Tag: Women’s Day

  • ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ

    ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ

    ವಯಸ್ಸು 80. ಆದರೆ ದುಡಿಯುವ ಛಲ ಮಾತ್ರ ಯುವಜನರನ್ನು ನಾಚಿಸುವಂತೆ ಇದೆ. ತನ್ನ ಜೀವನ ನಡೆಸಲು ಉಪ್ಪಿನಕಾಯಿ ವ್ಯವಹಾರ ಆರಂಭಿಸಿದ ಧಾರವಾಡದ ಅಜ್ಜಿ ಈಗ ತನ್ನಂತೆ ಕಷ್ಟದಲ್ಲಿರುವ ಮಹಿಳೆಯರ ಬದುಕಿಗೂ ಹೊಸ ಬೆಳಕು ನೀಡಿದ್ದಾರೆ.

    ಧಾರವಾಡ ನಗರದ ಸಿಲ್ವರ್‌ ಆರ್ಚರ್ಡ್ ನಿವಾಸಿಯಾಗಿರುವ ಜಯಶೀಲಾ ಅವರಿಗೆ ಈಗ 80 ವರ್ಷ. 20 ವರ್ಷಗಳ ಹಿಂದೆ ಇವರು ಉಪ್ಪಿನಕಾಯಿ ವ್ಯಾಪಾರ ಶುರು ಮಾಡಿದರು. ಅಜ್ಜಿ ಉಪ್ಪಿನಕಾಯಿ ಟೇಸ್ಟ್ ಇಡೀ ಧಾರವಾಡದಲ್ಲಿ ಫೇಮಸ್ ಆಯ್ತು. ಅದೆಷ್ಟರ ಮಟ್ಟಿಗೆ ಕ್ಲಿಕ್ ಆಯ್ತು ಅಂದ್ರೆ ಎಲ್ಲರೂ ʼಉಪ್ಪಿನಕಾಯಿ ಅಜ್ಜಿʼ ಎಂದೇ ಕರೆಯಲು ಆರಂಭಿಸಿದರು. ಪ್ರತಿ ವರ್ಷ 60 ಟನ್ ಮಾವಿನಕಾಯಿ, 30 ಟನ್ ನಿಂಬೆಕಾಯಿಯ ಉಪ್ಪಿನಕಾಯಿಯನ್ನು ಇವರು ತಯಾರಿ ಮಾಡುತ್ತಾರೆ.

    ಈ ಅಜ್ಜಿ ಈಗ ಉಪ್ಪಿನಕಾಯಿ ಫ್ಯಾಕ್ಟರಿಯನ್ನು ತೆರೆದು 15 ಬಡ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಆರಂಭದಲ್ಲಿ ಅಜ್ಜಿ ಉಪ್ಪಿನಕಾಯಿ ವ್ಯಾಪಾರಕ್ಕೆ ಮನೆಯವರು ವಿರೋಧ ಮಾಡಿದರೂ ಈಗ ಅಜ್ಜಿಗೆ ಭರ್ಜರಿ ಬೆಂಬಲ ನೀಡುತ್ತಿದ್ದಾರೆ. ಈ ಸಾಧಕಿ ಅಜ್ಜಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.

    ನಾರಿ ನಾರಾಯಣಿ, ಬೆಂಗಳೂರು, ಪಬ್ಲಿಕ್‌ ಟಿವಿ, ಮಹಿಳಾ ದಿನಾಚರಣೆ, ಉಪ್ಪಿನಕಾಯಿ, ಧಾರವಾಡ, ಜಯಶೀಲಾ

  • 75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

    75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

    ಜಮೀನಿನ ಕೃಷಿ ಕೆಲಸ ಎಂದರೆ ದೂರ ಸರಿಯುವ ಜನರ ಮಧ್ಯೆ ನೆಲಮಂಗಲ ಬಳಿಯ ಬೊಮ್ಮಶೆಟ್ಟಿಹಳ್ಳಿಯ 75 ವರ್ಷದ ಪುಟ್ಟಮ್ಮ ವಿಭಿನ್ನವಾಗಿ ನಿಲ್ಲುತ್ತಾರೆ. ಈ ವಯಸಿನಲ್ಲಿಯೂ ಬತ್ತದ ಉತ್ಸಾಹದೊಂದಿಗೆ ಕೆಲಸ ಮಾಡಿ ಕೃಷಿ, ತೋಟಗಾರಿಕೆ, ಸಮಗ್ರ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಸಂಪಾದಿಸುತ್ತಿದ್ದಾರೆ.

    30 ಎಕ್ರೆ ಜಮೀನಿನನಲ್ಲಿ ವ್ಯವಸಾಯ ಹೈನುಗಾರಿಕೆ ಮೀನು ಸಾಕಾಣಿಕೆ ಮಾಡಿ ಪ್ರಗತಿಪರ ರೈತ ಮಹಿಳೆಯಾಗಿ ಇತರಿಗೂ ಸ್ಫೂರ್ತಿಯಾಗಿದ್ದಾರೆ.

    ಇವರ ತೋಟಕ್ಕೆ ಭೇಟಿ ನೀಡುವ ಯುವ ರೈತರಿಗೆ ಹಿಂದಿನ ಕೃಷಿ ಉಪಕರಣಗಳಾದ ಮರದ ಎತ್ತಿನ ಗಾಡಿ, ಕೂರಿಗೆ, ನೇಗಿಲು, ಸೇರಿದಂತೆ ಹತ್ತಾರು ಕೃಷಿ ಯಂತ್ರಗಳ ಸಂಗ್ರಹಣೆ ಮಾಡಿ ಪ್ರದರ್ಶನ ಮೂಲಕ ಕೃಷಿಯ ಮಾಹಿತಿ ನೀಡುತ್ತಾರೆ. ಸುಮಾರು ಕುಟುಂಬಗಳಿಗೆ ಕೆಲಸದ ಮೂಲಕ ಆಸರೆಯಾಗಿದ್ದಾರೆ. ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸ, ಅವರ ಜೀವನ ನಿರ್ವಹಣೆ, ಬಡವರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

    ಕೃಷಿಯೇ ದೇವರು ಭೂಮಿಯೇ ತಾಯಿ ಅಂತಾ ನಂಬಿಕೊಂಡ ಈ ಹಿರಿ ಜೀವಕ್ಕೆ ಪಬ್ಲಿಕ್ ಟಿವಿ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಹೆಮ್ಮೆ ಪಡುತ್ತಿದೆ.

  • ಮಹಿಳೆಯರಿಗೆ ಉಚಿತ ಕಸೂತಿ ಕಲಿಸಿದ ಸಾಧಕಿಗೆ ನಾರಿ ನಾರಾಯಣಿ ಗೌರವ

    ಮಹಿಳೆಯರಿಗೆ ಉಚಿತ ಕಸೂತಿ ಕಲಿಸಿದ ಸಾಧಕಿಗೆ ನಾರಿ ನಾರಾಯಣಿ ಗೌರವ

    ಅಪ್ರತಿಮ ಸಾಧನೆಯ ಮೂಲಕ ಬೇರೆಯವರಿಗೆ ಸ್ಫೂರ್ತಿಯ ಸೆಲೆಯಾಗುವುದು ಒಂದಡೆಯಾದರೆ ತಾವು ಗಳಿಸಿದ ಪಾಂಡಿತ್ಯವನ್ನು ಬೇರೆಯವರಿಗೂ ಕಲಿಸಿ ಅವರ ಬದುಕಲ್ಲಿ ಹೊಸ ಬೆಳಕನ್ನು ತುಂಬುವವರು ನಿಜಕ್ಕೂ ಅಪರೂಪ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ಪದ್ಮ ಮಂಜುನಾಥ್ ಮುಂಚೂಣಿಯಲ್ಲಿದ್ದಾರೆ.

    ಪದ್ಮಾ ಮಂಜುನಾಥ್ 30 ವರ್ಷಗಳಿಂದಕಸೂತಿ ಕೆಲಸ ಪೇಟಿಂಗ್ ಕೌದಿ ಕಲೆ ಬೊಂಬೆಗಳ ತಯಾರಿಕೆ, ಹಸೆ ಚಿತ್ತಾರ ವರ್ಲಿ ಪೈಂಟಿಂಗ್‌, ರಂಗೋಲಿ ಕಲೆ ಹೀಗೆ ನಾನಾ ಪ್ರಾಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಕಲೆಗಳನ್ನು ನೋಡಿ ಕಲಿತುಕೊಂಡಿರುವ ಪದ್ಮಾ ಈ ಸೃಜನಾತ್ಮಕ ಕಲೆಯನ್ನು ಇತರ ಮಹಿಳೆಯರಿಗೂ ಉಚಿತವಾಗಿ ಕಲಿಸಿ ಅವರೂ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಪೂರ್ಣಿಮಾಗೆ ನಾರಿ ನಾರಾಯಣಿ ಗೌರವ

    ಲಲಿತಾ ಸಹಸ್ರನಾಮವನ್ನು ರೇಷ್ಮೇ ಸೀರೆಯ ಮೇಲೆ ಸ್ಟಿಚ್ ಮಾಡಿಸಿ ಅದಕ್ಕೆ ಮುತ್ತು ಹವಳ ನವರತ್ನಗಳಿಂದ ಅಲಂಕರಿಸಿ ಫ್ರೇಮ್‌ ಹಾಕಿ ಶೃಂಗೇರಿ ಮಠಕ್ಕೆ ಅರ್ಪಿಸಿದ್ದಾರೆ. ಅಲ್ಲದೇ ಲಕ್ಷ್ಮಿ ಅಷ್ಟೋತ್ತರ, ರಾಘವೇಂದ್ರ ಅಷ್ಟೋತ್ತರ, ಶಾರದಾ ಅಷ್ಟೋತ್ತರ ಹೀಗೆ ರೇಷ್ಮೇ ವಸ್ತ್ರದ ಮೇಲೆ ಪಡಿಮೂಡಿಸಿ ವಿವಿಧ ದೇಗುಲಕ್ಕೆ ನೀಡಿದ್ದಾರೆ. ಶ್ರೀರಾಮ ಅಷ್ಟೋತ್ತರವನ್ನು ಆಯೋಧ್ಯೆಗೆ ನೀಡಿದ ಹೆಗ್ಗಳಿಕೆಯೂ ಇವರದ್ದು. ಇವರ ಅಪರೂಪದ ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದೆ.

    ನಶಿಸಿ ಹೋಗುವ ಕಲಾ ಪ್ರಕಾರದಲ್ಲಿ ತೊಡಗಿ ಅದನ್ನು ಬೇರೆಯವರಿಗೂ ತಲುಪಿಸುವ ಈ ಅಪರೂಪದ ಸಾಧಕಿಗೆ ಪಬ್ಲಿಕ್ ಟಿವಿ ನಾರಿನಾರಾಯಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ಹೆಮ್ಮೆ ಪಡುತ್ತಿದೆ. ಇದನ್ನೂ ಓದಿ:  ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

  • ಜಾಹೀರಾತು ಏಜೆನ್ಸಿಯಲ್ಲಿ ಹೊಸ ಛಾಪು ಮೂಡಿಸಿದ ವಿದ್ಯಾಗೆ ನಾರಿ ನಾರಾಯಣಿ ಗೌರವ

    ಜಾಹೀರಾತು ಏಜೆನ್ಸಿಯಲ್ಲಿ ಹೊಸ ಛಾಪು ಮೂಡಿಸಿದ ವಿದ್ಯಾಗೆ ನಾರಿ ನಾರಾಯಣಿ ಗೌರವ

    ಸಾಮಾನ್ಯ ಮಹಿಳೆಯರ ಅಸಾಮಾನ್ಯ ಸಾಧನೆಯನ್ನು ನೋಡುವುದೇ ಒಂದು ಸಂಭ್ರಮ. ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಈಗ ಯಶಸ್ವಿಯಾಗಿ ಮುನ್ನುಗುತ್ತಿರುವ ಕಾಲಘಟ್ಟದಲ್ಲಿ ವಿಬಿನಿ ಮೀಡಿಯಾದ ಮೂಲಕ ಜಾಹೀರಾತು ಏಜೆನ್ಸಿಯಲ್ಲಿ ಹೊಸ ಛಾಪು ಮೂಡಿಸಿದವರು ವಿದ್ಯಾ ಬಿ.ಎಸ್.

    ಉದ್ಯಮ ಲೋಕದಲ್ಲಿ ಯಶಸ್ವಿಯಾಗಿ ನಿರ್ಭಿಡೆಯಿಂದ ಹೆಜ್ಜೆ ಇಡಬೇಕು ಅಂತಾ ದೃಢ ನಿರ್ಧಾರದೊಂದಿಗೆ ವಿದ್ಯಾ ಬಿಎಸ್ ವಿಬಿನಿ ಮೀಡಿಯಾದ ಚುಕ್ಕಾಣಿ ಹಿಡಿದರು. ದೂರದೃಷ್ಟಿ, ಹೊಸತನದ ಪ್ರಯೋಗ ಚಿಂತನಾಶೀಲತೆಯ ಮೂಲಕ ಗ್ರಾಹಕರ ನಂಬಿಕೆಯನ್ನು ವಿಬಿನಿ ಮೀಡಿಯಾ ಗಳಿಸಿದೆ.

    2019 ರಲ್ಲಿ ವಿಬಿನಿ ಮೀಡಿಯಾ ಅಡ್ವಟೈಸಿಂಗ್ ಏಜೆನ್ಸಿ ಆರಂಭವಾಯ್ತು. ವಿದ್ಯಾ ಅವರ ಸೃಜನಾಶೀಲತೆಯಿಂದ ಅತ್ಯಂತ ವೇಗವಾಗಿ ಬೆಳೆದ ಈ ಸಂಸ್ಥೆ ಈಗ ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಮೆಚ್ಚುಗೆ ಗಳಿಸಿದೆ. ವಿದ್ಯಾ ಅದ್ಬುತ ಅಡುಗೆಯನ್ನು ಕೂಡ ಮಾಡ್ತಾರೆ. ಇವರ ಅಡುಗೆಯ ವಿಡಿಯೋ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಮಾಡಿದೆ.

    ಅಪರೂಪದ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಯಶಸ್ವಿಯಾಗಿ ಸದಾ ಹೊಸತನಕ್ಕೆ ತುಡಿಯುವ ವಿದ್ಯಾ ಬಿಎಸ್ ಅವರಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆ ಪಡುತ್ತಿದೆ.

  • ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

    ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

    ತನ್ನ ಜೀವನ ನಿರ್ವಹಣೆಗಾಗಿ ಹಿಡಿದದ್ದು ಆಟೋ ಓಡಿಸುವ ಕೆಲಸ. ಈಗ ತನ್ನ ಜೀವನ ನಡೆಸುವ ಜೊತೆ ಜೊತೆಗೆ ನೂರಾರು ಮಹಿಳೆಯರಿಗೂ ದಾರಿ ದೀಪವಾಗಿದ್ದಾರೆ.

    ಇವರ ಹೆಸರು ಪ್ರಭಾವತಿ. ಆದರೆ ಇವರಿಗೆ ಜನ ಕೊಟ್ಟಿರುವುದು ಡಬಲ್ ಸ್ಟಾರ್ ಪ್ರಭಾವತಿ ಎಂಬ ಪಟ್ಟ. ಹೇಗಾದ್ರೂ ಮಾಡಿ ಜೀವನ ಸಾಗಿಸಬೇಕು ಅನಿವಾರ್ಯತೆಗೆ ಬಿದ್ದ ಬೆಂಗಳೂರಿನ ಪ್ರಭಾವತಿ ಕೈಹಿಡಿದು ಬದುಕು ಕೊಟ್ಟಿದ್ದು ಆಟೋ.

    ಆರಂಭದಲ್ಲಿ ಆಟೋ ಕಲಿಯಬೇಕು ಅಂದಾಗ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಆಟೋ ಓಡಿಸಿ ತಮ್ಮ ಬದುಕು ಕಟ್ಟಿಕೊಂಡ್ರು. ಅಲ್ಲಿಗೆ ಸುಮ್ಮನಾಗದ ಇವರು ತಮ್ಮಂತೆ ಅನಿವಾರ್ಯತೆ ಇದ್ದ ಹೆಣ್ಣುಮಕ್ಕಳಿಗೆ ಉಚಿತ ಆಟೋ ತರಬೇತಿ ಶುರು ಮಾಡಿದರು. ಕಳೆದ ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ತರಬೇತಿ ನೀಡಿ ಜೀವನಕ್ಕೆ ದಾರಿ ಮಾಡಿದ್ದಾರೆ.

    ಕಷ್ಟದಲ್ಲಿದ್ದ ಅದೆಷ್ಟೋ ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ಜೀವನ ಪಾಠ ಹೇಳುತ್ತಿರುವ ಡಬಲ್ ಸ್ಟಾರ್ ಪ್ರಭಾವತಿ ನಿಜಕ್ಕೂ ಸ್ಫೂರ್ತಿ. ಈ ಅಪರೂಪದ ಸಾಧಕಿಗೆ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.

  • ಅನ್ನದಾತರ ಬದುಕಿನ ಆಶಾಕಿರಣ ಲಕ್ಷ್ಮಿದೇವಿಗೆ ನಾರಿ ನಾರಾಯಣಿ ಪ್ರಶಸ್ತಿ

    ಅನ್ನದಾತರ ಬದುಕಿನ ಆಶಾಕಿರಣ ಲಕ್ಷ್ಮಿದೇವಿಗೆ ನಾರಿ ನಾರಾಯಣಿ ಪ್ರಶಸ್ತಿ

    ತಾವು ಬೆಳೆದ ಬಂದ ಕಷ್ಟದ ಹಾದಿಯನ್ನು ಮೆಟ್ಟಿಲಾಗಿಸಿಕೊಂಡು ಶ್ರಮದಿಂದ ಸಾಧನೆಯ ಶಿಖರ ಏರುವುದು ಅಷ್ಟು ಸುಲಭವಲ್ಲ. ಆದರೆ ರೈತ ಕುಟುಂಬದಿಂದ ಬಂದು ತಾವೊಂದು ಉದ್ಯಮವನ್ನು ಸ್ಥಾಪಿಸಿ ಆ ಮೂಲಕ ಅನ್ನದಾತರ ಬದುಕಿಗೆ ಹೊಸ ಚೈತನ್ಯ ಆಶಾಕಿರಣ ಮೂಡಿಸಿದವರು ಎಲ್‌ವಿಎನ್ ಕಂಪನಿಯ ಮಾಲೀಕರಾದ ಶ್ರೀಮತಿ ಲಕ್ಷ್ಮಿದೇವಿ.

    ತಾವು ರೈತ ಕುಟುಂಬದಿಂದಲೇ ಬಂದವರಾಗಿದ್ದರಿಂದ ಸ್ವಾಭಿಮಾನಿ ರೈತರ ಕಷ್ಟಕೋಟಲೆಯನ್ನು ಅರಿತ ಅವರಿಗೆ ನೆರವಾಗುವ ಉದ್ದೇಶದಿಂದ ಎಲ್ ವಿಎನ್ ಸಂಸ್ಥೆಯನ್ನು ಲಕ್ಷ್ಮಿದೇವಿ ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ರೈತರು ಬೆಳೆದ ಹಣ್ಣು ತಾಜಾ ತರಕಾರಿಗಳನ್ನು ನೇರವಾಗಿ ಉತ್ತಮ ಬೆಲೆಗೆ ಖರೀದಿ ಮಾಡುತ್ತಾರೆ.

    ಖರೀದಿಸಿದ ಹಣ್ಣು, ತರಕಾರಿಗಳನ್ನು ಜಗತ್ತಿನ ಪ್ರತಿಷ್ಟಿತ ಕಂಪನಿಗಳಾದ ಕೆಎಫ್ ಸಿ, ಐಟಿಸಿ ಗೋದ್ರೇಜ್, ಟ್ಯಾಕೋಬೆ, ಪಿಜ್ಜಾ, ತಾಜ್, ಫ್ರೆಶ್‌ಮೆನು, ಎಂಟಿಆರ್ ಟೈಸನ್, ಬರ್ಗರ್ ಕಿಂಗ್ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಕಂಪನಿಗಳಿಗೆ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದಾರೆ.

    10 ವರ್ಷದಿಂದ ರೈತರ ಬದುಕಿಗೆ ನೆರವಾಗುತ್ತಿರುವ ಲಕ್ಷ್ಮೀದೇವಿ 200 ಕೋಟಿ ರೂ. ವಹಿವಾಟು ನಡೆಸುತ್ತಿರುವ ಸಂಸ್ಥೆಯ ರೂವಾರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ ಕಂಪನಿಯ ಉದ್ಯೋಗಿಗಳ ಪೈಕಿ 70 ರಷ್ಟು ಉದ್ಯೋಗಿಗಳು ಮಹಿಳೆಯರೇ ಆಗಿರುವುದು ವಿಶೇಷ.

    ತಮ್ಮ ಚಾಕಚಕತ್ಯೆ, ಅಪರಿಮಿತ ಶ್ರಮದಿಂದಲೇ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿ ನಡೆಸಿ ಇನ್ನಿತರ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಸಾಮಾಜಿಕ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಲಕ್ಷ್ಮಿದೇವಿ ಅವರ ಈ ಅನನ್ಯ ಸಾಧನಗೆ ಮನಪೂರ್ವಕವಾಗಿ ನಮಿಸಿ ಪಬ್ಲಿಕ್ ಟಿವಿ ನಾರಿ ನಾರಾಯಣಿ ಪ್ರಶಸ್ತಿ ನೀಡಲು ಹರ್ಷಿಸುತ್ತಿದೆ.

  • ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಪೂರ್ಣಿಮಾಗೆ ನಾರಿ ನಾರಾಯಣಿ ಗೌರವ

    ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿರುವ ಪೂರ್ಣಿಮಾಗೆ ನಾರಿ ನಾರಾಯಣಿ ಗೌರವ

    ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ವೃತ್ತಿ. ಆದರೆ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು ಇವರ ಪ್ರವೃತ್ತಿ. ನಿರಂತರ ಕೆಲಸದ ಒತ್ತಡದ ಮಧ್ಯೆಯೂ ತನಗೆ ಸಿಕ್ಕ ಸಮಯದಲ್ಲಿ ನಿತ್ಯವೂ ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನದ ಧಾರೆಯನ್ನು ಎರೆಯುತ್ತಿದ್ದಾರೆ ಬೆಂಗಳೂರಿನ ಪೂರ್ಣಿಮಾ ನಾಗೇಶ್ .

    ಎಲ್ಲಕ್ಕಿಂತಲೂ ಶ್ರೇಷ್ಠದಾನ ವಿದ್ಯಾದಾನ ಎನ್ನುವ ಮಾತಿದೆ. ಪೂರ್ಣಿಮಾ ನಾಗೇಶ್ ಬಾರಿಮನಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿದ ತಕ್ಷಣ ಕಟ್ಟಡ ಕಾರ್ಮಿಕ ಮಕ್ಕಳು, ಬೀದಿಯಲ್ಲಿ ಗೊಂಬೆ ಮಾರುವ ಮಕ್ಕಳು, ಶಿಕ್ಷಣ ವಂಚಿತ ಸ್ಲಂ ಮಕ್ಕಳು ಸೇರಿದಂತೆ ಕೂಲಿಗಾಗಿ ಬೆಂಗಳೂರಿನಲ್ಲಿ ಅಲೆದಾಡುತ್ತಿರುವ ಮಕ್ಕಳನ್ನು ಒಗ್ಗೂಡಿಸಿ ನಿತ್ಯವೂ ಅವರಿಗೆ ಪಾಠ ಹೇಳಿಕೊಡುತ್ತಿದ್ದಾರೆ.

    ಕಳೆದ 5 ವರ್ಷದಿಂದ ಈ ಕಾರ್ಯ ಮಾಡುತ್ತಿದ್ದು 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಕೂಡ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ.

    ಶಿಕ್ಷಣ ಜಾಗೃತಿಯ ಮೂಲಕ ಅಪರೂಪದ ಸಾಧನೆಗೈದ ಪೂರ್ಣಿಮಾ ಬಾರಿಮನಿಯವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆಪಡುತ್ತಿದೆ.

  • `ಅಡುಕಲೆ’ ಪ್ಯಾಕ್ಡ್ ಫುಡ್ ಬ್ರ್ಯಾಂಡ್‌ ರೂವಾರಿ ನಾಗರತ್ನಗೆ ನಾರಿ ನಾರಾಯಣಿ ಸನ್ಮಾನ

    `ಅಡುಕಲೆ’ ಪ್ಯಾಕ್ಡ್ ಫುಡ್ ಬ್ರ್ಯಾಂಡ್‌ ರೂವಾರಿ ನಾಗರತ್ನಗೆ ನಾರಿ ನಾರಾಯಣಿ ಸನ್ಮಾನ

    ಕರ್ನಾಟಕದ ಶ್ರೀಮಂತ ಪಾಕಶಾಲಾ ಪರಂಪರೆಯನ್ನು ಸಾರುವ, ಎಲ್ಲರ ಮನೆ ಮಾತಾಗಿರುವ ʻಅಡುಕಲೆʼ ಪ್ಯಾಕ್ಡ್ ಫುಡ್ ಬ್ರ್ಯಾಂಡ್‌ ರೂವಾರಿ ನಾಗರತ್ನ ರವೀಂದ್ರ. ಕರ್ನಾಟಕದ ಅಡುಗೆಯ ಸಂಸ್ಕೃತಿಯನ್ನು ಪರಿಚಯಿಸುವ ಅದ್ಭುತ ಕೆಲ್ಸ ಮಾಡುತ್ತಿರುವ ನಾಗರತ್ನ ಪರಿಚಯ ಇಲ್ಲಿದೆ.

    ಪೀಳಿಗೆಯಿಂದ ಪೀಳಿಗೆಗೆ ಪಾಕಪದ್ಧತಿಯ ಘಮವನ್ನು ಪಸರಿಸುವ ಕೆಲಸ ಬಹಳ ಕಷ್ಟದ್ದು. ಕರುನಾಡಿನ ಪಾಕಶಾಲೆಯ ಪರಂಪರೆಯ ಹೆಗ್ಗುರುತು ಕರುನಾಡಿನ ಮನೆ ಮಾತಾಗಿರುವ ʼಆಡುಕಲೆʼ ಬ್ರ್ಯಾಂಡ್‌ನದ್ದು. ಈ ಬ್ರ್ಯಾಂಡ್‌ನ ಹಿಂದಿರುವ ಶಕ್ತಿ ಯಾರೆಂದರೆ ಅದು ನಾಗರತ್ನ ರವೀಂದ್ರ.

    ಅದ್ಭುತ ರುಚಿಕರವಾಗಿರುವ ತಿಂಡಿ, ಮಸಾಲೆ ಪುಡಿಯನ್ನು ಸವಾಲಿನ ಹಾದಿಯಲ್ಲಿ ಆರಂಭಿಸಿದ ನಾಗರತ್ನ ಈಗ ಈ ಬ್ರ್ಯಾಂಡನ್ನು ತಮ್ಮ ಶ್ರಮ ದೂರದೃಷ್ಟಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪಸರಿಸಿದ್ದಾರೆ.

    ಶುದ್ಧತೆ ಗುಣಮಟ್ಟದೊಂದಿಗೆ ಎಂದೂ ರಾಜಿಮಾಡಿಕೊಳ್ಳದ ಆಡುಕಲೆ ಬ್ರ್ಯಾಂಡ್‌ ಈಗ ಜನರ ಮೆಚ್ಚುಗೆಗೆ ಕಾರಣವಾಗಿರುವ ಹಿಂದೆ ನಾಗರತ್ನ ಅವರ ಅಪಾರ ಪರಿಶ್ರಮವಿದೆ. ಈ ಪರಿಶ್ರಮದ ಕೈಗಳಿಗೆ ನಾರೀನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತಿದೆ.

  • ಆಧುನಿಕ ಭಗೀರಥೆ – ಗಂಗೆ ತರಿಸಿದ ಗೌರಿಗೆ ನಾರಿ ನಾರಾಯಣಿ ಸನ್ಮಾನ

    ಆಧುನಿಕ ಭಗೀರಥೆ – ಗಂಗೆ ತರಿಸಿದ ಗೌರಿಗೆ ನಾರಿ ನಾರಾಯಣಿ ಸನ್ಮಾನ

    ಅಪರೂಪದಲ್ಲಿ ಅಪರೂಪದ ಸಾಧನೆ. ಅಂಗನವಾಡಿ ಮಕ್ಕಳಿಗಾಗಿ ಸಾಕಷ್ಟು ವಿರೋಧ ಕಟ್ಟಿಕೊಂಡು ತಾನೇ ಬಾವಿಯನ್ನು ತೋಡಿ, ನೀರು ಹರಿಸಿದ್ದಾರೆ ಕಾರವಾರದ ವಿಶಿಷ್ಟ ಸಾಧಕಿ ಗೌರಿ.

    ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದವರು ಗೌರಿ. ಅಂಗನವಾಡಿ ಮಕ್ಕಳು, ಊರವರು ಕುಡಿಯುವ ನೀರಿಗೆ ಪರದಾಟ ಪಡುವುದನ್ನು ನೋಡಲು ಆಗದೇ ತಾವೇ ಬಾವಿ ತೋಡುವ ನಿರ್ಧಾರ ಮಾಡಿದರು. ಕೆಲಸದವರಿಗೆ ಕೊಡಲು ದುಡ್ಡಿಲ್ಲದೇ ಇರುವುದರಿಂದ ತಾವೇ ಶ್ರಮ ಪಟ್ಟು ಬಾವಿ ತೋಡಿದರು. ಆದರೆ ಜಿಲ್ಲಾಡಳಿತ ವಿನಾಕಾರಣ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮಾಧ್ಯಮದ ಸಹಾಯದೊಂದಿಗೆ ಹೋರಾಟಕ್ಕಿಳಿದರು. ಪಬ್ಲಿಕ್ ಟಿವಿ ಕೂಡ ಗೌರಿಯ ಬೆನ್ನಿಗೆ ನಿಂತು ಬೆಂಬಲ ನೀಡಿತು. ಗೌರಿಯ ಹಠ ಛಲದ ಮುಂದೆ ದೊಡ್ಡವರ ದೊಡ್ಡಾಟ, ಪಾಲಿಟಿಕ್ಸ್ ನಡೆಯಲಿಲ್ಲ. ಕೊನೆಗೂ ಮಕ್ಕಳಿಗೆ ನೀರುಣಿಸಿದರು.

    ಕುಂಭಮೇಳಕ್ಕೆ ಹೋಗಲು ಹಣವಿಲ್ಲದ ಗೌರಿ ಈಗ ಮತ್ತೆ ಮಹಾಕುಂಭಮೇಳದ ನೆನಪಿನಲ್ಲಿ 2 ತಿಂಗಳು ಶ್ರಮ ಪಟ್ಟು 40 ಅಡಿ ಬಾವಿ ತೋಡಿ ಮಗದೊಂದು ಸಾಧನೆ ಮಾಡಿದ್ದಾರೆ.

    ಗೌರಿಗಾಗಿ ಗಂಗೆಯೂ ಉಕ್ಕಿ ಬಂದು ಊರಿನನವರ, ಅಂಗನವಾಡಿ ಮಕ್ಕಳ ದಾಹ ತೀರಿಸುತ್ತಿದ್ದಾಳೆ. ಈ ಅಪರೂಪದ ಸಾಧಕಿಗೆ ಪಬ್ಲಿಕ್ ಟಿವಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

  • ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಮಕ್ಕಳು ಸುರಕ್ಷಿತವಾಗಿಲ್ಲ: ಬಿಜೆಪಿ ನಾಯಕಿ ಆತಂಕ

    ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಮಕ್ಕಳು ಸುರಕ್ಷಿತವಾಗಿಲ್ಲ: ಬಿಜೆಪಿ ನಾಯಕಿ ಆತಂಕ

    – ಡಿಎಂಕೆ ಸರ್ಕಾರವನ್ನ ಬೇರುಸಹಿತ ಕಿತ್ತೊಗೆಯಬೇಕೆಂದು ಪ್ರತಿಜ್ಞೆ

    ಚೆನ್ನೈ: ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ (Tamilisai Soundararajan) ಆತಂಕ ವ್ಯಕ್ತಪಡಿಸಿದ್ದಾರೆ.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Womens Day) ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ಹಾಗಾಗಿ ನಿಜವಾದ ಮಹಿಳಾ ದಿನಾಚರಣೆಯು ಡಿಎಂಕೆ ಸರ್ಕಾರವನ್ನು ಬೇರುಸಹಿತ ಕಿತ್ತೊಗೆದು 2026 ರಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜಾರಿಗೆ ತಂದಾಗ ಸಾರ್ಥಕವಾಗುತ್ತದೆ. ಡಿಎಂಕೆ ಸರ್ಕಾರವನ್ನ ಬೇರುಸಹಿತ ಕಿತ್ತೊಗೆಯುವುದು ಇಂದಿನ ನಮ್ಮ ಪ್ರತಿಜ್ಞೆ ಎಂದು ಅಬ್ಬರಿಸಿದ್ದಾರೆ.

    ಮುಂದುವರಿದು.. ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಕುರಿತು ಮಾತನಾಡಿ, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ (MK Stalin) ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಜನರು ಈಗ ತ್ರಿಭಾಷಾ ನೀತಿಯನ್ನು ಬಯಸುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಮಿಳಿಸೈ ಹೇಳಿದ್ದಾರೆ.

    ಇದೇ ವೇಳೆ, ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ವೈಶಾಲಿ (Vaishali) ಅವರನ್ನು ತಮ್ಮ ಸಾಮಾಜಿಕ ಮಾಧ್ಯಮ ನಿರ್ವಹಣೆಗೆ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.