Tag: women’s cricket

  • ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು: ಟ್ರಾನ್ಸ್‌ಜೆಂಡರ್‌ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳುವಂತೆ ICC, BCCIಗೆ ಅನಯಾ ಮನವಿ

    ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು: ಟ್ರಾನ್ಸ್‌ಜೆಂಡರ್‌ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳುವಂತೆ ICC, BCCIಗೆ ಅನಯಾ ಮನವಿ

    – ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಂಜಯ್‌ ಬಂಗಾರ್‌ ಪುತ್ರಿ ಅನಯಾ

    ಮುಂಬೈ: ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು. ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳನ್ನು ಸೇರಿಸಿಕೊಳ್ಳಿ ಎಂದು ಐಸಿಸಿ ಮತ್ತು ಬಿಸಿಸಿಐಗೆ ಅನಯಾ ಬಂಗಾರ್ ಮನವಿ ಮಾಡಿದ್ದಾರೆ.

    ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಕಾರ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಒತ್ತಾಯಿಸಿದ್ದಾರೆ.‌ ಇದನ್ನೂ ಓದಿ: ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    ಆರ್ಯನ್‌ ಕಾಲಾನಂತರದಲ್ಲಿ ಅನಯಾ ಆಗಿ ಬದಲಾದರು. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ಟಿ) ನಂತರ ಕ್ರೀಡಾಪಟುವಾಗಿ ತಮ್ಮ ಪ್ರಯಾಣ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ಎಂಟು ಪುಟಗಳ ಕ್ರೀಡಾಪಟು ಪರೀಕ್ಷಾ ವರದಿಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನಯಾ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ತಾನು ಅರ್ಹಳಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

    23 ವರ್ಷದ ಅನಯಾ ಬಂಗಾರ್‌ ಅವರು ಸ್ನಾಯು ಶಕ್ತಿ, ಗ್ಲೂಕೋಸ್‌, ಆಮ್ಲಜನಕದ ಮಟ್ಟ ಮೊದಲಾದ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯ ದತ್ತಾಂಶಗಳನ್ನು ಸಿಸ್ಜೆಂಡರ್‌ ಮಹಿಳಾ ಕ್ರೀಡಾಪಟುಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಪರೀಕ್ಷಾ ವರದಿ ಪ್ರಕಾರ, ಸಿಸ್ಜೆಂಡರ್‌ ಮಹಿಳಾ ಕ್ರೀಡಾಪಟುಗಳ ಮಾನದಂಡಕ್ಕೆ ಹೋಲಿಕೆಯಾಗಿದೆ ಎಂದು ಅನಯಾ ತಿಳಿಸಿದ್ದಾರೆ. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

     

    View this post on Instagram

     

    A post shared by Anaya Bangar (@anayabangar)

    ಮೊದಲ ಬಾರಿಗೆ, ಟ್ರಾನ್ಸ್ ಮಹಿಳಾ ಕ್ರೀಡಾಪಟುವಾಗಿ ನನ್ನ ಪ್ರಯಾಣವನ್ನು ದಾಖಲಿಸುವ ವೈಜ್ಞಾನಿಕ ವರದಿಯನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷದಲ್ಲಿ, ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ನಾನು ರಚನಾತ್ಮಕ ಶಾರೀರಿಕ ಮೌಲ್ಯಮಾಪನಗಳಿಗೆ ಒಳಗಾಗಿದ್ದೇನೆ. ಪರೀಕ್ಷೆಯ ವರದಿಗಳನ್ನು ನಾನು ಇದನ್ನು ಬಿಸಿಸಿಐ ಮತ್ತು ಐಸಿಸಿಗೆ ಸಲ್ಲಿಸುತ್ತಿದ್ದೇನೆ ಎಂದು ಅನಯಾ ಹೇಳಿಕೊಂಡಿದ್ದಾರೆ.

    ವಿಜ್ಞಾನವು ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳಾಗಿದ್ದೇನೆ ಎಂದು ಹೇಳುತ್ತದೆ. ಈಗ, ಜಗತ್ತು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆಯೇ? ಎಂದು ಅನಾಯಾ ವೀಡಿಯೊಗೆ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ: ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

  • ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ದುಬೈ: ಕ್ರೀಡೆಯ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿಳಿಸಿದೆ.

    ಐಸಿಸಿ ಸಭೆಯಲ್ಲಿ (ICC Meeting) ಈ ನಿರ್ಧಾರ ಪ್ರಕಟಿಸಲಾಗಿದೆ. ಈ ನಿರ್ಧಾರವು ಮಹಿಳಾ ಕ್ರಿಕೆಟ್​​ನ ಸಾರವನ್ನು ರಕ್ಷಿಸುವ ಗುರಿ ಹೊಂದಿದೆ. ಆಟದ ಸಮಗ್ರತೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ಈ ನಿಯಮಗಳನ್ನ ಮಾಡಲಾಗಿದ್ದು,  2 ವರ್ಷಗಳಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಎಂಬುದಾಗಿ ತಿಳಿಸಿದೆ. ಇದನ್ನೂ ಓದಿ: ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ಜನನದ ಸಮಯದಲ್ಲಿ ಪುರುಷನಾಗಿದ್ದು, ಪುರುಷನಾಗಿಯೇ ಪ್ರೌಢಾವಸ್ಥೆಗೆ ಒಳಗಾದ ವ್ಯಕ್ತಿ, ನಂತರದಲ್ಲಿ ಲಿಂಗ ಬದಲಾವಣೆ ಕಾರ್ಯವಿಧಾನಗಳಿಗೆ ಒಳಗಾಗಿದ್ದರೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​​ ತಂಡಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಐಸಿಸಿ ದೃಢೀಕರಿಸಿದೆ. 9 ತಿಂಗಳ ಸಮಾಲೋಚನೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಸೇರಿದಂತೆ ಐಸಿಸಿ ಮಂಡಳಿಯು ಈ ಲಿಂಗ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿತು. ಇದನ್ನೂ ಓದಿ: 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

  • WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    ಮುಂಬೈ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿ ವೀಕ್ಷಿಸುವವರಿಗೆ ಬಿಸಿಸಿಐ (BCCI) ಬಂಪರ್ ಆಫರ್ ಕೊಟ್ಟಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಸ್ಟೇಡಿಯಂಗಳಲ್ಲಿ ಹೆಚ್ಚಿನ ಜನ ಸೇರುವಂತೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.

    ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು (Womens) ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    WPL 2023 2

    ಚೊಚ್ಚಲ WPL ಆವೃತ್ತಿಯಲ್ಲಿ ಪ್ಲೆ ಆಫ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅದಾನಿ ನೇತೃತ್ವದ ಗುಜರಾತ್ ಜೈಂಟ್ಸ್ (Gujarat Giants)  ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಸೆಣಸಲಿವೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    WPL 2023

    ಈ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗೆ ಭಾರತ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡಿದ್ದ ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಡಬ್ಲ್ಯೂಪಿಎಲ್‌ ಸರಣಿಯಲ್ಲೂ ಉಚಿತಪ್ರವೇಶ ನೀಡಲು ನಿರ್ಧರಿಸಿದೆ. ಪುರುಷರು ಹಾಗೂ ಹುಡುಗರಿಗೆ ಕ್ರಮವಾಗಿ 100 ರೂ. ಹಾಗೂ 400 ರೂ. ಟಿಕೆಟ್ ದರ ನಿಗದಿಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

    ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿದ್ದ ಟಾಟಾ ಸಮೂಹ ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ನಮಗೆ ಸಂತೋಷ ಉಂಟುಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

  • ಕಾಮನ್‌ವೆಲ್ತ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ಶುಭಾರಂಭ – ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ

    ಕಾಮನ್‌ವೆಲ್ತ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ಶುಭಾರಂಭ – ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್: ಬಹು ನಿರೀಕ್ಷಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತದ ವನಿತೆಯರ ತಂಡ 3 ವಿಕೆಟ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ಎದುರು ಸೋಲನ್ನು ಕಂಡಿದೆ.

    ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರಾದ ಆ್ಯಶ್ಲೆ ಗಾರ್ಡನರ್ ಹಾಗೂ ಗ್ರೇಸ್ ಹ್ಯಾರಿಸ್ ಅವರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡ ಗೆಲುವು ಸಾಧಿಸಿದೆ.

    ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ (48), ಸ್ಮೃತಿ ಮಂದಾನಾ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (52) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. ಇದನ್ನೂ ಓದಿ: ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ – ಇಂದು ಯಾವ ಸ್ಪರ್ಧೆಗಳು ಎಷ್ಟು ಗಂಟೆಗೆ ಆರಂಭ?

    ಭಾರತ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಅಲಿಸ್ಸಾ ಹೀಲಿ ಶೂನ್ಯಕ್ಕೆ ಔಟಾದರೆ, ನಾಯಕಿ ಮೆಗ್ ಲ್ಯಾನಿಂಗ್ 8 ರನ್ ಗಳಿಸಿ ರೇಣುಕಾ ಸಿಂಗ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ತಂಡದ ಮೊತ್ತ ಕೇವಲ 34 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿದ ರೇಣುಕಾ, ಭಾರತಕ್ಕೆ ಮೇಲುಗೈ ತಂದುಕೊಟ್ಟರು. ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

    ಒಂದು ಹಂತದಲ್ಲಿ 49 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಭಾರತಕ್ಕೆ ಸುಲಭ ತುತ್ತಾಗುವ ಭೀತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಗಾರ್ಡನರ್ 52 ಹಾಗೂ ಹ್ಯಾರಿಸ್ 37 ರನ್ ಸಿಡಿಸಿ ಭಾರತದ ಗೆಲುವನ್ನು ಕೈ ತಪ್ಪುವಂತೆ ಮಾಡಿದರು. ಇದನ್ನೂ ಓದಿ: ಇಂದಿನಿಂದ ಕಾಮನ್‍ವೆಲ್ತ್ ಗೇಮ್ಸ್ ಕಲರವ – ಪಿ.ವಿ ಸಿಂಧು ಧ್ವಜಧಾರಿ

    6ನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ತಮ್ಮ ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಹ್ಯಾರಿಸ್ ಕೇವಲ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಗಳಿಸಿ ಔಟಾದರು. ಗಾರ್ಡನರ್ 35 ಎಸೆತಗಳಲ್ಲಿ 52 ರನ್ ಬಾರಿಸಿ ಅಜೇಯರಾಗುಳಿದರು, ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಕೊನೆಯಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಅಲಾನ ಕಿಂಗ್ 18 ರನ್ ಬಿರುಸಿನ ಆಟವಾಡಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಅಂತರದ ಜಯ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿತು.

    ಭಾರತ ತಂಡವು ಜುಲೈ 31 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದು, ಅದೇ ದಿನ ಆಸ್ಟ್ರೇಲಿಯಾ ಬಾರ್ಬಡಾಸ್ ವಿರುದ್ಧ ಸೆಣಸಲಿದೆ.

    Live Tv
    [brid partner=56869869 player=32851 video=960834 autoplay=true]

  • ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

    ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

    ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

    12 ಟೆಸ್ಟ್, 232 ಒಡಿಐ ಹಾಗೂ 89 ಟಿ20 ಪಂದ್ಯಗಳನ್ನು ಆಡಿರುವ ಮಿಥಾಲಿ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದರು. ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡ ಮಿಥಾಲಿ, ನಾನು ದೇಶಕ್ಕಾಗಿ 23 ವರ್ಷ ಆಡಿದ್ದೇನೆ. ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ತಂಡದ ಗೆಲುವಿಗಾಗಿ ಶ್ರಮಿಸಿದ್ದೇನೆ. ಈ ಸುಂದರ ನೆನಪುಗಳೊಂದಿಗೆ ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್

    ಮಿಥಾಲಿ ತಮ್ಮ ದಿಢೀರ್ ನಿವೃತ್ತಿ ಬಗ್ಗೆ ತಿಳಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರ ಸಾಧನೆ ಹಾಗೂ ದೇಶಕ್ಕಾಗಿ ಶ್ರಮಿಸಿದ ಬಗ್ಗೆ ಮೆಲುಕು ಹಾಕಿದ್ದಾರೆ. ಮಾತ್ರವಲ್ಲದೇ ತುಂಬು ಹೃದಯದಿಂದ ಮಿಥಾಲಿಗೆ ಜೈಕಾರದೊಂದಿಗೆ ವಿದಾಯ ಹೇಳಿದ್ದಾರೆ.

    ಮಿಥಾಲಿ ನಿವೃತ್ತಿಗೆ ಪ್ರತಿಕ್ರಿಯಿಸಿದ ಬಿಸಿಸಿಐ, ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅದ್ಭುತ. ಈ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗುತ್ತಿರುವ ನಿಮಗೆ ನಿಮ್ಮ 2ನೇ ಇನ್ನಿಂಗ್ಸ್‌ಗಾಗಿ ಶುಭ ಹಾರೈಸುತ್ತೇವೆ ಎಂದು ತಿಳಿಸಿದೆ.

    ಅದ್ಭುತ ಜೀವನ ಕೊನೆಗೊಂಡಿತು! ಭಾರತೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ನೀಡಿರುವ ಕೊಡುಗೆಗೆ ಧನ್ಯವಾದಗಳು. ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಮ್ಮ ನಾಯಕತ್ವ ಹೆಚ್ಚಿನ ಕೀರ್ತಿ ತಂದು ಕೊಟ್ಟಿದೆ. ಮೈದಾನದ ಅದ್ಭುತ ಇನ್ನಿಂಗ್ಸ್‌ಗೆ ಅಭಿನಂದನೆಗಳು. ನಿಮ್ಮ ಮುಂದಿನ ಇನ್ನಿಂಗ್ಸ್‌ಗೆ ಶುಭಾಶಯಗಳು ಎಂದು ಟ್ವಿಟ್ಟರ್‌ನಲ್ಲಿ ಜೈ ಶಶ್ ಬರೆದಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ದಾಖಲೆ ಬರೆದ ವಿರಾಟ್ ಕೊಹ್ಲಿ

    ಮಹಿಳಾ ಕ್ರಿಕೆಟ್ ಇತಿಹಾಸವನ್ನು ಮತ್ತೆ ಬರೆದ, ದಾಖಲೆಗಳನ್ನು ಹೊತ್ತ ವೃತ್ತಿ ಜೀವನದೊಂದಿಗೆ ನಿಮ್ಮ ವಿದಾಯವನ್ನು ನಂಬಲಾಗುತ್ತಿಲ್ಲ. ಮಿಥಿಲಾ ರಾಜ್, ನಿಮ್ಮ ಕ್ರಿಕೆಟ್ ರಂಗದ ಎಲ್ಲಾ ನೆನಪುಗಳಿಗೂ ಧನ್ಯವಾದ ಎಂದು ಸನ್ ರೈಸರ್ಸ್ ಹೈದರಾಬಾದ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

    ಭಾರತ ತಂಡದಲ್ಲಿ ಆಡುವುದೇ ಕೆಲವರ ಕನಸಾಗಿರುತ್ತದೆ. ಆದರೆ 23 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿ ಆಡಿರುವ ಮಿಥಾಲಿಯವರ ಸಾಮರ್ಥ್ಯ ಅದ್ಭುತವಾಗಿದೆ. ನೀವು ಭಾರತ ಮಹಿಳಾ ಕ್ರಿಕೆಟ್‌ನ ಆಧಾರ ಸ್ತಂಭವಾಗಿದ್ದೀರಿ. ಅನೇಕ ಯುವತಿಯರ ಜೀವನವನ್ನೂ ರೂಪಿಸಿದ್ದೀರಿ. ನಿಮ್ಮ ಅದ್ಭುತ ಜೀವನಕ್ಕೆ ಅಭಿನಂದನೆ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

  • ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳೆಯರ ನಡುವೆ ನಡೆದ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಸ್ಟಂಪ್ ಮೈಕಿನಿಂದಾಗಿ ಆಸ್ಟ್ರೇಲಿಯಾದ ನಾಯಕಿ ಲ್ಯಾನಿಂಗ್ ಪಾರಾಗಿದ್ದಾರೆ.

    ಬುಧವಾರ ನಡೆದ ತ್ರಿಕೋನ ಸರಣಿಯ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭಾರತವನ್ನು ಸೋಲಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮೆಗ್ ಲ್ಯಾನಿಂಗ್ ಅವರು ಸ್ಟಂಪ್-ಮೈಕ್‍ನಿಂದಾಗಿ ವಿಕೆಟ್ ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇನ್ನಿಂಗ್ಸ್ ನ 14ನೇ ಓವರಿನಲ್ಲಿ ಮೆಗ್ ಲ್ಯಾನಿಂಗ್ ವೇಗವಾಗಿ ಒಂಟಿ ರನ್ ಕದಿಯಲು ಮುಂದಾದರು. ತಕ್ಷಣವೇ ಕೈಗೆ ಸಿಕ್ಕಿದ ಬಾಲ್ ಎತ್ತಿಕೊಂಡ ಶಿಖಾ ಪಾಂಡೆ ವಿಕೆಟ್ ಕಡೆಗೆ ಎಸೆದರು. ಆದರೆ ಬಾಲ್ ಸ್ಟಂಪ್ ಹಿಂದಿದ್ದ ಮೈಕ್‍ಗೆ ಬಿದ್ದು ಬೇರೆ ಕಡೆಗೆ ಹೋಯಿತು. ಇದರಿಂದಾಗಿ ಲ್ಯಾನಿಂಗ್ ಅವರಿಗೆ ಜೀವದಾನ ಸಿಕ್ಕಂತಾಯಿತು. ಈ ವಿಡಿಯೋವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಥ್ ಮೂನಿ ಅವರ ಅಜೇಯ 71 ರನ್‍ಗಳಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಅವರು ನಾಲ್ಕು ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.

    ಆಸ್ಟ್ರೇಲಿಯಾ ನೀಡಿದ್ದ 156 ರನ್‍ಗಳ ಗುರಿ ಬೆನ್ನಟ್ಟಿದ ಭಾರತವು ಕಳಪೆ ಆರಂಭಕ್ಕೆ ತುತ್ತಾಯಿತು. ಇನ್ನಿಂಗ್ಸ್ ಎರಡನೇ ಓವರಿನಲ್ಲಿ ಟೇಲಾ ವ್ಲೇಮಿಂಕ್ ಅವರು ಶಫಾಲಿ ವರ್ಮಾ ವಿಕೆಟ್ ಕಿತ್ತರು. ರಿಚಾ ಘೋಷ್ ಹಾಗೂ ಸ್ಮೃತಿ ಮಂಧನಾ ಎರಡನೇ ವಿಕೆಟ್‍ಗೆ 43 ರನ್ ಗಳಿಸಿದರು. 17 ರನ್ ಗಳಿಸಿದ್ದ ರಿಚಾ ಘೋಷ್ ಅವರನ್ನು ಅನ್ನಾಬೆಲ್ ಸದಲ್ರ್ಯಾಂಡ್ ಔಟ್ ಮಾಡಿದರು. ಆದರೆ ಮಂಧನಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 12ನೇ ಅಂತರರಾಷ್ಟ್ರೀಯ ಟಿ20 ಅರ್ಧಶತಕವನ್ನು ಗಳಿಸಿದರು.

    ಭಾರತವು 14 ಓವರ್‌ಗಳ ನಂತರ ನಾಲ್ಕು ವಿಕೆಟ್‍ಗೆ 113 ರನ್ ಗಳಿಸಿತ್ತು. ಕೊನೆಯ ಐದು ಓವರ್‌ಗಳಲ್ಲಿ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತು ಮಂಧನಾ 43 ರನ್ ಗಳಿಸಿದರು. ಮಂಧನಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡವು ಆಘಾತಕ್ಕೆ ಒಳಗಾಯಿತು. ಪರಿಣಾಮ 11 ರನ್‍ಗಳಿಂದ ಸೋಲು ಕಂಡಿತು.

  • ಕಾಲೆಳೆದ ಅಭಿಮಾನಿಗೆ ಸ್ಮಾರ್ಟ್ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ!

    ಕಾಲೆಳೆದ ಅಭಿಮಾನಿಗೆ ಸ್ಮಾರ್ಟ್ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ!

    ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರಾಡ್ರಿಗಾಸ್ ಅವರು ತಮ್ಮ ಹುಚ್ಚು ಅಭಿಮಾನಿಯೊಬ್ಬನ ಟ್ವೀಟ್‍ಗೆ ಬುದ್ಧಿವಂತಿಕೆಯ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ.

    ಜೆಮಿಮಾ ರಾಡ್ರಿಗಾಸ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‍ನಿಂದ ಗುರುತಿಸಿಕೊಂಡವರು. ಈ ಬಾರಿಯ 2019ರ ಮಹಿಳಾ ಟಿ20 ಲೀಗ್‍ನಲ್ಲಿ ತನ್ನ ತಂಡ ಸೂಪರ್‍ನೋವಾಸ್ ಪರ ಉತ್ತಮವಾಗಿ ಅಡಿದ್ದರು ಮತ್ತು ಆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಗುರುವಾರ ಮಹಿಳಾ ಟಿ20 ಲೀಗ್ ಫೈನಲ್ ಪಂದ್ಯದ ಬಳಿಕ ಅಭಿಮಾನಿ ವರುಣ್, “ಜೆಮಿನಾ ನಾನು ನಿಮ್ಮನ್ನು ಇಷ್ಟಪಡುತ್ತೇನೆ. ನೀವು ತುಂಬಾ ಸುಂದರವಾಗಿ ಇದ್ದಿರಾ, ನೀವು ಯಾರನ್ನಾದರೂ ನೋಡುತ್ತಿದ್ದಿರಾ?” ಎಂದು ಬರೆದು ಜೆಮಿಮಾ ರಾಡ್ರಿಗಾಸ್ ಅವನ್ನು ಟ್ಯಾಗ್ ಮಾಡಿ ಪ್ರೇಮ ನಿವೇದನೆ ಮಾಡಿದ್ದ.

    ಇದಕ್ಕೆ ಬಹಳ ಬುದ್ದಿವಂತಿಕೆಯಿಂದ ಉತ್ತರ ನೀಡಿರುವ ರಾಡ್ರಿಗಾಸ್ “ಹೌದು ನಾನು ನೋಡುತ್ತಿದ್ದೇನೆ, ಈ ಪಂದ್ಯದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉತ್ತಮವಾದ ಭವಿಷ್ಯವನ್ನು ನೋಡುತ್ತಿದ್ದೇನೆ” ಎಂದು ಉತ್ತರಿಸಿ ಅಭಿಮಾನಿಯ ಬಾಯಿಯನ್ನು ಮುಚ್ಚಿಸಿದ್ದಾರೆ.

    ಮಹಿಳಾ ಆಟಗಾರ್ತಿಯ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ತುಂಬಾ ಒಳ್ಳೆಯ ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ. 19 ವರ್ಷದ ಮುಂಬೈನ ಬಲಗೈ ಆಟಗಾರ್ತಿ ರಾಡ್ರಿಗಾಸ್ ಮಹಿಳಾ ಟಿ20 ಲೀಗ್‍ನಲ್ಲಿ ಮೂರು ಪಂದ್ಯಗಳನ್ನಾಡಿ ಒಟ್ಟು 123 ರನ್ ಹೊಡೆದಿದ್ದಾರೆ. ಇದರಲ್ಲಿ ವಿಲೊಸಿಟಿ ತಂಡದ ವಿರುದ್ಧ ಹೊಡೆದ 77 ರನ್ (48 ಎಸೆತ) ಅವರ ಗರಿಷ್ಠ ಮೊತ್ತವಾಗಿದೆ. ಅವರ ಈ ಸಾಧನೆಗೆ 2019 ರ ಮಹಿಳಾ ಟಿ20 ಲೀಗ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ದೂರಕಿದೆ.

  • 9 ರನ್‍ಗಳಿಗೆ ಆಲೌಟ್ – 9 ಜನರು ಶೂನ್ಯಕ್ಕೆ ಪೆವಿಲಿಯನ್‍ನತ್ತ ಹೆಜ್ಜೆ

    9 ರನ್‍ಗಳಿಗೆ ಆಲೌಟ್ – 9 ಜನರು ಶೂನ್ಯಕ್ಕೆ ಪೆವಿಲಿಯನ್‍ನತ್ತ ಹೆಜ್ಜೆ

    ಪುದುಚೇರಿ: ಕ್ರಿಕೆಟ್‍ನಲ್ಲಿ ಟಿ20 ಅತ್ಯಂತ ರೋಚಕ ಪಂದ್ಯ ಎಂದೇ ಹೇಳಲಾಗುತ್ತದೆ. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಟಿ20 ಪಂದ್ಯಗಳನ್ನು ನೋಡಲು ಬಹುತೇಕರು ಇಷ್ಟಪಡುತ್ತಾರೆ. ಈ ಪಂದ್ಯಗಳಲ್ಲಿ ಆಟಗಾರರು ಹಲವು ದಾಖಲೆಗಳನ್ನು ಬರೆಯುತ್ತಾರೆ. ಹಾಗೆಯೇ ಕೆಲವೊಂದು ಬಾರಿ ಹೀನಾಯ ಸೋಲು ಕಾಣುವ ಮೂಲಕ ಕಳಪೆ ದಾಖಲೆಗಳನ್ನು ಟಿ20 ಚುಟುಕು ಪಂದ್ಯಗಳು ಕಂಡಿವೆ. ಪುದುಚೇರಿ ಮಹಿಳೆಯರ ಟಿ20 ಪಂದ್ಯದಲ್ಲಿ ತಂಡವೊಂದು ಕೇವಲ 9 ರನ್ ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 9 ಆಟಗಾರ್ತಿಯರು ಶೂನ್ಯ ಸುತ್ತಿದ್ದಾರೆ.

    ಪುದುಚೇರಿ ಪ್ಲಮೀರಾ ಕ್ರಿಕೆಟ್ ಗ್ರೌಂಡ್ ನಲ್ಲಿ ಮಹಿಳೆಯರ ಸೀನಿಯರ್ ಟಿ20 ಪಂದ್ಯ ನಡೆದಿತ್ತು. ಮಿಜೋರಾಂ ಮತ್ತು ಮಧ್ಯ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ ಮೀಜೋರಾಂ ವನಿತೆಯರು 9 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಒಂಬತ್ತು ಆಟಗಾರ್ತಿಯರು ಖಾತೆಯನ್ನ ತೆರೆಯದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.

    14.5 ಓವರ್ ಎದುರಿಸಿದ ಮೀಜೋರಾಂ ಮಹಿಳಾ ಪಡೆ ಕೇವಲ 9 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. 25 ಬಾಲ್ ಎದುರಿಸಿದ ಅಪೂರ್ವ ಭಾರಧ್ವಾಜ್, ಒಂದು ಬೌಂಡರಿ ಸೇರಿದಂತೆ 6 ರನ್ ಹೊಡೆದರೆ ಇತರೇ ರೂಪದಲ್ಲಿ 3 ರನ್ ಸೇರಿ ತಂಡದ ಒಟ್ಟಾರೆ ಮೊತ್ತ 9 ಆಗಿತ್ತು. ಮಧ್ಯಪ್ರದೇಶದ ತಂಡದಲ್ಲಿ 7 ಮಂದಿ ಬೌಲಿಂಗ್ ಮಾಡಿದ್ದು, ಆರು ಬೌಲರ್ ಗಳು ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬೌಲರ್ ತರಂಗ ಜಾ 25 ಎಸೆತ ಹಾಕಿ 1 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು.

    ನಂತರ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶದ ವನಿತೆಯರು ಕೇವಲ ಒಂದು ಓವರ್ ನಲ್ಲಿಯೇ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಫೆಬ್ರವರಿ 20ರಂದು ನಡೆದಿದ್ದ ಟಿ20 ಮ್ಯಾಚ್ ನಲ್ಲಿ ಮೀಜೋರಾಂ ವನಿತೆಯರನ್ನು ಕೇರಳದ ಆಟಗಾರ್ತಿಯರು 24 ರನ್ ಗಳಿಗೆ ಅಲೌಟ್ ಮಾಡುವ ಮೂಲಕ 10 ವಿಕೆಟ್ ಗಳ ಜಯವನ್ನು ದಾಖಲಿಸಿದ್ದರು.

    ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚೀನಾ ತಂಡ ಯುಎಇ ಎದುರು 14 ರನ್‍ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದೂವರೆಗಿನ ಕನಿಷ್ಟ ಸ್ಕೋರ್ ಇದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಯನ್ನು ಮಹಿಳೆಯೊಬ್ಬಳು ಮುರಿದಿದ್ದಾಳೆ ಎಂದರೆ ನೀವು ನಂಬ್ತೀರಾ..? ಹೌದು, ಟೀಂ ಇಂಡಿಯಾದ ಕೊಹ್ಲಿ, ದಕ್ಷಿಣ ಆಫ್ರಿಕಾದ ಹಶೀಂ ಆಮ್ಲ ದಾಖಲೆ ಧೂಳೀಪಟವಾಗಿದೆ.

    ನಾವೂ ಪುರುಷರಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬಂತೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ಅತ್ಯಂತ ಕಡಿಮೆ ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನು ಬಾರಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ದಾಖಲೆ ಬರೆದಿದ್ದಾರೆ.

    2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾದ 258 ಮೊತ್ತವನ್ನ ಬೆನ್ನಟ್ಟಿ 8 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಮೆಗ್ ಲ್ಯಾನ್ನಿಂಗ್ ಏಕದಿನ ಪಂದ್ಯಗಳಲ್ಲಿನ 11ನೇ ಸೆಂಚುರಿ ಬಾರಿಸಿ ದಾಖಲೆ ಬರೆದರು.

    ಆಸ್ಟ್ರೇಲಿಯಾ ತಂಡದ ನಾಯಕಿಯಾದ ಲ್ಯಾನ್ನಿಂಗ್ 59 ಇನ್ನಿಂಗ್ಸ್ ನಲ್ಲಿ 11 ಸೆಂಚುರಿ ಬಾರಿಸಿದ್ದು, ಪುರುಷ ಕ್ರಿಕೆಟ್ ಆಟಗಾರರಾದ ಹಶೀಮ್ ಅಮ್ಲಾ, ಕ್ವಿಂಟನ್ ಡಿ ಕಾಕ್ ಹಾಗೂ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರ ದಾಖಲೆಯನ್ನ ಮುರಿದಿದ್ದಾರೆ. ಅಮ್ಲಾ 64 ಇನ್ನಿಂಗ್ಸ್‍ನಲ್ಲಿ 11 ಸೆಂಚುರಿ ಬಾರಿಸಿದ್ದರು. ಡಿ ಕಾಕ್ 65 ಇನ್ನಿಂಗ್ಸ್ ಹಾಗೂ ವಿರಾಟ್ ಕೊಹ್ಲಿ 82 ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನ ಬಾರಿಸಿದ್ದರು.

    ಮತ್ತೊಂದು ವಿಶೇಷತೆ ಅಂದ್ರೆ ಲ್ಯಾನ್ನಿಂಗ್ ಈ 11 ಶತಕಗಳಲ್ಲಿ 8 ಶತಕಗಳನ್ನ ಎದುರಾಳಿ ತಂಡದ ಮೊತ್ತವನ್ನ ಬೆನ್ನಟ್ಟಿದ ವೇಳೆ ಪೂರೈಸಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಿದೆ. ಪುರುಷರ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 62 ಇನ್ನಿಂಗ್ಸ್‍ನಲ್ಲಿ ಯಶಸ್ವಿ ಚೇಸಿಂಗ್‍ನಲ್ಲಿ 15 ಸೆಂಚುರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಲ್ಯಾನ್ನಿಂಗ್ ಅವರು ಗೇಲ್, ಗಿಲ್‍ಕ್ರಿಸ್ಟ್ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.

    ಲ್ಯಾನ್ನಿಂಗ್ 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯವನ್ನ ಆಡಿದ್ದು, ಈವರೆಗೆ 59 ಪಂದ್ಯಗಳಲ್ಲಿ 2835 ರನ್ ಗಳಿಸಿದ್ದಾರೆ. 11 ಸೆಂಚುರಿಗಳ ದಾಖಲೆಯ ಜೊತೆಗೆ 10 ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಗೆ ಲ್ಯಾನ್ನಿಂಗ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರ್ಲೊಟ್ ಎಡ್ವಡ್ರ್ಸ್ 9 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್‍ನ ಸೂಝಿ ಬೇಟ್ಸ್ 8 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.