Tag: Womens Asia Cup 2022

  • ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್‌ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ

    ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್‌ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ

    ಢಾಕಾ: ಮಹಿಳಾ ಏಷ್ಯಾಕಪ್ (Womens Asia Cup) ಸೆಮಿಫೈನಲ್‍ನಲ್ಲಿ ಥಾಯ್ಲೆಂಡ್‌ (Thailand) ವಿರುದ್ಧ 74 ರನ್‍ಗಳ ಭರ್ಜರಿ ಜಯದೊಂದಿಗೆ ಭಾರತ (India)  ಫೈನಲ್‍ಗೆ ಲಗ್ಗೆ ಇಟ್ಟಿದೆ.

    ಭಾರತ ನೀಡಿದ 149 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಥಾಯ್ಲೆಂಡ್‌ 20 ಓವರ್‌ಗಳಲ್ಲಿ ಕೇವಲ 74 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇತ್ತ ಭಾರತ 74 ರನ್‍ಗಳ ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಬ್ಯಾಟಿಂಗ್‍ನಲ್ಲಿ ಶಿಫಾಲಿ ವರ್ಮಾ (Shafali Verma) ಮಿಂಚಿದರೆ, ಬಳಿಕ ಬೌಲಿಂಗ್‍ನಲ್ಲಿ ದೀಪ್ತಿ ಶರ್ಮಾರ (Deepti Sharma)  ಮ್ಯಾಜಿಕ್‍ನಿಂದಾಗಿ ಭಾರತ ಜಯಭೇರಿ ಬಾರಿಸಿದೆ. ಇದನ್ನೂ ಓದಿ: ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್

    ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಥಾಯ್ಲೆಂಡ್‌ ಬ್ಯಾಟರ್‌ಗಳು ದೀಪ್ತಿ ಶರ್ಮಾರ ದಾಳಿಗೆ ಕಕ್ಕಾಬಿಕ್ಕಿಯಾದರು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಥಾಯ್ಲೆಂಡ್‌ಗೆ ಬ್ಯಾಟರ್‌ಗಳು ಸಾಥ್ ನೀಡಲು ಪರದಾಡಿದರು. ನರುಯೆಮೊಲ್ ಚೈವಾಯಿ 21 ರನ್ (41 ಎಸೆತ) ಮತ್ತು ನಟ್ಟಾಯ ಬೂಚಾತಂ 21 ರನ್ (29 ಎಸೆತ, 1 ಬೌಂಡರಿ) ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ 9 ಮಂದಿ ಬ್ಯಾಟರ್‌ಗಳು ಒಂದಂಕಿ ಮೊತ್ತ ದಾಟಲಿಲ್ಲ. ಭಾರತ ಪರ ದೀಪ್ತಿ ಶರ್ಮಾ 4 ಓವರ್ ಎಸೆದು 1 ಮೇಡನ್ ಸಹಿತ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಈ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಶಿಫಾಲಿ ವರ್ಮಾ 42 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಮಿಂಚಿದರು. ಇವರನ್ನು ಹೊರತು ಪಡಿಸಿ ಜೆಮಿಮಾ ರಾಡ್ರಿಗಸ್ 27 ರನ್ (26 ಎಸೆತ, 3 ಬೌಂಡರಿ) ಮತ್ತು ಹರ್ಮನ್‍ಪ್ರೀತ್ ಕೌರ್ 36 ರನ್ (30 ಎಸೆತ, 4 ಬೌಂಡರಿ) ನೆರವಿನಿಂದ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಸವಾಲಿನ ಮೊತ್ತ ಪೇರಿಸಿತು.

    Live Tv
    [brid partner=56869869 player=32851 video=960834 autoplay=true]

  • Womens Asia Cup: ರಿಚಾ ಘೋಷ್ ವಿಫಲ ಹೋರಾಟ – ಪಾಕ್ ವಿರುದ್ಧ ಭಾರತಕ್ಕೆ ಸೋಲು

    Womens Asia Cup: ರಿಚಾ ಘೋಷ್ ವಿಫಲ ಹೋರಾಟ – ಪಾಕ್ ವಿರುದ್ಧ ಭಾರತಕ್ಕೆ ಸೋಲು

    ಢಾಕಾ: ಮಹಿಳಾ ಏಷ್ಯಾಕಪ್ (Womens Asia Cup) ಲೀಗ್ ಹಂತದ ಪಂದ್ಯದಲ್ಲಿ ಭಾರತ (India) ವಿರುದ್ಧ ಪಾಕಿಸ್ತಾನ (Pakistan) 13 ರನ್‍ಗಳ ಜಯ ಸಾಧಿಸಿದೆ.

    ಪಾಕಿಸ್ತಾನ ನೀಡಿದ 138 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ 19.4 ಓವರ್‌ಗಳಲ್ಲಿ 124 ರನ್‍ಗಳಿಗೆ ಆಲೌಟ್ ಆಗಿ 13 ರನ್‍ಗಳಿಂದ ವಿರೋಚಿತ ಸೋಲುಂಡಿದೆ. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ಭಾರತ ಪರ ಆರಂಭಿರಾಗಿ ಕಣಕ್ಕಿಳಿದ ಸಬ್ಬಿನೇನಿ ಮೇಘನಾ 15 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಸ್ಮೃತಿ ಮಂಧಾನ 17 ರನ್ (19 ಎಸೆತ, 2 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಹೇಮಲತಾ 20 ರನ್ (22 ಎಸೆತ, 3 ಬೌಂಡರಿ), ದೀಪ್ತಿ ಶರ್ಮಾ 16 ರನ್, ಹರ್ಮನ್‍ಪ್ರೀತ್ ಕೌರ್ 12 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

    ಇನ್ನೊಂದೆಡೆ ಗೆಲುವಿಗಾಗಿ ಹೋರಾಡಿದ ರಿಚಾ ಘೋಷ್ 26 ರನ್ (13 ಎಸೆತ, 1 ಬೌಂಡರಿ, 3 ಸಿಕ್ಸ್) 18.3ನೇ ಓವರ್‌ನಲ್ಲಿ ಔಟ್ ಆಗುತ್ತಿದ್ದಂತೆ ಭಾರತದ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 19.4 ಓವರ್‌ಗಳ ಅಂತ್ಯಕ್ಕೆ 124 ರನ್‍ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಪಾಕ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ನಶ್ರಾ ಸಂಧು 3 ವಿಕೆಟ್ ಪಡೆದು ಭಾರತದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ನಿದಾ ದಾರ್ ಮತ್ತು ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಹಂಚಿಕೊಂಡರೆ, ಐಮನ್ ಅನ್ವರ್ ತುಬಾ ಹಸನ ತಲಾ 1 ವಿಕೆಟ್ ಕಿತ್ತರು.

    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ದೀಪ್ತಿ ಶರ್ಮಾ ಕಂಠಕವಾದರು. ಬಿಸ್ಮಾ ಮರೂಫ್ 32 ರನ್ (35 ಎಸೆತ, 2 ಬೌಂಡರಿ) ಮತ್ತು ನಿದಾ ದಾರ್ ಅಜೇಯ 56 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ಭಾರತದ ಬೌಲರ್‌ಗಳು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಲಷ್ಟೇ ಶಕ್ತವಾಗುವಂತೆ ನೋಡಿಕೊಂಡರು. ಭಾರತದ ಪರತ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ 2 ಮತ್ತು ರೇಣುಕಾ ಸಿಂಗ್ 1 ವಿಕೆಟ್ ತನ್ನದಾಗಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಅಮ್ಮ ಅಂಪೈರ್, ಮಗಳು ಪ್ಲೇಯರ್ – ಏಷ್ಯಾಕಪ್‍ನಲ್ಲಿ ಅಪರೂಪದ ಜೋಡಿ

    ಅಮ್ಮ ಅಂಪೈರ್, ಮಗಳು ಪ್ಲೇಯರ್ – ಏಷ್ಯಾಕಪ್‍ನಲ್ಲಿ ಅಪರೂಪದ ಜೋಡಿ

    ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ (Women’s Asia Cup 2022) ಅಮ್ಮ, ಮಗಳ (Mother-Daughter) ಜೋಡಿಯೊಂದು ಕಮಾಲ್ ಮಾಡುತ್ತಿದೆ.

    ಪಾಕಿಸ್ತಾನದ (Pakistan) ಮಹಿಳಾ ಅಂಪೈರ್ ಸಲೀಮಾ ಇಮ್ತಿಯಾಜ್ (Saleema Imtiaz), ನಿನ್ನೆ ಸಿಲ್ಹೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಮೂಲಕ ಅಂಪೈರ್ ಆಗಿ ಡೆಬ್ಯೂ ಮಾಡಿದರು. ಸಲೀಮಾ ಇಮ್ತಿಯಾಜ್ ಪಾಕಿಸ್ತಾನ ತಂಡದ ಆಲ್‍ರೌಂಡರ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ (Kainat Imtiaz) ಅವರ ತಾಯಿ. ಸದ್ಯ ಇವರಿಬ್ಬರು ಏಷ್ಯಾಕಪ್‍ನ ಭಾಗವಾಗಿದ್ದಾರೆ. ಇದನ್ನೂ ಓದಿ: IND vs SA 2nd T20I: ಟಿಕೆಟ್ ಸೋಲ್ಡ್ ಔಟ್ – ಪಂದ್ಯ ನಡೆಯೋದೆ ಡೌಟ್

    ಕೈನಾತ್ ಇಮ್ತಿಯಾಜ್ ಏಷ್ಯಾಕಪ್‍ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಕೈನಾತ್ ಇಮ್ತಿಯಾಜ್ ಪಾಕಿಸ್ತಾನ ತಂಡದ ಆಟಗಾರ್ತಿಯಾಗಿ ಕಣಕ್ಕಿಳಿಯಲು ಎದುರುನೋಡುತ್ತಿದ್ದಾರೆ. ಇದನ್ನೂ ಓದಿ: ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ – ಕೊಹ್ಲಿ ಆಹ್ವಾನಿಸಿದ ಪಾಕ್ ಅಭಿಮಾನಿ

     

    View this post on Instagram

     

    A post shared by Kainat Waqar (@kainatimtiaz23)

    ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕೈನಾತ್ ಇಮ್ತಿಯಾಜ್, ನನ್ನ ತಾಯಿ ಐಸಿಸಿ (ICC) ಮಹಿಳಾ ವಿಶ್ವಕಪ್ ಪಂದ್ಯದ ಮೂಲಕ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗೆ ಇದು ತುಂಬಾ ವಿಶೇಷ ದಿನ ಅವರ ಸಾಧನೆ ತುಂಬಾ ಖುಷಿ ನೀಡಿದೆ. ನನಗೆ ಅವರು ಸ್ಪೂರ್ತಿ, ಅವರ ಕನಸಾಗಿತ್ತು ಪಾಕಿಸ್ತಾವನ್ನು ಪ್ರತಿನಿಧಿಸಬೇಕೆಂದು ಇದೀಗ ಅವರು ಅಂಪೈರ್ ಆಗಿ ಏಷ್ಯಾಕಪ್‍ನಲ್ಲಿದ್ದಾರೆ. ನನಗೆ ತುಂಬಾ ಹೆಮ್ಮೆಯಾಗಿದೆ. ಇದೀಗ ನಾವಿಬ್ಬರು ಒಂದೇ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ನನಗೆ ಮತ್ತು ಅಮ್ಮನಿಗೆ ಸದಾ ಬೆನ್ನೆಲುಬಾಗಿ ನಿಂತ ಅಪ್ಪನಿಗೆ ಧನ್ಯವಾದ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ಏಷ್ಯಾಕಪ್‍ಗೆ ಭಾರತ ತಂಡ ಪ್ರಕಟ – ಕೌರ್ ನಾಯಕಿ, ಮಂದಾನ ಉಪನಾಯಕಿ

    ಮಹಿಳಾ ಏಷ್ಯಾಕಪ್‍ಗೆ ಭಾರತ ತಂಡ ಪ್ರಕಟ – ಕೌರ್ ನಾಯಕಿ, ಮಂದಾನ ಉಪನಾಯಕಿ

    ಮುಂಬೈ: ಮಹಿಳಾ ಏಷ್ಯಾಕಪ್ 2022ಕ್ಕೆ (Womens Asia Cup 2022) ಭಾರತದ ಮಹಿಳಾ ತಂಡ (Team India) ಪ್ರಕಟಗೊಂಡಿದ್ದು, ಒಟ್ಟು 15 ಸದಸ್ಯರ ತಂಡವನ್ನು ಬಿಸಿಸಿಐ (BCCI) ಇಂದು ಪ್ರಕಟಿಸಿದೆ.

    ತಂಡವನ್ನು ಹರ್ಮನ್‍ಪ್ರೀತ್ ಕೌರ್ (Harmanpreet Kaur) ಮುನ್ನಡೆಸುತ್ತಿದ್ದು, ಸ್ಮೃತಿ ಮಂದಾನ (Smriti Mandhana) ಉಪನಾಯಕಿಯಾಗಿದ್ದಾರೆ. ತಾನಿಯಾ ಭಾಟಿಯಾ ಮತ್ತು ಸಿಮ್ರಾನ್ ದಿಲ್ ಬಹದ್ದೂರ್‌ರನ್ನು ಸ್ಟ್ಯಾಂಡ್ ಬೈ ಆಟಗಾರ್ತಿಯರನ್ನಾಗಿ ಆಯ್ಕೆ ಮಾಡಲಾಗಿದೆ. ಮಹಿಳಾ ಏಷ್ಯಾಕಪ್ ಅಕ್ಟೋಬರ್ 1 ರಿಂದ 15 ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿದೆ. ಇದನ್ನೂ ಓದಿ: 8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    ಅಕ್ಟೋಬರ್ 7 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಒಟ್ಟು 7 ಏಷ್ಯಾದ ತಂಡಗಳಾದ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಮಲೇಷ್ಯಾ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಇದನ್ನೂ ಓದಿ: ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್‌ಗೆ 4 ವಿಕೆಟ್‌ಗಳ ಜಯ

    ತಂಡ ಹೀಗಿದೆ:
    ಹರ್ಮನ್‍ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್-ಕೀಪರ್), ಸ್ನೇಹ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ರಾಜೇಶ್ವರಿ ವಸ್ತ್ರಾಕರ್, ಪೂಜಾ ಗಾಯಕವಾಡ್, ರಾಧಾ ಯಾದವ್, ಕೆ.ಪಿ. ನವಗಿರೆ

    Live Tv
    [brid partner=56869869 player=32851 video=960834 autoplay=true]