಸಲಾಯಿತು. ಈ ವೇಳೆ ಅನೇಕ ಪಾಶ್ಚಿಮಾತ್ಯ ಸಂಗೀತ, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಹಾಡುಗಳಿಗೂ ಮಹಿಳೆಯರು ಸೀರೆಯಲ್ಲಿಯೇ ಸ್ಟೆಪ್ ಹಾಕಿದರು. ಬಳಿಕ ಕೆಸಿಡಿ ಮೈದಾನದಿಂದ ಕಲಾಭವನ ಆವರಣದವರೆಗೂ ಮ್ಯಾರಾಥಾನ್ ನಡೆಸಲಾಯಿತು.

  • ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ಮಹಿಳಾ ದಿನಾಚರಣೆ ಆಚರಿಸಿದ ಮೋದಿ

    ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ಮಹಿಳಾ ದಿನಾಚರಣೆ ಆಚರಿಸಿದ ಮೋದಿ

    ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರಧಾನಿ ನರೇಂದ್ರ ಮೋದಿ ವಿಭಿನ್ನವಾಗಿ ಆಚರಿಸಿದ್ದು, ಭಾರತೀಯ ಸಂಸ್ಕೃತಿ ಬಿಂಬಿಸುವ, ಸೃಜನಶೀಲತೆ, ಉದ್ಯಮವನ್ನು ಸಂಭ್ರಮಿಸುವಂತೆ ವಿವಿಧ ವಸ್ತುಗಳನ್ನು ಖರೀದಿಸಿದ್ದಾರೆ.

    ಆತ್ಮನಿರ್ಭರವಾಗಲು ಭಾರತದ ಅನ್ವೇಷಣೆಗೆ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರ ಉದ್ಯಮಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ತಾವು ಖರೀದಿಸಿದ ವಸ್ತುಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ತಾವು ಖರೀದಿಸಿದ ಉತ್ಪನ್ನಗಳ ವಿವರಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮಿಳುನಾಡಿನ ತೋಡಾ ಬುಡಕಟ್ಟು ಕುಶಲಕರ್ಮಿಗಳು ಕೈಯಿಂದ ತಯಾರಿಸಿದ ಸೊಗಸಾದ ಕಸೂತಿ ಶಾಲು ಅದ್ಭುತವಾಗಿದೆ. ನಾನೂ ಒಂದನ್ನೂ ಖರೀದಿಸಿದ್ದೇನೆ. ಟ್ರೈಬ್ಸ್ ಇಂಡಿಯಾ ಇದನ್ನು ಮಾರಾಟ ಮಾಡಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

    ಅಲ್ಲದೆ ಗೊಂಡ್ ಪೇಪರ್‍ನಿಂದ ತಯಾರಿಸಿದ ಪೇಂಟಿಂಗ್‍ನ್ನು ಸಹ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಬುಡಕಟ್ಟು ಸಮುದಾಯದವರು ಕಲೆಯನ್ನು ಚಿತ್ರಿಸಿದ್ದಾರೆ. ಪೇಂಟಿಂಗ್‍ನಲ್ಲಿ ಬಣ್ಣಗಳು ಹಾಗೂ ಸೃಜನಶೀಲತೆಯನ್ನು ಕಾಣಬಹುದಾಗಿದೆ ಎಂದು ಬರೆದುಕೊಂಡಿದ್ದಾರೆ.

    ಸಾಂಪ್ರದಾಯಿಕ ನಾಗಾ ಶಾಲಿನ ಚಿತ್ರವನ್ನೂ ಹಂಚಿಕೊಂಡಿರುವ ಅವರು, ಧೈರ್ಯ, ಸಹಾನುಭೂತಿ ಹಾಗೂ ಸೃಜನಶೀಲತೆಯ ಪ್ರತೀಕವಾಗಿರುವ ನಾಗಾ ಸಂಸ್ಕøತಿ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಖಾದಿ ಮಹಾತ್ಮಾ ಗಾಂಧೀಜಿ ಹಾಗೂ ಭಾರತದ ಶ್ರೀಮಂತ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಮಧುಬನಿ ಪೇಂಟೆಡ್ ಸ್ಟೋಲ್ ಖರೀದಿಸಿದೆ. ಇದು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಜನತೆಯ ಸೃಜನಶೀಲತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.

    ಕೈಯಿಂದ ತಯಾರಿಸಿದ ಈ ನಾರಿನ ಫೈಲ್‍ನ್ನು ನಾನು ಬಳಸಲು ಮುಂದಾಗಿದ್ದೇನೆ. ಇದನ್ನು ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದವರು ತಯಾರಿಸಿದ್ದಾರೆ. ನೀವೂ ಸಹ ನಿಮ್ಮ ಮನೆಗಳಲ್ಲಿ ಕಡ್ಡಾಯವಾಗಿ ನಾರಿನ ಉತ್ಪನ್ನಗಳನ್ನು ಬಳಸಿ ಎಂದು ತಿಳಿಸಿದ್ದಾರೆ. ಅಲ್ಲದೆ ನಾನು ಆಗಾಗ ಗಮ್ಚಾ ಧರಿಸುವುದನ್ನು ಜನ ನೋಡಿದ್ದಾರೆ. ಇದು ಅತ್ಯಂತ ಆರಾಮದಾಯಕವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

  • ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ

    ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ

    ನವದೆಹಲಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಮಗುವನ್ನು ಎರಡು ಕೈಗಳಿಂದ ತಬ್ಬಿಕೊಂಡು ಮಗುವಿನ ಮುಖ ನೋಡುತ್ತಾ ಹೃದಯದಿಂದ ಮುಗುಳು ನಗೆ ಬೀರಿದ್ದಾರೆ.

     

    View this post on Instagram

     

    A post shared by Virat Kohli (@virat.kohli)

    ಫೋಟೋವನ್ನು ಪೋಸ್ಟ್ ಮಾಡಿರುವ ವಿರಾಟ್, ಮಗುವಿಗೆ ಜನ್ಮ ನೀಡುವುದನ್ನು ನೋಡುವುದೇ ನಂಬಲಾಗದ ಹಾಗೂ ಅದ್ಭುತದ ಅನುಭವ. ಅದಕ್ಕೆ ಸಾಕ್ಷಿ ಮಹಿಳೆಯರು. ಮಹಿಳೆಯರಲ್ಲಿ ಶಕ್ತಿ ಮತ್ತು ದೈವತ್ವವನ್ನು ದೇವರು ಯಾಕೆ ಸೃಷ್ಟಿಸಿದ್ದಾನೆ ಎಂಬುವುದು ನಿಮಗೂ ಅರ್ಥವಾಗುತ್ತದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ. ನನ್ನ ಜೀವನದ ದಿಟ್ಟ, ಸಹಾನೂಭೂತಿ ಹಾಗೂ ಧೈರ್ಯಶಾಲಿ ಮಹಿಳೆ ಹಾಗೂ ಅಮ್ಮನಂತೆ ಬೆಳೆಯಲಿರುವ ಮಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಹಾಗೂ ವಿಶ್ವದ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಕಳೆದ ತಿಂಗಳು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು ಹಾಗೂ ವಮಿಕಾ ಎಂದು ಹೇಳುವ ಮೂಲಕ ಮಗಳ ಹೆಸರನ್ನು ಬಹಿರಂಗ ಪಡಿಸಿದ್ದರು.

  • ಮಹಿಳಾ ದಿನಾಚರಣೆಯ ಗಿಫ್ಟ್ – ಸಕ್ಕರೆ ನಾಡಿನಲ್ಲಿ ಮಹಿಳೆಯರ ಸಾಧನೆಯ ಮೈಲಿಗಲ್ಲು

    ಮಹಿಳಾ ದಿನಾಚರಣೆಯ ಗಿಫ್ಟ್ – ಸಕ್ಕರೆ ನಾಡಿನಲ್ಲಿ ಮಹಿಳೆಯರ ಸಾಧನೆಯ ಮೈಲಿಗಲ್ಲು

    ಮಂಡ್ಯ: ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ನೆನೆಯುವ ಮೂಲಕ ಮಹಿಳೆಯರ ಸಬಲೀಕರಣ ಮಾಡಲು ಮಾರ್ಚ್ 8 ರಂದು ವಿಶ್ವ ಮಹಿಳಾ ದಿನವೆಂದು ಆಚರಣೆ ಮಾಡಲಾಗುತ್ತದೆ. ಈ ದಿನಕ್ಕೆ ಅರ್ಥ ಪೂರ್ಣವೆಂಬಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಸಾಧನೆಯ ಮೈಲಿಗಲ್ಲಾಗಿದ್ದಾರೆ.

    ಕಳೆದ ಮೂರು ದಶಕಗಳ ಹಿಂದೆ ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಾಗಿರಬೇಕು ಎಂಬ ಕಲ್ಪನೆ ಎಲ್ಲರಲ್ಲಿ ಇತ್ತು. ಬಳಿಕ ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ನಾವು ಪುರುಷರಿಗೇನು ಕಮ್ಮಿ ಇಲ್ಲ, ನಮ್ಮಲ್ಲೂ ಸಾಧನೆ ಮಾಡುವ ಆತ್ಮಸ್ಥೈರ್ಯವಿದೆ ಎಂದು ತೊರಿಸಿಕೊಡುವ ಮೂಲಕ ನಮ್ಮಿದಂಲೂ ದೇಶ ಕಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ನಾಳೆ ವಿಶ್ವ ಮಹಿಳಾ ದಿನಾಚರಣೆ ಇದೆ. ಇದಕ್ಕೆ ಅರ್ಥ ಕಲ್ಪಿಸುವಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಮಹಿಳೆಯರೇ ಬಹುತೇಕ ಲೀಡ್ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದು, ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕಾರ್ಯನಿರ್ವಹಿಸುತ್ತಿದ್ದಾರೆ.

    ಸದ್ಯ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಂದ ಮಹಿಳೆಯರ ಪರ್ವ ಆರಂಭವಾಗಿದೆ. ಜಿಲ್ಲಾಧಿಕಾರಿ ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಎಡಿಸಿ ಶೈಲಜಾ, ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ, ಭೂ ಮತ್ತು ಗಣಿ ಇಲಾಖೆ ಪುಷ್ಪ, ಜಿ.ಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ಸೇರಿದಂತೆ ಬಹುತೇಕ ಇಲಾಖೆಗಲ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಮಹಿಳೆಯರೆ ಹೆಚ್ಚಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಅತೀ ಹೆಚ್ಚು ಮಹಿಳೆಯರು ಇರುವುದು ಇದೇ ಮೊದಲ ಬಾರಿಗೆ ಎನ್ನಲಾಆಗುತ್ತಿದ್ದು, ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಒಳ್ಳೆಯ ಸಮಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಸದ್ಯ ಲೀಡ್ ಮಾಡುತ್ತಿರುವುದು ಮಹಿಳೆಯರೇ ಆಗಿದ್ದಾರೆ. ಈ ವರ್ಷದ ಮಹಿಳಾ ದಿನಾಚರಣೆಗೆ ಜಿಲ್ಲೆಯ ಮಹಿಳೆಯರಿಗೆ ಇದೊಂದು ಗಿಫ್ಟ್ ಎಂಬಂತೆ ಆಗಿದೆ. ಈ ಮಹಿಳೆಯರ ಸಾಧನೆ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿ ಸಾಧನೆಯ ಶಿಖರವನ್ನೇರಬೇಕು ಎನ್ನೋದೇ ನಮ್ಮ ಆಶಯವಾಗಿದೆ.

  • ಸಿಡಿ ವಿಚಾರದಲ್ಲಿ ಏನು ಮಾತನಾಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಸಿಡಿ ವಿಚಾರದಲ್ಲಿ ಏನು ಮಾತನಾಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಹುಬ್ಬಳ್ಳಿ: ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳಕು ಹಾಕುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕಾರಣಿಗಳನ್ನು ಜನರು ಗಮನಿಸುತ್ತಿದ್ದಾರೆ. ನಾವೂ ಎಲ್ಲರಿಗೂ ಉದಾಹರಣೆಯಾಗಿರಬೇಕು ಎಂದರು.

    ಗೋಕಾಕ್ ಪ್ರತಿಭಟನೆಯಲ್ಲಿ ನನ್ನ ಹೆಸರು ಯಾಕೆ ಪ್ರಸಾಪ್ತ ಮಾಡಲಾಗಿದೆ ಎಂಬುವುದು ತಿಳಿಯುತ್ತಿಲ್ಲ. ಸಿಡಿ ವಿಚಾರದಲ್ಲಿ ಯಾರಿದ್ದಾರೆ ಎನ್ನುವುದು ತನಿಖೆಯಿಂದ ಬಯಲಾಗಲಿದೆ. ಸಿಡಿ ವಿಚಾರದಲ್ಲಿ ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಕೇಳಿ ಬರುತ್ತಿರುವ ಬಗ್ಗೆ ನೀವೂ ಅವರನ್ನೇ ಕೇಳಿ ಎಂದು ಕಿಡಿಕಾರಿದರು.

  • ‘ಬಾಂಬೆ ಬೇಗಮ್ಸ್’ ನೆಟ್‍ಫ್ಲಿಕ್ಸ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್

    ‘ಬಾಂಬೆ ಬೇಗಮ್ಸ್’ ನೆಟ್‍ಫ್ಲಿಕ್ಸ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್

    ಕಾರವಾರ: ಮಾರ್ಚ್ 8ರ ಮಹಿಳಾ ದಿನದಂದು ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಗೊಳ್ಳಲಿರುವ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಕನ್ನಡತಿಯೊಬ್ಬರು ಕಾಣಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಫೆ.15 ರಂದು ಬಾಂಬೆ ಬೇಗಮ್ಸ್ ಸಿರೀಸ್‍ನ ಟ್ರೈಲರ್ ಬಿಡುಗಡೆಗೊಂಡಿದೆ. ಸಿಂಗಾಪುರದ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಮೂಲದ ಆಧ್ಯಾ ಆನಂದ್, ‘ಶಾಯ್ ಇರಾನಿ’ಯಾಗಿ ಈ ಸರಣಿಯಲ್ಲಿ ನಟಿಸಿದ್ದಾರೆ. ‘ಬಾಂಬೆ ಬೇಗಮ್ಸ್’ ಮೂಲಕ ಇವರು ಈಗ ಭಾರತದಲ್ಲೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಬಾಲಿವುಡ್ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್’ ಸರಣಿಯ ಕಥೆಯು ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿದೆ. ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್‍ಠಾಕೂರ್ ಸೇರಿದಂತೆ ಐವರು ಮುಖ್ಯ ಭೂಮಿಕೆಯ ‘ಬೇಗಮ್ಸ್’ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದು, ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

    ಸಿಂಗಾಪುರದಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ ಹುಟ್ಟಿದ್ದು ಮಡಿಕೇರಿಯಲ್ಲಾದರೂ ಬೆಳೆದಿದ್ದು ಸಿಂಗಾಪುರದಲ್ಲಿ. ತನ್ನ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್‍ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರ್ಲ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್ ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್ ಸ್ಟಿಟ್ಯೂಟ್ ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟನ್ರ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ ‘ಎ ಯೆಲ್ಲೋ ಬರ್ಡ್’ ಸಿನೇಮಾ, ‘ಒನ್ ಅವರ್ ಟು ಡೇಲೈಟ್’, ‘ಸ್ಕೈಸಿಟಿ’ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

    ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರದ ವಿಜೇತೆಯಾಗಿರುವ ಇವರು ಸಿಂಗಾಪುರ್‍ನಲ್ಲಿ ‘ವ್ಹೂಪೀಸ್ ವಲ್ರ್ಡ್’ ಸೀಸನ್ 1, 2, 3, 4, ‘ಲಯನ್ ಮಮ್ಸ್’ 2, 3, ‘ವಲ್ರ್ಡ್ ವಿಜ್ಜ್ ಸ್ಲೈಮ್ ಪಿಟ್’, ‘ಮೆನಂತು ಇಂಟನ್ರ್ಯಾಷನಲ್’ 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಈಕೆ ಝೀ ಟಿವಿಯ ಪ್ರಪ್ರಥಮ ಜೂನಿಯರ್ ನಿರೂಪಕಿಯಾಗಿ ನಡೆಸಿಕೊಟ್ಟಿದ್ದ ‘ಬ್ರೈನ್ ಬೂಸ್ಟರ್ಸ್’ ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್‍ಗಳಲ್ಲಿ ಪ್ರಸಾರ ಕಂಡಿವೆ.

    ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಇವರಿಗೆ ಸಿಂಗಾಪುರ್‍ನ ಸಿಂಗ್ಟೆಲ್‍ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕøತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರಕ್ಕೆ 2016ರಲ್ಲೇ ಭಾಜನಳಾಗಿದ್ದಾರೆ. ಅಲ್ಲದೇ, ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು ‘ಮಾಡೆಲ್ಸ್ ವಾಕಿಂಗ್ ರನ್ ವೇ’ನಲ್ಲಿ ಭಾಗವಹಿಸಿದ್ದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾಡ್ರ್ಸ್’ ಮತ್ತು ‘ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್’ ಅನ್ನು ಕೂಡ ಹೊಂದಿದ್ದಾರೆ.

    ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ‘ಬಾಂಬೆ ಬೇಗಮ್ಸ್’ ಆಡಿಷನ್‍ನಲ್ಲಿ ಕೊನೆಗೂ ಆಯ್ಕೆಗೊಂಡು ಅವಕಾಶ ಪಡೆದುಕೊಂಡಿರುವ ಕನ್ನಡತಿ ಆಧ್ಯಾ, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಹೊಂದಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಶೆ ಹೊಂದಿದ್ದಾರೆ.

  • ತಾಯಿ ಇಲ್ಲದೆ ಅನಾಥವಾಗಿದ್ದ ಸರಸ್ವತಿಯನ್ನು ದತ್ತು ಪಡೆದ ದಂಪತಿ

    ತಾಯಿ ಇಲ್ಲದೆ ಅನಾಥವಾಗಿದ್ದ ಸರಸ್ವತಿಯನ್ನು ದತ್ತು ಪಡೆದ ದಂಪತಿ

    ಬೆಂಗಳೂರು: ಈ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದು, ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಇತ್ತು. ಹೀಗಾಗಿ ವಿಶ್ವ ಮಹಿಳಾ ದಿನಾಚರಣೆ ದಿನ ದಂಪತಿ ತಾಯಿ ಇಲ್ಲದ ತಬ್ಬಲಿಯನ್ನು ಮಗಳಾಗಿ ದತ್ತು ಪಡೆದಿದ್ದಾರೆ. ಜೊತೆಗೆ ಮಗಳಿಗೆ ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.

    ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ದೂರವಾಗಿದ್ದ ಆನೆ ಮರಿಯೇ ಈ ಸರಸ್ವತಿ. ಕಳೆದ ಒಂದು ವಾರದ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಗಿಹಳ್ಳಿ ರೇಂಜ್‍ನಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತ್ತು. ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಮರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಆರೈಕೆ ಮಾಡಿದ್ದರು. ಬಳಿಕ ಅರಣ್ಯ ಸಚಿವರ ನೇತೃತ್ವದಲ್ಲಿ ಮರಳಿ ತಾಯಿ ಮಡಿಲಿಗೆ ಸೇರಿಸಲು ಪ್ರಯತ್ನಿಸಲಾಗಿತ್ತು.

    ಈ ವೇಳೆ ಸಚಿವರ ಜೊತೆ ಆಗಮಿಸಿದ್ದ ಪ್ರಾಣಿ ಪ್ರಿಯ ದಿನೇಶ್ ಪುಟಾಣಿ ಆನೆ ಮರಿಯನ್ನು ಕಂಡಾಗ ಒಂದು ಕ್ಷಣ ತಮ್ಮ ಸ್ವಂತ ಮಗುವಿನಂತೆ ಬಾಸವಾಗಿತ್ತು. ಹೀಗಾಗಿ ಜೀವಿತಾವಧಿ ಇರುವವರೆಗೂ ಮಗಳ ರೀತಿಯಲ್ಲಿ ಆನೆಯನ್ನು ಸಲಹಲು ತಿರ್ಮಾನಿಸಿದ್ದರು. ಈ ಕರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ದಿನೇಶ್, ನನ್ನ ಎರಡು ಗಂಡು ಮಕ್ಕಳ ಜೊತೆ ಮತ್ತೊಬ್ಬ ಮಗಳು ನಮ್ಮ ಕುಟುಂಬ ಸೇರಿಕೊಂಡಿದ್ದಾಳೆ. ಅದು ವಿಶ್ವ ಮಹಿಳಾ ದಿನಾಚರಣೆಯಂದು ನಮ್ಮ ಕುಟುಂಬಕ್ಕೆ ಬಂದಿರುವುದು ಸಂತಸ ತಂದಿದೆ. ನಾನು ಹಾಗೂ ನನ್ನ ಪತ್ನಿ ಮಗಳು ಸರಸ್ವತಿಯನ್ನು ಕಂಡು ಕಾಲ ಕಳೆದದ್ದು, ಹಾಲು ಕುಡಿಸಿದ್ದು ತುಂಬಾ ಸಂತೋಷವಾಗಿದೆ ಎಂದು ದಿನೇಶ್ ಅಭಿಪ್ರಾಯ ಹಂಚಿಕೊಂಡರು.

    ತಾಯಿಯಿಂದ ಬೇರ್ಪಟ್ಟಿದ್ದ ಆನೆ ಮರಿಯನ್ನು ಮರಳಿ ತಾಯಿ ಜೊತೆ ಸೇರಿಸಲು ಕಾಡಿನಲ್ಲಿ ನಡೆದ ಅಪರೇಷನ್ ವೇಳೆ ದಿನೇಶ್ ಸಹ ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ತಾಯಿಗಾಗಿ ಆನೆ ಮರಿಯು ನಡೆಸಿದ ಪಡಿಪಾಟಲು, ಅದರ ಆರ್ಥನಾದ ದಿನೇಶ್ ಅವರ ಮನಸ್ಸಿಗೆ ನಾಟಿದೆ. ಹೀಗಾಗಿ ಅಂದೇ ಆನೆ ಮರಿಯನ್ನು ದತ್ತು ಪಡೆಯಲು ನಮ್ಮನ್ನು ಸಂಪರ್ಕಿಸಿದ್ದರು. ಇಂದು ವರ್ಷಕ್ಕೆ 1.75 ಲಕ್ಷ ರೂ. ಹಣ ಪಾವತಿಸಿ ದತ್ತು ಪಡೆದಿದ್ದು, ಅವರ ಜೀವಿತಾವಧಿ ಇರುವವರೆಗೂ ಪ್ರತಿ ವರ್ಷ ಹಣ ಪಾವತಿಸಿ ಆನೆ ಮರಿ ಆರೈಕೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದತ್ತು ಮಗಳಿಗೆ ಸರಸ್ವತಿ ಎಂದು ದಿನೇಶ್ ದಂಪತಿ ನಾಮಕರಣ ಮಾಡಿದ್ದಾರೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.