Tag: Women’s commission

  • ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗದಿಂದ ನೋಟಿಸ್ ಜಾರಿ

    ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗದಿಂದ ನೋಟಿಸ್ ಜಾರಿ

    ಬೆಂಗಳೂರು: ಮಹಿಳಾ ಆಯೋಗ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ವಿಚಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

    ಮಹಿಳಾ ಆಯೋಗ ಬುಧವಾರ ಖುದ್ದು ಹಾಜರಾಗುವಂತೆ ತೇಜಸ್ವಿ ಸೂರ್ಯಗೆ ನೋಟಿಸ್ ಜಾರಿಮಾಡಿದ್ದು, ಬೆಳಗ್ಗೆ 12 ಗಂಟೆಗೆ ಹಾಜರಾಗುವಂತೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದಿಂದ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

    ಟ್ವಿಟ್ಟರ್ ನಲ್ಲಿ ಮಹಿಳೆಯೊಬ್ಬರು ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಆಧಾರದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ತೇಜಸ್ವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರಿನನ್ವಯ ನೋಟಿಸ್ ಜಾರಿ ಮಾಡಲಾಗಿದೆ.

    ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ದೂರನ್ನು ಸ್ವೀಕರಿಸಿದ್ದು, ನೊಂದ ಮಹಿಳೆಯನ್ನು ಕರೆದು ಮಾತನಾಡಿಸುತ್ತೇನೆ. ತೇಜಸ್ವಿ ಸೂರ್ಯ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ನಾಗಲಕ್ಷ್ಮಿ ಬಾಯಿ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

  • ಸಚಿವ ರೇವಣ್ಣ ವಿರುದ್ಧ ದೂರು ದಾಖಲು

    ಸಚಿವ ರೇವಣ್ಣ ವಿರುದ್ಧ ದೂರು ದಾಖಲು

    ಮಂಡ್ಯ: ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಮಂಡ್ಯದ ಬಿಜೆಪಿ ಮುಖಂಡರೊಬ್ಬರು ರೇವಣ್ಣ ವಿರುದ್ಧ ಸಲ್ಲಿಸಿದ್ದಾರೆ.

    ಬಿಜೆಪಿ ಮುಖಂಡ ಸಿಟಿ.ಮಂಜುನಾಥ್ ಮಂಡ್ಯ ಜಿಲ್ಲಾಧಿಕಾರಿ ಮುಖೇನ ಮಹಿಳಾ ಆಯೋಗಕ್ಕೆ ರೇವಣ್ಣರ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ ಆಗಲೇ ರಾಜಕೀಯಕ್ಕೆ ಬರಬೇಕಾಗಿತ್ತ ಎಂದು ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ಕೀಳುಮಟ್ಟದ ಪದ ಬಳಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳಲ್ಲ ಅಂತಿದ್ದಾರೆ. ಹೀಗಾಗಿ ಸಚಿವರಿಗೆ ಛೀಮಾರಿ ಹಾಕಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್ ರಾಜ್ಯಾಧ್ಯಕ್ಷ

    ಸುಮಲತಾ ಅವರ ವಿರುದ್ಧ ಸಚಿವ ರೇವಣ್ಣ ಹೇಳಿದ್ದ ಹೇಳಿಕೆ ಮಂಡ್ಯ ಸೇರಿದಂತೆ ಅನೇಕ ಕಡೆ ಅಂಬರೀಶ್ ಅಭಿಮಾನಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯದ ಬಗ್ಗೆ ಕ್ರಿಕೆಟ್ ಟೀಂ ಎಂದು ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಾಗೆ ಹೇಳಿಯೇ ಇಲ್ಲ, ನಾನು ನಿಮ್ಮನ್ನ ತುಂಬಾ ಗೌರವಿಸ್ತೀನಿ: ವರಸೆ ಬದಲಿಸಿದ ಶೃತಿ ಹರಿಹರನ್

    ಹಾಗೆ ಹೇಳಿಯೇ ಇಲ್ಲ, ನಾನು ನಿಮ್ಮನ್ನ ತುಂಬಾ ಗೌರವಿಸ್ತೀನಿ: ವರಸೆ ಬದಲಿಸಿದ ಶೃತಿ ಹರಿಹರನ್

    ಬೆಂಗಳೂರು: ಇಂದು ನಟಿ ಶೃತಿ ಹರಿಹರನ್ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಕಚೇರಿಗೆ ಆಗಮಿಸಿದ ಶೃತಿ ಹರಿಹರನ್, ನಾನು ಸಕ್ಕರೆ ಇದ್ದಂತೆ.. ಮಾಧ್ಯಮಗಳು ಇರುವೆ ಅಂತಾ ಹೇಳಿದ್ದರು. ಮಹಿಳಾ ಆಯೋಗದಿಂದ ಹೊರ ಬಂದಾಗ ಈ ಕುರಿತು ಪ್ರಶ್ನಿಸಿದಾಗ, ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾತು ಬದಲಿಸಿದರು.

    ನನ್ನ ಜೀವನದಲ್ಲಿ ಮಾಧ್ಯಮಗಳನ್ನು ತುಂಬಾ ಗೌರವಿಸುತ್ತೇನೆ. ನಾನು ಆ ರೀತಿ ಹೇಳಿಲ್ಲ ಅಂತಾ ಹೇಳಿದಾಗ, ನಮ್ಮ ಪ್ರತಿನಿಧಿ, ನೀವು ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಇದೆ. ಬೇಕಾದರೆ ಒಂದು ಸಾರಿ ಕೇಳಿ ಎಂದು ಪ್ರಶ್ನೆ ಮಾಡಿದರು. ಒಂದು ಕ್ಷಣ ಗೊಂದಲಕ್ಕೊಳಗಾದ ಶೃತಿ ನಗುವೊಂದನ್ನು ಬೀರಿ ಕಾರ್ ಹತ್ತಿ ಹೊರಟು ಹೋದರು.

    ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.

    https://www.youtube.com/watch?v=M2Dxy7i5YEU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಾನು ಸಕ್ಕರೆ ಇದ್ದಂತೆ-ತಮ್ಮನ್ನ ತಾವೇ ಹೊಗಳಿಕೊಂಡ ಮೀಟೂ ಬೆಡಗಿ ಶೃತಿ ಹರಿಹರನ್

    ನಾನು ಸಕ್ಕರೆ ಇದ್ದಂತೆ-ತಮ್ಮನ್ನ ತಾವೇ ಹೊಗಳಿಕೊಂಡ ಮೀಟೂ ಬೆಡಗಿ ಶೃತಿ ಹರಿಹರನ್

    ಬೆಂಗಳೂರು: ನಟಿ ಶೃತಿ ಹರಿಹರನ್ ಮಾಧ್ಯಮಗಳನ್ನು ಕಂಡು ಗರಂ ಆಗಿ, ನಾನೊಂಥರಾ ಸಕ್ಕರೆ ಇದ್ದಂತೆ, ಅದಕ್ಕೆ ಮಾಧ್ಯಮಗಳು ಇರುವೆಗಳ ರೀತಿಯಲ್ಲಿ ನನ್ನ ಹಿಂದೆ ಬರುತ್ತವೆ ಎಂದು ಹೇಳಿ ತಮ್ಮನ್ನು ತಾವೇ ಹೊಗಳಿಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

    ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಇತ್ತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ ಸಹಜವಾಗಿ ಶೃತಿ ಮೇಲೆ ಅಸಮಾಧಾನಗೊಂಡಿತಂತೆ.

    ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.

    ಶೃತಿ ಹರಿಹರನ್ ಕಚೇರಿಗೆ ಬರುವ ಮುನ್ನ ಮಾತನಾಡಿದ ನಾಗಲಕ್ಷ್ಮಿ, ಹೋದ ವಾರ ಬರುತ್ತೀನಿ ಅಂತ ಶೃತಿ ಹರಿಹರನ್ ಹೇಳಿದ್ದರು. ಆದರೆ ಸಾಲು ಸಾಲುಗಳು ಹಬ್ಬ ಬಂದಿದ್ದರಿಂದ ಬರಲಿಲ್ಲ. ಇಂದು ಬರುತ್ತೀನಿ ಅಂದ್ರು. ನನ್ನ ಬಳಿ ತಮ್ಮ ನೋವನ್ನು ಹೇಳಿಕೊಳ್ಳುತ್ತೇನೆ ಅಂತಾ ಅಂದ್ರು. ಮಹಿಳೆಯರು ತಮಗಾದ ನೋವನ್ನು ನಮ್ಮ ಮುಂದೆ ಬಂದು ಹೇಳಲಿ ಅಥವಾ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಬಹುದು. ಅದನ್ನು ಬಿಟ್ಟು ಫೇಸ್‍ಬುಕ್, ಟ್ವಿಟ್ಟರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಉಚಿತವಲ್ಲ. ಶೃತಿ ಹರಿಹರನ್ ಪ್ರಕರಣ ಈಗಾಗಲೇ ನ್ಯಾಯಲಯದಲ್ಲಿದ್ದರಿಂದ ನಾನು ಯಾರ ಪರವಾಗಿಯೂ ಇಲ್ಲ. ಬಂದ ಮೇಲೆ ಶೃತಿ ಏನು ಹೇಳ್ತಾರೆ ಎಂದು ಕೇಳಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಸಹನೆಗೆ ಕಾರಣವೇನು?

    ಶ್ರುತಿ ವಿರುದ್ಧ ಮಹಿಳಾ ಆಯೋಗದ ಅಸಹನೆಗೆ ಕಾರಣವೇನು?

    ಬೆಂಗಳೂರು: ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಮೀ ಟೂ ಆರೋಪ ದಿನಕ್ಕೊಂದು ರೂಪ ಪಡೆಯುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗ ಇತ್ತೀಚೆಗೆ ಸ್ವಯಂಪ್ರೇರಿತ ದೂರು ದಾಖಲಿಸಿತ್ತಲ್ಲಾ? ಇದೀಗ ಖುದ್ದು ಮಹಿಳಾ ಆಯೋಗವೇ ಶ್ರುತಿ ಹರಿಹರನ್ ವಿರುದ್ಧ ಅಸಹನೆಗೊಂಡಿರೋ ಸುದ್ದಿಯೊಂದು ಹೊರಬಿದ್ದಿದೆ.

    ಹೀಗೊಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ಈ ಬಗ್ಗೆ ಹೇಳಿಕೆ ಕೊಡುವಂತೆ ಶ್ರುತಿ ಹರಿಹರನ್ ಗೆ ಸೂಚಿಸಿತ್ತು. ಆದರೆ ಶ್ರುತಿ ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಇದಲ್ಲದೇ ಆಯೋಗದ ಫೋನ್ ಕರೆ, ಸಂದೇಶಗಳಿಗೂ ಶ್ರುತಿ ಪ್ರತಿಕ್ರಿಯಿಸುತ್ತಿಲ್ಲವಂತೆ. ಇದುವೇ ಮಹಿಳಾ ಆಯೋಗದ ಅಸಹನೆಗೆ ಕಾರಣವಾಗಿದೆ.

    ಇದೆಲ್ಲದರಿಂದಾಗಿ ಮಹಿಳಾ ಆಯೋಗ ಶ್ರುತಿಗೊಂದು ಖಡಕ್ಕು ಸಂದೇಶ ರವಾನಿಸಿದೆಯಂತೆ. ಇದನ್ನು ಕಂಡು ಕಸಿವಿಸಿಗೊಂಡ ಶ್ರುತಿ ಕ್ಷಮೆ ಯಾಚಿಸಿ ಸೋಮವಾರ ಹಾಜರಾಗಿ ಹೇಳಿಕೆ ಕೊಡೋದಾಗಿ ಹೇಳಿದ್ದಾರಂತೆ. ಶ್ರುತಿ ಮಹಿಳಾ ಆಯೋಗದ ಮುಂದೆ ಹೋಗಿ ಹೇಳಿಕೆ ಕೊಡಲು ಯಾಕೆ ಮೀನ-ಮೇಷ ಎಣಿಸುತ್ತಿದ್ದಾರೆಂಬ ಪ್ರಶ್ನೆಯೂ ಸಹಜವಾಗಿಯೇ ಕಾಡುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಂಗೆ ಅರ್ಜೆಂಟಾಗಿ ಗಂಡು ಮಗು ಬೇಕೇಬೇಕು – ಬಾಣಂತಿಗೆ ಗಂಡ ಲೈಂಗಿಕ ಕಿರುಕುಳ

    ನಂಗೆ ಅರ್ಜೆಂಟಾಗಿ ಗಂಡು ಮಗು ಬೇಕೇಬೇಕು – ಬಾಣಂತಿಗೆ ಗಂಡ ಲೈಂಗಿಕ ಕಿರುಕುಳ

    ಬೆಂಗಳೂರು: ಮೊದಲ ಮಗು ಹೆಣ್ಣು, ಆದ್ದರಿಂದ ನನಗೆ ಅರ್ಜೆಂಟಾಗಿ ಗಂಡು ಮಗು ಬೇಕು. ನನ್ನ ವಂಶ ಬೆಳೆಯಬೇಕು. ನಮ್ಮ ಧರ್ಮದಲ್ಲಿ ನಾಲ್ಕೈದು ಮಕ್ಕಳನ್ನ ಹೆರಬೇಕು ಎಂದು ಪತಿ ಬಾಣಂತಿ ಪತ್ನಿಗೆ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಾಜಾನುಕುಂಟೆ ನಿವಾಸಿ ತಯ್ಯಬ್ ಅಹಮದ್ ಖಾನ್ ಬಾಣಂತಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಚಿಂತಾಮಣಿಯ ಕೈವಾರದ ತಾಹಸೀನ್ ಖಾನಂ ರಾಜಾನುಕುಂಟೆ ನಿವಾಸಿ ತಯ್ಯಬ್ ಅಹಮದ್ ಖಾನ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಾರೆ. 30 ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

    ಮದುವೆಯ ನಂತರ ತಯ್ಯಬ್ ಅಹಮದ್ ನ ವರದಕ್ಷಿಣೆ ದಾಹ ತೀರಲೇ ಇಲ್ಲ. ನಿತ್ಯ ದುಡ್ಡು ತರುವಂತೆ ಪೀಡಿಸಿ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ. ಹೆಣ್ಣು ಮಗು ಆದ ಮೇಲಂತೂ ಇದು ಅತಿರೇಕಕ್ಕೆ ಹೋಗಿದೆ. ನನಗೆ ಗಂಡು ಬೇಕು ಎಂದು ಕೇಳಿದ್ದಾನೆ. ಅದಕ್ಕೆ ಅಕ್ಕ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದಾರೆ. ಆದರೂ ಆತ ಕೇಳದೆ ಮಗು ಬೇಕೇಬೇಕು ಅಂತ ನನ್ನ ಅಕ್ಕನನ್ನ ರೇಪ್ ಮಾಡಿದ್ದಾನೆ ಎಂದು ಅಹಮದ್ ಪತ್ನಿಯ ಸಹೋದರಿ ಆರೋಪಿಸಿದ್ದು, ನನ್ನ ಅಕ್ಕ ಹಾಗೂ ಮಗುವಿಗೆ ರಕ್ಷಣೆ ಕೊಡಿಸಿ ಅಂತ ಕೇಳಿಕೊಳ್ಳುತ್ತಿದ್ದಾರೆ.

    ಮೊದಲ ಮಗು ಹೆಣ್ಣಾಗಿದೆ ನಮ್ಮ ವಂಶ ಬೆಳೆಯಲ್ಲ. ಹೆರಿಗೆ ಬೇರೆ ಸಿಜೇರಿಯನ್ ಮಾಡಿಸಿಕೊಂಡಿದ್ದೀಯಾ. ಇನ್ನು ಹೆಚ್ಚು ಮಕ್ಕಳನ್ನ ಹೆರುವುದಕ್ಕೆ ಸಾಧ್ಯವಿಲ್ಲ. ನನಗೆ ನೀನು ಬೇಡ ಅಂತ ಅಂದಿದ್ದಾನೆ. ಅಲ್ಲದೇ ಬಾಣಂತಿಯಾಗಿರುವಾಗಲೇ ಮಗು ಬೇಕು ಅಂತ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾನೆ. ನನ್ನ ಪತಿಯಿಂದ ನನಗೆ ಮುಕ್ತಿ ಕೊಡಿಸಿ ಅಂತ ನೊಂದ ಪತ್ನಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

    ನೊಂದ ಪತ್ನಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂರು ಬಾರಿ ಬೆಸ್ಟ್ ಪ್ರಿನ್ಸಿಪಾಲ್ ಎಂದು ಅವಾರ್ಡ್ ಪಡೆದಿದ್ದು, ಈಗ ಅವರು ಆಯೋಗದ ಮೊರೆ ಹೋಗಿದ್ದಾರೆ. ಸದ್ಯಕ್ಕೆ  ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆಯವರು ಆರೋಪಿ ತಯ್ಯಬ್ ಅಹಮದ್ ನಿಂದ ನ್ಯಾಯ ದೊರಕಿಸಿಕೊಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ- ಪತಿಯಿಂದ ಪತ್ನಿ ಬಲಿಗೆ ಸಂಚು

    ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ- ಪತಿಯಿಂದ ಪತ್ನಿ ಬಲಿಗೆ ಸಂಚು

    ಬೆಂಗಳೂರು: ನಿಧಿ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಲಿ ಪಡೆಯಲು ಸಂಚು ರೂಪಿಸಿರುವ ಘಟನೆ ನಗರದ ಉಳ್ಳಾಲದಲ್ಲಿ ನಡೆದಿದೆ.

    ಮಹಾಲಿಂಗೇಶ್ ನಿಧಿ ಆಸೆಗಾಗಿ ಪತ್ನಿಯನ್ನು ಬಲಿ ಕೊಡಲು ಸಂಚು ರೂಪಿಸಿದ್ದ ಆರೋಪಿ. ಕುಂಭ ರಾಶಿಯ ಮಹಿಳೆಯನ್ನು ಬಲಿಕೊಟ್ಟರೆ ನಿಧಿ ಸಿಗುತ್ತೆ ಎಂಬ ವದಂತಿ ಹಿನ್ನೆಲೆ ಪತ್ನಿ ಸವಿತಾರನ್ನು ಬಲಿಕೊಡಲು ಸಿದ್ಧತೆ ನಡೆಸಿದ್ದ.

    ಈ ಕುರಿತು ಮಾಹಿತಿ ಪಡೆದ ಸವಿತಾ ಅವರು ಗಂಡನಿಂದ ರಕ್ಷಣೆ ಪಡೆಯಲು ಮಹಿಳಾ ಆಯೊಗದ ಮೊರೆ ಹೋಗಿದ್ದಾರೆ. ಮಹಿಳಾ ಆಯೋಗದ ಮಾಹಿತಿ ಮೇರೆಗೆ ಪೊಲೀಸರು ಮಹಾಲಿಂಗೇಶ್ ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಕಳೆದ 15 ವರ್ಷಗಳ ಹಿಂದೆ ಮಹಾಲಿಂಗೇಶ್ ಹಾಗೂ ಸವಿತಾರ ಮದುವೆಯಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಮೂವರು ಹೆಣ್ಣು ಮಕ್ಕಳು ಸಾಕ್ಷಿಯಾಗಿದ್ದಾರೆ. ಆದರೆ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಹೆತ್ತ ಕಾರಣದಿಂದ ಮಹಾಲಿಂಗೇಶ್ ಕಿರುಕುಳ ನೀಡುತ್ತಿದ್ದ. ಅಲ್ಲದೇ ಉಳ್ಳಾಲ ಬಳಿ 7 ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿರುವ ಮಹಾಲಿಂಗೇಶ್ ನಿಧಿ ಆಸೆಗಾಗಿ ಸಂಚು ರೂಪಿಸಿದ್ದ ಎನ್ನಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಪತ್ನಿ ಸವಿತಾ, ತನ್ನ ಪತಿಗೆ ಈ ಕೃತ್ಯ ಸಂಚು ರೂಪಿಸಲು ಮಾರ್ಥಂಡ ಎಂಬಾತ ಬೆಂಬಲ ನೀಡುತ್ತಿದ್ದಾನೆ. ಅವರ ಮಾತಿನ ಹಿನ್ನೆಲೆಯಲ್ಲಿ ತನಗೆ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ವದರಕ್ಷಿಣೆ ತರುವಂತೆ ಹಿಂಸೆ ನೀಡಿದ್ದ. ಕಿರುಕುಳ ತಡೆಯಲು ಸಾಧ್ಯವಾಗದೆ 27 ಲಕ್ಷ ರೂ. ನೀಡಿದ್ದೇನೆ. ತನ್ನ ತಂಗಿಯನ್ನು ಮದುವೆ ಮಾಡಿಕೊಡಲು ಒತ್ತಡ ಹಾಕಿದ್ದ. ಪತಿ ತನ್ನ ತಂದೆ ತಾಯಿಗೂ ಹಿಂಸೆ ನೀಡಿ ಅವರ ಮೇಲೂ ಹಲ್ಲೆ ನಡೆಸುತ್ತಿದ್ದ, ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳಿಗೂ ಸಹ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವ ರೀತಿ ಮಾಡಿ ದೂರ ಮಾಡಿದ್ದ ಎಂದು ತಿಳಿಸಿದ್ದಾರೆ.

    ದೇವಾಲಯದಲ್ಲೇ ಗುಂಡಿ: ಪತ್ನಿ ಕುಂಭ ರಾಶಿ ಆಗಿದ್ದ ಕಾರಣ ಆಕೆಯನ್ನು ಬಲಿ ಕೊಡಲು ಗುಂಡಿಯನ್ನು ನಿರ್ಮಾಣ ಮಾಡಿದ್ದ. ಪ್ರತಿದಿನ ಆ ಸ್ಥಳದಲ್ಲಿ ಪೂಜೆ ನಡೆಸುತ್ತಿದ್ದ. ಅಮವಾಸೆ ವೇಳೆ ಪತ್ನಿಯನ್ನು ಬಲಿ ನೀಡಿ ಗುಂಡಿಯಲ್ಲಿ ಮುಚ್ಚಿದರೆ ನಿಧಿ ದೊರೆಯುತ್ತದೆ ಎಂಬ ವದಂತಿಯ ಮೇಲೆ ಈ ಕೃತ್ಯ ನಡೆಸಲು ಮುಂದಾಗಿದ್ದ. ಈ ಕುರಿತು ಸವಿತಾ ಬಳಿ ಪತಿಯೇ ಮಾಹಿತಿ ನೀಡಿದ್ದು, ನಿನ್ನನ್ನು ಬಲಿ ನೀಡಿ ಆಪಾರ ಆಸ್ತಿ ಪಡೆಯುತ್ತೇನೆ. ಈ ವೇಳೆ ತಾನು ಜೈಲಿಗೆ ಹೋದರು ಸರಿ ಹಣದ ಬಲದಿಂದ ಹೊರಬರುತ್ತೇನೆ ಎಂದು ಹೇಳಿದ್ದ ಎಂದು ಸವಿತಾ ತಿಳಿಸಿದ್ದಾರೆ.

    https://www.youtube.com/watch?v=WFiU2igakfA

  • ಬಿಜೆಪಿ ಶಾಸಕ ತಿಪ್ಪರಾಜು- ಪಿಎಸ್‍ಐ ಪ್ರೇಮ ಪ್ರಸಂಗ ಆರೋಪ: ಮಹಿಳಾ ಆಯೋಗಕ್ಕೆ ದೂರು ನೀಡೇ ಇಲ್ಲ ಎಂದ ಪತ್ನಿ

    ಬಿಜೆಪಿ ಶಾಸಕ ತಿಪ್ಪರಾಜು- ಪಿಎಸ್‍ಐ ಪ್ರೇಮ ಪ್ರಸಂಗ ಆರೋಪ: ಮಹಿಳಾ ಆಯೋಗಕ್ಕೆ ದೂರು ನೀಡೇ ಇಲ್ಲ ಎಂದ ಪತ್ನಿ

    ರಾಯಚೂರು: ರಾಯಚೂರು ಗ್ರಾಮಾಂತರ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

    ಶಾಸಕ ತಿಪ್ಪರಾಜು 2013 ರಿಂದಲೂ ಪಿಎಸ್‍ಐ ಬೇಬಿ ವಾಲಿಕಾರ್ ಜೊತೆ ಒಡನಾಟ ಹೊಂದಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸಂಬಂಧ ಸ್ವತಃ ತಿಪ್ಪರಾಜು ಪತ್ನಿ ಸೌಮ್ಯ ನ್ಯಾಯ ಕೋರಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ದೂರು ಆಧರಿಸಿದ ಮಹಿಳಾ ಆಯೋಗ ಕೂಡ ಪೊಲೀಸ್ ತನಿಖೆಗೆ ಆದೇಶ ನೀಡಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ನನಗೆ ದೂರು ಕೊಟ್ಟು ಒಂದು ತಿಂಗಳಾಗಿದೆ. ದೂರಿನಲ್ಲಿ ಶಾಸಕರ ಪತ್ನಿಯ ವಿಳಾಸ ಇರಲಿಲ್ಲ. ಹೀಗಾಗಿ ಅವರ ವಿಳಾಸ ಪಡೆದ ನಂತರ ತನಿಖೆಗೆ ಆದೇಶಿಸಿದ್ದೇನೆ. ಅಲ್ಲದೆ ನಿರಂತರವಾಗಿ ಶಾಸಕರ ಪತ್ನಿಗೆ ಕರೆ ಮಾಡಿದ್ರೂ ಅವರು ಸ್ವೀಕರಿಸುತ್ತಿಲ್ಲ ಅಂದ್ರು. ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಗಣಿಸಿದ್ದು ತನಿಖೆ ನಡೆಸ್ತೇವೆ ಅಂದ್ರು.

    ಇದೇ ವೇಳೆ ಪಬ್ಲಿಕ್ ಟಿವಿ ದೂರವಾಣಿ ಸಂಪರ್ಕಕ್ಕೆ ಸಿಕ್ಕ ಶಾಸಕ ತಿಪ್ಪರಾಜು ಹವಾಲ್ದಾರ್, ಇದೆಲ್ಲಾ ಸುಳ್ಳು. ಈ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ನನ್ನ ಪತ್ನಿಯ ಜೊತೆಗೆ ಇದ್ದೇನೆ. ನನ್ನ ಹೆಂಡತಿ ಯಾವ ಆಯೋಗಕ್ಕೂ ದೂರು ನೀಡಿಲ್ಲ. ನನ್ನ ತೇಜೋವಧೆ ಬಗ್ಗೆ ನನ್ನ ಪತ್ನಿ ಜೊತೆ ದೂರು ನೀಡ್ತೇನೆ ಅಂದ್ರು.

    ತಿಪ್ಪರಾಜು ಅವರ ಹೆಂಡತಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಶುದ್ಧ ಸುಳ್ಳು. ನಾನು ನನ್ನ ಗಂಡನ ಜೊತೆಯೇ ಇದ್ದೇನೆ. ನನ್ನ ಹೆಸರಿನಲ್ಲಿ ಸುಳ್ಳು ದೂರು ನೀಡಿದ್ದಾರೆ. ನಾನು ಎಲ್ಲಿಯೂ ದೂರು ನೀಡಿಲ್ಲ. ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೀತಿದೆ. ನನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳು ದೂರು ನೀಡಿದವರ ವಿರುದ್ಧ ನನ್ನ ಗಂಡನ ಜೊತೆ ಹೋರಾಡುತ್ತೇನೆ. ವಾಲಿಕಾರ್‍ಗೂ ನನ್ನ ಪತಿಗೂ ಯಾವುದೇ ಸಂಬಂಧವಿಲ್ಲ. ಕುತಂತ್ರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದಿದ್ದಾರೆ.

    ಪಿಎಸ್‍ಐ ವಾಲೇಕರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಿಳಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು. ನನ್ನ ತೇಜೋವಧೆ ಮಾಡಲಾಗ್ತಿದೆ. ಮಹಿಳಾ ಆಯೋಗದ ಅಧ್ಯೆಕ್ಷೆ ಒಬ್ಬ ಮಹಿಳೆಯಾಗಿ ಈ ರೀತಿ ಸುದ್ದಿ ಹಬ್ಬಿಸಿರೋದು ಖಂಡನೀಯ. ಈ ಬಗ್ಗೆ ನನಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಪಡೆಯಬಹುದಾಗಿತ್ತು. ನನ್ನ ತೇಜೋವಧೆ ಮಾಡಿದವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದಾರೆ.