Tag: women

  • ಮಹಿಳೆಯರ ಕುರಿತು ವಿವಾದಿತ ಹೇಳಿಕೆ – ಕ್ಷಮೆ ಕೇಳಿದ ನಿತೀಶ್ ಕುಮಾರ್

    ಮಹಿಳೆಯರ ಕುರಿತು ವಿವಾದಿತ ಹೇಳಿಕೆ – ಕ್ಷಮೆ ಕೇಳಿದ ನಿತೀಶ್ ಕುಮಾರ್

    ಪಾಟ್ನಾ: ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಶಿಕ್ಷಣದ ಪಾತ್ರದ ಕುರಿತು ಮಂಗಳವಾರ ಬಿಹಾರದ ಮುಖ್ಯಮಂತ್ರಿ ನೀಡಿರುವ ವಿವಾದಿತ ಹೇಳಿಕೆಗೆ ಅವರು ಕ್ಷಮೆ ಕೇಳಿದ್ದಾರೆ.

    ನಾನು ಕ್ಷಮೆ ಕೇಳುತ್ತೇನೆ ಹಾಗೂ ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ. ನನ್ನ ಮಾತುಗಳು ತಪ್ಪಾಗಿದ್ದರೆ, ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ (Apology) ಎಂದು ನಿತೀಶ್ ಕುಮಾರ್ (Nitish Kumar) ಹೇಳಿಕೆ ನೀಡಿದ್ದಾರೆ.

    ನನ್ನ ಮಾತುಗಳು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣ ಅಗತ್ಯ ಎಂದು ನಾನು ಹೇಳಿದ್ದೇನೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಅಭಿವೃದ್ಧಿಯ ಪರವಾಗಿ ನಾನು ನಿಂತಿದ್ದೇನೆ ಎಂದು ಬಿಹಾರದ ಮುಖ್ಯಮಂತ್ರಿ ತಮ್ಮ ಮಾತನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ರಥಕ್ಕೆ ಕರೆಂಟ್‌ ಶಾಕ್‌ – ಅಪಾಯದಿಂದ ಪಾರು

    ವಿವಾದಿತ ಹೇಳಿಕೆಯೇನು?
    ನಿತೀಶ್ ಕುಮಾರ್ ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಜನಸಂಖ್ಯೆ ನಿಯಂತ್ರಣದ ಕುರಿತು ಮಾತನಾಡುತ್ತಾ ಫಲವತ್ತತೆಯ ದರ 4.2% ರಿಂದ 2.9% ಕ್ಕೆ ಏಕೆ ಕುಸಿದಿದೆ ಎಂಬುದನ್ನು ವಿವರಿಸಿದ್ದರು. ಆಗ ಅವರು, ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರು ಶಿಕ್ಷಣ ಹೊಂದುವುದು ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ಸುಶಿಕ್ಷಿತ ಮಹಿಳೆ ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರಬಲ್ಲವಳಾಗಿರುತ್ತಾಳೆ. ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಶಿಕ್ಷಣ ಪಡೆದ ಮಹಿಳೆ ಪತಿಯನ್ನು ತಡೆಯುವ ಕುರಿತು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದೇ ಕಾರಣ ಎಂದು ಹೇಳಿದ್ದರು.

    ನಿತೀಶ್ ಕುಮಾರ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ಬಿಜೆಪಿ ನಾಚಿಕೆಗೇಡು, ಅಸಹ್ಯ ಹಾಗೂ ಅಶ್ಲೀಲ ಎಂದು ಟೀಕಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ನಿತೀಶ್ ಕುಮಾರ್ ಅವರ ಈ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

  • ಮೂರು ಗುಡಿಸಲುಗಳಿಗೆ ಬೆಂಕಿ- ಪ್ರಾಣವನ್ನೂ ಲೆಕ್ಕಿಸದೇ ಇಬ್ಬರ ಜೀವ ಉಳಿಸಿದ ಮಹಿಳೆಯರು

    ಮೂರು ಗುಡಿಸಲುಗಳಿಗೆ ಬೆಂಕಿ- ಪ್ರಾಣವನ್ನೂ ಲೆಕ್ಕಿಸದೇ ಇಬ್ಬರ ಜೀವ ಉಳಿಸಿದ ಮಹಿಳೆಯರು

    ಚಿಕ್ಕಮಗಳೂರು: ಅಚಾನಕ್ಕಾಗಿ ಮೂರು ಗುಡಿಸಲಿಗೆ ಬೆಂಕಿ ಬಿದ್ದ ವೇಳೆ ಮಹಿಳೆಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸಿನಿಮಿಯ ರೀತಿಯಲ್ಲಿ ಇಬ್ಬರ ಜೀವ ಉಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ (Kadur Taluku) ಅಂತರಘಟ್ಟೆ ಸಮೀಪದ ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ನಡೆದಿದೆ.

    ಬೋವಿ ಕಾಲೋನಿಯಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು. ಕಾಲೋನಿಯಲ್ಲಿದ್ದ ಪುರುಷರು ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ತೆರಳಿದ್ದರು. ಈ ವೇಳೆ ಕಾಲೋನಿಯಲ್ಲಿದ್ದ ಶಶಿ, ಕಲ್ಲೇಶ್ ಹಾಗೂ ಹನುಮಂತ ಎಂಬವರ ಮೂರು ಗುಡಿಸಲಿಗೆ ಅಚಾನಕ್ಕಾಗಿ ಬೆಂಕಿ ಬಿದ್ದಿತ್ತು. ಈ ವೇಳೆ ಕಲ್ಲೇಶ್ ಮನೆಯಲ್ಲಿ ಆರು ವರ್ಷದ ಮಗು ಕೂಡ ಮಲಗಿತ್ತು. ಹನುಮಂತ ಮನೆಯಲ್ಲಿ ಹನುಮಂತ ಕೂಡ ಮದ್ಯ ಸೇವಿಸಿ ಮನೆಯಲ್ಲೇ ಮಲಗಿದ್ದರು.

    ಬೆಂಕಿ ಹತ್ತುತ್ತಿದ್ದಂತೆ ಬೆಂಕಿಯ ಕೆನ್ನಾಲಿ ಬಿಸಿಲ ಧಗೆಗೆ ಮತ್ತಷ್ಟು ಜೋರಾಗಿತ್ತು. ನೋಡ-ನೋಡ್ತಿದ್ದಂತೆ ಮೂರು ಗುಡಿಸಲು ಹೊತ್ತಿ ಉರಿದಿತ್ತು. ಈ ವೇಳೆ ಪುರುಷರು ಕೂಡ ಮನೆಯಲ್ಲಿ ಇರಲಿಲ್ಲ. ಆಗ ಬೆಂಕಿಯ ಕೆನ್ನಾಲಿಗೆ ಜೋರಾಗಿತ್ತು. ಕೂಡಲೇ ಗ್ರಾಮದಲ್ಲಿದ್ದ ಮಹಿಳೆಯರು ತಮ್ಮ ಜೀವವನ್ನೂ ಲೆಕ್ಕಿಸದೆ ಆರು ವರ್ಷದ ಮಗು ಹಾಗೂ ಮದ್ಯ ಸೇವಿಸಿ ಮಲಗಿದ್ದ ಮಧ್ಯ ವಯಸ್ಕ ಪುರಷನನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್

    ವಿಷಯ ತಿಳಿಯುತ್ತಿದ್ದಂತೆ ಅಂತ್ಯಸAಸ್ಕಾರಕ್ಕೆ ತೆರಳಿದ್ದ ಪುರುಷರು ಅರ್ಧಕರ್ಧ ಜನ ಬಿಟ್ಟು ಓಡಿ ಬಂದಿದ್ದರು. ಮನೆಗಳ ಪಕ್ಕದಲ್ಲಿದ್ದ ತೊಟ್ಟಿಯಲ್ಲಿ ಪೂರ್ತಿ ನೀರಿದ್ದ ಕಾರಣ ಎಲ್ಲರೂ ಸೇರಿ ಬೆಂಕಿಯನ್ನ ನಂದಿಸಿದ್ದಾರೆ. ಆದರೆ ಎರಡು ಮನೆಗಳು ಸಂಪೂರ್ಣ ಸುಟ್ಟು ಹೋಗಿ, ಒಂದು ಮನೆ ಭಾಗಶಃ ಸುಟ್ಟಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಈ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ

    ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು (Accident) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿ (BMTC) ಬಸ್‌ಗೆ ಸಿಲುಕಿ ಸಾವನ್ನಪ್ಪುತ್ತಿರುವವರೇ ಹೆಚ್ಚು ಎಂದರೆ ತಪ್ಪಾಗಲಾರದು. ಅದೇ ರೀತಿ ಭಾನುವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ.

    ರಸ್ತೆ ದಾಟುವ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೀಣಾ ಬಿಎಂಟಿಸಿ ಬಸ್‌ಗೆ ಬಲಿಯಾದ ಮಹಿಳೆ. ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯ ಅರಕೆರೆಯ ಶ್ರೀ ಸಾಯಿ ಗಾರ್ಮೆಂಟ್ಸ್ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅಪರಿಚಿತರಿಂದ ಗುಂಡಿನ ದಾಳಿ – ಅಂಗಡಿ ಮಾಲೀಕ ಸ್ಥಳದಲ್ಲೇ ಸಾವು

    ಅದೇ ರೀತಿ ವಿಜಯನಗರ (Vijayanagara) ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ವ್ಯಕ್ತಿ ಬಿಎಂಟಿಸಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕುಮಾರ್ (45) ಬಿಎಂಟಿಸಿ ಬಸ್‌ಗೆ ಬಲಿಯಾದ ಬೈಕ್ ಸವಾರ. ವಿಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗೋವಿಂದರಾಜನಗರ ಬೈಟು ಕಾಫಿ ಮುಂಭಾಗದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

    ಇದಕ್ಕೂ ಮೊದಲು ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿತ್ತು. ನೆಲಮಂಗಲ ಸಮೀಪದ ಬಿನ್ನಮಂಗಲ ಬಳಿ ಘಟನೆ ನಡೆದಿದ್ದು, ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದನ್ನೂ ಓದಿ: ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿ ಹತ್ಯೆ- ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಸ್ಥಾನ ಚುನಾವಣೆಯಲ್ಲಿ ಮಹಿಳೆಯರಿಗೆ ಯಾಕೆ ಆದ್ಯತೆ?

    ರಾಜಸ್ಥಾನ ಚುನಾವಣೆಯಲ್ಲಿ ಮಹಿಳೆಯರಿಗೆ ಯಾಕೆ ಆದ್ಯತೆ?

    ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ (Loksabha And Vidhanasabha Election) ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮೂಲಕ ಪಂಚರಾಜ್ಯ ಚುನಾವಣೆಗೂ ಮುನ್ನ ಬಿಜೆಪಿ ಮಹಿಳಾ ಮತದಾರರನ್ನು ಸಳೆಯುವ ಪ್ರಯತ್ನ ಮಾಡಿದೆ. ಈ ಪ್ರಯತ್ನ ಯಶಸ್ವಿಯಾಗಲಿದೆಯೇ ಎನ್ನುವ ಅಂಶ ಈ ಬಾರಿ ರಾಜಸ್ಥಾನ ಚುನಾವಣೆಯ ಫಲಿತಾಂಶದಲ್ಲಿ ತಿಳಿದು ಬರಲಿದೆ.

    ರಾಜಸ್ಥಾನದಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ ನೇರಾನೇರ ಹೋರಾಟ ನಡೆಸುತ್ತಿದ್ದು, ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಅಸ್ತ್ರಗಳ ಮೂಲಕ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಬಿಜೆಪಿ ಪ್ರಮುಖ ಮಹಿಳಾ ನಾಯಕರಿಗೆ ಟಿಕೆಟ್ ನೀಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

    ಬಿಜೆಪಿ (BJP) ಸಂಸದೆ ದಿಯಾ ಕುಮಾರಿ (Dia Kumari) ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಮಹಿಳೆಯರಿಗೆ ದೊಡ್ಡ ಸಂದೇಶ ನೀಡಲು ಪ್ರಯತ್ನಿಸಿದೆ. ವಿದ್ಯಾಧರ್ ನಗರ ಕ್ಷೇತ್ರದಿಂದ ದಿಯಾ ಕುಮಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದ್ದು, ಬಿಜೆಪಿಯ ಪ್ರಬಲ ಕ್ಷೇತ್ರವೆಂದು ಪರಿಗಣಿಸಲಾಗಿದೆ. ರಾಜಸ್ಥಾನದಾದ್ಯಂತ ಪ್ರಚಾರಕ್ಕೆ ದಿಯಾ ಕುಮಾರಿ ಮುಂದಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದು ಮಹಿಳೆಯರು ಮತ್ತು ರಜಪೂತರ ಮೇಲೆ ಪರಿಣಾಮ ಬೀರಲಿದೆ. ಇದನ್ನೂ ಓದಿ: ಸಚಿವರಿಂದ ನನಗೆ ಕಿರುಕುಳ – ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು

     

    ಮಹಿಳೆಯರಿಗೆ ಆದ್ಯತೆ ಯಾಕೆ?: ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಆದ್ಯತೆ ನೀಡಲು ಕಾರಣ ಮಹಿಳಾ ಮತದಾರರ ಪ್ರಮಾಣ, ರಾಜಸ್ಥಾನದಲ್ಲಿ 60 ರಿಂದ 99 ವರ್ಷದೊಳಗಿನ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. 60 ರಿಂದ 69 ವರ್ಷದೊಳಗಿನ ಮತದಾರರಲ್ಲಿ ಪುರುಷ ಮತದಾರರ ಸಂಖ್ಯೆ 2617332 ಇದ್ದರೇ ಮಹಿಳಾ ಮತದಾರರ ಸಂಖ್ಯೆ 2619051 ಇದೆ.

    ವಯಸ್ಸು ಹೆಚ್ಚಾದಂತೆ ಮಹಿಳಾ ಮತದಾರರ ಸಂಖ್ಯೆಯೂ ಹೆಚ್ಚುತ್ತಿದೆ. 70 ರಿಂದ 79 ವರ್ಷದೊಳಗಿನ ಪುರುಷ ಮತದಾರರು 1220726 ಮತ್ತು ಮಹಿಳಾ ಮತದಾರರು 1413173 ಇದ್ದಾರೆ. 80 ರಿಂದ 89 ವರ್ಷದೊಳಗಿನ ಪುರುಷ ಮತದಾರರ ಸಂಖ್ಯೆ 373931 ಮತ್ತು ಮಹಿಳಾ ಮತದಾರರ ಸಂಖ್ಯೆ 580011. 90 ರಿಂದ 99 ರ ವಯೋಮಾನದವರಲ್ಲಿ ಮಹಿಳಾ ಮತದಾರರು ಮತ್ತು ಪುರುಷ ಮತದಾರರ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಈ ವಯೋಮಾನದ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಸುಮಾರು 3 ಪಟ್ಟು ಹೆಚ್ಚಿದೆ. 90 ರಿಂದ 99 ವರ್ಷದೊಳಗಿನ ಪುರುಷ ಮತದಾರರ ಸಂಖ್ಯೆ 59 ಸಾವಿರವಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 1 ಲಕ್ಷ 43 ಸಾವಿರಕ್ಕೂ ಹೆಚ್ಚಿದೆ.

    ಈ ಹಿನ್ನಲೆ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಈ ವರ್ಷದ ಬಜೆಟ್‍ನಿಂದಲೇ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಈ ಬಾರಿ ಅವರ ಪ್ರಚಾರದ ಪೋಸ್ಟರ್‍ಗಳ ಬಣ್ಣವನ್ನು ಮಹಿಳಾ ಥೀಮ್‍ನಲ್ಲಿಯೂ ಗುಲಾಬಿ ಇರಿಸಲಾಗಿದೆ. ಯೋಜನೆಗಳ ಕುರಿತು ಮಾತನಾಡಿದ ಅವರು, ಉಳಿತಾಯ ಪರಿಹಾರ ಹೆಚ್ಚಳ, ಹಣದುಬ್ಬರ ಪರಿಹಾರ, ಸ್ಮಾರ್ಟ್ ಫೋನ್, ವಿದ್ಯುತ್ ಸಿಲಿಂಡರ್, ಉಚಿತ ಪಡಿತರ, ಉಚಿತ ವಿದ್ಯುತ್ ಮುಂತಾದ ಯೋಜನೆಗಳನ್ನು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ. ಸುಮಾರು 1.90 ಕೋಟಿ ಮಹಿಳೆಯರೂ ಈ ಯೋಜನೆಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಬಿಜೆಪಿ ವಿರುದ್ಧದ ಪ್ರಚಾರದಲ್ಲಿ ಕಾಂಗ್ರೆಸ್ ಕೂಡ ಹಣದುಬ್ಬರವನ್ನು ದೊಡ್ಡ ವಿಷಯವನ್ನಾಗಿ ಮಾಡಿದೆ. ಹೀಗಾಗಿ ಈ ಬಾರಿ ಮಹಿಳೆಯರ ಬೆಂಬಲ ಸಿಗಲಿದೆ ಎಂದು ಅವರು ಆಶಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರಿನ ಲೇಡಿಹಿಲ್‌ನಲ್ಲಿ ಕಾರು ಹಿಟ್ & ರನ್ – ಓರ್ವ ಯುವತಿ ಸಾವು, ನಾಲ್ವರಿಗೆ ಗಾಯ

    ಮಂಗಳೂರಿನ ಲೇಡಿಹಿಲ್‌ನಲ್ಲಿ ಕಾರು ಹಿಟ್ & ರನ್ – ಓರ್ವ ಯುವತಿ ಸಾವು, ನಾಲ್ವರಿಗೆ ಗಾಯ

    ಮಂಗಳೂರು: ಫುಟ್‌ಪಾತ್‌ನಲ್ಲಿ (Footpath) ನಡೆದುಕೊಂಡು ಹೋಗುತ್ತಿದ್ದ ಐವರು ಹೆಣ್ಣುಮಕ್ಕಳ ಮೇಲೆ ಕಾರು ಹರಿದ ಪರಿಣಾಮ ಓರ್ವ ಯುವತಿ (Young Woman) ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮಂಗಳೂರಿನ (Mangaluru) ಲೇಡಿಹಿಲ್‌ನಲ್ಲಿ (Lady Hill) ನಡೆದಿದೆ.

    ರೂಪಶ್ರೀ (23) ಸಾವನ್ನಪ್ಪಿದ ಯುವತಿ. ಘಟನೆಯಲ್ಲಿ ಓರ್ವ ಬಾಲಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ವಾತಿ (26), ಹಿತನ್ವಿ (16), ಕಾರ್ತಿಕಾ (16) ಮತ್ತು ಯತಿಕಾ (12) ಎಂದು ಗುರುತಿಸಲಾಗಿದೆ. ಯುವತಿಯರು ಲೇಡಿಹಿಲ್‌ನ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಯಾನ್ ಕಾರು ಇವರ ಮೇಲೆ ಹರಿದಿದೆ. ಇದನ್ನೂ ಓದಿ: ಭಕ್ತರನ್ನು ಹೊತ್ತು ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ – 17 ಮಂದಿಗೆ ಗಾಯ

    ವೇಗವಾದ ಚಾಲನೆ ಮತ್ತು ಕಾರು ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಯುವತಿಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕ ಕಮಲೇಶ್ ಬಲದೇವ್ ಬಳಿಕ ತಂದೆಯ ಜೊತೆ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋರಮಂಗಲದ ಕಟ್ಟಡದಲ್ಲಿ ಬೆಂಕಿ ಅವಘಡ – ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಬಾಗಲಕೋಟೆ: ಕಾರು (Car) ಹಾಗೂ ಗೂಡ್ಸ್ ವಾಹನ (Goods Vehicle) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು (Women) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ (Hungund) ತಾಲೂಕಿನ ರಕ್ಕಸಗಿಯಲ್ಲಿ (Rakkasagi) ನಡೆದಿದೆ.

    ಮೃತ ಮಹಿಳೆಯರು ಗೂಡ್ಸ್ ವಾಹನದಲ್ಲಿದ್ದು, ಹುನಗುಂದದಿಂದ ಅಮೀನಗಢ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಎಂಟು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆದ ಕಾರಣ ಕಾರು ಚಾಲಕ ಸಾವಿನಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಮೃತರು ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಭಾಗದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಶಿವಾಜಿಗೆ ಅವಮಾನ – ಠಾಣೆ ಮುಂದೆ ಜನ ಸೇರುತ್ತಿದ್ದಂತೆ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಯಾದಗಿರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Seheme) ಜಾರಿಗೆ ತಂದಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಹಲವು ಅವಾಂತರಗಳು ರಾಜ್ಯದ ಅಲ್ಲಲ್ಲಿ ಸೃಷ್ಟಿಯಾಗಿವೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಅಂತದ್ದೇ ಅವಾಂತರ ಸೃಷ್ಟಿಯಾಗಿದ್ದು, ಬಸ್‌ನಲ್ಲಿ ಸೀಟ್‌ಗಾಗಿ ವಯೋವೃದ್ಧನ ಮೇಲೆ ನಾಲ್ವರು ಮಹಿಳೆಯರು ಮನಸೋ ಇಚ್ಛೆ ಥಳಿಸಿರುವ ಆರೋಪ ಕೇಳಿ ಬಂದಿದೆ.

    ಯಾದಗಿರಿಯಿಂದ ಸೇಡಂಗೆ ಹೊರಟ್ಟಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ವೃದ್ಧನಿಗೆ ಬಸ್ ಏರಿದ ನಾಲ್ವರು ಮಹಿಳೆಯರು ಸೀಟ್ ಬಿಡುವಂತೆ ಕೇಳಿದ್ದಾರೆ. ಆಗ ಮುಂದಿನ ಸೀಟ್‌ಗಳು ಖಾಲಿ ಇವೆ, ಅಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ನಾಲ್ವರು ಮಹಿಳೆಯರು ವಯೋವೃದ್ಧನ ಮೇಲೆ ಮುಗಿಬಿದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಸುಗಳ ಮಾಂಸ ಬಳಕೆ ಆರೋಪ- ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

    ಘಟನೆ ಬಗ್ಗೆ ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ವೃದ್ಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ವಿಚಾರಣೆಗೆಂದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಗ್ಯಾಂಗ್‍ರೇಪ್!

    ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಗ್ಯಾಂಗ್‍ರೇಪ್!

    ಚಂಡೀಗಢ: ಅಪರಿಚಿತ ವ್ಯಕ್ತಿಗಳು ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ನಡೆದಿರುವುದು ಹರಿಯಾಣ (Hariyana) ಪಾಣಿಪತ್‍ನಲ್ಲಿ ಬೆಳಕಿಗೆ ಬಂದಿದೆ.

    ಈ ಘಟನೆ ಬುಧವಾರ ನಡೆದಿದ್ದು, ಆರೋಪಿಗಳು, ಚಾಕು ಹಾಗೂ ಹರಿತವಾದ ಆಯುಧಗಳನ್ನು ಹಿಡಿದು ಬೆದರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ನಾಲ್ವರು ಕುಟುಂಬಗಳು ವಾಸಿಸುತ್ತಿದ್ದ ಮನೆಗೆ ನುಗ್ಗಿದ್ದಾರೆ. ಬಳಿಕ ಮೂವರು ಮಹಿಳಾ ಕಾರ್ಮಿಕರ ಮೇಲೆ ಅತ್ಯಾಚಾರ ಎಸಗುವ ಮುನ್ನ ಅವರ ಕುಟುಂಬದ ಸದಸ್ಯರನ್ನು ಹಗ್ಗಗಳಿಂದ ಕಟ್ಟಿಹಾಕಿದ್ದಾರೆ. ಕೃತದ ಬಳಿಕ ಆರೋಪಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲವ್‌ ಜಿಹಾದ್‌ಗಾಗಿ ದೈಹಿಕ ಸಂಪರ್ಕ: ಕಾಶ್ಮೀರಿ ಯುವಕನ ವಿರುದ್ಧ ಟೆಕ್ಕಿ ದೂರು

    ಇದಕ್ಕೂ ಮೊದಲು ಸಾಮೂಹಿಕ ಅತ್ಯಾಚಾರ ಘಟನಾ ಸ್ಥಳದಿಂದ ಸುಮಾರು ಒಂದು ಕಿಮೀ ದೂರದಲ್ಲಿ ಬುಧವಾರ ತಡರಾತ್ರಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಅಸ್ವಸ್ಥ ಮಹಿಳೆಯ ಮೇಲೆ ದಾಳಿ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ ಪತಿಯನ್ನು ದರೋಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿಕೋರರು ದಂಪತಿಯ ಮನೆಗೆ ಬಲವಂತವಾಗಿ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದರಿಂದ ಎರಡನೇ ಘಟನೆಯಲ್ಲಿ ಅದೇ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ವ್ಯಕ್ತಿಯಿಂದ ನಗದು ಮತ್ತು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ.

    ಎರಡೂ ಘಟನೆಗಳು ಒಂದೇ ಗ್ರಾಮದಲ್ಲಿ ನಡೆದಿವೆ ಎಂದು ಪಾಣಿಪತ್‍ನ ಮಟ್ಲೌಡಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ವಿಜಯ್ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ

    ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ

    ಚೆನ್ನೈ: ವ್ಯಾನ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಏಳು ಜನ ಮಹಿಳೆಯರು (Women) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ನಟ್ರಂಪಳ್ಳಿ ಬಳಿಯ ಚೆನ್ನೈ-ಬೆಂಗಳೂರು (Chennai-Bengaluru Highway) ಹೆದ್ದಾರಿಯಲ್ಲಿ ನಡೆದಿದೆ.

    ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವ್ಯಾನ್ ಮತ್ತು ಲಾರಿ ಚಾಲಕರು ಸೇರಿದಂತೆ 10 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರು ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರನ್ನು ಮೀನಾ (50), ಡಿ.ದೇವಯಾನಿ (32), ಸೈಟ್ಟು (55), ದೇವಿಕಾ (50), ಸಾವಿತ್ರಿ (42), ಕಲಾವತಿ (50) ಮತ್ತು ಆರ್ ಗೀತಾ (34) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವೆಲ್ಲೂರಿನ ಪೆರ್ನಂಬುಟ್‌ಗೆ ಸೇರಿದವರಾಗಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಮನೆಗೆ ಮರಳುತ್ತಿದ್ದಾಗ ಹೆದ್ದಾರಿಯಲ್ಲಿ ವ್ಯಾನ್‌ನ ಮುಂಭಾಗದ ಚಕ್ರ ಪಂಕ್ಚರ್ ಆಗಿದೆ. ಈ ವೇಳೆ ಮಹಿಳೆಯರು ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದರು. ಇದೇ ಮಾರ್ಗವಾಗಿ ಬಂದ ಲಾರಿಯೊಂದು ವ್ಯಾನ್‌ಗೆ ಡಿಕ್ಕಿಯಾಗಿದೆ ಪರಿಣಾಮ ವ್ಯಾನ್ ಮಹಿಳೆಯರ ಮೇಲೆ ಉರುಳಿದ್ದು ಈ ದುರ್ಘಟನೆ ಸಂಭವಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಲಿಬಾನ್‌ ಆಡಳಿತಕ್ಕೆ 2 ವರ್ಷ – ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳೇನು?

    ತಾಲಿಬಾನ್‌ ಆಡಳಿತಕ್ಕೆ 2 ವರ್ಷ – ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳೇನು?

    ಭಾರತದ ಸ್ವಾತಂತ್ರ್ಯ ದಿನವೇ ಅಫ್ಘಾನಿಸ್ತಾನದ ತಾಲಿಬಾನ್ (Taliban) ಅಧಿಕಾರಕ್ಕೆ ಮರಳಿ ಎರಡು ವರ್ಷಗಳನ್ನು ಪೂರೈಸಿತು. 20 ವರ್ಷಗಳ ಅನಿರ್ದಿಷ್ಟ ಯುದ್ಧದ ನಂತರ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಿಂದ (Afghanistan) ವಾಪಸ್ ಆದ ಬಳಿಕ ತಾಲಿಬಾನ್ ಅಧಿಕಾರಕ್ಕೆ ಮರಳಿತು. ಇಸ್ಲಾಮಿಕ್ ವ್ಯವಸ್ಥೆಯಡಿ ದೇಶದಲ್ಲಿ ಭದ್ರತೆಯನ್ನು ಪುನಃಸ್ಥಾಪಿಸಲು ಹೊರಟಿದ್ದೇವೆ ಎಂದು ಈ ವೇಳೆ ತಾಲಿಬಾನ್ ಸಂಘಟನೆ ಹೇಳಿತ್ತು.

    ಉಗ್ರಗಾಮಿ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಮಹಿಳೆಯರ (Women) ಪರಿಸ್ಥಿತಿ ಹೀನಾಯ ಪರಿಸ್ಥಿತಿಗೆ ತಲುಪಿದೆ. ಮಹಿಳೆಯರಿಗೆ ಚೌಕಟ್ಟಿನೊಳಗೆ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ಅವಕಾಶ ನೀಡಲಿದ್ದೇವೆ. ಮಹಿಳೆಯರು ನಮ್ಮ ಸಮಾಜದಲ್ಲಿ ತುಂಬಾ ಸಕ್ರಿಯರಾಗಲಿದ್ದಾರೆ ಎಂದು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಸ್ವಲ್ಪ ಸಮಯದ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿಕೊಂಡಿತ್ತು. ಆದರೆ ತಾಲಿಬಾನ್ ತನ್ನ ಭರವಸೆಯನ್ನು ಉಳಿಸಿಕೊಂಡಿಲ್ಲ. 

    ಸೆಪ್ಟೆಂಬರ್ 2021 ರಲ್ಲಿ ಬಾಲಕಿಯರಿಗೆ ಶಾಲೆಗೆ ಹೋಗದಂತೆ ನಿರ್ಬಂಧಿಸಲಾಯಿತು. ಬಳಿಕ ಕಾಬೂಲ್ ನಗರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮನೆಯಲ್ಲೇ ಇರುವಂತೆ ಹೇಳಲಾಯಿತು. ಪುರುಷರಿಂದ ಮಾಡಲಾಗದ ಕೆಲಸಗಳನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ಮುಂದುವರೆಯಲು ಅವಕಾಶ ನೀಡಲಾಯಿತು.

    ಡಿಸೆಂಬರ್ 2021 ರಲ್ಲಿ ಮಹಿಳೆಯರು 72 ಕಿ.ಮೀ (45 ಮೈಲುಗಳು) ಗಿಂತ ಹೆಚ್ಚು ದೂರ ಪ್ರಯಾಣಿಸುತ್ತಿದ್ದರೆ ಪುರುಷ ಸಂಬಂಧಿ ಇರಬೇಕೆಂದು ಆದೇಶವನ್ನು ಹೊರಡಿಸಿತು. ಈ ವಿಚಾರವಾಗಿ ಮಹಿಳೆಯರು ಹೋರಾಟ ನಡೆಸಿದ್ದರು. ಅವರನ್ನು ತಾಲಿಬಾನ್ ಹಿಂಸಾತ್ಮಕವಾಗಿ ಶಿಕ್ಷಿಸಿತ್ತು. 

    ಜನವರಿ 2022 ರಲ್ಲಿ ಕನಿಷ್ಠ ನಾಲ್ಕು ಮಹಿಳಾ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಯಿತು. ವಾರಗಟ್ಟಲೆ ಹಿಡಿದು ಅವರನ್ನು ಕಸ್ಟಡಿಯಲ್ಲಿ ಥಳಿಸಿದರು. 21 ಮಾರ್ಚ್ 2023 ರಂದು ತಾಲಿಬಾನ್ ಶಿಕ್ಷಣ ಇಲಾಖೆಯು ಎಲ್ಲಾ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ಅವಧಿಯ ಪ್ರಾರಂಭದಲ್ಲಿ ಶಾಲೆಗೆ ಮರಳಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ.

    ಮೇ 7, 2022 ರಂದು ಮಹಿಳೆಯರಿಗೆ ತಲೆಯಿಂದ ಕಾಲಿನವರೆಗೆ ಉಡುಪುಗಳನ್ನು ಕಡ್ಡಾಯಗೊಳಿಸುವ ಆದೇಶವನ್ನು ಸರ್ಕಾರ ಪ್ರಕಟಿಸಿತು. ಈ ಕ್ರಮವನ್ನು ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್‌ಜಾದಾ ಅನುಮೋದಿಸಿದ್ದಾನೆ. ಈ ಆದೇಶದ ಅಡಿಯಲ್ಲಿ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ತಮ್ಮ ಮುಖಗಳನ್ನು ಸಹ ಮುಚ್ಚಿಕೊಳ್ಳಬೇಕು. ಇಲ್ಲದಿದ್ದರೆ ಅವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಬಳಿಕ ಮಹಿಳೆಯರು ಸಡಿಲವಾದ ಕಪ್ಪು ಅಬಯಾಸ್ (ಗೌನ್) ಮತ್ತು ಹಿಜಾಬ್ ಧರಿಸಲು ಪ್ರಾರಂಭಿಸಿದರು. 

    ಅಕ್ಟೋಬರ್ 2022ರ ಸುಮಾರಿಗೆ ಶಾಲೆಯ ಕೊನೆಯ ವರ್ಷವನ್ನು ಪೂರ್ಣಗೊಳಿಸದ ಹೆಣ್ಣು ಮಕ್ಕಳು ಸೇರಿದಂತೆ, ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳನ್ನು ಬರೆಯಬಹುದು ಎಂದು ಘೋಷಿಸಲಾಯಿತು. ನವೆಂಬರ್‌ನಲ್ಲಿ ಮಹಿಳೆಯರು ಷರಿಯಾವನ್ನು (ಇಸ್ಲಾಮಿಕ್ ಕಾನೂನು) ಅನುಸರಿಸದ ಕಾರಣ ಕಾಬೂಲ್ ಉದ್ಯಾನವನಗಳಿಂದ ನಿಷೇಧಿಸಲಾಯಿತು. ಈಜು ಕೊಳಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ. 

    ಡಿಸೆಂಬರ್ 20, 2022 ರಂದು ತಾಲಿಬಾನ್ ಉನ್ನತ ಶಿಕ್ಷಣ ಸಚಿವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು. ತಾಲಿಬಾನ್‌ನ ಆರ್ಥಿಕ ಸಚಿವಾಲಯವು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗಳು ತಮ್ಮ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಬರುವುದನ್ನು ನಿಲ್ಲಿಸುವಂತೆ ಆದೇಶಿಸಲಾಯಿತು.

    ಜುಲೈ 2023 ರಲ್ಲಿ, ತಾಲಿಬಾನ್ ಸರ್ಕಾರವು ಬ್ಯೂಟಿ ಪಾರ್ಲರ್‌ಗಳು ಮತ್ತು ಸಲೂನ್‌ಗಳನ್ನು ಮುಚ್ಚುವುದಾಗಿ ಘೋಷಿಸಿತು, ಹಲವಾರು ಮಹಿಳೆಯರ ಆದಾಯದ ಮೂಲವನ್ನು ಕಸಿದುಕೊಂಡಿತು. 

    ಸುಮಾರು 4 ಕೋಟಿ ಜನರಿರುವ ದೇಶದಲ್ಲಿ, ಈ ವರ್ಷ ಸುಮಾರು 1.50 ಕೋಟಿ ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. 

    ವಿಶ್ವ ಆರೋಗ್ಯ ಸಂಸ್ಥೆಯು ಆಫ್ಘನ್ನರ ಮೂಲಭೂತ ಆರೋಗ್ಯ ಸೇವೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜನಸಂಖ್ಯೆಯ ಸುಮಾರು 20% ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು 4 ಮಿಲಿಯನ್ ಜನರು ಮಾದಕ ವ್ಯಸನದಿಂದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಆರೋಗ್ಯ ಸೌಲಭ್ಯಗಳು ಕಳಪೆ ಮೂಲಸೌಕರ್ಯವನ್ನು ಹೊಂದಿವೆ. ವಲಸೆ, ಮಹಿಳೆಯರ ಓಡಾಟಕ್ಕೆ ನಿರ್ಬಂಧ ಮತ್ತು ಉದ್ಯೋಗದ ಮೇಲಿನ ಮಿತಿಗಳಿಂದ ಕಡಿಮೆ ಅರ್ಹ ಆರೋಗ್ಯ ಕಾರ್ಯಕರ್ತರಿದ್ದಾರೆ. ಇದು ಅಲ್ಲಿನ ಅರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]