Tag: Women’s Cricket team

  • ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು

    ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು

    ಅಮರಾವತಿ: ಸೀನಿಯರ್ಸ್ ಮಹಿಳಾ ಟಿ20 (Womens T20) ಲೀಗ್ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವಿದ್ದ (Womens Cricket Team) ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ನಡೆದಿದೆ.

    ಬಸ್‌ನಲ್ಲಿದ್ದ ನಾಲ್ವರು ಆಟಗಾರರು ಹಾಗೂ ಕೋಚ್ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಯಿತು. ಚಿಕಿತ್ಸೆ ಪಡೆದ ನಂತರ ಅವರು ಬರೋಡಕ್ಕೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಆಂಧ್ರಪ್ರದೇಶದಲ್ಲಿ ಸೀನಿಯರ್ ಮಹಿಳಾ ಟಿ20 ಲೀಗ್ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಟ್ರಕ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಖಚಿತ ಮಾಹಿತಿ ಪಡೆದ ಸ್ಥಳೀಯ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ಸೀನಿಯರ್ ಮಹಿಳಾ ಟಿ20 ಟ್ರೋಫಿಗೆ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವು ಅ.20 ರಂದು ಡಾ.ಪಿವಿಜಿ ರಾಜು ಎಸಿಎ ಕ್ರೀಡಾಂಗಣದಲ್ಲಿ ಸೌರಾಷ್ಟ್ರಗಳೊಂದಿಗೆ ನಡೆದ ಪಂದ್ಯದಲ್ಲಿ ಬರೋಡಾ 7 ವಿಕೆಟ್‌ಗಳಿಂದ ಗೆದ್ದಿತ್ತು. ಯಾಶಿಕಾ ಭಾಟಿಯಾ 60 ಎಸೆತಗಳಲ್ಲಿ 64 ರನ್ ಮತ್ತು ಅಮೃತಾ ಜೋಸೆಫ್ 24 ರನ್ ಗಳಿಸಿದರು. ಯಾಶಿಕಾ ಭಾಟಿಯಾ ಅವರ ನಿರ್ಣಾಯಕ ಹೊಡೆತವು ಬರೋಡಾ ತಂಡಕ್ಕೆ ಪಂದ್ಯವನ್ನು ಗೆಲ್ಲಲು ನೆರವಾಯಿತು.

    ಸೀನಿಯರ್ ಮಹಿಳಾ ಟಿ20 ಲೀಗ್‌ನ 14ನೇ ಆವೃತ್ತಿ ಅಕ್ಟೋಬರ್ 11ರಿಂದ ಆರಂಭವಾಯಿತು. ಅಕ್ಟೋಬರ್ 30 ರಂದು ಕ್ವಾಲಿಫೈರ್ ಪಂದ್ಯಗಳು ಆರಂಭವಾಗಲಿದ್ದು, ನವೆಂಬರ್ 5ರಂದು ಫೈನಲ್ ಪಂದ್ಯ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

    ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

    ಶಿವಮೊಗ್ಗ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ನೇತೃತ್ವದ ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಮಹಿಳಾ ಕ್ರಿಕೆಟರ್ ಕು.ಅದಿತಿ ರಾಜೇಶ್ ಆಯ್ಕೆಯಾಗಿದ್ದಾರೆ.

    ಅದಿತಿ ರಾಜೇಶ್ ಏಪ್ರಿಲ್ 18 ರಿಂದ ಗುಜರಾಜ್‍ನ ರಾಜ್‍ಕೋಟ್‍ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಅದಿತಿ ರಾಜೇಶ್ ಪ್ರಸ್ತುತ ವಿನೋಬನಗರದ ಡಿ.ವಿ.ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸಹ್ಯಾದ್ರಿ ಕಾಲೇಜಿನಲ್ಲಿರುವ ಕ್ರೀಡಾಂಗಣದಲ್ಲಿ ಕಳೆದ 8 ವರ್ಷಗಳಿಂದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಗ್ರಾಮ ಸಹಾಯಕರ ಮಾಸಿಕ ಸಂಬಳ ಏರಿಕೆ

    ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ನಗರಕ್ಕೆ ಕೀರ್ತಿ ತಂದ ಪ್ರತಿಭಾವಂತ ಯುವತಿಗೆ ವಿಧಾನ ಪರಿಷತ್ ಸದಸ್ಯ, ಕೆಎಸ್‍ಸಿಎ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್.ಅರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಶುಭಹಾರೈಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ