Tag: womens

  • ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

    – ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮದ ಎಚ್ಚರಿಕೆ

    ಬೆಂಗಳೂರು: ಋತುಚಕ್ರ ರಜೆಯನ್ನು (Period Leave) ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದ್ರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ (Santosh Lad) ಅವರು ಹೇಳಿದರು.

    ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.  ಇದನ್ನೂ ಓದಿ: ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು (Women Employee) ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಮ್ಮೆ ಜಾರಿ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ

    ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬರತೊಡಗಿದರೆ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ

    ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ. ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಸಾಹುಕಾರರ ಮನೆಯಲ್ಲಿನ ಮಹಿಳೆಯರು ಕೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಾರೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೇ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದರು.

    ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್‌ ವಿಶ್ವವಿದ್ಯಾಲಯದ ಅಸೋಸಿಯೇಟ್‌ ಡೀನ್‌ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲಾ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.

  • ಉದ್ಯಮ ಆರಂಭಿಸಲು ಆಸಕ್ತಿ ಇರುವ ಮಹಿಳೆಯರಿಗೆ ಗುಡ್ ನ್ಯೂಸ್!

    ಉದ್ಯಮ ಆರಂಭಿಸಲು ಆಸಕ್ತಿ ಇರುವ ಮಹಿಳೆಯರಿಗೆ ಗುಡ್ ನ್ಯೂಸ್!

    – ಮಹಿಳಾ ಉದ್ಯಮಿಗಳಿಗಾಗಿ `ಉದ್ಯೋಗ್ ಸಖಿ’ ಪೋರ್ಟಲ್

    ಬೆಂಗಳೂರು: ಹೊಸದಾಗಿ ಉದ್ಯಮ ಆರಂಭಿಸುವ ಕನಸು ಹೊತ್ತ ಮಹಿಳೆಯರಿಗೆ ಗುಡ್ ನ್ಯೂಸ್. ಮಹಿಳಾ ಉದ್ಯಮಿಗಳಿಗಾಗಿ ʻಉದ್ಯೋಗ್ ಸಖಿʼ ಪೋರ್ಟಲ್ ಇದೆ. ಇದು ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು, ನಿರ್ಮಿಸಲು ಮತ್ತು ಬೆಳೆಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ. ಉದ್ಯೋಗ್ ಸಖಿ ಪೋರ್ಟಲ್‌ನಲ್ಲಿ 4,535 ಮಹಿಳೆಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.

    https://udyamsakhi.com/ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಎಂಎಸ್‌ಎಂಇ) ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ವಿವಿಧ ಹಣಕಾಸು ಯೋಜನೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಬೆಂಬಲ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದನ್ನೂ ಓದಿ: ಸೋರುತಿದೆ ಬಂಕಾಪುರ ಆರೋಗ್ಯ ಕೇಂದ್ರದ ಕಟ್ಟಡ – ನೀರು ಬೀಳುತ್ತಿರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ

    ಈ ಪೋರ್ಟಲ್ ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು, ನಿರ್ಮಿಸಲು ಮತ್ತು ಬೆಳೆಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ. ಇದು ಪಿಎಂಇಜಿಪಿಯಂತಹ ಎಂಎಸ್‌ಎಂಇ ಸಚಿವಾಲಯದ ಹಣಕಾಸು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಸಿಜಿಟಿಎಂಎಸ್‌ಇ, ಮುದ್ರಾ, ಟ್ರೇಡ್ಸ್ ಇತ್ಯಾದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದೆ.

    ಎಂಎಸ್‌ಎಂಇ ಸಚಿವಾಲಯ ಮತ್ತು ಇತರ ಕೇಂದ್ರ ಸಚಿವಾಲಯಗಳ ನೀತಿಗಳು ಮತ್ತು ಕಾರ್ಯಕ್ರಮಗಳು. ವ್ಯವಹಾರ ಯೋಜನೆ ತಯಾರಿಕೆಯ ಬಗ್ಗೆ ಮಾಹಿತಿ. ದೇಶದ ಆಯಾ ರಾಜ್ಯಗಳಲ್ಲಿನ ಎಂಎಸ್‌ಎಂಇ ಸಚಿವಾಲಯದ ನೋಡಲ್ ಕಚೇರಿಗಳು / ಬೆಂಬಲ ಸಂಸ್ಥೆಗಳ ವಿವರಗಳು ಸಿಗಲಿದೆ. ಇದನ್ನೂ ಓದಿ: ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

    ಎಂಎಸ್‌ಎಂಇ ಸಚಿವಾಲಯ ಆಯೋಜಿಸುವ ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯೂ ಇದ್ರಲ್ಲಿ ಲಭ್ಯವಾಗಲಿದೆ.

    ಈವರೆಗೆ ಒಟ್ಟು 4535 ಮಹಿಳೆಯರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 2018ನೇ ಸಾಲಿನಲ್ಲಿ ಉದ್ಯೋಗ ಸಖಿ ಪೋರ್ಟಲ್ ಅಭಿವೃದ್ಧಿಗಾಗಿ 43.52 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

  • Fashion | ವೆರೈಟಿಯಾಗಿ ವೇರ್ ಮಾಡಿ ಬ್ಯಾಗಿ ಜೀನ್ಸ್

    Fashion | ವೆರೈಟಿಯಾಗಿ ವೇರ್ ಮಾಡಿ ಬ್ಯಾಗಿ ಜೀನ್ಸ್

    ರ್ಷ ಬದಲಾಗುತ್ತಾ ಹೋದಂತೆ ಬಟ್ಟೆಗಳ ಟ್ರೆಂಡ್ ಕೂಡಾ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಜನರು ತಮ್ಮ ಉಡುಪಿನ ಅಭಿರುಚಿಯನ್ನೂ ಬದಲಾಯಿಸುತ್ತಾ ಹೋಗುತ್ತಾರೆ. ಹುಡ್ಗೀರಂತೂ ಸ್ಟೈಲಿಶ್‌ ಆಗಿ ಕಾಣಬೇಕು ಅಂತಾ ಡಿಫರೆಂಟ್ ಸ್ಟೈಲ್‌ನ ಡ್ರೆಸ್‌ಗಳನ್ನು ವೇರ್ ಮಾಡುತ್ತಾರೆ. ಇವಾಗಿನ ಹುಡ್ಗೀರು ಜೀನ್ಸ್ ಪ್ಯಾಂಟ್ ಬಿಟ್ಟು ಬೇರೆ ಡ್ರೆಸ್ ಧರಿಸಲು ಹಿಂದೆ ಮುಂದೆ ನೋಡ್ತಾರೆ. ಯಾಕಂದ್ರೆ ಜೀನ್ಸ್‌ನಲ್ಲೇ ಬೇರೆ ಬೇರೆ ತರಹದ ಪ್ಯಾಂಟ್‌ಗಳು ಈಗ ಟ್ರೆಂಡ್‌ನಲ್ಲಿದೆ. ಈಗಂತೂ ವಿಮೆನ್ಸ್ ಫೆವರೆಟ್ ಎಂದ್ರೆ ಅದು ಬ್ಯಾಗಿ ಜೀನ್ಸ್.

    ಹೌದು.. ಈ ಬ್ಯಾಗಿ ಜೀನ್ಸ್‌ನ(Baggy Jeans) ಧರಿಸಲು ಹೆಣ್ಣುಮಕ್ಕಳು ತುಂಬಾ ಇಷ್ಟಪಡ್ತಾರೆ. ಯಾಕಂದ್ರೆ ಇದು ತುಂಬಾ ಕಂಫರ್‌ಟೇಬಲ್ ಹಾಗೂ ಇದನ್ನು ನಮಗೆ ಬೇಕಾದ ರೀತಿಯಲ್ಲಿ ಸ್ಟೈಲ್‌ ಮಾಡಬಹುದು. ಈ ಬ್ಯಾಗಿ ಜೀನ್ಸ್ ಅನ್ನು ನಾವು ಸಾಂಪ್ರದಾಯಿಕ ಉಡುಗೆಯ ರೀತಿಯಲ್ಲೂ ಧರಿಸಬಹುದು. ಮಾಡರ್ನ್ ವೇರ್ ರೀತಿಯಲ್ಲೂ ಧರಿಸಬಹುದು. ಇದೊಂದು ರೀತಿ ಟೂ ಇನ್ ಒನ್ ಡ್ರೆಸ್ ಇದ್ದಂತೆ.

    ಈಗಂತೂ ಸ್ಕಿನ್ ಫಿಟ್ ಜೀನ್ಸ್ ಧರಿಸುವ ಫ್ಯಾಷನ್ ಎಲ್ಲನೂ ಮರೆಯಾಯ್ತು. ಇನ್ನೇನಿದ್ರೂ ಬ್ಯಾಗಿ ಜೀನ್ಸ್ನದ್ದೇ ಹವಾ. ಈ ಬ್ಯಾಗಿ ಪ್ಯಾಂಟ್ ಹುಡ್ಗೀರು ಮಾತ್ರ ಅಲ್ಲ. ಹುಡುಗರೂ ವೇರ್ ಮಾಡ್ತಾರೆ. ಬಾಯ್ಸ್ ಸೆಕ್ಷನ್‌ನಲ್ಲೂ ಈ ಬ್ಯಾಗಿ ಪ್ಯಾಂಟ್‌ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಬ್ಯಾಗಿನ ನೀವು ಕುರ್ತಾಗಳಿಗೆ, ಜೀನ್ಸ್ ಟಾಪ್, ಟ್ಯಾನ್ ಟಾಪ್, ಶರ್ಟ್ಸ್, ಟೀ-ಶರ್ಟ್‌ಗಳಿಗೂ ಧರಿಸಬಹುದು. ಇದು ಎಲ್ಲಾ ತರಹದ ಟಾಪ್‌ಗಳಿಗೆ ಒಪ್ಪುವ ಜೀನ್ಸ್ ಆಗಿದೆ.

    ಕುರ್ತಾಗಳಿಗೆ ವಿಥ್ ಬ್ಯಾಗಿ
    ಕುರ್ತಾ(Kurtha) ಟಾಪ್‌ಗಳಿಗೂ ಈ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು. ಇದು ಸಾಂಪ್ರಾದಾಯಿಕ ಉಡುಪಿನ ವಿನ್ಯಾಸವನ್ನೂ ಹೋಲುತ್ತದೆ. ಅಲ್ಲದೇ ಇದು ಈಗಿನ ಟ್ರೆಂಡ್ ಸಖತ್ ಮ್ಯಾಚ್ ಕೂಡಾ ಆಗುತ್ತದೆ. ಬ್ಯಾಗಿ ಜೀನ್ಸ್ ಅಗಲವಾಗುರುವುದರಿಂದ ಇವುಗಳನ್ನು ಕುರ್ತಾಗಳಿಗೆ ಮ್ಯಾಚ್ ಮಾಡಬಹುದು. ಇನ್ನು ಕುರ್ತಾಗಳಲ್ಲೂ ಮಾಡರ್ನ್ ಟಾಪ್ ಹಾಗೂ ಟ್ರೆಡಿಷನಲ್ ಎರಡಕ್ಕೂ ಬ್ಯಾಗಿ ಜೀನ್ಸ್ ಅನ್ನು ಧರಿಸಬಹುದು.

    ಇನ್ನೂ ಈ ಕುರ್ತಾಗಳಲ್ಲೂ ನಾವು ಬ್ಯಾಗಿಯನ್ನು ಸ್ಟೈಲ್‌ ಮಾಡಬಹುದು. ಹೌದು.. ಕುರ್ತಾಗಳಲ್ಲೂ ಶಾರ್ಟ್ ಕುರ್ತಾಗಳು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಈ ಶಾರ್ಟ್ ಕುರ್ತಾಗಳಿಗೆ ಬ್ಯಾಗಿ ಜೀನ್ಸ್, ವೈಡ್ ಲೆಗ್ ಜೀನ್ಸ್, ಬೂಟ್ ಕಟ್ ಜೀನ್ಸ್ ಸುಂದರವಾಗಿ ಕಾಣುತ್ತದೆ. ಲಾಂಗ್ ಟಾಪ್ ಕುರ್ತಾಗಳಿಗೂ ಬ್ಯಾಗಿ ಜೀನ್ಸ್‌ಗಳು ಮ್ಯಾಚ್ ಆಗುತ್ತದೆ. ಇದು ಬ್ಯಾಗಿ ಜೀನ್ಸ್ಗಳಿಗೆ ಟ್ರೆಡಿಷನಲ್ ಟಚ್ ಅನ್ನು ನೀಡುತ್ತದೆ.

    ಕ್ರಾಪ್ ಟಾಪ್ ಜೊತೆ ಬ್ಯಾಗಿ
    ಈ ಬ್ಯಾಗಿ ಜೀನ್ಸ್ ಅನ್ನು ಕ್ರಾಪ್ ಟಾಪ್‌ನೊಂದಿಗೆ ಧರಿಸಿದರೆ ಮಾಡರ್ನ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ. ಶಾಪಿಂಗ್, ಪಾರ್ಟಿ, ಲಂಚ್ ಹಾಗೂ ಟ್ರಾವೆಲ್ ಮಾಡುವಾಗ ಕ್ರಾಪ್ ಟಾಪ್ ಜೊತೆ ಬ್ಯಾಗಿ ಪ್ಯಾಂಟ್ ಧರಿಸಿದರೆ ಇದು ನಿಮಗೆ ಕಂಫರ್ಟ್ ಫೀಲ್ ನೀಡುತ್ತದೆ. ಈ ರೀತಿ ಧರಿಸುವುದರಿಂದ ನೀವು ಸ್ಟೈಲಿಶ್‌ ಆಗಿಯೂ ಕಾಣಬಹುದು. ಇದು ನಿಮಗೆ ಸಿಂಪಲ್ ಹಾಗೂ ಗುಡ್ ಲುಕ್ ನೀಡುತ್ತದೆ. ಈ ಬ್ಯಾಗಿ ಜೀನ್ಸ್ ಧರಿಸುವುದರಿಂದ ತೆಳ್ಳಗಿರುವವರು ಸ್ವಲ್ಪ ದಪ್ಪ ಕಾಣುತ್ತಾರೆ. ಅಲ್ಲದೇ ದಪ್ಪಗಿರುವವರು ಸಾಧಾರಣವಾಗಿ ಅಂದರೆ ಹೆಚ್ಚೇನೂ ದಪ್ಪ ಕಾಣುವುದಿಲ್ಲ.

    ಶಟ್ ಹಾಗೂ ಟೀ-ಶರ್ಟ್‌ಗಳಿಗೆ ಮ್ಯಾಚ್ ಮಾಡುವ ಬ್ಯಾಗಿ
    ಇನ್ನು ಬ್ಯಾಗಿ ಪ್ಯಾಂಟ್‌ಗೆ ಶರ್ಟ್ ಧರಿಸುವುದರಿಂದ ಇದು ನಿಮಗೆ ಪ್ರೊಫೆಶನಲ್ ಲುಕ್ ನೀಡುತ್ತದೆ. ಇದನ್ನೂ ಆಫೀಸ್ ವೇರ್ ಆಗಿಯೂ ಬಳಸಬಹುದು. ಇದು ನಿಮಗೆ ಸ್ಟ್ಯಾಂಡರ್ಡ್‌ ಲುಕ್ ಸಹ ನೀಡುತ್ತದೆ. ಇನ್ನೂ ಶರ್ಟ್ ಜೊತೆ ಟ್ಯಾನ್ ಟಾಪ್ ಧರಿಸಿದರೆ ಇದು ಕ್ಯಾಶ್ಯುವಲ್ ಲುಕ್ ನೀಡುತ್ತದೆ. ಈ ರೀತಿ ಸ್ಟೈಲ್‌ನಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ.

    ಟೀ-ಶರ್ಟ್ ಜೊತೆ ಬ್ಯಾಗಿಯನ್ನು ಮ್ಯಾಚ್ ಮಾಡುವುದರಿಂದ ಇದು ಸಿಂಪಲ್ ಹಾಗೂ ಈಸಿ ವೇರ್ ಆಗಿ ಕಾಣಿಸುತ್ತದೆ. ಇದನ್ನೂ ಆಫೀಸ್, ಶಾಪಿಂಗ್, ಔಟಿಂಗ್ ಹೋಗುವಾಗಲೂ ಧರಿಸಬಹುದು. ಹೆಚ್ಚಿನ ಹುಡುಗಿಯರು ಈ ಸ್ಟೈಲ್‌ನ್ನು ಅನುಸರಿಸುತ್ತಾರೆ.

    ಬ್ಯಾಗಿ ಧರಿಸುವಾಗ ಅನುಸರಿಸಬೇಕಾದ ಅಂಶಗಳು
    * ಬ್ಯಾಗಿ ಜೀನ್ಸ್ ಧರಿಸುವಾಗ ಶೂ ಅಥವಾ ಹೈ ಹೀಲ್ಸ್ ಅನ್ನು ವೇರ್ ಮಾಡಿ.
    * ಬ್ಯಾಗಿಗೆ ಲಾಂಗ್ ಟೀ-ಶರ್ಟ್ ಧರಿಸಿದರೆ ಇನ್ ಶರ್ಟ್ ಮಾಡಿ.
    * ಬ್ಯಾಗಿ ಪ್ಯಾಂಟ್ ಖರೀದಿಸುವಾಗ ವೈಡ್ ಲೆಗ್ ಪ್ಯಾಂಟ್ ತೆಗೆದುಕೊಳ್ಳಿ, ಇದು ಎಲ್ಲಾ ರೀತಿಯ ಟಾಪ್‌ಗಳಿಗೂ ಒಪ್ಪುತ್ತದೆ.
    * ಇನ್ನು ಬ್ಯಾಗಿ ಪ್ಯಾಂಟ್‌ಗೆ ಮ್ಯಾಚ್ ಆಗುವ ಹ್ಯಾಂಡ್ ಬ್ಯಾಗ್ ಅಂದರೆ ಸಿಂಪಲ್ ಆಗಿರುವ ಸೈಟ್ ಬ್ಯಾಗ್‌ಗಳನ್ನು ಧರಿಸಿ.
    * ವೈಡ್ ಲೆಗ್ ಜೀನ್ಸ್‌ಗಳಿಗೆ ಲಾಂಗ್ ಕುರ್ತಾಗಳನ್ನು ಪ್ರಿಫರ್ ಮಾಡಿ.
    * ಬ್ಯಾಗಿಗೆ ಕ್ರಾಪ್ ಟಾಪ್ ಮ್ಯಾಚ್ ಮಾಡುವಾಗ ಹೆವಿ ಮೇಕಪ್ ಧರಿಸಬೇಡಿ. ಅಲ್ಲದೇ ನ್ಯೂಡ್ ಲಿಪ್‌ಸ್ಟಿಕ್‌ಗಳನ್ನು ಹಾಕಿ.

    ಬ್ಯಾಗಿ ಜೀನ್ಸ್ ಇತ್ತೀಚೆಗೆ ಟ್ರೆಂಡ್‌ನಲ್ಲಿರುವ ಹಾಗೂ ಹುಡುಗಿಯರು ಹೆಚ್ಚು ಇಷ್ಟಪಡುವ ಪ್ಯಾಂಟ್ ಆಗಿದೆ. ಈ ಪ್ಯಾಂಟ್ ಅನ್ನು ಟ್ರೆಡಿಷನ್ ಹಾಗೂ ಮಾಡರ್ನ್ ವೇರ್ ಆಗಿಯೂ ಧರಿಸಬಹುದು. ಈಗಿನ ಜೀನ್ಸ್ ಯುಗದಲ್ಲಿ ದಿನ ಕಳೆದಂತೆ ಬಟ್ಟೆಗಳ ಟ್ರೆಂಡ್ ಸಹ ಬದಲಾಗುತ್ತಿರುತ್ತದೆ.

  • ಸಂಪ್ರದಾಯದ ಜೊತೆ ಫ್ಯಾಷನ್- ಈಗೇನಿದ್ರೂ ಟ್ರೆಂಡಿ ‘ಕಾಲುಂಗುರ’ದ ಕಾಲ

    ಸಂಪ್ರದಾಯದ ಜೊತೆ ಫ್ಯಾಷನ್- ಈಗೇನಿದ್ರೂ ಟ್ರೆಂಡಿ ‘ಕಾಲುಂಗುರ’ದ ಕಾಲ

    ಕಾಲಿನ ಅಂದ ಹೆಚ್ಚಿಸುವ ಚೆಂದದ ಕಾಲುಂಗುರ

    ಹಿಂದೂ ಧರ್ಮದಲ್ಲಿ ಕುತ್ತಿಗೆಗೆ ಮಂಗಳಸೂತ್ರ ಮತ್ತು ಪಾದಗಳಿಗೆ ಕಾಲುಂಗರ (Teo Rings) ಧರಿಸುವುದು ವಿವಾಹಿತ ಮಹಿಳೆಯ ಸಂಕೇತ. ಸಂಪ್ರದಾಯದ ಜೊತೆ ಫ್ಯಾಷನಬಲ್ ಆಗಿಯೂ ಕಾಲುಂಗುರ ಧರಿಸಬಹುದಾಗಿದೆ. ಚೆಂದದ ಕಾಲುಂಗುರ ಧರಿಸಿ ಫ್ಯಾಷನ್ ಮಾಡಬಹುದು. ಇದಕ್ಕೆ ಸಂಬಂಧಿಸಿದ ಕೆಲವು ಟ್ರೆಂಡಿ ಫ್ಯಾಷನ್ (Fashion) ಕಾಲುಂಗುರಗಳ ಬಗ್ಗೆ ಇಲ್ಲಿದೆ ವಿವರ.

    Toe Rings

    ನವಿಲು ವಿನ್ಯಾಸದ ಕಾಲುಂಗುರ:

    ಈಗಾಗಲೇ ನವಿಲಿನ ಬಣ್ಣದ ಡ್ರೆಸ್, ನವಿಲಿನ ವಿನ್ಯಾಸವಿರುವ ಬಟ್ಟೆಗಳು ಮಾರುಕಟ್ಟೆಗೆ ಬಂದು ಹಲ್‌ಚಲ್ ಏಬ್ಬಿಸಿದೆ. ಆದರೀಗ ಕಾಲುಂಗುರದ ಜಮಾನ. ನವಿಲು ವಿನ್ಯಾಸದ ಕಾಲುಂಗುರದ ಟ್ರೆಂಡ್ ಶುರುವಾಗಿದೆ. ಇದನ್ನೂ ಓದಿ:ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಗುಲಾಬಿ ವಿನ್ಯಾಸದ ಕಾಲುಂಗುರ:

    ಗುಲಾಬಿ ಬಣ್ಣವಾಗಲಿ, ಹೂವಾಗಲಿ ಮಹಿಳೆಯರಿಗೆ ಪ್ರಿಯವಾದದ್ದು. ಅದರಂತೆ ಗುಲಾಬಿ ವಿನ್ಯಾಸದ ಕಾಲುಂಗುರಕ್ಕೂ ಬೇಡಿಕೆ ಹೆಚ್ಚಾಗಿದೆ. ಸೀರೆ ಅಥವಾ ಲೆಹೆಂಗಾಗೆ ಇದು ಧರಿಸಲು ಸೂಕ್ತವಾಗಿದೆ. ಮದುವೆಯಲ್ಲಿ ವಧುವಿಗೂ ಇದನ್ನು ಉಡುಗೊರೆಯಾಗಿ ನೀಡಬಹುದು. ಇದನ್ನೂ ಓದಿ: ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ

    ಹೂವು, ಎಲೆ ಕಾಲುಂಗುರದ ಡಿಸೈನ್:

    ಈ ಕಾಲುಂಗುರ ಸದ್ಯ ಟ್ರೆಂಡ್‌ನಲ್ಲಿದೆ. ಸಂಪ್ರದಾಯಿಕ ಲುಕ್ ಜೊತೆ ಫ್ಯಾಷನಬಲ್ ಆಗಿ ಕಾಣಿಸುತ್ತದೆ. ಅದರಲ್ಲೂ ನಾರಿಮಣಿಯರ ಕಾಲಿನ ಬೆರಳಿನ ಅಂದ ಹೆಚ್ಚಿಸುತ್ತದೆ.

    ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರ:

    ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರವು ಎಲ್ಲಾ ಬಗೆಯ ಬಟ್ಟೆಗೂ ಒಪ್ಪುತ್ತದೆ. ಸೀರೆ, ಚೂಡಿದಾರ್ ಎಲ್ಲದ್ದಕ್ಕೂ ಸರಿಹೊಂದುವಂತಹ ಕಾಲುಂಗುರವಾಗಿದೆ. ಈಗೀನ ಕಾಲಕ್ಕೂ ಇದು ಟ್ರೆಂಡಿಯಾಗಿದೆ.

    Toe Rings

    ಬಣ್ಣದ ಹರಳಿನ ಕಾಲುಂಗುರ:

    ಬಣ್ಣ ಬಣ್ಣದ ಉದ್ದನೆಯ ಕಾಲುಂಗುರದಿಂದ ನಿಮ್ಮ ಕಾಲಿನ ಸೌಂದರ್ಯ ಹೆಚ್ಚಿಸುತ್ತದೆ. ಇದು ಸದ್ಯ ಟ್ರೆಂಡ್‌ನಲ್ಲಿದೆ.

    ಬಿಳಿ ಮುತ್ತುಗಳ ಕಾಲುಂಗುರ:

    ಬೆಳ್ಳಿ ಬಿಳಿ ಮುತ್ತುಗಳ ಡಿಸೈನ್‌ಗೆ ನಾರಿಮಣಿಯರು ಫಿದಾ ಆಗಿದ್ದಾರೆ. ನೋಡಲು ಸ್ಟೆöÊಲೀಶ್ ಆಗಿ ಹೈಲೆಟ್ ಆಗಿ ಕಾಣುತ್ತದೆ. ಎಲ್ಲಾ ಬಗೆಯ ಬಟ್ಟೆಗಳಿಗೂ ಇದು ಸೂಟ್ ಆಗುತ್ತದೆ.

  • Fashion | ನೀವು ಹ್ಯಾಂಡ್‌ಬ್ಯಾಗ್ ಪ್ರಿಯರೇ? – ಟ್ರೆಂಡಿ ಬ್ಯಾಗ್ಸ್ ಬಗ್ಗೆ ಒಂದು ಕ್ಲಿಕ್‌ನಲ್ಲಿದೆ ಟಿಪ್ಸ್‌

    Fashion | ನೀವು ಹ್ಯಾಂಡ್‌ಬ್ಯಾಗ್ ಪ್ರಿಯರೇ? – ಟ್ರೆಂಡಿ ಬ್ಯಾಗ್ಸ್ ಬಗ್ಗೆ ಒಂದು ಕ್ಲಿಕ್‌ನಲ್ಲಿದೆ ಟಿಪ್ಸ್‌

    ಜಗತ್ತಿನಲ್ಲಿ ಸೊಬಗಿಗೆ ಮಾರುಹೋಗದವರೇ ಇಲ್ಲ ಎನ್ನುವಂತೆ ಎಲ್ಲರಲ್ಲಿಯೂ ತಾವು ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತೆ. ಸೆಲೆಬ್ರೆಟಿಗಳಂತೆ ನಾನು ಕೂಡ ಮಾಡ್ರನ್ ಹಾಗೂ ಸ್ಟೈಲಿಶ್ ಆಗಿ ಕಾಣಬೇಕು ಅಂತ ಕೆಲವು ಫ್ಯಾಷನೇಬಲ್ ಐಟಂಗಳನ್ನ ಹುಡುಗೀರು ತುಂಬಾನೇ ಲೈಕ್ ಮಾಡ್ತಾರೆ.

    ಎಲ್ಲಾದರೂ ಹೊರಡುವಾಗ ಹುಡುಗಿಯರ ಬೆಡಗು-ಬಿನ್ನಾಣದ ಉಡುಗೆಗೆ ಫೈನಲ್ ಟಚ್ ನೀಡುವುದೇ ಟ್ರೆಂಡಿ ಹ್ಯಾಂಡ್ ಬ್ಯಾಗ್ಸ್‌. ಇದು ನಿಮ್ಮ ಡ್ರೆಸ್ಸಿಂಗ್ ಸ್ಟೈಲ್‌ನ ಒಂದು ಮುಖ್ಯ ಭಾಗವೂ ಹೌದು. ಯಾವ ಡ್ರೆಸ್‌ಗೆ ಯಾವ ರೀತಿಯ ಹ್ಯಾಂಡ್ ಬ್ಯಾಗ್ ಧರಿಸುತ್ತೇವೆ ಅನ್ನೋದು ಕೂಡ ನೋಡೋರಿಗೆ ಮ್ಯಾಟರ್ ಆಗುತ್ತದೆ. ಈ ಹ್ಯಾಂಡ್ ಬ್ಯಾಗ್‌ಗಳಿಂದ ಎರಡು ರೀತಿಯ ಬೆನಿಫಿಟ್‌ಗಳಿವೆ. ಒಂದು ಇದು ಫ್ಯಾಶನ್ ಲುಕ್ ನೀಡಿದರೆ ಇನ್ನೊಂದು ಮುಖ್ಯವಾಗಿರುವ ಸಣ್ಣ ಪುಟ್ಟ ಮೇಕಪ್ ಐಟಂಗಳನ್ನ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

    ನಿಮಗೂ ನಿಮ್ಮ ಪಾರ್ಟಿ ಇವೆಂಟ್ ಅಥವಾ ಕ್ಯಾಶುಯಲ್ ವೇರ್ ಅಲ್ಲಿ ಡಿಫ್ರೆಂಟ್ ಆಗಿ ಕಾಣಬೇಕು ಅಂತ ಆಸೆ ಇದೆಯಾ? ಯಾವ ತರಹದ ಹ್ಯಾಂಡ್‌ಬ್ಯಾಗ್‌ ಬಳಸಿದ್ರೆ ಸ್ಟೈಲಿಶ್‌ & ಬ್ಯೂಟಿಫುಲ್‌ ಆಗಿ ಕಾಣ್ತೀರಿ ಅನ್ನೋದಕ್ಕೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ…

    1. ಕಿಲಿ ಸೋಲ್ಡರ್ ಬ್ಯಾಗ್ (Kili Bag)
    ಈ ಕಿಲ್ಲಿ ಶೋಲ್ಡರ್ ಬ್ಯಾಗ್ ಹಾಲಿವುಡ್ ಮಾಡೆಲ್‌ಗಳು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದು ಹೆಚ್ಚಾಗಿ ಮಾಡರ್ನ್ ಡ್ರೆಸ್ ಅಂದ್ರೆ ಜೀನ್ಸ್ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುತ್ತದೆ. ಇದರಲ್ಲೂ ವೆರೈಟಿ ವೆರೈಟಿಯ ಬ್ಯಾಗ್‌ಗಳಿವೆ. ವೆಲ್ವೆಟ್ ಮೆಟೀರಿಯಲ್ ಅಥವಾ ಲೆದರ್ ರೀತಿಯ ಬ್ಯಾಗ್‌ಗಳು ಸದ್ಯ ಟ್ರೆಂಡ್‌ನಲ್ಲಿದೆ.

    2. ರೈನ್‌ಸ್ಟೋನ್ ಡೆಕೋರ್ ಬಕೆಟ್ ಬ್ಯಾಗ್(Rhinestone Decor Bucket Bag)
    ಇದು ಪಕ್ಕಾ ಪಾರ್ಟಿವೇರ್ ಬ್ಯಾಗ್. ಇದನ್ನು ಶಾರ್ಟ್ ಡ್ರೆಸ್‌ಗಳಿಗೆ ಬಳಕೆ ಮಾಡ್ತಾರೆ. ಇದು ಹೆವಿ ಸ್ಟೋನ್ ವರ್ಕ್ನ ಬ್ಯಾಗಾಗಿದೆ. ಈ ರೈನ್‌ಸ್ಟೋನ್ ಬ್ಯಾಗ್‌ಗಳು ಸಣ್ಣ ಗಾತ್ರದ್ದಾಗಿದೆ. ಈ ಬ್ಯಾಗ್‌ನಲ್ಲಿ ಹೆಚ್ಚೇನು ದೊಡ್ಡ ದೊಡ್ಡ ವಸ್ತುಗಳನ್ನು ಕೊಂಡೊಯ್ಯಲಾಗುವುದಿಲ್ಲ. ಇದಲ್ಲಿ ಕೇವಲ ಮೇಕಪ್ ವಸ್ತುಗಳಾದ ಲಿಪ್‌ಸ್ಟಿಕ್, ಫೌಂಡೇಶನ್, ಲೈನರ್‌ಗಳನ್ನು ಕ್ಯಾರಿ ಮಾಡಬಹುದು. ಈ ಬ್ಯಾಗ್‌ಗಳು ಪಾರ್ಟಿವೇರ್ ಡ್ರೆಸ್‌ಗಳಿಗೆ ನ್ಯೂ ಲುಕ್ ನೀಡುತ್ತದೆ.

    3. ಕೆಪ್ಯೂಸ್ಸಿನೊ ಬ್ಯಾಗ್(Capucines Bag)
    ಇದು ಸಾಮಾನ್ಯವಾದ ಹ್ಯಾಂಡ್ ಬ್ಯಾಗ್. ಇದನ್ನು ಹುಡ್ಗೀರು, ಮಹಿಳೆಯರು ಎಲ್ಲರೂ ಬಳಕೆ ಮಾಡ್ತಾರೆ. ಇದು ಸೀರೆಗಳಿಗೂ ಒಪ್ಪುತ್ತೆ, ಫಾರ್ಮಲ್ ಔಟ್‌ಫಿಟ್‌ಗೂ ಮ್ಯಾಚ್ ಆಗುತ್ತದೆ. ಈ ಕೆಪ್ಯೂಸ್ಸಿನೊ ಬ್ಯಾಗ್ ಈಗ ಹೆಚ್ಚು ಟ್ರೆಂಡ್‌ನಲ್ಲಿದೆ. ಇದು ನಮ್ಮ ಡ್ರೆಸ್‌ಗಳಿಗೆ ಸಿಂಪಲ್ ಅಂಡ್ ರಿಚ್ ಲುಕ್ ನೀಡುತ್ತದೆ. ಆದ್ದರಿಂದ ಈ ಬ್ಯಾಗ್ ಅನ್ನು ಹೆಚ್ಚಿನವರು ಇಷ್ಟಪಡುತ್ತಾರೆ.

    4. ಹೊಬೊ ಟೋಟ್ ಬ್ಯಾಗ್ (Hobo Tote Bag)
    ಈ ಬ್ಯಾಗ್‌ಗಳನ್ನು ಕೊರಿಯನ್ ಬೆಡಗಿಯರು ಹೆಚ್ಚಾಗಿ ವೇರ್ ಮಾಡ್ತಾರೆ. ಫ್ಯಾಷನ್ ಟ್ರೆಂಡ್‌ನಲ್ಲಿ ಭಾರತೀಯರಿಗಿಂತ ಒಂದು ಕೈ ಮೇಲಿರುವ ಕೊರಿಯನ್ನರು ಇಂತಹ ನವೀನ ವಿನ್ಯಾಸದ ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇದು ಕೇವಲ ಫ್ಯಾಷನ್ ಸೆಟ್ ಮಾಡಲು ಮಾತ್ರ ಸೂಕ್ತವಾಗಿರುವ ಬ್ಯಾಗ್. ಇದು ನಮ್ಮ ಭುಜಕ್ಕೆ ಅಂಟಿಕೊಂಡಿರುವಂತೆ ನಾವು ಧರಿಸಬೇಕು. ಇದು ಲಾಂಗ್ ಸೂಟ್ ಡ್ರೆಸ್‌ಗಳಿಗೆ ಗುಡ್ ಲುಕ್ ನೀಡುತ್ತದೆ. ಇದನ್ನು ಹೆಚ್ಚಾಗಿ ಮಾಡೆಲ್‌ಗಳು ಇಷ್ಟಪಡುತ್ತಾರೆ.

    5. ಇವ್‌ನಿಂಗ್ ಬ್ಯಾಗ್(Evening Bag)
    ಇದು ಚಿಕ್ಕ ಆಕಾರದಲ್ಲಿರುವ ಹಿಡಿದುಕೊಳ್ಳಲು ಸುಲಭವಾಗಿರುವ ಹ್ಯಾಂಡ್ ಬ್ಯಾಗ್. ಇದು ಒಂದು ರೀತಿ ವೃತ್ತಾಕಾರದಲ್ಲಿರುತ್ತದೆ. ಇದನ್ನು ತುಂಬಾ ಸುಲಭವಾಗಿ ಹಾಗೂ ಆರಾಮವಾಗಿ ಬಳಸಬಹುದು. ಇದು ಗ್ಯಾಂಡ್ ಫಂಕ್ಷನ್‌ಗಳಿಗೆ ಧರಿಸುವ ಕುರ್ತಾಗಳಿಗೆ, ಲೆಹಂಗಾ ಡ್ರೆಸ್‌ಗಳಿಗೆ ಸುಂದರವಾಗಿ ಕಾಣುತ್ತದೆ. ಅಲ್ಲದೇ ಇದು ಕೇವಲ ಸಾಂಪ್ರದಾಯಿಕ ಉಡುಗೆಗಳಿಗೆ ಒಪ್ಪುತ್ತದೆ. ಈ ಇವ್‌ನಿಂಗ್ ಹ್ಯಾಂಡ್ ಬ್ಯಾಗ್‌ಗಳನ್ನು ಬಾಲಿವುಡ್, ಸ್ಯಾಂಡಲ್‌ವುಡ್ ಹೀರೊಯಿನ್ಸ್ ಹೆಚ್ಚಾಗಿ ಬಳಕೆ ಮಾಡುತ್ತಾರೆ.

    ಇನ್ನು ಹ್ಯಾಂಡ್ ಬ್ಯಾಗ್ ಧರಿಸುವಾಗ ಅನುಸರಿಸಬೇಕಾದ ಟಿಪ್ಸ್
    1. ನೀವು ತುಂಬಾ ಹೆವಿ ಸ್ಟೋನ್ ವರ್ಕ್ನ ಬಟ್ಟೆಗಳನ್ನು ಧರಿಸುವಾಗ ಚಿಕ್ಕದಾದ ಹಾಗೂ ಸಿಂಪಲ್ ಹ್ಯಾಂಡ್ ಬ್ಯಾಗ್‌ಗಳನ್ನು ವೇರ್ ಮಾಡಿ
    2. ಕಡು ಬಣ್ಣದ ಉಡುಪುಗಳಿಗೆ ಸಾಧ್ಯವಾದಷ್ಟು ತಿಳಿ ಬಣ್ಣದ ಬ್ಯಾಗ್‌ಗಳನ್ನು ಧರಿಸಿ.
    3. ನೀವು ಧರಿಸಿರುವ ಬಟ್ಟೆಯ ಬಣ್ಣ ಹಾಗೂ ಬ್ಯಾಗ್‌ನ ಬಣ್ಣ ಯಾವತ್ತೂ ಒಂದೇ ಆಗಿರಬಾರದು.
    4. ಸಿಂಪಲ್ ಡ್ರೆಸ್‌ಗಳಿಗೆ ಹೆಚ್ಚು ಡಿಸೈನ್ ಅಥವಾ ಸ್ಟೋನ್ ವರ್ಕ್ ಇರುವ ಬ್ಯಾಗ್‌ಗಳನ್ನು ಧರಿಸಿ.
    5. ಪಾರ್ಟಿ, ಇವೆಂಟ್, ಮದುವೆ ಸಮಾರಂಭಗಳಿಗೆ ಆದಷ್ಟು ಚಿಕ್ಕ ಬ್ಯಾಗ್‌ಗಳನ್ನು ಬಳಸಿ.
    6. ಕ್ಯಾಶುವಲ್ ಫಾರ್ಮಲ್‌ಗಳಿಗೆ ಸಿಂಪಲ್ ಆಗಿರುವ ಬ್ಯಾಗ್ ಹಾಗೂ ಪಾರ್ಟಿವೇರ್‌ಗಳಿಗೆ ಮಾಡರ್ನ್ ಹಾಗೂ ಗ್ಯಾಂಡ್ ಬ್ಯಾಗ್‌ಗಳನ್ನು ಧರಿಸಿ.
    7. ನೀವು ಧರಿಸಿರುವ ಉಡುಪಿಗೆ ನಿಮ್ಮ ಹ್ಯಾಂಡ್ ಬ್ಯಾಗ್ ಮ್ಯಾಚ್ ಆಗುತ್ತದೆಯೇ ಎಂದು ಮೊದಲು ಗಮನಿಸಿ.

  • Fashion | ನಾರಿಯರ ಮನಗೆದ್ದ ಚೋಕರ್ ನೆಕ್ಲೆಸ್!

    Fashion | ನಾರಿಯರ ಮನಗೆದ್ದ ಚೋಕರ್ ನೆಕ್ಲೆಸ್!

    ಫ್ಯಾಷನ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಹೆಣ್ಣುಮಕ್ಕಳು. ಈಗಿನ ಫ್ಯಾಷನ್ ಯುಗದಲ್ಲಂತೂ ಟ್ರೆಂಡ್ ತಕ್ಕಂತೆ ಇರಬೇಕು ಅಂತಾನೇ ಬಯಸುತ್ತಾರೆ. ಉಡುಗೆ, ಮೇಕಪ್, ಆಭರಣ ಹೀಗೆ ಎಲ್ಲದರಲ್ಲೂ ಟ್ರೆಂಡಿಗೆ ಸರಿ ಹೊಂದುವಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾರ್ಕೆಟ್‌ನಲ್ಲಿ ಮಹಿಳೆಯರಿಗೆ ಇರುವಷ್ಟು ಆಯ್ಕೆ ಪುರುಷರಿಗೆ ಇಲ್ಲ. ವೆರೈಟಿ, ವೆರೈಟಿಯ ಡಿಸೈನ್‌ಗಳು, ಕರ‍್ಸ್ ಹೀಗೆ ನಾನಾ ತರಹದಲ್ಲಿ ಆಭರಣಗಳು ಹುಡ್ಗೀರ ಕಣ್ಣು ಕುಕ್ಕುತ್ತದೆ.

    ಇಷ್ಟೆಲ್ಲಾ ಯಾಕೆ ಹೇಳ್ತಿದೀನಿ ಅಂತಾ ಅಂದ್ಕೊತ್ತಿದ್ದೀರಾ. ಹೆಣ್ಣುಮಕ್ಕಳ ಫ್ಯಾಷನ್ ಬಗ್ಗೆ ಎಷ್ಟು ಹೇಳಿದ್ರೂ ಸಾಲಲ್ಲ. ಅದೊಂದು ಸಮುದ್ರ ಇದ್ದಂತೆ. ದಿನ ದಿನ ಹೊಸಹೊಸ ಟ್ರೆಂಡ್ ಬರುತ್ತದೆ. ಅದಕ್ಕೇ ಎಲ್ಲಾರೂ ಒಗ್ಗಿಕೊಂಡು ಹೋಗುತ್ತಾರೆ. ಈಗಂತೂ ನಾರಿಮಣಿಯರ ಕಂಠದಲ್ಲಿ ಚೋಕರ್ ಎಂಬ ಆಭರಣ ರಾರಾಜಿಸುತ್ತಿದೆ. ಸೀರೆ ಪ್ರಿಯರಿಗಂತೂ ಈ ಚೋಕರ್ ಅಚ್ಚುಮೆಚ್ಚು. ಬೇರೆ ಬೇರೆ ಡಿಸೈನ್ ಹೊಂದಿರುವ ಈ ಚೋಕರ್ ಎಲ್ಲಾ ರೀತಿಯ ಡ್ರೆಸ್‌ಗಳಿಗೆ ಮ್ಯಾಚ್ ಆಗುತ್ತದೆ.

    ಚೋಕರ್ ಅಲ್ಲಿ ನಾನಾ ವಿಧದ ಡಿಸೈನ್‌ಗಳಿದ್ದೂ, ಎತ್ನಿಕ್ ವೇರ್‌ಗೆ ಹಾಗೂ ಮಾಡರ್ನ್ ವೇರ್‌ಗೂ ಒಪ್ಪುತ್ತದೆ. ಈಗಂತೂ ಮದುವೆ, ಬರ್ತ್‌ಡೇ ಹೀಗೆ ಎಲ್ಲಾ ಫಂಕ್ಷನ್‌ಗಳಿಗೂ ಹುಡ್ಗೀರು ಚೋಕರ್ ಧರಿಸಲು ಇಷ್ಟಪಡುತ್ತಾರೆ. ಇದ್ರಲ್ಲೂ ಗ್ರ್ಯಾಂಡ್‌ ಆಗಿರುವ ಚೋಕರ್‌ಗಳಿವೆ. ಸಿಂಪಲ್ ಆ್ಯಂಡ್ ಸ್ಟನ್ನಿಂಗ್ ಆಗಿರುವ ಡಿಸೈನ್‌ಗಳ ಚೋಕರ್‌ಗಳೂ ಮಾರ್ಕೆಟ್‌ನಲ್ಲಿ ಲಭ್ಯವಿದೆ.

    ಚೋಕರ್‌ನ ನೆಕ್ಲೆಸ್‌ನ ವಿಧಗಳು:
    1. ಮುತ್ತಿನ ಚೋಕರ್
    ಮುತ್ತುಗಳಿಂದ ನಿರ್ಮಿತ ಚೋಕರ್ ಅಂದರೆ ಪರ್ಲ್ ಚೋಕರ್ ಅಂತಾನೂ ಇದನ್ನೂ ಕರೀತಾರೆ. ಇದು ಎಲ್ಲ ಕಾಲಕ್ಕೂ ಮ್ಯಾಚ್ ಆಗುತ್ತದೆ. ಸೀರೆಗಳಿಗೆ ಅಥವಾ ಕುರ್ತಾಗಳಿಗೆ, ಅನಾರ್ಕಲಿಗಳಿಗೆ ಅಂತ ಸೂಪರ್ ಆಗಿ ಕಾಣಿಸುತ್ತದೆ. ಪರ್ಲ್ ಚೋಕರ್ ನಾರಿಯರ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಅಲ್ಲದೇ ಇದು ವಿಭಿನ್ನವಾಗಿ ಟ್ರೆಂಡ್‌ಗೆ ಹೊಂದಿಕೊಳ್ಳುವಂತೆ ಕಾಣುತ್ತದೆ.

    2. ಲೇಸ್ ಚೋಕರ್
    ಫ್ಯಾಬ್ರಿಕ್ ಲೇಸ್‌ನಿಂದ ತಯಾರಾದ ಈ ಶೈಲಿ ಯುವತಿಯರು ತುಂಬಾ ಇಷ್ಟ ಪಡುತ್ತಾರೆ. ಇದು ಸಿಂಪಲ್ ಸೀರೆಗಳ ಲುಕ್ ಅನ್ನು ಗ್ರ್ಯಾಂಡ್‌ ಆಗಿ ಕಾಣುವಂತೆ ಮಾಡುತ್ತದೆ. ಇದನ್ನೂ ಬೇರೆ ಮಾರ್ಡನ್ ಡ್ರೆಸ್‌ಗಳಿಗೂ ಮ್ಯಾಚ್ ಮಾಡಬಹುದು. ಎಲ್ಲಾ ಡ್ರೆಸ್‌ಗಳಿಗೂ ಈ ಲೇಸ್ ಚೋಕರ್ ಸೆಟ್ ಆಗುತ್ತದೆ. ಲೆಹಂಗಾಗಳಿಗೆ, ಸಿಂಪಲ್ ಕುರ್ತಾಗಳಿಗೆ ಅಥವಾ ಫಂಕ್ಷನ್ ವೇರ್‌ಗಳಿಗೆ ಇದು ಒಪ್ಪುತ್ತದೆ.

    3. ಗೋಲ್ಡ್ ಚೋಕರ್
    ಭಾರತೀಯ ಸಂಸ್ಕೃತಿಯಲ್ಲಿ ಚಿನ್ನದ ಚೋಕರ್‌ಗೆ ವಿಶೇಷ ಸ್ಥಾನವಿದೆ. ಇದನ್ನೂ ಎಲ್ಲಾ ವರ್ಗದ ಹೆಣ್ಣುಮಕ್ಕಳು ಬಳಸುತ್ತಾರೆ. ಮದುವೆ ಅಥವಾ ವಿಶೇಷ ಸಮಾರಂಭಗಳಲ್ಲಿ ಚಿನ್ನದ ಚೋಕರ್ ತೊಡುವುದು ಶ್ರೇಷ್ಠ ಸಾಂಪ್ರದಾಯಿಕ ಶೈಲಿಯ ಸಂಕೇತವಾಗಿದೆ. ಈ ಚಿನ್ನ ಚೋಕರ್‌ಗಳಲ್ಲೂ ತುಂಬಾ ವೆರೈಟಿಗಳು ಸಿಗುತ್ತದೆ. ಬೇರೆ ಬೇರೆ ಡಿಸೈನ್‌ಗಳೂ ಇರುತ್ತದೆ.

    4. ಕ್ರಿಸ್ಟಲ್ ಅಥವಾ ಸ್ಟೋನ್ ಚೋಕರ್
    ಈ ರೀತಿಯ ಚೋಕರ್‌ಗಳನ್ನು ಬೇರೆ ಬೇರೆ ಹರಳು ಅಥವಾ ಕಲ್ಲುಗಳಿಂದ ಮಾಡಲಾಗುತ್ತದೆ. ಇವು ತುಂಬಾ ಹೊಳೆಯುತ್ತವೆ. ಈ ಕ್ರಿಸ್ಟಲ್ ಚೋಕರ್ ಫ್ಯಾಶನ್ ಮಾಡೆಲ್‌ಗಳಿಗೆ ಅಚ್ಚುಮೆಚ್ಚು. ಇದು ಸಮಾರಂಭಗಳಲ್ಲಿ ನೀವು ಹೆಚ್ಚು ಆಕರ್ಷಿತರಾಗಿ ಕಾಣುವಂತೆ ಮಾಡುತ್ತದೆ. ಈಗಂತೂ ಈ ಕ್ರಿಸ್ಟಲ್ ಚೋಕರ್ ಫುಲ್ ಟ್ರೆಂಡ್‌ನಲ್ಲಿದೆ. ಡಿಸ್ಕೋ, ಪಾರ್ಟಿ ಈವೆಂಟ್‌ಗಳಿಗೆ ಇದನ್ನು ಧರಿಸಬಹುದು.

    5. ವೆಲ್ವೆಟ್ ಚೋಕರ್
    ವೆಲ್ವೆಟ್ ಚೋಕರ್ ಅಂದರೆ ಇದನ್ನು ವೆಲ್ವೆಟ್ ಮೆಟೀರಿಯಲ್‌ನ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದು ಇದರ ಎದುರಿಗೆ ಪೆಂಡೆಂಟ್ ಹಾಗೂ ಪಕ್ಕದಲ್ಲಿ ಈ ವೆಲ್ವೆಟ್ ಬಟ್ಟೆಯನ್ನು ಜೋಡಿಸಿರಲಾಗುತ್ತದೆ. ಈ ವೆಲ್ವೆಟ್ ಚೋಕರ್ ಕೂಡ ಎಲ್ಲಾ ರೀತಿಯ ಡ್ರೆಸ್‌ಗಳಿಗೆ ಸ್ಟನ್ನಿಂಗ್ ಲುಕ್ ನೀಡುತ್ತದೆ.

    6. ಟಸೆಲ್ ಚೋಕರ್
    ಈ ಟಸಲ್ ಚೋಕರ್ ಕುತ್ತಿಗೆಯಿಂದ ಸೊಗಸಾಗಿ ನೇತಾಡುವ ಟಸೆಲ್‌ಗಳು ಅಥವಾ ದಾರದ ಅಂಚನ್ನು ಒಳಗೊಂಡಿರುವ ಚೋಕರ್ ಬ್ಯಾಂಡ್ ಅನ್ನು ಒಳಗೊಂಡಿರುತ್ತವೆ. ಮ್ಯಾಕ್ಸಿ ಡ್ರೆಸ್‌ಗಳಿಗೆ, ಆಫ್-ಶೋಲ್ಡರ್ ಟಾಪ್‌ಗಳಿಗೆ ಈ ಟಸಲ್ ಚೋಕರ್ ಒಪ್ಪುತ್ತದೆ.

    ಚೋಕರ್ ಧರಿಸುವಾಗ ಗಮನಿಸಬೇಕಾದ ಅಂಶ:
    ಚೋಕರ್ ಧರಿಸುವುದಕ್ಕೂ ಕೆಲವೊಂದು ಟಿಪ್ಸ್‌ಗಳಿವೆ. ಈ ಮುಖ್ಯ ಅಂಶಗಳನ್ನು ಗಮನಿಸಿದರೆ ನಿಮ್ಮ ಲುಕ್ ಇನ್ನೂ ಸೂಪರ್ ಆಗಿ ಕಾಣಿಸುತ್ತದೆ.

    * ಅಗಲ ಕುತ್ತಿಗೆಯವರಿಗಿಂತ ಸಣ್ಣ ಕುತ್ತಿಗೆಯವರಿಗೆ ಚೋಕರ್ ಹೆಚ್ಚು ಮ್ಯಾಚ್ ಆಗುತ್ತದೆ

    * ಸಿಂಪಲ್ ಡ್ರೆಸ್‌ಗಳಿಗೆ ಗ್ರ‍್ಯಾಂಡ್ ಚೋಕರ್ ಹಾಗೂ ಗ್ರ‍್ಯಾಂಡ್ ಡ್ರೆಸ್‌ಗಳಿಗೆ ಸಿಂಪಲ್ ಚೋಕರ್ ಧರಿಸಬೇಕು.

    * ದೊಡ್ಡ ಇಯರಿಂಗ್ಸ್ ಜೊತೆ ದೊಡ್ಡ ದೊಡ್ಡ ಸ್ಟೋನ್ ವರ್ಕ್‌ನ ಚೋಕರ್ ಧರಿಸಿದರೆ, ನಿಮ್ಮ ಲುಕ್‌ ಹೆಚ್ಚಿಸುತ್ತದೆ. ದೊಡ್ಡ ಚೋಕರ್‌ಗಳನ್ನ ಧರಿಸುವಾಗ ಸರಳವಾದ ಇಯರಿಂಗ್ಸ್‌ಗಳನ್ನು ಆಯ್ಕೆಮಾಡಿ.

    ಈವೆಂಟ್‌ಗಳಿಗೆ ರೆಡಿಯಾಗುವಾಗ ಈ ಮೇಲೆ ತಿಳಿಸಿರುವ ಅಂಶಗಳನ್ನು ನೀವು ಗಮನಿಸಿದರೆ ಇದು ನಿಮ್ಮ ಲುಕ್ ಅನ್ನು ಡಿಫ್ರೆಂಟ್ ಹಾಗೂ ಮಾಡರ್ನ್, ಸ್ಟೈಲಿಶ್ ಆಗಿ ಕಾಣುವಂತೆ ಮಾಡಲು ಸಹಾಯಮಾಡುತ್ತದೆ.

  • Fashion | ಮೂಗುತಿ ಸೌಂದರ್ಯಕ್ಕೆ ಸೋಲದವರಾರು..?

    Fashion | ಮೂಗುತಿ ಸೌಂದರ್ಯಕ್ಕೆ ಸೋಲದವರಾರು..?

    ಮೂಗುತಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಅಲಂಕಾರ ಮಾತ್ರವಲ್ಲ. ಮೂಗುತಿಯು ಭಾರತೀಯ ಸಂಸ್ಕೃತಿಯ ಭಾಗವಾಗಿ ಶತಮಾನಗಳಿಂದಲೂ ಇದ್ದಿದ್ದು, ಇತ್ತೀಚೆಗೆ ಇದು ಹೊಸ ರೂಪದಲ್ಲಿ ಫ್ಯಾಷನ್ ಜಗತ್ತಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಇದು ಭಾರತೀಯ ಮಹಿಳೆಯರ ಸೌಂದರ್ಯವರ್ಧಕವಾಗಿ ಮಾತ್ರವಲ್ಲದೆ, ಅವರ ವೈವಾಹಿಕ ಸ್ಥಿತಿಯ ಪ್ರತೀಕವಾಗಿಯೂ ಪರಿಗಣಿಸಲಾಗುತ್ತದೆ.

    ಮೂಗುತಿ ಧರಿಸುವ ಸಂಪ್ರದಾಯ ಮತ್ತು ಅದರ ಮೂಲಗಳು
    ಮೂಗುತಿ ಧರಿಸುವ ಸಂಪ್ರದಾಯವು ಸುಮಾರು 4000 ವರ್ಷಗಳ ಹಿಂದಿನ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಸಂಸ್ಕೃತಿಗಳಿಂದ ಉಗಮವಾಗಿದೆ. ಭಾರತದಲ್ಲಿ, ಈ ಸಂಪ್ರದಾಯವು ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಉತ್ತರ ಭಾರತದ ಮಹಿಳೆಯರು ದೊಡ್ಡ ಗಾತ್ರದ ಮೂಗುತಿಗಳನ್ನು ಧರಿಸುತ್ತಾರೆ. ದಕ್ಷಿಣ ಭಾರತದ ಮಹಿಳೆಯರು ಸಣ್ಣ ಗಾತ್ರದ ಮೂಗುತಿಗಳನ್ನು ಧರಿಸುತ್ತಾರೆ.

    ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ
    ಹಿಂದೂ ಧರ್ಮದಲ್ಲಿ, ಮೂಗುತಿ ಧರಿಸುವುದು ದೇವಿ ಪಾರ್ವತಿಯ ಭಕ್ತಿಯ ಸಂಕೇತವಾಗಿದೆ. ಪಾರ್ವತಿ ದೇವಿ ವಿವಾಹದ ದೇವಿಯಾಗಿರುವ ಕಾರಣ, ಮೂಗುತಿ ಧರಿಸುವುದು ವಿವಾಹಿತ ಮಹಿಳೆಯರ ವೈವಾಹಿಕ ಜೀವನದ ಪ್ರತೀಕವಾಗಿದೆ. ಇದೇ ರೀತಿ, ಮೂಗುತಿ ಧರಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ. ಮೂಗು ಶರೀರದ ಪ್ರಮುಖ ಭಾಗವಾಗಿರುವುದರಿಂದ, ಮೂಗುತಿ ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ.

    ಹಳೆಯ ಆಭರಣಕ್ಕೆ ಹೊಸ ರೂಪ
    ಇಂದಿನ ಯುವತಿಯರು ಮೂಗುತಿಯನ್ನು ಕೇವಲ ಸಂಪ್ರದಾಯದ ಭಾಗವಲ್ಲದೆ, ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗಿ ಬಳಸುತ್ತಿದ್ದಾರೆ. ಸ್ಟ್ರೀಟ್ ಫ್ಯಾಷನ್‌ನಿಂದಾಗಿ ಮೂಗುತಿಯ ಡಿಸೈನ್‌ಗಳು ಈಗ ಹೆಚ್ಚು ವೈವಿಧ್ಯಮಯವಾಗಿವೆ.

    1. ಮಿನಿಮಲಿಸ್ಟ್ ಡಿಸೈನ್
    ಸಾಧಾರಣವಾಗಿ ಚಿನ್ನ ಅಥವಾ ಬೆಳ್ಳಿಯಲ್ಲಿ ಸಣ್ಣ ಗಾತ್ರದ ಮೂಗುತಿಯು ಪ್ರಚಲಿತವಾಗಿದೆ. ಡೈಲಿ ವೇರ್‌ಗೆ ಸುಲಭವಾಗಿ ಹೊಂದುವಂತೆ ಈ ಡಿಸೈನ್‌ಗಳು ಮಾಡಲಾಗಿದೆ. ಇದು ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

    2. ಕ್ಲಿಪ್-ಆನ್ ಮೂಗುತಿ
    ಇದು ಮೂಗಿನ ರಂಧ್ರವಿಲ್ಲದವರಿಗೆ ಪರಿಪೂರ್ಣ ಆಯ್ಕೆಯಾಗಿದೆ. ವಿಭಿನ್ನ ಶೇಪ್, ಸ್ಟೋನ್‌ಗಳು, ಮತ್ತು ಮೆಟಲ್‌ಗಳಲ್ಲಿ ಲಭ್ಯವಿರುವ ಈ ಕ್ಲಿಪ್-ಆನ್ ಆಭರಣವು ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಸದ್ದು ಮಾಡಿದೆ.

    3. ಆಕ್ಸಿಡೈಜ್ಡ್ ಸಿಲ್ವರ್ ಮೂಗುತಿ
    ಬೋಹೋ ಸ್ಟೈಲ್ ಪ್ರಿಯರಿಗೆ ಇದು ಅತ್ಯಂತ ಇಷ್ಟವಾಗುವ ಆಯ್ಕೆಯಾಗಿದೆ. ದಪ್ಪ ವಿನ್ಯಾಸ, ಹಳೆಯ ಮೊಹರಿನಂತಿರುವ ಥೀಮ್‌ಗಳು ಇವುಗಳಲ್ಲಿ ಸಾಮಾನ್ಯ. ಇದು ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಗಳಿಗೆ ಬಳಸಲಾಗುತ್ತದೆ. ಇದು ಅಗಲ ಮುಖದವರಿಗೆ ಹೆಚ್ಚು ಒಪ್ಪುತ್ತದೆ.

    4. ನಥ್ ವಿಥ್‌ ಚೈನ್
    ವಿಶೇಷವಾಗಿ ಮದುವೆ ಅಥವಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳ ಗಮನ ಸೆಳೆಯುವ ಈ ಡಿಸೈನ್ ಈಗ ಫ್ಯಾಷನ್ ಶೋಗಳಲ್ಲೂ ಕಾಣಸಿಗುತ್ತದೆ. ಮೂಗಿನಿಂದ ಕಿವಿಯವರೆಗೆ ಚೈನ್ ಜೋಡಿಸಲಾಗಿರುವ ಈ ಡಿಸೈನ್‌ಗಳು ಮದುವೆ ಸಮಾರಂಭಗಳಲ್ಲಿ ಗಮನ ಸೆಳೆಯುತ್ತವೆ. ಇದನ್ನೂ ಉತ್ತರ ಭಾರತದ ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ವಿವಾಹ ಸಂದರ್ಭಗಳಲ್ಲಿ ಅವರು ಇಂತಹ ಮೂಗುತಿಗಳನ್ನೇ ಧರಿಸಿರುತ್ತಾರೆ.

    5. ಪರ್ಸನಲೈಜ್ಡ್ ಮೂಗುತಿ
    ಇತ್ತೀಚಿನ ದಿನಗಳಲ್ಲಿ ಕಸ್ಟಮ್ ಮಾಡಿಸಿದ ಆಭರಣಗಳು ಬಹುಪಾಲು ಜನಪ್ರಿಯವಾಗಿವೆ. ಹುಟ್ಟಿದ ನಕ್ಷತ್ರ, ಹೆಸರು ಅಥವಾ ಸ್ಟೋನ್‌ಗಳಿಗೆ ಅನುಗುಣವಾಗಿ ಮೂಗುತಿಯ ವಿನ್ಯಾಸ ಮಾಡಿಸಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಇದನ್ನು ಬೇರೆ ಬೇರೆ ಬಣ್ಣದ ಹರಳಲ್ಲಿ ಮಾಡಲಾಗುತ್ತದೆ. ಅವರವರಿಗೆ ಹೊಂದಿಕೆಯಾಗುವಂತೆ ಈ ಮೂಗುತಿಗಳನ್ನು ಡಿಸೈನ್‌ ಮಾಡಲಾಗುತ್ತದೆ.

    ಮೂಗುತಿಯು ಕೇವಲ ಆಭರಣವಲ್ಲ, ಇದು ನಮ್ಮ ಸಂಸ್ಕೃತಿಯ ಹೆಮ್ಮೆ ಕೂಡಾ. ಸೌಂದರ್ಯ, ಧಾರ್ಮಿಕತೆ ಮತ್ತು ವೈಯಕ್ತಿಕ ಶೈಲಿಯ ಮಿಶ್ರಣವಿರುವ ಈ ಪುಟ್ಟ ಆಭರಣವು, ಮುಂದಿನ ಪೀಳಿಗೆಯವರೆಗೂ ಅದರ ಗ್ಲಾಮರ್ ಕಳೆದುಕೊಳ್ಳದೇ ಸಾಗುವುದರಲ್ಲಿ ಸಂಶಯವಿಲ್ಲ.

  • Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    – ಈ ಮಾಟಿಗಳು ಮಾಡ್ರನ್ ಗೂ ಸೈ, ಎತ್ನಿಕ್ ಗೂ ಸೈ

    ಗಿನ ಫ್ಯಾಶನ್‌ ಲೋಕದಲ್ಲಿ ಹುಡುಗಿರು ಡಿಫರೆಂಟ್‌ ಆಗಿ ಕಾಣಲು ಬಯಸುತ್ತಾರೆ. ಇತ್ತೀಚೆಗೆ ಚಿನ್ನದ ಆಭರಣಗಳನ್ನು ಇಷ್ಟ ಪಡದೆ ಹೆಚ್ಚಾಗಿ ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಹಾಕಲು ಬಯಸುತ್ತಾರೆ. ಮಾರುಕಟ್ಟೆಗೆ ವಿವಿಧ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ. ಫ್ಯಾಶನ್‌ ಪ್ರಿಯರು ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಪಾರ್ಟಿ, ಇತರ ಸಮಾರಂಭಗಳಿಗೆ ಧರಿಸಲು ಈ ಆಭರಣಗಳನ್ನು ಇಷ್ಟ ಪಡುತ್ತಾರೆ.

    ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಸಂಸ್ಕೃತಿಯ ಛಾಯೆ ಕಳೆದುಕೊಳ್ಳದೆ ಆಧುನಿಕತೆಯನ್ನು ತೋರಿಸುವ ಶೈಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಆ ಶೈಲಿಯ ಉತ್ತಮ ಉದಾಹರಣೆ ಎಂದರೆ ಮಾಟಿ ಆಭರಣಗಳೊಂದಿಗೆ ಮಾಡ್ರನ್ ಡ್ರೆಸ್‌ಗಳ ಕಾಂಬಿನೇಷನ್.

    ಮಾಟಿ ಆಭರಣಗಳು ಮತ್ತೆ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿವೆ. ಇವು ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಆಧುನಿಕ ಉಡುಪುಗಳವರೆಗೆ ಎಲ್ಲದಕ್ಕೂ ಒಪ್ಪುತ್ತದೆ. ಇತ್ತೀಚೆಗೆ, ಎರಡು ಅಥವಾ ಮೂರು ಎಳೆಯ ಮಾಟಿಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಇವು ಮುಖದ ಆಕರ್ಷಕತೆಯನ್ನು ಹೆಚ್ಚಿಸುತ್ತವೆ ಅಲ್ಲದೇ ಹೆವಿ ವರ್ಕ್‌ಗಳಿರುವ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ ಸ್ಟೋನ್ ಅಥವಾ ಮುತ್ತಿನ ಕೆಲಸದ ಮಾಟಿಗಳು ವಿಶೇಷವಾಗಿ ಆಕರ್ಷಕವಾಗಿವೆ.

    ಟ್ರೆಂಡಿಂಗ್ ಮಾಟಿಗಳನ್ನು ಧರಿಸುವುದರಿಂದ ದೊಡ್ಡ ನೆಕ್ಲೆಸ್‌ ಧರಿಸುವ ಅಗತ್ಯವಿಲ್ಲದೆ ರಿಚ್ ಲುಕ್ ಪಡೆಯಬಹುದು. ಚಿನ್ನದ ಜೊತೆಗೆ ಬೆಳ್ಳಿ ಮಾಟಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಭಿನ್ನ ಆಯ್ಕೆಗಳನ್ನು ನೀಡುತ್ತವೆ. 2025ರಲ್ಲಿ ಮಾಟಿ ಆಭರಣಗಳು ಮತ್ತೆ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹಳೆಯ ಕಾಲದ ಮಾಟಿಗಳು ಈಗ ನವೀಕೃತ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

    ಸೀರೆ, ಗ್ರ್ಯಾಂಡ್‌ ಸೆಲ್ವಾರ್ ಅಥವಾ ಸ್ಕರ್ಟ್‌-ಬ್ಲೌಸ್‌ ಧರಿಸಿದಾಗ ಮಾಟಿ ಆಭರಣಗಳು ರಿಚ್‌ ಲುಕ್‌ ನೀಡುತ್ತವೆ. ಇವು ಫ್ರೀ ಹೇರ್ ಅಥವಾ ಬನ್‌ ಹೇರ್‌ಸ್ಟೈಲ್‌ಗೂ ಚೆನ್ನಾಗಿ ಹೊಂದುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೂ ವಿಭಿನ್ನ ರೀತಿಯ ಸ್ಟೈಲಿಶ್ ಮಾಟಿಗಳು ಹೊಸ ಲುಕ್ ಅನ್ನು ನೀಡುತ್ತದೆ. ಒಂದೆಳೆಯ ಮಾಟಿಗಳಿಂದ ಹಿಡಿದು ಎರಡು-ಮೂರೆಳೆಯ ಮಾಟಿಗಳವರೆಗೆ ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜೆಟ್‌ ಮತ್ತು ಶೈಲಿಗೆ ಅನುಗುಣವಾಗಿ ಆಯ್ಕೆಮಾಡಬಹುದು. ಹೀಗಾಗಿ, ಮಾಟಿ ಆಭರಣಗಳು ಇಂದಿನ ಫ್ಯಾಷನ್‌ ಪ್ರಿಯರಿಗೆ ಹೊಸ ಆಯ್ಕೆಯಾಗಿ ಹೊರಹೊಮ್ಮಿವೆ.

    ಅದರಲ್ಲೂ ಫ್ಯಾಷನ್‌ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಇಂತಹ ಆಭರಣಗಳನ್ನು ಧರಿಸುತ್ತಾರೆ. ಫೋಟೋಶೂಟ್‌ನಲ್ಲಿ ಧರಿಸುವ ಮಾಟಿ ಇಯರಿಂಗ್ ಇಡೀ ಲುಕ್‌ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ. ಈಗಿನ ಟ್ರೆಂಡ್‌ಗೆ ಮ್ಯಾಚ್‌ ಆಗುವಂತಾ ಮಾಟಿಗಳನ್ನು ಡಿಸೈನರ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ

    ಮಾಡ್ರನ್ ಡ್ರೆಸ್‌ಗಳಿಗೆ ಒಪ್ಪುವ ಮಾಟಿಗಳು

    ಸಿಂಪಲ್ ಡ್ರೆಸ್‌ಗಳು, ಶರ್ಟ್ಸ್ ಅಥವಾ ವೆಸ್ಟರ್ನ್ ಗೌನ್ಸ್‌ಗಳಿಗೆ ಸ್ಟೈಲಿಶ್ ಮಾಟಿಗಳು ಎತ್ನಿಕ್ ಟಚ್ ಕೊಡುತ್ತವೆ. ಹಾಗೆಯೇ ಯುನೀಕ್ ಆಗಿ ಕೂಡ ಕಾಣಿಸುತ್ತದೆ. ಕಚೇರಿ, ಕಾಲೇಜು ಅಥವಾ ಕಾಫಿ ಡೇಟ್‌ಗೆ ಬಳಸಬಹುದಾದ ಮಾಟಿಗಳು ಲಭ್ಯವಿವೆ. ಹ್ಯಾಂಡ್‌ಪೈಂಟೆಡ್ ಅಥವಾ ಪ್ಯಾಟ್‌ಟರ್ನ್ಡ್ ಮಾಟಿಗಳು ಶರ್ಟ್‌ ಡ್ರೆಸ್‌ಗಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

    ಮಾಟಿ ಆಭರಣಗಳ ತೂಕವು ಕಡಿಮೆಯಿದ್ದು, ವಿನ್ಯಾಸದ ವೈವಿಧ್ಯತೆ ಹೆಚ್ಚಾಗಿದೆ. ಜೀನ್ಸ್‌-ಟಾಪ್‌ ಅಥವಾ ಜಂಪ್‌ಸೂಟ್‌ ಜೊತೆ ಕಲರ್ ಫುಲ್ ಮಾಟಿಗಳು ಹಾಗೂ ಮ್ಯಾಚಿಂಗ್ ಬಳೆ ಹಾಕಿದರೆ ಕ್ಲಾಸೀ ಲುಕ್ ನೀಡುತ್ತದೆ. ಈ ಸ್ಟೈಲ್‌ಗಳನ್ನು ಬಳಸುವುದರಿಂದ ನವೀನತೆಯ ಜೊತೆಗೆ ಸಂಸ್ಕೃತಿಯ ಹಳೆಯ ಆಭರಣಗಳ ವಿನ್ಯಾಸಗಳೂ ಚಾಲ್ತಿಯಲ್ಲಿರುತ್ತದೆ.

    ಸ್ಟೋನ್‌ ಅಥವಾ ಮುತ್ತಿನ ಮಾಟಿ

    ಸ್ಟೋನ್‌ ಅಥವಾ ಮುತ್ತಿನ (Pearl) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು. ಮುತ್ತಿನ ಡಿಸೈನ್‌ಗಳ ಮಾಟಿಗಳು ಸೀರೆ, ಲಂಗ ದಾವಣಿಗೆ ಹೇಳಿ ಮಾಡಿಸಿದ ಆಭರಣವಾಗಿದೆ. ಇದು ಉಡುಪಿನ ರೂಪುರೇಷೆಯನ್ನೇ ಬದಲಾಯಿಸುತ್ತದೆ. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.

     ಮಾಟಿ ಆಭರಣಗಳು ನಾವಿನ್ಯತೆಯೊಂದಿಗೆ ಸಂಸ್ಕೃತಿಯ ಸೌಂದರ್ಯವನ್ನೂ ಪ್ರತಿಬಿಂಬಿಸುತ್ತವೆ. ವಿಭಿನ್ನ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಶನ್‌ಗೂ ಸೂಕ್ತವಾಗಿವೆ. ಸ್ಟೈಲಿಶ್ ಆಯ್ಕೆಯಾಗಿರುವ ಈ ಆಭರಣಗಳು ನಿತ್ಯ ಉಡುಪುಗಳಿಗೆ ಆಕರ್ಷಕವಾಗಿವೆ. ನೀವು ಸಾಂಪ್ರದಾಯಿಕ ಉಡುಗೆ ಹಾಗೂ ಮಾಡನ್ ಡ್ರೆಸ್ ಗಳಲ್ಲಿ ರಿಚ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಇಂತಹ ಆಧುನಿಕ ಮಾಟಿಗಳನ್ನ ಬಳಸಿ.

  • ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ| ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ: ಬಟ್ಟೆ ತೊಳೆಯಲು (Cloth Wash) ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

    ದೀಪಾ (28), ಚಂದನಾ (19), ದೀಪಾ (23) ಸಾವನ್ನಪ್ಪಿದ ಮಹಿಳೆಯರು. ಮಹಿಳೆಯರು ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಇದನ್ನೂ ಓದಿ: ಹಳೆ ವೈಷಮ್ಯಕ್ಕೆ ಚಾಕುವಿನಿಂದ 30 ಬಾರಿ ಇರಿದು ಹತ್ಯೆ – ಬಳಿಕ ಪೊಲೀಸರಿಗೆ ಶರಣಾದ ಆರೋಪಿಗಳು

    ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

  • Hoodie: ಚಳಿಗಾಲದಲ್ಲಿ ಹೂಡಿ ಫ್ಯಾಷನ್ ಟ್ರೆಂಡ್

    Hoodie: ಚಳಿಗಾಲದಲ್ಲಿ ಹೂಡಿ ಫ್ಯಾಷನ್ ಟ್ರೆಂಡ್

    ಳಿ ಗಾಳಿಗೆ ದೇಹವನ್ನು ಬೆಚ್ಚಗಿಡುವಂತಹ ಸ್ಟೈಲೀಶ್ ಆಗಿರುವಂತಹ ಹೂಡಿಗಳು ಇಂದು ವಿಂಟರ್ ಫ್ಯಾಷನ್‌ಗೆ ಕಾಲಿಟ್ಟಿದ್ದು, ಕಾಲೇಜು ನಾರಿಮಣಿಯರ (Women) ಆಕರ್ಷಿಸತೊಡಗಿವೆ. ನೋಡಲು ಆಕರ್ಷಕವಾಗಿ ಬಿಂಬಿಸಿವೆ. ಹೌದು, ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಎಂದಿನಂತೆ ಸ್ಟೈಲೀಶ್ ಲುಕ್ ನೀಡುವ ಹೂಡಿಗಳು (Hoodie) ಬಂದಿವೆ. ಈ ಜನರೇಷನ್‌ನವರಿಗೂ ಇಷ್ಟವಾಗುವಂತಹ ಕಲರ್ಸ್ ಹಾಗೂ ಡಿಸೈನ್‌ನಲ್ಲಿ ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಂಡಿವೆ.

    ಬಹುತೇಕ ಫುಲ್ ಸ್ಲೀವ್ಸ್‌ನಲ್ಲಿ ಲಭ್ಯವಿರುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಸಾದಾ, ಮಾನೋಕ್ರೋಮ್, ಸಾಲಿಡ್ ಶೇಡ್ಸ್, ಚೆಕ್ಸ್, ಗಿಂಗ್ನಂ, ಸ್ಟ್ರೈಪ್ಸ್ ಹಾಗೂ ವೈಬ್ರೆಂಟ್ ಕಲರ್ಸ್‌ನಲ್ಲಿ ಹೂಡಿಗಳು ಈ ಸೀಸನ್‌ಗೆ ಆಗಮಿಸಿವೆ. ಇದನ್ನೂ ಓದಿ:ಇಂದೇ ಜೈಲು, ಇಂದೇ ಜಾಮೀನು – ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌

    ಅಂದಹಾಗೆ, ಸಿನಿಮಾ ಸ್ಟಾರ್‌ಗಳು ಕೂಡ ಹೂಡಿ ಪ್ರೇಮಿಗಳು. ನೋಡಲು ಸ್ಟೈಲೀಶ್ ಲುಕ್ ನೀಡುವ ಕ್ರಾಪ್ಹೂಡಿ, ಸ್ಲಿವ್ಲೆಸ್ ಹೂಡಿಗಳನ್ನು ಹೆಚ್ಚು ಧರಿಸಿ, ಏರ್ಪೋರ್ಟ್ ಲುಕ್ ನೀಡುತ್ತಾರೆ. ಇನ್ನು, ಚಳಿಗೆ ಹೂಡಿಯಲ್ಲಿ ಜೊತೆಯಲ್ಲಿಯೇ ಅಟ್ಯಾಚ್ ಆದಂತಹ ಕ್ಯಾಪನ್ನು ತಲೆ ಮೇಲೆ ಧರಿಸಿ ಕೂಡ ಸ್ಟೈಲಿಂಗ್ ಮಾಡುವುದು ಇಂದು ಸಾಮಾನ್ಯವಾಗಿದೆ.

    ಹೂಡಿಗಳು ಎಲ್ಲಾ ಔಟ್‌ಫಿಟ್‌ಗೂ ಮ್ಯಾಚ್ ಆಗುವುದಿಲ್ಲ. ಕ್ಯಾಶುವಲ್ ಅದರಲ್ಲೂ ಪ್ಯಾಂಟ್ ಹಾಗೂ ಸ್ಕರ್ಟ್ಗಳಿಗೆ ಇವನ್ನು ಮ್ಯಾಚ್ ಮಾಡಬೇಕು. ಇನ್ನು, ಉದ್ದವಿರುವ ಸ್ಲಿಮ್ ಹುಡುಗಿಯರಿಗೆ ಇವು ಪರ್ಫೆಕ್ಟ್ ಔಟ್‌ಫಿಟ್. ಇದನ್ನು ಯಾವುದೇ ಶೈಲಿಯ ವೆಸ್ಟರ್ನ್ ಔಟ್‌ಫಿಟ್‌ನೊಂದಿಗೆ ಧರಿಸಬಹುದು. ಪಲ್ಹಾಜೂ, ಕೇಪ್ರಿಸ್ ಜೊತೆಗೂ ಹೂಡಿ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಈ ಹೂಡಿಗೆ ಮ್ಯಾಚ್ ಆಗಬೇಕು. ಹೂಡಿಗೆ ಚೆಕ್ಸ್ ಒಳಗೊಂಡ ಪ್ಯಾಂಟ್ ಧರಿಸಿದಲ್ಲಿ ಸ್ಟೈಲೀಶ್ ಆಗಿ ಕಾಣಿಸುವುದು. ಆಕ್ಸೆಸರೀಸ್ ಧರಿಸುವುದು ಬೇಡ.

    ಹೂಡಿ ಧರಿಸಿ ಲೇಯರ್ ಲುಕ್ ನೀಡುವಾಗ ಆದಷ್ಟೂ ಕಂಫರ್ಟಬಲ್ ಹೇರ್ ಸ್ಟೈಲ್ ಮಾಡಿ. ಯಾಕೆಂದರೆ ಮೊದಲೇ ಬೆಚ್ಚಗಿನ ಉಡುಪು ಧರಿಸಿ ನಂತರ ಫ್ರೀ ಹೇರ್ ಸ್ಟೈಲ್ ಮಾಡಿದಲ್ಲಿ ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್ಟೇಲ್, ಸೈಡ್ಪೋನಿ, ಲಾಂಗ್ ಸೈಡ್ ಚೋಟಿಯಂತಹ ಹೇರ್ ಸ್ಟೈಲ್‌ಗಳನ್ನು ಟ್ರೈ ಮಾಡಿ.

    ಫ್ಯಾಷನ್ ಟಿಪ್ಸ್:

    ಚಳಿಗಾಲದಲ್ಲಿ ಹೂಡಿ ಧರಿಸಿ ಸ್ಟೈಲೀಶ್ ಆಗಿ ಕಾಣಿಸುವವರಿಗೆ ಸಿಂಪಲ್ ಟಿಪ್ಸ್.
    ಆದಷ್ಟು ಸಿಂಪಲ್ ಮೇಕೋವರ್‌ಗೆ ಆದ್ಯತೆ ನೀಡಿ.
    ಲೈಟ್‌ವೇಟ್ ಹೂಡಿಗಳನ್ನು ಪ್ರಿಫರ್ ಮಾಡಿ.
    ಹೂಡಿಗೆ ಸಾದಾ ಪ್ಯಾಂಟ್ ಅಥವಾ ಸ್ಕರ್ಟ್ಸ್ ಧರಿಸಿ. ಸಖತ್ ಆಗಿ ಕಾಣಿಸುವುದು.
    ತೆಳ್ಳಗಿರುವವರು ಫರ್ ಹಾಗೂ ಫ್ರಿಂಝ್ ಹೂಡಿ ಸೆಲೆಕ್ಟ್ ಮಾಡಬಹುದು.
    ವಿಂಟರ್ ಲುಕ್‌ಗಾಗಿ ಶೂ ಧರಿಸಿ.