Tag: women

  • ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!

    ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!

    – ಹೈಪ್ರೊಫೈಲ್‌ ಹಿಟ್‌ ಆ್ಯಂಡ್​ ರನ್ ಕೇಸ್‌

    ಚೆನ್ನೈ: ರಾಜ್ಯಸಭಾ ಸಂಸದರ ಮಗಳು ಪಾದಚಾರಿ ರಸ್ತೆಯಲ್ಲಿ (Pavement) ಮಲಗಿದ್ದ ವ್ಯಕ್ತಿಯ ಮೇಲೆ ತನ್ನ ಬಿಎಂಡಬ್ಲ್ಯೂ ಕಾರು ಹರಿಸಿ, ಆತ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹಿಟ್‌ ಆ್ಯಂಡ್​ ರನ್ ಪ್ರಕರಣದಲ್ಲಿ ರಾಜ್ಯಸಭಾ ಸಂಸದರ (Rajya Sabha MP) ಪುತ್ರಿಗೆ ಜಾಮೀನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪುಣೆಯ ಪೋಶೆ ಕಾರು ಅಪಘಾತದ ಒಂದು ತಿಂಗಳ ನಂತರ ನಡೆದ ಹೈಪ್ರೊಫೈಲ್‌ ಕೇಸ್‌ ಇದಾಗಿದೆ. ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಂಸದ (YSRCP MP) ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹತ್ತಿಸಿದ್ದಾರೆ, ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

    ಕುಡಿದ ಮತ್ತಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಚೆನ್ನೈನ ಬೆಸೆಂಟ್ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್ ಸೂರ್ಯ ಎಂಬಾತನ ಮೇಲೆ ಕಾರು ಹರಿಸಿದ್ದಾರೆ. ಘಟನೆ ನಂತ್ರ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸೂರ್ಯ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಘಟನೆ ನಂತರ ಸ್ಥಳೀಯರು ಜೆ-5 ಶಾಸ್ತ್ರಿನಗರ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅಪಘಾತ ಮಾಡಿದ ಬಿಎಂಡಬ್ಲ್ಯೂ ಕಾರು ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರಿಗೆ ಸೇರಿದ್ದು, ಈ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ಗೊತ್ತಾಗಿದೆ. ನಂತರ ಅಪಘಾತ ಎಸಗಿದ ಮಹಿಳೆ ಮಾಧುರಿಯನ್ನು ಪೊಲೀಸರು ಬಂಧಿಸಿದ್ದರು, ಆದರೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು.

    ಈ ಪ್ರಕರಣ ಏನು?
    ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್​ ಪಾತ್​ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಶಿ ನೀಡಲು ಮುಂದಾಗಿದ್ದರು. ಬಳಿಕ ಆತನೂ ಅಲ್ಲಿಂದ ಹೊರಟು ಹೋದ. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

  • ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್‌ ರೆಕಾರ್ಡ್‌ಗೆ ವೇಯ್ಟಿಂಗ್‌

    ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್‌ ರೆಕಾರ್ಡ್‌ಗೆ ವೇಯ್ಟಿಂಗ್‌

    ಬ್ಯಾಂಕಾಕ್‌: ಸೊಂಟದ ಗಾಯದಿಂದ (Hip Injury) ದೇಹ ದಣಿವಾಗಿತ್ತು, ಬಿಸಲಿನ ತಾಪಕ್ಕೆ ಕಾಲಿನ ಬೂಟು ಕರಗಿಹೋಗಿತ್ತು. ಆದರೂ ಉತ್ಸಾಹ ಕುಗ್ಗಲಿಲ್ಲ, ವಯಸ್ಸು ದೇಹಕ್ಕೆ ಆಗಿದೆಯೇ ಹೊರತು ಮನಸ್ಸಿಗಲ್ಲ, ಉತ್ಸಾಹ ಬಿಡದ ಛಲಕ್ಕೆ ವಯಸ್ಸು ಅಡ್ಡ ಬರುವುದಿಲ್ಲ ಎಂಬುದನ್ನ ಥಾಯ್‌ಲ್ಯಾಂಡ್‌ನ ಮಹಿಳೆಯೊಬ್ಬರು (Thailand Women) ತೋರಿಸಿಕೊಟ್ಟಿದ್ದಾರೆ.

    ಹೌದು. 52 ವರ್ಷ ವಯಸ್ಸಿನ ಮಹಿಳೆ ನಟಾಲಿ ಡೌ ಅಲ್ಟ್ರಾಮ್ಯಾರಥಾನ್‌ನಲ್ಲಿ (Ultramarathon) 12 ದಿನಗಳಲ್ಲಿ ಬರೋಬ್ಬರಿ 1,000 ಕಿಮೀ ಓಟ ಪೂರೈಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಥಾಯ್‌ಲ್ಯಾಂಡ್‌ನಿಂದ ಆರಂಭಗೊಂಡ ಮ್ಯಾರಥಾನ್‌ ಮಲೇಷ್ಯಾ ಮತ್ತು ಸಿಂಗಾಪುರ ಸೇರಿ ಒಟ್ಟು 12 ದಿನಗಳಲ್ಲಿ 1,000 ಸಾವಿರ ಕಿಮೀ ಓಡಿ ಸಾಧನೆ ಮಾಡಿದ್ದಾರೆ.

    ಸೊಂಟದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನಟಾಲಿ ಡೌ ಬಿಸಿಲಿನ ತಾಪಕ್ಕೂ ಜಗ್ಗದೇ ಅಲ್ಟ್ರಾ ಮ್ಯಾರಥಾನ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇದೀಗ ಗಿನ್ನಿಸ್‌ ರೆಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಸೋಲಿನಿಂದಾಗಿ ಜನರ ಮೇಲೆ ಸರ್ಕಾರ ಸೇಡು; ಇಂಧನ ದರ ಇಳಿಸುವವರೆಗೂ ಬಿಜೆಪಿ ಹೋರಾಟ- ಆರ್.ಅಶೋಕ್

    ಡೌ ಅವರ ಮ್ಯಾರಥಾನ್‌ ಓಟವು ಸುಲಭವಾಗಿರಲಿಲ್ಲ. ಓಟದ ಪ್ರದೇಶದಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪ ಇತ್ತು. ತಾಪಮಾನ ಹೆಚ್ಚಳಕ್ಕೆ ಆಕೆಯ ಬೂಟುಗಳು ಕರಗಿದ್ದವು. ಅಲ್ಲದೇ ಮ್ಯಾರಥಾನ್‌ ಆರಂಭಿಸಿದ ಮೊದಲ ದಿನವೇ ಸೊಂಟದ ಗಾಯದ ಸಮಸ್ಯೆಗೆ ತುತ್ತಾಗಿದ್ದಳು, ಇದ್ಯಾವುದನ್ನೂ ಲೆಕ್ಕಿಸದೇ ಚಿರ ಯುವತಿಯಂತೆ ಓಟ ಮುಂದುವರಿಸಿದ ಡೌ ಪ್ರತಿದಿನ 84 ಕಿಮೀ ಓಟದ ಮೂಲಕ 12 ದಿನಗಳಲ್ಲಿ 1,000 ಕಿಮೀ ಪೂರೈಸಿದ್ದಾರೆ. ಮಹಿಳೆಯ ಈ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

  • ಮೈಸೂರು: ಹುಲಿ ದಾಳಿಗೆ ಮಹಿಳೆ ಬಲಿ

    ಮೈಸೂರು: ಹುಲಿ ದಾಳಿಗೆ ಮಹಿಳೆ ಬಲಿ

    ಮೈಸೂರು: ಮೇಕೆ ಮೇಯಿಸುತ್ತಿದ್ದಾಗ ಹುಲಿ (Tiger Attack) ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಮೈಸೂರಿನ (Mysuru) ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

    ಹುಲಿ ದಾಳಿಗೆ ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ ಹೆಸರಿನ ರೈತ ಮಹಿಳೆ ಮೃತಪಟ್ಟಿದ್ದಾರೆ. ಮೂರ್ಬಾಂದ್ ಬೆಟ್ಟದ ಸಮೀಪ ಘಟನೆ ನಡೆದಿದೆ. ಇದನ್ನೂ ಓದಿ: ಹಾಸನದಲ್ಲಿ ಕಾರು ಅಪಘಾತ – ಮೃತರ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊತ್ತ ಶಾಸಕ ಪ್ರದೀಪ್ ಈಶ್ವರ್

    ಮೇಕೆ ಮೇಯಿಸುತ್ತಿದ್ದಾಗ ಹಠಾತ್ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ. ಮಹಿಳೆಯನ್ನು ಕೊಂದು ದೇಹವನ್ನು 200 ಮೀ ದೂರ ಕಾಡಿನೊಳಗೆ ಹುಲಿ ಎಳೆದೊಯ್ದಿದೆ ಎನ್ನಲಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮಹಿಳೆಯ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಮಹಿಳೆ ಕಾಲು ಮಾತ್ರ ಸಿಕ್ಕಿರುವ ಬಗ್ಗೆ ಮಾಹಿತಿ ಇದೆ. ಆದರೆ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಉಡುಪಿ ಹೈವೇಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ – ಗರುಡ ಗ್ಯಾಂಗ್‍ನ 6 ಪುಡಿ ರೌಡಿಗಳು ಅರೆಸ್ಟ್

  • ಬಡ ಮಹಿಳೆಯರಿಂದ ತೆಂಗಿನ ಗರಿಯಲ್ಲೇ ನಿರ್ಮಾಣವಾಯ್ತು ಬಸ್ ನಿಲ್ದಾಣ!

    ಬಡ ಮಹಿಳೆಯರಿಂದ ತೆಂಗಿನ ಗರಿಯಲ್ಲೇ ನಿರ್ಮಾಣವಾಯ್ತು ಬಸ್ ನಿಲ್ದಾಣ!

    ಕಾರವಾರ: ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ (Bustand in Karwar) ನಿರ್ಮಿಸಿ ಸೆಡ್ಡು ಹೊಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 10 ವರ್ಷದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಐ.ಆರ್.ಬಿ ಕಂಪನಿ ಮೂಲಕ ನೆಡೆಸುತ್ತಿದೆ. ಈವರೆಗೂ ಕಾಮಗಾರಿ ಪೂರ್ಣಗೊಳ್ಳದೇ ಜಮೀನು ಕಳೆದುಕೊಂಡವರು ಕೋರ್ಟ್ ಸುತ್ತುತಿದ್ದಾರೆ. ಇತ್ತ ಕಾಮಗಾರಿಗಾಗಿ ಚತುಷ್ಪತ ಹೆದ್ದಾರಿ ಹಾದು ಹೋಗುವ ಭಾಗದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ಬಸ್ ನಿಲ್ದಾಣ ಕೆಡವಿಹಾಕಿರುವ ಐ.ಆರ್.ಬಿ ಕಂಪನಿ, ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಿಕೊಡಲು ಮೀನಾಮೇಷ ತೋರುತ್ತಿದೆ. ಇದರಿಂದಾಗಿ ಕರಾವಳಿ ಭಾಗದ ಹಲವು ಗ್ರಾಮದ ಜನ ಬಸ್ ನಿಲ್ದಾಣವಿಲ್ಲದೇ ಹಿಡಿ ಶಾಪ ಹಾಕುವಂತಾಗಿದೆ.

    10 ವರ್ಷದಿಂದ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಂಕೋಲ ತಾಲೂಕಿನ ಹಾರವಾಡದ ಜನತೆ ಕೆಡವಿದ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವಂತೆ ಮನವಿಯ ಮೇಲೆ ಮನವಿ ನೀಡಿದರೂ ಬಸ್ ನಿಲ್ದಾಣ ಮಾತ್ರ ನಿರ್ಮಾಣ ಆಗಲಿಲ್ಲ. ಇನ್ನು ಹೆದ್ದಾರಿಯಲ್ಲಿ ಪ್ರತಿ ದಿನ ಶಾಲಾ- ಕಾಲೇಜು ಹಾಗೂ ಉದ್ಯೋಗಕ್ಕಾಗಿ ಅಂಕೋಲ, ಕಾರವಾರಕ್ಕೆ ಹೋಗುವ ಪ್ರಯಾಣಿಕರಿಗೆ ಹಾರವಾಡ ಕ್ರಾಸ್ ನಲ್ಲಿ ನಿಲ್ದಾಣ ಇರದ ಕಾರಣ ಬರುವ ಬಸ್ ನನ್ನು ಸಹ ನಿಲ್ಲಿಸುವುದಿಲ್ಲ. ಇದನ್ನೂ ಓದಿ: KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವರ್ಗಾವಣೆ – CET ಪ್ರಶ್ನೆ ಪತ್ರಿಕೆ ಗೊಂದಲ ಕಾರಣ ಎತ್ತಂಗಡಿ?

    ಪ್ರತಿ ದಿನ ಬಿಸಿಲ ಹೊಡತಕ್ಕೆ ನೆತ್ತಿ ಸುಟ್ಟು, ಗಂಟೆಗಟ್ಟಲೇ ಕಾಯುವ ಮಹಿಳೆಯರು ಆಡಳಿತದ ನಿರ್ಲಕ್ಷಕ್ಕೆ ಬೇಸತ್ತು ತಮ್ಮ ಊರಿನಲ್ಲಿ ಸಿಗುವ ತೆಂಗಿನಗರಿಯನ್ನು ಒಟ್ಟುಮಾಡಿ ನಿಲ್ದಾಣ ನಿರ್ಮಿಸಿದ್ದಾರೆ. ಈ ನಿಲ್ದಾಣಕ್ಕೆ ತಾವೇ ಕೈಯಿಂದ ಬರೆದ ಹಾರವಾಡ ಬಸ್ ನಿಲ್ದಾಣ ಬೋರ್ಡ್ ಸಹ ಹಾಕುವ ಮೂಲಕ ಆಡಳಿತ ಮಾಡಬೇಕಿದ್ದ ಕೆಲಸವನ್ನು ಈ ಊರಿನ ಬಡ ಮಹಿಳೆಯರು ಮಾಡಿ ತೋರಿಸಿದ್ದಾರೆ. ಈ ಮೂಲಕ ಆಡಳಿತವರ್ಗಕ್ಕೆ ಛಾಟಿ ಬೀಸಿದ್ದಾರೆ.

    ಸದ್ಯ ಈ ಊರಿನವರಿಗೆ ಬಿಸಿಲ ಹೊಡೆತಕ್ಕೆ ತೆಂಗಿನಗರಿಯ ನೆರಳೇನೋ ಸಿಕ್ಕಿದೆ. ಆದರೆ ಬರುವ ಮಳೆಯಲ್ಲಿ ಈ ತಾತ್ಕಾಲಿಕ ನಿಲ್ದಾಣ ಬಿದ್ದು ಹೋಗಲಿದ್ದು ಇನ್ನಾದರೂ ಆಡಳಿತ ವರ್ಗ ಈ ಬಗ್ಗೆ ಗಮನ ನೀಡಿ, ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಹಳ್ಳಿ ಜನ ಒತ್ತಾಯಿಸಿದ್ದಾರೆ.

    ಸದ್ಯ ಈ ಊರಿನಲ್ಲಿ 100 ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಜನರು ನೌಕಾನೆಲೆಗೆ ಜಾಗ ನೀಡಿ ನಿರಾಶ್ರಿತರಾಗಿದ್ದಾರೆ. ಹೀಗಿದ್ದರೂ ಆಡಳಿತ ವರ್ಗ ಮಾತ್ರ ಇವರ ಮನವಿಗೆ ಸ್ಪಂದಿಸದೇ ಇರುವುದು ದುರಂತ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ,ಐ.ಆರ್.ಬಿ ಕಂಪನಿ ಜೊತೆ ಜಿಲ್ಲಾಡಳಿತ ಇತ್ತ ಗಮನಿಸಿ ಹೊಸ ನಿಲ್ದಾಣ ನಿರ್ಮಿಸಿಕೊಡಬೇಕಿದೆ.

  • ಹೋಟೆಲ್‌ ರೂಮಿನಲ್ಲಿ ಪರಪುರುಷರೊಂದಿಗೆ ಸರಸ – ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಡಾಕ್ಟರ್‌ ಪತ್ನಿ; ಮುಂದೇನಾಯ್ತು?

    ಹೋಟೆಲ್‌ ರೂಮಿನಲ್ಲಿ ಪರಪುರುಷರೊಂದಿಗೆ ಸರಸ – ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಡಾಕ್ಟರ್‌ ಪತ್ನಿ; ಮುಂದೇನಾಯ್ತು?

    ಲಕ್ನೋ: ಹೋಟೆಲ್‌ನ ರೂಮಿನಲ್ಲಿ (Hotel Room) ತನ್ನ ಇಬ್ಬರು ಪ್ರೇಮಿಗಳೊಂದಿಗೆ ಸರಸವಾಡುತ್ತಿದ್ದ ಪತ್ನಿ, ಪತಿ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ.

    ತನ್ನ ಹೆಂಡತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದ ವೈದ್ಯ, ಗುರುವಾರ ರಾತ್ರಿ ಹೋಟೆಲ್ ಕೊಠಡಿಗೆ ನುಗ್ಗಿದ್ದರು. ಇಬ್ಬರು ಪುರುಷರ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯನ್ನು ಹಿಡಿದಿದ್ದರು. ಇದರಿಂದ ಕುಪಿತರಾದ ವೈದ್ಯನ ಕುಟುಂಬದವರು ಹಾಗೂ ಇಬ್ಬರು ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಮಹಿಳೆ ಹಾಗೂ ಆಕೆಯ ಇಬ್ಬರು ಗೆಳೆಯರ ಮೇಲೆ ವೈದ್ಯನ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಿಒಕೆ ನಿವಾಸಿಗಳ ಮೇಲೆ ಪಾಕ್ ದಬ್ಬಾಳಿಕೆ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (UP Police) ವೈದ್ಯ ಹಾಗೂ ಆತನ ಪತ್ನಿ, ಜೊತೆಗಿದ್ದ ಇಬ್ಬರು ಪುರುಷರನ್ನೂ ಬಂಧಿಸಿದ್ದಾರೆ. ಈ ವೇಳೆ ತನ್ನ ಹೆಂಡತಿ ಇಬ್ಬರು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?

    ಏನಿದು ಘಟನೆ?
    ಪೊಲೀಸರ ಪ್ರಕಾರ, ದಂಪತಿ ಕೌಟುಂಬಿಕ ಕಲಹದಿಂದಾಗಿ ಕಳೆದ ಒಂದು ವರ್ಷದಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವೇಳೆ ಮಹಿಳೆ ಹೋಟೆಲ್‌ನಲ್ಲಿ ಇಬ್ಬರು ಪುರುಷರೊಂದಿಗೆ ಅನೈತಿಕ ಚಟುವಟಿಕೆಗೆ ಮುಂದಾಗಿದ್ದಾಳೆ. ಇದೇ ಸಮಯದಲ್ಲಿ ಪತಿಯ ಕಣ್ಣಿಗೆ ಬಿದ್ದಿದ್ದಾಳೆ. ಬಳಿಕ ಇಬ್ಬರು ಪುರುಷರೊಂದಿಗೂ ವಾಗ್ವಾದ ಏರ್ಪಟ್ಟಿದ್ದು, ಪತಿ ಹಲ್ಲೆ ನಡೆಸಿದ್ದಾನೆ.

    ಮಹಿಳೆ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಹೇಳಲಾಗಿದೆ. ಈಕೆಯೊಂದಿಗೆ ಇದ್ದ ಇಬ್ಬರು ಪುರುಷರಲ್ಲಿ ಒಬ್ಬ ಗಾಜಿಯಾಬಾದ್‌ ಮತ್ತೋರ್ವ ಬುಲಂದ್‌ಶಹರ್‌ ನಿವಾಸಿಯಾಗಿದ್ದ. ಸದ್ಯ ಮಹಿಳೆ ಸೇರಿ ಮೂವರನ್ನು ಬಂಧಿಸಿರುವ ಪೊಲೀಸರು ವೈದ್ಯ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೋಟ್‌ ಬ್ಯಾಂಕ್‌ ಛಿದ್ರವಾಗುತ್ತೆ ಅಂತ ಮುಂಬೈ ದಾಳಿಕೋರರ ಮೇಲೆ ಕಾಂಗ್ರೆಸ್‌ ಕ್ರಮ ತೆಗೆದುಕೊಳ್ಳಲಿಲ್ಲ: ಮೋದಿ

  • ಕುಟುಂಬದ ಇತರ ಪುರುಷರೊಂದಿಗೆ ಸೆಕ್ಸ್‌ ಮಾಡುವಂತೆ ಪತ್ನಿಗೆ ಕಿರುಕುಳ; ಕೇಸ್‌ ದಾಖಲಾಗ್ತಿದ್ದಂತೆ ಪತಿ ಜೂಟ್‌!

    ಕುಟುಂಬದ ಇತರ ಪುರುಷರೊಂದಿಗೆ ಸೆಕ್ಸ್‌ ಮಾಡುವಂತೆ ಪತ್ನಿಗೆ ಕಿರುಕುಳ; ಕೇಸ್‌ ದಾಖಲಾಗ್ತಿದ್ದಂತೆ ಪತಿ ಜೂಟ್‌!

    – ಟೀಗೆ ಮತ್ತಿನ ಔಷಧಿ ಬೆರಸಿ ಪತ್ನಿಯ ಪ್ರಜ್ಞೆ ತಪ್ಪಿಸುತ್ತಿದ್ದ ಪತಿರಾಯ
    – 4 ಮಕ್ಕಳ ತಾಯಿಗೆ ನಿರಂತರ ಲೈಂಗಿಕ ಕಿರಕುಳ

    ಜೈಪುರ: ತನ್ನ ಪತಿ ಕುಟುಂಬದಲ್ಲಿರುವ ಇತರ ಪುರುಷರೊಂದಿಗೂ (Family Members) ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಮೇಲೆ ಮಹಿಳೆಯೊಬ್ಬರು ಪತಿ, ಮಾವ ಮತ್ತು ಸೋದರ ಮಾವನ ವಿರುದ್ಧ ದೂರು ದಾಖಲಿರುವ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.

    ಮಹಿಳೆ ನೀಡಿದ ದೂರಿನ ಮೇರೆಗೆ ಸಂತ್ರಸ್ತ ಮಹಿಳೆಯ ಮಾವ, ಸೋದರ ಮಾವ ಸೇರಿದಂತೆ 8 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ಸಂದ್ವಾ ಪೊಲೀಸ್ ಠಾಣಾ (Sandwa Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಮಹಿಳೆಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಇದ್ದಾಳೆ ಎಂದು ತಿಳಿದುಬಂದಿದೆ.

    ಏನಿದು ಕೇಸ್‌?
    ಸಂದ್ವಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರಿದ ಮಹಿಳೆಯೊಬ್ಬರು ಕಳೆದ 15-20 ವರ್ಷಗಳಿಂದ ಪತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ, ತನಗೆ ನಿರಂತರವಾಗಿ ಅಮಲಿನ ಪದಾರ್ಥ ನೀಡಿ ಕುಟುಂಬದ ಇತರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆಯೂ ಪತಿ ಒತ್ತಾಯಿಸುತ್ತಿದ್ದಾನೆ. ಆಕೆ ನಿರಾಕರಿಸಿದಾಗಲೆಲ್ಲ ತನಗೆ ಮನಸೋ ಇಚ್ಛೆ ಥಳಿಸುತ್ತಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

    STOP RAPE

    ಪಾಪಿ ಪತಿ ಮಾಡಿದ್ದಾರೂ ಏನು?
    ಪ್ರತಿದಿನ ತನ್ನ ಪತ್ನಿ ಕುಡಿಯುತ್ತಿದ್ದ ಟೀಗೆ (Tea) ಅಮಲಿನ ಪದಾರ್ಥವನ್ನು ಬೆರಸಿ ಕುಡಿಯುವಂತೆ ಮಾಡುತ್ತಿದ್ದನು. ಟೀ ಕುಡಿದು ಪತ್ನಿ ಪ್ರಜ್ಞೆ ತಪ್ಪಿದ ಬಳಿಕ ಕುಟುಂಬದ ಇತರರಿಂದ ಅತ್ಯಾಚಾರ ಮಾಡಿಸುತ್ತಿದ್ದ. ಒಂದು ದಿನ ಆಕೆಯ ಇದರ ವಿರುದ್ಧ ದನಿ ಎತ್ತಿದ್ದಕ್ಕೆ ಹರಿತವಾದ ಆಯುಧ ಹಿಡಿದು ನಿನ್ನ ಕತ್ತು ಸೀಳುತ್ತೇನೆ ಎಂದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆಕೆ ತಪ್ಪಿಸಿಕೊಂಡು ಹೋಗಿ ಪ್ರಾಣ ಉಳಿಸಿಕೊಂಡಿದ್ದಳು. ಈಗ ಮತ್ತೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

  • ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

    ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

    – ರಾಜ್ಯಾದ್ಯಂತ ಮಹಿಳಾ ಹೋರಾಟಕ್ಕೆ ಡಿಸಿಎಂ ಕರೆ

    ಬೆಳಗಾವಿ: ಮಿಸ್ಟರ್ ಕುಮಾರಸ್ವಾಮಿ ನೀನು ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿ ಕಾಂಗ್ರೆಸ್ (Belagavi Congress) ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ (HD Kumaraswamy) ನೀನು ಚುನಾವಣೆಯಲ್ಲಿ ಗೆಲ್ಲಲ್ಲ, ಹೆದರಿ ಪಕ್ಕದ ಕ್ಷೇತ್ರಕ್ಕೆ ಹೋಗಿದ್ರಿ ಎಂದು ಕೆಂಡಾಮಂಡಲ ಆಗಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

    `ಹೆಣ್ಣು ಕುಟುಂಬದ ಕಣ್ಣು’ ಕುಟುಂಬಕ್ಕೆ ಒಳ್ಳೆಯದಾಗಿಲಿ ಎಂದು ಕಾಂಗ್ರೆಸ್ ಸರ್ಕಾರ 2,000 ಹಣ ಕೊಡ್ತಿದೆ. ಹೆಣ್ಣುಮಕ್ಕಳು ಏನ್ ದಡ್ಡರಾ? ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆ ಇದು, ಬದುಕಿನಲ್ಲಿ ಶಕ್ತಿ ಕೊಡಲು ಕೊಟ್ಟ ಕಾರ್ಯಕ್ರಮ (Congress Guarantee) ಇದು. ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಲೇಬೇಕು. ನಾನು ಈಗಲೇ ಕರೆ ಕೊಡುತ್ತೇನೆ. ಪ್ರತಿಯೊಂದು ಮಹಿಳಾ ಸಂಘಟನೆಗಳು, ರಾಜ್ಯಾದ್ಯಂತ ಮಹಿಳೆಯರು ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಹೋರಾಟ ಮಾಡಬೇಕು, ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಗಡಿ ದಾಟುವ ಮೊದಲೇ ಇರಾನ್‌ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್‌ – ಅರಬ್‌ ರಾಷ್ಟ್ರಗಳಿಂದಲೂ ತಡೆ

    ರಾಜ್ಯಾದ್ಯಂತ ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಪ್ರತಿಭಟನೆ ಮಾಡಿ, ತಕ್ಕ ಪಾಠ ಕಲಿಸುತ್ತಾರೆ. ಅವನ (ಕುಮಾರಸ್ವಾಮಿ) ಕ್ಷಮೆ ಬೇಕಿಲ್ಲ, ವಿಷಾದ ಅನ್ನೋ ಡ್ರಾಮಾ ಬೇಡ, ಕುಮಾರಸ್ವಾಮಿ ಮಾತು ಕೇಳಿ ಜನರು ಗ್ಯಾರಂಟಿ ಬಿಡಲ್ಲ. ಅವನಿಗೆ ಪಿಕ್ ಪಾಕೆಟ್ ಮಾಡಿ ರೂಢಿ ಅಲ್ವಾ? ಅದಕ್ಕೆ ಏಕವಚನದಲ್ಲಿ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಮಂಡ್ಯದಲ್ಲಿ ಹೆಚ್‌ಡಿಕೆ ಸ್ಪರ್ಧೆ ಬಗ್ಗೆ ಮಾತನಾಡಿ, ನೀನು ಮೋಸಗಾರ, ಸುಳ್ಳುಗಾರ, ಎಲ್ಲದರ ಬಗ್ಗೆಯೂ ವಿಧಾನಸಭೆಯಲ್ಲಿ ಚರ್ಚೆ ಮಾಡೋಣ, ನಿಮ್ಮ ಜಮೀನು 48 ಎಕರೆ ಇದೆಯೋ, 1,000 ಎಕರೆ ಇದೆಯೋ ಚರ್ಚೆ ಮಾಡೋಣ ಎಂದು ಸವಾಲ್ ಹಾಕಿದ್ದರೆ.

  • ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

    ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

    – ಕಂಗನಾ ರಣಾವತ್ ಬಗ್ಗೆ ಏನ್ ಮಾತಾಡಿದ್ರಿ? – ಕೈ ನಾಯಕರಿಗೆ ಹೆಚ್‌ಡಿಕೆ ಪ್ರಶ್ನೆ
    – ಹೇಮಮಾಲಿನಿಗೆ ಏನ್‌ ಹೇಳಿದ್ರಿ ಎಲ್ಲವೂ ಗೊತ್ತಿದೆ ಎಂದು ಟಾಂಗ್‌ ಕೊಟ್ಟ ಮಾಜಿ ಸಿಎಂ

    ಬೆಂಗಳೂರು: ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ದುಃಖ ಆಗಿದ್ದರೆ ಈಗಲೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ನುಡಿದಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಾನು ತುಮಕೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನ ಪ್ರಸ್ತಾಪ ಮಾಡಿದ್ದೆ. ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳಲು ಆಗದ ರೀತಿ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ತರಾತುರಿಯಲ್ಲಿ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾಗಾಂಧಿ ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟು ಈಗಲೇ ದುಃಖಪಟ್ಟೆ ಅಂತ ಅಧ್ಯಕ್ಷರು, ಮಹಿಳೆಯರ ಪರ ಕಂಬನಿ ಮಿಡಿದಿದ್ದಾರೆ. ಡಿಕೆ ಶಿವಕುಮಾರ್‌ಗೆ ಕೇಳ್ತೀನಿ, ಕೆಲವು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ಇವರಿಗೆ ದುಃಖ ಬಂದಿಲ್ಲ ಪಾಪ. ದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.

    ಕಾಂಗ್ರೆಸ್‌ದು ಪಿಕ್‌ಪಾಕೆಟ್‌ ಗ್ಯಾರಂಟಿ: ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ. ಕಾಂಗ್ರೆಸ್ ಸಚಿವರು, ನಾಯಕರು, ಮಹಿಳಾ ಘಟಕದವರು ಮಂಡ್ಯದಲ್ಲಿ `ಗೋ ಬ್ಯಾಕ್ ಕುಮಾರಸ್ವಾಮಿ’ ಅಂತ ಮಾಡಿದ್ದಾರೆ. ಅಲ್ಲಿಗೆ ಬಂದು ಹೆಣ್ಣುಮಕ್ಕಳನ್ನ ಕೇಳಿದ್ರೆ ಯಾಕೆ ಬಂದಿದ್ದೇವೆ ಗೊತ್ತಿಲ್ಲ ಅಂತ ಹೇಳ್ತಾರೆ. ಮಿಸ್ಟರ್ ಶಿವಕುಮಾರ್ ನಿಮ್ಮ ಉಸ್ತುವಾರಿ ಇದ್ದಾರೆ ಅಲ್ಲವಾ? ಆ ಮನುಷ್ಯ ಏನ್ ಹೇಳಿಕೊಟ್ರು? ಹೇಮಮಾಲಿನಿ ವಿರುದ್ಧ ಸುರ್ಜೇವಾಲಾ ಅವರು ಏನ್‌ ಹೇಳಿದ್ದರು? ಅದನ್ನ ಕನ್ನಡದಲ್ಲಿ ಓದೋಕೆ ಆಗಲ್ಲ. ಅದೆಲ್ಲ ಮಹಿಳೆಯರಿಗೆ ಗೌರವ ಕೊಡುವ ಹೇಳಿಕೆಗಳಾ? ಎಂದು ಪ್ರಶ್ನಿಸಿದ್ದಾರೆ.

    ಸಾವಿರಾರು ಕೋಟಿ ಆಫರ್‌ ಬಂದಿತ್ತು:  ನನ್ನ ಹೇಳಿಕೆ ನನ್ನ ಸಂಸ್ಕೃತಿ ತೋರಿಸುತ್ತೆ ಅಂತ ಹೇಳ್ತಾರೆ, 2 ಸಾವಿರ ಇವರು ಕೊಟ್ಟು ನಿಮ್ಮ ಯಜಮಾನರ ಜೇಬಿಂದ 5 ಸಾವಿರ ಕೀಳುತ್ತಿದ್ದಾರೆ. ಇದರಿಂದ ಎಚ್ಚರವಾಗಿರಿ ಅಂತ ನಾನು ಹೇಳಿದ್ದೇನೆ. ಆರ್ಥಿಕ ಶಕ್ತಿ ಬರಬೇಕು ಅಂತ ಭಾಷಣ ಮಾಡಿದ್ದೇನೆ. 2006-07 ಸಾರಾಯಿ ನಿಷೇಧ ಮಾಡಿದ್ದು ನಾನು, ಆವತ್ತು ನನಗೆ ಸಾವಿರಾರು ಕೋಟಿ ರೂ. ಆಫರ್ ಮಾಡಿದ್ರು. ಆದ್ರೆ ನಾನು ಮಹಿಳೆಯರಿಗಾಗಿ ಆ ಕೆಲಸ ಮಾಡಿದೆ. ಕಾಂಗ್ರೆಸ್ ಅವರಿಗೆ ನನ್ನ ಬಗ್ಗೆ ಮಾತಾಡೋಕೆ ವಿಷಯ ಇಲ್ಲ. ಅದಕ್ಕೆ ನನ್ನ ಮೇಲೆ ಮಾತಾಡ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

    ರೇಟ್‌ ಫಿಕ್ಸ್‌ ಮಾಡಿದ್ದು ಕಾಂಗ್ರೆಸ್‌: ಕಂಗನಾ ರಣಾವತ್ ಬಗ್ಗೆ ಏನ್ ಮಾತಾಡಿದ್ರಿ? ಕಾಂಗ್ರೆಸ್‌ನವರೇ ರೇಟ್ ಫಿಕ್ಸ್ ಮಾಡಿದ್ರು. ಅಷ್ಟೇ ಅಲ್ಲ, ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನ್ ಹೇಳಿದ್ರು ಮರೆತಿದ್ದೀರಾ? ಮದ್ದೂರಿನಲ್ಲಿ ನನ್ನ ಮಾಜಿ ಶಾಸಕರ ಬಗ್ಗೆ ಮಾತಾಡಿದ್ರು, ಶಾಮನೂರು ಶಿವಶಂಕರಪ್ಪ, ಮಹಿಳೆಯರು ಅಡುಗೆ ಮನೆಯಲ್ಲಿ ಇರೋಕೆ ಲಾಯಕ್ಕು ಅಂತಾರೆ. ಅದಕ್ಕೆ ನೀವೆ ಕ್ಷಮೆ ಕೇಳಿದ್ರಿ, ಶಿವಕುಮಾರ್ ಉತ್ತರ ಕೊಡಪ್ಪ, ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನ್ ಹೇಳ್ತಾರೆ? ಅಂತ ಕುಟುಕಿದ್ದಾರೆ.

    ಈ ವಿಷಯ ಇಟ್ಟುಕೊಂಡು ಚುನಾವಣೆಗೆ ಬಂದರೆ ಜನತೆ ಮನಸು ಪರಿವರ್ತನೆ ಮಾಡೋಕೆ ಆಗೊಲ್ಲ. ಎಷ್ಟು ಕುಟುಂಬಗಳನ್ನ ನಿಮ್ಮ ಆಸ್ತಿ ದುರಾಸೆಗೆ ಏನ್ ಮಾಡಿಕೊಂಡು ಬಂದಿದ್ದೀರಾ ಗೊತ್ತಿದೆ ನನಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಗ್ಯಾರಂಟಿಗಳ ಹೆಸ್ರಲ್ಲಿ ಹಳ್ಳಿಯ ಮುಗ್ಧ ಹೆಣ್ಮಕ್ಳನ್ನು ದಾರಿ ತಪ್ಪಿಸ್ತಿದ್ದಾರೆ ಅಂದಿದ್ದೇನೆ: HDK ಸ್ಪಷ್ಟನೆ

    ಗ್ಯಾರಂಟಿಗಳ ಹೆಸ್ರಲ್ಲಿ ಹಳ್ಳಿಯ ಮುಗ್ಧ ಹೆಣ್ಮಕ್ಳನ್ನು ದಾರಿ ತಪ್ಪಿಸ್ತಿದ್ದಾರೆ ಅಂದಿದ್ದೇನೆ: HDK ಸ್ಪಷ್ಟನೆ

    ಬೆಂಗಳೂರು: ಮಹಿಳೆಯರಿಗೆ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗ್ಯಾರಂಟಿಗಳ (Congress  Guarantee) ಬಗ್ಗೆ ಎಚ್ಚರದಿಂದಿರಿ ಅಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಿಳೆಯರ ಬಗ್ಗೆ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಅವರು, ಕಾಂಗ್ರೆಸ್‍ನವರಿಗೆ ಇದು ಬಿಟ್ಟು ಚರ್ಚೆ ಮಾಡಲು ಅವರಲ್ಲಿ ಬೇರೆ ವಿಚಾರ ಇಲ್ಲ. ಗ್ಯಾರಂಟಿಗಳ ಹೆಸರಲ್ಲಿ ಹಳ್ಳಿಯ ಮುಗ್ಧ ಹೆಣ್ಣುಮಕ್ಕಳನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೇನೆ. ನಿಮಗೆ ಕೈ ಎತ್ತಿ ಕೊಡುವ ಶಕ್ತಿ ಕೊಡದೆ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇಟ್ಟಿದ್ದಾರೆ. ಇದರ ಬಗ್ಗೆ ಎಚ್ಚರದಿಂದ ದಾರಿತಪ್ಪದೆ ಗಮನಿಸಬೇಕೆಂದು ಹೇಳಿದ್ದೇನೆ ಎಂದು ಸ್ಪಷ್ಟನೆ ಕೊಟ್ಟರು.

    ದಾರಿ ತಪ್ಪಿದ್ದಾರೆ ಎಂದು ಮಹಿಳೆಯರನ್ನ ಅವಮಾನ ಮಾಡಿದ್ದೇನಾ ನಾನು?. ಮಹಿಳೆಯರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗ್ಯಾರಂಟಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಕಷ್ಟ ಎಂದು ಬರುವ ಜನರಿಗೆ ಆಸರೆಯಾಗಿದ್ದೇನೆ. ಕೋಟ್ಯಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ತಾಯಂದಿರು ಸಾರಾಯಿ ನಿಷೇಧ ಮಾಡುವಂತೆ ಮನವಿ ಮಾಡಿದಾಗ ಅವರಿಗೆ ಗೌರವ ಕೊಟ್ಟು ಸಾರಾಯಿ ನಿಷೇಧ ಮಾಡಿದ್ದೇನೆ. ಇದು ನಾನು ಮಹಿಳೆಯರಿಗೆ ಕೊಟ್ಟ ಗೌರವ ಎಂದರು. ಇದನ್ನೂ ಓದಿ: ಮೋದಿ ಸಮಾವೇಶಕ್ಕೆ ಬರಲ್ಲ: ಬಿಎಸ್‌ವೈ ಮನವಿ ನಿರಾಕರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್

    ಕಾಂಗ್ರೆಸ್‍ನವರಿಂದ ನಾನು ಮಹಿಳೆಯರಿಗೆ ಗೌರವ ಕೊಡುವುದನ್ನ ಕಲಿಯಬೇಕಿಲ್ಲ. ಇವರಾರಿಗೂ ನಾನು ಉತ್ತರ ಕೊಡಬೇಕಿಲ್ಲ. ನಿನ್ನೆ ನಾನು ಮಹಿಳೆಯರಿಗೆ ಅಗೌರವವಾಗಿ ಮಾತನಾಡಿಲ್ಲ. ನನ್ನನ್ನ ರಾಜಕೀಯವಾಗಿ ಈ ಮಟ್ಟದಲ್ಲಿ ಶಕ್ತಿ ತುಂಬಿದ್ರೆ, ನಾಡಿನ ಸಾವಿರಾರು ಕುಟುಂಬದ ಹೆಣ್ಣುಮಕ್ಕಳು ನನಗೆ ಶಕ್ತಿ ತುಂಬಿದ್ದಾರೆ. ಕಾಂಗ್ರೆಸ್‍ನವರು ನನ್ನ ಮೇಲೆ ಯಾವುದಾದರೂ ರೀತಿಯಲ್ಲಿ ತಪ್ಪು ಹೊರಿಸಲು ಈ ರೀತಿ ಮಾತಾಡ್ತಿದ್ದಾರೆ. ಇದರಿಂದ ಅವರು ಸಫಲತೆ ಕಾಣಲ್ಲ. ಮೊನ್ನೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋದಾಗಲೂ ಇದೇ ರೀತಿ ಬಿಂಬಿಸಲು ಹೋಗಿದ್ರು. ಆದರೆ ಅದರಲ್ಲಿ ಅವರು ಸಫಲವಾಗಲ್ಲ ಎಂದಿದ್ದಾರೆ.

  • ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

    – ಪತಿ ಅತ್ಯಾಚಾರ ಪ್ರಕರಣವನ್ನು ಸಂಧಾನ ಮಾಡಲು ಹೋಗಿದ್ದ ಮಹಿಳೆ

    ಭೋಪಾಲ್‌: ಸಂಧಾನ ಮಾಡಲು ತೆರಳಿದ್ದ ಗರ್ಭಿಣಿಯ (Pregnant Women) ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿದ ಭೀಕರ ಘಟನೆ ಮಧ್ಯಪ್ರದೇಶದ (Madhya Pradesh) ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.

    38 ವರ್ಷದ ಸಂತ್ರಸ್ಥೆಯು ತನ್ನ ಪತಿ ಮಾಡಿದ ಅತ್ಯಾಚಾರಕ್ಕೆ ಮಾತನಾಡಿ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ.

    ಬಳಿಕ ಸಂತ್ರಸ್ಥ ಮಹಿಳೆ ಪತಿಯ ಮೇಲೆ ಮೇಲೆ ಆತ್ಯಾಚಾರದ ಆರೋಪದ ಮಾಡಿದ್ದ ಮಹಿಳೆ, ಗರ್ಭಿಣಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ. ಮಹಿಳೆಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್‌ ಬಳಿ ಸಂಸ್ತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ಈವರೆಗೆ ಹೇಳಿಕೆ ದಾಖಲಿಸಿಲ್ಲ, ಆದ್ರೆ ತನಿಖೆ ಮುಂದುವರಿಸುತ್ತಿರುವುದಾತಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ವಾರ್ಡನ್, ತಾಲೂಕಾಧಿಕಾರಿ ವಿರುದ್ಧ ದೂರು ದಾಖಲು

    ಮಾಹಿತಿ ಪ್ರಕಾರ, ಸಂತ್ರಸ್ತೆಯ ಪತಿ ಸುರೇಶ್‌ ಸಂಖ್ವಾರ್‌ ಮೊರೆನಾ ಜಿಲ್ಲೆಯ ಅಂಬಾಹ್‌ ಪಟ್ಟಣದ ಚಾಂದ್‌ಪುರದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಸುರೇಶ್‌ ಅದನ್ನು ನಿರಾಕರಿಸಿದ್ದ. ಹಾಗಾಗಿ ಮಹಿಳೆ ಪತಿ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದಳು. ಈ ಪ್ರಕರಣವನ್ನು ಸಂತ್ರಸ್ತೆ ಸಂಧಾನ ಮಾಡಲು ಹೋದಾಗಲೇ ದುರುಳರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.